Tag: Baby

  • ಒಂದೇ ದಿನ ಒಂದೇ ಅಂಬುಲೆನ್ಸ್‌ನಲ್ಲಿ ಪ್ರತ್ಯೇಕ 2 ಹೆರಿಗೆ

    ಒಂದೇ ದಿನ ಒಂದೇ ಅಂಬುಲೆನ್ಸ್‌ನಲ್ಲಿ ಪ್ರತ್ಯೇಕ 2 ಹೆರಿಗೆ

    ರಾಯಚೂರು: ಒಂದೇ ದಿನ ಒಂದೇ 108 ಅಂಬುಲೆನ್ಸ್‌ನಲ್ಲಿ (Ambulance) ಪ್ರತ್ಯೇಕ ಸಮಯದಲ್ಲಿ ಎರಡು ಹೆರಿಗೆಗಳಾದ ಘಟನೆ ರಾಯಚೂರು (Raichur) ಜಿಲ್ಲೆಯಲ್ಲಿ ನಡೆದಿದೆ.

    ಸಿರವಾರ ತಾಲೂಕಿನ ಕುರುಕುಂದ ಹಾಗೂ ದೇವದುರ್ಗ ತಾಲೂಕಿನ ಜಂಬಲದಿನ್ನಿ ಗ್ರಾಮದ ಗರ್ಭಿಣಿಯರಿಗೆ ಆಸ್ಪತ್ರೆಗೆ (Hospital) ತೆರಳುವಾಗ ಅಂಬುಲೆನ್ಸ್‌ನಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು 108 ಸಿಬ್ಬಂದಿಯೇ ಹೆರಿಗೆ ಮಾಡಿಸಿದ್ದಾರೆ. ಪದೇ ಪದೇ ಯೋಗಿ ವಿರುದ್ಧ ಕೇಸ್ ಹಾಕುತ್ತಿದ್ದ ವ್ಯಕ್ತಿಗೆ 1 ಲಕ್ಷ ರೂ. ದಂಡ

    ಹೆರಿಗೆ ಬಳಿಕ ತಾಯಿ, ಮಗು ಸುರಕ್ಷಿತವಾಗಿದ್ದಾರೆ. ಸಿರವಾರ ತಾಲೂಕಿನ ಕುರುಕುಂದ ಗ್ರಾಮದ ನಿವಾಸಿ ಅನೀಫ್ ಬೇಗಂಗೆ ಗಂಡು ಮಗುವಾಗಿದೆ. ಜಂಬಲದಿನ್ನಿ ಗ್ರಾಮದ ಸಂಗೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 108 ಸಿಬ್ಬಂದಿ ಶುಶ್ರೂಷಕಿ ಲಕ್ಷ್ಮೀ,‌ ಚಾಲಕ ಯಾಸಿನ್‌ಗೆ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಎಂಟತ್ತು ದಿನಗಳಲ್ಲಿ ಈ ಎರಡು ಹೆರಿಗೆಗಳು ಸೇರಿ ಒಟ್ಟು 5 ಹೆರಿಗೆಗಳು ಅಂಬುಲೆನ್ಸ್‌ನಲ್ಲೇ ಆಗಿವೆ. ಮಲಮಿಶ್ರಿತ ನೀರು ಕುಡಿದು ಮೂವರು ದುರ್ಮರಣ- ನೀರಿನ ಪರೀಕ್ಷೆಯಲ್ಲಿ ಬಹಿರಂಗವಾಯ್ತು ಸತ್ಯ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಸದ‌ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ

    ಕಸದ‌ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್‌ ಪಟ್ಟಣದಲ್ಲಿ ನವಜಾತ ಗಂಡು ಶಿಶುವಿನ ಮೃತದೇಹ ಪತ್ತೆಯಾಗಿದೆ. ಪಟ್ಟಣದ ಮೇಗಳಪೇಟೆ ನಿರ್ಜನ ಪ್ರದೇಶದ ಕಸದ ರಾಶಿಯಲ್ಲಿ ನವಜಾತ ಗಂಡು ಶಿಶು ಕಳೆಬರ ಸಿಕ್ಕಿದೆ.

    ಕಸದ‌ ರಾಶಿಯಲ್ಲಿ (Garbage) ಶಿಶುವನ್ನು (Baby) ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದು, ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕರಳುಬಳ್ಳಿ ಸಹಿತ ಶಿಶುವನ್ನು ತಿಪ್ಪೆಯಲ್ಲಿ ಎಸೆಯಲಾಗಿದ್ದು, ಮಗು ಜನಿಸಿದ ಬಳಿಕ ಸಾವನ್ನಪ್ಪಿತ್ತಾ ಅಥವಾ ಜೀವಂತ ಶಿಶುವನ್ನೇ ಬಿಟ್ಟು ಹೋಗಿದ್ದರಾ ಅನ್ನೋ ಬಗ್ಗೆ ಮಾಹಿತಿಯಿಲ್ಲ. ತಿಪ್ಪೆಯಲ್ಲಿ ಬಿದ್ದಿದ್ದರಿಂದ ನಾಯಿಗಳು ಶಿಶುವಿನ ಕಾಲನ್ನು ಕಚ್ಚಿ ಗಾಯಗೊಳಿಸಿವೆ. ಇದನ್ನೂ ಓದಿ: ಎಚ್‌ಡಿಕೆ ಹೇಳಿಕೆ ಬೆನ್ನಲ್ಲೇ ಶೃಂಗೇರಿಗೆ ಭೇಟಿ ನೀಡಲಿದ್ದಾರೆ ನಡ್ಡಾ

    ಆಸ್ಪತ್ರೆಯಲ್ಲಿ (Hospital) ಜನಿಸಿದ್ದ ಮಗುವನ್ನು ಬೀಸಾಡಿರಬಹುದಾ ಅಂತ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಶುವನ್ನು ಬೀಸಾಡಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ನನ್ನ ಹತ್ಯೆಗೆ ಸುಪಾರಿ ನೀಡಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ: ಸತೀಶ್ ರೆಡ್ಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಂಡ್ಯದಲ್ಲಿ ಮಗು ಅಪಹರಣಕ್ಕೆ ಮುಸುಕುದಾರಿಗಳು ಯತ್ನ

    ಮಂಡ್ಯದಲ್ಲಿ ಮಗು ಅಪಹರಣಕ್ಕೆ ಮುಸುಕುದಾರಿಗಳು ಯತ್ನ

    ಮಂಡ್ಯ: ಸಕ್ಕರೆ ನಾಡಿನಲ್ಲಿ ಮತ್ತೆ ಮಕ್ಕಳ ಕಳ್ಳರ ಆತಂಕ ಶುರುವಾಗಿದ್ದು, ಮನೆಯ ಮುಂದೆ ಇದ್ದ ಐದು ವರ್ಷದ ಮಗುವನ್ನು ಇಬ್ಬರು ಮುಸುಕುದಾರಿಗಳು ಅಪಹರಣ (Baby Kidnap) ಮಾಡಲು ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಜರುಗಿದೆ.

    ಕಿರುಗಾವಲು ಗ್ರಾಮದ 5 ವರ್ಷದ ಮಗು ಕಳ್ಳತನಕ್ಕೆ ಇಬ್ಬರು ಮುಸುಕುದಾರಿಗಳು ಬಂದಿದ್ದು, ಕಳ್ಳರನ್ನು ಕಂಡು ಮಗು ಕಿರುಚಿದ್ದು, ಮಗುವಿನ ಶಬ್ದ ಕೇಳಿ ಮುಸುಕುದಾರಿಗಳು ಪರಾರಿಯಾಗಿದ್ದಾರೆ. ಸೋಮವಾರ ಮಧ್ಯಾಹ್ನ ಪೌಡರ್ ಮಾರಾಟಕ್ಕೆ ಇಬ್ಬರು ಕಿರುಗಾವಲು ಗ್ರಾಮಕ್ಕೆ ಬಂದಿದ್ದು, ಈ ವೇಳೆ ಮಹಿಳೆಯರನ್ನು ಪೌಡರ್ ತೆಗೆದುಕೊಳ್ಳುತ್ತೀರಾ ಎಂದು ಕೇಳಿದ್ದಾರೆ. ಮಹಿಳೆಯರು ನಮಗೆ ಯಾವ ಪೌಡರ್ ಬೇಡಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹರತಾಳು ಹಾಲಪ್ಪ ಬೀಗರ ಕಾರಿಗೆ ಇಬ್ಬರು ಬಲಿ- ನಾಲ್ವರಿಗೆ ಗಾಯ, ಚಾಲಕ ವಶಕ್ಕೆ

    ಮತ್ತೆ ಸಂಜೆಯ ವೇಳೆ ಅದೇ ಬೀದಿಯಲ್ಲಿ ಬೈಕ್‍ನಲ್ಲಿ ಇಬ್ಬರು ಓಡಾಡಿದ್ದಾರೆ. ಬಳಿಕ ರಾತ್ರಿ 8 ಗಂಟೆಯ ಸುಮಾರಿಗೆ ಸ್ಪ್ಲೆಂಡರ್ ಬೈಕ್‍ನಲ್ಲಿ ಬಂದ ಇಬ್ಬರು ಮುಸುಕುದಾರಿಗಳು ಮನೆಯ ಮುಂದೆ ಇದ್ದ ಮಗು ಅಪಹರಣಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮಗು ಮುಸುಕುದಾರಿಗಳನ್ನು ಕಂಡು ಕಿರುಚಿದ್ದು ಮಗುವಿನ ಶಬ್ದ ಕೇಳಿ ಮುಸುಕುದಾರಿಗಳು ಪರಾರಿಯಾಗಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಮಗುವಿನ ಪೋಷಕರು ಮಗುವನ್ನು ಸಮಾಧಾನ ಪಡಿಸಿದ್ದಾರೆ. ಮಗು ಅಪಹರಣಕ್ಕೆ ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಪೋಷಕರು ಕಿರುಗಾವಲು ಪೊಲೀಸ್ ಠಾಣೆ (Kirugavalu Police Station) ಗೆ ದೂರನ್ನು ಸಹ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನ್ಯುಮೋನಿಯಾ ಚಿಕಿತ್ಸೆ ಎಂದು 3 ತಿಂಗಳ ಮಗುವಿನ ಹೊಟ್ಟೆಗೆ 51 ಬಾರಿ ಕಾದ ರಾಡ್ ಇಟ್ರು!

    ನ್ಯುಮೋನಿಯಾ ಚಿಕಿತ್ಸೆ ಎಂದು 3 ತಿಂಗಳ ಮಗುವಿನ ಹೊಟ್ಟೆಗೆ 51 ಬಾರಿ ಕಾದ ರಾಡ್ ಇಟ್ರು!

    ಭೋಪಾಲ್: ನ್ಯುಮೋನಿಯಾದಿಂದ (Pneumonia) ಬಳಲುತ್ತಿರುವ 3 ತಿಂಗಳ ಮಗುವಿನ (Baby) ಹೊಟ್ಟೆಯ (Stomach) ಮೇಲೆ ಕಾದ ಕಬ್ಬಿಣದ ರಾಡ್‍ನಿಂದ (Hot  Iron Rod) 51 ಬಾರಿ ಇಟ್ಟ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 3 ತಿಂಗಳ ಮಗುವಿಗೆ ಆಸ್ಪತ್ರೆಗೆ ಸೇರಿಸುವ ಮೊದಲು ಮಂತ್ರವಾದಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಬಾಲಕಿಯ ರೋಗವನ್ನು ಗುಣಪಡಿಸಲು 51 ಬಾರಿ ಆಕೆಯ ಹೊಟ್ಟೆಗೆ ಬಿಸಿ ರಾಡ್‍ನಿಂದ ಇಟ್ಟಿದ್ದಾರೆ.

    ಇದನ್ನು ಗಮನಿಸಿದ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಮಗುವಿಗೆ ಕಬ್ಬಿಣದ ರಾಡ್‍ನಿಂದ ಚುಚ್ಚುತ್ತಿರುವುದನ್ನು ನಿಲ್ಲಿಸಲು ಆ ಮಗುವಿನ ತಾಯಿಗೆ ಮನವರಿಕೆ ಮಾಡಿದ್ದಾಳೆ. ಅದಾದ ಬಳಿಕ ಆ ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ, ಉಸಿರಾಟದ ತೊಂದರೆಯಿಂದಾಗಿ 15 ದಿನಗಳ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ ಅಲೆ- 4 ತಂಡಗಳಲ್ಲಿ ವಿಜಯ ಸಂಕಲ್ಪ ಯಾತ್ರೆ: ನಳಿನ್ ಕುಮಾರ್ ಕಟೀಲ್

    ಈ ಬಗ್ಗೆ ವೈದ್ಯರು ಮಾತನಾಡಿ, ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಆ ಮಗುವಿನ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದಕ್ಕೂ ಮುನ್ನವೇ ಆ ಮಗುವಿಗೆ ಸರಿಯಾದ ಚಿಕಿತ್ಸೆ ನೀಡಿದ್ದರೇ ಮಗು ಬದುಕುಳಿಯುತ್ತಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ತುಮಕೂರಿನ HAL ಭಾರತದಲ್ಲೇ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಕೇಂದ್ರ – ಏನಿದರ ವೈಶಿಷ್ಟ್ಯ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 9 ತಿಂಗಳ ಮಗನೊಂದಿಗೆ ಆತ್ಮಹತ್ಯೆಗೆ ಮುಂದಾದವಳನ್ನು ತಡೆದ ಮಹಿಳಾ ಪೊಲೀಸ್!

    9 ತಿಂಗಳ ಮಗನೊಂದಿಗೆ ಆತ್ಮಹತ್ಯೆಗೆ ಮುಂದಾದವಳನ್ನು ತಡೆದ ಮಹಿಳಾ ಪೊಲೀಸ್!

    ನವದೆಹಲಿ: ತನ್ನ 9 ತಿಂಗಳ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ 19 ವರ್ಷದವಳನ್ನು ದೆಹಲಿ ಪೊಲೀಸರು (Delhi Police) ರಕ್ಷಣೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಯುವತಿಯ ತಾಯಿ ಅದರ್ಶ್ ನಗರ ಪೊಲೀಸ್ ಠಾಣೆ (Adarsh Nagar Police Station) ಗೆ ಕರೆ ಮಾಡಿ ಮಗಳು ಆತ್ಮಹತ್ಯೆ ಮಾಡಿಕೊಳ್ಳು ಹೋಗಿರುವುದಾಗಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಪೊಲೀಸರ ಬಳಿ ಮಗಳ ಗಂಡನ ವಿರುದ್ಧವೇ ರೊಪ ಮಾಡಿದ್ದಾರೆ.

    ಇತ್ತ ಕರೆ ಬಂದ ಕೂಡಲೇ ಎಚ್ಚೆತ್ತ ಪೊಲೀಸರು, ಯುವತಿ ಮತ್ತು ಆಕೆಯ ಮಗಳಿಗಾಗಿ ಹುಡುಕಾಟ ಆರಂಬಿಸಿದ್ದಾರೆ. ಈ ವೇಳೆ ಭಾರತ್ ನಗರ್ ಪಾರ್ಕ್‍ನಲ್ಲಿ ಇಬ್ಬರೂ ಸಿಕ್ಕಿದ್ದಾರೆ. ಪೊಲೀಸರು ಆಕೆಯನ್ನು ವಿಚಾರಿಸಿದ್ದಾರೆ ಕೌಟುಂಬಿಕ ಸಮಸ್ಯೆಯಿಂದಾಗಿ ಮನೆ ಬಿಟ್ಟು ಬಂದಿದ್ದೇನೆ. ಅಲ್ಲದೆ ತನ್ನ ಉದ್ದೇಶದ ಬಗ್ಗೆ ತಾಯಿ ಬಳಿ ಹೇಳಿಯೇ ಬಂದಿರುವುದಾಗಿ ತಿಳಿಸಿದ್ದಾಳೆ. ಇದನ್ನೂ ಓದಿ: ಅಜ್ಜಿ ಹೊರಹಾಕಲು ಹೋಗಿ ತಾನೇ ಮನೆಯಿಂದ ಹೊರಬಿದ್ದ ಮೊಮ್ಮಗ!

    DELHI POLICE

    ಯುವತಿಯ ಮಾತನ್ನು ಆಲಿಸಿದ ಪೊಲಿಸರು ಆಕೆಗೆ ಧೈರ್ಯ ತುಂಬಿ ಮನೆಗೆ ವಾಪಸ್ ಕಳಿಸಿದ್ದಾರೆ. ಈ ಮೂಲಕ ತಾಯಿ-ಮಗನ ಜೀವ ಉಳಿಸಿದ್ದಾರೆ. ಈ ಹಿನ್ನೆಲೆಯ್ಲಲಿ ಇದೀಗ ಪೊಲೀಸರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಾಲಿನಲ್ಲಿ ಇಲಿ ಪಾಷಾಣ ಬೆರೆಸಿ ಮಕ್ಕಳಿಗೆ ಕುಡಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ – ಮಗು ಸಾವು

    ಹಾಲಿನಲ್ಲಿ ಇಲಿ ಪಾಷಾಣ ಬೆರೆಸಿ ಮಕ್ಕಳಿಗೆ ಕುಡಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ – ಮಗು ಸಾವು

    ಹಾಸನ: ತಾಯಿಯೊಬ್ಬಳು ಹಾಲಿನಲ್ಲಿ ಇಲಿ ಪಾಷಾಣ ಬೆರೆಸಿ ಮಕ್ಕಳಿಗೆ ಕುಡಿಸಿ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನದ‌ (Hassan) ಚಿಪ್ಪಿನಕಟ್ಟೆ ಬಡಾವಣೆಯಲ್ಲಿ ತಡವಾಗಿ ಬೆಳಕಿಗೆ ನಡೆದಿದೆ.

    ವಿಷ ಕುಡಿದಿದ್ದ ಆರಾನ್ (7) ಸಾವನ್ನಪ್ಪಿದ್ದು, ಸುನೈನಾ (6) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ, ಜೀನತ್‌ಬಾನು ಜಿಲ್ಲಾಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾಳೆ. 12 ವರ್ಷಗಳ ಹಿಂದೆ ಹಾಸನದ ಚಿಪ್ಪಿನಕಟ್ಟೆಯ ದಿಲ್‌ದಾರ್ ಜೊತೆ ಮಂಗಳೂರಿನ ಉಪ್ಪಿನಂಗಡಿ ಬಳಿಯ ಸತ್ತಿಗಲ್‌ ಮೂಲದ ಜೀನತ್‌ಬಾನು ವಿವಾಹವಾಗಿತ್ತು. ಮದುವೆಯಾದಗಿನಿಂದಲೂ (Wedding) ಆಕೆಯ ಪೋಷಕರು ಜೀನತ್‌ಬಾನುಳನ್ನು ನೋಡಲು ಬಂದಿರಲಿಲ್ಲ. ಇದರಿಂದ ಮನನೊಂದಿದ್ದ ಜೀನತ್‌ಬಾನು ಹಾಲಿನಲ್ಲಿ ಇಲಿ ಪಾಷಾಣ ಬೆರಸಿ ತಾನು ಕುಡಿದು ಮಕ್ಕಳಿಗೆ ಕುಡಿಸಿದ್ದಾಳೆ.‌ ವಿಷ ಉಣಿಸಿರುವ ಬಗ್ಗೆ ಪತಿ, ಅತ್ತೆ, ಮಾವನಿಗೆ ಜೀನತ್‌ಬಾನು ತಿಳಿಸಿರಲಿಲ್ಲ.

    ಜ.8 ರಂದು ಬೆಳಿಗ್ಗೆ ಆರಾನ್‌ಗೆ ವಾಂತಿ ಭೇದಿಯಾಗಿದ್ದು, ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಆರಾನ್ ಸಾವನ್ನಪ್ಪಿದ್ದಾನೆ.‌ ಆದರೂ ವಿಷ ಉಣಿಸಿರುವ ಬಗ್ಗೆ ತಾಯಿ (Mother) ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಫುಡ್ ಪಾಯ್ಸನ್‌ನಿಂದ ಮಗು ಮೃತಪಟ್ಟಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು. ನಂತರ ವಲ್ಲಭಭಾಯಿ ರಸ್ತೆಯಲ್ಲಿರುವ ಖಬ್ರಸ್ತಾನ್‌‌ನಲ್ಲಿ ಆರಾನ್ ಅಂತ್ಯಕ್ರಿಯೆ ನಡೆಸಲಾಗಿತ್ತು. ಇದಾದ ಬಳಿಕ ಸುನೈನಾ ಹಾಗೂ ಜೀನತ್‌ಬಾನುಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಈ ವೇಳೆ ವಿಷ ಉಣಿಸಿರುವ ಬಗ್ಗೆ ಜೀನತ್‌ಬಾನು ತನ್ನ ಪತಿ ಬಳಿ ಹೇಳಿದ್ದಾಳೆ. ಇದನ್ನೂ ಓದಿ: ಮೀನು ಹಿಡಿಯಲು ಹೋಗಿದ್ದವರ ಮೇಲೆ ಫೈರಿಂಗ್ ಪ್ರಕರಣ- ಮರಳಿನ ವಿಚಾರವೇ ಕೊಲೆಗೆ ಕಾರಣ

    ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀನತ್‌ಬಾನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಸುನೈನಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹಾಸನ ತಹಸೀಲ್ದಾರ್ ಸಂತೋಷ್ ಸಮ್ಮುಖದಲ್ಲಿ ಹೂತಿದ್ದ ಆರಾನ್ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.‌ ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೀನತ್‌ಬಾನು ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗುಬ್ಬಿಯಲ್ಲಿ ಜೋರಾಯ್ತು ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರ- 10 ಜನರ ವಿರುದ್ಧ FIR

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • VIDEO: ಮೆಟ್ರೋ ಪಿಲ್ಲರ್‌ ಉರುಳಿ ತಾಯಿ- ಮಗು ದುರ್ಮರಣ

    VIDEO: ಮೆಟ್ರೋ ಪಿಲ್ಲರ್‌ ಉರುಳಿ ತಾಯಿ- ಮಗು ದುರ್ಮರಣ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಕ್ಕಳಾಗಿಲ್ಲ ಎಂದು ಪತ್ನಿಯನ್ನು ಥಳಿಸಿದ ಪತಿ- ಖಾಸಗಿ ಅಂಗಕ್ಕೆ ಗಾಯ

    ಮಕ್ಕಳಾಗಿಲ್ಲ ಎಂದು ಪತ್ನಿಯನ್ನು ಥಳಿಸಿದ ಪತಿ- ಖಾಸಗಿ ಅಂಗಕ್ಕೆ ಗಾಯ

    ಲಕ್ನೋ: ಮದುವೆಯಾಗಿ (Marriage) ವರ್ಷಗಳೇ ಕಳೆದರೂ ಮಗುವಾಗಿಲ್ಲ (Baby) ಎಂಬ ಕೋಪಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು (Wife) ಥಳಿಸಿ ಆಕೆಯ ಖಾಸಗಿ ಅಂಗಕ್ಕೆ ಚೂಪಾದ ಬ್ಲೇಡ್‍ನಿಂದ ಇರಿದು ಗಾಯಗೊಳಿಸಿರುವ ಘಟನೆ ಉತ್ತರಪ್ರದೇಶದ (Uttar Pradesh) ಲಕ್ನೋದಲ್ಲಿ (Lucknow) ನಡೆದಿದೆ.

    ರವೀಂದ್ರ ಬಂಧಿತ ಆರೋಪಿ. ಮದುವೆಯಾಗಿ 6 ವರ್ಷಗಳಾದರೂ ಮಗುವಾಗಿಲ್ಲ ಎಂದು ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ಇದರಿಂದಾಗಿ ಆಕೆ ತನ್ನ ತಾಯಿಯ ಮನೆಗೆ ಹೋಗಿ ಕಳೆದ 8 ತಿಂಗಳಿಂದ ಅಲ್ಲಿಯೇ ಇದ್ದಳು.

    ಆದರೆ ರವೀಂದ್ರ ಡಿ. 25ರಂದು ತನ್ನ ಪತ್ನಿಯನ್ನು ಮನವೊಲಿಸಿ ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದಾನೆ. ಅದಾದ ಬಳಿಕ ಆಕೆಯೊಂದಿಗೆ ಲೈಗಿಕಕ್ರಿಯೆ ನಡೆಸಲು ಪ್ರಯತ್ನಿಸಿದ್ದಾನೆ. ಆದರೆ ಪತ್ನಿ ಇದಕ್ಕೆ ವಿರೋಧಿಸಿದಾಗ ಆಕೆಯನ್ನು ಥಳಿಸಿ, ಆಕೆಯ ಖಾಸಗಿ ಅಂಗಗಳಿಗೆ ಬ್ಲೇಡ್‍ನಿಂದ ಇರಿದು ಗಾಯಗೊಳಿಸಿದ್ದಾನೆ. ಇದನ್ನೂ ಓದಿ: ಬಿಜೆಪಿಯ ಭದ್ರಕೋಟೆ ಮೇಲೆ ಕೈಪಡೆ ಕಣ್ಣು- 2 ಕ್ಷೇತ್ರಗಳನ್ನ ದಕ್ಕಿಸಿಕೊಳ್ಳಲು ರಣತಂತ್ರ

    ಸಂತ್ರಸ್ತೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ರವೀಂದ್ರ ವಿರುದ್ಧ ಪೊಲೀಸರು ಪ್ರಕರಣ ದಾಖಲಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಚಾರ್ಮಾಡಿ ಘಾಟ್‌ನಲ್ಲಿ ಕಾಡ್ಗಿಚ್ಚು- ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

    Live Tv
    [brid partner=56869869 player=32851 video=960834 autoplay=true]

  • ಮಗಳ ಕನಸನ್ನು ನನಸಾಗಿಸಲು ಹೊರಟ ದಂಪತಿ- ಮಹಿಳೆಯನ್ನು ಕೊಲೆ ಮಾಡಿ, ಮಗುವನ್ನು ಅಪಹರಿಸಿದ್ರು

    ಮಗಳ ಕನಸನ್ನು ನನಸಾಗಿಸಲು ಹೊರಟ ದಂಪತಿ- ಮಹಿಳೆಯನ್ನು ಕೊಲೆ ಮಾಡಿ, ಮಗುವನ್ನು ಅಪಹರಿಸಿದ್ರು

    ಗುವಾಹಟಿ: ಮಗಳ (Daughter) ಕನಸನ್ನು ನನಸು ಮಾಡಲು ಹೊರಟ ದಂಪತಿಯು ಮಹಿಳೆಯನ್ನು (Woman) ಕೊಲೆ ಮಾಡಿ ಆಕೆಯ 10 ತಿಂಗಳ ಮಗುವನ್ನು (Baby) ಅಪಹರಿಸಿದ ಘಟನೆ ಅಸ್ಸಾಂನ ಶಿವಸಾಗರ್ ಜಿಲ್ಲೆಯಲ್ಲಿ ನಡೆದಿದೆ.

    ನಿಟುಮೋನಿ ಮೃತ ಮಹಿಳೆಯಾಗಿದ್ದು, ದಂಪತಿಯಾದ ತೆಂಗಪುಖೂರಿನ ಪ್ರನಾಲಿ ಗೊಗೊಯ್ ಅಲಿಯಾಸ್ ಹಿರಾಮಾಯಿ ಮತ್ತು ಬಸಂತ ಗೊಗೊಯ್ ಬಂಧಿತ ಆರೋಪಿಗಳು. ಶಿವಸಾಗರದ ರಾಜ್‍ಬರಿ ಟೀ ಎಸ್ಟೇಟ್‍ನ ನಿವಾಸಿ ನಿತುಮೋನಿಯ ಶವವು ಲುಖ್ರಾಕೋನ್ ಚರಂಡಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಪೊಲೀಸರಿಗೆ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಅಷ್ಟೇ ಅಲ್ಲದೇ ತಿಳಿದ ಪೊಲೀಸರು ತನಿಖೆ ನಡೆಸಿದ್ದರು. ಈ ವೇಳೆ ಆಕೆಯ ಮಗಳು ಕಾಣೆಯಾಗಿದ್ದಾಳೆ ಎಂಬುದು ಬಯಲಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಗುವನ್ನು ಅಪಹರಿಸಿರುವುದು ಬೆಳಕಿಗೆ ಬಂದಿದೆ.

    ಹಿರಾಮಾಯಿ ಮತ್ತು ಬಸಂತ ಗೊಗೊಯ್ ದಂಪತಿ ತಮ್ಮ ಮಗಳಿಗೆ (Daughter) ಮಕ್ಕಳಿಲ್ಲ ಇಲ್ಲ ಎಂದು ಕೊರಗುತ್ತಿದ್ದನ್ನು ನೋಡಿ, ಅವಳ ಕನಸನ್ನು ನನಸು ಮಾಡಬೇಕು ಎಂದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಿಟುಮೋನಿ ಮತ್ತು ಆಕೆಯ ಮಗುವನ್ನು ಕೆಲಸದ ನೆಪದಲ್ಲಿ ತಮ್ಮ ಮನೆಗೆ ಆಹ್ವಾನಿಸಿದ್ದರು. ಈ ವೇಳೆ ದಂಪತಿ ನಿಟುಮೋನಿಯ ಬಳಿ ಇದ್ದ ಮಗುವನ್ನು ಕಸಿದುಕೊಳ್ಳಲು ಯತ್ನಿಸಿದ್ದರು. ಆದರೆ ನಿಟುಮೋನಿ ಇದನ್ನು ವಿರೋಧಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದರು. ಇದನ್ನೂ ಓದಿ: ಹಳೇ ಮೈಸೂರು ಭಾಗದ ಮೇಲೆ ಕಣ್ಣು- ಡಿ.30ಕ್ಕೆ ಮಂಡ್ಯದಲ್ಲಿ ಅಮಿತ್‌ ಶಾ ಸಮಾವೇಶ

    ಅದಾದ ಬಳಿಕ ದಂಪತಿ ನಿಟುಮೋನಿಯ ಮಗುವನ್ನು ಹಿಮಾಚಲ ಪ್ರದೇಶದಲ್ಲಿ ವಾಸಿಸುವ ತಮ್ಮ ಮಗಳಿಗೆ ಹಸ್ತಾಂತರಿಸಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಗ ಪ್ರಶಾಂತ ಗೊಗೊಯ್‍ಯ ಸಹಾಯ ಪಡೆದು ಮಗುವನ್ನು ಹಿಮಾಚಲಕ್ಕೆ ಕಳುಹಿಸಲು ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಆದರೆ ಪೊಲೀಸರು ಕೊಲೆಯನ್ನು ಗಂಭೀರವಾಗಿ ಪರಿಗಣಿಸಿ ದಂಪತಿ ಹಾಗೂ ಮಗನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನಿಖರವಾಗಿ ಹೇಳುವುದು ಕಷ್ಟ, ಆದರೆ ಸೇತುವೆ ರೂಪದ ರಚನೆ ಇದೆ – ರಾಮ ಸೇತು ಬಗ್ಗೆ ಕೇಂದ್ರ ಉತ್ತರ

    Live Tv
    [brid partner=56869869 player=32851 video=960834 autoplay=true]

  • ಮದ್ಯಕ್ಕೆ ದಾಸರಾದ ದಂಪತಿ – ಮಗು ಸಾಕಲಾಗದೇ ಬಾಲಮಂದಿರದಲ್ಲಿ ಬಿಟ್ಟುಹೋದ್ರು

    ಮದ್ಯಕ್ಕೆ ದಾಸರಾದ ದಂಪತಿ – ಮಗು ಸಾಕಲಾಗದೇ ಬಾಲಮಂದಿರದಲ್ಲಿ ಬಿಟ್ಟುಹೋದ್ರು

    ಕಾರವಾರ: ಮದ್ಯವ್ಯಸನಿ ದಂಪತಿ ಬಾಲಮಂದಿರದ ಆವರಣದಲ್ಲಿ ಮೂರು ತಿಂಗಳ ಹಸುಗೂಸನ್ನು ಬಿಟ್ಟು ಹೋದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

    ಶಿರಸಿಯ ಬಾಲಕರ ಬಾಲಮಂದಿರ ಆವರಣದಲ್ಲಿ ಮಗು ಅಳುವ ಧ್ವನಿ ಕೇಳಿಸಿದೆ. ಬಾಲಮಂದಿರದ ಮೇಲ್ವಿಚಾರಕರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮಗು ಪತ್ತೆಯಾಗಿದೆ. ಬಾಲಮಂದಿರದ ಹೊರಗೆ ಸುರಕ್ಷಿತವಾದ ರೀತಿಯಲ್ಲಿ ಮಗುವನ್ನು ಇಡಲಾಗಿತ್ತು. ಇದನ್ನೂ ಓದಿ: ನಮ್ಮ ಮುಖ್ಯಮಂತ್ರಿ ದುರ್ಬಲರು.. ಅಮಿತ್ ಶಾ ಮಾತಿಗೆ ಕಿಮ್ಮತ್ತಿಲ್ಲ- ಸಿದ್ದರಾಮಯ್ಯ ವ್ಯಂಗ್ಯ

    ತಕ್ಷಣ ಮಕ್ಕಳ ರಕ್ಷಣಾ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದ ಬಾಲಮಂದಿರದ ಮೇಲ್ವಿಚಾರಕರು, ಮಕ್ಕಳ ಸುರಕ್ಷಾ ಸಮಿತಿ ಅಧ್ಯಕ್ಷೆ ಅನಿತಾ ಪರ್ವತೇಕರ್ ಮತ್ತು ಸದಸ್ಯೆ ಅಂಜನಾ ಭಟ್ ಅವರಿಗೂ ಮಾಹಿತಿ ನೀಡಿದ್ದಾರೆ.

    ನಂತರ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ನೋಡಿ ಪಾಲಕರನ್ನು ಪತ್ತೆ ಹಚ್ಚಲಾಗಿದ್ದು, ದಂಪತಿಗಳಿಬ್ಬರೂ ಮದ್ಯವ್ಯಸನಿಗಳು ಎಂದು ತಿಳಿದುಬಂದಿದೆ. ನಂತರ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅವರ ಸಮಕ್ಷಮದಲ್ಲಿ ಬಾಲಮಂದಿರಕ್ಕೆ ಮಗುವನ್ನು ಒಪ್ಪಿಸಲಾಗಿದೆ. ಇದನ್ನೂ ಓದಿ: ನಾನು ಅಕ್ರಮವಾಗಿ ಸಂಪಾದನೆ ಮಾಡಿದ್ರೆ, ಅಷ್ಟೂ ಆಸ್ತಿ ದಾನ ಮಾಡ್ತೀನಿ – ಸಿ.ಟಿ ರವಿ

    Live Tv
    [brid partner=56869869 player=32851 video=960834 autoplay=true]