Tag: Baby

  • ಮಂಡ್ಯದಲ್ಲಿ ನಾಮಕರಣಕ್ಕೆ ಮೊದಲೇ ಗಂಡು ಮಗು ದುರ್ಮರಣ

    ಮಂಡ್ಯದಲ್ಲಿ ನಾಮಕರಣಕ್ಕೆ ಮೊದಲೇ ಗಂಡು ಮಗು ದುರ್ಮರಣ

    ಮಂಡ್ಯ: ಪೆಂಟಾವಲೆಂಟ್ ಚುಚ್ಚುಮದ್ದು ನೀಡಿದ ನಂತರ ಮಗು ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಜ್ಯೋತಿ ಮತ್ತು ಸ್ವಾಮಿ ದಂಪತಿಯ ಒಂದೂವರೆ ತಿಂಗಳ ಗಂಡು ಮಗುವಿಗೆ ಗುರುವಾರ ಕಾಡುಕೊತ್ತನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚುಮದ್ದು ಕೊಡಿಸಲಾಗಿತ್ತು. ಚುಚ್ಚುಮದ್ದು ಕೊಡಿಸಿದ ನಂತರ ಅಸ್ವಸ್ಥಗೊಂಡಿದ್ದ ಮಗು ಶುಕ್ರವಾರ ಬೆಳಗ್ಗೆ ಮೃತಪಟ್ಟಿದೆ ಅಂತ ಪೋಷಕರು ಆರೋಪಿಸಿದ್ದಾರೆ.

    ಪೋಷಕರಿಗೆ ಎರಡು ಹೆಣ್ಣು, ಒಂದು ಗಂಡು ಮಗುವಿತ್ತು. ಇದೇ ಭಾನುವಾರ ಮೃತ ಮಗುವಿನ ನಾಮಕರಣ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಮಗುವನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಮಗು ಸಾವಿಗೆ ತನಿಖೆ ನಡೆಸುವಂತೆ ಪೋಷಕರು ಒತ್ತಾಯಿಸುತ್ತಿದ್ದಾರೆ. ಆದ್ರೆ ಮಗು ಸಾವಿಗೂ ಚುಚ್ಚುಮದ್ದಿಗೂ ಸಂಬಂಧವಿಲ್ಲ ಅಂತ ಡಿಎಚ್‍ಒ ನಾಗರಾಜ್ ತಿಳಿಸಿದ್ದಾರೆ.

    ಮಗು ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ವರದಿ ನೀಡುವಂತೆ ಪೋಷಕರು ಆಗ್ರಹಿಸುತ್ತಿದ್ದಾರೆ. ಈ ಹಿಂದೆಯೂ ಪೆಂಟವಲೆಂಟ್ ಚುಚ್ಚುಮದ್ದು ಪಡೆದ ನಂತರ ಮಂಡ್ಯದ ಚಿಂದಗಿರಿದೊಡ್ಡಿಯಲ್ಲಿ ಎರಡು ಮಕ್ಕಳು ಮೃತಪಟ್ಟಿದ್ದವು. ತನಿಖೆ ನಂತರ ಚುಚ್ಚುಮದ್ದಿಗೂ ಮಕ್ಕಳ ಸಾವಿಗೂ ಸಂಬಂಧವಿಲ್ಲ ಎಂಬ ವರದಿ ಬಂದಿತ್ತು.

    ಪೆಂಟಾವಲೆಂಟ್ ನೀಡುವುದೇಕೆ?:
    ಹುಟ್ಟಿದ ಪ್ರತಿಯೊಂದು ಮಗುವಿಗೂ ಒಂದೂವರೆ, ಎರಡೂವರೆ, ಮೂರೂವರೆ ತಿಂಗಳಲ್ಲಿ ಕಡ್ಡಾಯವಾಗಿ ಪೆಂಟಾವಲೆಂಟ್ ಚುಚ್ಚುಮದ್ದು ನೀಡಲಾಗುತ್ತದೆ. ಇದು ನಾಯಿ ಕೆಮ್ಮು, ಗಂಟಲು ಮಾರಿ, ಧನುರ್ವಾಯು, ಹೆಪಟೈಟೀಸ್ ಬಿ, ಇನ್‍ಫ್ಲುಯೆಂಜಾ ಮೊದಲಾದ ಕಾಯಿಲೆಗಳನ್ನು ಹೋಗಲಾಡಿಸುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗರ್ಭಿಣಿಯರಿಗೆ ಸಿಸೇರಿಯನ್ ಹೆರಿಗೆ ಯಾಕೆ ಮಾಡ್ತಾರೆ? ಕಾರಣಗಳೇನು?

    ಗರ್ಭಿಣಿಯರಿಗೆ ಸಿಸೇರಿಯನ್ ಹೆರಿಗೆ ಯಾಕೆ ಮಾಡ್ತಾರೆ? ಕಾರಣಗಳೇನು?

    ಬೆಂಗಳೂರು: ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರು ಇಂದು ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಾಧಿಕಾ ಅವರಿಗೆ ಸಿಸೇರಿಯನ್ ಮಾಡುವ ಮೂಲಕ ಮಗುವನ್ನು ಹೊರತೆಗೆಯಲಾಗಿದೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ.

    ಸಿಸೇರಿಯನ್ ಯಾಕೆ?:
    ತನ್ನ ಜೀವದೊಂದಿಗೆ ಇನ್ನೊಂದು ಜೀವವನ್ನು ಜೋಪಾನ ಮಾಡಿಟ್ಟುಕೊಂಡು ಜಗತ್ತಿಗೆ ಪರಿಚಯಿಸುವ ಶಕ್ತಿ ಹೆಣ್ಣಿಗೆ ವರದಾನವಾಗಿದೆ. ಒಂಬತ್ತು ತಿಂಗಳು ತಾಯಿಯ ಜೀವದಲ್ಲಿ ಬೆರೆತು ಸೂಕ್ತ ಸಮಯದ ನಂತರ ಹೊರಬರುವ ನೈಸರ್ಗಿಕ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿರುತ್ತದೆ. ಕೆಲವೊಮ್ಮೆ ಪ್ರಸವದ ಸಂದರ್ಭದಲ್ಲಿ ಉಂಟಾಗುವ ವ್ಯತ್ಯಾಸ ಅಥವಾ ಅವಘಡದಿಂದಾಗಿ ತಾಯಿ ಮತ್ತು ಮಗು ಇಬ್ಬರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಕೆಲ ಗಂಟೆ ತಾಯಿ ಅನುಭವಿಸುವ ಪ್ರಸವದ ನೋವು ಜೀವನದ ಒಂದು ಅವಿಸ್ಮರಣೀಯ ಅನುಭವವಾಗುತ್ತದೆ. ಅಲ್ಲದೇ ಸಾರ್ಥಕತೆಯ ಭಾವನೆ ಮೂಡುತ್ತದೆ. ಆದರೆ ಇತ್ತೀಚೆಗೆ ಪ್ರಸವ ನೋವು ಅನುಭವಿಸಲು ಮಹಿಳೆಯರು ಹಿಂಜರಿಯುತ್ತಿದ್ದು, ಪರಿಣಾಮ ಸಿಸೇರಿಯನ್ ಕಡೆ ಮುಖಮಾಡುತ್ತಾರೆ.


    ಹೆರಿಗೆ ನೋವು ಇರಲ್ಲ:
    ಹೆರಿಗೆ ಎನ್ನುವುದು ಮಹಿಳೆಯ ಜೀವನದ ಪ್ರಧಾನ ಘಟ್ಟವಾಗಿರುತ್ತದೆ. ತನ್ನ ಜೀವದೊಂದಿಗೆ ಮತ್ತೊಂದು ಜೀವವನ್ನು ಹೊರಜಗತ್ತಿಗೆ ಪರಿಚಯಿಸುವ ಶುಭಸಂದರ್ಭದಲ್ಲಿ ನಾರ್ಮಲ್ ಇರಲಿ, ಸಿಸೇರಿಯನ್ ಇರಲಿ ನೋವು ಇದ್ದೇ ಇರುತ್ತದೆ. ಸಿಸೇರಿಯನ್(ಶಸ್ತ್ರಚಿಕಿತ್ಸೆ) ಮಾಡುವ ಸಂದರ್ಭದಲ್ಲಿ ನೋವು ಅನುಭವಕ್ಕೆ ಬಾರದಿದ್ದರೂ ಅನಸ್ತೇಷಿಯಾದ ಪವರ್ ಕಡಿಮೆಯಾದ ಮೇಲೆ ನೋವು ಅನುಭವಕ್ಕೆ ಬರುತ್ತದೆ.

    ಸಿಸೇರಿಯನ್‍ಗೆ ಕಾರಣಗಳೇನು?
    ಮಗು ದಪ್ಪ ಅಥವಾ ತೂಕ ಇದ್ದರೆ ಸಾಮಾನ್ಯ ಹೆರಿಗೆ ಕಷ್ಟವಾಗುತ್ತದೆ. ಅಲ್ಲದೇ ಗರ್ಭದಲ್ಲಿ ಮಗು ತಲೆ ಕೆಳಗಾಗಿದ್ದರೆ ಅಥವಾ ಇನ್ನಿತರ ಸ್ಥಿತಿಗಳಲ್ಲಿದ್ದರೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ಈ ಸಂದರ್ಭದಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಮಗುವನ್ನು ಹೊರ ತೆಗೆಯುವಂತೆ ಸೂಚನೆ ನೀಡುತ್ತಾರೆ.

    ಇಷ್ಟು ಮಾತ್ರವಲ್ಲದೇ ಗರ್ಭಿಣಿ ತೂಕದಲ್ಲಿ ಕಡಿಮೆಯಾದಾಗಲು ನಾರ್ಮಲ್ ಹೆರಿಗೆ ಕಷ್ಟವಾಗುತ್ತದೆ. 7-8 ತಿಂಗಳಲ್ಲಿ ಗರ್ಭದಲ್ಲಿ ಸಮಸ್ಯೆಯಾದಲ್ಲಿ ಮಗು ಹೊರ ತೆಗೆಯುವುದು ಅನಿವಾರ್ಯವಾಗುತ್ತದೆ. ಈ ವೇಳೆಯೂ ಶಸ್ತ್ರಚಿಕಿತ್ಸೆ ಆಯ್ದುಕೊಳ್ಳುತ್ತಾರೆ. ಪ್ರಸ್ತುತ ದಂಪತಿ ಒಂದು ಮಗು ಪಡೆದರೆ ಹೆಚ್ಚು ಅನ್ನೋ ಸಂದರ್ಭ ಬಂದಾಗ ಗರ್ಭಿಣಿಯರಲ್ಲಿ ನೋವು ತಡೆದುಕೊಳ್ಳುವ ಶಕ್ತಿ ಕೊಂಚ ಕಡಿಮೆ ಇರುತ್ತದೆ. ಹೀಗಾಗಿ ಕುಟುಂಬದವರೇ ಶಸ್ತ್ರಚಿಕಿತ್ಸೆ ಮಾಡುವಂತೆ ತಿಳಿಸುತ್ತಾರೆ.

    ಕನಿಷ್ಠ 3 ತಿಂಗ್ಳು ವಿಶ್ರಾಂತಿ:
    ಸಿಸೇರಿಯನ್ ಬಳಿಕ ಕಡಿಮೆಯೆಂದ್ರೂ 3 ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ಆಹಾರದ ಬಗ್ಗೆ ಎಚ್ಚರವಹಿಸಬೇಕು. ದೇಹದ ಮೂಳೆಗಳನ್ನು ಗಟ್ಟಿಗೊಳೀಸುವಂತಹ ಆಹಾರಗಳನ್ನು ಸೇವಿಸಿಬೇಕು. ಜೊತೆಗೆ ಹೆಚ್ಚು ಕೆಲಸ ಮಾಡಬಾರದು. ತುಂಬಾ ಭಾರ ಎತ್ತಬಾರದು. ಯಾಕಂದ್ರೆ ಆಪರೇಷನ್ ಬಳಿಕ ಸರಿಯಾಗಿ ಆರೈಕೆ ಮಾಡದಿದ್ದರೆ ದೇಹಕ್ಕೆ ತೊಂದರೆ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ಆಪರೇಷನ್ ಬಳಿಕ ಸಿ ಸೆಕ್ಷನ್ ಅನ್ನೋ ಬೆಲ್ಟ್ ಧರಿಸುವುದು ಉತ್ತಮ. ಇದರಿಂದ ಸೊಂಟ ನೋವು ತಡೆಗಟ್ಟಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಡಿದ ಮತ್ತಿನಲ್ಲೇ ಶಸ್ತ್ರಚಿಕಿತ್ಸೆ- ವೈದ್ಯನ ಎಡವಟ್ಟಿಗೆ ತಾಯಿ, ಮಗು ಬಲಿ

    ಕುಡಿದ ಮತ್ತಿನಲ್ಲೇ ಶಸ್ತ್ರಚಿಕಿತ್ಸೆ- ವೈದ್ಯನ ಎಡವಟ್ಟಿಗೆ ತಾಯಿ, ಮಗು ಬಲಿ

    ಗಾಂಧಿನಗರ: ಕುಡಿತ ಮತ್ತಿನಲ್ಲೇ ವೈದ್ಯನೊಬ್ಬ ಶಸ್ತ್ರಚಿಕಿತ್ಸೆ ಮಾಡಿದ ಪರಿಣಾಮ ಬಾಣಂತಿ ಹಾಗೂ ಮಗು ಸಾವನ್ನಪ್ಪಿರುವ ಘಟನೆ ಗುಜರಾತ್ ರಾಜ್ಯದ ರಾಜ್‍ಕೋಟ್ ಜಿಲ್ಲೆಯಲ್ಲಿ ನಡೆದಿದೆ.

    ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿ ತಾಯಿ ಹಾಗೂ ಮಗುವಿನ ಸಾವಿಗೆ ಕಾರಣವಾಗಿದ್ದ ಸೋನಾವಾಲಾ ಆಸ್ಪತ್ರೆಯ ಆರ್‍ಎಂಓ(ರೆಸಿಡೆಂಟ್ ಮೆಡಿಕಲ್ ಆಫೀಸರ್) ಡಾ.ಪರೇಶ್ ಲಖಾನಿ (50)ಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ವೈದ್ಯ ಕಳೆದ 15 ವರ್ಷಗಳಿಂದ ಸೋನಾವಾಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದನು. ಸದ್ಯ ತನಿಖೆಯನ್ನು ಆರಂಭಿಸಿರುವ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿ ಬಳಿಕ ತಾಯಿ-ಮಗು ವೈದ್ಯಕೀಯ ಕಾರಣಕ್ಕೆ ಮೃತ ಪಟ್ಟಿದ್ದಾರಾ ಅಥವಾ ವೈದ್ಯನ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆಂಬುದು ಸಾಬೀತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

    ಏನಿದು ಘಟನೆ?
    ಸೋಮವಾರ ಸಂಜೆ ಹೆರಿಗೆ ನೋವಿನಿಂದ ಬಳಲುತ್ತಿದ್ದ 22 ವರ್ಷದ ಮಹಿಳೆಯನ್ನು ರಾಜ್‍ಕೋಟ್ ನ ಸೋನಾವಾಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗರ್ಭಿಣಿಯ ಪರಿಸ್ಥಿತಿಯನ್ನು ಅರಿತ ಡಾ. ಲಖಾನಿ ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದ್ದನು. ನಂತರ ಸಿಸೇರಿಯನ್ ಮಾಡಿ ಮಗುವನ್ನು ಹೊರತೆಗೆಯಲಾಯಿತು.

    ಮಗು ಹುಟ್ಟುವಾಗಲೇ ಸಾವನ್ನಪ್ಪಿತ್ತು. ಇತ್ತ ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಗೆ ವಿಪರೀತ ರಕ್ತಸ್ರಾವವಾಗುತ್ತಿತ್ತು. ಇದನ್ನು ಗಮನಿಸಿದ ಕುಟುಂಬಸ್ಥರು ಆಕೆಯನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಯತ್ನಿಸಿದ್ದರು. ಆದರೆ ಮಾರ್ಗಮಧ್ಯೆಯೇ ಮಹಿಳೆ ಮೃತಪಟ್ಟಿದ್ದಾರೆ.

    ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯ ಕುಡಿದ ಅಮಲಿನಲ್ಲಿದ್ದು, ಆತನ ನಿರ್ಲಕ್ಷ್ಯದಿಂದಲೇ ತಾಯಿ-ಮಗು ಸಾವನ್ನಪ್ಪಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಸಿ ಬಿಸಿ ಗುಲಾಬ್ ಜಾಮೂನ್ ಪಾತ್ರೆಗೆ ಬಿದ್ದು ಮಗು ಸಾವು

    ಬಿಸಿ ಬಿಸಿ ಗುಲಾಬ್ ಜಾಮೂನ್ ಪಾತ್ರೆಗೆ ಬಿದ್ದು ಮಗು ಸಾವು

    ಮುಂಬೈ: ಗುಲಾಬ್ ಜಾಮೂನ್ ತಯಾರಿಸಿಟ್ಟಿದ್ದ ಪಾತ್ರೆಗೆ ಮಗು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಎರಡು ವರ್ಷದ ರಾಜವೀರ್ ನಿತಿನ್ ಮೇಘವಾಲೆ ಗುಲಾಬ್ ಜಾಮೂನು ಪಾತ್ರೆಯಲ್ಲಿ ಬಿದ್ದು ಮೃತಪಟ್ಟ ಮಗುವಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಮನೆಯವರು ಮಹಾಪ್ರಸಾದವಾಗಿ ಗುಲಾಬ್ ಜಾಮೂನುಗಳನ್ನು ಸಿದ್ಧಪಡಿಸಿ, ದೊಡ್ಡದಾದ ಪಾತ್ರೆಯಲ್ಲಿ ಸಂಗ್ರಹಿಸಿದ್ದರು.

    ಇದರ ಅರಿವಿಲ್ಲದ ರಾಜವೀರ್ ಆಟವಾಡುತ್ತಾ ಹೋಗಿ ಬಿಸಿ ಜಾಮೂನು ಪಾತ್ರೆಯಲ್ಲಿ ಬಿದ್ದಿದ್ದಾನೆ. ತಕ್ಷಣಕ್ಕೆ ಮಗುವನ್ನು ಯಾರೂ ಗಮನಿಸಿರಲಿಲ್ಲ. ಮಗು ಕಿರುಚಾಡಿದ್ದನ್ನು ಕೇಳಿ, ಪೋಷಕರು ಮಗುವನ್ನು ಪಾತ್ರೆಯಿಂದ ಎತ್ತಿದ್ದಾರೆ. ಆದರೆ ಬಿಸಿ ಜಾಮೂನಿನಲ್ಲಿ ಬಿದ್ದಿದ್ದರಿಂದ ಮಗುವಿಗೆ ತೀವ್ರವಾದ ಸುಟ್ಟಗಾಯಗಳಾಗಿದ್ದವು. ಕೂಡಲೇ ಪೋಷಕರು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾಜವೀರ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೆಂಟಿಲೇಟರ್ ಸಮಸ್ಯೆಯಿಂದಾಗಿ 29 ದಿನದ ಹಸುಗೂಸು ಸಾವು

    ವೆಂಟಿಲೇಟರ್ ಸಮಸ್ಯೆಯಿಂದಾಗಿ 29 ದಿನದ ಹಸುಗೂಸು ಸಾವು

    ಮಂಡ್ಯ: ವೆಂಟಿಲೇಟರ್ ಸಮಸ್ಯೆಯಿಂದಾಗಿ 29 ದಿನದ ಹಸುಗೂಸು ಮೃತಪಟ್ಟ ಘಟನೆ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದ ಶಶಿಕುಮಾರ್ ಮತ್ತು ಶೃತಿ ದಂಪತಿಯ ಗಂಡು ಮಗು ಮೃತಪಟ್ಟಿದೆ. ಗುರುವಾರ ಬೆಳಗ್ಗೆ ಮಗುವಿಗೆ ಉಸಿರಾಟ ಸಮಸ್ಯೆ ಕಂಡುಬಂದಿತ್ತು. ಕೂಡಲೇ ಪೋಷಕರು ಮಗುವನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆ ಇದ್ದರಿಂದ ಮಗುವನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು.

    ವೈದ್ಯರು ನಿರಾಕರಿಸುತ್ತಿದ್ದಂತೆ ಮಗುವನ್ನು ಆ್ಯಂಬುಲೆನ್ಸ್ ಮುಖಾಂತರ ಮೈಸೂರು ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಈಗಾಗಲೇ ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    ಮಿಮ್ಸ್ ಆಸ್ಪತ್ರೆಯ ವೈದ್ಯರು ಮಗುವನ್ನು ತಕ್ಷಣವೇ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದರೇ ಮಗು ಬದುಕುಳಿಯುತ್ತಿತ್ತು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಗಂಭೀರ ಪರಿಸ್ಥಿತಿಯಲ್ಲಿದ್ದ ಮಗವನ್ನು ತಕ್ಷಣವೇ ದಾಖಲಿಸಿಕೊಳ್ಳದೇ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಮಗುವಿನ ಸಾವಿಗೆ ಮಿಮ್ಸ್ ವೈದ್ಯರುಗಳೇ ಕಾರಣವೆಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 2ರ ಕಂದಮ್ಮನನ್ನು ಕಿಡ್ನಾಪ್‍ಗೈದು ರೇಪ್ ಮಾಡಿ ರೈಲ್ವೇ ಹಳಿ ಬಳಿ ಬಿಸಾಕ್ದ!

    2ರ ಕಂದಮ್ಮನನ್ನು ಕಿಡ್ನಾಪ್‍ಗೈದು ರೇಪ್ ಮಾಡಿ ರೈಲ್ವೇ ಹಳಿ ಬಳಿ ಬಿಸಾಕ್ದ!

    – ಪೊಲೀಸರಿಂದ ಪುಟಾಣಿಯ ರಕ್ಷಣೆ

    ನವದೆಹಲಿ: ಫುಟ್ ಪಾತ್ ನಲ್ಲಿ ತಾಯಿ ಜೊತೆ ಮಲಗಿದ್ದ 2 ವರ್ಷದ ಪುಟ್ಟ ಕಂದಮ್ಮನನ್ನು ಯುವಕನೊಬ್ಬ ಕಿಡ್ನಾಪ್ ಮಾಡಿ, ಅತ್ಯಾಚಾರವೆಸಗಿ ಬಳಿಕ ರೈಲ್ವೇ ಟ್ರ್ಯಾಕ್ ಬಳಿ ಎಸೆದು ಹೋದ ಹೃದಯವಿದ್ರಾವಕ ಘಟನೆಯೊಂದು ನವದೆಹಲಿಯಲ್ಲಿ ನಡೆದಿದೆ.

    ಈ ಘಟನೆ ದೆಹಲಿಯ ಹಳೇ ರೈಲ್ವೇ ನಿಲ್ದಾಣದಲ್ಲಿ ಶನಿವಾರ ನಸುಕಿನ ಜಾವ ನಡೆದಿದ್ದು, ಇಂದು ಬೆಳಗ್ಗೆ ಆರೋಪಿಯನ್ನು ಬಂಧಿಸಿದ್ದಾರೆ. 24 ವರ್ಷದ ಅನಿಲ್ ಬಂಧಿತ ಆರೋಪಿಯಾಗಿದ್ದು, ಈತ ಡ್ರಗ್ ವ್ಯಸನಿಯಾಗಿದ್ದಾನೆ ಎನ್ನುವುದು ತಿಳಿದುಬಂದಿದೆ.

    ಘಟನೆ ವಿವರ:
    ಉತ್ತರ ದೆಹಲಿಯ ಕಾಟ್ ವಾಲಿ ಪ್ರದೇಶದ ಫುಟ್ ಪಾತ್ ನಲ್ಲಿ ಶುಕ್ರವಾರ ರಾತ್ರಿ ಕಂದಮ್ಮ ತನ್ನ ತಾಯಿ ಜೊತೆ ಮಲಗಿದ್ದಳು. ಆದ್ರೆ ನಸುಕಿನ ಜಾವ 2.30ರ ಸುಮಾರಿಗೆ ಕಂದಮ್ಮ ತನ್ನ ಬಳಿ ಇಲ್ಲದಿರುವುದನ್ನು ತಾಯಿ ಗಮನಿಸಿದ್ದಾರೆ. ಅಲ್ಲದೇ ಎಲ್ಲಾ ಕಡೆ ಹುಡುಕಾಡಿದ್ದಾರೆ.

    ಈ ವೇಳೆ ಮಗಳು ಇಲ್ಲದಿರುವುದನ್ನು ಮನಗಂಡ ತಾಯಿ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮಗಳು ಕಾಣದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಕಂದಮ್ಮ ನಾಪತ್ತೆ ದೂರು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯ ದೂರಿನಂತೆ ಕಂದಮ್ಮನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಮಧ್ಯಾಹ್ನ ಸುಮಾರಿಗೆ ಕೇಂದ್ರ ದೆಹಲಿಯ ಆಸ್ಪತ್ರೆಯೊಂದರಲ್ಲಿ ಕಂದಮ್ಮ ದಾಖಲಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿದೆ. ಆ ಕಂದಮ್ಮನನ್ನು ಕಾಟ್ ವಾಲಿ ಪ್ರದೇಶದ ನಿವಾಸಿ ಎಂಬುದಾಗಿ ಗುರುತಿಸಲಾಗಿತ್ತು ಅಂತ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

    ಅಲ್ಲದೇ ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದ್ದು, ಬಳಿಕ ಆಕೆಯನ್ನು ಕಿಡಿಗೇಡಿಗಳು ರೈಲ್ವೇ ಟ್ರ್ಯಾಕ್ ಬಳಿ ಬಿಸಾಕಿ ಹೋಗಿದ್ದರು. ಇದನ್ನು ಗಮನಿಸಿದ ಅಲ್ಲಿನ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಕಂದಮ್ಮನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯವಾಗಿದ್ದಾಳೆ ಅಂತ ಪೊಲೀಸರು ತಿಳಿಸಿದ್ದಾರೆ.

    ಘಟನೆ ನಡೆದ ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಗಾಗಿ ಬಲೆ ಬೀಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಈ ಹಿಂದೆ ಹರಿದ್ವಾರದಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದನು ಎಂಬುದಾಗಿ ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸೀಮಂತ ಶಾಸ್ತ್ರ ದಿನವೇ ಗುಡ್ ನ್ಯೂಸ್

    ಸೀಮಂತ ಶಾಸ್ತ್ರ ದಿನವೇ ಗುಡ್ ನ್ಯೂಸ್

    ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಅವರ ಸೀಮಂತ ಶಾಸ್ತ್ರವಿದೆ. ಆದರೆ ಸೀಮಾಂತ ಶಾಸ್ತ್ರದ ದಿನವೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.

    ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸೀಮಂತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಗೌಡ್ರ ಸಂಪ್ರದಾಯದಂತೆ ಮಧ್ಯಾಹ್ನ ಸೀಮಂತ ಶಾಸ್ತ್ರ ನಡೆಯಲಿದ್ದು, ಸೀಮಂತದ ಫಂಕ್ಷನ್ ಗೆ ಸ್ಯಾಂಡಲ್ ವುಡ್ ಕಲಾವಿದರು ಭಾಗಿ ಆಗಲಿದ್ದಾರೆ.

    ಯಶ್ ಹಾಗೂ ರಾಧಿಕಾ ಡಿಸೆಂಬರ್ 9ರಂದು ಮದುವೆ ಆಗಿದ್ದರು. ಸಂತಸದ ವಿಷಯವೆಂದರೆ ಅದೇ ದಿನವೇ ಮಗು ಜನನಕ್ಕೆ ವೈದ್ಯರು ಡೇಟ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 9ಕ್ಕೆ ಜೂನಿಯರ್ ರಾಕಿಂಗ್ ಸ್ಟಾರ್ ಅಥವಾ ಪುಟಾಣಿ ಸ್ಯಾಂಡಲ್ ಪ್ರಿನ್ಸೆಸ್ ಆಗಮನವಾಗುವ ಸಾಧ್ಯತೆ ಇದೆ.

    ಈಗಾಗಲೇ ರಾಧಿಕಾ ಹಾಗೂ ಯಶ್ ತಾಜ್ ವೆಸ್ಟೆಂಡ್ ಗೆ ಆಗಮಿಸಿದ್ದು, ಮದುವೆ ಆದ ಸ್ಥಳದಲ್ಲೇ ಸೀಮಂತ ಶಾಸ್ತ್ರ ನಡೆಯುತ್ತಿದೆ. ಈ ಸ್ಥಳ ಯಶ್ ಮತ್ತು ರಾಧಿಕಾರ ಫೇವರಿಟ್ ಸ್ಥಳವಾಗಿದೆ. ಸದ್ಯಕ್ಕೆ ಸೀಮಂತದ ಅರೇಂಜ್ ಮೆಂಟ್ಸ್ ನಡೆಯುತ್ತಿದ್ದು, ಯಶ್ ಹಾಗೂ ರಾಧಿಕಾ ಸೀಮಂತಕ್ಕೆ ರೆಡಿ ಆಗುತ್ತಿದ್ದಾರೆ. ಸಿನಿಮಾರಂಗದವರು, ಆಪ್ತರು ಮತ್ತು ಬಂಧುಗಳೆಲ್ಲರು ಸೀಮಂತಕ್ಕೆ ಹಾಜರಾಗುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮಗುವಿಗೆ ನೇಣು ಬಿಗಿದು, ತಾನೂ ಆತ್ಮಹತ್ಯೆ ಮಾಡ್ಕೊಂಡ ತಾಯಿ!

    ಮಗುವಿಗೆ ನೇಣು ಬಿಗಿದು, ತಾನೂ ಆತ್ಮಹತ್ಯೆ ಮಾಡ್ಕೊಂಡ ತಾಯಿ!

    ಮೈಸೂರು: ತಾಯಿಯೊಬ್ಬಳು 2 ವರ್ಷದ ಪುಟ್ಟ ಕಂದಮ್ಮನನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಕುನ್ನೇಗಾಲ ಗ್ರಾಮದಲ್ಲಿ ನಡೆದಿದೆ.

    ಪುಟ್ಟ ಕಂದಮ್ಮ ಮಾನ್ವಿತಾಳನ್ನು ಕೊಲೆಗೈದ ಬಳಿಕ 23 ವರ್ಷದ ರಾಜೇಶ್ವರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ರಾಜೇಶ್ವರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಕೂಡಗಿ ಗ್ರಾಮದ ಸೋಮಣ್ಣ ಹಾಗೂ ರಾಜೇಶ್ವರಿ ಆರು ವರ್ಷಗಳು ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಹಾಗೂ ಗಂಡು ಮಕ್ಕಳಿದ್ದವು. ಆದ್ರೆ ರಾಜೇಶ್ವರಿ ಅವರು ಕಳೆದ 2 ವರ್ಷದಿಂದ ಕೂಡಗಿ ಗ್ರಾಮದ ವಿನೋದ ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎಂದು ಪತಿ ಆರೋಪಿಸಿದ್ದಾರೆ.

    ಪತ್ನಿಯ ಅಕ್ರಮ ಸಂಬಂಧವನ್ನು ಪತಿ ಸೋಮಣ್ಣ ಹಲವು ಬಾರಿ ಗಮನಿಸಿದ್ದರು. ಅಲ್ಲದೇ ಆ ಬಳಿಕ ಪತ್ನಿಯನ್ನು ತವರು ಮನೆಗೆ ಬಿಟ್ಟುಬಂದಿದ್ದರು. ಇದರಿಂದ ಮನನೊಂದ ರಾಜೇಶ್ವರಿ ತನ್ನ ಮಗುವಿಗೆ ನೇಣು ಹಾಕಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಹಸಿವಿನಿಂದ ಅಳುತ್ತಿದ್ದ ಮಗುವಿಗೆ ಹಾಲುಣಿಸಿದ ಗಗನಸಖಿ

    ಹಸಿವಿನಿಂದ ಅಳುತ್ತಿದ್ದ ಮಗುವಿಗೆ ಹಾಲುಣಿಸಿದ ಗಗನಸಖಿ

    ಮನಿಲಾ: ಹಸಿವಿನಿಂದ ಅಳುತ್ತಿದ್ದ ಕಂದಮ್ಮನಿಗೆ ಗಗನಖಿಯೊಬ್ಬರು ಹಾಲುಣಿಸಿ ಮಾತೃಪ್ರೇಮ ಮೆರೆದ ಘಟನೆ ಫಿಲಿಫೈನ್ಸ್ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಕಳೆದ ಮಂಗಳವಾರ 24 ವರ್ಷದ ಪಟ್ರೀಷಾ ಒರ್ಗಾನೋ ಎನ್ನುವ ಗಗನಸಖಿ ಫ್ಲೈಟ್ ಟೇಕ್‍ಆಫ್ ಆದ ನಂತರ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮಗುವೊಂದು ಹಸಿವಿನಿಂದ ಅಳುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ತಾಯಿಯ ಬಳಿ ಹೋಗಿ, ಮಗುವಿಗೆ ಹಾಲುಣಿಸಲೇ ಎಂದು ಕೇಳಿಕೊಂಡು, ಹಸಿವಿನಿಂದ ಬಳಲಿದ್ದ ಮಗುವಿಗೆ ಹಾಲುಣಿಸಿ ತಾಯಿ ವಾತ್ಸಲ್ಯವನ್ನು ಮರೆದಿದ್ದಾರೆ.

    ಪ್ರಯಾಣಿಕರೊರ್ವರು ತಮ್ಮ ಪುಟ್ಟ ಕಂದಮ್ಮನ ಜೊತೆ ಸೋಮವಾರ ರಾತ್ರಿಯೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಮನೆಯಿಂದ ತಂದಿದ್ದ ಫಾರ್ಮುಲಾ ಹಾಲು ನಿಲ್ದಾಣದಲ್ಲಿಯೇ ಖಾಲಿಯಾಗಿತ್ತು. ಮಂಗಳವಾರ ಬೆಳಗ್ಗೆ ವಿಮಾನ ಏರಿದಾಗ, ಮಗು ಹಸಿವಿನಿಂದ ಅಳತೊಡಗಿತ್ತು. ಆದರೆ ಮಗುವಿನ ಹಾಲುಣಿಸಲು ತಾಯಿಯ ಬಳಿ ಹಾಲಿರಲಿಲ್ಲ. ಇದನ್ನೂ ನೋಡಿದ ಪಟ್ರೀಷಾ ಕೂಡಲೇ ಮಗುವನ್ನು ಎತ್ತಿಕೊಂಡು ಎದೆಹಾಲು ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅವರು, ವಿಮಾನದಲ್ಲಿ ಮಗು ಅಳುವುದನ್ನ ಕೇಳಿಸಿಕೊಂಡು, ಆ ತಾಯಿಯ ಬಳಿ ಹೋದೆ. ಹಸಿದ ಮಗುವಿಗೆ ಹಾಲುಣಿಸಿಲು ಆಗದ ತಾಯಿಯ ವೇದನೆ ನನಗೆ ಅರಿವಾಗಿತ್ತು. ನಮ್ಮ ವಿಮಾನದಲ್ಲಿ ಫಾರ್ಮುಲಾ ಹಾಲು ಇರಲಿಲ್ಲ. ಹೀಗಾಗಿ ಮಗುವಿಗೆ ನಾನೇ ಹಾಲುಣಿಸಲು ಸಿದ್ಧಳಾದೆ. ಹಾಲು ಕುಡಿದ ಮಗು ತಣ್ಣನೆ ಮಲಗಿದನ್ನ ನೋಡಿ, ನನಗೆ ತುಂಬಾ ಸಂತಸವಾಯಿತೆಂದು ಹರ್ಷ ವ್ಯಕ್ತಪಡಿಸಿದ್ದಾರೆ.

    Air hostess Patrisha Organo with her Own Daughter Jade

    ಮಗುವಿನ ಹಸಿವನ್ನ ನೀಗಿಸಿದ ಗಗನಸಖಿಗೆ, ತಾಯಿ ನಿಲ್ದಾಣವನ್ನು ತಲುಪಿದ್ದಂತೆ ಹೃತ್ಫೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಲ್ಲದೇ ಫಿಲಿಫೈನ್ಸ್ ಏರ್‍ಲೈನ್ಸ್ ಗಗನಸಖಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಅವರಿಗೆ ಪ್ರಮೋಷನ್ ನೀಡಿ ವೇತನವನ್ನೂ ಹೆಚ್ಚಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪೊಲೀಯೋ ಲಸಿಕೆ ಹಾಕ್ಸೊಂಡು ಬರ್ತಿನಿ, ಅಂತ ಮಗು ಸಮೇತ ಡೂಪ್ಲಿಕೇಟ್ ನರ್ಸ್ ಎಸ್ಕೇಪ್

    ಪೊಲೀಯೋ ಲಸಿಕೆ ಹಾಕ್ಸೊಂಡು ಬರ್ತಿನಿ, ಅಂತ ಮಗು ಸಮೇತ ಡೂಪ್ಲಿಕೇಟ್ ನರ್ಸ್ ಎಸ್ಕೇಪ್

    ರಾಯಚೂರು: ನವಜಾತ ಶಿಶುವಿಗೆ ಪೊಲೀಯೋ ಲಸಿಕೆ ಹಾಕಿಸಿಕೊಂಡು ಬರುತ್ತೇನೆಂದು ಹೇಳಿ, ನಕಲಿ ನರ್ಸ್ ವೊಬ್ಬರು ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ಲಿಂಗಸೂಗೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಮಾರಲದಿನ್ನಿ ತಾಂಡ ನಿವಾಸಿಗಳಾದ ಪೋಷಕರು ಮಗು ಕಳುವಾಗಿದೆ. ಶುಕ್ರವಾರ ಬೆಳಗ್ಗೆ 6 ಗಂಟೆಗೆ ನವಜಾತ ಶಿಶು ಜನಿಸಿತ್ತು. ಇಂದು ಮಧ್ಯಾಹ್ನ ಆಸ್ಪತ್ರೆಯಲ್ಲಿದ್ದ ತಾಯಿ ಹಾಗೂ ಅಜ್ಜಿಗೆ ತಾನು ನರ್ಸ್ ಎಂದು ಅಪರಿಚಿತ ಮಹಿಳೆಯೊಬ್ಬಳು ಪರಿಚಯ ಮಾಡಿಕೊಂಡಿದ್ದಾಳೆ. ಈ ವೇಳೆ ದಾಖಲೆಗಳಿಗೆ ಸಹಿ ಹಾಕಬೇಕೆಂದು ಅಜ್ಜಿಯನ್ನು ಕಳುಹಿಸಿಕೊಟ್ಟಿದ್ದಾರೆ.

    ನಂತರ ತಾಯಿಗೆ ಮಗುವಿಗೆ ಪೊಲೀಯೋ ಲಸಿಕೆ ಹಾಕಬೇಕೆಂದು ಹೇಳಿ, ಮಗುವನ್ನು ಎತ್ತಿಕೊಂಡು ಹೋಗಿದ್ದಾಳೆ. ಆದರೆ ಮಗುವನ್ನು ತೆಗೆದುಕೊಂಡ ಹೋದ ನರ್ಸ್ ಎಷ್ಟೇ ಸಮಯ ಕಳೆದರು ಬಂದಿಲ್ಲ. ಇದರಿಂದ ಅನುಮಾನಗೊಂಡು ಆಸ್ಪತ್ರೆ ಸಿಬ್ಬಂದಿ ಬಳಿ ವಿಚಾರಿಸಿದಾಗ, ಮಗು ಕಳುವಾಗಿರುವ ಕುರಿತು ತಿಳಿದು ಬಂದಿದೆ.

    ಕೂಡಲೇ ಆಸ್ಪತ್ರೆಗೆ ಸಿಬ್ಬಂದಿ ಎಲ್ಲಾ ಸಿಸಿಟಿವಿಯ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಅಪರಿಚಿತ ಮಹಿಳೆಯ ಯಾರು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ತಾಯಿ ತನ್ನ ಒಂದು ದಿನದ ಹಸುಗೂಸನ್ನು ಕಳೆದುಕೊಂಡು, ದುಃಖಸಾಗರದಲ್ಲಿ ಮುಳುಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews