Tag: Baby

  • ತಾಯಿಯಿಂದ ಬೇರ್ಪಟ್ಟ ಮಗುವಿಗೆ ಎದೆಹಾಲು ಉಣಿಸಿದ ಮಹಿಳಾ ಪೇದೆ – ಭಾರೀ ಪ್ರಶಂಸೆ

    ತಾಯಿಯಿಂದ ಬೇರ್ಪಟ್ಟ ಮಗುವಿಗೆ ಎದೆಹಾಲು ಉಣಿಸಿದ ಮಹಿಳಾ ಪೇದೆ – ಭಾರೀ ಪ್ರಶಂಸೆ

    ತಿರುವನಂತಪುರಂ: ತಾಯಿಯಿಂದ ಬೇರ್ಪಟ್ಟಿದ್ದ ಮಗುವಿಗೆ (Infant) ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು (Police Officer) ಹಾಲುಣಿಸಿ (Breastfeed) ಮಾನವೀಯತೆ ಮೆರೆದಿರುವುದಕ್ಕೆ ಕೇರಳ ಪೊಲೀಸ್ (Kerala Police) ಮುಖ್ಯಸ್ಥ ಅನಿಲ್ ಕಾಂತ್ ಅವರು ಪೇದೆಗೆ ಸನ್ಮಾನಿಸಿದ್ದಾರೆ.

    ಕೋಝಿಕ್ಕೋಡ್ ಚೇವಾಯೂರ್ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಎಂ.ಆರ್ ರಮ್ಯಾ ಮತ್ತು ಅವರ ಕುಟುಂಬವನ್ನು ಪೊಲೀಸ್ ಪ್ರಧಾನ ಕಚೇರಿಗೆ ಆಹ್ವಾನಿಸಿ, ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.

    ವರದಿಗಳ ಪ್ರಕಾರ, ಶನಿವಾರ ಬೆಳಗ್ಗೆ ಮಗುವಿನ (Baby) ತಾಯಿ ತನ್ನ 12 ದಿನದ ಮಗು ಕಾಣೆಯಾಗಿದೆ ಎಂದು ಚೆವಾಯೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗುವನ್ನು ತಾಯಿಯಿಂದ ದೂರ ಮಾಡಿ, ತಂದೆ ಮಗುವನ್ನು ಹಿಡಿದುಕೊಂಡು ಹೋಗಿದ್ದಾನೆ. ಬಳಿಕ ಆತ ಮಗುವನ್ನು ಹಿಡಿದುಕೊಂಡು ಬೆಂಗಳೂರಿಗೆ ಕೆಲಸಕ್ಕೆ ಹೋಗಿರುವ ಮಾಹಿತಿ ಪಡೆದ ಪೊಲೀಸರು ವಯನಾಡು ಗಡಿಯಲ್ಲಿ ವಾಹನ ತಪಾಸಣೆ ನಡೆಸಿದ್ದಾರೆ. ಈ ವೇಳೆ ಆತ ಮಗುವಿನೊಂದಿಗೆ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಹೊರಗೆ ಬರದಿದ್ರೆ ಕಾಲು ಮುರಿಯುತ್ತೇವೆ- SFI ಕಾರ್ಯಕರ್ತರಿಂದ ಪ್ರಾಂಶುಪಾಲರಿಗೆ ಧಮ್ಕಿ

    ಬಳಿಕ ಪೊಲೀಸರು ಹಸಿವಿನಿಂದ ಬಳಲುತ್ತಿದ್ದ ನವಜಾತ ಶಿಶುವನ್ನು ಆಸ್ಪತ್ರೆಗೆ ಸಾಗಿಸಿದರು. ಶಿಶುವಿನ ಸಕ್ಕರೆ ಮಟ್ಟ ಕಡಿಮೆಯಾಗಿದೆ ಎಂದು ವೈದ್ಯರು ತಿಳಿಸಿದ್ದು, ಈ ವೇಳೆ ಆಸ್ಪತ್ರೆ ತಲುಪಿದ ರಮ್ಯಾ ಮಗುವಿಗೆ ಹಾಲುಣಿಸಲು ಮುಂದಾಗಿದ್ದಾರೆ. ಅದೇ ದಿನ ಸಂಜೆ ಮಗು ತಾಯಿಯ ಮಡಿಲು ಸೇರಿದೆ.

    ರಮ್ಯಾ ಅವರು ಕೋಝಿಕ್ಕೋಡ್‌ನ ಚಿಂಗಪುರಂ ಮೂಲದವರಾಗಿದ್ದು, 4 ವರ್ಷಗಳ ಹಿಂದೆ ಪೊಲೀಸ್ ಪಡೆಗೆ ಸೇರಿದ್ದಾರೆ. ಮಹಿಳಾ ಬೆಟಾಲಿಯನ್‌ನ 2ನೇ ಬ್ಯಾಚ್‌ನಲ್ಲಿ ತರಬೇತಿ ಪೂರ್ಣಗೊಳಿಸಿದ ಅವರು, ಸಶಸ್ತ್ರ ಪೊಲೀಸ್ ಬೆಟಾಲಿಯನ್‌ನ 4ನೇ ತಂಡದಲ್ಲಿ ಸೇವೆ ಸಲ್ಲಿಸಿದ್ದರು. ಹೆರಿಗೆ ರಜೆಯ ನಂತರ ಅವರು ಚೆವಾಯೂರ್ ಪೊಲೀಸ್ ಠಾಣೆಗೆ ಸೇರಿದ್ದರು. 2 ಮಕ್ಕಳ ತಾಯಿಯಾಗಿರುವ ರಮ್ಯಾ ಅವರ ಪತಿ ಅಶ್ವಂತ್ ವಿಶ್ವನ್ ಶಾಲಾ ಶಿಕ್ಷಕರಾಗಿದ್ದಾರೆ. ಇದನ್ನೂ ಓದಿ: ʼನಮ್ಮ ಮೆಟ್ರೊʼದಿಂದ ಆನ್‌ಲೈನ್‌ ಟಿಕೆಟ್‌ ಲೋಕಾರ್ಪಣೆ – ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್‌

    Live Tv
    [brid partner=56869869 player=32851 video=960834 autoplay=true]

  • ಹೆಣ್ಣು ಮಗುವಿಗೆ ಜನ್ಮ ನೀಡಿದ 7 ತಿಂಗಳಿಂದ ಕೋಮಾದಲ್ಲಿದ್ದ ಮಹಿಳೆ

    ಹೆಣ್ಣು ಮಗುವಿಗೆ ಜನ್ಮ ನೀಡಿದ 7 ತಿಂಗಳಿಂದ ಕೋಮಾದಲ್ಲಿದ್ದ ಮಹಿಳೆ

    ನವದೆಹಲಿ: 7 ತಿಂಗಳ ಹಿಂದೆ ನಡೆದ ರಸ್ತೆ ಅಪಘಾತ ವೇಳೆ ಗರ್ಭಿಣಿಯೊಬ್ಬಳ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಕೋಮಾ ಸ್ಥಿತಿಯಲ್ಲಿದ್ದ ಆಕೆ (Woman) ಆರೋಗ್ಯವಂತ ಹೆಣ್ಣು ಮಗುವಿಗೆ (Baby) ಜನ್ಮ ನೀಡಿದ್ದಾಳೆ.

    23 ವರ್ಷದ ಗರ್ಭಿಣಿಯೊಬ್ಬಳು 2022ರ ಏಪ್ರಿಲ್‍ನಲ್ಲಿ ತನ್ನ ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅಪಘಾತವಾಗಿತ್ತು. ಈ ಸಂದರ್ಭದಲ್ಲಿ ಇಬ್ಬರು ಹೆಲ್ಮೇಟ್ ಧರಿಸಿರಲಿಲ್ಲ. ಇದರಿಂದಾಗಿ ಪತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಆದರೆ ಮಹಿಳೆಗೆ ತೀವ್ರವಾಗಿ ತಲೆಗೆ ಪಟ್ಟು ಬಿದ್ದಿತ್ತು. ಇದರಿಂದಾಗಿ ಚಿಕಿತ್ಸೆಗಾಗಿ ದೆಹಲಿಯ (Delhi) ಏಮ್ಸ್ ಟ್ರಾಮಾ ಸೆಂಟರ್‌ಗೆ ಆಕೆಯನ್ನು ದಾಖಲಿಸಲಾಗಿತ್ತು.

    ಆಕೆಯ ಮೆದುಳಿಗೆ ತೀವ್ರವಾದ ಗಾಯಗಳಾಗಿತ್ತು. ಈ ವೇಳೆ ಆಕೆಯನ್ನು ತುರ್ತು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಅಷ್ಟೇ ಅಲ್ಲದೇ ಆಸ್ಪತ್ರೆಗೆ ದಾಖಲಾಗಿದ್ದ ಕಳೆದ 7 ತಿಂಗಳಲ್ಲಿ 5 ಶಸ್ತ್ರಚಿತ್ಸೆಯನ್ನು ಮಾಡಲಾಗಿತ್ತು. ಜೊತೆಗೆ ಆಕೆ ಕೋಮಾ ಸ್ಥಿತಿಯಲ್ಲಿದ್ದಳು. ಅಷ್ಟೇ ಅಲ್ಲದೇ ಕೆಲವೊಮ್ಮೆ ಕಣ್ಣುಗಳನ್ನು ತೆರೆಯುತ್ತಿದ್ದಳು. ಇದನ್ನೂ ಓದಿ: ಸಕ್ಕರೆ ರಫ್ತಿನ ಮೇಲಿನ ನಿರ್ಬಂಧ ಇನ್ನೊಂದು ವರ್ಷ ವಿಸ್ತರಣೆ

    ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ವೈದ್ಯರು ಹಾಗೂ ಕುಟುಂಬಸ್ಥರು ಮಗುವನ್ನು ತೆಗೆಯಬೇಕೋ, ಬೇಡವೋ ಎನ್ನುವುದರ ಕುರಿತು ಸಾಕಷ್ಟು ಚರ್ಚೆಯನ್ನು ನಡೆಸಿದ್ದರು. ಕೊನೆಗೂ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಮಗುವನ್ನು ಉಳಿಸಿಕೊಳ್ಳಲಾಗಿತ್ತು. ಇದೀಗ ಮಗುವಿಗೆ ಜನ್ಮ ನೀಡಿದ್ದು, ಮಗು ಆರೋಗ್ಯವಾಗಿದೆ. ಆದರೆ ಮಹಿಳೆ ಇನ್ನೂ ಕೋಮಾದಿಂದ ಹೊರಬಂದಿಲ್ಲ. ಇದನ್ನೂ ಓದಿ: ಗೂಳಿಗೆ ಡಿಕ್ಕಿ ಹೊಡೆದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಜಖಂ – ತಿಂಗಳಲ್ಲಿ 3ನೇ ದುರ್ಘಟನೆ

    Live Tv
    [brid partner=56869869 player=32851 video=960834 autoplay=true]

  • ಪುನೀತ್ ರಾಜಕುಮಾರ್ ಪುಣ್ಯಸ್ಮರಣೆಗೆ ‘ಮತ್ತೊಮ್ಮೆ ಬಾ ಮಗುವಾಗಿ ಬಾ’ ಹಾಡು ರಿಲೀಸ್

    ಪುನೀತ್ ರಾಜಕುಮಾರ್ ಪುಣ್ಯಸ್ಮರಣೆಗೆ ‘ಮತ್ತೊಮ್ಮೆ ಬಾ ಮಗುವಾಗಿ ಬಾ’ ಹಾಡು ರಿಲೀಸ್

    ಪುನೀತ್ ರಾಜ್ ಕುಮಾರ್ (Puneeth Rajkumar) ನಿಧನಾನಂತರ ಅವರ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಅಲ್ಲದೇ, ಅವರ ಅಭಿಮಾನಿಗಳು ನಾನಾ ರೀತಿಯಲ್ಲಿ ಅವರನ್ನು ಸ್ಮರಿಸುತ್ತಿದ್ದಾರೆ. ಸಿನಿಮಾ ತಂಡಗಳು ಕೂಡ ಅಪ್ಪು (Appu) ಸ್ಮರಣೆ ಮಾಡುತ್ತಿವೆ. ಅವರ ಕನಸಾಗಿದ್ದ ಗಂಧದ ಗುಡಿ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಈ ಹೊತ್ತಿನಲ್ಲಿ ಅವರಿಗಾಗಿ ಹಾಡೊಂದು ಸಿದ್ಧವಾಗಿದೆ. ಪುನೀತ್ ಅವರ ಪುಣ್ಯ ಸ್ಮರಣೆಗಾಗಿ ಈ ಹಾಡು ಸಿದ್ಧಗೊಂಡಿದೆ.

    ಜನಪದ, ಸಿನಿಮಾ‌ ಸೇರಿದಂತೆ ಸಾಕಷ್ಟು ಶೈಲಿಯ ಹಾಡುಗಳನ್ನು (Song) ಹಲವಾರು ವರ್ಷಗಳಿಂದ ಸಂಗೀತಪ್ರಿಯರಿಗೆ ನೀಡುತ್ತಾ ಬಂದಿರುವ ಖ್ಯಾತ ಜಂಕಾರ್ ಮ್ಯೂಸಿಕ್ ಸಂಸ್ಥೆ ಪುನೀತ್ ರಾಜಕುಮಾರ್ ಪ್ರಥಮ ಪುಣ್ಯಸ್ಮರಣೆಯ ನೆನಪಿಗಾಗಿ “ಮತ್ತೊಮ್ಮೆ ಬಾ ಮಗುವಾಗಿ ಬಾ” ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ:ಚೇತನ್ ಹೇಳಿಕೆ ಬಗ್ಗೆ ಏನೂ ಹೇಳಲ್ಲ: ರಿಷಬ್ ಶೆಟ್ಟಿ

    ಪುನೀತ್ ಎಸ್ ಎಸ್ ಬರೆದಿರುವ ಈ ಹಾಡನ್ನು ಅರ್ಫಜ್ ಉಲ್ಲಾಳ್ ಸುಮಧುರವಾಗಿ ಹಾಡಿದ್ದಾರೆ. ಅವರೆ ಸಂಗೀತವನ್ನು ನೀಡಿದ್ದಾರೆ. ನಗುವಿನ ರಾಜ ಕನ್ನಡದ ತೇಜ ಡಾ|| ಪುನೀತ್ ರಾಜ್‍ಕುಮಾರ್ ಅವರ ಸ್ಮರಣೆಗಾಗಿ ಎಂಬ ವಾಕ್ಯದೊಂದಿಗೆ ಈ ಹಾಡು ಬಿಡುಗಡೆಯಾಗಿದೆ. ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜ್‍ಕುಮಾರ್ ಅವರ ಮೇಲಿರುವ ಅಪಾರ ಅಭಿಮಾನ ಈ ಹಾಡಿನಲ್ಲಿ ಎದ್ದು ಕಾಣುತ್ತಿದೆ. ಬಿಡುಗಡೆಯಾದ ಕ್ಷಣದಿಂದಲೇ ಈ ಹಾಡಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನದ ಮಗುವಿಗೆ ಮರುಜೀವ ಕೊಟ್ಟ ಬೆಂಗಳೂರಿನ ವೈದ್ಯರು

    ಪಾಕಿಸ್ತಾನದ ಮಗುವಿಗೆ ಮರುಜೀವ ಕೊಟ್ಟ ಬೆಂಗಳೂರಿನ ವೈದ್ಯರು

    ಬೆಂಗಳೂರು: ಪಾಕಿಸ್ತಾನದ ಮಗುವಿಗೆ (Baby) ಬೆಂಗಳೂರಿನ (Bengaluru) ನಾರಾಯಣ ಹೆಲ್ತ್ ಸಿಟಿ ವೈದ್ಯರು (Doctor) ಮರುಜೀವವನ್ನು ನೀಡುವ ಮೂಲಕ ಆತಂಕದಲ್ಲಿದ್ದ ತಾಯಿಯ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡಿದ್ದಾರೆ.

    ಪಾಕಿಸ್ತಾನದ (Pakistan) ಮಗು ಅಮೈರಾ(2)ಗೆ ಎಂಪಿಎಸ್ ಎನ್ನುವ ವಿಚಿತ್ರ ಕಾಯಿಲೆ ಕಾಡಿತ್ತು. ಕಣ್ಣು ಮೆದುಳು ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಇದ್ರಿಂದ ಪರಿಣಾಮ ಬೀರುತ್ತಿದೆ. ಅಮೈರಾ ತಂದೆ, ತಾಯಿ ಪಾಕಿಸ್ತಾನ ಸೇರಿದಂತೆ ಭಾರತದ ಬೇರೆ ಭಾಗದ ಆಸ್ಪತ್ರೆ ಸಂಪರ್ಕಿಸಿದ್ದಾರೆ. ಆದರೆ, ಮಗುವಿನ ಜೀವಕ್ಕೆ ಎಲ್ಲೂ ಗ್ಯಾರಂಟಿ ಕೊಟ್ಟಿಲ್ಲ. ಕೊನೆಗೆ ಬೆಂಗಳೂರು ನಾರಾಯಣ ಹೆಲ್ತ್ ಸಿಟಿಯಲ್ಲಿ ಅಮೈರಾಗೆ ಆಕೆಯ ತಂದೆಯಿಂದ ಮೂಳೆ ಮಜ್ಜೆ ಕಸಿಯ ಮೂಲಕ ಟ್ರೀಟ್‍ಮೆಂಟ್ ಕೊಡಲಾಗಿದ್ದು, ಅಮೈರಾ ಚೇತರಿಸಿಕೊಂಡಿದ್ದಾಳೆ. ತನ್ನ ಮಗಳ ಬದುಕಿಗೆ ಹೊಸ ಜೀವ ಕೊಟ್ಟ ವೈದ್ಯರಿಗೆ ಅಮೈರಾ ತಾಯಿ ಧನ್ಯವಾದ ಹೇಳಿದರು. ಇದನ್ನೂ ಓದಿ: ವಾಹನ ಸವಾರರೇ ಎಚ್ಚರ – ಸೀಟ್ ಬೆಲ್ಟ್ ಧರಿಸದಿದ್ರೆ ಇನ್ಮುಂದೆ ದುಪ್ಪಟ್ಟು ದಂಡ

    ವೈದ್ಯರು ಕೂಡ ಅಮೈರಾ ಚೇತರಿಕೆಯ ಬಗ್ಗೆ ಖುಷಿಯಾಗಿದ್ದಾರೆ. ಈ ಬಗ್ಗೆ ಡಾ. ದೇವಿಶೆಟ್ಟಿ ಮಾತನಾಡಿ, ಪಾಕಿಸ್ತಾನದ ಅನೇಕ ರೋಗಿಗಳು ಉತ್ತಮ ಚಿಕಿತ್ಸೆಗಾಗಿ ಭಾರತಕ್ಕೆ ಅದ್ರಲ್ಲೂ ಬೆಂಗಳೂರಿಗೆ ಬರುತ್ತಿದ್ದಾರೆ ಎಂದ ಅವರು, ಪಾಕಿಸ್ತಾನದಲ್ಲಿ ಕೆಲ ವೈದ್ಯರು ಭಾರತದಲ್ಲಿ ನುರಿತ ವೈದ್ಯರಿಂದ ಟ್ರೈನಿಂಗ್ ಕೂಡ ಪಡೆದುಕೊಳ್ಳುತ್ತಿದ್ದಾರೆ. ಹೆಚ್ಚು ವೈದ್ಯರು ತೊಡಗಿಕೊಂಡು ನಾವು ಪಾಕಿಸ್ತಾನದ ವೈದ್ಯರಿಗೆ ಟ್ರೈನಿಂಗ್ ನೀಡಲು ಸಿದ್ಧ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಎಲ್ಲೆಲ್ಲಿ ಏನಾಗಿದೆ? ಅತಿ ಹೆಚ್ಚು ಮಳೆ ಎಲ್ಲಿಯಾಗಿದೆ?

    Live Tv
    [brid partner=56869869 player=32851 video=960834 autoplay=true]

  • ಬಸ್ ನಿಲ್ದಾಣದ ಶೌಚಾಲಯದಲ್ಲಿ ನವಜಾತ ಶಿಶು ಪತ್ತೆ

    ಬಸ್ ನಿಲ್ದಾಣದ ಶೌಚಾಲಯದಲ್ಲಿ ನವಜಾತ ಶಿಶು ಪತ್ತೆ

    ಚಂಡೀಗಢ: ಬಸ್ ನಿಲ್ದಾಣದ (Bus Stand) ಶೌಚಾಲಯದಲ್ಲಿ ನವಜಾತ ಗಂಡು ಶಿಶುವನ್ನು (Baby) ಬಿಟ್ಟು ಹೋಗಿರುವ ಘಟನೆ ಹರಿಯಾಣದ (Haryana) ಅಂಬಾಲಾ ಕ್ಯಾಂಟ್‍ನಲ್ಲಿ ನಡೆದಿದೆ.

    ಬಿಹಾರದ ನಿವಾಸಿ ಮಹಿಳೆಯೊಬ್ಬರು ಶೌಚಾಲಯಕ್ಕೆ (Toilet) ಹೋಗಿದ್ದರು. ಆ ವೇಳೆ ಮಗುವನ್ನು ಟವೆಲ್‍ನಲ್ಲಿ ಸುತ್ತಿ ನೆಲದ ಮೇಲೆ ಮಲಗಿಸಿರುವುದನ್ನು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಮಹಿಳೆಯು ಬಸ್ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಿದ್ದು, ಮಗು ಜಾಂಡೀಸ್‍ನಿಂದ ಬಳಲುತ್ತಿದ್ದು, ಇದು ನಾಲ್ಕೈದು ದಿನದ ಶಿಶುವಾಗಿದೆ ಎಂದು ಅಂದಾಜಿಸಿದ್ದಾರೆ. ಇದನ್ನೂ ಓದಿ: ದೀಪಾವಳಿಯಲ್ಲಿ ನಿಷೇಧಿತ ಪಟಾಕಿ ಸಿಡಿಸಿದ್ರೆ 6 ತಿಂಗಳು ಜೈಲು ಶಿಕ್ಷೆ

    ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುವುದು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ರಾಮ್‍ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಸೇ ಸಿಎಂ ಅಭಿಯಾನ ಉದ್ಯೋಗವಿಲ್ಲದವರು ಮಾಡುತ್ತಿದ್ದಾರೆ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

  • ಚಲಿಸುತ್ತಿದ್ದ ಬಸ್‍ನಿಂದ ರಸ್ತೆ ಮೇಲೆ ಬಿದ್ದ ತಾಯಿ, ಮಗು – ಭಯಾನಕ ವೀಡಿಯೋ ವೈರಲ್

    ಚಲಿಸುತ್ತಿದ್ದ ಬಸ್‍ನಿಂದ ರಸ್ತೆ ಮೇಲೆ ಬಿದ್ದ ತಾಯಿ, ಮಗು – ಭಯಾನಕ ವೀಡಿಯೋ ವೈರಲ್

    ಚೆನ್ನೈ: ಚಲಿಸುತ್ತಿದ್ದ ಖಾಸಗಿ ಬಸ್‍ನಿಂದ ಮಹಿಳೆ ಮತ್ತು ಮಗು ರಸ್ತೆ ಮೇಲೆ ಬಿದ್ದು, ಸಾವಿನದವಡೆಯಿಂದ ಪಾರಾದ ಮೈ ಜುಮ್ ಎನಿಸುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ತಮಿಳುನಾಡಿನ (Tamil Nadu) ಕಡಲೂರು ಜಿಲ್ಲೆಯ (Cuddalore District) ಜನನಿಬಿಡ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೇವಲ ಒಂದು ನಿಮಿಷವಿರುವ ಈ ವೀಡಿಯೋದಲ್ಲಿ ಮಗುವನ್ನು ಹೊತ್ತೊಯ್ಯುತ್ತಿದ್ದ ಮಹಿಳೆ ಬಸ್‍ನಿಂದ ಏಕಾಏಕಿ ಕೆಳಗೆ ಬಿದ್ದಿದ್ದಾರೆ. ಆದರೆ ಈ ವೇಳೆ ಬಸ್ ಅನ್ನು ತಕ್ಷಣವೇ ನಿಲ್ಲಿಸಿದ್ದರಿಂದ ಪವಾಡ ಸದೃಶವಾಗಿ ತಾಯಿ, ಮಗು ಇಬ್ಬರು ಬಚಾವ್ ಆಗಿದ್ದಾರೆ. ಈ ವೇಳೆ ತಕ್ಷಣ ಸ್ಥಳಕ್ಕೆ ಧಾವಿಸಿದ ಜನರು ಮಹಿಳೆಗೆ ಏನಾದರೂ ಸಹಾಯ ಬೇಕಾ ಎಂದು ಕೇಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಕಡಲೂರಿನಿಂದ ಪನ್ರುತಿ ಮತ್ತು ವಿಲ್ಲುಪುರಂಗೆ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸರ್ಕಾರಿ ಮತ್ತು ಖಾಸಗಿ ಬಸ್‍ಗಳಲ್ಲಿ ಪ್ರಯಾಣಿಸುತ್ತಿರುತ್ತಾರೆ. ಪನ್ರುತಿಯಿಂದ ಕಡಲೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ನೆಲ್ಲಿಕುಪ್ಪಂ ಬಳಿ ಅತಿವೇಗವಾಗಿ ಬಂದು ಏಕಾಏಕಿ ಬ್ರೇಕ್ ಹಾಕಿದೆ. ಈ ವೇಳೆ ಬಸ್ಸಿನೊಳಗೆ ಮೆಟ್ಟಿಲುಗಳ ಬಳಿ ಮಗುವನ್ನು ಹಿಡಿದುಕೊಂಡು ಕುಳಿತಿದ್ದ ಮಹಿಳೆ ಮಗುವಿನೊಂದಿಗೆ ಮೆಟ್ಟಿಲುಗಳಿಂದ ಕೆಳಗೆ ಬಿದ್ದಿದ್ದಾರೆ. ಇದನ್ನೂ ಓದಿ: ನೀವು ಒಬ್ಬರನ್ನ ಮದ್ವೆಯಾಗಿ ಮೂವರನ್ನ ಇಟ್ಟುಕೊಳ್ತೀರಾ – ಹಿಂದೂಗಳ ಟೀಕಿಸಿದ್ದ ಶೌಕತ್ ಅಲಿ ವಿರುದ್ಧ ಕೇಸ್

    ಇದೀಗ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಘಟನೆ ಸಂಬಂಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇದುವರೆಗೆ ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಇದನ್ನೂ ಓದಿ: 10ರ ಬಾಲಕಿಯನ್ನು ರೇಪ್ ಮಾಡಿ ಕೊಲೆ ಮಾಡಿದ್ದ ವ್ಯಕ್ತಿಗೆ ಮರಣದಂಡನೆ

    Live Tv
    [brid partner=56869869 player=32851 video=960834 autoplay=true]

  • ಆಟವಾಡ್ತಿದ್ದಾಗ ಬಾಲಕಿ ಮೇಲೆ ಹರಿದ ಕಾರು- ತಾಯಿ ಕೈಯಿಂದ್ಲೇ ಮಗಳ ಪ್ರಾಣ ಹೋಯ್ತು!

    ಆಟವಾಡ್ತಿದ್ದಾಗ ಬಾಲಕಿ ಮೇಲೆ ಹರಿದ ಕಾರು- ತಾಯಿ ಕೈಯಿಂದ್ಲೇ ಮಗಳ ಪ್ರಾಣ ಹೋಯ್ತು!

    ತಿರುವನಂತಪುರಂ: ಆಟವಾಡುತ್ತಿದ್ದ ಸಂದರ್ಭದಲ್ಲಿ ತಾಯಿ (Mother) ಚಲಾಯಿಸುತ್ತಿದ್ದ ಕಾರು ಮಗಳ ಮೇಲೆ ಹರಿದ ಪರಿಣಾಮ ಬಾಲಕಿ ದುರ್ಮರಣಕ್ಕೀಡಾದ ಘಟನೆ ಕೇರಳದ ಕೋಯಿಕ್ಕೋಡ್‌ನ ಕೊಡುವಳ್ಳಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕಿಯನ್ನು ಮರಿಯಾಮ್ ನಜೀರ್ (3) ಎಂದು ಗುರುತಿಸಲಾಗಿದೆ. ಈ ಘಟನೆ ಇಂದು ಬೆಳಗ್ಗೆ ನಡೆದಿದೆ.

    ವರದಿಗಳ ಪ್ರಕಾರ, ಮಗು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಳು. ಇತ್ತ ತಾಯಿ ಕಾರು (Car) ಚಲಾಯಿಸುತ್ತಿದ್ದರು. ಆದರೆ ಈ ವೇಳೆ ಅವರು ಏಕಾಏಕಿ ಕಾರಿನ ನಿಯಂತ್ರಣ ಕಳೆದುಕೊಂಡರು. ಪರಿಣಾಮ ಕಾರು, ಆಟವಾಡುತ್ತಿದ್ದ ಮಗಳ ಮೇಲೆಯೇ ಹರಿದಿದೆ.

    ಕಾರು ಹರಿದಿದ್ದರಿಂದ ಗಂಭೀರ ಗಾಯಗೊಂಡ ಬಾಲಕಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಇದನ್ನೂ ಓದಿ: ಮಗಳು ಬೆಡ್‍ಶೀಟ್ ತರಲು ನಿರಾಕರಿಸಿದ ಕೋಪಕ್ಕೆ ಪತ್ನಿಯನ್ನೇ ಕೊಂದ ಭೂಪ!

    ಬಳಿಕ ಬಾಲಕಿಯ ಮೃತದೇಹವನ್ನು ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.

    Live Tv
    [brid partner=56869869 player=32851 video=960834 autoplay=true]

  • ಚೇರ್‌ ಕೈಯಲ್ಲಿ ಸಿಲುಕಿಕೊಂಡ ಮಗುವಿನ ತಲೆ – ಆಮೇಲೆ ಏನಾಯ್ತು ಈ ಸ್ಟೋರಿ ಓದಿ

    ಚೇರ್‌ ಕೈಯಲ್ಲಿ ಸಿಲುಕಿಕೊಂಡ ಮಗುವಿನ ತಲೆ – ಆಮೇಲೆ ಏನಾಯ್ತು ಈ ಸ್ಟೋರಿ ಓದಿ

    ಕ್ಕಳು ಅಟವಾಡುತ್ತ ಕೆಲ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಇಲ್ಲೊಂದು ಮಗು (Baby) ಕೂಡ ಇದೇ ರೀತಿ ಮಾಡಿದೆ. ತನ್ನ ತಲೆಯನ್ನು ಚೇರ್‌ (Chair) ಕೈಗಳಿಗೆ ಹಾಕಿ ತಲೆ ತೆಗೆಯಲಾರದೆ ಪೋಷಕರಿಗೆ ಭಯ ಹುಟ್ಟಿಸಿದೆ.

    ಮಗುವಿನ ತಲೆ ಚೇರ್ ಕೈಯಲ್ಲಿ ಸಿಲುಕಿಕೊಂಡು ಅದನ್ನು ಹೊರತೆಗೆಯಲು ಪೋಷಕರು ಪ್ರಯತ್ನಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ವೀಡಿಯೋದಲ್ಲಿ ಮಗು ತಲೆಯನ್ನು ಚಯರ್‌ನ ಕೈಗಳಿಗೆ ಹಾಕಿದೆ. ಆ ಬಳಿಕ ಹೊರ ತೆಗೆಯಲಾಗದೆ ಒದ್ದಾಡಿದೆ.

    ಇತ್ತ ಮಗುವಿನ ತಲೆ ಚೇರ್ ಕೈನಲ್ಲಿ ಸಿಲುಕಿಕೊಂಡಂತೆ ಪೋಷಕರು ಹೇಗಪ್ಪ ತೆಗೆಯೋದು ಎಂದು ಹಲವು ಪ್ರಯತ್ನ ನಡೆಸಿದರು. ಆದರೆ ಆಪ್ರಯತ್ನವೆಲ್ಲ ವಿಫಲಗೊಂಡಿತು. ಕಡೆಗೆ ಮಗು ಯಾವ ರೀತಿ ತಲೆಯನ್ನು ಹಾಕದೆ ಅದೇ ಪೂರ್ತಿ ದೇಹವನ್ನು ನುಗ್ಗಿಸಿ ಮಗುವನ್ನು ಹೊರತೆಗೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೂರು ದಿನದ ಮಗುವಿನ ಹೃದಯದಲ್ಲಿ ರಂಧ್ರ – ಅಂಬುಲೆನ್ಸ್‌ಗೂ ಹಣ ಇಲ್ಲದೆ ಪರದಾಡಿದ ದಂಪತಿ

    ಮೂರು ದಿನದ ಮಗುವಿನ ಹೃದಯದಲ್ಲಿ ರಂಧ್ರ – ಅಂಬುಲೆನ್ಸ್‌ಗೂ ಹಣ ಇಲ್ಲದೆ ಪರದಾಡಿದ ದಂಪತಿ

    ಕಲಬುರಗಿ: ಮೂರು ದಿನದ ಹಿಂದೆ ಜನಿಸಿದ ಮಗುವಿನ (Baby) ಹೃದಯದಲ್ಲಿ (Heart) ರಂಧ್ರ ಕಾಣಿಸಿಕೊಂಡ ಪರಿಣಾಮ ಮಗು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದು, ಮಗುವಿನ ಚಿಕಿತ್ಸೆಗಾಗಿ ದಂಪತಿ ಪರದಾಡುತ್ತಿರುವ ಘಟನೆ ಜಿಲ್ಲೆಯಲ್ಲಿ ಕಂಡುಬಂದಿದೆ.

    ಚಿತ್ತಾಪುರ ತಾಲೂಕಿನ ರಾಂಪೂರಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಮತ್ತು ಗಂಗಮ್ಮ ದಂಪತಿಯ 3 ದಿನದ ಗಂಡು ಮಗುವಿಗೆ ಹೃದಯದಲ್ಲಿ ರಂಧ್ರ ಇರುವ ಬಗ್ಗೆ ಕಲಬುರಗಿ ಜಿಲ್ಲಾಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಚಿಕಿತ್ಸೆಗಾಗಿ ಬೆಂಗಳೂರಿಗೆ ಮಗುವನ್ನು ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ‘ಸೀರೆ ಬಿಚ್ಚಿ ಹೊಡಿತೀನಿ’ ಎಂದು ಮಹಿಳೆಗೆ ಅವಾಜ್: ಸೌಂದರ್ಯ ಜಗದೀಶ್ ಪುತ್ರ, ನಟ ಸ್ನೇಹಿತ್ ಮೇಲೆ ಕೇಸ್

    ಆದರೆ ಮಗುವನ್ನು ಸರ್ಕಾರಿ ಆಸ್ಪತ್ರೆಯಿಂದ ಬೆಂಗಳೂರಿಗೆ ಕರೆದೊಯ್ಯಲು ಅಂಬುಲೆನ್ಸ್ ಸೇವೆ ನಿರಾಕರಿಸುತ್ತಿದ್ದಾರೆ. ಖಾಸಗಿ ಅಂಬುಲೆನ್ಸ್‌ನಲ್ಲಿ ಕರೆದ್ಯೊಯಲು 25 ಸಾವಿರ ರೂ. ಬೇಕು ನಮ್ಮ ಬಳಿ ಅಷ್ಟೊಂದು ಹಣ ಇಲ್ಲ ಎಂದು ಬಡ ದಂಪತಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಕಾಬೂಲ್‌ ಶಿಕ್ಷಣ ಕೇಂದ್ರದಲ್ಲಿ ಬಾಂಬ್‌ ಸ್ಫೋಟ – 19 ಮಂದಿ ದುರ್ಮರಣ

    Live Tv
    [brid partner=56869869 player=32851 video=960834 autoplay=true]

  • ವಿಪರೀತ ಟ್ರಾಫಿಕ್ ಜಾಮ್ – ಅಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮಕೊಟ್ಟ ಮಹಿಳೆ

    ವಿಪರೀತ ಟ್ರಾಫಿಕ್ ಜಾಮ್ – ಅಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮಕೊಟ್ಟ ಮಹಿಳೆ

    ಶ್ರೀನಗರ: ಜಮ್ಮುವಿನ (Jammu) ಶ್ರೀನಗರ ಹೆದ್ದಾರಿಯಲ್ಲಿ (Srinagar National Highway) ಗುಡ್ಡದ ಮೇಲಿನ ದೊಡ್ಡ ಕಲ್ಲುಗಳು ರಸ್ತೆ ಮೇಲೆ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಈ ಮಧ್ಯೆ 22 ವರ್ಷದ ಗರ್ಭಿಣಿ ಮಹಿಳೆಯೊಬ್ಬರು (Women) ಅಂಬುಲೆನ್ಸ್‌ನಲ್ಲಿಯೇ (Ambulance) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಗೂಲ್‍ನಲ್ಲಿರುವ (Gool) ಧರಮ್-ಸಂಗಲ್ದನ್ (Dharam-Sangaldan) ನಿವಾಸಿ ಶಹೀನಾ, ರಾಂಬನ್‍ನಲ್ಲಿರುವ (Ramban district) ಜಿಲ್ಲಾ ಆಸ್ಪತ್ರೆಗೆ ತೆರಳುವಾಗ ಮಾರ್ಗ ಮಧ್ಯೆ ಟ್ರಾಫಿಕ್ ಜಾಮ್‍ನಲ್ಲಿ (Traffic jam) ಸಿಲುಕಿಕೊಂಡಿದ್ದರು. ಈ ವೇಳೆ ತೀವ್ರ ಹೆರಿಗೆ ನೋವಿನಿಂದ ಅಂಬುಲೆನ್ಸ್ ಸಹಾಯಕ ಸಿಬ್ಬಂದಿ ಸಹಾಯದಿಂದ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಇದನ್ನೂ ಓದಿ: ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ‘ಚಕ್ಡಾ ಎಕ್ಸ್ ಪ್ರೆಸ್’ ಜೂಲನ್ ಗೋಸ್ವಾಮಿಗೆ ಗೆಲುವಿನ ವಿದಾಯ

    ಹೆದ್ದಾರಿಯ ಮೇಲಿರುವ ಗುಡ್ಡದ ಮೇಲಿದ್ದ ಕಲ್ಲುಗಳು ರಸ್ತೆ ಮೇಲೆ ಜಾರಿ ಬಿದ್ದಿದ್ದರಿಂದ ಬೆಳಗ್ಗೆಯಿಂದಲೇ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಲ್ಲು ಮೇಲಿನಿಂದ ಕೆಳಗುರುಳಿದ್ದರಿಂದ ಈ ವೇಳೆ ಅನೇಕ ವಾಹನಗಳಿಗೆ ಹಾನಿ ಕೂಡ ಆಗಿದೆ. ಆದರೆ ಯಾರಿಗೂ ಗಾಯಗಳಾಗಿಲ್ಲ ಹಾಗೂ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಹುಡುಗಿಯನ್ನು ದಪ್ಪ, ಪುಷ್ಠಿಯಾಗಿ ಕಾಣುವಂತೆ ಮಾಡಿ ಮದುವೆ ಫಿಕ್ಸ್ ಮಾಡು – ದೇವರಿಗೆ ಪತ್ರ ಬರೆದ ಭಕ್ತ

    ಘಟನೆ ಸಂಬಂಧ ಪ್ರತಿಕ್ರಿಯಿಸಿದ ಶಾಹೀನಾ ತಂದೆ ಮೊಹಮ್ಮದ್ ಯೂಸುಫ್ ಅವರು, ನಾವು ರಾಂಬನ್‍ನಿಂದ ಸುಮಾರು 35 ಕಿಮೀ ದೂರದಲ್ಲಿರುವ ಗೂಲ್‍ನಿಂದ ಕರೋಲ್‍ಗೆ ತಲುಪಿದಾಗ ಬಹಳ ಟ್ರಾಫಿಕ್ ಇತ್ತು. ಆದರೆ ಸೇನಾ ಸಿಬ್ಬಂದಿ ಅಂಬುಲೆನ್ಸ್‌ ತೆರಳಲು ದಾರಿ ಮಾಡಿಕೊಟ್ಟರು. ಹೀಗಿದ್ದರೂ ಗುಡ್ಡದ ಮೇಲಿದ್ದ ಕಲ್ಲುಗಳು ಮೆಹರ್ ಬಳಿ ರಸ್ತೆಯಲ್ಲಿ ಬಿದ್ದಿದ್ದರಿಂದ ಆಸ್ಪತ್ರೆಗೆ ತೆರಳಲು ಸಾಧ್ಯವಾಗಲಿಲ್ಲ. ಕೊನೆಗೆ ಮಾರ್ಗ ಮಧ್ಯೆ ಅಂಬುಲೆನ್ಸ್‌ನಲ್ಲಿಯೇ ನನ್ನ ಮಗಳು ಮಗುವಿಗೆ ಜನ್ಮ ನೀಡಿದಳು. ಹೆರಿಗೆ ಬಳಿಕ ಶಹೀನಾ ಮತ್ತು ಆಕೆಯ ನವಜಾತ ಶಿಶು ಇಬ್ಬರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದ ವೈದ್ಯಕೀಯ ಸಿಬ್ಬಂದಿ, ಸೇನಾ ಸಿಬ್ಬಂದಿ, ಪೊಲೀಸರು ಮತ್ತು ನಾಗರಿಕ ಸ್ವಯಂಸೇವಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಸದ್ಯ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಶಹೀನಾ ಅವರೊಂದಿಗೆ ಬಂದ ನರ್ಸಿಂಗ್ ಸಿಬ್ಬಂದಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]