Tag: Baby

  • ಮಗನಿಗೆ ಅಭಿನಂದನ್ ಎಂದು ನಾಮಕರಣ ಮಾಡಿದ ಕೊಪ್ಪಳದ ದಂಪತಿ

    ಮಗನಿಗೆ ಅಭಿನಂದನ್ ಎಂದು ನಾಮಕರಣ ಮಾಡಿದ ಕೊಪ್ಪಳದ ದಂಪತಿ

    ಕೊಪ್ಪಳ: ಪೈಲಟ್, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕ್ ಕಪಿಮುಷ್ಠಿಯಿಂದ ಬಿಡುಗಡೆಯಾಗಿ ತಾಯ್ನಾಡಿಗೆ ಮರಳುತ್ತಿದ್ದಂತೆಯೇ ಇದೀಗ ವೀರಪುತ್ರನ ಹೆಸರನ್ನು ಹುಟ್ಟಿದ ಮಕ್ಕಳಿಗೆ ಇಡಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೊಪ್ಪಳದ ಮಗುವಿಗೆ ಕೂಡ ಅಭಿನಂದನ್ ಹೆಸರನ್ನು ನಾಮಕರಣ ಮಾಡಲಾಗಿದೆ.

    ಹೌದು. ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ದಂಪತಿ ವಿಂಗ್ ಕಮಾಂಡರ್ ಅಭಿನಂದನ್ ಗೌರವಾರ್ಥ ನಾಮಕರಣ ಮಾಡಿದ್ದಾರೆ. ಮಹಾಂತೇಶ್ ಶೆಟ್ಟರ್ ಹಾಗೂ ಶಾಂತಾ ಶೆಟ್ಟರ್ ದಂಪತಿ ತಮ್ಮ ಪುತ್ರನಿಗೆ ಅಭಿನಂದನ್ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ: ತಮ್ಮ ಮಗುವಿಗೆ ಅಭಿನಂದನ್ ಎಂದು ಹೆಸರಿಟ್ಟ ದಂಪತಿ

    ದಂಪತಿ ಈ ಮುಂಚೆ ತಮ್ಮ ಪುತ್ರನಿಗೆ ಅಥರ್ವ ಅಥವಾ ಅಭಿನವ ಎಂದು ನಾಮಕರಣ ಮಾಡುವುದಾಗಿ ನಿರ್ಧರಿಸಿದ್ದರು. ಆದ್ರೆ ಇತ್ತೀಚೆಗೆ ಅಭಿನಂದನ್ ಮಾಡಿದ ಸಾಹಸಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಹಿನ್ನಲೆಯಲ್ಲಿ ಮೂರು ತಿಂಗಳ ಗಂಡುಮಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ:  ಪಾಕ್ ಮೇಲೆ ಏರ್‌ಸ್ಟ್ರೈಕ್- ಮಗುವಿಗೆ `ಮಿರಾಜ್ ಸಿಂಗ್’ ಹೆಸರಿಟ್ಟ ರಾಜಸ್ಥಾನ ದಂಪತಿ..!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಗುಡಿಸಲಿಗೆ ಬೆಂಕಿ – 4 ತಿಂಗಳ ಕಂದಮ್ಮ ಸಜೀವದಹನ!

    ಗುಡಿಸಲಿಗೆ ಬೆಂಕಿ – 4 ತಿಂಗಳ ಕಂದಮ್ಮ ಸಜೀವದಹನ!

    ಚಿಕ್ಕಬಳ್ಳಾಪುರ: ಆಕಸ್ಮಿಕ ಬೆಂಕಿ ತಗುಲಿ ಇಡೀ ಗುಡಿಸಲು ಧಗ ಧಗ ಹೊತ್ತಿ ಉರಿದಿದ್ದು, ಗುಡಿಸಲಿನಲ್ಲಿದ್ದ 4 ತಿಂಗಳ ಮಗು ಸಜೀವದಹನವಾಗಿರೋ ಹೃದಯವಿದ್ರಾವಕ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯ ರಾಯನಕಲ್ಲು ಗ್ರಾಮದ ಬಳಿ ನಡೆದಿದೆ.

    4 ತಿಂಗಳ ರಾಜೇಶ್ವರಿ ಮೃತ ಕಂದಮ್ಮ. ರಾಯನಕಲ್ಲು ಗ್ರಾಮದ ನಿವಾಸಿಗಳಾದ ದಿವಂಗತ ರವಿ ಹಾಗೂ ಶಶಿಕಲಾ ದಂಪತಿಯ ಮಗು ರಾಜೇಶ್ವರಿ ಅಗ್ನಿ ಅವಘಡಕ್ಕೆ ಬಲಿಯಾಗಿದೆ. ಮೂಲತಃ ಹಾವಾಡಿಗರಾದ ಶಶಿಕಲಾ ಕುಟುಂಬಸ್ಥರು ಕಳೆದ 10 ವರ್ಷಗಳಿಂದ ರಾಯನಕಲ್ಲು ಗ್ರಾಮದ ಬಳಿ ಇರುವ ಕೆರೆಯ ಪಕ್ಕದ ಬೆಟ್ಟದ ಕೆಳಗೆ ಗುಡಿಸಲು ಹಾಕಿಕೊಂಡು ಬದುಕು ಕಟ್ಟಿಕೊಂಡಿದ್ದರು.

    ವಿಪರ್ಯಾಸವೆಂದರೆ ಇಂದು ಮಗುವನ್ನು ಗುಡಿಸಲಿನಲ್ಲಿ ಮಲಗಿಸಿದ್ದ ತಾಯಿ ಶಶಿಕಲಾ ಅಡುಗೆ ಮಾಡಲು ಓಲೆ ಹಚ್ಚಿದ್ದರು. ಬಳಿಕ ಅನ್ನ ಮಾಡಲು ಅಕ್ಕಿ ತರಲು ಎಂದು ಪಕ್ಕದ ಗುಡಿಸಲಿಗೆ ಹೋಗಿದ್ದಾಗ ಬೆಂಕಿ ಗುಡಿಸಲಿಗೆ ತಗುಲಿ ಇಡೀ ಗುಡಿಸಲು ಸಂಪೂರ್ಣ ಸುಟ್ಟು ಕರಕಲಾಗಿದೆ. ಹೀಗಾಗಿ ಗುಡಿಸಲಿನಲ್ಲೇ ನಿದ್ದೆ ಮಾಡುತ್ತಿದ್ದ ಮಗು ರಾಜೇಶ್ವರಿ ಸಹ ಚಿರನಿದ್ರೆಗೆ ಜಾರಿದ್ದಾಳೆ.

    ಮಗುವನ್ನು ಕಳೆದುಕೊಂಡ ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಘಟನೆ ಕುರಿತು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂತ್ಯಕ್ರಿಯೆಯಲ್ಲಿ ಗೊತ್ತಾಯ್ತು ರಿಮ್ಸ್ ಎಡವಟ್ಟು – ಆಸ್ಪತ್ರೆಯಲ್ಲಿ `ಪದ್ಮ’ ತಾಯಂದಿರ ಗಲಾಟೆ!

    ಅಂತ್ಯಕ್ರಿಯೆಯಲ್ಲಿ ಗೊತ್ತಾಯ್ತು ರಿಮ್ಸ್ ಎಡವಟ್ಟು – ಆಸ್ಪತ್ರೆಯಲ್ಲಿ `ಪದ್ಮ’ ತಾಯಂದಿರ ಗಲಾಟೆ!

    ರಾಯಚೂರು: ತಾಯಿ ಹೆಸರು ಒಂದೇ ಆಗಿದ್ದರಿಂದ ರಾಯಚೂರಿನ ರಿಮ್ಸ್ ಆಸ್ಪತ್ರೆ ವೈದ್ಯರು ಮಕ್ಕಳನ್ನು ಬದಲಿಸಿ ಎಡವಟ್ಟು ಮಾಡಿದ್ದಾರೆ.

    ಪದ್ಮ ಜಯಪ್ಪ ಜನವರಿ 28ರಂದು ಮನೆಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ತೂಕ ಕಡಿಮೆ ಇದ್ದ ಕಾರಣ ಅವರು ಮಗುವನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಪದ್ಮ ಮೋಹನ್ ಎಂಬವರು ಕೂಡ ಇಂದು ನಸುಕಿನ ಜಾವ 1.00 ಗಂಟೆಗೆ ಹೆಣ್ಣು ಮಗುವಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಜನನದ ಬಳಿಕ ಹೆಣ್ಣು ಮಗುವಿನ ಜನ್ಮ ದಾಖಲಾತಿ ಕೂಡ ನೀಡಿದ್ದು, ಆದರೆ ಆ ಮಗು ಪಾಶ್ರ್ವವಾಯುನಿಂದ ಬಳುತ್ತಿತ್ತು.

    ಎಡವಟ್ಟು ಆಗಿದ್ದು ಎಲ್ಲಿ?
    ಪದ್ಮ ಜಯಪ್ಪ ಹಾಗೂ ಪದ್ಮ ಮೋಹನ್ ಅವರ ಗಂಡು ಮತ್ತು ಹೆಣ್ಣು ಮಗುವನ್ನು ಮಕ್ಕಳನ್ನು ಎನ್‍ಐಸಿಯುನಲ್ಲಿ ಇರಿಸಲಾಗಿತ್ತು. ಆಸ್ಪತ್ರೆಯ ಸಿಬ್ಬಂದಿ ಎರಡು ಕಡೆಯೂ ಪದ್ಮ ಮಗು (Baby of Padma) ಎಂದು ಬರೆದುಕೊಂಡಿದ್ದರು. ಈ ಮಧ್ಯೆ ಇಂದು ನಸುಕಿನ ಜಾವ 3.50ರ ಸುಮಾರಿಗೆ ಪದ್ಮ ಜಯಪ್ಪ ಅವರ ಗಂಡು ಮಗು ಮೃತಪಟ್ಟಿದೆ.

    ಆಸ್ಪತ್ರೆ ಸಿಬ್ಬಂದಿ ಪದ್ಮ ಜಯಪ್ಪ ಅವರ ಮಗುವನ್ನು ಪದ್ಮ ಮೋಹನ್ ಅವರಿಗೆ ನೀಡಿ ನಿಮ್ಮ ಮಗು ಮೃತಪಟ್ಟಿದೆ ಎಂದು ಶಿಶುವನ್ನು ಬಟ್ಟೆಯಿಂದ ಸುತ್ತಿ ನೀಡಿದ್ದಾರೆ. ಪದ್ಮ ಮೋಹನ್ ಹಾಗೂ ಅವರ ಕುಟುಂಬದವರು ತಮ್ಮದೇ ಮಗು ಎಂದು ತಿಳಿದು ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದರು. ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುವಾಗ ಹೆಣ್ಣು ಮಗು ಬದಲಾಗಿ ಗಂಡು ಮಗುವನ್ನು ವೈದ್ಯರು ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

    ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪದ್ಮ ಮೋಹನ್ ಆಸ್ಪತ್ರೆಗೆ ತೆರಳಿ ಇದು ನಮ್ಮ ಮಗು ಅಲ್ಲ ಎಂದು ವೈದ್ಯರಿಗೆ ಹೇಳಿದ್ದಾರೆ. ಈ ವೇಳೆ ಪದ್ಮ ಜಯಪ್ಪ ಅವರಿಗೆ ತಮ್ಮ ಗಂಡು ಶಿಶು ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಹೆಣ್ಣು ಮಗು ನಮ್ಮದು ಎಂದು ವೈದ್ಯರ ಬಳಿ ಗಲಾಟೆ ಮಾಡಿದ್ದಾರೆ. ಪದ್ಮ ಮೋಹನ್ ಅವರ ಹೆಣ್ಣು ಮಗು ಈಗ ಎನ್‍ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದೆ.

  • ಪ್ರೀತಿಸಿ ಮದ್ವೆಯಾಗಿ ಮಗುವಾದ್ಮೇಲೆ ಕೈಕೊಟ್ಟ- ರೊಚ್ಚಿಗೆದ್ದ ಪತ್ನಿಯಿಂದ ಪತಿ ಮನೆಯೆದುರು ಆಕ್ರೋಶ

    ಪ್ರೀತಿಸಿ ಮದ್ವೆಯಾಗಿ ಮಗುವಾದ್ಮೇಲೆ ಕೈಕೊಟ್ಟ- ರೊಚ್ಚಿಗೆದ್ದ ಪತ್ನಿಯಿಂದ ಪತಿ ಮನೆಯೆದುರು ಆಕ್ರೋಶ

    ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ 6 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಹೀನಾ ಕೌಸರ್- ಸುಹೀಲ್ ಅಹಮದ್ ಎಂಬವರ ದಾಂಪತ್ಯ ಕಲಹ ಈಗ ಬೀದಿಗೆ ಬಂದಿದೆ.

    ಪತಿ ಸುಹೀಲ್, ದುಶ್ಚಟಗಳ ದಾಸನಾಗಿ ಮದುವೆಯಾದ ಒಂದೇ ವರ್ಷಕ್ಕೆ ಕಾಟ ಕೊಡಲು ಶುರುಮಾಡಿದ್ದಾನೆ. ಅಲ್ಲದೇ ಎರಡನೇ ಮದುವೆಯಾಗಿದ್ದಾನೆ. ಹಾಗಾಗಿ ವಿಚ್ಛೇದನ ಬೇಕು ಎಂದು ಪತ್ನಿ ಹೀನಾ ಆರೋಪಿಸಿ ಆತನ ಮನೆಯೆದುರು ಆಕ್ರೋಶ ಹೊರಹಾಕಿದ್ದಾಳೆ. ಆದ್ರೆ ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಹೀನಾ ಕೌಸರ್, ಗಂಡನ ಮನೆ ಎದುರು ಗದ್ದಲ ಮಾಡಿದ್ದಾಳೆ ಎಂದು ಆರೋಪಿಸಿ ಆಕೆಯ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಪತಿಯ ಪರ ವಕೀಲರು ನಿರ್ಧರಿಸಿದ್ದಾರೆ.


    ನನ್ನ ಹಾಗೂ 5 ವರ್ಷದ ಮಗನಿಗೆ ಜೀವನಾಂಶ ಕೊಡಬೇಕು. ಮದುವೆ ವೇಳೆ ವರದಕ್ಷಿಣೆ ರೂಪದಲ್ಲಿ ನೀಡಿರುವ ಬೆಲೆಬಾಳುವ ವಸ್ತುಗಳನ್ನು ವಾಪಸ್ ಕೊಡಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಕಳೆದ ಜನವರಿ 2 ರಂದು ಸುಹೀಲ್ ಮನೆ ಎದುರು ರಂಪಾಟ ಮಾಡಿದ್ದಳು. ಮಹಿಳಾ ಪೊಲೀಸರ ಜೊತೆಗೆ ತೆರಳಿ ಗಂಡನ ಮನೆ ಬಾಗಿಲ ಎದುರು ಕಣ್ಣೀರಿಟ್ಟು ಆಕ್ರೋಶ ಹೊರ ಹಾಕಿದ್ದಾಳೆ.


    ಹೀನಾ ಕೌಸರ್ ಈ ರಂಪಾಟವೇ ಆಕೆಗೆ ಮುಳುವಾಗುವ ಸನ್ನಿವೇಶ ಎದುರಾಗಿದೆ. ಗಂಡನಿಂದ ನನಗೆ ಜೀವನಾಂಶ ಬೇಕು ಎಂದು ಸಕಲೇಶಪುರ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಕೌಸರ್, ಹಾಸನದ ಕೋರ್ಟ್ ನಲ್ಲೂ ವರದಕ್ಷಿಣೆ ದೌರ್ಜನ್ಯ ಕೇಸು ದಾಖಲಿಸಿದ್ದಾಳೆ. ಮತ್ತೊಂದೆಡೆ ನನಗೆ ನ್ಯಾಯ ಬೇಕು ಅಂತ ಪತಿ ಸುಹೀಲ್ ಅಹಮದ್ ಕೂಡ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರತ್ಯೇಕ ದೂರು ನೀಡಿದ್ದಾರೆ. ಈ ಎಲ್ಲಾ ಪ್ರಕರಣಗಳು ವಿಚಾರಣೆ ಹಂತದಲ್ಲಿರುವಾಗಲೇ, ಹೀನಾ ಕೌಸರ್ ಪೊಲೀಸ್ ದುರ್ಬಳಕೆ ಮಾಡಿಕೊಂಡು ದುರ್ವರ್ತನೆ ತೋರಿದ್ದಾಳೆ. ಅವಾಚ್ಯ ಶಬ್ಧಗಳ ಪದ ಬಳಕೆ ಮಾಡಿದ್ದಾಳೆ. ಇದೂ ಒಂದು ರೀತಿಯ ಅಕ್ರಮ ನಡೆ ಎಂದು ಆರೋಪಿಸಿ ಪತಿಯ ಪರ ವಕೀಲರು ಹೊಸದಾಗಿ ದೂರು ನೀಡಲು ಮುಂದಾಗಿದ್ದಾರೆ. ಹೀಗಾಗಿ ದುಡುಕಿನ ನಡೆಯೇ ಹೀನಾ ಕೌಸರ್‍ಗೆ ಈಗ ಮುಳುವಾಗುತ್ತಿದೆ ಎಂದು ಸುಹೀಲ್ ಪರ ವಕೀಲೆ ಭಾನು ಮುಸ್ತಾಕ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರೋಬ್ಬರಿ 250 ಕಿ.ಮೀ ಚೇಸ್ ಮಾಡಿ ಕಂದಮ್ಮನನ್ನು ರಕ್ಷಿಸಿದ ಬೆಂಗ್ಳೂರು ಪೊಲೀಸರು!

    ಬರೋಬ್ಬರಿ 250 ಕಿ.ಮೀ ಚೇಸ್ ಮಾಡಿ ಕಂದಮ್ಮನನ್ನು ರಕ್ಷಿಸಿದ ಬೆಂಗ್ಳೂರು ಪೊಲೀಸರು!

    ಬೆಂಗಳೂರು: 11 ತಿಂಗಳ ಹೆಣ್ಣು ಮಗವನ್ನು ಕಿಡ್ನಾಪ್ ಮಾಡಿದ ವ್ಯಕ್ತಿಯನ್ನು ಸಿಲಿಕಾನ್ ಸಿಟಿಯ ಜ್ಞಾನಭಾರತಿ ಪೊಲೀಸರು ಬರೋಬ್ಬರಿ 250 ಕಿ.ಮೀ ಚೇಸಿಂಗ್ ಮಾಡಿ ಮಗುವನ್ನು ರಕ್ಷಿಸಿದ್ದಾರೆ.

    ಉತ್ತರ ಭಾರತ ಮೂಲದ ದಂಪತಿಯ ಹೆಣ್ಣು ಮಗುವನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿದ್ದ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಉತ್ತರ ಭಾರತ ಮೂಲದ ಚಂದನ್ ಮತ್ತು ರಾಣಿ ಕೆಲಸದ ನಿಮಿತ್ತವಾಗಿ ಬೆಂಗಳೂರಿಗೆ ಬಂದಿದ್ದು ಮಲ್ಲತ್ತಹಳ್ಳಿಯಲ್ಲಿ ನೆಲೆಸಿದ್ದರು. ಚಂದನ್ ಹಾಗೂ ರಾಣಿಗೆ ಆರೋಪಿ ಕುಮಾರ್ ಕುಟುಂಬ ಸ್ನೇಹಿತ ಆಗಿದ್ದನು.

    ಕುಮಾರ್ ತನ್ನ ಸ್ನೇಹಿತ ಚಂದನ್ ಮನೆಗೆ ಆಗಾಗ ಬರುತ್ತಿದ್ದನು. ಈ ವೇಳೆ ಕುಮಾರ್ ಮನೆಯಲ್ಲಿದ್ದ 11 ತಿಂಗಳ ಹೆಣ್ಣು ಮಗುವನ್ನು ನೋಡಿದ್ದಾನೆ. ಬಳಿಕ ಜನವರಿ 16ರಂದು ಚಂದನ್ ಹಾಗೂ ರಾಣಿ ಮನೆ ಖಾಲಿ ಮಾಡಲು ಮುಂದಾಗಿದ್ದರು. ಈ ವೇಳೆ ಸಹಾಯಕ್ಕಾಗಿ ಕುಮಾರ್‍ನನ್ನು ಕರೆದಿದ್ದರು. ಮನೆ ವಸ್ತುಗಳನ್ನು ಸಾಗಿಸುವ ನೆಪದಲ್ಲಿ ಕುಮಾರ್ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿದ್ದಾನೆ.

    ಕುಮಾರ್ ಮಗುವಿನೊಂದಿಗೆ ತಮಿಳುನಾಡಿಗೆ ಕಾರಿನಲ್ಲಿ ಪರಾರಿಯಾಗಿದ್ದ. ಮಗುವನ್ನು ಕಿಡ್ನಾಪ್ ಮಾಡಿ ಕುಮಾರ್ 2 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಜ್ಞಾನಭಾರತಿ ಪೊಲೀಸರು ಆರೋಪಿಯನ್ನು ಬೆನ್ನಟ್ಟಿ ತಮಿಳುನಾಡಿನಲ್ಲಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಜ್ಞಾನಭಾರತಿ ಪೊಲೀಸರು ಬರೋಬ್ಬರಿ 250 ಕಿ.ಮೀ ಚೇಸಿಂಗ್ ಮಾಡಿ ಮಗುವನ್ನು ರಕ್ಷಿಸಿದ್ದಾರೆ.

    ಪೊಲೀಸರು ತಮಿಳುನಾಡು ಹೈವೇಯಲ್ಲಿ ನೂರಾರು ಕಿಲೋಮೀಟರ್ ಚೇಸ್ ಮಾಡಿ ಆರೋಪಿ ಕುಮಾರ್‍ನನ್ನು ಹಿಡಿದು, ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಮಾರ್ ಅಂಡ್ ಗ್ಯಾಂಗ್ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 4ನೇ ಮಹಡಿಯಿಂದ ಬಿದ್ರೂ ಪವಾಡಸದೃಶವಾಗಿ ಬದುಕುಳಿದ ಪುಟ್ಟ ಕಂದಮ್ಮ..!

    4ನೇ ಮಹಡಿಯಿಂದ ಬಿದ್ರೂ ಪವಾಡಸದೃಶವಾಗಿ ಬದುಕುಳಿದ ಪುಟ್ಟ ಕಂದಮ್ಮ..!

    ಮುಂಬೈ: 4ನೇ ಮಹಡಿಯಿಂದ ಬಿದ್ದ 1 ವರ್ಷ 3 ತಿಂಗಳ ಪುಟ್ಟ ಕಂದಮ್ಮವೊಂದು ಪವಾಡ ಸದೃಶವಾಗಿ ಬದುಕುಳಿದ ಘಟನೆ ಮುಂಬೈನಲ್ಲಿ ನಡೆದಿದೆ.

    ಅಥರ್ವ ಬದುಕಿ ಬಂದ ಬಾಲಕ. ಈತ ಮನೆಯ 4ನೇ ಮಹಡಿಯ ಬಾಲ್ಕನಿಯಿಂದ ಗುರುವಾರ ಬೆಳಗ್ಗೆ ಬಿದ್ದಿದ್ದಾನೆ. ಘಟನೆಯಿಂದ ಬಾಲಕನಿಗೆ ಯಾವುದೇ ರೀತಿಯ ಗಂಭೀರ ಗಾಯಗಳಾಗದೇ ಬದುಕಿದ್ದು, ಆದ್ರೆ ಮುನ್ನೆಚ್ಚರಿಕಾ ಕ್ರಮವಾಗಿ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಘಟನೆ ವಿವರ:
    ಬಾಲಕನ ತಂದೆ ಬರ್ಕದೆಸ್ ಅವರು ಡಿಯೋನರ್ ಜೆ ಗೋಪಿ ಕೃಷ್ಣ ಸಿಎಚ್‍ಎಸ್ ನ ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದರು. ನಿನ್ನೆ ಬೆಳಗ್ಗೆ 8.45ರ ಸುಮಾರಿಗೆ ಅಥರ್ವ ತಂದೆ ಅಜಿತ್ ಅವರು ಕಚೇರಿಗೆ ತೆರಳಲೆಂದು ರೆಡಿಯಾಗುತ್ತಿದ್ದರು. ಇನ್ನೊಂದೆಡೆ ಮನೆಯ ಮೂಲೆಯಲ್ಲಿರೋ ಲಿವಿಂಗ್ ರೂಂ ಪಕ್ಕ ಇರೋ ಬಾಲ್ಕನಿಯಲ್ಲಿ ಅಥರ್ವ ಅಜ್ಜಿ ಒಗೆದ ಬಟ್ಟೆಗಳೆನ್ನೆಲ್ಲಾ ಒಣಗಲು ಹಾಕೋದ್ರಲ್ಲಿ ಬ್ಯುಸಿಯಾಗಿದ್ದರು. ಅಜ್ಜಿ ಹಿಂದೆಯೇ ತೆವಳುತ್ತಾ ಹೋಗಿದ್ದ ಅಥರ್ವ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾನೆ.

    ಇತ್ತ ಆಫೀಸಿಗೆ ರೆಡಿಯಾಗಿದ್ದ ಅಜಿತ್ ಲಿವಿಂಗ್ ರೂಂಗೆ ಬರುತ್ತಿರುವಾಗ ಅಥರ್ವ ತೆವಳುತ್ತಾ ಬಾಲ್ಕನಿಯಲ್ಲಿ ನೋಡ ನೋಡುತ್ತಿದ್ದಂತೆಯೇ ಕೆಳಗೆ ಬಿದ್ದಿದ್ದಾನೆ. ನಾನು ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದೆ. ಈ ವೇಳೆ ಅಜಿತ್ ಜೋರಾಗಿ ಕಿರುಚಿಕೊಂಡಿದ್ದು ಕೇಳಿಸಿತ್ತು. ಕೂಡಲೇ ನಾವೆಲ್ಲರೂ ಲಿವಿಂಗ್ ರೂಮ್ ನತ್ತ ಓಡಿದೆವು. ಆಗ ಆತ ಬಾಲ್ಕನಿಯಿಂದ ಕೆಳಗೆ ಬಿದ್ದಿರುವುದು ತಿಳಿಯಿತು ಅಂತ ಅಥರ್ವ ಆಂಟಿ ಅಂಜಲಿ ತಿಳಿಸಿದ್ದಾರೆ.

    ಘಟನೆಯನ್ನರಿತ ತಕ್ಷಣವೇ ನಾವೆಲ್ಲರೂ ಕೆಳಗಿನ ಮಹಡಿಗೆ ಬಂದೆವು. ಆಗ ಅಲ್ಲಿ ನಾವು ಅಥರ್ವ ಕಂಡು ಅಚ್ಚರಿಗೊಳಗಾದೆವು. ಆತ ಅಲ್ಲಿ ಜೋರಾಗಿ ಅಳುತ್ತಾ, ನಿಲ್ಲಲು ಪ್ರಯತ್ನಿಸುತ್ತಿದ್ದನು. ಹೀಗಾಗಿ ಬಿದ್ದಿರುವುದನ್ನು ಕಂಡು ಭಯದಿಂದ ನಾವು ಆತನಿಗೆ ಏನೂ ಆಗಿಲ್ಲ. ಹುಷಾರಾಗಿದ್ದಾನೆ ಅಂತ ನಿಟ್ಟಿಸಿರುಬಿಟ್ಟೆವು ಎಂದು ಅವರು ವಿವರಿಸಿದ್ರು.

    ಘಟನೆಯ ಬಳಿಕ ಅನುಮಾನಗೊಂಡ ಅಜಿತ್ ಮತ್ತು ಮಂಗಳ್ ಮಗ ಅಥರ್ವನನ್ನು ಆಸ್ಪತ್ರೆಗೆ ಕರೆದೊಯ್ದು ಆತನ ದೇಹವನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಆಗ ಬಾಲಕನ ಹಿಂಬಂದಿಗೆ ಸಣ್ಣಮಟ್ಟಿನ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದ್ರೂ ಆತಂಕಗೊಂಡಿದ್ದ ಅಥರ್ವ ಹೆತ್ತವರು ನುರಿತ ತಜ್ಞರ ಬಳಿ ಪರೀಕ್ಷೆ ನಡೆಸಲು ಚಿಂತಿಸಿದ್ದಾರೆ. ಅಲ್ಲದೇ ಅಲ್ಲಿಂದ ನೇರವಾಗಿ ಆಟೋ ಹಿಡಿದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅಲ್ಲಿ ವೈದ್ಯರು ನಮ್ಮಲ್ಲಿ ಮಗುವನ್ನು ಅಡ್ಮಿಟ್ ಮಾಡಿಕೊಳ್ಳಲು ಯಾವುದೇ ಸೌಲಭ್ಯಗಳಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಬಳಿಕ ನಾವು ಮುಲುಂದ್ ನಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ಅಥರ್ವ ತಾಯಿ ಮಂಗಳ್ ಹೇಳಿದ್ದಾರೆ.

    ಸದ್ಯ ಬಾಲಕ ಐಸಿಯುನಲ್ಲಿ ದಾಖಲಾಗಿದ್ದಾನೆ. ಬಾಲಕನ ದೇಹವನ್ನು ಸ್ಕ್ಯಾನ್ ಮಾಡಿದಾಗ ಆತನ ಶರೀರದೊಳಗೆ ಯಾವುದೇ ರೀತಿಯ ಗಾಯಗಳಾಗಿರುವುದು ಕಂಡು ಬಂದಿಲ್ಲ ಎಂಬುದಾಗಿ ವರದಿಯಾಗಿದೆ.

    ಬಾಲಕ ಮೊದಲು ಬಾಲ್ಕನಿ ಹೊಂದಿಕೊಂಡಿದ್ದ ಮರದ ರೆಂಬೆಗಳಲ್ಲಿ ಸಿಲುಕಿಕೊಂಡು ನಂತರ ಅಲ್ಲಿಂದ ನೆಲಕ್ಕೆ ಬಿದ್ದಿದ್ದಾನೆ. ಹೀಗಾಗಿ ಬಿದ್ದ ರಭಸವನ್ನು ರೆಂಬೆ ಕಡಿಮೆ ಮಾಡಿದೆ. ಒಂದು ವೇಳೆ ಆತ ಬಾಲ್ಕನಿಯಿಂದ ನೇರವಾಗಿ ಕೆಳಗೆ ಬೀಳುತ್ತಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಒಟ್ಟಿನಲ್ಲಿ ಬಾಲ್ಕನಿಯಿಂದ ಬೀಳುತ್ತಿದ್ದಂತೆಯೇ ಮಗು ಮರದ ಕೊಂಬೆಯ ಮೇಲೆ ಬಿದ್ದು ನಂತರ ಅಲ್ಲಿ ನಿಯಂತ್ರಣ ಸಿಗದೇ ಕೆಳಕ್ಕೆ ಬಿದ್ದಿದ್ದಾನೆ. ಯಾಕಂದ್ರೆ ಬಿದ್ದ ಮಗುವಿನ ಕೈಯಲ್ಲಿ ಎಲೆಗಳಿದ್ದವು ಅಂತ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಾಯಿ ಬಿಟ್ಟು ಹೋದ ಮಗುವಿಗೆ ಹಾಲುಣಿಸಿದ ಮಹಿಳಾ ಪೇದೆ

    ತಾಯಿ ಬಿಟ್ಟು ಹೋದ ಮಗುವಿಗೆ ಹಾಲುಣಿಸಿದ ಮಹಿಳಾ ಪೇದೆ

    ಹೈದರಾಬಾದ್: ತಾಯಿ ಬಿಟ್ಟು ಹೋಗಿದ್ದ ಪುಟ್ಟ ಮಗುವಿಗೆ ಆಂಧ್ರ ಪ್ರದೇಶದ ಮಹಿಳಾ ಪೇದೆಯೊಬ್ಬರು ಹಾಲುಣಿಸಿ ಮಾತೃ ಕಾಳಜಿ ತೋರಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಪೇದೆ ಕೆ.ಪ್ರಿಯಾಂಕ ಹಾಗೂ ಆಕೆಯ ಪತಿ ರವೀಂದರ್ ಮಗುವಿನ ಬಗ್ಗೆ ಕಾಳಜಿ ತೋರಿದ್ದಾರೆ. ಈ ಪೊಲೀಸ್ ದಂಪತಿಯ ನಿಸ್ವಾರ್ಥ ಸೇವೆಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಉಸ್ಮಾನಿಯಾ ಆಸ್ಪತ್ರೆ ಬಳಿ ಮದ್ಯದ ಮತ್ತಿನಲ್ಲಿದ್ದ ಶಬನಾ ಬೇಗಂ ಎಂಬ ಮಹಿಳೆ ತನ್ನ ಎರಡು ವರ್ಷದ ಮಗುವನ್ನು ಅಪರಿಚಿತ ವ್ಯಕ್ತಿಗೆ ಕೊಟ್ಟು, ಕೆಲವೇ ನಿಮಿಷದಲ್ಲಿ ಮರಳಿ ಬರುವುದಾಗಿ ಹೇಳಿ ಹೋಗಿದ್ದಾಳೆ. ಆಕೆಯ ಮಾತು ನಂಬಿದ ವ್ಯಕ್ತಿ ಮಗುವನ್ನು ಎತ್ತಿಕೊಂಡಿದ್ದಾನೆ. ಆದರೆ ಮಗು ಕೊಟ್ಟು ಹೋದ ಮಹಿಳೆ ಬಹಳ ಸಮಯ ಕಳೆದರೂ ಮಹಿಳೆ ಬಾರದೇ ಇದ್ದಾಗ ಆತ ಮಗುವನ್ನು ಮನೆಗೆ ಕರೆದುಕೊಂಡು ಹೋಗಿ ಹಸಿವಿನಿಂದ ಅಳುತ್ತಿದ್ದ ಮಗುವಿಗೆ ಹಾಲು ಕುಡಿಸಿದ್ದಾನೆ. ಆದರೆ ಅದು ಕುಡಿಯದೇ ಜೋರಾಗಿ ಅಳಲು ಪ್ರಾರಂಭಿಸಿದೆ. ಮಗುವನ್ನು ತನ್ನ ಬಳಿ ಇಟ್ಟುಕೊಳ್ಳುವುದು ಅಪರಾಧ ಎಂದು ಅರಿತ ವ್ಯಕ್ತಿ ಸೋಮವಾರ ಸಮೀಪದ ಅಫ್ಜಲ್‍ಗಂಜ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾನೆ.

    ಠಾಣೆಯಲ್ಲಿಯೂ ಮಗು ಅಳುವುದನ್ನು ಕಂಡ ಸಿಬ್ಬಂದಿ ಸಮಾಧಾನ ಮಾಡಲು ಹರಸಾಹಸ ಪಟ್ಟಿದ್ದಾರೆ. ಆದರೆ ಮಗು ಮಾತ್ರ ತನ್ನ ಅಳುವನ್ನು ನಿಲ್ಲಿಸಿರಲಿಲ್ಲ. ಹಾಲು ಕುಡಿಸಲು ಮುಂದಾದರೂ ಕುಡಿಯುತ್ತಿರಲಿಲ್ಲ. ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರವೀಂದರ್ ಎಂಬವವರು ಮಗುವಿನ ವಿಚಾರವಾಗಿ ಪತ್ನಿ ಪ್ರಿಯಾಂಕಾ ಅವರಿಗೆ ಹೇಳಿದ್ದಾರೆ. ಮಗುವಿನ ವಿಚಾರ ಕೇಳಿದ ಪ್ರಿಯಾಂಕ ರಾತ್ರಿ 10.30ರ ವೇಳೆಗೆ ಠಾಣೆಗೆ ಬಂದು ಮಗುವಿಗೆ ಹಾಲುಣಿಸಿದ್ದಾರೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತಿಯ ಶರ್ಟ್ ಮಿಸ್ ಮಾಡ್ಕೊಳ್ತಿದ್ದಾರೆ ರಾಧಿಕಾ

    ಪತಿಯ ಶರ್ಟ್ ಮಿಸ್ ಮಾಡ್ಕೊಳ್ತಿದ್ದಾರೆ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಅವರು, ತಾವು ಗರ್ಭಿಣಿಯಾಗಿದ್ದಾಗ ಧರಿಸುತ್ತಿದ್ದ ಬಟ್ಟೆಯನ್ನು ಈಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಹೌದು.. ರಾಧಿಕಾ ಪಂಡಿತ್ ಅವರು ಗರ್ಭಿಣಿಯಾದಾಗ ಪತಿ ಯಶ್ ಅವರ ಶರ್ಟ್ ಅನ್ನು ಧರಿಸುತ್ತಿದ್ದರು. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ. ಗರ್ಭಿಣಿಯಾಗಿದ್ದಾಗ ಪತಿ ಯಶ್ ಶರ್ಟ್ ಧರಿಸಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಈ ಬಗ್ಗೆ ರಾಧಿಕಾ ಅವರೇ ಹೇಳಿಕೊಂಡಿದ್ದಾರೆ.

    ನಟಿ ರಾಧಿಕಾ ಅವರು ಗರ್ಭಿಣಿಯಾಗಿದ್ದಾಗ ಯಶ್ ಟಿ-ಶರ್ಟ್ ಧರಿಸಿ, ಸ್ಪೆಕ್ಸ್ ಹಾಕಿ ಫೋಟೋಗೆ ಪೋಸ್ ಕೊಟ್ಟಿದ್ದರು. ಆ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂ ಮತ್ತು ಫೇಸ್‍ಬುಕ್ ನಲ್ಲಿ ಈಗ ಅಪ್ಲೋಡ್ ಮಾಡಿದ್ದಾರೆ. ಫೋಟೋ ಜೊತೆಗೆ “ನಾನು ಗರ್ಭಿಣಿಯಾಗಿದ್ದಾಗ ಪತಿ ಯಶ್ ಟಿ-ಶರ್ಟ್ ಧರಿಸುತ್ತಿದ್ದೆ. ಆದರೆ ಈಗ ಅದನ್ನು ಧರಿಸಲು ಸಾಧ್ಯವಾಗುತ್ತಿಲ್ಲ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ” ಎಂದು ಬರೆದು ಕೊಂಡಿದ್ದಾರೆ.

    ಪತಿ ಯಶ್ ಟಿ-ಶರ್ಟ್ ಧರಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು, ಚೆನ್ನಾಗಿದೆ, ಸೂಪರ್ ಇಂತಹ ಅನೇಕ ಕಮೆಂಟ್ ಮಾಡುತ್ತಿದ್ದಾರೆ. ಈಗಾಗಲೇ 84 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.

    https://www.instagram.com/p/BrfsBMKBsbZ/

    ನಟಿ ರಾಧಿಕಾ ಪಂಡಿತ್ ಅವರು ಡಿಸೆಂಬರ್ 2 ಭಾನುವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಲ್ಕು ದಿನದ ಹಸುಗೂಸಿನೊಂದಿಗೆ ಬಾಣಂತಿ ಬೀದಿಪಾಲು

    ನಾಲ್ಕು ದಿನದ ಹಸುಗೂಸಿನೊಂದಿಗೆ ಬಾಣಂತಿ ಬೀದಿಪಾಲು

    ಚಿತ್ರದುರ್ಗ: ಗಂಡನ ಮನೆಯವರ ಕಾಟಕ್ಕೆ ಬಾಣಂತಿ ಹಾಗೂ ನಾಲ್ಕು ದಿನದ ಹಸುಗೂಸು ಬೀದಿಪಾಲಾಗಿರುವ ಅಮಾನವೀಯ ಘಟನೆ ಕೋಟೆನಾಡಿನಲ್ಲಿ ಬೆಳಕಿಗೆ ಬಂದಿದೆ.

    ನೆಲಗೇತನಹಟ್ಟಿ ನಿವಾಸಿ ಶಾರದಮ್ಮ ಎಂಬ ಮಹಿಳೆ ತನ್ನ ಪುಟ್ಟ ಕಂದಮ್ಮ ಜೊತೆ ಕಂಗಾಲಾಗಿ ಬೀದಿಯಲ್ಲಿ ನಿಂತಿದ್ದಾರೆ. ಕುಟುಂಬದ ವಿರೋಧದ ನಡುವೇ ಹಿರೇಹಳ್ಳಿ ನಿವಾಸಿ ಮಲ್ಲಿಕಾರ್ಜುನ್ ಎಂಬಾತನನ್ನು ಶಾರದಮ್ಮ ಪ್ರೀತಿಸಿ ಮದುವೆಯಾಗಿದ್ದರು. ನಾಲ್ಕು ದಿನಗಳ ಹಿಂದೆ ಶಾರದಮ್ಮ ಗಂಡು ಮಗುವಿಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ನಾರ್ಮಲ್ ಡೆಲಿವರಿ ಆಗಿದ್ದರಿಂದ ಜಿಲ್ಲಾಸ್ಪತ್ರೆ ವೈದ್ಯರು ಶಾರದಮ್ಮ ಹಾಗೂ ಮಗುವನ್ನು ಡಿಸ್ಚಾರ್ಜ್ ಮಾಡಿದ್ದಾರೆ. ಆದರೆ ಗಂಡ ಬರುವ ತನಕ ಮನೆಗೆ ಬರಬೇಡ ಅಂತ ಅತ್ತೆ ಮನೆಯವರ ವಿರೋಧಿಸಿದಕ್ಕೆ ಬಾಣಂತಿ ಹಾಗೂ ಮಗು ಬೀದಿಪಾಲಾಗಿದ್ದಾರೆ.

    ಹೆಂಡತಿ ಮಗುವನ್ನು ನೋಡಲು ಬಾರದೇ ಗಂಡ ಮಲ್ಲಿಕಾರ್ಜುನ್ ನಾಪತ್ತೆಯಾಗಿದ್ದು, ಇತ್ತ ತವರು ಮನೆಯೂ ಇಲ್ಲ, ಅತ್ತ ಗಂಡನ ಮನೆಯೂ ಇಲ್ಲವೆಂದು ದಾರಿ ಕಾಣದೇ ದೇವಸ್ಥಾನದಲ್ಲಿ ಮಗುವಿನೊಂದಿಗೆ ಶಾರದಮ್ಮ ಇದ್ದಾರೆ. ಸದ್ಯ ಚಳ್ಳಕೆರೆ ಆಸ್ಪತ್ರೆಯಲ್ಲಿರುವ ಬಾಣಂತಿ, ತನ್ನ ಗಂಡ ಯಾಕೆ ನೋಡಲು ಬಂದಿಲ್ಲ ಎಂಬುದೇ ತಿಳಿಯದೇ ಕಂಗಾಲಾಗಿ ಕಣ್ಣೀರಿಡುತ್ತಿದ್ದಾರೆ. ಗಂಡ ಬಾರದೇ ಇದ್ದರೆ ಮುಂದೇನು ಗತಿಯೆಂದು ತಾಯಿ ಮಗು ಆತಂಕದಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಂಸ್ಕೃತಿಕ ನಗರದಲ್ಲಿ ಬರೋಬ್ಬರಿ 5 ಕೆ.ಜಿಯ ಅಪರೂಪದ ಮಗು ಜನನ

    ಸಾಂಸ್ಕೃತಿಕ ನಗರದಲ್ಲಿ ಬರೋಬ್ಬರಿ 5 ಕೆ.ಜಿಯ ಅಪರೂಪದ ಮಗು ಜನನ

    ಮೈಸೂರು: ಸಾಂಸ್ಕೃತಿಕ ನಗರದಲ್ಲಿ ಬರೋಬ್ಬರಿ 5 ಕೆ.ಜಿಯ ಅಪರೂಪದ ಮಗು ಜನನವಾಗಿದೆ. ನಗರದ ರಾಜೇಶ್ವರಿ ಈ ಭಾರೀ ತೂಕದ ಮಗುವಿಗೆ ಜನ್ಮ ನೀಡಿದ ತಾಯಿ.

    ರಾಜೇಶ್ವರಿ ತಿಲಕ್ ನಗರದ ನಿವಾಸಿ ಸಿದ್ದರಾಜು ಅವರ ಪತ್ನಿಯಾಗಿದ್ದು, ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಪರೂಪದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ತೂಕ ಜಾಸ್ತಿಯಿದ್ದ ಕಾರಣ ಸಿಸೇರಿಯನ್ ಮೂಲಕ ವೈದ್ಯಾಧಿಕಾರಿಗಳು ಹೊರತೆಗೆದಿದ್ದಾರೆ. ಇದನ್ನೂ ಓದಿ: ಗರ್ಭಿಣಿಯರಿಗೆ ಸಿಸೇರಿಯನ್ ಹೆರಿಗೆ ಯಾಕೆ ಮಾಡ್ತಾರೆ? ಕಾರಣಗಳೇನು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv