Tag: Bacteria

  • ಮಡಿಕೇರಿಯಲ್ಲಿ ಇಲಿ ಜ್ವರಕ್ಕೆ ಯುವಕ ಬಲಿ – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

    ಮಡಿಕೇರಿಯಲ್ಲಿ ಇಲಿ ಜ್ವರಕ್ಕೆ ಯುವಕ ಬಲಿ – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

    ಮಡಿಕೇರಿ: ಇಲಿ ಜ್ಚರಕ್ಕೆ (Rat Bite Fever) ಯುವಕನೋರ್ವ ಬಲಿಯಾದ ಘಟನೆ ಮಡಿಕೇರಿ (Madikeri) ತಾಲೂಕಿನ ಕರಿಕೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸಮೀಪದ ಚೆಂಬೇರಿ ಆನೆಪಾರೆಯ ಯುವಕನೋರ್ವ ಲಿಬೀನ್ ಇಲಿ ಜ್ವರಕ್ಕೆ ಬಲಿಯಾಗಿದ್ದಾನೆ. ಆನೆಪಾರೆ ನಿವಾಸಿ ಕೂಲಿ ಕಾರ್ಮಿಕರಾದ ಬಾಲನ್ ಅವರ ಪುತ್ರ ಲಿಬೀನ್ ಜ್ವರ ಪೀಡಿತನಾಗಿ ಕೇರಳದ ಪೆರಿಯಾರಂ ಸರ್ಕಾರಿ ಆಸ್ಪತ್ರೆಯಲ್ಲಿ (Government Hospital) ಚಿಕಿತ್ಸೆಗೆ ದಾಖಲಾಗಿದ್ದು, ಜಾಂಡೀಸ್ ಕಾಯಿಲೆ ಇದೆ ಎಂದು ವೈದ್ಯರು ತಿಳಿಸಿದ್ದರು.

    ನಂತರ ಇದರೊಂದಿಗೆ ಇಲಿ ಜ್ವರ ಕೂಡ ಬಾಧಿಸಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಇಲಿ ಜ್ವರದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಸದ್ಯ ಘಟನೆಯಿಂದ ಗ್ರಾಮಸ್ಥರಲ್ಲಿ‌ ಆತಂಕ ಸೃಷ್ಟಿಯಾಗಿದೆ. ಇದನ್ನೂ ಓದಿ: ಪತಿ, ಆತನ ಗರ್ಲ್‍ಫ್ರೆಂಡ್ ವಿರುದ್ಧ ಡೆತ್‍ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ

    ಇಲಿ ಜ್ವರ ಹೇಗೆ ಹರಡುತ್ತೆ? 
    ತಜ್ಞ ವೈದ್ಯರು (Doctors) ಹೇಳುವಂತೆ ಇದೊಂದು ರೀತಿಯ ಬ್ಯಾಕ್ಟೀರಿಯಾ ಸೋಂಕು. ಇಲಿ ಕಚ್ಚಿ ಮಾತ್ರ ನಿಮಗೆ ಜ್ವರ ಬರಬೇಕು ಎಂದೇನಿಲ್ಲ. ಅದರ ಎಂಜಲು, ಅದರ ಮೂತ್ರ, ಮಲ ಅಥವಾ ಇಲಿಯ ದೇಹದ ಯಾವುದೇ ದ್ರವ ನಿಮ್ಮ ಚರ್ಮಕ್ಕೆ ತಾಗಿದರೆ ನಿಮಗೆ ಸೋಂಕು ಉಂಟಾಗಬಹುದು. ಇದನ್ನೂ ಓದಿ: ಸಿಕ್ಕಿಬೀಳೋ ಭಯದಲ್ಲಿ ಕದ್ದಿದ್ದ 30 ಲಕ್ಷದ ವಜ್ರದ ಉಂಗುರವನ್ನು ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡಿದ್ಳು!

    ಇದರ ಜೊತೆಗೆ ಇಲ್ಲಿಯ ಬಾಯಿಂದ, ಕಣ್ಣಿನಿಂದ ಅಥವಾ ಮೂಗಿನಿಂದ ಬರುವಂತಹ ದ್ರವಗಳು ಕೂಡ ನಿಮಗೆ ಹಾನಿಕಾರಕವಾಗಬಹುದು. ಕೆಲವರಿಗೆ ಇಲಿಗಳು ತಮ್ಮ ಉಗುರುನಿಂದ ಪರಚಿ ಹೋದರೆ ಅಥವಾ ಹಾಲಿನಿಂದ ಸಣ್ಣದಾಗಿ ಕಚ್ಚಿದರೆ ಕೂಡ ಜ್ವರ ಬರಬಹುದು. ಇಲಿ, ಹಸು, ನಾಯಿ, ಹಂದಿ ಮೂಲಕವೂ ಇಲಿ ಜ್ವರ ಹಬ್ಬುತ್ತದೆ. ಪರಿಸರ ನೈರ್ಮಲ್ಯದ ಕೊರತೆ, ನೆರೆಹಾವಳಿ ಇಲಿ ಜ್ವರ ಹರಡಲು ಮುಖ್ಯ ಕಾರಣವಾಗಿದೆ. ರೋಗಾಣು ಪ್ರವೇಶಿಸಿದ 2 ರಿಂದ 25 ದಿನಗಳಲ್ಲಿ ತೀವ್ರತರದ ಜ್ವರ ಕಾಡುತ್ತದೆ. ಮೈ-ಕೈ ನೋವು, ತಲೆನೋವು , ಕೆಲವೊಮ್ಮೆ ವಾಂತಿ ಹೊಟ್ಟೆ ನೋವು ಬರುವುದು, ಇಲಿ ಜ್ವರದ ಲಕ್ಷಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೀನಾದಲ್ಲಿ ಹೊಸ ಡೇಟಿಂಗ್ ಸಂಸ್ಕೃತಿ – ಡೇಟ್ ಮಾಡೋ ಮುಂಚೆ ಕಿಸ್ ಮಾಡ್ಲೇಬೇಕಂತೆ

    ಚೀನಾದಲ್ಲಿ ಹೊಸ ಡೇಟಿಂಗ್ ಸಂಸ್ಕೃತಿ – ಡೇಟ್ ಮಾಡೋ ಮುಂಚೆ ಕಿಸ್ ಮಾಡ್ಲೇಬೇಕಂತೆ

    ಬೀಜಿಂಗ್: ಡೇಟಿಂಗ್ (Dating) ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚಾಗುತ್ತಿದ್ದು, ಮದುವೆಗೂ (Marriage) ಮುನ್ನ ಜೀವನ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಡೇಟಿಂಗ್ ಉತ್ತಮ ಆಯ್ಕೆ ಎಂದು ಬಹುತೇಕ ಮಂದಿ ಭಾವಿಸಿದ್ದಾರೆ. ಹೀಗಾಗಿ ದಂಪತಿಯಾಗುವುದಕ್ಕೂ ಮುನ್ನವೇ ಹೊರಗೆ ಹೋಗಬಹುದು ಮತ್ತು ಒಟ್ಟಿಗೆ ಸಮಯ ಕಳೆಯಬಹುದಾಗಿದೆ.

    ಇದೀಗ ಚೀನಾದಲ್ಲಿ (China) ಹೊಸ ಡೇಟಿಂಗ್ ಸಂಸ್ಕೃತಿ ಆರಂಭವಾಗಿದೆ. ದಿನೇದಿನ ಖ್ಯಾತಿ ಪಡೆದುಕೊಳ್ಳುತ್ತಿದೆ. ಮೊದಲ ಭೇಟಿಯಲ್ಲಿ ಅಪರಿಚಿತರ ಜೊತೆ ಕಿಸ್ ಮಾಡುವ ಮೂಲಕ ಪರಿಚಯಿಸಿಕೊಳ್ಳುವುದು ಈ ಡೇಟಿಂಗ್‌ನ ವಿಧಾನವಾಗಿದೆ. ಇದಕ್ಕೆ ಚೀನಾದಲ್ಲಿ ‘ಸುಯಿ ಯು’ ಎಂದು ಹೆಸರಿಸಲಾಗಿದೆ. ಇಲ್ಲಿ ಮೊದಲು ಚುಂಬನಕ್ಕಿಂತ ಹೆಚ್ಚೇನೂ ಇಲ್ಲ. ಇದನ್ನೂ ಓದಿ: ಸೀರಿಯಲ್ ಕಿಲ್ಲರ್ ಚಾರ್ಲ್ಸ್ ಶೋಭರಾಜ್ ಬಿಡುಗಡೆಗೆ ನೇಪಾಳ ಸುಪ್ರೀಂ ಆದೇಶ

    ಆದಾಗ್ಯೂ ಬಹುತೇಕ ಮಂದಿ ಈ ವಿಧಾನವನ್ನು ವಿರೋಧಿಸುತ್ತಿದ್ದಾರೆ. ಅಪರಿಚಿತರನ್ನು ಚುಂಬಿಸುವ ಮೂಲಕ ಬ್ಯಾಕ್ಟೀರಿಯಾ (Bacteria) ಮತ್ತು ವೈರಸ್‌ಗಳಿಂದ (Virus) ರೋಗಗಳು ಹರಡಲು ಕಾರಣವಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಮಹಿಳೆಯರ ಶಿಕ್ಷಣಕ್ಕೆ ತಾಲಿಬಾನ್ ನಿಷೇಧ – ಪ್ರತಿಭಟನೆಗೆ ಪರೀಕ್ಷೆಯಿಂದಲೇ ಹೊರನಡೆದ ಅಫ್ಘನ್ ಯುವಕರು

    Live Tv
    [brid partner=56869869 player=32851 video=960834 autoplay=true]

  • ಬ್ಯಾಕ್ಟೀರಿಯಾ ಪತ್ತೆ- ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿ ಸ್ಥಗಿತ

    ಬ್ಯಾಕ್ಟೀರಿಯಾ ಪತ್ತೆ- ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿ ಸ್ಥಗಿತ

    ಬ್ರಸೆಲ್ಸ್: ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಸಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಸದ್ಯ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

    ಬೆಲ್ಜಿಯಂನ ವೈಜ್ ನಗರದಲ್ಲಿರುವ ಸ್ವಿಸ್ ದೈತ್ಯ ಬ್ಯಾರಿ ಕ್ಯಾಲೆಬಾಟ್ ನಡೆಸುತ್ತಿರುವ ಚಾಕೊಲೇಟ್ ಫ್ಯಾಕ್ಟರಿ ವಿಶ್ವದಲ್ಲೇ ಅತ್ಯಂತ ದೊಡ್ಡ ಫ್ಯಾಕ್ಟರಿಯಾಗಿದೆ. ಅದರಲ್ಲಿ ಸಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿರುವುದು ಚಾಕೊಲೇಟ್ ಪ್ರಿಯರಿಗೆ ಆಘಾತ ತಂದಿದೆ. ಸದ್ಯ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿಲಾಗಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಪ್ರವಾಹದಿಂದ ರಕ್ಷಿಸಿಕೊಳ್ಳಲು ತೇಲುವ ಮನೆ ನಿರ್ಮಿಸಿದ ಜಪಾನ್ – ಏನಿದರ ವಿಶೇಷತೆ?

    ಈ ಬಗ್ಗೆ ಮಾಹಿತಿ ನೀಡಿರುವ ಕಂಪನಿ ವಕ್ತಾರ ಕಾರ್ನೀಲ್ ವಾರ್ಲೋಪ್, ಪರೀಕ್ಷೆಯ ಬಳಿಕ ತಯಾರಿಸಲಾದ ಎಲ್ಲಾ ಉತ್ಪನ್ನಗಳನ್ನು ನಿರ್ಬಂಧಿಸಲಾಗಿದೆ. ಬ್ಯಾಕ್ಟೀರಿಯಾ ಕಂಡುಬಂದಂತೆ ಉತ್ಪನ್ನಗಳನ್ನು ಪಡೆದಿರುವ ಎಲ್ಲಾ ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ. ಮುಂದಿನ ಸೂಚನೆ ಬರುವವರೆಗೂ ಚಾಕೊಲೇಟ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

    ಬ್ಯಾಕ್ಟೀರಿಯಾ ಪತ್ತೆಯಾದ ಬಳಿಕದ ಹೆಚ್ಚಿನ ಉತ್ಪನ್ನಗಳು ಮಾರಾಟವಾಗಿಲ್ಲ. ಆದರೂ ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ. ಜೂನ್ 25ರಿಂದ ತಯಾರಿಸಲಾದ ಉತ್ಪನ್ನಗಳನ್ನು ರವಾನಿಸದಂತೆ ಕೇಳಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಂಗರ್ ಕೆಲ್ಲಿಗೆ 30 ವರ್ಷ ಜೈಲು ಶಿಕ್ಷೆ: 9 ಆರೋಪ ಸಾಬೀತು

    ವಿಶ್ವದ ನಂ.1 ಚಾಕೊಲೇಟ್ ತಯಾರಿಕಾ ಕಂಪನಿ ಇದಾಗಿದ್ದು, 2020-2021 ಹಣಕಾಸು ವರ್ಷದಲ್ಲಿ 2 ಕೋಟಿ ಟನ್‌ಗಳಷ್ಟು ಉತ್ಪನ್ನಗಳು ಮಾರಾಟವಾಗಿವೆ. ಕಂಪನಿಯಲ್ಲಿ 13,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ಪ್ರಪಂಚದಾದ್ಯಂತ 60ಕ್ಕೂ ಹೆಚ್ಚು ಉತ್ಪಾದನಾ ಘಟಕಗಳಿವೆ.

    Live Tv