Tag: Background Sound

  • ಶಾನ್ವಿ ಶ್ರೀವಾತ್ಸವ್ ನಟನೆಯ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ ಕಿಚ್ಚ ಸುದೀಪ್

    ಶಾನ್ವಿ ಶ್ರೀವಾತ್ಸವ್ ನಟನೆಯ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ ಕಿಚ್ಚ ಸುದೀಪ್

    ಶಾನ್ವಿ ಶ್ರೀವಾತ್ಸವ್ (Shanvi Srivatsav)  ಅಭಿನಯದ ಡಾರ್ಕ್ ಕಾಮಿಡಿ ಆಕ್ಷನ್ ಚಿತ್ರ ‘ಬ್ಯಾಂಗ್’  ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಆಗಸ್ಟ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಇದೀಗ ಚಿತ್ರಕ್ಕೆ ಸ್ಟಾರ್ ಸ್ಪರ್ಶ ಸಿಕ್ಕಿದೆ. ‘ಬ್ಯಾಂಗ್’ (Bang)  ಚಿತ್ರಕ್ಕೆ ಕಿಚ್ಚ ಸುದೀಪ್ (Sudeep) ಹಿನ್ನೆಲೆ ಧ್ವನಿ ನೀಡಿದ್ದು ಚಿತ್ರತಂಡದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.

    ಈ ಕುರಿತು ಮಾತನಾಡಿರುವ ನಿರ್ದೇಶಕ ಗಣೇಶ್ ಪರಶುರಾಮ್ (Ganesh Parasuram), ‘ನಾವೆಲ್ಲರೂ ಸುದೀಪ್ ಅವರ ಚಿತ್ರಗಳನ್ನು ನೋಡಿ ಬೆಳೆದವರು. ಮೊದಲ ದಿನ ಮೊದಲ ಪ್ರದರ್ಶನದಲ್ಲೇ ಅವರ ಚಿತ್ರ ನೋಡಿ ಪುಳಕಿತರಾದವರು. ಅವರು ನಮ್ಮ ಚಿತ್ರಕ್ಕೆ ಧ್ವನಿ ನೀಡಿದಾಗ, ಅವರನ್ನು ಭೇಟಿಯಾಗಿ ಕೈಕುಲುಕಿದಾಗ, ನಮ್ಮ ಬಹುವರ್ಷಗಳ ಕನಸು ನನಸಾದಂತಾಯಿತು. ಚಿತ್ರದಲ್ಲಿನ ಸುದೀಪ್ ಅವರ ಉಪಸ್ಥಿತಿಯನ್ನು ಅವರ ಅಭಿಮಾನಿಗಳು ಸಹ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ಈ ಕನಸನ್ನು ನನಸು ಮಾಡಿದ ಶಾನ್ವಿ ಶ್ರೀವಾತ್ಸವ್ ಅವರಿಗೆ ಮತ್ತು ಒಂದು ಹೊಸ ತಂಡದ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಿಕ್ಕೆ ಸುದೀಪ್ ಅವರಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ. ಇದನ್ನೂ ಓದಿ:‘ನಾಗರಹಾವು’ ಚಿತ್ರದ ನಂತರ ಮತ್ತೆ ಒಂದಾಗಲಿದ್ದಾರೆ ದಿಗಂತ್-ರಮ್ಯಾ

    ಪೂಜಾ ವಸಂತ್ ಕುಮಾರ್ ನಿರ್ಮಾಣದ ‘ಬ್ಯಾಂಗ್’  ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ಜೊತೆಗೆ ರಘು ದೀಕ್ಷಿತ್, ಸಾತ್ವಿಕಾ, ರಿತ್ವಿಕ್ ಮುರಳೀಧರ್, ಸುನಿಲ್ ಗುಜ್ಜಾರ್, ನಾಟ್ಯರಂಗ ಮುಂತಾದವರು ಅಭಿನಯಿಸಿದ್ದು, ರಿತ್ವಿಕ್ ಮುರಳೀಧರ್ ಅವರ ಸಂಗೀತ ಮತ್ತು ಉದಯ್ ಲೀಲಾ ಅವರ ಛಾಯಾಗ್ರಹಣವಿದೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಆನಂದ್ ಆಡಿಯೋ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ಎರಡೂ ಹಾಡುಗಳು ಜನಮೆಚ್ಚುಗೆಗೆ ಪಾತ್ರವಾಗಿವೆ.

    ‘ಬ್ಯಾಂಗ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಗಿದಿದ್ದು, ಜುಲೈ 29ರ ಶನಿವಾರ ಸಿನಿಮಾದ  ಟ್ರೇಲರ್ ಬಿಡುಗಡೆಯಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆಂಪೇಗೌಡ ಪ್ರತಿಮೆ ಅನಾವರಣ : ವಿಶೇಷ ವಿಡಿಯೋಗೆ ರಾಕಿಂಗ್ ಸ್ಟಾರ್ ಯಶ್ ಧ್ವನಿ

    ಕೆಂಪೇಗೌಡ ಪ್ರತಿಮೆ ಅನಾವರಣ : ವಿಶೇಷ ವಿಡಿಯೋಗೆ ರಾಕಿಂಗ್ ಸ್ಟಾರ್ ಯಶ್ ಧ್ವನಿ

    ವೆಂಬರ್ 11 ರಂದು ನಾಡಪ್ರಭು ಕೆಂಪೇಗೌಡ ಬೃಹತ್ ಪ್ರತಿಮೆಯನ್ನು ಅನಾವರಣ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ವಿಶೇಷ ವಿಡಿಯೋವೊಂದನ್ನು ಪ್ರದರ್ಶನ ಮಾಡಲಾಗುತ್ತಿದೆ. ಕೆಂಪೇಗೌಡರ ಜೀವನ ಸಾಧನೆಯನ್ನು ಈ ವಿಶೇಷ ವಿಡಿಯೋದ ಮೂಲಕ ತೋರಿಸಲಾಗುತ್ತಿದ್ದು, ಇದಕ್ಕೆ ಯಶ್ (Yash) ಅವರು ಹಿನ್ನೆಲೆ ಧ್ವನಿಯನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಎರಡು ದಿನಗಳ ಹಿಂದೆಯಷ್ಟೇ ‘ಗಂಧದ ಗುಡಿ’ ಡಾಕ್ಯುಡ್ರಾಮಾದ ನಿರ್ದೇಶಕ ಅಮೋಘ ವರ್ಷ (Amogha Varsha) ಮತ್ತು ಯಶ್ ಡಬ್ಬಿಂಗ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಡಬ್ಬಿಂಗ್ ಸ್ಟುಡಿಯೋದಲ್ಲಿ ಇಬ್ಬರು ಇದ್ದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಲವು ಚರ್ಚೆಗೆ ಕಾರಣವಾಗಿತ್ತು. ಗಂಧದ ಗುಡಿ ಪ್ರಾಜೆಕ್ಟ್ ನಲ್ಲಿ ಯಶ್ ಏನಾದರೂ ಇನ್ವಾಲ್ ಆಗಿದ್ದಾರಾ ಎನ್ನುವ ಮಾತು ಕೇಳಿ ಬಂದಿತ್ತು. ಅಲ್ಲದೇ, ಈ ಜೋಡಿ ಮತ್ತೇನಾದ್ರೂ ಕೆಲಸ ಮಾಡುತ್ತಿರಬಹುದಾ ಎಂದು ಪ್ರಶ್ನೆ ಎದ್ದಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಇದನ್ನೂ  ಓದಿ:ನಟನೆಯತ್ತ ʻಕಾಂತಾರʼ ಹೀರೋ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

    ನಾಡಪ್ರಭು ಕೆಂಪೇಗೌಡ (Kampegowda) ಬೃಹತ್ ಪ್ರತಿಮೆಯ ಅನಾವರಣದ ಉಸ್ತುವಾರಿಯನ್ನು ಸಚಿವ ಅಶ್ವತ್ಥ್ ನಾರಾಯಣ್ ಅವರು ವಹಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಯಶ್ ಅವರು ಹಿನ್ನೆಲೆ ಧ್ವನಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಪೆಷಲ್ ವಿಡಿಯೋವನ್ನು ಮಾಡಲು ಅಮೋಘವರ್ಷ ಅವರು ಜವಾಬ್ದಾರಿ ತಗೆದುಕೊಂಡಿದ್ದು, ಆ ಸಾಕ್ಷ್ಯ ಚಿತ್ರಕ್ಕೆ ಯಶ್ ಧ್ವನಿ ನೀಡಿದ್ದಾರೆ ಎನ್ನುವುದು ಫೋಟೋ ಹಿಂದಿರುವ ಕಥೆಯಂತೆ.

    Live Tv
    [brid partner=56869869 player=32851 video=960834 autoplay=true]