Tag: BabyShower

  • ಯದುವಂಶದ ರಾಣಿ ತ್ರಿಷಿಕಾ ಕುಮಾರಿ ಅವರ ಸೀಮಂತವನ್ನು ಫೋಟೋಗಳಲ್ಲಿ ನೋಡಿ

    ಯದುವಂಶದ ರಾಣಿ ತ್ರಿಷಿಕಾ ಕುಮಾರಿ ಅವರ ಸೀಮಂತವನ್ನು ಫೋಟೋಗಳಲ್ಲಿ ನೋಡಿ

    ಮೈಸೂರು: ಕಳೆದ ಭಾನುವಾರ ಮೈಸೂರಿನ ಅರಮನೆಯಲ್ಲಿ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಅವರ ಸೀಮಂತ ಕಾರ್ಯ ತೀರಾ ಅಂದರೆ ತೀರಾ ಖಾಸಗಿಯಾಗಿ ನೆರವೇರಿತ್ತು. ಸೀಮಂತ ಕಾರ್ಯದ ಒಂದು ದೃಶ್ಯ ಅಥವಾ ಫೋಟೋ ಕೂಡ ಹೊರಬರದಂತೆ ಎಚ್ಚರಿಕೆ ವಹಿಸಿದ್ದರು.

    ಕಾರ್ಯಕ್ರಮ ನಡೆದ ಎರಡು ದಿನ ನಂತರ ಈ ಸೀಮಂತ ಕಾರ್ಯದ ಫೋಟೋಗಳು ಲಭ್ಯವಾಗಿವೆ. ಸೀಮಂತ ಕಾರ್ಯದಲ್ಲಿ ತ್ರಿಷಿಕಾ ಕುಮಾರಿ ಅವರಿಗೆ ಆಭರಣಗಳು, ಹಳೆ ಕಾಲದ ಚಿನ್ನದ ವೀಣೆ, ಚಿನ್ನದ ಕಾಲು, ಚಿನ್ನದ ತೊಟ್ಟಿಲು, ಚಿನ್ನದ ಬುಟ್ಟಿ ಹೀಗೆ ಅಪಾರ ಪ್ರಮಾಣದ ಚಿನ್ನಾಭರಣವನ್ನು ತ್ರಿಷಿಕಾ ಅವರ ಮುಂದೆ ಇಟ್ಟು ಸೀಮಂತ ನೇರವೇರಿಸಲಾಗಿದೆ.

    ರಾಜ ಮನೆತನದ ಸೀಮಂತ ಕಾರ್ಯ ಹೇಗಿರುತ್ತೆ ಎಂಬುದನ್ನು ಇಂದಿನ ಜನರು ನೋಡಿಲ್ಲ. ಏಕೆಂದರೆ 65-70 ವರ್ಷಗಳ ನಂತರ ಈಗ ಇಂತಹ ಸೀಮಂತ ಕಾರ್ಯ ಯದುವಂಶದಲ್ಲಿ ನಡೆದಿದೆ. ಸಾಮಾನ್ಯ ಜನ ಅಥವಾ ಸಿರಿವಂತರ ಮನೆಯ ಸೀಮಂತ ಕಾರ್ಯದಲ್ಲಿ ಹಣ್ಣು, ತಿಂಡಿ ಗಳನ್ನು ಇಡಲಾಗಿರುತ್ತೆ. ಆದರೆ ರಾಜ ಮನೆತನದಲ್ಲಿ ತಿಂಡಿ ಮತ್ತು ಹಣ್ಣುಗಳ ಜೊತೆ ಇಷ್ಟು ಪ್ರಮಾಣದ ಚಿನ್ನ, ವಜ್ರದ ವಸ್ತುಗಳನ್ನು ಇಟ್ಟಿರುವುದು ರಾಜವೈಭೋಗಕ್ಕೆ ಸಾಕ್ಷಿಯಾಗಿದೆ.