Tag: bachelor party

  • ಕಾಪಿರೈಟ್ ಉಲ್ಲಂಘನೆ ಕೇಸ್- ಕೋರ್ಟ್‌ನಲ್ಲಿ ಹೋರಾಟ ಮಾಡ್ತೀನಿ ಎಂದ ರಕ್ಷಿತ್ ಶೆಟ್ಟಿ

    ಕಾಪಿರೈಟ್ ಉಲ್ಲಂಘನೆ ಕೇಸ್- ಕೋರ್ಟ್‌ನಲ್ಲಿ ಹೋರಾಟ ಮಾಡ್ತೀನಿ ಎಂದ ರಕ್ಷಿತ್ ಶೆಟ್ಟಿ

    ‘ಬ್ಯಾಚುಲರ್ ಪಾರ್ಟಿ’ (Bachelor Party) ಕಾಪಿರೈಟ್ ಉಲ್ಲಂಘನೆ ಆರೋಪದಲ್ಲಿ ಸಿಲುಕಿರುವ ನಟ ರಕ್ಷಿತ್ ಶೆಟ್ಟಿ (Rakshit Shetty) ಇಂದು (ಆ.2) ಯಶವಂತಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಸಿ, ಕೋರ್ಟ್‌ನಲ್ಲಿ ಫೈಟ್ ಮಾಡ್ತೀನಿ, ನ್ಯಾಯಾಲಯದಲ್ಲಿ ನೋಡಿಕೊಳ್ಳೋಣ ಎಂದು ಮಾತನಾಡಿದ್ದಾರೆ.

    ರಕ್ಷಿತ್ ಶೆಟ್ಟಿ ಮಾತನಾಡಿ, ಕಾಪಿರೈಟ್ ಬಗ್ಗೆ ಇಂಡಸ್ಟ್ರಿಯಲ್ಲಿ ನಾಲೆಡ್ಜೇ ಇಲ್ಲ. ನನ್ನ ಪ್ರಕಾರ, ಕಾಪಿರೈಟ್ ಉಲ್ಲಂಘನೆ ಅಲ್ಲ. ಈ ಸಿನಿಮಾಗೂ ಮುನ್ನ ಆ ಹಾಡುಗಳನ್ನು ಬಳಸಲು ಅನುಮತಿಗಾಗಿ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆ ಅವರ ಬಳಿ ಮಾತನಾಡಿದಾಗ, ಹೆಚ್ಚಿನ ಮೊತ್ತ ಕೇಳಿದ್ದರು. ಅಷ್ಟು ದೊಡ್ಡ ಅಮೌಂಟ್ ಕೊಡೋಕೆ ನಮಗೆ ಸರಿ ಎನಿಸಲಿಲ್ಲ. ಆಮೇಲೆ ಅವರು ಹೇಳ್ತೀವಿ ಅಂತ ಆ ಮಾತುಕತೆ ಅಲ್ಲೇ ನಿಂತು ಹೋಯಿತು. ಈ ಸಿನಿಮಾದ ರಿಲೀಸ್ ನಂತರ ಅವರು ಕೇಸ್ ಹಾಕಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:ವಯನಾಡು ಭೂಕುಸಿತ ದುರಂತ: ಆರ್ಥಿಕ ನೆರವು ನೀಡಿದ ರಶ್ಮಿಕಾ, ಸೂರ್ಯ, ಮಮ್ಮುಟ್ಟಿ

    ಮೊದಲಿಗೆ ಇದು ಕಾಪಿರೈಟ್ ಉಲ್ಲಂಘನೆ ಅಲ್ಲ. ಕನ್ನಡದ ಹಾಡನ್ನು ಕನ್ನಡ ಚಿತ್ರದಲ್ಲಿ ಬಳಕೆ ಮಾಡುವಂತೆಯೇ ಇಲ್ವಾ ಎಂದು ನಟ ಪ್ರಶ್ನಿಸಿದ್ದಾರೆ. ಕೊಟ್ಟಿರುವ ಕಂಪ್ಲೆಂಟ್‌ಗೆ ನಾನು ಕೂಡ ಕೋರ್ಟ್‌ನಲ್ಲಿ ಫೈಟ್ ಮಾಡ್ತೀನಿ ಎಂದಿದ್ದಾರೆ. ಸಾಂಧರ್ಬಿಕವಾಗಿ ಹಾಡು ಬಳಕೆಯಾಗಿದೆ ಅಷ್ಟೆ. ಕಾಪಿರೈಟ್ ಆಕ್ಟ್ ಏನು ಹೇಳುತ್ತೆ ಎಂಬುದನ್ನು ಕೋರ್ಟ್‌ನಲ್ಲಿ ನೋಡೋಣ. ನ್ಯಾಯಾಲಯ ತೀರ್ಮಾನ ಮಾಡಲಿ. ಈ ಬಗ್ಗೆ ನಮಗೂ ಅರ್ಥವಾಗಲಿ ಯಾವುದೂ ಬಳಸಬೇಕು ಯಾವುದು ಬಳಸಬಾರದು ಅಂತ. ನಮ್ಮ ಪ್ರಕಾರ, ಇದು ಸರಿ ಅಂತಾ ವಾದ ಮಾಡ್ತೀನಿ ಎಂದು ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ.

    ಇನ್ನೂ ಈ ಹಿಂದೆ ‘ಕಿರಿಕ್ ಪಾರ್ಟಿ’ ಸಿನಿಮಾ ವಿಚಾರದಲ್ಲೂ ಕಾಪಿರೈಟ್ ಆರೋಪ ಬಂದಾಗ, ನಮ್ಮ ಕಡೆ ಸರಿಯಿದೆ ಅಂತ ಕೋರ್ಟ್‌ನಿಂದ ತೀರ್ಪು ಬಂದಿತ್ತು. ಆ ಬಳಿಕ ಹೊರಗೆ ಸಂಧಾನ ಮಾತುಕತೆಯಾಗಿತ್ತು ಎಂದು ರಕ್ಷಿತ್ ಹೇಳಿದ್ದಾರೆ.

    ಅಂದಹಾಗೆ, ಜುಲೈ 15ರಂದು ರಕ್ಷಿತ್ ಶೆಟ್ಟಿ ವಿರುದ್ಧ ಎಂಆರ್‌ಟಿ ಮ್ಯೂಸಿಕ್ ಪಾಲುದಾರರಾಗಿರುವ ನವೀನ್ ಕುಮಾರ್ ದೂರು ನೀಡಿದ್ದರು. ನ್ಯಾಯ ಎಲ್ಲಿದೆ ಚಿತ್ರದ `ನ್ಯಾಯ ಎಲ್ಲಿದೆ’ ಹಾಡು ಮತ್ತು ಗಾಳಿ ಮಾತು ಚಿತ್ರದ ‘ಒಮ್ಮೆ ನಿನ್ನನ್ನು’ ಅನಧಿಕೃತವಾಗಿ ಹಾಡು ಬಳಕೆ ಮಾಡಿದ ಆರೋಪದಲ್ಲಿ ಪರಮ್ವಾ ಸ್ಟುಡಿಯೋಸ್ ಮತ್ತು ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಾಗಿತ್ತು.

  • ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ರಿಲೀಸ್ ಡೇಟ್ ಫಿಕ್ಸ್

    ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ರಿಲೀಸ್ ಡೇಟ್ ಫಿಕ್ಸ್

    ಕ್ಷಿತ್ ಶೆಟ್ಟಿ (Rakshit Shetty) ನಿರ್ಮಾಣದಲ್ಲಿ ಮೂಡಿ ಬಂದಿರುವ ಬ್ಯಾಚುಲರ್ ಪಾರ್ಟಿ (Bachelor Party) ಸಿನಿಮಾದ ಬಿಡುಗಡೆ (Release) ದಿನಾಂಕ ಘೋಷಣೆಯಾಗಿದೆ. ಜನವರಿ 26ರಂದು ರಾಜ್ಯಾದ್ಯಂತ ಸಿನಿಮಾ ಮಾಡುವುದಾಗಿ ನಿರ್ಮಾಣ ಸಂಸ್ಥೆ ಘೋಷಣೆ ಮಾಡಿದೆ. ರಕ್ಷಿತ್ ಅಂಡ್ ಟೀಮ್  ಕಿರಿಕ್ ಪಾರ್ಟಿ ನಂತರ ಯೂತ್ ಕಾಮಿಡಿ ಸ್ಟೋರಿ ಹೊಂದಿರುವ ಸಿನಿಮಾವನ್ನು ಕೊಡಲು ಸಜ್ಜಾಗಿದ್ದಾರೆ.

    ಹೌದು. ‘ಕಿರಿಕ್ ಪಾರ್ಟಿ’ಯ ಬರಹಗಾರ ಅಭಿಜಿತ್ ಮಹೇಶ್, ಈಗಾಗಲೇ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ‘ಬ್ಯಾಚುಲರ್ ಪಾರ್ಟಿ’ಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಚಗುಳಿಯಿಡುವ ಸಂಭಾಷಣೆಗೆ ಖ್ಯಾತರಾಗಿರುವ ಅಭಿ, ತಮ್ಮ ಮೊದಲ ಸಿನಿಮಾದಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದಕ್ಕೆ ಸಿನಿಮಾ ಬಿಡುಗಡೆಯವರೆಗೂ ಕಾಯಬೇಕು. ಅದಕ್ಕೂ ಮುನ್ನ ‘ಬ್ಯಾಚುಲರ್ ಪಾರ್ಟಿ’ಯ ಮೊದಲ ಝಲಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ದಿಗಂತ್ (Diganth), ಲೂಸ್ ಮಾದ ಯೋಗಿ (Loose Mada Yogi) ಹಾಗೂ ಅಚ್ಯುತ್ ಕುಮಾರ್ (Achyut Kumar) ಪೋಸ್ಟರ್‌ನಲ್ಲಿದ್ದಾರೆ. ಅದರ ಹಿನ್ನೆಲೆಯಲ್ಲಿ ಬ್ಯಾಂಕಾಕ್‌ನ ಕೆಲವು ಸ್ಥಳಗಳನ್ನೂ ಕಾಣಬಹುದು. ವೀಲ್‌ಚೇರ್‌ನಲ್ಲಿ ಅಚ್ಯುತ್ ಕುಳಿತುಕೊಂಡಿದ್ದರೆ, ಅವರ ಹಿಂದೆ ಯೋಗಿ, ದಿಗಂತ್ ಓಡಿ ಬರುತ್ತಿರುವ ದೃಶ್ಯ ಸದ್ಯ ಗಮನ ಸೆಳೆಯುತ್ತಿದೆ. ಪೋಸ್ಟರ್‌ನಲ್ಲಿ ಇನ್ನೂ ಗಮನಾರ್ಹ ಅಂಶಗಳಿದ್ದು, ಅವೆಲ್ಲವೂ ಸಿನಿಮಾದ ಕಥೆಗೆ ಪೂರಕವಾಗಿದೆಯಾ ಎಂಬುದಕ್ಕೆ ಚಿತ್ರತಂಡ ಉತ್ತರಿಸಬೇಕಿದೆ. ವಿಶೇಷವೆಂದರೆ ಈ ಪೋಸ್ಟರ್‌ನ್ನು ಹ್ಯಾಂಡ್ ಸ್ಕೆಚ್ ಮೂಲಕ ಡಿಸೈನ್ ಮಾಡಲಾಗಿದೆ.

    ಬರೀ ಪೋಸ್ಟರ್ ಹರಿಬಿಡದೇ ಅದಕ್ಕೊಂದು ಸಣ್ಣ ವೀಡಿಯೋವೊಂದನ್ನು ರಿಲೀಸ್ ಮಾಡಿದೆ. ಅದರಲ್ಲೂ ಕೆಲವು ಅಂಶಗಳು ಗಮನ ಸೆಳೆಯುವಂತಿದ್ದು, ಹಿನ್ನೆಲೆ ಸಂಗೀತವೂ ಅಡಕವಾಗಿದೆ. ಇವೆಲ್ಲವೂ ರೀಲ್ಸ್‌ನಲ್ಲಿ ರಿಲೀಸ್ ಮಾಡಿರುವುದು ಮತ್ತೊಂದು ವಿಶೇಷ. ಕಣ್ಮನ ಸೆಳೆಯುವ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಥಿಯೇಟರ್‌ನಲ್ಲಿ ಇದರ ಅನುಭವ ಪಡೆಯಬೇಕು ಮತ್ತು ಚಿತ್ರಮಂದಿರಗಳಲ್ಲಿ ಕುಳಿತು ನಗೆಗಡಲಲ್ಲಿ ತೇಲುವ ಸಿನಿಮಾ ಇದಾಗಿದೆ ಎಂಬುದು ಚಿತ್ರತಂಡದ ಅನಿಸಿಕೆ.

     

    ಪರಂವಃ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

  • ಕಚಗುಳಿ ಇಟ್ಟ ಬ್ಯಾಚುಲರ್ ಪಾರ್ಟಿ ಝಲಕ್

    ಕಚಗುಳಿ ಇಟ್ಟ ಬ್ಯಾಚುಲರ್ ಪಾರ್ಟಿ ಝಲಕ್

    ಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿದ್ದ ‘ಕಿರಿಕ್ ಪಾರ್ಟಿ’ ತೆರೆಕಂಡು ಬರೋಬ್ಬರಿ ಏಳು ವರ್ಷಗಳಾಗಿವೆ. ಅದರ ಯಶಸ್ಸಿನ ಬಳಿಕ ಇಡೀ ತಂಡ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದು ಗೊತ್ತೇ ಇದೆ. ಇದೀಗ ಅವರೆಲ್ಲರೂ ಮತ್ತಷ್ಟು ಖ್ಯಾತರಾಗಿದ್ದಾರೆ. ಉನ್ನತ ಮಟ್ಟದಲ್ಲಿದ್ದಾರೆ… ಆದರೆ, ಆ ರೀತಿಯ ಯೂತ್ ಕಾಮಿಡಿ ಸ್ಟೋರಿ ಮತ್ತೊಂದು ಬರಲಿಲ್ಲವಲ್ಲ ಎಂಬ ಕೊರಗನ್ನು ನೀಗಿಸಲು ಮತ್ತದೇ ಬರಹಗಾರರ ತಂಡ ಸಜ್ಜಾಗಿದೆ. ಅವರೀಗ ‘ಬ್ಯಾಚುಲರ್ ಪಾರ್ಟಿ’ (Bachelor Party) ಕೊಡಲು ಸಜ್ಜಾಗಿದ್ದಾರೆ ಎಂಬುದು ವಿಶೇಷ.

    ಹೌದು. ‘ಕಿರಿಕ್ ಪಾರ್ಟಿ’ಯ ಬರಹಗಾರ ಅಭಿಜಿತ್ ಮಹೇಶ್, ಈಗಾಗಲೇ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ‘ಬ್ಯಾಚುಲರ್ ಪಾರ್ಟಿ’ಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಚಗುಳಿಯಿಡುವ ಸಂಭಾಷಣೆಗೆ ಖ್ಯಾತರಾಗಿರುವ ಅಭಿ, ತಮ್ಮ ಮೊದಲ ಸಿನಿಮಾದಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದಕ್ಕೆ ಸಿನಿಮಾ ಬಿಡುಗಡೆಯವರೆಗೂ ಕಾಯಬೇಕು. ಅದಕ್ಕೂ ಮುನ್ನ ‘ಬ್ಯಾಚುಲರ್ ಪಾರ್ಟಿ’ಯ ಮೊದಲ ಝಲಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ದಿಗಂತ್ (Diganth), ಲೂಸ್ ಮಾದ ಯೋಗಿ (Loose Mada Yogi) ಹಾಗೂ ಅಚ್ಯುತ್ ಕುಮಾರ್ (Achyut Kumar) ಪೋಸ್ಟರ್‌ನಲ್ಲಿದ್ದಾರೆ. ಅದರ ಹಿನ್ನೆಲೆಯಲ್ಲಿ ಬ್ಯಾಂಕಾಕ್‌ನ ಕೆಲವು ಸ್ಥಳಗಳನ್ನೂ ಕಾಣಬಹುದು. ವೀಲ್‌ಚೇರ್‌ನಲ್ಲಿ ಅಚ್ಯುತ್ ಕುಳಿತುಕೊಂಡಿದ್ದರೆ, ಅವರ ಹಿಂದೆ ಯೋಗಿ, ದಿಗಂತ್ ಓಡಿ ಬರುತ್ತಿರುವ ದೃಶ್ಯ ಸದ್ಯ ಗಮನ ಸೆಳೆಯುತ್ತಿದೆ. ಪೋಸ್ಟರ್‌ನಲ್ಲಿ ಇನ್ನೂ ಗಮನಾರ್ಹ ಅಂಶಗಳಿದ್ದು, ಅವೆಲ್ಲವೂ ಸಿನಿಮಾದ ಕಥೆಗೆ ಪೂರಕವಾಗಿದೆಯಾ ಎಂಬುದಕ್ಕೆ ಚಿತ್ರತಂಡ ಉತ್ತರಿಸಬೇಕಿದೆ. ವಿಶೇಷವೆಂದರೆ ಈ ಪೋಸ್ಟರ್‌ನ್ನು ಹ್ಯಾಂಡ್ ಸ್ಕೆಚ್ ಮೂಲಕ ಡಿಸೈನ್ ಮಾಡಲಾಗಿದೆ.

    ಬರೀ ಪೋಸ್ಟರ್ ಹರಿಬಿಡದೇ ಅದಕ್ಕೊಂದು ಸಣ್ಣ ವೀಡಿಯೋವೊಂದನ್ನು ರಿಲೀಸ್ ಮಾಡಿದೆ. ಅದರಲ್ಲೂ ಕೆಲವು ಅಂಶಗಳು ಗಮನ ಸೆಳೆಯುವಂತಿದ್ದು, ಹಿನ್ನೆಲೆ ಸಂಗೀತವೂ ಅಡಕವಾಗಿದೆ. ಇವೆಲ್ಲವೂ ರೀಲ್ಸ್‌ನಲ್ಲಿ ರಿಲೀಸ್ ಮಾಡಿರುವುದು ಮತ್ತೊಂದು ವಿಶೇಷ. ಕಣ್ಮನ ಸೆಳೆಯುವ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಥಿಯೇಟರ್‌ನಲ್ಲಿ ಇದರ ಅನುಭವ ಪಡೆಯಬೇಕು ಮತ್ತು ಚಿತ್ರಮಂದಿರಗಳಲ್ಲಿ ಕುಳಿತು ನಗೆಗಡಲಲ್ಲಿ ತೇಲುವ ಸಿನಿಮಾ ಇದಾಗಿದೆ ಎಂಬುದು ಚಿತ್ರತಂಡದ ಅನಿಸಿಕೆ.

     

    ಪರಂವಃ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

  • ಪಾರ್ಟಿ ಬಗ್ಗೆ ರಕ್ಷಿತ್ ಶೆಟ್ಟಿ ಕೊಟ್ಟರು ಹೊಸ ಅಪ್ ಡೇಟ್

    ಪಾರ್ಟಿ ಬಗ್ಗೆ ರಕ್ಷಿತ್ ಶೆಟ್ಟಿ ಕೊಟ್ಟರು ಹೊಸ ಅಪ್ ಡೇಟ್

    ಕಿರಿಕ್ ಪಾರ್ಟಿ ನೆನಪುಗಳನ್ನು ಹಂಚಿಕೊಳ್ಳುತ್ತಲೇ ಮತ್ತೊಂದು ಪಾರ್ಟಿಯ ಹೊಸ ಅಪ್ ಡೇಟ್ ಕೊಡುವುದಾಗಿ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ (Rakshit Shetty) ಹೇಳಿಕೊಂಡಿದ್ದರು. ಹೊಸ ವಿಷಯ ಏನಿರಬಹುದು ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ಕಿರಿಕ್ ಪಾರ್ಟಿ 2 ಸಿನಿಮಾದ ಬಗ್ಗೆ ಏನಾದರೂ ಹೇಳಬಹುದಾ ಎನ್ನುವ ನಿರೀಕ್ಷೆ ಕೂಡ ಇತ್ತು. ಎಲ್ಲದಕ್ಕೂ ಇದೀಗ ಉತ್ತರ ಸಿಕ್ಕಿದೆ.

    ಹೌದು, ರಕ್ಷಿತ್ ಶೆಟ್ಟಿ ಪಾರ್ಟಿ ಕುರಿತಾಗಿ ಅಪ್ ಡೇಟ್ ನೀಡಿದ್ದು, ತಮ್ಮದೇ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಬ್ಯಾಚಲರ್ ಪಾರ್ಟಿ ಸಿನಿಮಾದ ಬಗ್ಗೆ ಅವರು ಬರೆದುಕೊಂಡಿದ್ದಾರೆ. ಕೂಡಲೇ ಹೊಸ ಪಾರ್ಟಿ ಕೊಡುವುದಾಗಿ ಅವರು ಹೊಸ ಸಿನಿಮಾದ ಬಗ್ಗೆ ಹೇಳಿಕೊಂಡಿದ್ದಾರೆ.

     

    ಬ್ಯಾಚುಲರ್ ಪಾರ್ಟಿ ಹಾಸ್ಯ ಪ್ರಧಾನವಾದ ಮನೋರಂಜನಾ ಚಿತ್ರವಾಗಿದ್ದು ದಿಗಂತ್ ಮಂಚಾಲೆ, ರಂಗಾಯಣ ರಘು, ಅಚ್ಯುತಕುಮಾರ್, ಸಿರಿ ರವಿಕುಮಾರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಅಭಿಜಿತ್ ಮಹೇಶ್ ಈ ಸಿನಿಮಾದ ನಿರ್ದೇಶಕರು.

  • ‘ಕಾಂತಾರ 2’ ಬರೋದು ಪಕ್ಕಾ : ನಟ ದಿಗಂತ್ ಬಿಚ್ಚಿಟ್ಟ ರಹಸ್ಯ

    ‘ಕಾಂತಾರ 2’ ಬರೋದು ಪಕ್ಕಾ : ನಟ ದಿಗಂತ್ ಬಿಚ್ಚಿಟ್ಟ ರಹಸ್ಯ

    ಕಾಂತಾರ ಸಿನಿಮಾ ಯಶಸ್ಸಿನ ನಂತರ ಕಾಂತಾರ 2 ಬರಲಿದೆ ಎಂಬ ಸುದ್ದಿ ದಟ್ಟವಾಗಿತ್ತು. ಆದರೆ, ಅಧಿಕೃತವಾಗಿ ಈ ಕುರಿತು ಯಾರೂ ಈವರೆಗೂ ಬಾಯಿ ಬಿಟ್ಟಿರಲಿಲ್ಲ. ಹಾಗಾಗಿ ಇದೊಂದು ಗಾಸಿಪ್ ಎಂದೇ ಭಾವಿಸಲಾಗಿತ್ತು. ಇದೇ ಮೊದಲ ಬಾರಿಗೆ ದಿಗಂತ್ ಈ ಗುಟ್ಟನ್ನು ರಟ್ಟು ಮಾಡಿದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿ ಅವರು ಕಾಂತಾರ 2 ಸಿನಿಮಾದ ಚಿತ್ರಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಿದ್ದಾರೆ.

    ಅಂದುಕೊಂಡಂತೆ ಆಗಿದ್ದರೆ ರಿಷಬ್ ಶೆಟ್ಟಿ ಅವರು, ದಿಗಂತ್ ಕಾಂಬಿನೇಷನ್ ನಲ್ಲಿ ಬ್ಯಾಚ್ಯುಲರ್ ಪಾರ್ಟಿ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಈಗವರು ಆ ಸಿನಿಮಾದಿಂದ ಹೊರ ಬಂದಿದ್ದಾರೆ. ಸಿನಿಮಾದಲ್ಲಿ ನಟಿಸದೇ ಇರುವುದಕ್ಕೆ ಕಾರಣವನ್ನು ಸ್ವತಃ ದಿಗಂತ್ ಅವರೇ ಹೇಳಿಕೊಂಡಿದ್ದಾರೆ. ರಿಷಬ್ ಅವರು ಕಾಂತಾರ 2 ಸಿನಿಮಾದ ಕೆಲಸದಲ್ಲಿ ಬ್ಯುಸಿ ಆಗಿರುವುದರಿಂದ ನಟಿಸಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

    ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್ ನ ಕಾಂತಾರ ಸಿನಿಮಾ ಇದೀಗ ತುಳುವಿನಲ್ಲಿ ರಿಲೀಸ್ ಆಗುತ್ತಿದೆ. ಮೊನ್ನೆಯಷ್ಟೇ ತುಳು ಭಾಷೆಯ ಟ್ರೇಲರ್ ರಿಲೀಸ್ ಆಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ತುಳು ನಾಡಿನ ದೈವಾರಾಧನೆಯನ್ನೇ ಪ್ರಮುಖವಾಗಿಟ್ಟುಕೊಂಡು ಮಾಡಿರುವ ಸಿನಿಮಾ ಇದಾಗಿದ್ದರಿಂದ ಅತ್ಯಂತ ಭಕ್ತಿಯಿಂದಲೇ ಈ ಸಿನಿಮಾವನ್ನು ಸ್ವೀಕರಿಸಿದ್ದರು. ಇದೀಗ ಸಿನಿಮಾ ರಿಲೀಸ್ ಕೂಡ ಆಗಿದೆ.

    ಈಗಾಗಲೇ ತುಳು ಸಿನಿಮಾ ರಿಲೀಸ್ ದಿನಾಂಕವನ್ನು ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿದೆ. ಇದೇ ಡಿಸೆಂಬರ್ 2 ರಂದು ತುಳು ಭಾಷೆಯಲ್ಲಿ ಕಾಂತಾರ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗುತ್ತಿದ್ದು, ಅದಕ್ಕೂ ಮುನ್ನ ಆಸ್ಟ್ರೇಲಿಯಾದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ:ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ಕೊಟ್ಟ ವರುಣ್ ಧವನ್

    ಶುಕ್ರವಾರ, ಶನಿವಾರ ಮತ್ತು ಭಾನುವಾರ ಹಲವು ಶೋಗಳನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಗಳಲ್ಲಿ ರಿಲೀಸ್ ಮಾಡಿದೆ ಡ್ರೀಮ್ಸ್ ಸ್ಕ್ರೀನ್ ಇಂಟರ್ ನ್ಯಾಷನಲ್ ಸಂಸ್ಥೆ. ಅಧಿಕೃವಾಗಿ ತನ್ನ ಪೇಜ್ ನಲ್ಲಿ ಯಾವೆಲ್ಲ ಶೋಗಳು ಎಷ್ಟು ಗಂಟೆಗೆ ಎಂದು ಬರೆದುಕೊಂಡಿದೆ. ನಿನ್ನೆ ಮತ್ತು ಇವತ್ತು ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನಟಿ ಮಮತಾ ರಾವುತ್ ಬ್ಯಾಚುಲರ್ ಪಾರ್ಟಿ

    ನಟಿ ಮಮತಾ ರಾವುತ್ ಬ್ಯಾಚುಲರ್ ಪಾರ್ಟಿ

    ಕ್ಷಿಣ ಭಾರತದ ಕನ್ನಡದ ನಟಿ ಮಮತಾ ರಾವುತ್ ಮೇ 11ರಂದು ವೈದ್ಯ ಡಾ.ಸುರೇಶ್ ಜತೆ ಸಪ್ತಪದಿ ತುಳಿಯಲಿದ್ದಾರೆ. ಅದಕ್ಕೂ ಮುನ್ನ ಸ್ನೇಹಿತೆಯರ ಜೊತೆ ಖಾಸಗಿ ರೆಸಾರ್ಟ್ ನಲ್ಲಿ ಅವರು ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಈ ಬ್ಯಾಚುಲರ್ ಪಾರ್ಟಿಯಲ್ಲಿ ಬಾಲ್ಯದ ಗೆಳೆತಿಯರು, ಸಿನಿಮಾ ರಂಗದ ಫ್ರೆಂಡ್ಸ್ ಕೂಡ ಭಾಗಿಯಾಗಿದ್ದಾರೆ. ಇದನ್ನೂ ಓದಿ : ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಮೊನ್ನೆಯಷ್ಟೇ ಈ ಜೋಡಿಯ ನಿಶ್ಚಿತಾರ್ಥ ನಡೆದಿದದ್ದು ಕುಟುಂಬದ ನಿಶ್ಚಿಯದಂತೆ ಮೇ 10 ಮತ್ತು 11 ರಂದು ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದೆ. ‘ಇದೊಂದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಡಾ.ಸುರೇಶ್ ಕೋಟಿಯಾನ್ ಕುಟುಂಬ ಮತ್ತು ನಮ್ಮ ಕುಟುಂಬ ಸೇರಿ ಈ ಮದುವೆಯನ್ನು ನಿಶ್ಚಿಯ ಮಾಡಿದೆ. ಕುಟುಂಬದ ನಿರ್ಧಾರದಂತೆ ನಾವಿಬ್ಬರೂ ಹೊಸ ಬದುಕಿಗೆ ಕಾಲಿಡುತ್ತಿದ್ದೇವೆ. ಒಳ್ಳೆಯ ಹುಡುಗ, ಸಮಾಜದ ಬಗ್ಗೆ ಅವರಿಗೆ ಕಾಳಜಿ ಇದೆ. ಇವೆಲ್ಲ ಕಾರಣಕ್ಕೆ ಸುರೇಶ್ ನನಗೆ ಇಷ್ಟವಾದರು’ ಎಂದರು. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

    ಡಾ. ಸುರೇಶ್ ಮಂಗಳೂರು ಮೂಲದವರು. ಕರ್ನಾಟಕ ಹೆಲ್ತ್ ಡಿಪಾರ್ಟಮೆಂಟ್ ನಲ್ಲಿ ಅವರು ಮನಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಕೆನಡಾದಲ್ಲಿ ಪಿಎಚ್ಡಿ ಮಾಡಿರುವ ಸುರೇಶ್, ಎರಡೆರಡು ಸಂಶೋಧನಾ ಪ್ರಬಂಧ ಮಂಡಿಸಿರುವುದು ವಿಶೇಷ. ಈ ಜೋಡಿಯ ವಿವಾಹವು ಬೆಂಗಳೂರಿನಲ್ಲಿ ನಡೆಯಲಿದ್ದು, ಸಿನಿಮಾ ರಂಗದ ಅನೇಕ ಗಣ್ಯರು ವಿವಾಹ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

    ಮಮತಾ ಸಹ ನಟಿಯಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟವರು. ಕಾಮಿಡಿ ಪಾತ್ರಗಳಲ್ಲಿ ಮಿಂಚಿದರು. ಆನಂತರ ನಾಯಕಿಯಾಗಿ ಅನೇಕ ಚಿತ್ರಗಳನ್ನು ಮಾಡಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತೆಲುಗು ಮತ್ತು ತಮಿಳಿನಲ್ಲೂ ಇವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

  • 100 ಕೋಟಿ ವೆಚ್ಚದಲ್ಲಿ ಆಲಿಯಾ – ರಣ್‌ಬೀರ್ ಮ್ಯಾರೇಜ್ : ಅಂಥದ್ದೇನಿದೆ ಆ ಮದುವೇಲಿ..?

    100 ಕೋಟಿ ವೆಚ್ಚದಲ್ಲಿ ಆಲಿಯಾ – ರಣ್‌ಬೀರ್ ಮ್ಯಾರೇಜ್ : ಅಂಥದ್ದೇನಿದೆ ಆ ಮದುವೇಲಿ..?

    ತತ ಐದು ವರ್ಷಗಳ ಕಾಲ ಅಭಿಮಾನಿಗಳನ್ನು ಕಾಯಿಸಿ, ಕೊನೆಗೂ ಮದುವೆಯಾಗುತ್ತಿದ್ದಾರೆ ಬಾಲಿವುಡ್ ಲವ್ ಬರ್ಡ್ಸ್ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಮದುವೆ ಆಗುತ್ತಿದ್ದಾರೆ. ಐದು ವರ್ಷಗಳಿಂದಲೂ ಜತೆಯಾಗಿಯೇ ಓಡಾಡುತ್ತಿದ್ದ ಈ ಜೋಡಿ ಮದುವೆಯನ್ನು ನಿರಾಕರಿಸುತ್ತಲೇ ಬಂದರು. ಕನಿಷ್ಠ ಹದಿನೈದು ಬಾರಿಯಾದರೂ ಇವರ ಮದುವೆಯ ಬಗ್ಗೆ ಬಾಲಿವುಡ್ ಮಾತಾಡಿಕೊಂಡಿದೆ. ಮಾಧ್ಯಮಗಳು ಬರೆದಿವೆ. ಇನ್ನೇನು ಇವರು ಮದುವೆ ಆಗೇ ಬಿಡುತ್ತಾರೆ ಎನ್ನುವಲ್ಲಿಗೂ ಸುದ್ದಿ ಆಗಿದೆ. ಈ ಬಾರಿಯಂತೂ ಸುದ್ದಿ ಸುಳ್ಳಾಗಲಿಲ್ಲ. ಏಪ್ರಿಲ್ 15ಕ್ಕೆ ಈ ಜೋಡಿ ಹಸೆಮಣೆ ಏರುತ್ತಿದ್ದರೂ, ಮದುವೆಯ ಕಾರ್ಯಗಳು ಏಪ್ರಿಲ್ 13 ರಿಂದಲೇ ಶುರುವಾಗಲಿದೆ. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್

    ಒಟ್ಟು ನಾಲ್ಕು ದಿನಗಳ ಕಾಲ ಮದುವೆಯ ಕಾರ್ಯಕ್ರಮವನ್ನು ಈ ಇಬ್ಬರು ಕುಟುಂಬ ಹಮ್ಮಿಕೊಂಡಿದೆ ಎನ್ನಲಾಗುತ್ತಿದೆ. ಏ.13 ರಂದು ಮೆಹೆಂದಿ ಕಾರ್ಯಕ್ರವನ್ನು ಆಯೋಜನೆ ಮಾಡಿದ್ದರೆ, ಏ.14ಕ್ಕೆ ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಏ. 15ರಂದು ವಿವಾಹ ಮಹೋತ್ಸವ. ಏ.16 ಮತ್ತು 17ರಂದು ವಿವಿಧ ಶಾಸ್ತ್ರಗಳನ್ನು ಆಲಿಯಾ ಭಟ್ ಮತ್ತು ರಣ್ಬೀರ್ ಕುಟುಂಬ ನಿಗದಿ ಮಾಡಿದೆ ಎನ್ನುತ್ತಿವೆ ಕುಟುಂಬದ ಮೂಲಗಳು. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

    ranbir alia

    ಈ ಜೋಡಿಯ ಮದುವೆಗಾಗಿ ಮುಂಬೈನ ಆರ್.ಕೆ ಸ್ಟುಡಿಯೋ ಮದುವಣಗಿತ್ತಿಯಂತೆಯೇ ಸಿಂಗಾರಗೊಂಡಿದೆ. ಈಗಾಗಲೇ ಆಲಿಯಾ ಭಟ್ ಮತ್ತು ರಣ್ಬೀರ್ ಬಾಚ್ಯುಲರ್ ಪಾರ್ಟಿಯ ಮೂಡಿನಲ್ಲಿದ್ದಾರೆ. ಇಬ್ಬರೂ ತಮ್ಮ ಸ್ನೇಹಿತರ ಜತೆಗೆ ಬಾಚ್ಯುಲರ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಈ ಪಾರ್ಟಿ ಕೂಡ ಅದ್ಧೂರಿಯಾಗಿ ಆಯೋಜನೆಗೊಂಡಿತ್ತು. ಬಾಲಿವುಡ್ ನ ಅನೇಕ ತಾರೆಯರು ಇದರಲ್ಲಿ ಹಾಜರಿದ್ದರು. ಇದನ್ನು ಓದಿ: ಶಾರುಖ್ ಖಾನ್- ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ ಚಿತ್ರದ ಶೂಟಿಂಗ್ ಸ್ಟಾರ್ಟ್!

    ಆರ್.ಕೆ ಸ್ಟುಡಿಯೋವನ್ನು ಸಿಂಗರಿಸಲು ದೇಶದ ನಾನಾ ಭಾಗಗಳಿಂದ ಹೂಗಳು ಖರೀದಿಸಲಾಗಿದ್ದು, ಅದರಿಂದಲೇ ಸ್ಟುಡಿಯೋವನ್ನು ಸಿಂಗರಿಸಲಾಗುತ್ತದೆ ಅಂತೆ.  ಅಲ್ಲದೇ ನೂರಾರು ಬಗೆ ವಿಶೇಷ ಭಕ್ಷ್ಯಗಳ ತಯಾರಿಕೆಗೂ ಆರ್ಡರ್ ಕೊಡಲಾಗಿದೆ. ಬಾಲಿವುಡ್ ಮತ್ತು ದಕ್ಷಿಣದ ಅನೇಕ ಸ್ಟಾರ್ ನಟರು ಈ ಮದುವೆಗೆ ಸಾಕ್ಷಿಯಾಗಲಿದ್ದಾರಂತೆ. ಹೀಗಾಗಿ ಈ ಮದುವೆಗೆ ಅಂದಾಜು 100 ಕೋಟಿ ಖರ್ಚಾಗಲಿದೆ ಎನ್ನುವ ಮಾಹಿತಿ ಇದೆ.

  • ನಟಿ ಕಾವ್ಯಾ ಗೌಡ ಬ್ಯಾಚುಲರ್ ಪಾರ್ಟಿ

    ನಟಿ ಕಾವ್ಯಾ ಗೌಡ ಬ್ಯಾಚುಲರ್ ಪಾರ್ಟಿ

    ಬೆಂಗಳೂರು: ಕಿರುತೆರೆ ನಟಿ ಕಾವ್ಯಾ ಗೌಡ ಅವರು ಡಿಸೆಂಬರ್ 2ಕ್ಕೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಇದೀಗ ಬ್ಯಾಚುಲರ್ ಪಾರ್ಟಿಯಲ್ಲಿ ಎಂಜಾಯ್ ಮಾಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಮಿಸ್ಟರ್ ಎಸ್ ನೀವು ನನ್ನ ಉತ್ತಮ ಸ್ನೇಹಿತ ಮತ್ತು ನನ್ನ ಪ್ರೇಮಿಯಾಗಿದ್ದೀರಿ. ನಾನು ನಿನ್ನನ್ನು ಪ್ರೀತಿಸುತ್ತೇನೆ ಮಾ… ಎಂದು ಬರೆದುಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಬ್ಯಾಚುಲರ್ ಪಾರ್ಟಿಯ ಕಲರ್ ಕಲರ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕಾವ್ಯಾ ಮಾತನಾಡಿ ಮದುವೆಯ ಕುರಿತು ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಡೆಸ್ಟಿನಿಯನ್ನು ನಾನು ನಂಬುತ್ತೇನೆ, ನಾನು ಏನು ಅಂದುಕೊಳ್ಳುವೆನೋ ಅದೇ ರೀತಿ ಆಗುತ್ತೆ. ಹಾಗೆಯೇ ಬ್ಯಾಚುಲರ್ ಪಾರ್ಟಿ ನಡೆದಿದ್ದು, ನನ್ನ ಹುಡುಗ, ಅಕ್ಕ ಆಯೋಜಿಸಿದ್ದರು ಎಂದಿದ್ದಾರೆ. ಇದನ್ನೂ ಓದಿ:   ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಉತ್ತರ ಏನು ಗೊತ್ತಾ?

    ನವೆಂಬರ್ 29ರಂದು ಬೆಂಗಳೂರಿನ ಜೆ ಡಬ್ಲ್ಯು ಮ್ಯಾರಿಯೇಟ್‍ನಲ್ಲಿ ಸಂಗೀತ್ ಮೆಹೆಂದಿ ನಡೆಯಲಿದೆ. ಡಿಸೆಂಬರ್ 1ರಂದು ಆರತಕ್ಷತೆ, ಡಿಸೆಂಬರ್ 2ರಂದು ತಾಜ್ ವೆಸ್ಟೆಂಡ್‍ನಲ್ಲಿ ಮದುವೆ ನಡೆಯಲಿದೆ. ಸೋಮಶೇಖರ್‍ರಂತಹ ಹುಡುಗನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ. ನಿಜಕ್ಕೂ ಅವರ ಗುಣ, ಸ್ವಭಾವ ನನಗೆ ತುಂಬ ಇಷ್ಟ. ನಾನು ಸಾಯಿಬಾಬಾ ಅವರನ್ನು ತುಂಬ ನಂಬುತ್ತೇನೆ. ನನ್ನ ಜೊತೆಗೆ ಎಲ್ಲರಿಗೂ ಒಳ್ಳೆಯದನ್ನು ಮಾಡು ಅಂತ ಕೇಳಿಕೊಳ್ಳುತ್ತೇನೆ, ಅಂತೆಯೇ ಒಳ್ಳೆಯದಾಗುತ್ತಿದೆ ಎಂದು ಭಾವಿಸುವೆ ಎಂದಿದ್ದಾರೆ. ಇದನ್ನೂ ಓದಿ:  ಪ್ರಿಯತಮನನ್ನು ಪರಿಚಯಿಸಿದ ನಟಿ ಕಾವ್ಯ ಗೌಡ

    ಕಳೆದ ಮೇ ತಿಂಗಳಿನಲ್ಲಿಯೇ ಮದುವೆ ನಡೆಯಬೇಕಿತ್ತು, ಕೊರೊನಾ ಎರಡನೇ ಅಲೆ ಇರೋದಕ್ಕೆ ಮದುವೆ ಮುಂದೂಡಲಾಗಿತ್ತು. ಕೊರೊನಾ ವೈರಸ್ ನಿಯಮಗಳನ್ನು ಪಾಲಿಸಿ ನಾವು ಮದುವೆಯಾಗುತ್ತಿದ್ದೇವೆ. ಸ್ಯಾಂಡಲ್‍ವುಡ್‍ನ ಕೆಲ ಕಲಾವಿದರು, ತಂತ್ರಜ್ಞರು, ಸ್ನೇಹಿತರನ್ನು ಆಹ್ವಾನಿಸಿದ್ದೇವೆ. ನಮ್ಮ ಎರಡು ಕುಟುಂಬದ ಸದಸ್ಯರು, ಆತ್ಮೀಯರು ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮದುವೆಯ ಕುರಿತಾಗಿ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ.

  • ಬ್ಯಾಚುಲರ್ ಪಾರ್ಟಿಯಲ್ಲಿ ವರನ ಮರ್ಮಾಂಗಕ್ಕೆ ಗೆಳೆಯನಿಂದ್ಲೇ ಬಿತ್ತು ಗುಂಡೇಟು!

    ಬ್ಯಾಚುಲರ್ ಪಾರ್ಟಿಯಲ್ಲಿ ವರನ ಮರ್ಮಾಂಗಕ್ಕೆ ಗೆಳೆಯನಿಂದ್ಲೇ ಬಿತ್ತು ಗುಂಡೇಟು!

    ಕೈರೋ: ಮದುವೆ ಹಿಂದಿನ ದಿನ ವರನ ಜೊತೆ ಸ್ನೇಹಿತರು ಸಂಭ್ರಮಾಚರಣೆ ಮಾಡೋ ಸಂದರ್ಭದಲ್ಲಿ ಅತೀ ಉತ್ಸಾಹದಲ್ಲಿ ಸ್ನೇಹಿತನೊಬ್ಬ ವರನ ಮರ್ಮಾಂಗಕ್ಕೆ ಗುಂಡೇಟು ಹೊಡೆದಿರುವ ಘಟನೆ ಈಜಿಪ್ಟ್‍ನಲ್ಲಿ ನಡೆದಿದೆ.

    28 ವರ್ಷದ ವರ ಓಮರ್ ಅಲ್ ಅಲ್‍ಸೈದ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಓಮರ್ ಮದುವೆಗೂ ಮುನ್ನ ಬ್ಯಾಚುಲರ್ ಪಾರ್ಟಿಯ ಸಂಭ್ರಮದಲ್ಲಿದ್ದ. ಈ ವೇಳೆ ಸ್ನೇಹಿತರಲ್ಲೊಬ್ಬ ಸಂಭ್ರಮಾಚರಣೆಗೆ ಗುಂಡು ಹಾರಿಸಿದ್ದ. ಉತ್ಸಾಹದಲ್ಲಿ ಗುಂಡು ಹಾರಿಸಿದ ಸ್ನೇಹಿತನಿಗೆ ಗನ್ ಮೇಲಕ್ಕೆ ಗುರಿಯಿಡಬೇಕು ಅನ್ನೋದು ಮರೆತುಹೋಗಿತ್ತು. ಪರಿಣಾಮ ಗುಂಡು ವರನ ಮರ್ಮಾಂಗಕ್ಕೆ ತಗುಲಿದೆ.

    ಘಟನೆಯಿಂದ ಓಮರ್‍ನ ಮರ್ಮಾಂಗ, ತೊಡೆ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ. ತಾನು ಮಾಡಿದ ಎಡವಟ್ಟಿನಿಂದ ಸ್ನೇಹಿತ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದು, ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಅತ್ತ ಗಾಯಗೊಂಡ ಓಮರ್ ಇನ್ನೂ ಬ್ಯಾಚುಲರ್ ಆಗಿದ್ದಾನೆ ಎಂದು ವರದಿಯಾಗಿದೆ. ಗಾಯಗೊಂಡಿರುವ ಓಮರ್‍ನ ಭಾವಿ ಪತ್ನಿಗೆ ಮುಂದೆ ಆತನನ್ನು ಮದುವೆಯಾಗೋ ಯೋಚನೆ ಇದೆಯಾ ಎಂಬುದು ಸ್ಪಷ್ಟವಾಗಿಲ್ಲ. ಸದ್ಯ ಈಜಿಪ್ಟ್‍ನ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದೆ. ಗನ್ ಸರಿಯಾಗಿ ಹಿಡಿಯಲು ಬಾರದ ವರನ ಸ್ನೇಹಿತನ ಬಗ್ಗೆ ಜನ ಟೀಕಿಸಿದ್ದಾರೆ.

    ಈಜಿಪ್ಟ್ ನಲ್ಲಿ ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿ ಅನಾಹುತವಾಗಿರೋದು ಇದೇ ಮೊದಲೇನಲ್ಲ. ಅಕ್ಟೋಬರ್‍ನಲ್ಲಿ ಇಲ್ಲಿನ ಮದುವೆ ಸಮಾರಂಭವೊಂದಲ್ಲಿ ಅತಿಥಿಗೆ ಗುಂಡೇಟು ತಗುಲಿ ಸರ್ಜರಿಗೆ ಒಳಪಡಬೇಕಾಯ್ತು. ಈಜಿಪ್ಟ್ ನ ಬಾನಿ ಸ್ವೆಫ್‍ನಲ್ಲಿ 30 ವರ್ಷದ ವ್ಯಕ್ತಿ ಮುದವೆಗೆ ಬಂದಿದ್ದಾಗ ಅವರ ತೊಡೆಗೆ ಗುಂಡೇಟು ತಗುಲಿತ್ತು. ಅವರಿಗೆ ಸರ್ಜರಿ ಮಾಡಿಸಬೇಕಾಯ್ತು.