Tag: Baby

  • ಹಾವಿನ ಮೊಟ್ಟೆಗಳಿಗೆ ಕಾವು ಕೊಟ್ಟು 21 ಮರಿಗಳನ್ನು ಹೊರತೆಗೆದ್ರು ಧಾರವಾಡದ ಸ್ನೇಕ್ ಎಲ್ಲಪ್ಪ

    ಹಾವಿನ ಮೊಟ್ಟೆಗಳಿಗೆ ಕಾವು ಕೊಟ್ಟು 21 ಮರಿಗಳನ್ನು ಹೊರತೆಗೆದ್ರು ಧಾರವಾಡದ ಸ್ನೇಕ್ ಎಲ್ಲಪ್ಪ

    ಧಾರವಾಡ: ಜಿಲ್ಲೆಯಲ್ಲಿ ಸ್ನೇಕ್ ಎಲ್ಲಪ್ಪ ಎಂಬವರು ಹಾವಿನ ಮೊಟ್ಟೆಗಳಿಗೆ ಕಾವು ಕೊಟ್ಟು 21 ಹಾವಿನ ಮರಿಗಳನ್ನ ತೆಗೆದಿದ್ದಾರೆ.

    ಧಾರವಾಡ ನಗರದ ನೇಕಾರ ಓಣಿಯಲ್ಲಿ ವಾಸವಿರುವ ಸ್ನೇಕ್ ಎಲ್ಲಪ್ಪ, ಹಾವಿನ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಗಳನ್ನ ಹೊರ ತೆಗೆದಿದ್ದಾರೆ. ಕಳೆದ ತಿಂಗಳು ಎಲ್ಲಪ್ಪ ಜಿಲ್ಲೆಯ ಮರೇವಾಡ ಎಂಬ ಗ್ರಾಮದ ಮನೆಯೊಂದಕ್ಕೆ ಬಂದಿದ್ದ ಕೇರೆ ಹಾವನ್ನ ಹಿಡಿದು ತಂದಿದ್ದರು. ಆ ಹಾವಿನ ಹೊಟ್ಟೆಯಲ್ಲಿ 12 ಮೊಟ್ಟೆ ಇರುವುದನ್ನು ಅರಿತ ಅವರು, ಹಾವು ಮೊಟ್ಟೆ ಹಾಕಿದ ಮೇಲೆ ಆ ಹಾವನ್ನ ಕಾಡಿಗೆ ಬಿಟ್ಟು ಬಂದಿದ್ದರು.

    ಇದೇ ರೀತಿ ಇನ್ನೊಂದು ಮನೆಯಲ್ಲಿ ಟ್ರಿನ್ ಕ್ಯಾಟ್ ಹಾವು ಸಿಕ್ಕಿದೆ. ಆ ಹಾವಿನ ಹೊಟ್ಟೆಯಲ್ಲಿ ಕೂಡಾ 9 ಮೊಟ್ಟೆಗಳು ಇದ್ದವು. ಆ ಎರಡು ಹಾವಿನ ಮೊಟ್ಟೆಯನ್ನ 30 ಡಿಗ್ರಿ ಉಷ್ಣಾಂಶ ಮೀರದಂತೆ ಟೆಂಪರೇಚರ್ ಮೈಂಟೇನ್ ಮಾಡಿದ ಎಲ್ಲಪ್ಪ, 21 ಹಾವಿನ ಮರಿಗಳನ್ನ ಮೊಟ್ಟೆಯಿಂದ ಹೊರ ತೆಗೆದಿದ್ದಾರೆ.

    ಈ ಮರಿಗಳನ್ನ ಮತ್ತೆ ಕೆರೆಗೆ ಬಿಟ್ಟಿರುವ ಇವರು, ಇದೇ ರೀತಿ ಹಲವು ಬಾರಿ ಹಾವುಗಳನ್ನ ಹೊಡೆಯದಂತೆ ಜಾಗೃತಿ ಮೂಡಿಸುತ್ತಾರೆ. ಇನ್ನು ಯಾರಾದರೂ ಹಾವು ಇದೆ ಎಂದು ಕರೆದರೆ, ತಕ್ಷಣ ಅವರ ಮನೆಗೆ ಹೋಗಿ ಆ ಹಾವನ್ನ ರಕ್ಷಣೆ ಮಾಡುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶದಲ್ಲೇ ಫಸ್ಟ್, ಗರ್ಭಕೋಶ ಕಸಿಯಿಂದ ಮಗು ಜನನ

    ದೇಶದಲ್ಲೇ ಫಸ್ಟ್, ಗರ್ಭಕೋಶ ಕಸಿಯಿಂದ ಮಗು ಜನನ

    – ಮಗಳಿಗೆ ಗರ್ಭಕೋಶ ದಾನ ನೀಡಿದ ತಾಯಿ

    ಮುಂಬೈ: ದೇಶದಲ್ಲಿ ಮೊದಲ ಬಾರಿಗೆ ಗರ್ಭಕೋಶ ಕಸಿ ವಿಧಾನದ ಮೂಲಕ ಹೆಣ್ಣು ಮಗು ಜನನವಾಗಿದೆ. ಮಹಾರಾಷ್ಟ್ರದ ಪುಣೆ ನಗರದ ಆಸ್ಪತ್ರೆಯಲ್ಲಿ ಗರ್ಭಕೋಶ ಕಸಿ ವಿಧಾನದ ಮೂಲಕ ತಾಯಿ ಹಣ್ಣು ಮಗವನ್ನು ಹೆತ್ತಿದ್ದಾರೆ.

    ಪುಣೆಯ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ 28 ವರ್ಷದ ಮೀನಾಕ್ಷಿ ವಾಲನ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗುಜರಾತ್ ರಾಜ್ಯದ ವಡೋದರ ನಗರದ ಮೀನಾಕ್ಷಿ ಅವರು 2017ರಿಂದಲೂ ಪುಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೀನಾಕ್ಷಿ ಅವರಿಗೆ ಪದೇ ಪದೇ ಗರ್ಭಪಾತ ಆಗುತ್ತಿದ್ದ ಕಾರಣ ಮೇ 2017ರಲ್ಲಿಯೇ ಅವರ ತಾಯಿಯೇ ತಮ್ಮ ಗರ್ಭಕೋಶವನ್ನು ಮಗಳಿಗೆ ದಾನ ಮಾಡಿದ್ದರು.

    ಗರ್ಭಕೋಶ ಕಸಿಯ ಬಳಿಕ ಮೀನಾಕ್ಷಿ ಅವರಿಗೆ ಐವಿಎಫ್ (in-vitro fertilisation) ವಿಧಾನದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ತಾಯಿ ಮತ್ತು ಮಗುವನ್ನು ತೀವ್ರ ನಿಘಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಗರ್ಭಕೋಶದ ಕಸಿ ಮೂಲಕ ಹುಟ್ಟಿದ ಭಾರತದ ಮೊದಲು ಮಗು ಮಾತ್ರವಲ್ಲದೇ, ಏಷ್ಯಾ ಪೆಸಿಫಿಕ್ ವಲಯದ ವ್ಯಾಪ್ತಿಯ ಮೊದಲ ಮಗು ಎನ್ನುವ ಹೆಗಳ್ಳಿಕೆಗೆ ಪಾತ್ರವಾಗಿದೆ.

    ವಿಶ್ವದಲ್ಲಿ ಈವರೆಗೆ ಸ್ವೀಡನ್ ನಲ್ಲಿ 9, ಅಮೆರಿಕದಲ್ಲಿ 2 ಮಕ್ಕಳು ಜನಿಸಿವೆ. 12ನೇ ಮಗು ಭಾರತದ ನಮ್ಮ ಆಸ್ಪತ್ರೆಯಲ್ಲಿ ಜನಿಸಿದೆ ಅಂತಾ ಡಾ.ವರ್ಟಿ ಸಂತೋಷ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಗರಹಾವಿನ ಬಳಿ ಮಗುವನ್ನಿಟ್ಟು ಆಶೀರ್ವಾದಕ್ಕೆ ಮುಂದಾದ ದಂಪತಿ: ಹಾವು ಕಚ್ಚಿ ಮೃತಪಟ್ಟ 5 ತಿಂಗಳ ಕಂದಮ್ಮ

    ನಾಗರಹಾವಿನ ಬಳಿ ಮಗುವನ್ನಿಟ್ಟು ಆಶೀರ್ವಾದಕ್ಕೆ ಮುಂದಾದ ದಂಪತಿ: ಹಾವು ಕಚ್ಚಿ ಮೃತಪಟ್ಟ 5 ತಿಂಗಳ ಕಂದಮ್ಮ

    ಸಾಂದರ್ಭಿಕ ಚಿತ್ರ

    ರಾಯ್ಪುರ: ಜೀವಂತ ನಾಗರಹಾವಿನ ಬಳಿ ಆಶೀರ್ವಾದಕ್ಕೆಂದು ತೆರಳಿ ತಮ್ಮ 5 ತಿಂಗಳ ಕಂದಮ್ಮನನ್ನು ದಂಪತಿ ಕಳೆದುಕೊಂಡ ಘಟನೆ ಛತ್ತೀಸಘಡದ ರಾಜಾನಂದ್‍ಗಾವ್ ಜಿಲ್ಲೆಯಲ್ಲಿ ನಡೆದಿದೆ.

    5 ತಿಂಗಳ ಮಗುವಿನ ಆರೋಗ್ಯದಲ್ಲಿ ಪದೇ ಪದೇ ಏರುಪೇರಾಗುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಹತ್ತಿರದ ಹಾವಾಡಿಗನ ಬಳಿ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಈ ವೇಳೆ ಹಾವಾಡಿಗ ಬಿಲ್ಲು ರಾಮ್ ಮಾರ್ಕಮ್ ನಾಗ ದೇವನ ಆಚರಣೆ ಮಾಡಿದರೆ ನಿಮ್ಮ ಮಗುವಿನ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದ್ದ.

    ಹಾವಾಡಿಗನ ಮಾತಿನಂತೆ ಮಗುವಿನ ಪೋಷರು ನಾಗನಪೂಜೆಯನ್ನು ವಿಧಿವಿಧಾನವಾಗಿ ನೆರವೇರಿಸಿದ್ದಾರೆ. ಪೂಜೆ ವೇಳೆ ಹಾವಾಡಿಗ ತನ್ನ ಬಳಿಯಿದ್ದ ನಾಗರಹಾವಿನ ಬಳಿ ಮಗುವನ್ನು ಇಟ್ಟು ಆಶೀರ್ವಾದ ಪಡೆದುಕೊಳ್ಳುವಂತೆ ಸೂಚಿಸಿದ್ದಾನೆ. ಈತನ ಮಾತನ್ನು ನಂಬಿ ದಂಪತಿ ತಮ್ಮ 5 ತಿಂಗಳ ಮಗುವನ್ನು ನಾಗರಹಾವಿನ ತಲೆ ಬಳಿ ಇಟ್ಟಿದ್ದಾರೆ. ಮಗುವನ್ನು ನೋಡಿದ ಕೂಡಲೇ ನಾಗರಹಾವು ಕಚ್ಚಿದೆ. ಇದರಿಂದ ಗಾಭರಿಗೊಂಡ ಪೋಷಕರು ಹಾವಾಡಿಗನ ಬಳಿ ವಿಚಾರಿಸಿದಾಗ, ಇದು ಹಲ್ಲುಕಿತ್ತ ಹಾವು. ಮಗುವಿಗೆ ಏನು ತೊಂದರೆಯಾಗುವುದಿಲ್ಲವೆಂದು ಹೇಳಿ ಸಮಾಧಾನ ಮಾಡಿದ್ದಾನೆ.

    ಇದಾದ 2 ಗಂಟೆ ಬಳಿಕ ಮಗುವಿನ ಉಸಿರಾಟದಲ್ಲಿ ಏರುಪೇರು ಉಂಟಾಗಿದೆ. ಕೂಡಲೇ ಪೋಷಕರು ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಾಗಲೇ ಮಗುವಿನ ದೇಹಕ್ಕೆ ವಿಷ ಸಂಪೂರ್ಣವಾಗಿ ವ್ಯಾಪಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಮಗು ಕಳೆದುಕೊಂಡ ಸಿಟ್ಟಿನಿಂದ ಪೋಷಕರು ಹಾವಡಿಗ ಬಿಲ್ಲು ರಾಮ್ ಮಾರ್ಕಮ್ ನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆರಿಗೆ ಅಂತ ಬಂದ ತಾಯಿ- ಹೆಣ್ಣು ಮಗುವಾಗಿದ್ದಕ್ಕೆ ಶಿಶುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿ

    ಹೆರಿಗೆ ಅಂತ ಬಂದ ತಾಯಿ- ಹೆಣ್ಣು ಮಗುವಾಗಿದ್ದಕ್ಕೆ ಶಿಶುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿ

    ಕೋಲಾರ: ಹೆರಿಗೆ ಅಂತ ಬಂದ ತಾಯಿ ಹೆರಿಗೆ ನಂತರ ಹೆಣ್ಣು ಮಗುವಾಗಿದ್ದಕ್ಕೆ ನವಜಾತ ಶಿಶುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಸೆಪ್ಟೆಂಬರ್ 22ರಂದು ಕೋಲಾರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ನಕಲಿ ವಿಳಾಸ ನೀಡಿ ಆಸ್ಪತ್ರೆಗೆ ದಾಖಲಾಗಿ ಹೆಣ್ಣು ಶಿಶುವೊಂದಕ್ಕೆ ಜನ್ಮ ನೀಡಿದ್ದ ತಾಯಿಗೆ ಈಗ ಮಗು ಬೇಡವಾಗಿದೆ. ಕೋಲಾರ ತಾಲೂಕಿನ ಆವಣಿ ಬಳಿಯ ನಕಲಿ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನ ನೀಡಿದ್ದು, ಪುಷ್ಪ ಹಾಗೂ ಸುನೀಲ್ ಎಂಬ ಹೆಸರಿನ ದಂಪತಿಗೆ ಸೇರಿದ ಹೆಣ್ಣು ಮಗು ಎನ್ನಲಾಗಿದೆ.

    ಅವಧಿ ಮುನ್ನವೇ ಹುಟ್ಟಿರುವುದರಿಂದ ಮಗು ಕಡಿಮೆ ತೂಕವನ್ನು ಹೊಂದಿದ್ದು ಉಸಿರಾಟದ ತೊಂದರೆಯನ್ನು ಹೊಂದಿದೆ. ಸದ್ಯ ಮಗುವನ್ನು ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಇದೀಗ ಮಗು ಚೇತರಿಕೆ ಕಂಡಿದೆ.

    ಮಗುವನ್ನು ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಮಗುವನ್ನು ದತ್ತು ಪಡೆದುಕೊಳ್ಳಲು ಸಾಕಷ್ಟು ಸಂಘ ಸಂಸ್ಥೆಗಳು ಬರುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿಯಮಾವಳಿಗಳಂತೆ ದತ್ತು ಪಡೆದುಕೊಳ್ಳುವರಿಂದ ಸಹಿಯನ್ನು ಪಡೆದು ನಂತರ ದತ್ತು ನೀಡುವ ಚಿಂತನೆ ನಡೆಯುತ್ತಿದೆ.

    ಸದ್ಯ ಈ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಮಾನ ಪ್ರಯಾಣದ ವೇಳೆ ಉಸಿರಾಟದ ತೊಂದರೆ – 11 ತಿಂಗಳ ಮಗು ಸಾವು

    ವಿಮಾನ ಪ್ರಯಾಣದ ವೇಳೆ ಉಸಿರಾಟದ ತೊಂದರೆ – 11 ತಿಂಗಳ ಮಗು ಸಾವು

    ಹೈದರಾಬಾದ್: ವಿಮಾನ ಪ್ರಯಾಣದ ವೇಳೆ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದ 11 ತಿಂಗಳ ಮಗುವನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಮೃತ್ತಪಟ್ಟ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಅಮೆರಿಕಾದ ಅರ್ನವ್ ವರ್ಮಾ ಅಲ್ಲೂರಿ ಮೃತಪಟ್ಟ ಮಗು. ಅರ್ನವ್ ತನ್ನ ಪೋಷಕರ ಜೊತೆಗೆ ಕತಾರ್ ದೇಶದ ರಾಜಧಾನಿ ದೋಹಾದಿಂದ ಹೈದರಾಬಾದ್‍ಗೆ ಪ್ರಯಾಣ ಬೆಳೆಸಿದ್ದ. ಪ್ರಯಾಣದ ವೇಳೆ ಅರ್ನವ್‍ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಹೈದರಾಬಾದ್ ನಿಲ್ದಾಣಕ್ಕೆ ವಿಮಾನ ಬಂದು ನಿಲ್ಲುತ್ತಿದ್ದಂತೆ ಅರ್ನವ್‍ನನ್ನು ಸಮೀಪದ ಅಪೋಲೋ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದಾರಿ ಮಧ್ಯೆ ಅರ್ನವ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಅರ್ನವ್ ರಾತ್ರಿ 2.29ಕ್ಕೆ ಮೃತಪಟ್ಟಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯ ಬಳಿಕ ವೈದ್ಯರು ತಿಳಿಸಿದ್ದಾರೆ. ನ್ಯೂಜೆರ್ಸಿಯಲ್ಲಿ ಕಳೆದ ವರ್ಷದ ಅಕ್ಟೋಬರ್‍ನಲ್ಲಿ ಅರ್ನವ್ ಜನಿಸಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ತಿನ್ತಾ ಇರೋವಾಗ ಡ್ಯಾಡಿ ಕಾದ ಕಬ್ಬಿಣದ ಸೌಟಿನಿಂದ ಹೊಡೆದ್ರು- 4ರ ಹೆಣ್ಣು ಮಗು ಕಣ್ಣೀರು!

    ತಿನ್ತಾ ಇರೋವಾಗ ಡ್ಯಾಡಿ ಕಾದ ಕಬ್ಬಿಣದ ಸೌಟಿನಿಂದ ಹೊಡೆದ್ರು- 4ರ ಹೆಣ್ಣು ಮಗು ಕಣ್ಣೀರು!

    ಹೈದರಾಬಾದ್: ತಾಯಿ ಹಾಗೂ ಆಕೆಯ ಲವ್ವರ್ ಸೇರಿಕೊಂಡು 4 ವರ್ಷದ ಪುಟ್ಟ ಕಂದಮ್ಮನಿಗೆ ಬಿಸಿಯಾದ ಕಬ್ಬಿಣದ ಸೌಟಿನಿಂದ ಹೊಡೆದು ಗಾಯಗೊಳಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

    ಘಟನೆಯ ಬಳಿಕ ಇದೀಗ ಕಂದಮ್ಮನನ್ನು ಎನ್‍ಜಿಒ ಕಾರ್ಯಕರ್ತರು ರಕ್ಷಿಸಿದ್ದಾರೆ. ಬಳಿಕ ಪುಟ್ಟ ಕಂದಮ್ಮ ನಡೆದ ಘಟನೆಯನ್ನು ವಿವರಿಸಿದ್ದಾಳೆ. `ನಾನು ತಿನ್ನುತ್ತಾ ಇರೋವಾಗ ಡ್ಯಾಡಿ ಬಂದು ನಂಗೆ ಹೊಡೆದ್ರು. ಅಲ್ಲದೇ ನಂತರ ಕಾದ ಕಬ್ಬಿಣದ ಸೌಟಿನಿಂದ ನನ್ನ ಹಿಂಬದಿಗೆ ಒತ್ತಿ ಇಟ್ಟರು. ಅಲ್ಲದೇ ಅಮ್ಮನೂ ಚುಚ್ಚಿದ್ದಾಳೆ ಅಂತ ಜೋರಾಗಿ ಅಳುತ್ತಾ ಕಾರ್ಯಕರ್ತರಲ್ಲಿ ತನ್ನ ದುಃಖ ತೋಡಿಕೊಂಡಿದ್ದಾಳೆ.

    ತಂದೆಯ ಕೃತ್ಯದಿಂದ ಕಂದಮ್ಮ ಜೋರಾಗಿ ಕಿರುಚಾಡಿಕೊಂಡಿದ್ದನ್ನು ಕೇಳಿದ ಸ್ಥಳೀಯರು ಕೂಡಲೇ ಸ್ಥಳೀಯ ರಾಜಕಾರಣಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಅವರು ತಕ್ಷಣವೇ ಎನ್‍ಜಿಓಗೆ ಮಾಹಿತಿ ರವಾನಿಸಿದ್ದು, ಸದ್ಯ ಹೆಣ್ಣು ಮಗುವನ್ನು ರಕ್ಷಿಸಲಾಗಿದೆ ಅಂತ ಕಾರ್ಯಕರ್ತ ಅಚ್ಯುತ್ ರಾವ್ ತಿಳಿಸಿದ್ದಾರೆ. ಸದ್ಯ ಘಟನೆ ಸಂಬಂಧ ತಾಯಿ ಹಾಗೂ ಆಕೆಯ ಲವ್ವರ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

    ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದಾಗ, 25 ವರ್ಷದ ತಾಯಿ ಈಗಾಗಲೇ ಗಂಡನನ್ನು ತೊರೆದು ಲವ್ವರ್ ಜೊತೆ ವಾಸವಾಗಿದ್ದಾಳೆ. ಆದ್ರೆ ಇತ್ತೀಚೆಗೆ ಇವರಿಬ್ಬರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಹೀಗಾಗಿ ತಮ್ಮ ಮೇಲಿನ ಸಿಟ್ಟನ್ನು ಮಗುವಿನ ಮೇಲೆ ತೋರಿರುವುದಾಗಿ ಬಾಯ್ಬಿಟ್ಟಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸುಣ್ಣದ ಡಬ್ಬಿ ನುಂಗಿ 9 ತಿಂಗಳ ಮಗು ಸಾವು

    ಸುಣ್ಣದ ಡಬ್ಬಿ ನುಂಗಿ 9 ತಿಂಗಳ ಮಗು ಸಾವು

    ವಿಜಯಪುರ: ಸುಣ್ಣದ ಡಬ್ಬಿಯನ್ನು ನುಂಗಿ ಒಂಭತ್ತು ತಿಂಗಳ ಮಗು ಮೃತಪಟ್ಟಿರುವ ಕರುಣಾಜನಕ ಘಟನೆ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ನಡೆದಿದೆ.

    ತಿಕೋಟ ಪಟ್ಟಣದ ನಿವಾಸಿ ವಿಶ್ವನಾಥ ತಾಳಿಕೋಟಿ ಎಂಬವರ ಒಂಭತ್ತು ತಿಂಗಳ ಮಗು ಮೃತಪಟ್ಟಿದೆ. ಮಗು ಮನೆಯಲ್ಲಿ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಸುಣ್ಣದ ಡಬ್ಬಿಯನ್ನು ನುಂಗಿದೆ. ಇದನ್ನು ಗಮನಿಸಿದ ಪೋಷಕರು ಮಗುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು.

    ಕೂಡಲೇ ಚಿಕಿತ್ಸೆ ನೀಡಿದ ವೈದ್ಯರು ಸುಣ್ಣದ ಡಬ್ಬಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು, ಆದರೆ ಸುಣ್ಣದ ಡಬ್ಬಿಯಲ್ಲಿದ್ದ ಸುಣ್ಣವು ಮಗುವಿನ ದೇಹವನ್ನು ಸೇರಿದ್ದರಿಂದ ಮಗು ಮೃತಪಟ್ಟಿತ್ತು. ಘಟನೆ ಸಂಬಂಧ ತಿಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಾವ ಮಗು ಬೇಕು ಎಂಬುದನ್ನು ರಿವೀಲ್ ಮಾಡಿದ್ರು ರಾಕಿಂಗ್ ಸ್ಟಾರ್!

    ಯಾವ ಮಗು ಬೇಕು ಎಂಬುದನ್ನು ರಿವೀಲ್ ಮಾಡಿದ್ರು ರಾಕಿಂಗ್ ಸ್ಟಾರ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್‍ಗೆ ಜನಿಸಲಿರುವ ಮಗುವಿನ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯೇ ಆಗುತ್ತಿದೆ. ಅಭಿಮಾನಿಗಳಂತೂ ಮರಿ ಬಾಸ್ ಎಂದೇ ನಾಮಕರಣ ಮಾಡಿಬಿಟ್ಟಿದ್ದಾರೆ. ಆದರೆ ಯಶ್ ತಮಗೆ ಹೆಣ್ಣು ಮಗು ಬೇಕು ಎಂದು ರಿವೀಲ್ ಮಾಡಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಯಶ್, ನಮ್ಮ ಮನೆಯಲ್ಲಿ ಎಲ್ಲ ಗಂಡು ಮಕ್ಕಳು ಇರೋದು. ನನ್ನ ತಂಗಿಗೂ ಗಂಡು ಮಗು ಇದೆ. ಆದ್ದರಿಂದ ನನಗೆ ಹೆಣ್ಣು ಮಗು ಬೇಕು ಎಂದು ತಮ್ಮ ಮನದ ಆಸೆಯನ್ನು ಬಿಚ್ಚಿಟ್ಟಿದ್ದಾರೆ.

    ಈ ಸಮಯದಲ್ಲಿ ಎಲ್ಲರೂ ಸಾಮಾನ್ಯವಾಗಿ ಜಾಗರೂಕತೆಯಿಂದ ಇರುತ್ತಾರೆ. ಸಾಮಾನ್ಯವಾಗಿ ಹೆಣ್ಣು ಗರ್ಭಿಣಿಯಾಗಿರುವಾಗ ನೂರಾರು ಕನಸುಗಳನ್ನ ಕಾಣುತ್ತಾರೆ. ಆ ಎಲ್ಲಾ ಬಯಕೆಗಳನ್ನ ಈಡೇರಿಸುವುದು ಗಂಡನ ಕರ್ತವ್ಯವಾಗಿರುತ್ತದೆ. ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಕಾಲು ನೋವು, ಬೆನ್ನು ನೋವು ಬರುತ್ತವೆ. ಅವರಿಗೆ ನೋವು ಬಂದಾಗ ಕಾಲು ಒತ್ತಬೇಕು, ಇವೆಲ್ಲವನ್ನು ಗಂಡನಾಗಿ ಮಾಡಬೇಕು ಅದು ಅವನ ಜವಾಬ್ದಾರಿ ಜೊತೆಗೆ ಖುಷಿಯಾಗಿ ಮಾಡಬೇಕು. ಈ ವೇಳೆ ನನಗೆ ಹೆಣ್ಣು ಮಗು ಬೇಕು. ನಮ್ಮ ಮನೆಯಲ್ಲಿ ಎಲ್ಲ ಗಂಡು ಮಕ್ಕಳು ಇರೋದು. ನನ್ನ ತಂಗಿಗೂ ಗಂಡು ಮಗು ಇದೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಆ.12 ಮುಖ್ಯವಾದ ದಿನ – ರಾಧಿಕಾ ಅವರಿಂದ ಮೊದಲ ಗರ್ಭಿಣಿ ಫೋಟೋ ಶೇರ್

    ಯಶ್ ಗಡ್ಡಕ್ಕೆ ಕತ್ತರಿ ಹಾಕಿಸಿಕೊಳ್ಳಬೇಕು ಅನ್ನೋದು ರಾಧಿಕಾ ಅವರ ಮಹದಾಸೆಯಾಗಿತ್ತು. ಆದ್ದರಿಂದ ಇತ್ತೀಚೆಗಷ್ಟೆ ಕೆಜಿಎಫ್ ಶೂಟಿಂಗ್ ಮುಗಿಯುತ್ತಿದ್ದಂತೆ ಗಡ್ಡವನ್ನು ಕತ್ತರಿಸಿಕೊಂಡಿದ್ದಾರೆ. ರಾಧಿಕಾ ಅವರಿಗೆ ಏಳು ತಿಂಗಳು ತುಂಬಿದ ಮೇಲೆ ಸೀಮಂತ ಕಾರ್ಯಕ್ರಮವನ್ನೂ ಮಾಡಲಿದ್ದಾರೆ.

    ಇತ್ತೀಚೆಗೆ ಯಶ್ ಮತ್ತು ರಾಧಿಕಾ `ಮೈ ನೇಮ್ ಇಸ್ ಕಿರಾತಕ’ ಸಿನಿಮಾ ಶೂಟಿಂಗ್ ಗಾಗಿ ದುಬೈಗೆ ಹೋಗಿದ್ದರು. ರಾಧಿಕಾ ಅವರು ದುಬೈಗೆ ಹೋಗಬೇಕು ಎಂದ ತಕ್ಷಣ ಯಶ್ ಫ್ಲೈಟ್ ಟಿಕೆಟ್‍ನ ಬುಕ್ ಮಾಡಿದ್ದರು. ಬಳಿಕ ಡಾಕ್ಟರ್ ಪರ್ಮಿಷನ್ ಕೊಟ್ಟ ತಕ್ಷಣ ದುಬೈ ಹೋಗಿ ಅಲ್ಲಿನ ಸುಂದರ ತಾಣಗಳನ್ನು ನೋಡಿ ಬಂದಿದ್ದಾರೆ. ಇದನ್ನೂ ಓದಿ: ಎರಡು ವರ್ಷಗಳ ಕಾಲ ಜೊತೆಗಿದ್ದಿದ್ದನ್ನು ಕಳೆದುಕೊಂಡ ಯಶ್- ವಿಡಿಯೋ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರಿನಲ್ಲಿ 5ರ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನ!

    ಬೆಂಗ್ಳೂರಿನಲ್ಲಿ 5ರ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನ!

    ಬೆಂಗಳೂರು: ಐದು ವರ್ಷದ ಹೆಣ್ಣು ಮಗುವಿನ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

    ಬೆಂಗಳೂರಿನ ಕಮಲಾನಗರದಲ್ಲಿ ಈ ಘಟನೆ ನಡೆದಿದ್ದು, ಭಾಸ್ಕರ್ ಎಂಬಾತ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಗು ಟಿವಿ ನೋಡೋಕೆ ಬಂದಿದ್ದ ಸಂದರ್ಭದಲ್ಲಿ ಭಾಸ್ಕರ್ ಆಕೆಯನ್ನು ರೇಪ್ ಮಾಡಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

    ಆರೋಪಿ ಭಾಸ್ಕರ್ ಕಟ್ಟಿಂಗ್ ಶಾಪ್ ನಡೆಸ್ತಿದ್ದಾನೆ. ಈತ ಟಿವಿ ನೋಡೀಕೆ ಮಗು ಬಂದಾಗ ಚಾಕಲೇಟ್ ನೀಡೋದಾಗಿ ಹೇಳಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಘಟನೆಯನ್ನರಿತ ಕೂಡಲೇ ಬಸವೇಶ್ವರ ನಗರ ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.

    ಸದ್ಯ ಆರೋಪಿ ಭಾಸ್ಕರ್ ನನ್ನು ಪೋಕ್ಸೋ ಕೇಸ್ ನಡಿ ಬಂಧಿಸಲಾಗಿದ್ದು, ವಿಚಾರಣೆ ನಡೆಸಿದ್ದಾರೆ.

    ಏನಿದು ಪೋಕ್ಸೋ ಕಾಯ್ದೆ?
    ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ ಮತ್ತು ನಿಯಮಗಳು(ಪೋಕ್ಸೋ) ಜಾರಿಗೆ ತರಲಾಗಿದೆ. ಪೋಕ್ಸೋ ಪ್ರಕಾರ 18 ವರ್ಷದೊಳಗಿನವರನ್ನು ಮಗು ಎಂದು ಪರಿಗಣಿಸಲಾಗುತ್ತದೆ.  ಅತ್ಯಾಚಾರ, ಗುಪ್ತಾಂಗ ಮುಟ್ಟುವುದು, ಲೈಂಗಿಕತೆಗೆ ಪ್ರಚೋದಿಸುವುದು,ಅಶ್ಲೀಲ ಚಿತ್ರಗಳ ಬಳಕೆ, ಮಗುವಿನ ಅಶ್ಲೀಲ ಚಿತ್ರ ಸಂಗ್ರಹಿಸಿದರೆ ಅದು ಈ ಕಾಯ್ದೆಯ ಪ್ರಕರ ಅಪರಾಧ ಎಂದು ಪರಿಗಣಿಸಲ್ಪಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಕೋತಿ ದಾಳಿಯಿಂದ 5ರ ಕಂದಮ್ಮ ಗಂಭೀರ!

    ಕೋತಿ ದಾಳಿಯಿಂದ 5ರ ಕಂದಮ್ಮ ಗಂಭೀರ!

    ಕೋಲಾರ: ಕೋತಿಯೊಂದು ದಾಳಿ ಮಾಡಿದ ಪರಿಣಾಮ 5 ವರ್ಷದ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ವೇಮಗಲ್ ಸಮೀಪದ ಕಲ್ವಮಂಜಲಿ ಗ್ರಾಮದಲ್ಲಿ ಈ ಗಟನೆ ನಡೆದಿದ್ದು, ನಿಶಾಂತ್ (5) ಗಂಭೀರವಾಗಿ ಗಾಯಗೊಂಡ ಪುಟಾಣಿ. ನಿಶಾಂತ್ ಅಂಗಡಿಯಿಂದ ತಿಂಡಿ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕೋತಿ ಏಕಾಏಕಿ ಆತನ ಮೇಲೆ ದಾಳಿ ನಡೆಸಿದೆ.

    ಘಟನೆಯಿಂದ ಗಂಭೀರ ಗಾಯಗೊಂಡ ನಿಶಾಂತ್ ನನ್ನು ಕೂಡಲೇ ಗ್ರಾಮಸ್ಥರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ.

    ವೇಮಗಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv