Tag: Baby

  • ಮೂಢನಂಬಿಕೆಗೆ ಕಂದಮ್ಮ ಬಲಿ – ಚಿಕಿತ್ಸೆ ಬದಲು ಬರೆ ಎಳೆದ ತಾಂತ್ರಿಕ

    ಮೂಢನಂಬಿಕೆಗೆ ಕಂದಮ್ಮ ಬಲಿ – ಚಿಕಿತ್ಸೆ ಬದಲು ಬರೆ ಎಳೆದ ತಾಂತ್ರಿಕ

    ಗಾಂಧಿನಗರ: ಅನಾರೋಗ್ಯದಿಂದ ಬಳಲುತ್ತಿದ್ದ 1 ವರ್ಷದ ಕಂದಮ್ಮ ಮೂಢನಂಬಿಕೆಗೆ ಬಲಿಯಾಗಿದೆ.

    ಗುಜರಾತ್‍ನ ಬನಸ್ಕಾಂತ ಜಿಲ್ಲೆಯ ವಾಸೆಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಾಸೆಡಾ ಗ್ರಾಮದ ವಿಫುಲ್ ಸಾವನ್ನಪ್ಪಿದ ಮಗು. ವಿಫುಲ್‍ಗೆ ಕಳೆದ 10 ದಿನಗಳಿಂದ ಜ್ವರ ಬಂದಿತ್ತು. ಆದರೆ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಬದಲು ತಾಂತ್ರಿಕನ್ನೊಬ್ಬನ ಬಳಿ ಕರೆದುಕೊಂಡು ಹೋಗಿದ್ದಾರೆ.

    ಅಲ್ಲಿ ಆ ತಾಂತ್ರಿಕ ಜ್ವರ ಕಡಿಮೆಯಾಗುತ್ತದೆ ಎಂದು ಪುಟ್ಟ ಕಂದಮ್ಮನಿಗೆ ಕಬ್ಬಿಣದ ರಾಡ್‍ನಿಂದ ಬರೆ ಹಾಕಿದ್ದಾನೆ. ಇದರಿಂದ ಮಗುವಿಗೆ ಸೋಂಕು ತಗುಲಿದ್ದು, ಮನೆಗೆ ಬಂದ ಮೇಲೆ ಮಗುವಿನ ಅನಾರೋಗ್ಯ ಜಾಸ್ತಿಯಾಗಿದೆ.

    ಮನೆಯವರು ಮಗುವನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಆಸ್ಪತ್ರೆಯಲ್ಲೇ ಸಾವನ್ನಪ್ಪಿದೆ. ಈ ಮಗುವಿಗೆ ನ್ಯುಮೋನಿಯಾ ಇತ್ತು. ಆದರೆ ಪೋಷಕರ ಮೂಢನಂಬಿಕೆಗೆ ಮಗು ಸಾವನ್ನಪ್ಪಿದೆ. ಮೊದಲೇ ಚಿಕಿತ್ಸೆ ಕೊಡಿಸಿದ್ದರೆ ಮಗು ಉಳಿಯುತಿತ್ತು ಎಂದು ವೈದ್ಯರು ಹೇಳಿದ್ದಾರೆ.

  • ‘ಬೇಬಿ’ ದೀಪಿಕಾ ಫೋಟೋ ಹಂಚಿಕೊಂಡ ರಣ್‍ವೀರ್

    ‘ಬೇಬಿ’ ದೀಪಿಕಾ ಫೋಟೋ ಹಂಚಿಕೊಂಡ ರಣ್‍ವೀರ್

    ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ತಮ್ಮ ಪತ್ನಿ, ನಟಿ ದೀಪಿಕಾ ಪಡುಕೋಣೆಯ ಫೋಟೋವನ್ನು ಫಿಲ್ಟರ್ ಮಾಡಿ ಅದನ್ನು ಮಗುವಿನ ಫೋಟೋ ಮಾಡಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ದೀಪಿಕಾ ಕೇನ್ಸ್ 2019ರಲ್ಲಿ ಹಸಿರು ಬಣ್ಣದ ಉಡುಪು ಧರಿಸಿ ಅದಕ್ಕೆ ಟರ್ಬನ್ ಹಾಕಿ ಭಾಗವಹಿಸಿದ್ದರು. ಈಗ ರಣ್‍ವೀರ್ ಈ ಫೋಟೋವನ್ನು ಬೇಬಿ ದೀಪಿಕಾ ಪಡುಕೋಣೆಯಂತೆ ಫಿಲ್ಟರ್ ಮಾಡಿ ಅದನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    ???????????? @deepikapadukone

    A post shared by Ranveer Singh (@ranveersingh) on

    ರಣ್‍ವೀರ್ ಈ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದೆ. ಈ ಪೋಸ್ಟ್ ಇದುವರೆಗೂ 20 ಲಕ್ಷಕ್ಕೂ ಹೆಚ್ಚು ಲೈಕ್ಸ್ ಹಾಗೂ 11 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ. ಈ ಫೋಟೋ ನೋಡಿ ಜನರು ದೀಪಿಕಾ ಗರ್ಭಿಣಿನಾ ಎಂದು ಕಮೆಂಟ್ ಮಾಡುವ ಮೂಲಕ ರಣ್‍ವೀರ್ ಗೆ ಪ್ರಶ್ನಿಸಿದ್ದಾರೆ.

    ಈ ಪೋಸ್ಟ್ ನೋಡಿದ ಅಭಿಮಾನಿಗಳು, ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಗರ್ಭಿಣಿ ಆಗಿದ್ದಾರಾ?, ಗುಡ್ ನ್ಯೂಸ್ ಸಿಗುವ ಸೂಚನೆ ಸಿಗುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪೋಕಿಮೋನ್‍ನ ‘ಬೇಬಿ ಬಲ್ಬಸಾರ್” ಎಂದು ಕಮೆಂಟ್ ಮಾಡಿ ದೀಪಿಕಾ ಕಾಲೆಳೆದಿದ್ದಾರೆ.

    ಸದ್ಯ ದೀಪಿಕಾ ಈ ಪೋಸ್ಟ್ ಗೆ ಇದುವರೆಗೂ ಯಾವುದೇ ಕಮೆಂಟ್ ಮಾಡಿಲ್ಲ.

  • ನಿದ್ದೆ ಗುಂಗಲ್ಲಿ ಮಗುವನ್ನೇ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ ಕೊಂದ ತಾಯಿ!

    ನಿದ್ದೆ ಗುಂಗಲ್ಲಿ ಮಗುವನ್ನೇ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ ಕೊಂದ ತಾಯಿ!

    ಜೈಪುರ: ರಾತ್ರಿ ವೇಳೆ ನಿದ್ದೆ ಗುಂಗಿನಲ್ಲಿ ತಾಯಿಯೊಬ್ಬರು 6 ತಿಂಗಳ ಮಗುವನ್ನು ನೀರಿನ ಟ್ಯಾಂಕಿನಲ್ಲಿ ಮುಳುಗಿಸಿ ಹತ್ಯೆಗೈದ ಭಯಾನಕ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

    35 ವರ್ಷದ ಆರೋಪಿ ದೀಪಿಕಾ ಗುಜ್ಜಾರ್ ಈ ಕೃತ್ಯವೆಸೆಗಿದ್ದಾರೆ. ಈ ಘಟನೆಯೂ ಭಾನುವಾರ ನಡೆದಿದ್ದು, ತಾಯಿಯೇ ಆರೋಪಿ ಎನ್ನುವುದು ಮಂಗಳವಾರ ತಿಳಿದಿದೆ. ಭಾನುವಾರ ರಾತ್ರಿ ಪತಿ ಹಾಗೂ ಮಗುವಿನ ಜೊತೆ ಮನೆಯ ಎರಡನೇ ಮಹಡಿಯಲ್ಲಿ ಆರೋಪಿ ಮಲಗಿದ್ದಳು. ಆದೇನಾಯ್ತೋ ಗೊತ್ತಿಲ್ಲ. ರಾತ್ರಿ ನಿದ್ದೆಯಿಂದ ಎದ್ದ ಮಹಿಳೆ ಮಗುವನ್ನು ಎತ್ತುಕೊಂಡು ಹೋಗಿ ಎರಡನೇ ಮಹಡಿಯಯಲ್ಲಿರುವ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ, ತನ್ನ ಪಾಡಿಗೆ ವಾಪಸ್ ಬಂದು ಮಲಗಿದ್ದಾಳೆ.

    ರಾತ್ರಿ 1.30 ಗಂಟೆ ಸುಮಾರಿಗೆ ಪತಿಗೆ ಎಚ್ಚರವಾದಾಗ ಮಗುವನ್ನು ಕಾಣದೆ ಗಾಬರಿಯಾಗಿದ್ದಾರೆ. ಈ ಬಗೆ ಪತ್ನಿ ಬಳಿ ಕೇಳಿದ್ದಾನೆ. ಆಕೆ ಕೂಡ ನನಗೆ ಗೊತ್ತಿಲ್ಲ ಎಂದಿದ್ದಾಳೆ. ನಂತರ ಮನೆಮಂದಿ ಎಲ್ಲರೂ ಸೇರಿ ರಾತ್ರಿ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅಜ್ಜಿಗೆ ನೀರಿನ ಟ್ಯಾಂಕ್‍ನಲ್ಲಿ ಮುಳುಗಿರುವ ಮಗು ಕಾಣಿಸಿದ್ದು, ಮಗುವನ್ನು ರಕ್ಷಿಸುವ ಮುನ್ನವೇ ಕಂದಮ್ಮ ಸಾವನ್ನಪ್ಪಿತ್ತು.

    ಸೀತಾರಾಮ್ ಗುಜ್ಜಾರ್ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದು, ಆರೋಪಿ ತಾಯಿ ಗೃಹಿಣಿಯಾಗಿದ್ದರು. ಸೀತಾರಾಮ್ ದಂಪತಿ ಮನೆಯಲ್ಲಿ ಪೋಷಕರು ಹಾಗೂ ಅಜ್ಜಿ ಜತೆ ವಾಸವಾಗಿದ್ದರು. ಈ ಕೃತ್ಯದ ಬಗ್ಗೆ ಬೋರೆಖೇಡಾ ಪೊಲೀಸ್ ಠಾಣೆಯಲ್ಲಿ ಪತಿ ದೂರು ದಾಖಲಿಸಿದ್ದರು. ಆಗ ಪೊಲೀಸರು ವಿಚಾರಣೆ ನಡೆಸಿದಾಗ ತಾಯಿಯೇ ಕೊಲೆ ಮಾಡಿರುವುದು ತಿಳಿದು ಬಂದಿದ್ದು, 302ರ ಕಾಯ್ದೆಯ ಅನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ತಾಯಿಯೇ ಕೊಲೆ ಮಾಡಿರುವ ಬಗ್ಗೆ ತಿಳಿದ ಬಳಿಕ ಆಕೆಯನ್ನು ಪ್ರಶ್ನಿಸಿದಾಗ ನಿದ್ದೆಯಿಂದ ಎದ್ದಿದ್ದಾಗಲಿ, ಮಗುವನ್ನು ತೆಗೆದುಕೊಂಡು ಹೋಗಿ ನೀರಿನ ಟ್ಯಾಂಕ್‍ನಲ್ಲಿ ಹಾಕಿ ಬಂದ ವಿಚಾರ ನನಗೆ ಗೊತ್ತಾಗಲಿಲ್ಲ ಎಂದು ಹೇಳುತ್ತಿದ್ದಾಳೆ. ಆದರೆ ಈ ಕೃತ್ಯ ಎಸಗಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.

    ಸದ್ಯ ಈ ಬಗ್ಗೆ ಪೊಲೀಸರು  ತನಿಖೆ ನಡೆಸುತ್ತಿದ್ದು, ಆರೋಪಿಗೆ ಯಾವುದೇ ಮಾನಸಿಕ ಕಾಯಿಲೆ ಇಲ್ಲ ಎಂಬುದು ತಿಳಿದಿದೆ. ಅಲ್ಲದೆ ಈ ಹಿಂದೆ ಮಹಿಳೆಯ ಎರಡು ಮಕ್ಕಳು ಕೂಡ ತೀರಿಹೋಗಿದ್ದರು ಎಂದು ವರದಿಯಾಗಿದೆ.

  • ಜೂ.ಸಿಂಡ್ರೆಲಾಳ ಮತ್ತೊಂದು ಫೋಟೋ ರಿವೀಲ್ ಮಾಡಿದ ರಾಧಿಕಾ ಪಂಡಿತ್

    ಜೂ.ಸಿಂಡ್ರೆಲಾಳ ಮತ್ತೊಂದು ಫೋಟೋ ರಿವೀಲ್ ಮಾಡಿದ ರಾಧಿಕಾ ಪಂಡಿತ್

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಮಗಳ ಮತ್ತೊಂದು ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದು, ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗಳೊಂದಿಗೆ ಇರುವ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ರಾಧಿಕ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ Have a great weekend everyone ಎಂದು ಬರೆದು ತಾವು ಹಾಗೂ ಯಶ್ ಮಗಳೊಂದಿಗೆ ಇರುವ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿನ ರಾಕಿಂಗ್ ದಂಪತಿಯ ಮಗಳ ನಗುವಿಗೆ ನೆಟ್ಟಿಗರು ಕಳೆದೋಗಿದ್ದಾರೆ. ಈವರೆಗೆ ಈ ಫೋಟೋ 1 ಲಕ್ಷಕ್ಕೂ ಹೆಚ್ಚು ಲೈಕ್ ಪಡೆದಿದ್ದು, ಈ ಮುದ್ದಾದ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

    https://www.instagram.com/p/BxRpim7BjKR/

    ಈ ಹಿಂದೆ ಮೇ 7ರಂದು ರಾಧಿಕಾ ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಮಗಳ ಫಸ್ಟ್ ಫೋಟೋ ರಿವಿಲ್ ಮಾಡಿದ್ದರು. “ನಮ್ಮ ಅಮೂಲ್ಯವಾದ ಖುಷಿಯನ್ನು ಪರಿಚಯಿಸುತ್ತಿದ್ದೇವೆ. ನಾವು ಇನ್ನೂ ಮಗುವಿಗೆ ಹೆಸರಿಟ್ಟಿಲ್ಲ. ಹೆಸರು ಇಡುವವರೆಗೂ ಎಲ್ಲರೂ `ಬೇಬಿವೈಆರ್’ ಎಂದು ಕರೆಯಿರಿ. ನೀವು ಎಲ್ಲರೂ ಸೇರಿ ನನ್ನ ಮಗಳಿಗೆ ಪ್ರೀತಿ ಹಾಗೂ ಆರ್ಶೀವಾದ ನೀಡಿ” ಎಂದು ಬರೆದು ಪೋಸ್ಟ್ ಮಾಡಿದ್ದರು.

    https://www.instagram.com/p/BxJqhuGBwC0/?utm_source=ig_embed

    ನಟ ಯಶ್ ಅವರು ಕೂಡ ತಮ್ಮ ಇನ್‍ಸ್ಟಾಗ್ರಾಂ ಹಾಗೂ ಟ್ವಿಟ್ಟರಿನಲ್ಲಿ ಮಗುವಿನ ಫೋಟೋ ಹಂಚಿಕೊಂಡಿದ್ದರು. ಅಲ್ಲದೆ, “ನೀವು ಹೇಳಿದ್ದೇ ಸರಿ. ಇವಳು ಬರೋವರ್ಗು ಮಾತ್ರ ನನ್ನ ಹವಾ. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ?. ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ Baby YR  ಅಂತಾನೇ ಕರೆಯೋಣ. ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ” ಎಂದು ಬರೆದು ಪೋಸ್ಟ್ ಮಾಡಿದ್ದರು.

  • ಮದ್ವೆ ಮನೆಯಲ್ಲಿ 18 ತಿಂಗಳ ಕಂದಮ್ಮನ ಮೇಲೆ ಸಂಬಂಧಿಕನಿಂದಲೇ ರೇಪ್!

    ಮದ್ವೆ ಮನೆಯಲ್ಲಿ 18 ತಿಂಗಳ ಕಂದಮ್ಮನ ಮೇಲೆ ಸಂಬಂಧಿಕನಿಂದಲೇ ರೇಪ್!

    ಆಗ್ರಾ: 18 ತಿಂಗಳ ಪುಟ್ಟ ಕಂದಮ್ಮನ ಮೇಲೆ ಸಂಬಂಧಿಕನೇ ಮದುವೆ ಸಮಾರಂಭದಲ್ಲಿ ಅತ್ಯಾಚಾರ ಮಾಡಿದ್ದಾನೆ. ಮಗುವನ್ನು ಯಾರಿಗೂ ತಿಳಿಯದಂತೆ ಪೊದೆಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಪೋಹಿಯಾ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೆಲ ದಿನಗಳ ಹಿಂದೆ ಪೋಹಿಯಾ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ತಾಯಿಯೊಂದಿಗೆ ಮದುವೆಗೆ ಬಂದಿದ್ದ ಮಗುವನ್ನು ಸಂಬಂಧಿಕನೊಬ್ಬ ಮದುವೆ ಸಮಾರಂಭ ನಡೆಯುತ್ತಿದ್ದ ಸ್ಥಳದಿಂದ ಯಾರಿಗೂ ತಿಳಿಯದಂತೆ ಎತ್ತುಕೊಂಡು ಹೋಗಿ, ಅಮಾನುಷವಾಗಿ ಅತ್ಯಾಚಾರ ಮಾಡಿದ್ದಾನೆ. ಬಳಿಕ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ತುಸು ದೂರದಲ್ಲಿದ್ದ ಪೊದೆಯೊಂದರಲ್ಲಿ ರಕ್ತಸಿಕ್ತವಾಗಿದ್ದ ಮಗುವನ್ನು ಎಸೆದು ಹೋಗಿದ್ದಾನೆ.

    ಮದುವೆ ನಡೆಯುತ್ತಿದ್ದ ಸ್ಥಳದಲ್ಲಿ ಮಗು ಕಾಣದಿದ್ದಾಗ, ತಾಯಿ ಹಾಗೂ ಕೆಲವರು ಮಗುವನ್ನು ಸುತ್ತಮುತ್ತ ಹುಡುಕಿದ್ದಾರೆ. ಆಗ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ಸುಮಾರು 400 ಮೀ. ದೂರದಲ್ಲಿದ್ದ ಪೊದೆಯೊಂದರ ನಡುವೆ ಮಗು ಜ್ಞಾನ ತಪ್ಪಿ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಈ ವೇಳೆ ನಡೆದಿರುವ ವಿಷಯದ ಬಗ್ಗೆ ತಾಯಿ ಬಹಿರಂಗಪಡಿಸಲು ಮುಂದಾದಾಗ ಆಕೆಯ ಸಂಬಂಧಿಕರು ಯಾರಿಗೂ ತಿಳಿಸಿದಂತೆ ಹೇಳಿ ತಾಯಿ ಮಗುವನ್ನು ಸ್ಥಳದಿಂದ ಕಳುಹಿಸಿದ್ದಾರೆ.

    ಬಳಿಕ ಈ ಬಗ್ಗೆ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ವಿರುದ್ಧ ಪೋಸ್ಕೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 376 ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರು ಬಲೆ ಬಿಸಿದ್ದಾರೆ. ಅಲ್ಲದೆ ಮಗುವಿನ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ರಾಕಿಂಗ್ ದಂಪತಿಯಿಂದ ಮಗಳ ಫೋಟೋ ರಿವೀಲ್

    ರಾಕಿಂಗ್ ದಂಪತಿಯಿಂದ ಮಗಳ ಫೋಟೋ ರಿವೀಲ್

    ಬೆಂಗಳೂರು: ರಾಕಿಂಗ್ ದಂಪತಿಯಾದ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ.

    ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಂ ಹಾಗೂ ಫೇಸ್‍ಬುಕ್‍ನಲ್ಲಿ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ರಾಧಿಕಾ ಮಗುವಿನ ಫೋಟೋ ಹಾಕಿ, “ನಮ್ಮ ಅಮೂಲ್ಯವಾದ ಖುಷಿಯನ್ನು ಪರಿಚಯಿಸುತ್ತಿದ್ದೇವೆ. ನಾವು ಇನ್ನೂ ಮಗುವಿಗೆ ಹೆಸರಿಟ್ಟಿಲ್ಲ. ಹೆಸರು ಇಡುವವರೆಗೂ ಎಲ್ಲರೂ ‘ಬೇಬಿವೈಆರ್’ ಎಂದು ಕರೆಯಿರಿ. ನೀವು ಎಲ್ಲರೂ ಸೇರಿ ನನ್ನ ಮಗಳಿಗೆ ಪ್ರೀತಿ ಹಾಗೂ ಆರ್ಶೀವಾದ ನೀಡಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ನಟ ಯಶ್ ಅವರು ಕೂಡ ತಮ್ಮ ಇನ್‍ಸ್ಟಾಗ್ರಾಂ ಹಾಗೂ ಟ್ವಿಟ್ಟರಿನಲ್ಲಿ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ, “ನೀವು ಹೇಳಿದ್ದೇ ಸರಿ. ಇವಳು ಬರೋವರ್ಗು ಮಾತ್ರ ನನ್ನ ಹವಾ. ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ?. ಇನ್ನೂ ಹೆಸರಿಟ್ಟಿಲ್ಲ ಸದ್ಯಕ್ಕೆ Baby YR ಅಂತಾನೇ ಕರೆಯೋಣ. ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಹಿಂದೆ ರಾಧಿಕಾ, “ಅಪ್ಪ-ಮಗಳ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ನೀವೆಲ್ಲರೂ ನಮ್ಮ ಪುಟ್ಟ ದೇವತೆಯನ್ನು ನೋಡಲು ಅತ್ಯಂತ ಹುರುಪಿನಿಂದ ಕಾಯುತ್ತಿದ್ದೀರಿ ಎಂದು ನನಗೆ ಗೊತ್ತಿದೆ. ಹೀಗಾಗಿ ನಿಮ್ಮ ಆಸೆಯನ್ನು ನಿರಾಸೆ ಮಾಡುವುದಿಲ್ಲ. ಆದ್ದರಿಂದ ಮೇ 7ರ ಅಕ್ಷಯ ತೃತೀಯದಂದು ನಾವು ನಮ್ಮ ಮಗಳ ಫೋಟೋವನ್ನು ರಿವೀಲ್ ಮಾಡುತ್ತೇವೆ” ಎಂದು ಅಪ್ಪ ಹಾಗೂ ಮಗಳ ಅರ್ಧ ಫೋಟೋ ಹಾಕಿ ಬರೆದುಕೊಂಡಿದ್ದರು.

    ಯಶ್ ಮತ್ತು ರಾಧಿಕಾ ಅವರು 2016 ಡಿಸೆಂಬರ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, 2018ರ ಡಿಸೆಂಬರ್ 2ರಂದು ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದಂಪತಿ ಇದುವರೆಗೂ ತಮ್ಮ ಮಗಳ ಫೋಟೋವನ್ನು ಎಲ್ಲೂ ಪ್ರಕಟಿಸಿರಲಿಲ್ಲ.

  • ಆಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣ – ಮೈಸೂರು, ಬೆಂಗ್ಳೂರು ಹೆದ್ದಾರಿ ತಡೆದು ಪ್ರತಿಭಟನೆ

    ಆಸ್ಪತ್ರೆಯಲ್ಲಿ ಬಾಣಂತಿ ಸಾವು ಪ್ರಕರಣ – ಮೈಸೂರು, ಬೆಂಗ್ಳೂರು ಹೆದ್ದಾರಿ ತಡೆದು ಪ್ರತಿಭಟನೆ

    – ಆಸ್ಪತ್ರೆಯಲ್ಲಿದ್ದ ಕಂಪ್ಯೂಟರ್, ಕಿಟಕಿ ಗ್ಲಾಸ್ ಪುಡಿಪುಡಿ

    ರಾಮನಗರ: ಗಂಡು ಮಗುವಿಗೆ ಜನ್ಮ ನೀಡಿ ಅರ್ಧ ಗಂಟೆಯ ಬಳಿಕ ಬಾಣಂತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

    ಮೃತ ರಶ್ಮಿ ಸಂಬಂಧಿಕರು ಬೆಂಗಳೂರು – ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅಲ್ಲದೆ ಆಸ್ಪತ್ರೆಗೆ ನುಗ್ಗಿ ಕಂಪ್ಯೂಟರ್, ಕಿಟಕಿ ಗ್ಲಾಸ್ ಗಳು, ಪೀಠೋಪಕರಣಗಳು ಧ್ವಂಸ ಮಾಡಿದ್ದಾರೆ. ರಶ್ಮಿ ಪೋಷಕರು ಸ್ಥಳಕ್ಕೆ ವೈದ್ಯರು ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.

    ಘಟನೆ ವಿವರ:
    ಚನ್ನಪಟ್ಟಣದ ದೇವರಹೊಸಹಳ್ಳಿ ಗ್ರಾಮದ ರಶ್ಮಿ(19)ಯನ್ನು ಹೆರಿಗೆಗೆಂದು ನಿನ್ನೆ ತಡರಾತ್ರಿ 12 ಗಂಟೆ ಸುಮಾರಿಗೆ ನರ್ಸಿಂಗ್ ಹೋಂಗೆ ದಾಖಲಿಸಲಾಗಿತ್ತು. ಹಾಗೆಯೇ ರಶ್ಮಿ 12 ಗಂಟೆ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಜನನವಾದ ಅರ್ಧ ಗಂಟೆಯಲ್ಲೇ ರಶ್ಮಿ ಮೃಪಟ್ಟಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.

    ರಶ್ಮಿಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ವೈದ್ಯರು ಎಡವಟ್ಟು ಮಾಡಿದ್ದಾರೆ. ಹೀಗಾಗಿ ರಶ್ಮಿ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ವೈದ್ಯರು ಆಪರೇಷನ್ ಥಿಯೇಟರ್ ನಲ್ಲಿ ಶವ ಬಿಟ್ಟು ಪೊಲೀಸ್ ಭದ್ರತೆಯಲ್ಲಿ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಕಳೆದ ಒಂದು ವರ್ಷದ ಹಿಂದೆ ರಶ್ಮಿಯನ್ನು ದೇವರ ಹೊಸಹಳ್ಳಿಯ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ಸದ್ಯ ಆಸ್ಪತ್ರೆಗೆ ಡಿಎಚ್‍ಓ ಭೇಟಿ ನೀಡಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಘಟನೆ ಸಂಬಂಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಗುವಿಗೆ ಜನ್ಮವಿತ್ತ ಅರ್ಧ ಗಂಟೆಯಲ್ಲೇ ಬಾಣಂತಿ ಸಾವು

    ಮಗುವಿಗೆ ಜನ್ಮವಿತ್ತ ಅರ್ಧ ಗಂಟೆಯಲ್ಲೇ ಬಾಣಂತಿ ಸಾವು

    ರಾಮನಗರ: ಚನ್ನಪಟ್ಟಣದ ಬಾಲು ನರ್ಸಿಂಗ್ ಹೋಂನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಅರ್ಧ ಗಂಟೆಯಲ್ಲೇ ಬಾಣಂತಿ ಸಾವನ್ನಪ್ಪಿದ ಘಟನೆ ನಡೆದಿದೆ.

    ಚನ್ನಪಟ್ಟಣದ ದೇವರಹೊಸಹಳ್ಳಿ ಗ್ರಾಮದ ರಶ್ಮಿ(19) ಮೃತಪಟ್ಟ ಬಾಣಂತಿ. ಆಸ್ಪತ್ರೆಯ ವೈದ್ಯೆ ಡಾ.ಶೈಲಜಾ ಅವರ ಎಡವಟ್ಟಿನಿಂದಲೇ ರಶ್ಮಿ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದಾರೆ.

    ರಶ್ಮಿಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ವೈದ್ಯರು ಎಡವಟ್ಟು ಮಾಡಿದ್ದಾರೆ. ಹೀಗಾಗಿ ರಶ್ಮಿ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ವೈದ್ಯರು ಆಪರೇಷನ್ ಥಿಯೇಟರ್ ನಲ್ಲಿ ಶವ ಬಿಟ್ಟು ಪೊಲೀಸ್ ಭದ್ರತೆಯಲ್ಲಿ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಕಳೆದ ಒಂದು ವರ್ಷದ ಹಿಂದೆ ರಶ್ಮಿಯನ್ನು ದೇವರ ಹೊಸಹಳ್ಳಿಯ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ತಡರಾತ್ರಿ 12 ಗಂಟೆ ಸುಮಾರಿಗೆ ಹೆರಿಗೆಗೆ ಎಂದು ರಶ್ಮಿಯನ್ನು ನರ್ಸಿಂಗ್ ಹೋಂಗೆ ದಾಖಲಿಸಲಾಗಿತ್ತು. ಹಾಗೆಯೇ ರಶ್ಮಿ 12 ಗಂಟೆ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಜನನವಾದ ಅರ್ಧ ಗಂಟೆಯಲ್ಲೇ ರಶ್ಮಿ ಮೃಪಟ್ಟಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.


    ಸ್ಥಳಕ್ಕೆ ಚನ್ನಪಟ್ಟಣ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಪತ್ನಿ, ಮಗು ಸಮೇತ ನಡುರೋಡಲ್ಲೇ ಕಾರು ಮಾಲೀಕ ಪ್ರತಿಭಟನೆ!

    ಪತ್ನಿ, ಮಗು ಸಮೇತ ನಡುರೋಡಲ್ಲೇ ಕಾರು ಮಾಲೀಕ ಪ್ರತಿಭಟನೆ!

    – ಕೈ ಮುಗಿದು ಕ್ಷಮೆ ಕೇಳಿದ ಪೊಲೀಸರು

    ಧಾರವಾಡ: ನಡು ರಸ್ತೆಯಲ್ಲಿಯೇ ತನ್ನ ಪತ್ನಿ, ಪುಟ್ಟ ಮಗು ಸಮೇತ ಕಾರು ಮಾಲೀಕ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಧಾರವಾಡ ಹೊರವಲಯದ ಕೆಲಗೇರಿ ಬ್ರಿಡ್ಜ್ ಬಳಿ ನಡೆದಿದೆ.

    ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ವಾಹನ ದಾಖಲಾತಿ ತಪಾಸಣೆ ಹೆಸರಿನಲ್ಲಿ ಪೊಲೀಸರು ಕಿರಿಕಿರಿ ಉಂಟು ಮಾಡಿದ್ದಾರೆ ಎಂದು ಚಾಲಕ ಆರೋಪಿಸಿದ್ದಾರೆ. ಅಲ್ಲದೆ ತನ್ನ ಪುಟ್ಟ ಮಗು, ಪತ್ನಿ ಸಮೇತ ನಡುರಸ್ತೆಯಲ್ಲೇ ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ದಾಖಲಾತಿಗಳೆಲ್ಲ ಪರಿಶೀಲಿಸಿದ ಬಳಿಕವೂ ಪೊಲೀಸರು ಕಿರಿಕಿರಿ ಮಾಡಿದ್ದಾರೆ. ಇದರಿಂದ ನೊಂದ ಕಾರು ಮಾಲೀಕ ಪ್ರತಿಭಟನೆ ಮಾಡಿದ್ದಾರೆ. ಕೊನೆಗೆ ಪೊಲೀಸರು ಕೈ ಮುಗಿದು ಕ್ಷಮೆ ಕೇಳಿದ್ದಾರೆ.

    ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೊಲೀಸರು ಹಣ ಕೇಳಿದ್ದರಿಂದ ಹೀಗಾಗಿದೆ ಎಂದು ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಪೋಸ್ಟ್ ರವಾನೆ ಆಗುತ್ತಿದ್ದು, ನೆಟ್ಟಿಗರು ಧಾರವಾಡ ಪೊಲೀಸರಿಗೆ ಛೀಮಾರಿ ಹಾಕುತ್ತಿದ್ದಾರೆ.

  • ಅಮ್ಮನ ಕೊಲೆ ರಹಸ್ಯ ಬಿಚ್ಚಿಟ್ಟ 3 ವರ್ಷದ ಕಂದಮ್ಮ!

    ಅಮ್ಮನ ಕೊಲೆ ರಹಸ್ಯ ಬಿಚ್ಚಿಟ್ಟ 3 ವರ್ಷದ ಕಂದಮ್ಮ!

    ಮಡಿಕೇರಿ: ಕೊಡಗು ಜಿಲ್ಲೆಯ ಕಡಂಗ ಗ್ರಾಮದಲ್ಲಿ ಏಪ್ರಿಲ್ 18ರಂದು ಗೃಹಿಣಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಮ್ಮನನ್ನು ಕೊಲೆ ಮಾಡಿದ್ದಾರೆ ಎಂದು ಮೂರು ವರ್ಷದ ಕಂದಮ್ಮ ತನ್ನದೇ ಭಾಷೆಯಲ್ಲಿ ಹೇಳುತ್ತಿದ್ದು, ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಬೆಂಗಳೂರಲ್ಲಿ ಡ್ರೈವರ್ ಆಗಿದ್ದ ಗ್ರಾಮದ ಚೇತನ್, 4 ವರ್ಷದ ಹಿಂದೆ ಮಂಡ್ಯ ಮೂಲದ ಪ್ರಮೀಳಾರನ್ನು ಪ್ರೀತಿಸಿ ಮದುವೆಯಾಗಿದ್ದನು. ಈ ದಂಪತಿಗೆ ಒಂದು ಗಂಡು ಮಗುವೂ ಹುಟ್ಟಿತ್ತು. ಆದರೆ ಚೇತನ್ ದಿನಗಳೆದಂತೆ ಟೀಚರ್ ಒಬ್ಬರ ಸಹವಾಸ ಮಾಡಿದ್ದನು. ಈ ವಿಚಾರ ತಿಳಿದ ಪತ್ನಿ ಪ್ರಮೀಳಾ ಟೀಚರ್‍ಗೆ ಫೋನ್ ಮಾಡಿ ಕ್ಲಾಸ್ ತೆಗೆದುಕೊಂಡಿದ್ದರು.

    ಆದರೂ ಪತಿ ಟೀಚರಮ್ಮನ ಸಹವಾಸ ಬಿಟ್ಟಿರಲಿಲ್ಲ. ಕಳೆದ ಏಪ್ರಿಲ್ 18ರಂದು ಬೆಂಗಳೂರಲ್ಲಿದ್ದ ಪತಿ ಚೇತನ್ ವೋಟ್ ಹಾಕಲು ಊರಿಗೆ ಬಂದಿದ್ದನು. ಅಂದು ಪತ್ನಿ ಪ್ರಮೀಳಾ ಕೂಡ ವೋಟ್ ಹಾಕಿ ಬಂದು ಮಗು ಜೊತೆ ಮನೆಯಲ್ಲಿದ್ದರು. ಅಂದೇ ಪ್ರಮೀಳಾ ಮೃತದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸಿಕ್ಕಿದೆ.

    ಚೇತನ್ ಮನೆಯಲ್ಲೇ ಇರಲಿಲ್ಲ ಎಂದು ಮನೆಯವರು ಹೇಳಿದ್ರೆ, ಚೇತನ್ ಮನೆಯೊಳಗೆ ಹೋಗಿರುವ ದೃಶ್ಯ ಮನೆ ಮುಂಭಾಗದ ರಸ್ತೆಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಮಗಳನ್ನು ಹೊಡೆದು ಕೊಲೆ ಮಾಡಿ ನೇತು ಹಾಕಿದ್ದಾರೆ ಎಂದು ಹೆತ್ತವರು ಆರೋಪಿಸಿದ್ದಾರೆ.

    ಆದರೆ ದಂಪತಿಯ 3 ವರ್ಷದ ಮಗು ಮಾತ್ರ ಅಮ್ಮನನ್ನು ಕೊಲೆ ಮಾಡಲಾಗಿದೆ ಎಂದು ತನ್ನದೇ ಭಾಷೆಯಲ್ಲಿ ಸಾಕ್ಷಿ ಹೇಳುತ್ತಿದೆ. ಇತ್ತ ಹೆಂಡತಿ ಸತ್ತ ದಿನ ಸ್ಟೇಷನ್ ಹೋದ ಚೇತನ್ ಕಣ್ಮರೆಯಾಗಿದ್ದಾನೆ. ಪೊಲೀಸರಿಗೆ ದೂರು ಕೊಟ್ಟರೂ ಸ್ವೀಕರಿಸುತ್ತಿಲ್ಲ. 3 ವರ್ಷದ ಮಗು ಸಾಕ್ಷಿ ಹೇಳ್ತಿದ್ರೂ ಪೊಲೀಸರು ನಂಬುತ್ತಿಲ್ಲ. ಹೀಗಾಗಿ ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂದು ಮಹಿಳಾ ಸಂಘಟನೆಗಳು ಒತ್ತಾಯಿಸುತ್ತಿವೆ.