Tag: Baby

  • ಕೊಚ್ಚಿ ಹೋಯ್ತು ತಾಯಿಯ ಕನಸು- ಗರ್ಭದಲ್ಲಿಯೇ ಕಣ್ಮುಚ್ಚಿದ ಕಂದಮ್ಮ!

    ಕೊಚ್ಚಿ ಹೋಯ್ತು ತಾಯಿಯ ಕನಸು- ಗರ್ಭದಲ್ಲಿಯೇ ಕಣ್ಮುಚ್ಚಿದ ಕಂದಮ್ಮ!

    ಬೆಳಗಾವಿ: ವರುಣನ ಅಬ್ಬರ ಹಾಗೂ ಪ್ರವಾಹದ ಮಟ್ಟ ಮೀರಿ ಹರಿಯುತ್ತಿರುವ ನದಿಗೆ ಸಿಕ್ಕಿರುವ ಜನರ ಕನಸುಗಳು ಕೊಚ್ಚಿಕೊಂಡು ಹೋಗುತ್ತಿವೆ. ಅಂತೆಯೇ ಬೆಳಗಾವಿ ಜಿಲ್ಲೆಯ 7 ತಿಂಗಳ ಗರ್ಭಿಣಿಯೊಬ್ಬರ ಮಗುವಿನ ಕನಸು ಕೋಯ್ನಾ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ.

    ಗೋಕಾಕ್ ತಾಲೂಕಿನ ಉದಗಟ್ಟಿ ಗ್ರಾಮದ ರೇಣುಕಾ ಅವರು ಇನ್ನೇನು ಎರಡು ತಿಂಗಳಿಗೆ ಮಗುವಿಗೆ ಜನ್ಮ ನೀಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಆರಂಭವಾದ ಹೊಟ್ಟೆನೋವಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಗರ್ಭದಲ್ಲಿಯೇ ಮೃತಪಟ್ಟಿದೆ. ಮಗುವನ್ನು ಕಳೆದುಕೊಂಡ ತಾಯಿ ರೇಣುಕಾ ಅವರ ಆಕ್ರಂದನ ಮುಗಿಲುಮುಟ್ಟಿದೆ.

    ಮಳೆ ಹಾಗೂ ಪ್ರವಾಹದಿಂದ ಉಗದಟ್ಟಿ ಗ್ರಾಮವು ನಡುಗಡ್ಡೆಯಂತೆ ಆಗಿದ್ದು, ಮನೆಗಳಿಗೆ ನೀರು ನುಗ್ಗಿ ಜನ ಜೀವನ, ಸಂಚಾರ ಅಸ್ತವ್ಯಸ್ತವಾಗಿದೆ. ರೇಣುಕಾ ಅವರಿಗೆ ಗುರುವಾರ ಹೊಟ್ಟೆನೋವು ಕಾಣಿಸಿಕೊಂಡಿತ್ತು. ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮುಳುಗಡೆಯಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸೇನಾ ತುಕಡಿಯ ಮೂಲಕ ವೈದ್ಯರನ್ನು ಕರೆತರಲಾಗಿತ್ತು. ಆದರೆ ಅವಧಿಪೂರ್ವ ಹೆರಿಗೆಯಾಗಿದ್ದರಿಂದ ತೂಕವಿಲ್ಲದ ಕಂದಮ್ಮ ತಾಯಿಯ ಮಡಿಲಲ್ಲೇ ಅಸುನೀಗಿತ್ತು.

    ಮಗುವನ್ನು ಕಳಕೊಂಡ ತಾಯಿಯನ್ನು ಗುರುವಾರ ಆಸ್ಪತ್ರೆಗೆ ಶಿಫ್ಟ್ ಮಾಡಬೇಕಾಗಿತ್ತು. ಆದರೆ ನವಮಾಸ ಹೊತ್ತ ಕಂದಮ್ಮ ಇನ್ನಿಲ್ಲ, ನಾನು ಎಲ್ಲಿಗೂ ಬರುವುದಿಲ್ಲ ಅಂತ ರೇಣುಕಾ ಹಠ ಹಿಡಿದಿದ್ದರು. ಕೊನೆಗೂ ಸೇನೆಯ ಸಿಬ್ಬಂದಿ ಹಾಗೂ ವೈದ್ಯರು ರೇಣುಕಾ ಅವರನ್ನು ಒತ್ತಾಯದಿಂದ ಇಂದು ರಕ್ಷಣೆ ಮಾಡಿ, ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.

  • ಏಕಾಏಕಿ ಕುಸಿದ ಮನೆಯ ಮೇಲ್ಛಾವಣಿ – ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರು

    ಏಕಾಏಕಿ ಕುಸಿದ ಮನೆಯ ಮೇಲ್ಛಾವಣಿ – ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರು

    ಚಿಕ್ಕಮಗಳೂರು: ಮಹಾ ಮಳೆಗೆ ಏಕಾಏಕಿ ಮನೆಯ ಮೇಲ್ಛಾವಣಿಗೆ ಕುಸಿದಿದ್ದು, ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾದ ಘಟನೆ ಚಿಕ್ಕಮಗಳೂರಿನ ಅರವಿಂದ ನಗರದಲ್ಲಿ ನಡೆದಿದೆ.

    ಅರವಿಂದ ನಗರದ ಕುಸುಮ ಎಂಬವರ ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಕುಸುಮ ಅವರ ಪತಿ ಬೆಳಗ್ಗೆ 6 ಗಂಟೆಗೆ ಕೂಲಿ ಕೆಲಸಕ್ಕೆ ಹೋಗಿದ್ದರು. ಬೆಳಗ್ಗೆಯಿಂದ ಚಿಕ್ಕಮಗಳೂರಿನಲ್ಲಿ ಮಳೆ ಆಗುತ್ತಿದ್ದು, ಈ ಸಂದರ್ಭದಲ್ಲಿ ಮನೆಯ ಮೇಲ್ಛಾವಣಿ ಕುಸಿದಿದೆ.

    ಮನೆಯ ಮೇಲ್ಛಾವಣಿ ಕುಸಿದು ಬಿದ್ದ ತಕ್ಷಣ ಮಲಗಿದ್ದ ಕುಸುಮ ಎಚ್ಚರಗೊಂಡು ಜೋರಾಗಿ ಕಿರುಚಿಕೊಂಡಿದ್ದಾರೆ. ಮಹಿಳೆಯ ಕಿರುಚಾಟದ ಶಬ್ಧ ಕೇಳಿ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ಮನೆಯ ಹಂಚುಗಳನ್ನು ತೆಗೆದು ಮಗುವನ್ನು ರಕ್ಷಿಸಿದ್ದಾರೆ.

    ಮಲೆನಾಡು ಭಾಗದಲ್ಲಿ ಕಳೆದು ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಚಿಕ್ಕಮಗಳೂರು ನಗರದಲ್ಲಿ ಕಳೆದ ಎರಡು ದಿನದಿಂದ ನಿರಂತರವಾಗಿ ಮಳೆ ಆಗುತ್ತಿದೆ. ಈ ಘಟನೆ ನಡೆದ ನಂತರ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

  • ಸಮೀರಾ ಮನೆಯ ಪುಟ್ಟ ಲೇಡಿಯ ಹೆಸ್ರು ರಿವೀಲ್

    ಸಮೀರಾ ಮನೆಯ ಪುಟ್ಟ ಲೇಡಿಯ ಹೆಸ್ರು ರಿವೀಲ್

    ಮುಂಬೈ: ಮದುವೆ ಬಳಿಕ ಬಣ್ಣದ ಬದುಕಿನಿಂದ ದೂರ ಉಳಿದುಕೊಂಡಿರುವ ನಟಿ ಸಮೀರಾ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಖಾಸಗಿ ಬದುಕಿನ ಪ್ರತಿಯೊಂದು ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಸಮೀರಾ ರೆಡ್ಡಿ ಎರಡನೇ ಮಗುವಿಗೆ ತಾಯಿಯಾಗಿದ್ದಾರೆ. ಈಗ ತಮ್ಮ ಮನೆಗೆ ಬಂದ ಪುಟ್ಟ ಲೇಡಿಯ ಹೆಸರನ್ನು ಇನ್‍ಸ್ಟಾಗ್ರಾಮ್‍ನಲ್ಲಿ ರಿವೀಲ್ ಮಾಡಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಪುತ್ರನ ಜೊತೆ ಪುತ್ರಿ ಹೆಸರುಳ್ಳ ಬೋರ್ಡ್ ಹಿಡಿದಿರುವ ಫೋಟೋ ಹಂಚಿಕೊಂಡಿದ್ದಾರೆ. ಮಗಳಿಗೆ ‘ನಾಯರಾ’ ಹೆಸರನ್ನು ಸಮೀರಾ ರೆಡ್ಡಿ ಕುಟುಂಬಸ್ಥರು ಅಂತಿಮಗೊಳಿಸಿದ್ದಾರೆ. ಜುಲೈ 12ರಂದು ಪುತ್ರಿಯ ಪುಟ್ಟ ಕೈ ಹಿಡಿದ ಫೋಟೋ ಹಾಕಿ ಇಂದು ಬೆಳಗ್ಗೆ ನಮ್ಮ ಮನೆಗೆ ಪುಟ್ಟ ದೇವತೆಯ ಆಗಮನವಾಗಿದೆ ಎಂದು ತಿಳಿಸಿದ್ದರು.

    ಗರ್ಭಿಣಿಯಾಗಿದ್ದ ವೇಳೆ ಅಂಡರ್ ವಾಟರ್ ನಲ್ಲಿ ಫೋಟೋಶೂಟ್ ಮಾಡಿಸುವ ನೆಟ್ಟಿಗರನ್ನು ಚಕಿತಗೊಳಿಸಿದ್ದರು. ಇನ್ನು ಬಾಲಿಯಲ್ಲಿ ಕುಟುಂಬದೊಂದಿಗೆ ಸಮಯ ಕಳೆದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿತ್ತು. ಪ್ರೆಗ್ನಸಿ ಸಮಯದಲ್ಲಿ ಬಿಕನಿ ಧರಿಸಿ ತೆಗೆದಿದ್ದ ಫೋಟೋ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

    https://www.instagram.com/p/B0kk99XnC6w/

    https://www.instagram.com/p/B0X140Qnqa_/

  • ತಾಯಿಯಾದ ಕುಲವಧು ವಚನಾರಿಂದ ಬೇಬಿ ಫೋಟೋ ರಿವೀಲ್

    ತಾಯಿಯಾದ ಕುಲವಧು ವಚನಾರಿಂದ ಬೇಬಿ ಫೋಟೋ ರಿವೀಲ್

    ಬೆಂಗಳೂರು: ಕಿರುತೆರೆ ನಟಿ ದಿಶಾ ಮದನ್ ತಮ್ಮ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದು, ತಾಯಿಯಾದ ಖುಷಿಯಲ್ಲಿ ಮಗುವಿನ ಫೋಟೋವನ್ನು ರಿವೀಲ್ ಮಾಡಿದ್ದಾರೆ.

    ನಟಿ ದಿಶಾ ಅವರು ಶನಿವಾರ ಅಂದರೆ ಜುಲೈ 27 ರಂದು ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೋಮವಾರ ತಮ್ಮ ಮಗುವಿನ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಫೋಟೋಗೆ ‘ಬುಬ್ಬಾ ವಿ’ ಎಂಬ ಶೀರ್ಷಿಕೆ ಕೊಟ್ಟಿದ್ದು, ತಮ್ಮ ಪತಿ ಶಶಾಂಕ್‍ವಾಸುಕಿ ಗೋಪಾಲ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಸ್ನೇಹಿತರು ಮತ್ತು ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಅವರು ಶುಭಾಶಯವನ್ನು ತಿಳಿಸುತ್ತಿದ್ದಾರೆ.

    https://www.instagram.com/p/B0gCKsQn_eB/

    ದಿಶಾ ಮದನ್ ತಾವು ತಾಯಿ ಆಗುತ್ತಿರುವ ವಿಷಯವನ್ನು ಇನ್‍ಸ್ಟಾಗ್ರಾಂ ಮೂಲಕ ತಮ್ಮ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೇ ಇತ್ತೀಚೆಗೆ ಅವರು ಹಾಟ್ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು.

    ನಟಿ ದಿಶಾ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಕುಲವಧು’ ಧಾರಾವಾಹಿಯಲ್ಲಿ `ವಚನ’ ಪಾತ್ರ ನಿರ್ವಹಿಸುತ್ತಿದ್ದರು. ನಂತರ ಅವರು ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು.

  • ಆಟವಾಡುತ್ತಾ ಬ್ಯಾಗ್ ಚೆಕ್ಕಿಂಗ್ ಮಶೀನ್‍ನೊಳಗೆ ಹೋದ ಮಗು

    ಆಟವಾಡುತ್ತಾ ಬ್ಯಾಗ್ ಚೆಕ್ಕಿಂಗ್ ಮಶೀನ್‍ನೊಳಗೆ ಹೋದ ಮಗು

    ನ್ಯೂಯಾರ್ಕ್: ಆಟವಾಡುತ್ತಾ ಎರಡು ವರ್ಷದ ಮಗು ವಿಮಾನ ನಿಲ್ದಾಣದಲ್ಲಿಯೇ ಬ್ಯಾಗ್ ಚೆಕ್ಕಿಂಗ್ ಮಶೀನ್ ನೊಳಗೆ ಹೋಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಮೆರಿಕಾದ ಅಟ್ಲಾಂಟಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

    ಮಹಿಳೆಯೊಬ್ಬರು ತಮ್ಮ ಎರಡು ವರ್ಷದ ಮಗುವಿನೊಂದಿಗೆ ಅಟ್ಲಾಂಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಮಗುವನ್ನ ಕೆಳಗೆ ಇಳಿಸಿದ ಮಹಿಳೆ ಟಿಕೆಟ್ ಪ್ರಿಂಟ್ ತೆಗೆದುಕೊಳ್ಳುತ್ತಿದ್ದರು. ಕೆಳಗೆ ಇಳಿಯುತ್ತಿದ್ದಂತೆ ಚಲನೆಯಲ್ಲಿದ್ದ ಬ್ಯಾಗ್ ಚೆಕ್ಕಿಂಗ್ ಮಶೀನ್ ನೊಳಗೆ ಹೋಗಿದೆ.

    ಮಗು ಮಶೀನ್ ನಲ್ಲಿ ಹೋಗುತ್ತಿದ್ದಂತೆ ಭಯಗೊಳ್ಳದೇ ಆಟವಾಡಲು ಆರಂಭಿಸಿದೆ. ಕೂಡಲೇ ಎಚ್ಚೆತ್ತ ವಿಮಾನ ನಿಲ್ದಾಣ ಸಿಬ್ಬಂದಿ ಚಾಲನೆಯಲ್ಲಿ ಮಶೀನ್ ಬಂದ್ ಮಾಡಿ ಮಗುವನ್ನು ರಕ್ಷಿಸಿದ್ದಾರೆ.

    ಟಿಕೆಟ್ ಪ್ರಿಂಟ್ ತೆಗೆದುಕೊಳ್ಳುವಷ್ಟರಲ್ಲಿ ಪಕ್ಕದಲ್ಲಿ ಮಗು ಇರಲಿಲ್ಲ. ಕೂಡಲೇ ಅಲ್ಲಿಯ ಸಿಬ್ಬಂದಿ ಮತ್ತು ಪೊಲೀಸರಿಗೆ ತಿಳಿಸಿದೆ. ಅಲ್ಲಿಯೇ ಬ್ಯಾಗ್ ಚೆಕ್ಕಿಂಗ್ ನಲ್ಲಿ ಹೋಗಿರಬಹುದೆಂದು ಶಂಕಿಸಿ ನೋಡುವಷ್ಟರಲ್ಲಿ ಮಗು ಸ್ಟೋರಿಂಗ್ ಕೋಣೆ ಪ್ರವೇಶಿಸಿತ್ತು ಎಂದು ಏರ್‍ಪೋರ್ಟ್ ಅಧಿಕಾರಿಗಳು ತಿಳಿಸಿ, ವಿಡಿಯೋ ಬಿಡುಗಡೆಗೊಳಿಸಿದ್ದಾರೆ.

    https://www.youtube.com/watch?v=T7E1YmRniNY

  • ಸತ್ತ ಮರಿಯ ಅಸ್ಥಿಪಂಜರ ಹಿಡಿದು ಓಡಾಡುತ್ತಿರೋ ತಾಯಿ ಕೋತಿ

    ಸತ್ತ ಮರಿಯ ಅಸ್ಥಿಪಂಜರ ಹಿಡಿದು ಓಡಾಡುತ್ತಿರೋ ತಾಯಿ ಕೋತಿ

    ಬಾಗಲಕೋಟೆ: ತನ್ನ ಮರಿ ಸತ್ತಿದ್ದರೂ ಇನ್ನು ಬದುಕಿದೆ ಎಂಬ ರೀತಿಯಲ್ಲಿ ತಾಯಿ ಕೋತಿಯೊಂದು ಮರಿಯ ಅಸ್ಥಿಪಂಜರವನ್ನು ಹಿಡಿದು ಓಡಾಡುತ್ತಿರುವ ಮನ ಮನಮಿಡಿಯುವ ಪ್ರಸಂಗವೊಂದು ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣದಲ್ಲಿ ನಡೆದಿದೆ.

    ತೇರದಾಳ ಪಟ್ಟಣದ ಕಾರ್ಪೊರೇಷನ್ ಕಾಲೋನಿಯಲ್ಲಿ ಕೋತಿಯೊಂದು ತನ್ನ ಮರಿ ಸತ್ತಿದ್ದರೂ ಅದು ಬದುಕಿದೆ ಎಂಬಂತೆ ಅದರ ಅಸ್ಥಿಪಂಜರ ಹಿಡಿದು ಓಡಾಡುತ್ತಿದೆ. ತಾಯಿ ಮಂಗ ಹಾಗೂ ಮರಿಯ ಕರುಳ ಬಳ್ಳಿ ಸಂಬಂಧದ ಸನ್ನಿವೇಶ ಜನರ ಮನ ಕಲಕುವಂತೆ ಮಾಡಿದೆ.

    ಈಗಿನ ಕಾಲದಲ್ಲಿ ಹೆತ್ತ ಮಕ್ಕಳನ್ನು ಬೀದಿಗೆ ಬಿಸಾಕುವ ಜನರ ಮಧ್ಯೆ ಮಂಗನ ತಾಯಿ ಪ್ರೀತಿ ನೋಡಿ ಜನ ನಿಬ್ಬೆರಗಾಗಿದ್ದಾರೆ. ತನ್ನ ಮರಿ ಸತ್ತು ಎರಡು ತಿಂಗಳಾದರೂ ಅಸ್ಥಿಪಂಜರ ತಬ್ಬಿಕೊಂಡು ಓಡಾಡುತ್ತಿರುವ ತಾಯಿ ಮಂಗನನ್ನು ನೋಡಿ ಸ್ಥಳೀಯರು ಆಶ್ವರ್ಯಗೊಂಡಿದ್ದಾರೆ.

  • ‘ಇದು ನನ್ನ ಮಗು’ – ಆಸ್ಪತ್ರೆ ಮುಂದೆ ಮೂವರು ತಂದೆಯಂದಿರ ಗಲಾಟೆ

    ‘ಇದು ನನ್ನ ಮಗು’ – ಆಸ್ಪತ್ರೆ ಮುಂದೆ ಮೂವರು ತಂದೆಯಂದಿರ ಗಲಾಟೆ

    ಕೋಲ್ಕತ್ತಾ: ಒಂದು ಮಗುವಿಗಾಗಿ ಮೂವರು ವ್ಯಕ್ತಿಗಳು “ಇದು ನನ್ನ ಮಗು, ನಾನು ಮಗುವಿನ ತಂದೆ” ಎಂದು ಆಸ್ಪತ್ರೆಯಲ್ಲಿ ಗಲಾಟೆ ಮಾಡಿ ಹೈಡ್ರಾಮಾ ಸೃಷ್ಟಿಸಿದ ಘಟನೆ ಕಂಡು ಆಸ್ಪತ್ರೆ ಸಿಬ್ಬಂದಿ ದಂಗಾಗಿದ್ದಾರೆ.

    ಇದೇನಪ್ಪ ಒಂದು ಮಗುವಿಗೆ ಮೂವರು ತಂದೆಯೇ ಅಂತ ವಿಚಿತ್ರ ಅನಿಸಬಹುದು. ಆದ್ರೆ ಈ ಘಟನೆ ನಡೆದಿದ್ದು ನಿಜ. ದಕ್ಷಿಣ ಕೋಲ್ಕತ್ತಾದ ಐರಿಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

    ಶನಿವಾರ ಸಂಜೆ ಸುಮಾರು 6:30ರ ಸಮಯಕ್ಕೆ ಹೆರಿಗೆಗಾಗಿ ಮಹಿಳೆಯೊಬ್ಬರನ್ನು ಅವರ ತಾಯಿ ಹಾಗೂ ಓರ್ವ ವ್ಯಕ್ತಿ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಅರ್ಜಿ ತುಂಬುವಾಗ ಮಹಿಳೆ ಜೊತೆ ಬಂದಿದ್ದ ವ್ಯಕ್ತಿ ಆಕೆಯ ಪತಿ ಹಾಗೂ ಹುಟ್ಟುವ ಮಗುವಿನ ತಂದೆ ಎಂದು ಬರೆದು, ಚಿಕಿತ್ಸೆಯ ಅಡ್ವಾನ್ಸ್ ಹಣವನ್ನು ಕಟ್ಟಿದ್ದ.

    ಸೋಮವಾರ ಬೆಳಗ್ಗೆ ಮಹಿಳೆಯ ತಪಾಸಣೆ ಮಾಡಲು ವೈದ್ಯರು ಆಕೆಯನ್ನು ವಾರ್ಡಿನಿಂದ ಕರೆದುಕೊಂಡು ಹೋಗಿದ್ದರು. ಈ ವೇಳೆ ಇನ್ನೋರ್ವ ವ್ಯಕ್ತಿ ನಾನು ಮಹಿಳೆಯ ಪತಿ ಹಾಗೂ ಆಕೆಯ ಹೊಟ್ಟೆಯಲ್ಲಿರುವುದು ನನ್ನ ಮಗುವೆಂದು ಆಸ್ಪತ್ರೆಗೆ ಬಂದು, ಮಹಿಳೆಯನ್ನು ಭೇಟಿಯಾಗಬೇಕು ಎಂದಿದ್ದನು. ಆಗ ಮೊದಲು ಪತಿಯೆಂದು ಬಂದ ವ್ಯಕ್ತಿಗೂ ಈತನ ನಡುವೆ ಜಗಳ ನಡೆದಾಗ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅವರ ಜಗಳ ಬಿಡಿಸಿ ಮಗುವಿನ ನಿಜವಾದ ತಂದೆ ಯಾರೆಂದು ಪತ್ತೆ ಮಾಡುವುದಾಗಿ ತಿಳಿಸಿ, ಇಬ್ಬರನ್ನು ವಿಚಾರಣೆ ನಡೆಸಿದಾಗಲೂ ಕೂಡ ಆ ಇಬ್ಬರು ವ್ಯಕ್ತಿಗಳು ನಾನೇ ಮಗುವಿನ ತಂದೆ. ಆಕೆ ನನ್ನ ಪತ್ನಿ ಎಂದೇ ಹೇಳಿದ್ದಾರೆ.

    ವ್ಯಕ್ತಿಯ ಈ ಉತ್ತರದಿಂದ ಪೊಲೀಸರಿಗೂ ಗೊಂದಲ ಉಂಟಾಗಿ ಮಹಿಳೆಯ ತಪಾಸಣೆ ಮುಗಿದ ಮೇಲೆ ಆಕೆಯೇ ಈ ಸಮಸ್ಯೆಗೆ ಉತ್ತರ ನೀಡುತ್ತಾಳೆ ಎಂದು ಇಬ್ಬರನ್ನು ಸುಮ್ಮನಾಗಿಸಿದ್ದರು. ಅಲ್ಲದೆ ಮಹಿಳೆಯ ಜೊತೆ ಮದುವೆಯಾಗಿರುವ ಮ್ಯಾರೆಜ್ ಸರ್ಟಿಫಿಕೇಟ್ ತಂದು ತೋರಿಸಿ ಎಂದು ಸೂಚಿಸಿದ್ದರು. ಆಗ ಮೊದಲು ಪತಿಯೆಂದು ಬಂದಿದ್ದ ವ್ಯಕ್ತಿ ನಾನು ಮಹಿಳೆಯ ಸ್ನೇಹಿತ ಎಂದು ಒಪ್ಪಿಕೊಂಡ. ಆದರೆ ಇನ್ನೋರ್ವ ವ್ಯಕ್ತಿ ಮ್ಯಾರೆಜ್ ಸರ್ಟಿಫಿಕೇಟ್ ತಂದು ಪೊಲೀಸರಿಗೆ ನೀಡಿದ್ದಾನೆ. ಹೀಗಾಗಿ ಈತನೇ ಮಹಿಳೆಯ ಪತಿ ಎನ್ನುವುದು ಪೊಲೀಸರಿಗೆ ಖಚಿತವಾಯಿತು. ಆದರೆ ಮಹಿಳೆಯ ತಾಯಿ ಮ್ಯಾರೆಜ್ ಸರ್ಟಿಫಿಕೇಟ್ ತಂದ ವ್ಯಕ್ತಿ ತನ್ನ ಅಳಿಯನಲ್ಲ ಎಂದು ಹೇಳಿದಾಗ ಪೊಲೀಸರ ತಲೆಗೆ ಹುಳ ಬಿಟ್ಟಂತಾಯ್ತು.

    ಈ ನಡುವೆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆಗ ಪೊಲೀಸರು ಇನ್ನು ಈ ವ್ಯಕ್ತಿಗಳನ್ನು ವಿಚಾರಣೆ ನಡೆಸಿದರೆ ಪ್ರಯೋಜನವಿಲ್ಲ. ಮಹಿಳೆಯೇ ಹೇಳಿಕೆ ಪಡೆದು ಸಮಸ್ಯೆಗೆ ಅಂತ್ಯ ಹಾಡಲು ನಿರ್ಧರಿಸಿದರು. ಆದ್ರೆ ಸೋಮವಾರ ಸಂಜೆ ಇನ್ನೊಂದು ಸಮಸ್ಯೆ ಪೊಲೀಸರಿಗೆ ತಲೆನೋವಾಗಿ ಬಂದಿದೆ. ಮೂರನೇ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದು, ನಾನು ಮಹಿಳೆಯ ಪತಿಯಲ್ಲ, ಆದ್ರೆ ಆಕೆಗೆ ಜನಿಸಿರುವುದು ನನ್ನ ಮಗು ಎಂದಾಗ ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸರು ದಂಗಾಗಿ ಹೋಗಿದ್ದಾರೆ.

    ಆಸ್ಪತ್ರೆಯ ಇತಿಹಾಸದಲ್ಲೇ ಇಂತಹ ಘಟನೆ ಹಿಂದೆಂದೂ ನಡೆದಿಲ್ಲ. ಹೀಗೆ ಮೂವರು ವ್ಯಕ್ತಿ ಬಂದು ಆಸ್ಪತ್ರೆಗೆ ದಾಖಲಿರುವುದು ನನ್ನ ಪತ್ನಿ, ಆಕೆ ಜನ್ಮ ನೀಡಿರುವುದು ನನ್ನ ಮಗು ಎಂದು ಹೇಳಿ, ಆಸ್ಪತ್ರೆ ಆವರಣದಲ್ಲಿ ಗಲಾಟೆ ನಡೆಸಿರಲಿಲ್ಲ. ಹೀಗಾಗಿ ಈ ಗಲಾಟೆ ನಡೆದ ಬಳಿಕ ಮಹಿಳೆಯನ್ನು ಭೇಟಿ ಮಾಡುವಂತಿಲ್ಲ ಎಂದು ನಿರ್ಬಂಧ ಹೇರಿದ್ದೇವು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದರು.

    ಮಗು ಯಾರದ್ದು?
    ಮಹಿಳೆಗೆ ಪ್ರಜ್ಞೆ ಬಂದ ಮೇಲೆ ಪೊಲೀಸರು ಈ ವಿಚಾರದ ಬಗ್ಗೆ ಆಕೆಯ ಹೇಳಿಕೆ ಪಡೆದಾಗ ನಿಜಾಂಶ ಬೆಳಕಿಗೆ ಬಂದಿದೆ. ಈ ವೇಳೆ ಮಹಿಳೆ, ಮ್ಯಾರೆಜ್ ಸರ್ಟಿಫಿಕೇಟ್ ಹೊಂದಿರುವ ವ್ಯಕ್ತಿ ನನ್ನ ಪತಿ. ನಾವಿಬ್ಬರು ಪ್ರೀತಿಸಿದ್ದೇವು. ಮದುವೆ ಕೂಡ ಆಗಿದ್ದೇವು. ಆದ್ರೆ ಮದುವೆಗೂ ಮುನ್ನವೇ ನಾನು ಸಂಬಂಧ ಬೆಳೆಸಿದ್ದ ಕಾರಣ ನಾನು ಗರ್ಭಿಣಿಯಾಗಿದ್ದೆ. ಆದರೆ ಮದುವೆ ನಂತರ ಪತಿ ಮನೆಯವರು ಸೊಸೆಯನ್ನಾಗಿ ನನ್ನನ್ನು ಒಪ್ಪಲಿಲ್ಲ ಎಂದಿದ್ದಾಳೆ.

    ಪತಿ ಪ್ರತಿಕ್ರಿಯೆ ನೀಡಿ, ಮನೆಯವರು ಒಪ್ಪದ್ದಕ್ಕೆ ಪತ್ನಿ ನನ್ನ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿದ್ದಳು. ಬಂಧನಕ್ಕೆ ಒಳಗಾದ ನಾನು ಜಾಮೀನಿನ ಮೇಲೆ ಹೊರಗಡೆ ಬಂದಿದ್ದೆ. ಆದರೆ ಇಬ್ಬರೂ ದೂರ-ದೂರ ವಾಸವಾಗಿದ್ದೇವು. ಪತ್ನಿ ಡೆಲಿವರಿಯಾದ ನಂತರ ಹಾಕಿದ್ದ ವಾಟ್ಸಪ್ ಸ್ಟೇಟಸ್ ನೋಡಿದ ಬಳಿಕ ನನಗೆ ಮಗು ಜನಿಸಿರುವ ವಿಷಯ ತಿಳಿಯಿತು. ಹೀಗಾಗಿ ನಾನು ಆಸ್ಪತ್ರೆಗೆ ಬಂದಿದ್ದೇನೆ ಎಂದು ತಿಳಿಸಿದ್ದಾನೆ.

  • ಸಂಸತ್‍ನಲ್ಲಿ ಪ್ರಧಾನಿ ಮೋದಿ ಮಗುವಿನೊಂದಿಗೆ ಆಟವಾಡುತ್ತಿರುವ ಫೋಟೋ ವೈರಲ್

    ಸಂಸತ್‍ನಲ್ಲಿ ಪ್ರಧಾನಿ ಮೋದಿ ಮಗುವಿನೊಂದಿಗೆ ಆಟವಾಡುತ್ತಿರುವ ಫೋಟೋ ವೈರಲ್

    – 30 ನಿಮಿಷದಲ್ಲಿ 5 ಲಕ್ಷಕ್ಕೂ ಅಧಿಕ ಲೈಕ್

    ನವದೆಹಲಿ: ಸಂಸತ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಗುವಿನೊಂದಿಗೆ ಆಟವಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪ್ರಧಾನಿ ಮೋದಿ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮಗುವಿನ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದು, ನನ್ನನ್ನು ಭೇಟಿಯಾಗಲು ಸಂಸತ್‍ಗೆ ವಿಶೇಷ ಸ್ನೇಹಿತರೊಬ್ಬರು ಬಂದಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಮಹಾರಾಷ್ಟ್ರದ ಉಜ್ಜೈನಿ ಬಿಜೆಪಿ ಸಂಸದ ಸತ್ಯನಾರಾಯಣ ಜಾಟಿಯಾ ಕುಟುಂಬ ಇಂದು ಸಂಸತ್ತು ನೋಡಲು ಆಗಮಿಸಿತ್ತು. ಈ ವೇಳೆ ಸದಸ್ಯರು ಪ್ರಧಾನಿ ಕಚೇರಿಗೆ ಭೇಟಿ ನೀಡಿದಾಗ ಈ  ಮೋದಿ ಸತ್ಯನಾರಾಯಣ ಜಾಟಿಯಾ ಅವರ ಮೊಮ್ಮಗನನ್ನು ಎತ್ತಿ ಆಡಿಸಿದ್ದರು.

    https://www.instagram.com/p/B0QPjPLFlUo/

    ಈ ಫೋಟೋ ಅಪ್‍ಲೋಡ್ ಆದ ಕೇವಲ 30 ನಿಮಿಷದಲ್ಲಿ 5 ಲಕ್ಷಕ್ಕೂ ಅಧಿಕ ನೆಟ್ಟಿಗರು ಲೈಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಟ್ವಿಟರ್, ಫೇಸ್‍ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಕೆಲವರು ಕಮೆಂಟ್ ಮಗು ಯಾರದ್ದು ಎಂದು ಪ್ರಶ್ನೆ ಕೂಡ ಮಾಡಿದ್ದಾರೆ.

    ನರೇಂದ್ರ ಮೋದಿ ಅವರು ಮುದ್ದಾದ ಮಗುವನ್ನು ಎತ್ತಿಕೊಂಡು ಆಟವಾಗಿದ್ದಾರೆ. ಒಟ್ಟು ಎರಡು ಫೋಟೋಗಳನ್ನು ಹಂಚಿಕೊಂಡಿದ್ದು, ಒಂದರಲ್ಲಿ ಮೋದಿ ಅವರು ಮಗುವಿನ ಕಾಲು ಹಿಡಿದು ತೋಳುಗಳಲ್ಲಿ ಆಟ ಆಡುವ ಕಂದನ ನಗುವನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಮಗು ಟೇಬಲ್ ಮೇಲೆ ಇಟ್ಟಿರುವ ಚಾಕೋಲೆಟ್‍ಗಳನ್ನು ಕಂಡು ಖುಷಿ ಪಡುತ್ತಿರುವ ಕ್ಷಣವನ್ನು ನಗುವಿನೊಂದಿಗೆ ಗಮನಿಸುತ್ತಿದ್ದಾರೆ.

    ಪ್ರಧಾನಿ ಮೋದಿ ಅವರು ಮಕ್ಕಳನ್ನು ಎತ್ತಿ ಮುದ್ದಾಡಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಸಂದರ್ಶನ, ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಮುದ್ದಾಡಿದ್ದಾರೆ. ಆದರೆ ಈ ಬಾರಿ ವಿಶೇಷ ಅತಿ ಎಂದು ಹೇಳಿರುವುದು ನೆಟ್ಟಿಗರ ಕುತೂಹಲಕ್ಕೆ ಕಾರಣಂವಾಗಿದೆ.

  • 3 ವರ್ಷದ ಬಾಲಕಿ ನಾಪತ್ತೆ- ಮನೆ ಮಾಲೀಕನ ವಿರುದ್ಧ ಕಿಡ್ನಾಪ್ ಆರೋಪ

    3 ವರ್ಷದ ಬಾಲಕಿ ನಾಪತ್ತೆ- ಮನೆ ಮಾಲೀಕನ ವಿರುದ್ಧ ಕಿಡ್ನಾಪ್ ಆರೋಪ

    ಬಾಗಲಕೋಟೆ: ಜಿಲ್ಲೆಯ ಕೌಲ್ ಬಜಾರ್ ನಲ್ಲಿ ಬಾಡಿಗೆದಾರನ ಮಗುವನ್ನು ಅಪಹರಿಸಿರುವ ಆರೋಪವೊಂದು ಮನೆ ಮಾಲೀಕನ ವಿರುದ್ಧ ಕೇಳಿ ಬಂದಿದೆ.

    3 ವರ್ಷದ ರಿತಿಕಾ ಹಾಳಕೇರಿ ನಾಪತ್ತೆಯಾದ ಬಾಲಕಿ. ಈಕೆಯನ್ನು 50 ವರ್ಷದ ಶರಣಬಸಪ್ಪ ಎಂಬ ಮನೆ ಮಾಲೀಕನೇ ಕಿಡ್ನಾಪ್ ಮಾಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.

    ಶುಕ್ರವಾರ ಸಂಜೆ ಆಟ ಆಡಿಸುವ ನೆಪದಲ್ಲಿ ಬಾಲಕಿ ರಿತಿಕಾಳನ್ನು ಶರಣಬಸಪ್ಪ ಕಿಡ್ನಾಪ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಶರಣಬಸಪ್ಪ ಬಾಗಲಕೋಟೆಯ ಹಳೆ ಬಸ್ ನಿಲ್ದಾಣದಲ್ಲಿ ತನ್ನ ಬೈಕ್ ಇಟ್ಟು ಎಸ್ಕೇಪ್ ಆಗಿದ್ದಾಗಿ ತಿಳಿದುಬಂದಿದೆ.

    ಸುದ್ದಿ ತಿಳಿದ ಬಾಗಲಕೋಟೆ ನಗರಠಾಣೆ ಪೊಲೀಸರು ತಡರಾತ್ರಿಯಿಂದ ಬಸ್ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದ್ದು, ಹುಡುಕಾಟ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಇತ್ತ ಬಾಲಕಿ ರಿತಿಕಾ ಕಿಡ್ನಾಪ್ ಆದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

    ರಿತಿಕಾಳ ತಾಯಿ ದೀಪಾ ಹಾಲಕೇರಿ ತಮ್ಮ ಒಂದು ತಿಂಗಳ ಹಸುಗೂಸನ್ನು ಮಡಿಲಲ್ಲಿ ಇಟ್ಟುಕೊಂಡು ಮೊದಲನೇ ಮಗು ರಿತಿಕಾಗಾಗಿ ಕಾಯುತ್ತಿದ್ದಾರೆ. ಈ ಸಂಬಂಧ ಬಾಗಲಕೋಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಎರಡನೇ ಬಾರಿ ತಾಯಿಯಾದ ಸಮೀರಾ – ಮಗುವಿನ ಕೈ ಹಿಡಿದುಕೊಂಡ ಫೋಟೋ ಪೋಸ್ಟ್

    ಎರಡನೇ ಬಾರಿ ತಾಯಿಯಾದ ಸಮೀರಾ – ಮಗುವಿನ ಕೈ ಹಿಡಿದುಕೊಂಡ ಫೋಟೋ ಪೋಸ್ಟ್

    ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಎರಡನೇ ಬಾರಿ ತಾಯಿಯಾಗಿದ್ದು, ಇಂದು ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಇಂದು ಬೆಳಗ್ಗೆ ಮುಂಬೈನ ಬೀಮ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಸಮೀರಾ ಜನ್ಮ ನೀಡಿದ್ದಾರೆ. ಈ ಬಗ್ಗೆ ಸ್ವತಃ ಸಮೀರಾ ತನ್ನ ಇನ್‍ಸ್ಟಾಗ್ರಾಂನಲ್ಲಿ ಫೋಟೋ ಹಾಕುವ ಮೂಲಕ ಅಭಿಮಾನಿಗಳ ಜೊತೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

    ಮಗುವಿನ ಕೈ ಹಿಡಿದುಕೊಂಡಿರುವ ಫೋಟೋವನ್ನು ಹಾಕಿ ಅದಕ್ಕೆ, “ನಮ್ಮ ಮನೆಗೆ ಬೆಳಗ್ಗೆ ಏಂಜೆಲ್ ಆಗಮಿಸಿದ್ದಾಳೆ . ನನ್ನ ಹೆಣ್ಣು ಮಗು. ನಿಮ್ಮ ಪ್ರೀತಿ ಹಾಗೂ ಆಶೀರ್ವಾದಕ್ಕೆ ಧನ್ಯವಾದಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    Our little angel came this morning ????My Baby girl ! Thank you for all the love and blessings ❤️???????? #blessed

    A post shared by Sameera Reddy (@reddysameera) on

    ಇತ್ತೀಚೆಗಷ್ಟೇ ಅಂದರೆ 9ನೇ ತಿಂಗಳಿನಲ್ಲಿ ಸಮೀರಾ ಬಿಕಿನಿ ಧರಿಸಿ ಅಂಡರ್ ವಾಟರ್ ಫೋಟೋಶೂಟ್ ಮಾಡಿಸಿದ್ದರು. ಅಲ್ಲದೆ ಆ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಕೆಲವರು ಈ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಸಮೀರಾರನ್ನು ಟ್ರೋಲ್ ಮಾಡಿದ್ದಾರೆ.

    ಸಮೀರಾ ರೆಡ್ಡಿ 2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ಮದುವೆಯಾಗಿದ್ದರು. ಸಮೀರಾ ರೆಡ್ಡಿಗೆ ಈಗಾಗಲೇ ಓರ್ವ ಪುತ್ರನಿದ್ದಾನೆ. ಸಮೀರಾ ರೆಡ್ಡಿ ಬಹುಭಾಷಾ ನಟಿಯಾಗಿದ್ದು, ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಜೊತೆ ನಟಿಸಿದ್ದಾರೆ. ಅಲ್ಲದೇ ಕನ್ನಡದಲ್ಲೂ ಕಿಚ್ಚ ಸುದೀಪ್ ಅವರ ಜೊತೆ `ವರದನಾಯಕ’ ಚಿತ್ರದಲ್ಲಿ ನಟಿಸಿದ್ದಾರೆ. ಸಮೀರಾ 2014ರಲ್ಲಿ ಮದುವೆ ಆದ ಬಳಿಕ ಚಿತ್ರರಂಗದಿಂದ ದೂರವಿದ್ದಾರೆ.