ಮಂಗಳೂರು: ಸರ್ಕಾರಿ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಒಂದೂವರೆ ತಿಂಗಳ ಮಗು ಸಾವನ್ನಪ್ಪಿದ ಆರೋಪವೊಂದು ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಬೆಳ್ತಂಗಡಿಯಲ್ಲಿ (Belthangady) ಕೇಳಿಬಂದಿದೆ.
ಬೆಳ್ತಂಗಡಿಯ ತಾಲೂಕು ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಧರ್ಮಸ್ಥಳ (Dharmasthala) ಗ್ರಾಮದ ಮುಳಿಕಾರ್ ನಿವಾಸಿ ಬಾಲಕೃಷ್ಣ ಮತ್ತು ಸವಿತಾ ದಂಪತಿಯ ಮಗು ಅಂಶಿಕಾ ಮೃತ ದುರ್ದೈವಿ.
ಕಫ ಅಗಿತ್ತು ಎಂದು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಅಂಶಿಕಾಳನ್ನು ದಾಖಲು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಡಾಕ್ಟರ್ ಇಲ್ಲದ ವೇಳೆ ನರ್ಸ್ ಇಂಜೆಕ್ಷನ್ ನೀಡದ ಬಳಿಕ ಮಗು ಸಾವನ್ನಪ್ಪಿದೆ ಎಂದು ಮನೆಯವರು ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿಗರು ವಸೂಲಿ ದಂಧೆಯಲ್ಲಿ 100% ಮುಳುಗಿದ್ದಾರೆ: ವಿಜಯೇಂದ್ರ ಕಿಡಿ
ಘಟನೆಯ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಮಾಜಿ ಶಾಸಕ ವಸಂತ ಬಂಗೇರಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಮಗುವಿನ ತಂದೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಟಾಲಿವುಡ್‌ನಲ್ಲಿ (Tollywood) ಈಗ ತೆಲುಗಿನ ಅಮ್ಮಾಯಿ ವೈಷ್ಣವಿ ಚೈತನ್ಯ(Vaishnavi Chaitanya) ಹಂಗಾಮ ಜೋರಾಗಿದೆ. ‘ಬೇಬಿ’ (Baby) ಸಿನಿಮಾ ನಟನೆಯಿಂದ ಈ ಚಿತ್ರದ ಸಕ್ಸಸ್‌ನಿಂದ ಇಡೀ ತೆಲುಗಿನ ಮಂದಿ ವೈಷ್ಣವಿ ಕಡೆ ತಿರುಗಿ ನೋಡುವಂತೆ ಆಗಿದೆ. ಆನಂದ್ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಿದ ಮೇಲೆ ಇಸ್ಮಾರ್ಟ್ ಶಂಕರ್ ರಾಮ್‌ಗೆ ಜೋಡಿಯಾಗಲು ವೈಷ್ಣವಿ ರೆಡಿಯಾಗಿದ್ದಾರೆ.
ಯೂಟ್ಯೂಬ್‌ನಲ್ಲಿ ಶಾರ್ಟ್ ಫಿಲ್ಮ್ಸ್, ಅಲಾ ವೈಕುಂಠಪುರಮಲ್ಲೋ ಚಿತ್ರದಲ್ಲಿ ಅಲ್ಲು ಅರ್ಜುನ್‌ಗೆ ತಂಗಿ ವೈಷ್ಣವಿ ಚೈತನ್ಯ ನಟಿಸಿದ್ದರು. ಈಗ ಬೇಬಿ ಸಿನಿಮಾದಲ್ಲಿ ನಾಯಕಿಯಾಗಿ ಗೆದ್ದು ಬೀಗಿದ್ದಾರೆ. ಈ ಬೆನ್ನಲ್ಲೇ ವೈಷ್ಣವಿಗೆ ಬಂಪರ್ ಆಫರ್ ಬರುತ್ತಿದೆ. ರಾಮ್ ಪೋತಿನೇನಿ ಜೊತೆ ವೈಷ್ಣವಿ ಡ್ಯುಯೇಟ್ ಹಾಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ:‘ಡಿಜೆ ಟಿಲ್ಲು’ ಹೀರೋ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್
‘ಲೈಗರ್’ (Liger) ಸೋಲಿನ ನಂತರ ರಾಮ್ ಪೋತಿನೇನಿ (Ram Pothineni) ಜೊತೆ ಸಿನಿಮಾ ಮಾಡಲು ನಿರ್ದೇಶಕ ಪುರಿ ಜಗನ್ನಾಥ್ ಕೈಜೋಡಿಸಿದ್ದಾರೆ. ಡಬಲ್ ಇಸ್ಮಾರ್ಟ್ ಅಂತಾ ಟೈಟಲ್ ಫಿಕ್ಸ್ ಆಗಿದೆ. ಈ ಚಿತ್ರಕ್ಕೆ ‘ಬೇಬಿ’ (Baby) ಗರ್ಲ್ ವೈಷ್ಣವಿ ನಾಯಕಿಯಾಗಿದ್ದಾರೆ.
ಹೊಸ ಪ್ರೇಮಕಥೆಯ ಜೊತೆ ನಯಾ ಜೋಡಿ ರಾಮ್ ಪೋತಿನೇನಿ- ವೈಷ್ಣವಿ ಬರುತ್ತಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಮತ್ತು ಆ್ಯಕ್ಷನ್ ಸ್ಟೋರಿ ನೋಡಲು ಕೆಲ ಸಮಯ ಕಾಯಲೇಬೇಕಿದೆ. ಇನ್ನೂ ‘ಬೇಬಿʼ ಸಕ್ಸಸ್ ನೋಡಿ ರಾಮ್ ಪೋತಿನೇನಿ ಅವರು ವೈಷ್ಣವಿ ಅವರಿಗೆ ಬೊಕ್ಕೆ ಕಳುಹಿಸಿ ಶುಭ ಕೋರಿದ್ದರು. ಕನ್ನಡತಿ ನಾಯಕಿಯರ ದರ್ಬಾರ್ ನಡುವೆ ತೆಲುಗು ನಟಿ ವೈಷ್ಣವಿ ಮಿಂಚ್ತಿರೋದು ಟಾಲಿವುಡ್ ಮಂದಿಗೆ ಖುಷಿ ಕೊಟ್ಟಿದೆ.
ತಿರುವನಂತಪುರಂ: ವ್ಯಕ್ತಿಯೊಬ್ಬ ದೂರವಾದ ಕೆಲ ವರ್ಷಗಳ ಬಳಿಕ ಮಗುವನ್ನು ನೋಡಲೆಂದು ಪತ್ನಿ ಮನೆಗೆ ತೆರಳಿದ್ದಾನೆ. ಈ ವೇಳೆ ಮಾವ ಮಾರಣಾಂತಿಕವಾಗಿ ಹಲ್ಲೆಗೈದು ಅಳಿಯನ ಹಲ್ಲು ಕಿತ್ತ ಘಟನೆಯೊಂದು ಕೇರಳದಲ್ಲಿ (Kerala) ನಡೆದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕುರುತಲಿಕಾಡ್ ಪೊಲೀಸರು ಆರೋಪಿ ವಿಜಯನ್ (58) ಎಂಬಾತನನ್ನು ಬಂಧಿಸಿದ್ದಾರೆ. ಗಾಯಾಳುವನ್ನು ರಾಜ್‍ಮೋಹನ್ ಎಂದು ಗುರುತಿಸಲಾಗಿದೆ.
ಕಳೆದ ವರ್ಷಗಳಿಂದ ರಾಜ್ ಮೋಹನ್ ತನ್ನ ಪತ್ನಿಯಿಂದ ದೂರವಾಗಿದ್ದು, ಆಕೆ ತವರು ಮನೆ ಸೇರಿಕೊಂಡಿದ್ದಳು. ಈ ದಂಪತಿಗೆ ಮಗು ಕೂಡ ಇತ್ತು. ಹೀಗಾಗಿ 4 ವರ್ಷಗಳ ಬಳಿಕ ರಾಜ್ ಮೋಹನ್ ತನ್ನ ಮಗುವನ್ನು ನೋಡಲೆಂದು ಪತ್ನಿ ಮನೆಗೆ ತೆರಳಿದ್ದಾನೆ.
ರಾಜ್ ಮೋಹನ್ ಪತ್ನಿ ಮನೆಗೆ ಹೋಗುತ್ತಿದ್ದಂತೆಯೇ ಅಲ್ಲಿ ಪತ್ನಿ ಇರಲಿಲ್ಲ. ಆಕೆ ಅಲ್ಲಿ ಮಗುವನ್ನು ಬಿಟ್ಟು ಬೇರೊಬ್ಬನ ಜೊತೆ ಹೋಗಿದ್ದಳು. ಇತ್ತ ಅಳಿಯ ಬಂದಿದ್ದನ್ನು ನೋಡಿದ ಮಾವ ಕಬ್ಬಿಣದ ರಾಡ್‍ನಿಂದ ಹಿಗ್ಗಾಮುಗ್ಗವಾಗಿ ಹಲ್ಲೆ ಮಾಡಿದ್ದಾನೆ. ರಾಡ್‍ನಿಂದ ಮುಖಕ್ಕೆ ಹೊಡೆದ ಪರಿಣಾಮ ರಾಜ್ ಮೋಹನ್ ಹಲ್ಲುಗಳೇ ಕಿತ್ತು ಹೊರಬಂದಿವೆ. ಇದನ್ನೂ ಓದಿ: ಪತ್ನಿಯ ಬೆರಳನ್ನೇ ಕಚ್ಚಿ ತಿಂದ ಪತಿ
ಸದ್ಯ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಬೈಜು ಬಿಂದುರಾಜ್ ತಿಳಿಸಿದ್ದಾರೆ.
ಕಾರವಾರ: ಪೋಷಕರ ನಿರ್ಲಕ್ಷ್ಯದಿಂದಾಗಿ ಮೊಬೈಲ್ ಚಾರ್ಜರ್‌ನಿಂದ (Mobile Charger) ಶಾಕ್ ಹೊಡೆದು 8 ತಿಂಗಳ ಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದ ಸಿದ್ದರದಲ್ಲಿ ನಡೆದಿದೆ.
ಮುಂಬೈ: ಮಹಾರಾಷ್ಟ್ರದಲ್ಲಿ (Maharastra) ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
28 ವರ್ಷದ ರುಷಿಕಾ ಪೊಗುಲ್ (Rushika Pogul) ಎಂಬ ಮಹಿಳೆ ತನ್ನ ತಂದೆ ಮತ್ತು ಹೆಣ್ಣು ಮಗುವಿನೊಂದಿಗೆ ಸ್ಥಳೀಯ ರೈಲಿನಲ್ಲಿ (Local Train) ಪ್ರಯಾಣಿಸುತ್ತಿದ್ದರು. ಆದರೆ ರೈಲು ಅಂಬರನಾಥ್ ನಿಲ್ದಾಣದ ಬಳಿ ಸುಮಾರು 2 ಗಂಟೆಗಳ ಕಾಲ ನಿಂತಿತ್ತು. ಈ ಸಂದರ್ಭದಲ್ಲಿ ಕೆಲ ಪ್ರಯಾಣಿಕರು ಕಲ್ಯಾಣದ ಕಡೆಗೆ ನಡೆಯತೊಡಗಿದರು. ರುಷಿಕಾ ಕೂಡ ಅವರೊಂದಿಗೆ ಹೋಗಲು ನಿರ್ಧರಿಸಿ, ರೈಲಿನಿಂದ ಇಳಿಯಲು ಯತ್ನಿಸಿದ್ದಾರೆ.
ಇಳಿಯಲು ಮುಂದಾದಾಗ ರುಷಿಕಾ ತನ್ನ ಮಡಿಲಿನಲ್ಲಿದ್ದ ಮಗುವನ್ನು ತಂದೆ ಕೈಯಲ್ಲಿ ಕೊಟ್ಟಿದ್ದಾಳೆ. ಇತ್ತ ರೈಲಿನಿಂದ ಇಳಿಯಲು ಹೋಗಿ ಕಾಲು ಜಾರಿ ಚರಂಡಿಯ ದಡಕ್ಕೆ ಬಿದ್ದಿದ್ದಾರೆ. ಆಗ ಮಗಳನ್ನು ಕೈ ಹಿಡಿದು ಎಳೆಯಲು ತಂದೆ ಮುಂದಾಗಿದ್ದು, ಈ ವೇಳೆ ತಂದೆಯ ಕೈಯಿಂದ ಜಾರಿ ಪುಟ್ಟ ಕಂದಮ್ಮ ಚರಂಡಿಗೆ ಬಿದ್ದಿದೆ. ಮಗು ಬಿದ್ದಿದ್ದನ್ನು ನೋಡಿದ ರುಷಿಕಾ ಜೋರಾಗಿ ಕಿರುಚಿಕೊಂಡಿದ್ದಾರೆ.
ಮಹಿಳೆ ಕಿರುಚಿಕೊಳ್ಳುತ್ತಿದ್ದಂತೆಯೇ ರೈಲಿನಲ್ಲಿದ್ದ ಉಳಿದವರೂ ಅಲ್ಲಿಗೆ ಇಳಿದು ಬಂದರು. ಏನಾಯ್ತು ಅಂತ ಕೇಳಿದಾಗ ಮಗು ಚರಂಡಿಗೆ ಬಿದ್ದಿರುವುದು ತಿಳಿದು ಬಂದಿದೆ. ನಂತರ ಅಲ್ಲಿನ ಗ್ರಾಮ ಪಂಚಾಯತ್‍ಗೆ ವಿಷಯ ತಿಳಿಸಲಾಯಿತು. ಡೊಂಬಿವಿಲಿ ಪೊಲೀಸರು ಕೂಡ ಸ್ಥಳಕ್ಕೆ ದೌಡಾಯಿಸಿ ಜಿಆರ್ ಪಿಯೊಂದಿಗೆ ಹುಡುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಕೋಪಗೊಂಡಿದ್ದರೆ, ಬಿರೇನ್ ಸಿಂಗ್ ವಜಾ ಮಾಡಬಹುದಿತ್ತು: ಖರ್ಗೆ ಟಾಂಗ್
ಇದಾದ ನಂತರ ಎನ್‌ಡಿಆರ್‌ಎಫ್ ನಿಂದ ಸಹಾಯವನ್ನು ಕೇಳಲಾಯಿತು. ಕತ್ತಲೆಯಾದ ಕಾರಣ ರಾತ್ರಿ 8 ಗಂಟೆಯವರೆಗೆ ಶೋಧ ಕಾರ್ಯ ಸ್ಥಗಿತಗೊಂಡಿತ್ತು. ಶುಕ್ರವಾರ ಮತ್ತೆ ಶೋಧ ಕಾರ್ಯ ಆರಂಭಿಸಿದರೂ ಮಗುವಿನ ಪತ್ತೆಯಾಗಿಲ್ಲ. ಸದ್ಯಕ್ಕೆ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಎಂದು ಎನ್‍ಡಿಆರ್ ಎಫ್ ತಿಳಿಸಿದೆ.
ಚೆನ್ನೈ: ಪಾಪಿ ತಂದೆಯೊಬ್ಬ ತನ್ನ 26 ದಿನದ ಪುಟ್ಟ ಕಂದಮ್ಮನ ಕುತ್ತಿಗೆ ಹಾಗೂ ತೋಳನ್ನು ಹರಿತವಾದ ಆಯುಧದಿಂದ ಕೊಯ್ದು ವಿಕೃತಿ ಮೆರೆದ ಘಟನೆಯೊಂದು ತಮಿಳುನಾಡಿನ Vellore Tamilnadu) ವಲ್ಲೂರಿನಲ್ಲಿ ನಡೆದಿದೆ.
ಆರೋಪಿಯನ್ನು ಮಣಿಕಂದನ್ (29) ಎಂದು ಗುರುತಿಸಲಾಗಿದೆ. ಈತ ಕಳೆದ ವರ್ಷ ಹೇಮಾ (21) ಎಂಬಾಕೆಯ ಜೊತೆ ಸಪ್ತಪದಿ ತುಳಿದಿದ್ದಾನೆ. ದಂಪತಿಗೆ ಇತ್ತೀಚೆಗೆ ಗಂಡು ಮಗು ಹುಟ್ಟಿತ್ತು.
ತಾಂಬರಂನಲ್ಲಿ ವಾಯುಪಡೆಯ ಕ್ಯಾಂಟೀನ್‍ನ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಮಣಿಕಂದನ್, ವೆಲ್ಲೂರಿನ ಅನೈಕಟ್ ತಾಲೂಕಿನ ದೇವಿ ನೆಲ್ಲಿಕುಳಂ ಪ್ರದೇಶದಲ್ಲಿ ವಾಸವಿದ್ದನು. ತನ್ನ ಕೆಲಸದ ಕಾರಣದಿಂದಾಗಿ ಮಣಿಕಂದನ್ ತಿಂಗಳಿಗೊಮ್ಮೆ ಪತ್ನಿಯನ್ನು ಭೇಟಿಯಾಗುತ್ತಿದ್ದನು. ಇತ್ತೀಚೆಗೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಪತಿ ಪತ್ನಿಯ ಮೇಲೆ ಅನುಮಾನಪಡುತ್ತಿದ್ದನು.
ಇದೇ ವಿಚಾರಕ್ಕೆ ಇಂದು ಕೂಡ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಪರಿಣಾಮ ಹೇಮಾಳ ಮುಂದೆಯೇ ಮಣಿಕಂದನ್ ಚಾಕುವಿನಿಂದ ಹಸುಗೂಸಿನ ಬಲಗೈ ಮತ್ತು ಕುತ್ತಿಗೆಯನ್ನು ಕೊಯ್ದಿದ್ದಾನೆ. ತಕ್ಷಣವೇ ಹೇಮಾ ತನ್ನ ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಅಂತೆಯೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಗುವನ್ನು ಪರೀಕ್ಷಿಸಿದ ವೈದ್ಯರು, ಕುತ್ತಿಗೆ ಮತ್ತು ಬಲಗೈಯಲ್ಲಿ ಗಾಯಗಳಾಗಿದ್ದು ಹೊಲಿಗೆ ಹಾಕಬೇಕಾಗುತ್ತದೆ. ಉಳಿದಂತೆ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಡಬಲ್ ಮರ್ಡರ್!
ಇತ್ತ ಪತ್ನಿಯ ದೂರಿನ ಆಧಾರದ ಮೇಲೆ ಮಣಿಕಂದನ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಕೃತ್ಯದ ಬಳಿಕ ಮಣಿಕಂದನ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಸಿನಿಮಾ ರಂಗದ ಮೇಲೆ ಅಸಹ್ಯ ಹುಟ್ಟಿಸುವಂತಹ ಅನೇಕ ಸಂಗತಿಗಳು ಜರುಗುತ್ತಿವೆ. ಈ ಕಾರಣದಿಂದಾಗಿಯೇ ಸಿನಿಮಾ ರಂಗದ ಮೇಲೆ ಅನೇಕರು ನೇರವಾಗಿ ಸಿಡಿದೆದ್ದಿದ್ದಾರೆ. ಪ್ರತಿಭಟನೆ ಒಂದು ಕಡೆಯಾದರೆ, ಕಾನೂನು ಮೂಲಕ ಉತ್ತರ ಕೊಡುವ ಪ್ರಯತ್ನವನ್ನೂ ಹಲವರು ಮಾಡುತ್ತಿದ್ದಾರೆ. ಈ ನಡುವೆ ತೆಲುಗು ಚಿತ್ರೋದ್ಯಮದಲ್ಲಿ ಮತ್ತೊಂದು ಅಸಹ್ಯದ ಸಂಗತಿಯೊಂದು ನಡೆದು ಬಿಟ್ಟಿದೆ.
ವಿಜಯ್ ದೇವರಕೊಂಡ ನಟನೆಯ ಮೊದಲ ಸಿನಿಮಾ ಅರ್ಜುನ್ ರೆಡ್ಡಿಯಲ್ಲಿ ಸೆಕ್ಸ್ ಅನ್ನು ವೈಭವೀಕರಿಸುವ ಕೆಲಸವನ್ನು ನಿರ್ದೇಶಕರು ಮಾಡಿದ್ದರು. ನಾಯಕ ವಿಜಯ್, ತನ್ನ ಸಹಪಾಠಿ ಜೊತೆ ಸೆಕ್ಸ್ (Sex) ಮಾಡುವಂತಹ ಸನ್ನಿವೇಶವನ್ನೂ ಸಿನಿಮಾದಲ್ಲಿ ತೋರಿಸುವ ಮೂಲಕ ಈ ಸಿನಿಮಾ ಬೋಲ್ಡ್ ಎಂದು ತೋರಿಸುವ ಪ್ರಯತ್ನಕ್ಕೆ ನಿರ್ದೇಶಕರು ಕೈ ಹಾಕಿದ್ದರು. ಈ ಸನ್ನಿವೇಶ ಕೂಡ ಕೆಲವರ ಕಂಗಣ್ಣಿಗೆ ಗುರಿಯಾಗಿತ್ತು. ಇದೀಗ ವಿಜಯ್ ಸಹೋದರ ಆನಂದ್ ದೇವರಕೊಂಡ (Anand Devarakonda) ಸಿನಿಮಾದ ಪೋಸ್ಟರ್ (Poster) ಕೂಡ ವಿವಾದಕ್ಕೆ (Controversy) ಕಾರಣವಾಗಿದೆ. ಇದನ್ನೂ ಓದಿ:‘ಎಮರ್ಜೆನ್ಸಿ’ ನಂತರದ ಸಿನಿಮಾ ಸುಳಿವು ಕೊಟ್ಟ ಕಂಗನಾ ರಣಾವತ್
ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟನೆಯ ‘ಬೇಬಿ’ (Baby) ಸಿನಿಮಾದ ಪೋಸ್ಟರ್‌ವೊಂದು ರಿಲೀಸ್ ಆಗಿದ್ದು, ಈ ಪೋಸ್ಟರ್‌ನಲ್ಲಿ ನಾಯಕನ ನಡು ಬೆರಳ ಮೇಲೆ ನಾಯಕಿಯನ್ನು ನಿಲ್ಲಿಸಲಾಗಿದೆ. ಈ ಪೋಸ್ಟರ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಸಿನಿಮಾ ಟೀಮ್ ಈ ಪೋಸ್ಟರ್ ಮೂಲಕ ಏನನ್ನೋ ಹೇಳಲು ಹೊರಟಿದೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
ಸಾಮಾನ್ಯವಾಗಿ ಮಧ್ಯದ ಬೆರಳನ್ನು ತೋರಿಸುವುದು ಕೆಟ್ಟ ಸೂಚನೆಯನ್ನು ತೋರಿಸುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾನೂನಿನಲ್ಲಿ ಇದಕ್ಕೂ ಶಿಕ್ಷೆಯಿದೆ. ಇಷ್ಟೆಲ್ಲ ಗೊತ್ತಿದ್ದರೂ, ನಾಯಕಿಯ ಫೋಟೋವನ್ನು ಎಡಿಟ್ ಮಾಡಿ, ಮಧ್ಯದ ಬೆರಳ ಮೇಲೆ ನಿಲ್ಲಿಸಲಾಗಿದೆ. ಈ ಕುರಿತು ನಾಯಕಿ ವೈಷ್ಣವಿ ಚೈತನ್ಯ (Vaishnavi Chaitanya) ಯಾವುದೇ ಮಾತುಗಳನ್ನು ಆಡದೇ ಇರುವುದು ಅಚ್ಚರಿ ಕೂಡ ತಂದಿದೆ.
ನ್ಯೂಯಾರ್ಕ್: ಪಾಪಿ ತಾಯಿಯೊಬ್ಬಳು ತನ್ನ ಎಂಜಾಯ್‍ಮೆಂಟ್‍ಗಾಗಿ ಒಂದೂವರೆ ವರ್ಷದ ಮಗಳನ್ನು ಮನೆಯಲ್ಲಿ ಏಕಾಂಗಿಯಾಗಿ ಬಿಟ್ಟು 10 ದಿನಗಳ ಕಾಲ ಟ್ರಿಪ್ ಮಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಅಮೆರಿಕಾ (America) ದಲ್ಲಿ ನಡೆದಿದೆ.
ಹೆಣ್ಣು ಮಗು ಸಾವನ್ನಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರು ಕ್ರಿಸ್ಟಲ್ ಎ.ಕ್ಯಾಂಡೆಲಾರಿಯೊ (31) (Kristel Candelario)ಳನ್ನು ಬಂಧಿಸಿದ್ದಾರೆ. ಮೃತ ದುರ್ದೈವಿ ಮಗುವನ್ನು ಜೈಲಿನ್ (16 ತಿಂಗಳು) (Jailyn) ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ..?: ಅಮೆರಿಕಾದ ಓಹಿಯೋ ನಿವಾಸಿ ಕ್ರಿಸ್ಟಲ್ ತನ್ನ ಹೆಣ್ಣು ಮಗು ಜೈಲಿನ್ ಳನ್ನು 10 ದಿನಗಳ ಕಾಲ ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟಿದ್ದಳು. ತನ್ನ ಮಗುವನ್ನು ನೋಡಿಕೊಳ್ಳಿ ಎಂದು ಪಕ್ಕದ ಮನೆಯವರಲ್ಲಿ ಹೇಳಿದ್ದಳು. ಆದರೆ ಆಕೆ ಟ್ರಿಪ್ ಹೊರಡುವಾಗ ಯಾರಿಗೂ ಕರೆ ಮಾಡಲಿಲ್ಲ. ಹೀಗಾಗಿ ಮಗುವನ್ನು ಆಕೆ ಕರೆದುಕೊಂಡು ಹೋಗಿರಬಹುದು ಎಂದು ನೆರೆಮನೆಯವರು ಸುಮ್ಮನಿದ್ದರು. ಆದರೆ ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಗು ಹೊಟ್ಟೆಗೆ ಏನೂ ಇಲ್ಲದೆ ಮೃತಪಟ್ಟಿದೆ. ಇದನ್ನೂ ಓದಿ: ಗಗನಯಾತ್ರಿಗಳ ಮೂತ್ರ, ಬೆವರಿನಿಂದಲೇ ಕುಡಿಯುವ ನೀರಿನ ಉತ್ಪಾದನೆ – ಬಾಹ್ಯಾಕಾಶದಲ್ಲಿ ಮಹತ್ವದ ಸಂಶೋಧನೆ
ಇತ್ತ ಟ್ರಿಪ್ ಮುಗಿಸಿ ಅಂದರೆ ಜೂನ್ 16 ರಂದು ಮನೆಗೆ ವಾಪಸ್ ಬಂದು ನೋಡಿದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹಾಸಿಗೆಯಲ್ಲಿಯೇ ಮಲ-ಮೂತ್ರ ಮಾಡಿ ಅದರ ಮೇಲೆಯೇ ಮಲಗಿರುವಂತೆ ಕಂಡಿತು. ಇದರಿಂದ ಆತಂಕಗೊಂಡ ಕ್ರಿಸ್ಟಲ್ ಕೂಡಲೇ 911ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಗುವನ್ನು ನೋಡಿದಾಗ ಅದು ಮೃತಪಟ್ಟಿರುವುದು ಬಯಲಾಯಿತು.
ಕ್ರಿಸ್ಟಲ್ ಒಬ್ಬಂಟಿಯಾಗಿ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗುವುದು ಇದು ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಆಕೆ ಮಗುವನ್ನು ಬಿಟ್ಟು ಹೋಗಿದ್ದಾಳೆ. ಮಗುವನ್ನು ಒಬ್ಬಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗದಂತೆ ಸಾಕಷ್ಟು ಬಾರಿ ಹೇಳಿದ್ದೇವೆ. ಆದರೆ ಆಕೆ ನಮ್ಮ ಮಾತನ್ನು ಕೇಳುತ್ತಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಪೊಲೀಸರ ಬಳಿ ದೂರಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಸಂಬಂಧ ತಾಯಿ ಕ್ರಿಸ್ಟಲ್ ಕ್ಯಾಂಡೆಲಾರಿಯೊ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ತೆಲುಗಿನ ಖ್ಯಾತ ನಟ ರಾಮ್ ಚರಣ್ (Ramcharan) ಹಾಗೂ ಉಪಾಸನಾ ದಂಪತಿ ತಮ್ಮ ಕುಟುಂಬಕ್ಕೆ ಮಗುವನ್ನು ಬರಮಾಡಿಕೊಳ್ಳಲು ಸರ್ವ ರೀತಿಯಲ್ಲೂ ಸಿದ್ಧತೆ ನಡೆಸಿದ್ದಾರೆ. ತಮ್ಮ ಕುಟುಂಬದ ಕುಡಿಗಾಗಿ ಈಗಿನಿಂದಲೇ ಶಾಪಿಂಗ್ ಕೂಡ ಶುರು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಉಪಾಸನಾ ಖುಷಿ ಸುದ್ದಿಯೊಂದನ್ನು ಹಂಚಿಕೊಂಡಿದ್ದು, ಪ್ರಜ್ವಲ್ ಫೌಂಡೇಶನ್ ತಮ್ಮ ಮಗುವಿಗಾಗಿ (Baby) ಸ್ಪೆಷಲ್ ತೊಟ್ಟಿಲನ್ನು (cradle) ಗಿಫ್ಟ್ ನೀಡಿರುವುದಾಗಿ ತಿಳಿಸಿದ್ದಾರೆ.
ಪ್ರಜ್ವಲ್ ಫೌಂಡೇಶನ್ (Prajwal Foundation) ನಲ್ಲಿ ಕೆಲಸ ಮಾಡುವ ಮಹಿಳೆಯರೇ ಈ ಸ್ಪೆಷಲ್ ತೊಟ್ಟಿಲನ್ನು (Tottilu) ರೆಡಿ ಮಾಡಿದ್ದು, ಅದು ಮರದ ತೊಟ್ಟಿಲಾಗಿದೆ. ಉಪಾಸನಾ ಮಗುವಿಗಾಗಿಯೇ ಅದನ್ನು ಸಿದ್ಧ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅದೊಂದು ತೂಗು ತೊಟ್ಟಿಲಾಗಿದ್ದು ಕುಸುರಿ ಕೆಲಸವನ್ನೂ ಹೊಂದಿದೆ. ಇದನ್ನೂ ಓದಿ:ಅಪ್ಪ- ಅಮ್ಮನ ಕ್ಯೂಟ್ ಲವ್ ಸ್ಟೋರಿ ಹಂಚಿಕೊಂಡು ಮದುವೆ ವಾರ್ಷಿಕೋತ್ಸವಕ್ಕೆ ರಾಧಿಕಾ ವಿಶ್
ಉಪಾಸನಾ (Upasana) ಹೆರಿಗೆ ವಿಚಾರ ಹಲವು ದಿನಗಳಿಂದ ಚರ್ಚೆ ಆಗುತ್ತಲೇ ಇದೆ. ರಾಮ್ ಚರಣ್ ಕುಟುಂಬಕ್ಕೆ ಯಾವ ಮಗು ಬರಲಿದೆ ಎನ್ನುವ ಪ್ರಶ್ನೆಯನ್ನು ಕೂಡ ಅಭಿಮಾನಿಗಳು ಕೇಳಿದ್ದರು. ಇದೀಗ ಆ ಕುರಿತು ಸ್ವತಃ ಉಪಾಸನಾ ಅವರೇ ಉತ್ತರಿಸಿದ್ದಾರೆ. ಜುಲೈನಲ್ಲಿ (July) ಹೆರಿಗೆ (Delivery) ಆಗಲಿದೆ ಎಂದು ವೈದ್ಯರು ತಿಳಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಈ ಹಿಂದೆ ರಾಮ್ ಚರಣ್ ತೇಜ ಅವರ ಮೊದಲ ಮಗುವಿನ ಜನನ (Childbirth) ಯಾವ ದೇಶದಲ್ಲಿ ಆಗಲಿದೆ ಎನ್ನುವ ಕುರಿತು ಚರ್ಚೆ ನಡೆದಿತ್ತು. ಅಮೆರಿಕಾದಲ್ಲೇ ಅವರು ಮೊದಲ ಮಗುವಿನ ಜನನಕ್ಕೆ ತಯಾರಿ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಆಗಿತ್ತು. ರಾಮ್ ಚರಣ್ ಪತ್ನಿ ಉಪಾಸನಾ ಅವರ ಸಲಹೆ ಮೇರೆಗೆ ಇಂಥದ್ದೊಂದು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗಿತ್ತು. ಇದೆಲ್ಲ ಊಹಾಪೋಹಗಳಿಗೂ ಉಪಾಸನಾ ಉತ್ತರಿಸಿದ್ದಾರೆ.
ರಾಮ್ ಚರಣ್ ಪತ್ನಿ ಉಪಾಸನಾ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದು, ‘ಅಮೆರಿಕಾದಲ್ಲಿ ಹೆರಿಗೆಗೆ ತಯಾರಿ ಮಾಡಿಕೊಂಡಿದ್ದೇವೆ ಎನ್ನುವ ಸುದ್ದಿ ಸುಳ್ಳು. ಅದು ಯಾಕೆ ಈ ರೀತಿ ಹಬ್ಬಿತೋ ಗೊತ್ತಿಲ್ಲ. ನಮ್ಮ ಮಗುವಿನ ಜನನ ಭಾರತದಲ್ಲೇ ಆಗಲಿದೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ’ ಎಂದಿದ್ದಾರೆ. ಭಾರತದಲ್ಲೇ ನಮ್ಮ ಮಗು ಜನಿಸಲಿದೆ ಎಂದು ಅವರು ಹೇಳಿದ್ದಾರೆ.
ಹಾಲಿವುಡ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಾಗಿ ರಾಮ್ ಚರಣ್ ಅಮೆರಿಕಾಗೆ ಹೋಗಿದ್ದರು. ಅಲ್ಲಿ ವಾಹಿನಿಯೊಂದರ ಸಂದರ್ಶನದಲ್ಲಿ ಮೊದಲ ಮಗುವಿನ ಜನನದ ಕುರಿತು ಮಾತನಾಡಿದ್ದಾರೆ. ಪತ್ನಿಯ ಹೆರಿಗೆಗಾಗಿ ಸಿದ್ಧರಾಗಿ ಎಂದು ವೈದ್ಯರೊಬ್ಬರಿಗೆ ಹೇಳಿದ್ದರು. ಈ ಕಾರಣದಿಂದಾಗಿಯೇ ಗೊಂದಲ ಮೂಡಿತ್ತು. ಅಮೆರಿಕಾದಲ್ಲೇ ಉಪಾಸನ ಮಗುವಿಗೆ ಜನ್ಮ ನೀಡಲಿದ್ದಾರೆ ಎನ್ನಲಾಗಿತ್ತು.
ರಾಮ್ ಚರಣ್ ಮತ್ತು ಉಪಾಸನಾ ದಂಪತಿ ತಡವಾಗಿ ಮಗು ಮಾಡಿಕೊಳ್ಳಲು ನಿರ್ಧರಿಸಿದ್ದರು. ಹಲವು ವರ್ಷಗಳ ನಂತರ ಉಪಾಸನಾ ಮಡಿಲಿಗೆ ಮಗು ಬರುತ್ತಿದೆ. ಹಾಗಾಗಿ ಸಹಜವಾಗಿಯೇ ದೊಡ್ಡ ಆಸ್ಪತ್ರೆಯಲ್ಲೇ ಮಗುವಿನ ಜನನ ಆಗಲಿದೆ ಎಂದು ಊಹಿಸಲಾಗಿತ್ತು. ಅಮೆರಿಕಾ ವೈದ್ಯರ ಬಗ್ಗೆ ರಾಮ್ ಚರಣ್ ಮಾತನಾಡಿದ್ದರಿಂದ, ಅಮೆರಿಕಾದಲ್ಲಿ ಮಗುವಿನ ಜನನ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಇದೆಲ್ಲದಕ್ಕೂ ಉಪಾಸನಾ ಪ್ರತಿಕ್ರಿಯಿಸಿದ್ದಾರೆ.
ಭೋಪಾಲ್: ವ್ಯಕ್ತಿಯೊಬ್ಬ ಚಿಕಿತ್ಸೆಗೆ ಕರೆತಂದ ತನ್ನ ಪುಟ್ಟ ಕಂದಮ್ಮನನ್ನು ವೇದಿಕೆಯಲ್ಲಿ ಕುಳಿತಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಮುಂದೆ ಎಸೆದ ಹೀನಾಯ ಪ್ರಸಂಗವೊಂದು ನಡೆದಿದೆ.
ಈ ಘಟನೆ ಮಧ್ಯಪ್ರದೇಶ (Madhyapradesh) ದ ಸಾಗರ್ ಎಂಬಲ್ಲಿ ನಡೆದಿದೆ. ವ್ಯಕ್ತಿಯನ್ನು ಮುಕೇಶ್ ಪಟೇಲ್ ಎಂದು ಗುರುತಿಸಲಾಗಿದೆ. ವ್ಯಕ್ತಿಯು ತನ್ನ 1 ವರ್ಷದ ಮಗುವನ್ನು ವೇದಿಕೆಗೆ ಎಸೆಯುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು. ಕೂಡಲೇ ಮಗುವನ್ನು ತೆಗೆದುಕೊಂಡು ಅದರ ತಾಯಿಗೆ ಒಪ್ಪಿಸಿದ್ದಾರೆ. ಈ ಘಟನೆಯಿಂದಾಗಿ ಕಾರ್ಯಕ್ರಮದಲ್ಲಿ ನೆರೆದಿದ್ದವರಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿತ್ತು.
ನಡೆದಿದ್ದೇನು..?: ಮಧ್ಯಪ್ರದೇಶದ ಮುಖ್ಯಮಂತ್ರಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. ಸಾಗರದ ಕೆಸ್ಲಿ ತಹಸಿಲ್‍ನ ಸಹಜ್‍ಪುರ ಗ್ರಾಮದ ನಿವಾಸಿಯಾಗಿರುವ ಮುಖೇಶ್ ಪಟೇಲ್ (Mukesh Patel) ಹಾಗೂ ನೇಹಾ ದಂಪತಿಯ ಮಗುವಿನ ಹೃದಯದಲ್ಲಿ ರಂಧ್ರವಿದೆ. ದಂಪತಿ ಈವರೆಗೆ ಮಗುವಿನ ಚಿಕಿತ್ಸೆಗಾಗಿ 4 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾರೆ. ಆದರೆ ಮಗುವಿನ ಶಸ್ತ್ರಚಿಕಿತ್ಸೆಗೆ ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಇದನ್ನೂ ಓದಿ: ನನ್ನ ಬೆನ್ನಿಗೆ ಚೂರಿ ಹಾಕ್ತೀರಿ, ಎಷ್ಟು ಕಿರುಕುಳ ಕೊಡ್ತೀರಿ: ಖೂಬಾ ವಿರುದ್ಧ ಪ್ರಭು ಚವ್ಹಾಣ್ ಕೆಂಡಾಮಂಡಲ
ಅಂತೆಯೇ ಇತ್ತೀಚೆಗೆ ಸಾರ್ವಜನಿಕ ಸಮಾವೇಶವೊಂದರಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಭಾಗವಹಿಸಿದ್ದರು. ಇದು ಮುಕೇಶ್ ಗಮನಕ್ಕೆ ಬಂದಿದ್ದು, ಕಾರ್ಯಕ್ರಮದಂದು ತನ್ನ ಮಗುವಿನೊಂದಿಗೆ ಮುಕೇಶ್ ಪಟೇಲ್ ದಂಪತಿ ತೆರಳಿದ್ದರು. ಮೊದಲು ಪೊಲೀಸರ ಬಳಿ ಹೋಗಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಬೇಕೆಂದು ಹೇಳಿದ್ದಾರೆ. ಆದರೆ ಪೊಲೀಸರು ಇದಕ್ಕೆ ಒಪ್ಪಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಮುಖ್ಯಮಂತ್ರಿಯ ಗಮನಕ್ಕೆ ತರುವ ಸಲುವಾಗಿ ಮುಕೇಶ್ ತನ್ನ ಮಗುವನ್ನು ವೇದಿಕೆಯ ಬಳಿ ಎಸೆದಿದ್ದಾರೆ. ಇದನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಮಗುವನ್ನು ಮೇಲೆತ್ತಿ ತಾಯಿಗೆ ನೀಡಿದ್ದಾರೆ. ಬಳಿಕ ಅಧಿಕಾರಿಗಳು ಈ ವಿಚಾರವನ್ನು ಮುಖ್ಯಮಂತ್ರಿಗೆ ಹೇಳಿದ್ದಾರೆ. ಆತನ ಮಗುವಿನ ಹೃದಯದಲ್ಲಿ ರಂಧ್ರವಿದೆ. ಸಹಾಯಕ್ಕಾಗಿ ಬಂದಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಎಲ್ಲಾ ಸಹಾಯ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ.
ನನ್ನ ಮಗು 3 ತಿಂಗಳು ಇರುವಾಗ ಹೃದಯದಲ್ಲಿ ರಂಧ್ರ ಕಾಣಿಸಿಕೊಂಡಿತ್ತು. ಇದಕ್ಕಾಗಿ 4 ಲಕ್ಷಕ್ಕೂ ಅಧಿಕ ಖರ್ಚು ಮಾಡಿದ್ದೇನೆ. ವೈದ್ಯರು ಆಪರೇಷನ್ ಮಾಡಬೇಕೆಂದು ಹೇಳಿದ್ದು, ಅದಕ್ಕೆ 3.50 ಲಕ್ಷ ವೆಚ್ಚವಾಗಲಿದೆ ಎಂದಿದ್ದಾರೆ. ಆದರೆ ಅಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸುವುದು ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಬಂದೆವು. ಆದರೆ ಪೊಲೀಸರು ನಮಗೆ ಅವಕಾಶ ನೀಡಲಿಲ್ಲ. ಹೀಗಾಗಿ ಕಾರ್ಯಕ್ರಮದಲ್ಲಿ ವೇದಿಕೆಯತ್ತ ಮಗುವನ್ನು ಎಸೆದಿದ್ದಾಗಿ ಮುಕೇಶ್ ಪಟೇಲ್ ಹೇಳಿದ್ದಾರೆ.