Tag: bad manners film

  • ‘ಬ್ಯಾಡ್‌ ಮ್ಯಾನರ್ಸ್‌’ ರಿಲೀಸ್‌ಗೂ ಮೊದಲೇ ಹೊಸ ಚಿತ್ರ ಕೈಗೆತ್ತಿಕೊಂಡ ನಿರ್ದೇಶಕ ಸೂರಿ

    ‘ಬ್ಯಾಡ್‌ ಮ್ಯಾನರ್ಸ್‌’ ರಿಲೀಸ್‌ಗೂ ಮೊದಲೇ ಹೊಸ ಚಿತ್ರ ಕೈಗೆತ್ತಿಕೊಂಡ ನಿರ್ದೇಶಕ ಸೂರಿ

    ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್‌ ಮ್ಯಾನರ್ಸ್’ (Bad Manners)ಸಿನಿಮಾ ರಿಲೀಸ್‌ಗೂ ಮೊದಲೇ ಹೊಸ ಸಿನಿಮಾಗೆ ಸೂರಿ ಕೈಜೋಡಿಸಿದ್ದಾರೆ. ಇದೇ ಮೊದಲ ಬಾರಿಗೆ ಜಯಣ್ಣ ಫಿಲಂಸ್ ಜೊತೆ ನಿರ್ದೇಶಕ ಸೂರಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ‘ಕಿಸ್’ (Kiss) ಹೀರೋ ವಿರಾಟ್‌ಗೆ ಸೂರಿ (Duniya Suri) ನಿರ್ದೇಶನ ಮಾಡ್ತಿದ್ದಾರೆ.

    ಜಯಣ್ಣ- ಬೋಗೇಂದ್ರ ಫಿಲಂಸ್ ಸಂಸ್ಥೆಯೊಂದಿಗೆ ಬಹು ಚಿತ್ರಗಳನ್ನ ಮಾಡಲು ನಟ ವಿರಾಟ್ ಸಹಿ ಮಾಡ್ತಿದ್ದಾರೆ. ಈ ಸಂಸ್ಥೆ ಜೊತೆ ದಿನಕರ್ ತೂಗುದೀಪ್ ನಿರ್ದೇಶನದ ‘ರಾಯಲ್’ (Royal) ಚಿತ್ರದಲ್ಲಿ ವಿರಾಟ್ ನಟನೆ ಮಾಡ್ತಿದ್ದಾರೆ. ಇದಾದ ಬಳಿಕ ವಿರಾಟ್‌ಗೆ ‘ಟಗರು’ ಖ್ಯಾತಿಯ ಸೂರಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

     

    View this post on Instagram

     

    A post shared by Viraat (@viraat_official)

    ಅಭಿಷೇಕ್ ಅಂಬರೀಶ್ ನಟನೆಯ ‘ಬ್ಯಾಡ್‌ ಮ್ಯಾನರ್ಸ್’ ಸಿನಿಮಾ ಮೇ ಅಂತ್ಯದಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದ ರಿಲೀಸ್ ಬಳಿಕ ವಿರಾಟ್ ಕೈಗೆತ್ತಿಕೊಳ್ಳಲಿದ್ದಾರೆ ನಿರ್ದೇಶಕ ಸೂರಿ. ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ ಮಾಡಲು ಪ್ಲ್ಯಾನ್‌ ಮಾಡಿದ್ದಾರೆ. ಇದನ್ನೂ ಓದಿ:ನೆಟ್ಟಿಗರ ಹಾಸ್ಯಕ್ಕೆ ಗುರಿಯಾದ ‘ಬಿಗ್ ಬಾಸ್’ ಸೋನು ಗೌಡ ಬ್ರಾ ವೀಡಿಯೋ

    ಹೊಸ ಬಗೆಯ ಕಥೆ ಹೊತ್ತು  ಜಯಣ್ಣ ಫಿಲಂಸ್ ಅಡಿ ವಿರಾಟ್ ಲೈಟ್, ಕ್ಯಾಮೆರಾ, ಆ್ಯಕ್ಷನ್, ಎಂದು ಹೇಳಲು ರೆಡಿಯಾಗಿದ್ದಾರೆ. ದುನಿಯಾ ಸೂರಿ- ನಟ ವಿರಾಟ್ ಕಾಂಬೋ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ.

  • ನಮ್ಮಿಬ್ಬರಲ್ಲಿ ಯಾರೇ ತಪ್ಪು ಮಾಡಿದರೂ ಫಸ್ಟ್ ಕಾಂಪ್ರಮೈಸ್ ಆಗೋದು ಅವಿವಾ: ಅಭಿಷೇಕ್

    ನಮ್ಮಿಬ್ಬರಲ್ಲಿ ಯಾರೇ ತಪ್ಪು ಮಾಡಿದರೂ ಫಸ್ಟ್ ಕಾಂಪ್ರಮೈಸ್ ಆಗೋದು ಅವಿವಾ: ಅಭಿಷೇಕ್

    ಜ್ಯೂ.ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಇತ್ತೀಚಿಗಷ್ಟೇ ಬಹುಕಾಲದ ಗೆಳತಿ ಅವಿವಾ (Aviva Bidapa) ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಎಲ್ಲೂ ಕೂಡ ತಮ್ಮ ಲವ್ ಸ್ಟೋರಿ ಬಗ್ಗೆ ಅಂಬಿ ಪುತ್ರ ಅಭಿಷೇಕ್ ಹೇಳಿರಲಿಲ್ಲ. ಇದೀಗ `ಬ್ಯಾಡ್ ಮ್ಯಾನರ್ಸ್’ (Bad Manners) ಚಿತ್ರ ರಿಲೀಸ್‌ಗೆ ರೆಡಿಯಾಗಿರುವ ಬೆನ್ನಲ್ಲೇ ನಟ ಅಭಿಷೇಕ್ ತಮ್ಮ ಲವ್ ಲೈಫ್ (Love Life) ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ತಮಿಳು ನಟ ಅಜಿತ್ ಕುಮಾರ್ ತಂದೆ ಪಿ. ಸುಬ್ರಹ್ಮಣ್ಯಂ ನಿಧನ

    ನಟ ಅಂಬರೀಶ್ (Actor Ambareesh) ಮತ್ತು ಅವಿವಾ ತಂದೆ ಪ್ರಕಾಶ್ ಬಿದ್ದಪ್ಪ (Prakash Bidapa) ಹಲವು ವರ್ಷಗಳಿಂದ ಸ್ನೇಹಿತರು. ಎರಡು ಫ್ಯಾಮಿಲಿ ಸಾಕಷ್ಟು ವರ್ಷಗಳಿಂದ ಪರಿಚಿತರು. ಫ್ಯಾಷನ್ ಇವೆಂಟ್‌ವೊಂದರಲ್ಲಿ ಅಭಿಷೇಕ್ ಮತ್ತು ಅವಿವಾ ಅವರ ಮೊದಲು ಭೇಟಿಯಾಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಲು ಸಾಕಷ್ಟು ಸಮಯ ಹಿಡಿಯಲಿಲ್ಲ. ಕಳೆದ 4-5 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ ಜೋಡಿ ತಮ್ಮ ಕುಟುಂಬಕ್ಕೆ ಪ್ರೀತಿಯ ವಿಚಾರ ತಿಳಿಸಿ, ಹಿರಿಯರ ಒಪ್ಪಿಗೆಯ ಮೇರೆಗೆ ಇತ್ತೀಚಿಗೆ ಎಂಗೇಜ್‌ಮೆಂಟ್ ಆಗಿದ್ದಾರೆ.

    ಅವಿವಾ ನನಗೆ ತುಂಬಾ ಸಪೋರ್ಟ್ ಮಾಡುತ್ತಾಳೆ. ಮಾಡಿದ ಎಲ್ಲಾ ಕೆಲಸಗಳನ್ನು ಖುಷಿ ಖುಷಿಯಾಗಿ ನೋಡುತ್ತಾಳೆ. ಇಬ್ಬರ ನಡುವೆ ಮ್ಯೂಚುಯಲ್ ಸಪೋರ್ಟ್ ಇದೆ. ಕಪಲ್ ಅಂದ್ಮೇಲೆ ಜಗಳ ಸಹಜ. ಜಗಳ ಮಾಡಿದ್ದರೂ ಬಿಟ್ಟು ಹೋಗದೇ ಇರುತ್ತೀನಿ ಎನ್ನುವವರನ್ನು ಮದುವೆ ಮಾಡಿಕೊಳ್ಳಬೇಕು ಅಂತಾ ನನ್ನ ತಾಯಿ ಹಾಗೂ ಅವಿವಾ ತಂದೆ-ತಾಯಿ ಹೇಳುತ್ತಾರೆ. ನಮ್ಮ ನಡುವೆ ಜಗಳ ನಡೆದರೆ ತಪ್ಪು ಮಾಡಿರುವವರು ಮೊದಲು ಕ್ಷಮೆ ಕೇಳಬೇಕು. ನಾನು ತಪ್ಪು ಮಾಡಿದರೆ ಅವಿವಾ ಕಾಂಪ್ರಮೈಸ್ ಆಗುತ್ತಾರೆ. ಅವರು ತಪ್ಪು ಮಾಡಿದ್ದರೂ ಅವರೇ ಕಾಂಪ್ರಮೈಸ್ ಆಗುತ್ತಾರೆ. ಮನೆಯಲ್ಲಿ ಸಪೋರ್ಟ್ ಚೆನ್ನಾಗಿದ್ದರೆ ವೃತ್ತಿ ಬದುಕಿನಲ್ಲಿ ಸಾಧನೆ ಮಾಡಬಹುದು. ಅದಕ್ಕೆ ನನ್ನ ತಂದೆ ತಾಯಿನೇ ಸಾಕ್ಷಿ ಎಂದು ಅಭಿಷೇಕ್ ಅಂಬರೀಶ್ ಮಾತನಾಡಿದ್ದಾರೆ.

    ಅಭಿಷೇಕ್ ನಟನೆಯ 2ನೇ ಸಿನಿಮಾ `ಬ್ಯಾಡ್ ಮ್ಯಾನರ್ಸ್’ ಮೇ ಅಂತ್ಯಕ್ಕೆ ತೆರೆಗೆ ಬರುತ್ತಿದೆ. ಸಿನಿಮಾ ರಿಲೀಸ್ ಬಳಿಕ ಅಭಿಷೇಕ್ ಮತ್ತು ಅವಿವಾ ಜೋಡಿ ಜೂನ್‌ನಲ್ಲಿ ಹಸೆಮಣೆ (Wedding) ಏರಲಿದ್ದಾರೆ ಎನ್ನಲಾಗುತ್ತಿದೆ.

  • ಅಭಿಷೇಕ್ ಮದುವೆ ಸುಳ್ಳು ಸುಳ್ಳು: ಸುಮಲತಾ ಅಂಬರೀಶ್ ಸ್ಪಷ್ಟನೆ

    ಅಭಿಷೇಕ್ ಮದುವೆ ಸುಳ್ಳು ಸುಳ್ಳು: ಸುಮಲತಾ ಅಂಬರೀಶ್ ಸ್ಪಷ್ಟನೆ

    ಚಿತ್ರರಂಗದಲ್ಲಿ ಸಾಕಷ್ಟು ಕಲಾವಿದರು ಹಸೆಮಣೆಗೆ ಏರುತ್ತಿದ್ದಾರೆ. ಈ ಬೆನ್ನಲ್ಲೇ ಅಭಿಷೇಕ್ ಅಂಬರೀಶ್(Abhishek Ambareesh) ಎಂಗೇಜ್‌ಮೆಂಟ್ ಸುದ್ದಿಯೊಂದು ಸಿಕ್ಕಾಪಟ್ಟೆ ಸದ್ದು ಮಾಡ್ತಿತ್ತು. ಗುಟ್ಟಾಗಿ ಎಂಗೇಜ್ ಆಗಲಿದ್ದಾರೆ ಎಂಬ ಅಂತೆ ಕಂತೆ ಸುದ್ದಿ ಹೈಪ್ ಕ್ರಿಯೇಟ್ ಮಾಡಿತ್ತು. ಈಗ ಎಲ್ಲಾ ಸುದ್ದಿಗೂ ಸುಮಲತಾ ಅಂಬರೀಶ್ (Sumalatha Ambareesh) ಇದೀಗ ಬ್ರೇಕ್ ಹಾಕಿದ್ದಾರೆ. ಮಗನ ಮದುವೆಯ ಬಗ್ಗೆ ಕ್ಲ್ಯಾರಿಟಿ ಕೊಟ್ಟದ್ದಾರೆ.

    ಚಂದನವನದ ಕಲಿಯುಗ ಕರ್ಣ ಅಂಬರೀಶ್ (Actor Ambareesh) ಇಹಲೋಕ ತ್ಯಜಿಸಿ ನಾಲ್ಕು ವರ್ಷಗಳು ಕಳೆದಿದೆ. ಅಂಬರೀಶ್ ಪುಣ್ಯ ತಿಥಿ ಅಂಗವಾಗಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಗ ಅಭಿಷೇಕ್ ಎಂಗೇಜ್‌ಮೆಂಟ್, ಮದುವೆ(Wedding) ಬಗ್ಗೆ ನಟಿ ಕಮ್ ಸಂಸದೆ ಸುಮಲತಾ ಮೌನ ಮುರಿದಿದ್ದಾರೆ.

    ಅದೆಲ್ಲಾ ಸುಳ್ಳು ಸುದ್ದಿ ಆ ತರಹದ ಯಾವುದೇ ಬೆಳವಣಿಗೆಯಿಲ್ಲ. ಅಭಿಗೆ ಮದುವೆಯೆಲ್ಲಾ ಅವನ ಚಾಯ್ಸ್, ಅವನಿಗೆ ಬಿಟ್ಟಿದ್ದೀನಿ. ಒಳ್ಳೆಯ ವಿಷಯಗಳಾಗ್ಲಿ ಆದಾಗ ಖಂಡಿತಾ ತಿಳಿಸ್ತಿನಿ. ಇನ್ನೂ ನಿರ್ಧಾರ ಅವನಿಗೆ ಬಿಟ್ಟಿದ್ದು ಎಂದು ಸುಮಲತಾ ಸ್ಪಷ್ಟನೆ ನೀಡಿದ್ದಾರೆ. ಡಿಸೆಂಬರ್ 11ರಂದು ಅಭಿಷೇಕ್ ಎಂಗೇಜ್‌ಮೆಂಟ್ ಎಂಬ ಗಾಸಿಪ್‌ಗೆ ನಟಿ ತೆರೆ ಎಳೆದಿದ್ದಾರೆ. ಇದನ್ನೂ ಓದಿ: ರತನ್ ಟಾಟಾ ಬಯೋಪಿಕ್‌ಗೆ ಸುಧಾ ಕೊಂಗರಾ ಆ್ಯಕ್ಷನ್ ಕಟ್

    sumalatha ambarish

    ಕೆಲ ದಿನಗಳಿಂದ ಅಭಿಷೇಕ್ ಅಂಬರೀಶ್ ಅವರ ಮದುವೆಗೆ ಸಕಲ ಸಿದ್ಧತೆ ಗುಟ್ಟಾಗಿ ನಡೆಯುತ್ತಿದೆ. ಡಿಸೆಂಬರ್ 11ಕ್ಕೆ ಮಾಡೆಲ್ ಜೊತೆ ಎಂಗೇಜ್‌ಮೆಂಟ್ ಎಂಬ ಅಂತೆ ಕಂತೆ ಸುದ್ದಿಗಳು ಹರಿದಾಡುತ್ತಿತ್ತು. ಅದಕ್ಕೆಲ್ಲಾ ನಟಿ ಕಮ್ ಸಂಸದೆ ಸಮಲತಾ ಸ್ಪಷ್ಟಪಡಿಸಿದ್ದಾರೆ. ಇನ್ನೂ ನಟ ಅಭಿಷೇಕ್‌  ʻಬ್ಯಾಡ್‌ ಮ್ಯಾನರ್ಸ್‌ʼ ಮತ್ತು ʻಕಾಳಿʼ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]