Tag: Bachchan Pandey

  • ನಾಯಕರಷ್ಟೇ ನಮಗೂ ಸಮಾನ ಅವಕಾಶ ಬೇಕು: ಕೃತಿ ಸನೋನ್

    ನಾಯಕರಷ್ಟೇ ನಮಗೂ ಸಮಾನ ಅವಕಾಶ ಬೇಕು: ಕೃತಿ ಸನೋನ್

    ಮುಂಬೈ: ಸಿನಿಮಾ ರಂಗದಲ್ಲಿ ಮಹಿಳಾ ಪಾತ್ರಗಳಿಗಿಂತ ಪುರುಷ ಪಾತ್ರಗಳೇ ತೆರೆಯ ಮೇಲೆ ಹೆಚ್ಚು ಕಾಣಿಸಿಕೊಳ್ಳುತ್ತವೆ. ನಾಯಕಿಯರಿಗೆ ಹೆಚ್ಚು ಪ್ರಾಶಸ್ತ್ಯ ಇರುವುದಿಲ್ಲ. ಸಿಕ್ಕಿರುವ ಕಡಿಮೆ ಅವಧಿಯಲ್ಲೇ ನಮ್ಮ ಪ್ರತಿಭೆಯನ್ನು ತೋರಿಸುವಂತಹ ಅನಿವಾರ್ಯತೆ ಇರುತ್ತದೆ. ನನಗೆ ಈವರೆಗೂ ಸಿಕ್ಕಿರುವ ಪಾತ್ರಗಳು ಅಂಥದ್ದೇ ಆಗಿವೆ. ಅದರಲ್ಲಿಯೇ ನಾನು ತೃಪ್ತಿ ಪಟ್ಟಿದ್ದೇನೆ ಎಂದಿದ್ದಾರೆ ‘ಬಚ್ಚನ್ ಪಾಂಡೆ’ ಚಿತ್ರದ ನಾಯಕಿ ಕೃತಿ ಸನೋನ್.

     

    View this post on Instagram

     

    A post shared by Kriti (@kritisanon)

    ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, “ಯಾವುದೇ ಸಿನಿಮಾ ರಂಗದಲ್ಲಿ ನಾಯಕ ಮತ್ತು ನಾಯಕಿಗೆ ಸಮಾನವಾಗಿ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲು ಅವಕಾಶ ಸಿಗುವುದು ಕಡಿಮೆ. ಕಥೆಯಲ್ಲಿ ಮಹಿಳೆಗೆ ಹೆಚ್ಚಿನ ಮಹತ್ವವಿದ್ದು ಪುರುಷನಿಗೆ ಕಡಿಮೆ ಇದ್ದರೆ, ಯಾವ ನಟನೂ ಅಂತಹ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಈ ಮನಸ್ಥಿತಿ ಚಿತ್ರರಂಗದಲ್ಲಿ ಬದಲಾಗಬೇಕು ಎಂದು ನಾನು ಬಯಸುತ್ತೇನೆ. ಕೆಲವರು ಇದಕ್ಕೆ ಅಪವಾದವಾಗಿಯೂ ಇರುತ್ತಾರೆ. ‘ಅತ್ರಂಗಿ ರೇ’ ಚಿತ್ರದಲ್ಲಿ ಹೆಸರಾಂತ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರದ್ದು ಸಣ್ಣ ಪಾತ್ರ. ಆದರೂ, ಅದನ್ನು ಒಪ್ಪಿಕೊಂಡು ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದರು. ಅದು ಅವರ ವೃತ್ತಿ ಪರತೆಯನ್ನು ತೋರಿಸುತ್ತದೆ. ಹೀಗೆ ಕಲಾವಿದರು ಎಂತಹ ಪಾತ್ರ ಸಿಕ್ಕರೂ ಮಾಡಬೇಕು’ ಎಂದಿದ್ದಾರೆ ಕೃತಿ. ಇದನ್ನೂ ಓದಿ: ಮಿಸ್ ವರ್ಲ್ಡ್ 2021: ಭಾರತೀಯ ಮೂಲದ ಶ್ರೀಸೈನಿ ರನ್ನರ್ ಅಪ್, ಕರೋಲಿನಾ ಬಿಲಾವ್ಸ್ಕಾಗೆ ‘ವಿಶ್ವ ಸುಂದರಿ’ ಕಿರೀಟ

    ಮುಂದುವರೆದು ಮಾತನಾಡಿರುವ ಕೃತಿ, “‘ಬರೇಲಿ ಕಿ ಬರ್ಫಿ’ ಚಿತ್ರದ ನಂತರ ನಾನು ಅನೇಕ ಕಥೆಗಳನ್ನು ಕೇಳಿದೆ. ನನ್ನ ಬಳಿ ಬಂದ ಸಿನಿಮಾಗಳಲ್ಲಿ ಶೇ.99ರಷ್ಟು ಸಿನಿಮಾಗಳಲ್ಲಿ ನನ್ನದು ಸಣ್ಣ ಪಾತ್ರವೇ ಆಗಿರುತ್ತಿತ್ತು. ಕೆಲವನ್ನು ಒಪ್ಪಿದೆ, ಕೆಲವನ್ನು ಬಿಟ್ಟೆ. ಮಾಡಿದ ಪಾತ್ರಗಳಿಂದಾಗಿ ಈಗ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಅದು ನನಗೆ ಖುಷಿ ತಂದಿದೆ” ಎಂದಿದ್ದಾರೆ.

     

    View this post on Instagram

     

    A post shared by Kriti (@kritisanon)

    ಕಳೆದ ವರ್ಷ ಕೃತಿ ಅವರ ‘ಹಮ್ ದೋ ಹಮಾರೆ ದೋ’ ಮತ್ತು ‘ಮಿಮಿ’ ಚಿತ್ರಗಳು ತೆರೆಕಂಡಿವೆ. ಅವರಿಗೆ ಸಾಕಷ್ಟು ಹೆಸರೂ ತಂದುಕೊಟ್ಟಿವೆ. ಎರಡೂ ಚಿತ್ರಗಳನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ‘ಮಿಮಿ’ಯಲ್ಲಿ ಕೃತಿ ನಾಯಕಿ ಆಗಿದ್ದರು. ಇದನ್ನೂ ಓದಿ: ಜೇಮ್ಸ್ ಸಿನಿಮಾ ನೋಡೋಕೆ 10 ಅಲ್ಲ, 100 ಕಾರಣ

    ಕೃತಿ ಸನೋನ್ ಅಭಿನಯದ ‘ಬಚ್ಚನ್ ಪಾಂಡೆ’ ಸಿನಿಮಾ ಇದೇ ಮಾ.18 ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಅವರು ಅಕ್ಷಯ್ ಕುಮಾರ್ ಜತೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ‘ಬಚ್ಚನ್ ಪಾಂಡೆ’ ಹೊರತಾಗಿ, ಕೃತಿ ಹಲವಾರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಪ್ರಭಾಸ್ ಮತ್ತು ಸೈಫ್ ಅಲಿಖಾನ್ ಅಭಿನಯದ ‘ಆದಿಪುರುಷ’, ವರುಣ್ ಧವನ್ ಜೊತೆ ಹಾರರ್-ಕಾಮಿಡಿ ‘ಭೇದಿಯಾ’ ಮತ್ತು ಟೈಗರ್ ಶ್ರಾಫ್ ಜೊತೆಗಿನ ‘ಗಣಪತ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಕೃತಿ ಚಲನಚಿತ್ರ ಹಿನ್ನೆಲೆಯಿಂದ ಬಂದವರಲ್ಲ ಮತ್ತು 2014 ರಲ್ಲಿ ಟೈಗರ್ ಶ್ರಾಫ್ ಜೊತೆಗಿನ ‘ಹೀರೋಪಂತಿ’ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದರು.

  • ಅಕ್ಷಯ್ ಹುಕ್ ಸ್ಟೆಪ್‌ಗೆ ಫೇಮಸ್ ಕ್ರಿಕೆಟಿಗರು ಫಿದಾ

    ಅಕ್ಷಯ್ ಹುಕ್ ಸ್ಟೆಪ್‌ಗೆ ಫೇಮಸ್ ಕ್ರಿಕೆಟಿಗರು ಫಿದಾ

    ಮುಂಬೈ: ಸಾಜಿದ್ ನಾಡಿಯಾಡ್‌ವಾಲಾ ಅವರ ಬಹು ನಿರೀಕ್ಷಿತ ಆಕ್ಷನ್-ಕಾಮಿಡಿ ಚಿತ್ರ ‘ಬಚ್ಚನ್ ಪಾಂಡೆ’ ಬಿಟೌನ್ ನಲ್ಲಿ ಬಿಡುಗಡೆಗೂ ಮುನ್ನ ಭಾರೀ ಸದ್ದು ಮಾಡುತ್ತಿದೆ. ಇತ್ತೀಚಗಷ್ಟೇ ಚಿತ್ರ ತಂಡವು ಸಿನಿಮಾದ ‘ಮಾರ್ ಖಾಯೇಗಾ’ ಎಂಬ ಮೊದಲ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಈ ಸಾಂಗ್ ಸಖತ್ ಕ್ರೇಜ್ ಕ್ರಿಯೇಟ್ ಮಾಡಿದೆ.

    ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ರೀತಿಯಲ್ಲಿ ಹಾಡಿಗೆ ವಿಡಿಯೋ ಮಾಡಿ ಶೇರ್ ಮಾಡುತ್ತಿದ್ದಾರೆ ಅಭಿಮಾನಿಗಳು. ಈ ಹಾಡು ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಕೂಡ ಪಡೆದಿದೆ. ಅಕ್ಷಯ ಅವರ ಹುಕ್ ಸ್ಟೆಪ್‍ಗಳು ಭಾರತೀಯ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

     

    View this post on Instagram

     

    A post shared by David Warner (@davidwarner31)

    ಕೇವಲ ಸಾಮಾನ್ಯ ಪ್ರೇಕ್ಷಕನಿಗೆ ಮಾತ್ರವಲ್ಲ, ಕ್ರಿಕೆಟ್ ದಿಗ್ಗಜರಲ್ಲೂ ಈ ಹಾಡು ಕ್ರೇಜ್ ಮೂಡಿಸಿದೆ. ಇನ್‍ಸ್ಟಾಗ್ರಾಮ್‍ನ ರಿಲ್ಸ್‌ನಲ್ಲಿ ಇದೀಗ ಟ್ರೆಂಡ್ ಆಗಿರುವ ಈ ಹಾಡಿಗೆ ಅಂತರಾಷ್ಟ್ರೀಯ ಕ್ರಿಕೆಟಿಗರಾದ ಡೇವಿಡ್ ವಾರ್ನರ್ ಮತ್ತು ಡ್ವೇನ್ ಬ್ರಾವೋ ಹಾಡಿನಲ್ಲಿರುವ ಅಕ್ಷಯ್ ಕುಮಾರ್ ಅವರ ಕೆಲ ಹುಕ್ ಸ್ಟೆಪ್‍ಗಳಿಗೆ ಹೆಜ್ಜೆ ಹಾಕಿದ್ದಾರೆ. ಅಂದಹಾಗೆ ಚಿತ್ರದಲ್ಲಿ ಅಕ್ಷಯ್ ಕುಮಾರ್ ಗ್ಯಾಂಗ್‍ಸ್ಟರ್ ರೀತಿಯಲ್ಲಿ ವಿಭಿನ್ನ ಗೆಟಪ್ ಹಾಕಿದ್ದು, ನೋಡಲು ತುಂಬಾ ಕ್ರೂರವಾಗಿ ಕಾಣುತ್ತಾರೆ.

    ಫರ್ಹಾದ್ ಸಾಮ್ಜಿ ನಿರ್ದೇಶನದ ಈ ಚಿತ್ರದಲ್ಲಿ ಕೃತಿ ಸನೋನ್, ಅರ್ಷದ್ ವಾರ್ಸಿ, ಪಂಕಜ್ ತ್ರಿಪಾಠಿ, ಸಂಜಯ್ ಮಿಶ್ರಾ, ಅಭಿಮನ್ಯು ಸಿಂಗ್ ಮತ್ತು ಜಾಕ್ವೆಲಿನ್ ಫನಾರ್ಡೀಸ್ ಮೊದಲಾದ ತಾರಾಗಣವಿದೆ. ನಾಡಿಯಾಡ್ವಾಲಾ ಗ್ರ್ಯಾಂಡ್‍ಸನ್ ಎಂಟರ್‍ಟೈನ್‍ಮೆಂಟ್‍ನ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿ ಬಂದಿದೆ.

  • ಅಮೀರ್‌ಗಾಗಿ ‘ಬಚ್ಚನ್ ಪಾಂಡೆ’ ರಿಲೀಸ್ ಡೇಟ್ ಮುಂದೂಡಿದ ಅಕ್ಷಯ್

    ಅಮೀರ್‌ಗಾಗಿ ‘ಬಚ್ಚನ್ ಪಾಂಡೆ’ ರಿಲೀಸ್ ಡೇಟ್ ಮುಂದೂಡಿದ ಅಕ್ಷಯ್

    ಮುಂಬೈ: ಒಂದು ಕಾಲದಲ್ಲಿ ಬಾಲಿವುಡ್ ಆಳುತ್ತಿದ್ದ ಖಾನ್‍ಗಳಲ್ಲಿ ಅಮೀರ್ ಖಾನ್ ಕೂಡ ಒಬ್ಬರು. ಹಿಂದೆ ಯಾವುದೇ ಪ್ರಚಾರವಿಲ್ಲದಿದ್ದರೂ ಬಿಟೌನ್‍ನಲ್ಲಿ ಖಾನ್‍ಗಳ ಸಿನಿಮಾಗಳು ಓಡುತ್ತಿದ್ದವು. ಆದ್ರೆ ಈಗ ಬಿಟೌನ್‍ನಲ್ಲಿ ಖಾನ್‍ಗಳ ಹವಾ ಕೊಂಚ ಕಡಿಮೆಯಾಗಿದ್ದು, ಸಿನಿಮಾ ಯಶಸ್ಸಿಗಾಗಿ ಬೇರೆ ನಟರ ಸಹಾಯ ಕೇಳುವಂತಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಅಮೀರ್ ಖಾನ್ ಮನವಿ ಮಾಡಿದಕ್ಕೆ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನೇ ಮುಂದೂಡಿದ್ದಾರೆ.

    ಹೌದು, ಇತ್ತೀಚೆಗೆ ಬಾಲಿವುಡ್‍ನಲ್ಲಿ ಹೆಚ್ಚಾಗುತ್ತಿರುವ ಸ್ಪರ್ಧೆಗೆ ಅಮೀರ್ ತಲೆಕೆಡಿಸಿಕೊಂಡಿದ್ದಾರೆ. ಹೊಸ ವಿಷಯ, ಕ್ರಿಯೇಟಿವ್ ಎಲಿಮೆಂಟ್ ಇರುವ ಸಿನಿಮಾಗಳು ಸದ್ಯ ಬಿಟೌನ್ ಅಂಗಳದಲ್ಲಿ ಸದ್ದು ಮಾಡುತ್ತಿವೆ. ಅದರಲ್ಲೂ ಅಕ್ಷಯ್ ಕುಮಾರ್ ಅವರು ಆರಿಸಿಕೊಳ್ಳುತ್ತಿರುವ ಹೊಸ ಪಾತ್ರಗಳು, ಸಿನಿಮಾ ವಿಷಯ ಎಲ್ಲರ ಮನ ಗೆಲ್ಲುತ್ತಿದೆ. ಹೀಗಾಗಿ ಅಕ್ಷಯ್ ಅವರ ಬಳಿ ಅಮೀರ್ ಒಂದು ಮನವಿ ಮಾಡಿಕೊಂಡಿದ್ದರು. ಈ ವರ್ಷದ ಕ್ರಿಸ್ಮಸ್‍ನಲ್ಲಿ ಅಮೀರ್ ಖಾನ್‍ರ ಬಹುನಿರೀಕ್ಷಿತ ಸಿನಿಮಾ ‘ಲಾಲ್ ಸಿಂಗ್ ಚಡ್ಡಾ’ ಬಿಡುಗಡೆ ಮಾಡಲು ಸಿನಿಮಾ ತಂಡ ತಯಾರಿ ನಡೆಸುತ್ತಿದೆ. ಆದ್ರೆ ಅದೇ ಸಮಯಕ್ಕೆ ಅಕ್ಷಯ್ ಅವರ ‘ಬಚ್ಚನ್ ಪಾಂಡೆ’ ಸಿನಿಮಾದ ಬಿಡುಗಡೆ ದಿನಾಂಕ ಕೂಡ ನಿಗದಿಯಾಗಿತ್ತು.

    https://www.instagram.com/p/B70Ce7LH0Ye/

    ಅಕ್ಷಯ್ ಅವರ ಸಿನಿಮಾ ಬಿಡುಗಡೆಯಾದರೆ ಎಲ್ಲಿ ತಮ್ಮ ಸಿನಿಮಾ ಓಡುವುದಿಲ್ಲವೋ ಎಂದು ಅಮೀರ್ ತಲೆಕೆಡಿಸಿಕೊಂಡಿದ್ದರು. ಹೀಗಾಗಿ ‘ಬಚ್ಚನ್ ಪಾಂಡೆ’ ಸಿನಿಮಾ ಬಿಡುಗಡೆ ಬಗ್ಗೆ ಅಕ್ಷಯ್ ಹಾಗೂ ನಿರ್ದೇಶಕ ಸಾಜಿದ್ ನಾಡಿಯಾದ್‍ವಾಲಾ ಅವರೊಂದಿಗೆ ಅಮೀರ್ ಮಾತನಾಡಿದ್ದರು. ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡುವಂತೆ ಮನವಿ ಮಾಡಿಕೊಂಡಿದ್ದರು. ಅಮೀರ್ ಅವರ ಮನವಿಯನ್ನು ಗೌರವಿಸಿರುವ ಅಕ್ಷಯ್ ತಮ್ಮ ಸಿನಿಮಾದ ಹೊಸ ಲುಕ್ ಬಿಡುಗಡೆ ಮಾಡಿ ಬಚ್ಚನ್ ಪಾಂಡೆ ಯಾವಾಗ ಬಿಡುಗಡೆ ಆಗುತ್ತೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

    ಈ ಸಿನಿರಂಗದಲ್ಲಿ ಎಲ್ಲರೂ ಸ್ನೇಹಿತರು ಎಂದು ಹೊಸ ಲುಕ್ ಹಾಗೂ ‘ಬಚ್ಚನ್ ಪಾಂಡೆ’ ಸಿನಿಮಾ ಬಿಡುಗಡೆ ದಿನಾಂಕವನ್ನು ಅಕ್ಷಯ್ ಪ್ರಕಟಿಸಿದ್ದಾರೆ. ‘ಬಚ್ಚನ್ ಪಾಂಡೆ’ ಸಿನಿಮಾ ಈ ವರ್ಷಾಂತ್ಯದ ಬದಲು 2021 ಜನವರಿ 22ಕ್ಕೆ ತೆರೆ ಕಾಣಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಹೊಸ ಪೋಸ್ಟರ್‌ನಲ್ಲಿ ಅಕ್ಷಯ್‍ರ ರಗಡ್ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಈ ಟ್ವೀಟ್ ನೋಡಿದ ಬಳಿಕ ಅಮೀರ್ ಅಕ್ಷಯ್ ಹಾಗೂ ಸಾಜಿದ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಕೆಲವೊಮ್ಮೆ ಒಂದೇ ಒಂದು ಮಾತುಕತೆ ಸಾಕು, ಎಲ್ಲ ಸರಿಹೋಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಅಮೀರ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಇದೇ ವರ್ಷ ಡಿಸೆಂಬರ್‌ನಲ್ಲಿ ಕ್ರಿಸ್ಮಸ್‍ಗೆ ಬಿಡುಗಡೆ ಆಗಲಿದೆ. ಹಾಲಿವುಡ್‍ನಲ್ಲಿ ಟಾಮ್ ಹ್ಯಾಂಕ್ಸ್ ಅಭಿನಯದ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ಇದಾಗಿದ್ದು, ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ.