Tag: Baby

  • ಸಿನಿಮಾದಲ್ಲಿ ಡ್ರಗ್ಸ್ ದೃಶ್ಯಗಳಿದ್ದರೆ ನೋಟಿಸ್: ಕಠಿಣ ಕ್ರಮಕ್ಕೆ ಮುಂದಾದ ಪೊಲೀಸ್ ಇಲಾಖೆ

    ಸಿನಿಮಾದಲ್ಲಿ ಡ್ರಗ್ಸ್ ದೃಶ್ಯಗಳಿದ್ದರೆ ನೋಟಿಸ್: ಕಠಿಣ ಕ್ರಮಕ್ಕೆ ಮುಂದಾದ ಪೊಲೀಸ್ ಇಲಾಖೆ

    ಡ್ರಗ್ಸ್ (Drugs) ಪಿಡುಗನ್ನು ನಿರ್ನಾಮ ಮಾಡುವ ಪಣ ತೊಟ್ಟಿರುವ ಪೊಲೀಸ್ ಇಲಾಖೆಯು ಇದೀಗ ಸಿನಿಮಾಗಳ ಮೇಲೆ ಕಣ್ಣಿಟ್ಟಿದೆ. ಸಿನಿಮಾಗಳಲ್ಲಿ (Cinema) ಮಾದಕ ವಸ್ತುಗಳನ್ನು ಪ್ರಚೋದಿಸುವ ದೃಶ್ಯಗಳು ಇದ್ದರೆ, ಅಂತಹ ಸಿನಿಮಾಗಳಿಗೆ ನೋಟಿಸ್ (Notice) ನೀಡಲಾಗುವುದು ಎಂದು ಹೈದರಾಬಾದ್ ಪೊಲೀಸ್ ತಿಳಿಸಿದ್ದಾರೆ.

    ಹೈದರಾಬಾದ್ ಪೊಲೀಸರು ಇತ್ತೀಚೆಗಷ್ಟೇ ಮಾದಾಪುರದಲ್ಲಿ ನಡೆಸಿದ ಕಾರ್ಯಚರಣೆಯಲ್ಲಿ ವಿದೇಶಿ ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಿನಿಮಾ ನಿರ್ಮಾಪಕರು ಬಂಧನಕ್ಕೊಳಗಾಗಿದ್ದರು. ಅಲ್ಲದೇ, ಸಿನಿಮಾ ರಂಗದಲ್ಲಿ ಡ್ರಗ್ಸ್ ವಹಿವಾಟು ಜೋರಾಗಿದೆ ಎನ್ನುವ ಆರೋಪ ಕೂಡ ಇದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ. ಆನಂದ್, ‘ಸಿನಿಮಾಗಳಲ್ಲಿ ಡ್ರಗ್ಸ್ ಬಳಕೆ ಬಗ್ಗೆ ತೋರಿಸಿದರೆ ನೋಟಿಸ್ ನೀಡಿ, ಕಠಿಣ ಕ್ರಮಕ್ಕೆ ಮುಂದಾಗಲಾಗುವುದು’ ಎಂದಿದ್ದಾರೆ. ಇದನ್ನೂ ಓದಿ:ದೊಡ್ಡ ಮೊತ್ತಕ್ಕೆ ಸೇಲ್ ಆಯಿತು ‘ಸಲಾರ್’ ಸ್ಯಾಟ್ ಲೈಟ್ ರೈಟ್ಸ್

    ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಜಯ್ ದೇವರಕೊಂಡ ಅವರ ಸಹೋದರನ ‘ಬೇಬಿ’ (Baby) ಚಿತ್ರ ತಂಡಕ್ಕೆ ನೋಟಿಸ್ ಕೂಡ ನೀಡಲಾಗಿದೆಯಂತೆ. ಈ ಸಿನಿಮಾದಲ್ಲಿ ಡ್ರಗ್ಸ್ ಬಳಕೆ ಕುರಿತಾಗಿ ದೃಶ್ಯವಿದೆ. ಅದರಿಂದ ಜನರ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ನೋಟಿಸ್ ನೀಡಲಾಗಿದೆ. ಸಿನಿಮಾ ಪರಿಶೀಲನೆಯ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಸಿನಿಮಾದಲ್ಲಿ ತೋರಿಸಿದ ರೀತಿಯಲ್ಲೇ ಡ್ರಗ್ಸ್ ಬಳಕೆ ಆಗುತ್ತಿದ್ದು ಎನ್ನುವ ಮಾಹಿತಿಯನ್ನೂ ಅಧಿಕಾರಿಗಳು ಹೊರ ಹಾಕಿದ್ದಾರೆ. ತಮಗೆ ನೋಟಿಸ್ ಬಂದಿರುವ ಕುರಿತು ಬೇಬಿ ಸಿನಿಮಾದ ನಿರ್ಮಾಪಕ ಸಾಯಿ ರಾಜೇಶ್ ಕೂಡ ಖಚಿತ ಪಡಿಸಿದ್ದಾರೆ. ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಉತ್ತರಿಸುವುದಾಗಿಯೂ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮನಸ್ಸು ಸರಿಯಿಲ್ಲವೆಂದು ಚಡಪಡಿಸ್ತಿದ್ದ ಗೃಹಿಣಿ 10 ತಿಂಗಳ ಮಗು ಬಿಟ್ಟು ಆತ್ಮಹತ್ಯೆ!

    ಮನಸ್ಸು ಸರಿಯಿಲ್ಲವೆಂದು ಚಡಪಡಿಸ್ತಿದ್ದ ಗೃಹಿಣಿ 10 ತಿಂಗಳ ಮಗು ಬಿಟ್ಟು ಆತ್ಮಹತ್ಯೆ!

    ಯಾದಗಿರಿ: ಹಲವು ದಿನಗಳಿಂದ ನನಗೆ ಮನಸ್ಸು ಸರಿಯಾಗಿಲ್ಲವೆಂದು ಬಳಲುತ್ತಿದ್ದ ಗೃಹಿಣಿಯೊಬ್ಬಳು 10 ತಿಂಗಳ ಮಗುವನ್ನ ಬಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ವಡಗೇರಾ ತಾಲೂಕಿನ ಕೊಂಗಂಡಿ ಗ್ರಾಮದಲ್ಲಿ ನಡೆದಿದೆ.

    ಕೊಂಗಂಡಿ ಗ್ರಾಮದ ಸೌಂದರ್ಯ ಮಠಪತಿ (25) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮನೆಯವರು ಮಾಹಿತಿ ನೀಡಿದ್ದಾರೆ. ಹೆರಿಗೆಯಾದ ನಂತರ 6 ತಿಂಗಳವರೆಗೆ ಸೌಂದರ್ಯ ಚೆನ್ನಾಗಿಯೇ ಇದ್ದಳು. ಆದರೆ ಮಗು 6 ತಿಂಗಳು ಆದ್ಮೇಲೆ ಗಂಡನ ಮನೆಗೆ ಬಂದಿದ್ದ ಆಕೆ ತನ್ನ ಮನಸ್ಸು ಸರಿಯಾಗಿಲ್ಲವೆಂದು ಚಡಪಡಿಸುತ್ತಿದ್ದಳು. ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್ – ಬಸ್‌ನಿಂದ ಬಿದ್ದು ಮಹಿಳೆಗೆ ಗಾಯ

    ಇದೇ ಕಾರಣಕ್ಕೆ 10 ತಿಂಗಳ ಮಗುವನ್ನು ತವರು ಮನೆಯಲ್ಲಿ ಬಿಟ್ಟು ಬಂದಿದ್ದಳು. ಕೊಂಗಂಡಿ ಗ್ರಾಮದ ಗಂಡನ ಮನೆಯಲ್ಲಿ ಮಾವ, ಗಂಡನೊಂದಿಗೆ ವಾಸವಾಗಿದ್ದ ಸೌಂದರ್ಯ, ಎಂದಿನಂತೆ ಸಹಜವಾಗಿ ಇರಲಿಲ್ಲ. ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಸದ್ಯ ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಈ ಬಗ್ಗೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜ್ಯೂಸ್ ಅಂತಾ ಕೀಟನಾಶಕ ಸೇವಿಸಿ ಮಗು ಸಾವು- ಪೋಷಕರ ಆಕ್ರಂದನ

    ಜ್ಯೂಸ್ ಅಂತಾ ಕೀಟನಾಶಕ ಸೇವಿಸಿ ಮಗು ಸಾವು- ಪೋಷಕರ ಆಕ್ರಂದನ

    ರಾಮನಗರ: ಜ್ಯೂಸ್ ಎಂದು ಮನೆಯಲ್ಲಿದ್ದ ಕೀಟನಾಶಕ ಕುಡಿದು ಪುಟ್ಟ ಕಂದಮ್ಮವೊಂದು ಮೃತಪಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.

    ಗ್ರಾಮದ ಪುಷ್ಪ ಹಾಗೂ ಹನುಮಂತು ಎಂಬವರ ಪುತ್ರ ಎರಡು ವರ್ಷದ ಯಶ್ವಿಕ್ (2) ಕೀಟ ನಾಶಕ ಸೇವಿಸಿ ಮೃತಪಟ್ಟ ಮಗು. ಜಮೀನಿಗೆ ಸಿಂಪಡಿಸಿ ಉಳಿದಿದ್ದ ಕೀಟನಾಶಕವನ್ನ ಹನುಮಂತು ಮನೆಯಲ್ಲಿ ಇಟ್ಟಿದ್ದರು. ಈ ವೇಳೆ ಮಗು ಆಟವಾಡುವಾಗ ಕೀಟನಾಶಕದ ಬಾಟೆಲ್ ನೋಡಿ ಜ್ಯೂಸ್ ಎಂದು ಭಾವಿಸಿ ಕುಡಿದಿದೆ. ಇದನ್ನೂ ಓದಿ: ಸ್ನೇಹಿತನನ್ನು ರಕ್ಷಿಸಲು ಹೋಗಿ ವೈದ್ಯ ಸಮುದ್ರಪಾಲು

    ಕೆಲ ಕ್ಷಣಗಳ ಬಳಿಕ ಹೊಟ್ಟೆನೋವಿನಿಂದ ನರಳಾಡುತ್ತಿದ್ದ ಮಗುವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದ್ದು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಲತಾಯಿಯಿಂದ ಹಸುಗೂಸು ಕೊಲೆ- ಅಂತ್ಯಕ್ರಿಯೆ ಮಾಡಿದ್ದ ಸ್ಥಳದಲ್ಲಿ ಪೊಲೀಸರು ನಿಗಾ

    ಮಲತಾಯಿಯಿಂದ ಹಸುಗೂಸು ಕೊಲೆ- ಅಂತ್ಯಕ್ರಿಯೆ ಮಾಡಿದ್ದ ಸ್ಥಳದಲ್ಲಿ ಪೊಲೀಸರು ನಿಗಾ

    ಯಾದಗಿರಿ: ಆಸ್ತಿ ವಿಚಾರಕ್ಕೆ ಮಲತಾಯಿಯಿಂದ 5 ತಿಂಗಳ ಹಸುಗೂಸು ಸಂಗೀತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಗುವಿನ ಶವ ಅಂತ್ಯಕ್ರಿಯೆ ಮಾಡಿದ್ದ ಸ್ಥಳದಲ್ಲಿ ಪೊಲೀಸರು ನಿಗಾವಹಿಸಿದ್ದಾರೆ.

    ಆಗಸ್ಟ್ 30ರಂದು ಯಾದಗಿರಿಯ ವಡಗೆಸರಾ ತಾಲೂಕಿನ ಬಬಲಾದ ಗ್ರಾಮದಲ್ಲಿ 5 ತಿಂಗಳ ಮಗು ಸಂಗೀತಾಳಿಗೆ ಮಲತಾಯಿ ದೇವಮ್ಮ ಹಾಲಿನಲ್ಲಿ ವಿಷ ಬೆರೆಸಿ ಕೊಲೆ ಮಾಡಿದ್ದಳು. ಬಳಿಕ ಮೃತ ಮಗು ಸಂಗೀತಾಳ ತಾಯಿಯ ತವರೂರಾದ ಚಾಮನಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಘಟನೆ ನಡೆದ ಎರಡು ದಿನಗಳ ಬಳಿಕ ಮಲತಾಯಿ ಕೊಲೆ ಮಾಡಿರುವ ಬಗ್ಗೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ 5 ತಿಂಗಳ ಹಸುಗೂಸನ್ನೇ ಕೊಂದ ಪಾಪಿ ಮಲತಾಯಿ?

    ಸದ್ಯ ಕೊಲೆ ಮಾಡಿರೋದಾಗಿ ಮಲತಾಯಿ ದೇವಮ್ಮ ತಪ್ಪೊಪ್ಪಿಕೊಂಡಿದ್ದು, ತನಿಖೆ ದೃಷ್ಟಿಯಿಂದ ಮಗುವಿನ ಶವ ಸಂಸ್ಕಾರ ಮಾಡಿದ ಸ್ಥಳದಲ್ಲಿ ಪೊಲೀಸರ ನಿಗಾವಹಿಸಲಾಗಿದೆ. ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದ್ದಾರೆ. ಹೀಗಾಗಿ ಮಗುವಿನ ಶವದ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ 5 ತಿಂಗಳ ಹಸುಗೂಸನ್ನೇ ಕೊಂದ ಪಾಪಿ ಮಲತಾಯಿ?

    ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ 5 ತಿಂಗಳ ಹಸುಗೂಸನ್ನೇ ಕೊಂದ ಪಾಪಿ ಮಲತಾಯಿ?

    ಯಾದಗಿರಿ: ಮಲತಾಯಿಯೊಬ್ಬಳು ಆಸ್ತಿಗಾಗಿ (Property) ಹಾಲಿಗೆ ವಿಷ ಬೆರೆಸಿ 5 ತಿಂಗಳ ಹಸುಗೂಸನ್ನೇ ಕೊಲೆಗೈದ ಆರೋಪವೊಂದು ಯಾದಗಿರಿ (Yadagiri) ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಕೇಳಿಬಂದಿದೆ.

    ಈ ಘಟನೆ ಆಗಸ್ಟ್ 30ರಂದು ಬಬಲಾದ ಗ್ರಾಮದಲ್ಲಿ ನಡೆದಿದೆ. ದೇವಮ್ಮ ಚೆಟ್ಟಿಗೇರಿ ಆರೋಪಿಯಾಗಿದ್ದು, ಈಕೆ ಹಸುಗೂಸು ಸಂಗೀತಾ ಚೆಟ್ಟಿಗೇರಿಗೆ ಹಾಲಿನಲ್ಲಿ ವಿಷ ಬೆರೆಸಿ ಸಾಯಿಸಿದ್ದಾಳೆ.  ಇದನ್ನೂ ಓದಿ: ಸಹೋದರರೇ ಬಿಟ್ಟುಬಿಡಿ ಅಂತಾ ಅಂಗಲಾಚಿದ್ರೂ ಮಹಿಳೆಗೆ ಗುಂಪು ಥಳಿತ!

    ಮೃತ ಹಸುಗೂಸು ಸಂಗೀತಾಳಿಗೆ ತಾಯಿ ಶ್ರೀದೇವಿ ಹಾಲು ಕುಡಿಸುತ್ತಿದ್ದಾಗ ಅಲ್ಲಿಗೆ ಬಂದ ದೇವಮ್ಮ, ತಾನು ಹಾಲುಣಿಸುತ್ತೇನೆ ಅಂತಾ ಕರೆದೊಯ್ದಿದ್ದಾಳೆ. ಹೀಗೆ ರೂಮಿಗೆ ಕರೆದೊಯ್ದು ಡೋರ್ ಹಾಕಿ ಹಾಲಿನ ಬಾಟ್ಲಿಯಲ್ಲಿ ವಿಷ ಬೆರೆಸಿ ಕೂಸಿಗೆ ಕೊಟ್ಟಿದ್ದಾಳೆ.

    ವಿಷಬೆರೆತ ಹಾಲು ಕುಡಿದ ಸಂಗೀತಾ 3 ಗಂಟೆ ನಂತರ ಬಾಯಲ್ಲಿ ನೊರೆ ಬಂದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ಸದ್ಯ ವಡಗೇರಾ ಪೊಲೀಸರು ಆರೋಪಿ ದೇವಮ್ಮಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ (Vadagera Police Station) ಪ್ರಕರಣ ದಾಖಲಾಗಿದೆ.

    ಕೊಲೆ ಮಾಡಿದ್ದು ಯಾಕೆ?: ಬಬಲಾದ ಗ್ರಾಮದ ಸಿದ್ದಪ್ಪ ಚೆಟ್ಟಿಗೇರಿ ಎಂಬಾತ ಎರಡು ಮದುವೆಯಾಗಿದ್ದ. 11 ವರ್ಷಗಳ ಹಿಂದೆ ಸಿದ್ದಪ್ಪ ಮೊದಲು ಶ್ರೀದೇವಿಯನ್ನ ಮದುವೆಯಾಗಿದ್ದ. ಆದರೆ ಮಕ್ಕಳಾಗದ ಹಿನ್ನೆಲೆ 7 ವರ್ಷದ ಹಿಂದೆ ದೇವಮ್ಮಳನ್ನು ಮದುವೆಯಾಗಿದ್ದ. ದೇವಮ್ಮಳನ್ನ ಮದುವೆಯಾದ್ಮೇಲೆ ಮೊದಲ ಪತ್ನಿ ಶ್ರೀದೇವಿ ಗಂಡನ ಮನೆ ಬಿಟ್ಟು ಚಾಮನಳ್ಳಿಯ ತನ್ನ ತವರು ಮನೆಯಲ್ಲಿದ್ದಳು.

    ಹಿರಿಯರ ರಾಜಿ ಸಂಧಾನದ ನಂತರ ಮೂರು ವರ್ಷಗಳ ಹಿಂದೆ ಬಬಲಾದ ಗ್ರಾಮದ ಗಂಡನ ಮನೆಗೆ ಶ್ರೀದೇವಿ ಮತ್ತೆ ಬಂದಿದ್ದಳು. ಕಳೆದ ಐದು ತಿಂಗಳ ಹಿಂದೆ ಶ್ರೀದೇವಿಗೆ ಹೆಣ್ಣು ಮಗು ಜನಿಸಿತ್ತು. ಇತ್ತ ಆರೋಪಿ ದೇವಮ್ಮಳಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಹೀಗಾಗಿ ಆಸ್ತಿಯಲ್ಲಿ ಸವತಿ ಶ್ರೀದೇವಿಯ ಐದು ತಿಂಗಳ ಮಗು ಸಂಗೀತಾಗೆ ಪಾಲು ಹೋಗುತ್ತೆ ಅಂತಾ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಹೋದರರೇ ಬಿಟ್ಟುಬಿಡಿ ಅಂತಾ ಅಂಗಲಾಚಿದ್ರೂ ಮಹಿಳೆಗೆ ಗುಂಪು ಥಳಿತ!

    ಸಹೋದರರೇ ಬಿಟ್ಟುಬಿಡಿ ಅಂತಾ ಅಂಗಲಾಚಿದ್ರೂ ಮಹಿಳೆಗೆ ಗುಂಪು ಥಳಿತ!

    ಭೋಪಾಲ್: ಮಹಿಳೆಯೊಬ್ಬರನ್ನು ಎಳೆದಾಡಿ, ಜುಟ್ಟು ಹಿಡಿದು ಗುಂಪೊಂದು ಥಳಿಸಿದ ಘಟನೆ ಮಧ್ಯಪ್ರದೇಶದ ಸಾಗರ್ ನಲ್ಲಿ (Madhyapradesh) ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಮಹಿಳೆಯನ್ನು ಬಸ್ ನಿಲ್ದಾಣದಲ್ಲಿ ಗುಂಪು ಎಳೆದಾಡುತ್ತಿರುವುದು ಹಾಗೂ ಪಕ್ಕದಲ್ಲಿ ಕಂದಮ್ಮ ಇರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಕೌಶಲ್ ಕಿಶೋರ್ ಮನೆಯಲ್ಲಿ ಗುಂಡಿನ ದಾಳಿ- ಕೇಂದ್ರ ಸಚಿವರ ಮಗನ ಗೆಳೆಯನ ಕೊಲೆ

    ವೈರಲ್ ವಿಡಿಯೋದಲ್ಲಿ ಮಹಿಳೆಯನ್ನು (Woman) ಎಳೆದುಕೊಂಡು ಬಂದು ಹಲ್ಲೆ ನಡೆಸುವುದು, ಥಳಿಸುವುದನ್ನು ಕಾಣಬಹುದಾಗಿದೆ. ಈ ವೇಳೆ ಮಹಿಳೆಯು, ಸಹೋದರರೇ ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚುವುದನ್ನು ನೋಡಿದರೆ ನಿಮ್ಮ ಕರುಳು ಚುರುಕ್ ಅನ್ನದೆ ಇರಲಾರದು. ಮಹಿಳೆ ಬೇಡಿಕೊಂಡರೂ ಗುಂಪು ಮಾತ್ರ ಆಕೆ ಮೇಲೆ ಹಲ್ಲೆ ನಡೆಸುವುದನ್ನು ಮುಂದುವರಿಸಿದೆ.

    ಇಷ್ಟು ಮಾತ್ರವಲ್ಲದೆ 5 ತಿಂಗಳ ಮಗುವಿನೊಂದಿಗೆ ಅಲೆದಾಡುತ್ತಿದ್ದ ಈ ಮಹಿಳೆ ಸಹೋದರ ದಯವಿಟ್ಟು ನನ್ನ ಕುಟುಂಬವನ್ನು ಹುಡುಕಲು ನನಗೆ ಸಹಾಯ ಮಾಡಿ ಎಂದು ಅಳುತ್ತಿರುವುದು ಕೂಡ ವೀಡಿಯೋದಲ್ಲಿ ಗಮನಿಸಬಹುದಾಗಿದೆ. ಇದನ್ನೂ ಓದಿ: ಜಿಡಿಪಿ ಬೆಳವಣಿಗೆಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದ ಭಾರತ – ಯಾವ ದೇಶದ್ದು ಎಷ್ಟು?

    ಮಧ್ಯಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿ ಈ ವೀಡಿಯೋವನ್ನು ಪೋಸ್ಟ್ ಮಾಡಿದೆ. ಗೋಪಾಲ್‍ಗಂಜ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಈ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಘಟನೆ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇತರರ ಬಂಧನಕ್ಕೆ ಬಲೆ ಬೀಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಟವಾಡುತ್ತಾ ಆಟಿಕೆಯ LED ಬಲ್ಬ್ ನುಂಗಿದ 9 ತಿಂಗಳ ಕಂದಮ್ಮ!

    ಆಟವಾಡುತ್ತಾ ಆಟಿಕೆಯ LED ಬಲ್ಬ್ ನುಂಗಿದ 9 ತಿಂಗಳ ಕಂದಮ್ಮ!

    ಅಹಮ್ಮದಾಬಾದ್: ಮಧ್ಯಪ್ರದೇಶದ ರಟ್ಲಾಮ್‍ನಲ್ಲಿ 9 ತಿಂಗಳ ಪುಟ್ಟ ಕಂದಮ್ಮವೊಂದು ಆಕಸ್ಮಿಕವಾಗಿ ಆಟಿಕೆಯ ಸಣ್ಣ ಎಲ್‍ಇಡಿ ಬಲ್ಬ್ (LED Bulb) ನುಂಗಿರುವ ಆಘಾತಕಾರಿ ಘಟನೆ ನಡೆದಿದೆ.

    ಮಗು ಬಲ್ಬ್ ನುಂಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಪೋಷಕರು ಮಗುವನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಚಂದ್ರಯಾನ ಸಂಭ್ರಮಾಚರಣೆ ಮಾಡಿದವರ ಮೇಲೆ ಕಾಶ್ಮೀರಿ ವಿದ್ಯಾರ್ಥಿಗಳಿಂದ ಹಲ್ಲೆ

    ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಮಗು ಆಟಿಕೆ ಮೊಬೈಲ್ ಫೋನ್‍ನೊಂದಿಗೆ (Mobile phone) ಆಟವಾಡುತ್ತಿತ್ತು. ಈ ಮೊಬೈಲ್ ಫೋನ್‍ನಲ್ಲಿರುವ ಆಂಟೆನಾದಲ್ಲಿ ಎಲ್‍ಇಡಿ ಬಲ್ಬ್ ಇತ್ತು. ಆ ಬಲ್ಬ್ ಅನ್ನು ಕಂದಮ್ಮ ಬಾಯಿಗೆ ಹಾಕಿಕೊಂಡು ಆಟವಾಡುತ್ತಾ ನುಂಗಿಬಿಟ್ಟಿದೆ. ಬಲ್ಬ್ ನುಂಗಿದ ತಕ್ಷಣವೇ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

    ಸಿವಿಲ್ ಆಸ್ಪತ್ರೆಯ (Civil Hospital) ಚಿಕಿತ್ಸಾ ಮೇಲ್ವೀಚಾರಕ ಡಾ. ರಾಕೇಶ್ ಜೋಶಿ ಈ ಸಂಬಂಧ ಪ್ರತಿಕ್ರಿಯಿಸಿ, ಉಸಿರಾಟದ ಸಮಸ್ಯೆ ಕಣಿಸಿಕೊಂಡಿದ್ದರಿಂದ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಮಗುವಿನ ಎಕ್ಸ್ ರೇ ತೆಗೆದು ನೋಡಿದಾಗ ಮಗು ಬಲ್ಬ್ ನುಂಗಿರುವುದು ಬೆಳಕಿಗೆ ಬಂದಿದೆ. ಬ್ರಾಂಕೋಸ್ಕೋಪ್ ಬಳಸಿ ವಸ್ತುವನ್ನು ಹೊರತೆಗೆಯಲು ಪ್ರಯತ್ನಿಸಿದರೂ ತೆಗೆಯಲು ಸಾಧ್ಯವಾಗಿಲ್ಲ ಎಂದರು.

    ಎರಡನೇ ಪ್ರಯತ್ನದಲ್ಲಿ ಬಲ್ಬ್ ಹೊರತೆಗೆಯುವುದರಲ್ಲಿ ಯಶಸ್ವಿಯಾದೆವು. ಮಕ್ಕಳಿಗೆ ಆಟಿಕೆಗಳನ್ನು ಕೊಡುವಾಗ ಸ್ವಲ್ಪ ಎಚ್ಚರವಹಿಸಬೇಕು ಎಂಬುದನ್ನು ಈ ಮೂಲಕ ಎಲ್ಲಾ ತಾಯಂದಿರು ಎಚ್ಚರವಹಿಸಿಕೊಳ್ಳಬೇಕು ಎಂದು ಜೋಶಿ ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮೆರಿಕಾದಲ್ಲಿ ದಾವಣಗೆರೆ ಮೂಲದ ಪತಿ, ಪತ್ನಿ, ಮಗು ದುರ್ಮರಣ

    ಅಮೆರಿಕಾದಲ್ಲಿ ದಾವಣಗೆರೆ ಮೂಲದ ಪತಿ, ಪತ್ನಿ, ಮಗು ದುರ್ಮರಣ

    ದಾವಣಗೆರೆ: ಅಮೆರಿಕಾದಲ್ಲಿ (America) ದಾವಣಗೆರೆ (Davanagere) ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮ ಪತಿ, ಪತ್ನಿ ಹಾಗೂ ಅವರ ಗಂಡು ಮಗು ಮೃತಪಟ್ಟ ಘಟನೆ ನಡದಿದೆ.

    ಯೋಗೇಶ್ ಹೊನ್ನಾಳ(37), ಪ್ರತಿಭಾ ಹೊನ್ನಾಳ್(35) ಹಾಗೂ ಯಶ್ ಹೊನ್ನಾಳ್(6) ಮೃತರು. ಈ ಘಟನೆ ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಲ್ಲಿ ನಡೆದಿದೆ. ಇದನ್ನೂ ಓದಿ: ನೀವೇನಾದರೂ ಆಪರೇಷನ್‌ ಅಂತ ಕೈ ಹಾಕಿದ್ರೆ, ಮುಟ್ಟಿ ನೋಡ್ಕೋಬೇಕು ಹಾಗೆ ಮಾಡ್ತೀವಿ: ಸಿ.ಟಿ. ರವಿ

    ಕಳೆದ 9 ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದು, ಬಳಿಕ ಅಮೆರಿಕಾದಲ್ಲಿ ವಾಸವಾಗಿದ್ದರು. ಮೃತ ಪತಿ ಹಾಗೂ ಪತ್ನಿ ಇಬ್ಬರೂ ವೃತ್ತಿಯಲ್ಲಿ ಎಂಜಿನಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಮೂವರ ಸಾವಿನ ಕೇಸ್ ಹಲವು ಅನುಮಾನಗಳನ್ನು ಹುಟ್ಟಿಸಿದೆ. ಇದನ್ನೂ ಓದಿ: ಅಧಿಕಾರ, ಹಣದ ಆಸೆಗೆ ಓಡೋಗಿದ್ದ ಹೆಬ್ಬಾರ್ ಈಗ್ಯಾಕೆ ಕಾಂಗ್ರೆಸ್‍ಗೆ ಬರ್ತಾರೆ ಹೇಳಲಿ: ಕೈ ಶಾಸಕ

    ಇದೀಗ ಸಾವಿನ ನಿಖರ ಕಾರಣ ತಿಳಿಸುವಂತೆ ಹಾಗೂ ಮೃತದೇಹಗಳನ್ನು ಸ್ವದೇಶಕ್ಕೆ ತರಿಸಿಕೊಡುವಂತೆ ಮೃತರ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎದೆ ಹಾಲು ಕುಡಿದು ಮಲಗಿದ್ದ 3 ತಿಂಗಳ ಪುಟ್ಟ ಕಂದಮ್ಮ ದುರ್ಮರಣ

    ಎದೆ ಹಾಲು ಕುಡಿದು ಮಲಗಿದ್ದ 3 ತಿಂಗಳ ಪುಟ್ಟ ಕಂದಮ್ಮ ದುರ್ಮರಣ

    ತಿರುವನಂತಪುರಂ: ಅಮ್ಮನ ಎದೆಹಾಲು (Breast Milk) ಕುಡಿದು ಮಲಗಿದ್ದ ಮೂರು ತಿಂಗಳ ಪುಟ್ಟ ಕಂದಮ್ಮ ಮೃತಪಟ್ಟ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

    ಜಯಕೃಷ್ಣನ್ ಹಾಗೂ ಜನಿಮೋಲ್ ದಂಪತಿಯ ಮಗ ಜಿತೇಶ್ ಮೃತ ದುರ್ದೈವಿ ಕಂದಮ್ಮ. ಮಗುವಿಗೆ ಹಾಲುಣಿಸಿ ನಿದ್ದೆ ಮಾಡುತ್ತಿದ್ದಂತೆಯೇ ಇತ್ತ ಜನಿಮೋಲ್ ಕೂಡ ನಿದ್ದೆಗೆ ಜಾರಿದ್ದಾರೆ. ಆದರೆ ಮರುದಿನ ಮಗು ಮುಂಜಾನೆ ಎದ್ದೇಳದನ್ನು ಅರಿತ ದಂಪತಿ ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    ವೈದ್ಯರ ಬಳಿ ಮಗುವನ್ನು ತೋರಿಸಿದ ದಂಪತಿ ಎಷ್ಟು ಕರೆದರೂ ಮಗು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ಬಳಿಕ ಪರೀಕ್ಷೆ ನಡೆಸಿದ ವೈದ್ಯರು ಮಗುವಿನ ಹೃದಯಬಡಿತದಲ್ಲಿ ವ್ಯತ್ಯಾಸವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಅಂತೆಯೇ ಪೋಷಕರು ಎಸ್‍ಐಟಿ ಆಸ್ಪತ್ರೆಗೆ ಕರೆದುಕೊಮಡು ಹೋಗಿದ್ದಾರೆ. ಅಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. ಇದನ್ನೂ ಓದಿ: ಪತ್ನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ ಜಡ್ಜ್

    ಮಗು ಸಾವನ್ನಪ್ಪಿರುವ ಆಘಾತಕಾರಿ ವಿಚಾರವನ್ನು ಕಂದಮ್ಮನ ಪೋಷಕರಿಗೆ ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಎದೆಹಾಲು ಮಗುವಿನ ಶ್ವಾಸನಾಳದಲ್ಲಿ ಸಿಲುಕಿಕೊಂಡು ಉಸಿರಾಡಲು ಕಷ್ಟವಾಗಿ ಮಗು ಮೃತಪಟ್ಟಿರುವುದಾಗಿ ವಿವರಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಸಿಕೆ ಹಾಕ್ತಿದ್ದಾಗಲೇ ಕುಸಿದ ಅಂಗನವಾಡಿಯ ಮೇಲ್ಛಾವಣಿ- ಮಗುವಿನ ತಲೆಗೆ ಗಾಯ

    ಲಸಿಕೆ ಹಾಕ್ತಿದ್ದಾಗಲೇ ಕುಸಿದ ಅಂಗನವಾಡಿಯ ಮೇಲ್ಛಾವಣಿ- ಮಗುವಿನ ತಲೆಗೆ ಗಾಯ

    ಯಾದಗಿರಿ: ಅಂಗನವಾಡಿ ಕೇಂದ್ರದ ಛಾವಣಿ ಕುಸಿದು, 10 ತಿಂಗಳ ಮಗುವಿನ ತಲೆಗೆ ಗಾಯ ಆಗಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ಶಹಾಪುರ ತಾಲೂಕಿನ ಮರಕಲ್ ಗ್ರಾಮದಲ್ಲಿ ನಡೆದಿದೆ.

    ಮರಕಲ್ ಗ್ರಾಮದ ಅಂಗನವಾಡಿ (Anganavadi) ಕೇಂದ್ರದಲ್ಲಿ ಇಂದ್ರಧನುಷ್ ಲಸಿಕೆ ಹಾಕ್ತಿದ್ದಾಗಲೇ ಮೇಲ್ಛಾವಣಿಯ ಪ್ಲಾಸ್ಟರ್ ಕುಸಿದು ಬಿದ್ದಿದೆ. ಮೇಲ್ಛಾವಣಿಯ ಪದರು ತಲೆ ಮೇಲೇ ಬಿದ್ದ ಪರಿಣಾಮ 10 ತಿಂಗಳ ಮಗು ಕೀರ್ತಿ ತಲೆಗೆ ಗಾಯ ಆಗಿದೆ. ಇದೇ ವೇಳೆ ಅಂಗನವಾಡಿ ಕೇಂದ್ರದಲ್ಲಿದ್ದ ಇತರ 6 ಮಕ್ಕಳು ಹಾಗೂ ಪೋಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸದ್ಯ ಗಾಯಾಳು ಮಗು ಕೀರ್ತಿ ಶಹಾಪುರ ತಾಲೂಕಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಇನ್ನೂ ಇಡೀ ಘಟನೆಗೆ ಕಳಪೆ ಕಟ್ಟಡ ನಿರ್ಮಾಣವೇ ಕಾರಣ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ.