ತುಮಕೂರು: ಮನೆಯ ನೀರಿನ ತೊಟ್ಟಿಯಲ್ಲಿ ಬಿದ್ದು ಮಗುವೊಂದು ಸಾವನ್ನಪ್ಪಿರುವ ಘಟನೆ ನಗರದ ಹನುಮಂತಪುರದಲ್ಲಿರುವ ರಾಘವೇಂದ್ರ ಮಠದ ಬಳಿ ನಡೆದಿದೆ.
ವಿಜಯೇಂದ್ರ ಕಾವ್ಯ ದಂಪತಿಯ ಮಗು ಆಘನಾ ಮೃತ ಬಾಲಕಿ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮನೆಯ ಹೊರಗೆ ಆಟವಾಡುತ್ತಿದ್ದ ಆಘನಾ ಮನೆಯ ಮುಂಭಾಗದಲ್ಲಿದ್ದ ನೀರಿನ ತೊಟ್ಟಿಗೆ ಬಿದ್ದಿದೆ. ಮನೆಯ ಒಳಗೆ ಕೆಲಸ ಮಾಡುತ್ತಿದ್ದ ತಾಯಿ ಕಾವ್ಯ ಹೊರಗೆ ಬಂದು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಮಗು ನೀರಿನ ತೊಟ್ಟಿಯೊಳಗೆ ಬಿದ್ದಿರುವುದನ್ನು ನೋಡಿ ಗಾಬರಿಗೊಂಡ ತಾಯಿ ಅಕ್ಕಪಕ್ಕದವರನ್ನು ಕರೆದಿದ್ದಾರೆ.
ತಕ್ಷಣ ಸಹಾಯಕ್ಕೆ ಬಂದ ಸ್ಥಳೀಯರು ಮಗುವನ್ನು ನೀರಿನ ತೊಟ್ಟಿಯಿಂದ ತೆಗೆದು ದೇಹದಲ್ಲಿ ಸೇರಿದ್ದ ನೀರನ್ನು ಹೊರಗೆ ತೆಗೆಯಲು ಪ್ರಯತ್ನ ಮಾಡಿದ್ದಾರೆ. ಅಷ್ಟೊತ್ತಿಗಾಗಲೇ ಸಮಯ ಮೀರಿದ್ದರಿಂದ ಮಗು ಕೊನೆಯುಸಿರೆಳೆದಿತ್ತು.
ಮುಂಬೈ: ಕುಡ್ಲದ ಬೆಡಗಿ ಶಿಲ್ಪಾ ಶೆಟ್ಟಿ 44ನೇ ವಯಸ್ಸಿನಲ್ಲಿ ಬಾಡಿಗೆ ತಾಯಿಯ ಮೂಲಕ ಹೆಣ್ಣು ಮಗುವಿಗೆ ತಾಯಿ ಆಗಿದ್ದಾರೆ. ಇದೀಗ ಎರಡನೇ ಮಗು ಪಡೆಯಲು 5 ವರ್ಷದಿಂದ ಪ್ರಯತ್ನಿಸುತ್ತಿದ್ದೆ ಎಂದು ಶಿಲ್ಪಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
2009ರಲ್ಲಿ ನನ್ನ ಹಾಗೂ ರಾಜ್ ಕುಂದ್ರಾ ಮದುವೆ ನಡೆಯಿತು. 2012ರಲ್ಲಿ ನಮ್ಮ ಜೀವನದಲ್ಲಿ ಮಗ ವಿಹಾನ್ ಆಗಮಿಸಿದ. ವಿಹಾನ್ ಆಗಮನದಿಂದ ನಾವೆಲ್ಲರೂ ತುಂಬಾ ಖುಷಿಯಾಗಿದ್ದೇವು. ಆದಾದ ಬಳಿಕ ನಾವು ಪ್ಲಾನಿಂಗ್ ಮಾಡುತ್ತಿದ್ದೆವು. ಮತ್ತೊಂದು ಮಗು ಪಡೆಯಲು ನಾನು 5 ವರ್ಷ ಪ್ರಯತ್ನಿಸುತ್ತಿದ್ದೆ. ನಾನು ‘ನಿಕಮ್ಮಾ’ ಹಾಗೂ ‘ಹಂಗಾಮ’ ಚಿತ್ರದ ಚಿತ್ರೀಕರಣವನ್ನು ಸೈನ್ ಮಾಡಿ ಡೇಟ್ಸ್ ಕೂಡ ನೀಡಿದ್ದೆ. ಬಳಿಕ ನಾವು ಮತ್ತೊಮ್ಮೆ ತಂದೆ-ತಾಯಿ ಆಗುತ್ತಿದ್ದೇವೆ ಎಂಬುದು ಫೆಬ್ರವರಿ ತಿಂಗಳಿನಲ್ಲಿ ತಿಳಿಯಿತು. ಆ ಸಿಹಿ ಸುದ್ದಿ ಸಿಗುತ್ತಿದ್ದಂತೆ ನಾನು ನನ್ನ ಇಡೀ ಕೆಲಸವನ್ನು ಬೇಗ ಮುಗಿಸಲು ಯೋಚಿಸಿದ್ದೆ ಎಂದರು. ಇದನ್ನೂ ಓದಿ:ಹೆಣ್ಣು ಮಗುವಿನ ತಾಯಿಯಾದ ಶಿಲ್ಪಾ ಶೆಟ್ಟಿ
ಹೆಣ್ಣು ಮಗುವಿನ ತಾಯಿಯಾಗಿರುವ ವಿಷಯವನ್ನು ಶಿಲ್ಪಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ತಮ್ಮ ಬೆರಳು ಹಿಡಿದಿರುವ ಮಗಳ ಫೋಟೋವನ್ನು ಹಾಕಿ ಅದಕ್ಕೆ, ಓಂ ಶ್ರೀ ಗಣೇಶಾಯ ನಮಃ. ನಮ್ಮ ಪ್ರಾರ್ಥನೆ ದೇವರಿಗೆ ತಲುಪಿದ್ದು, ಮನೆಗೆ ಆಗಮಿಸಿರುವ ಪುಟ್ಟ ದೇವತೆ ಶಮಿಶಾ ಶೆಟ್ಟಿಯನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ಜೂ. ಶಿಲ್ಪಾ ಶೆಟ್ಟಿ ಕುಂದ್ರಾ ಫೆಬ್ರವರಿ 15ರಂದು ಜನಿಸಿದ್ದಾಳೆ. ಅಂದ್ರೆ ಸಂಸ್ಕೃತದಲ್ಲಿ ನಮ್ಮವಳು ಮತ್ತು ಮಿಶಾ ಅಂದ್ರೆ ದೇವರ ರೀತಿಯಲ್ಲಿರುವ ಎಂದರ್ಥ. ಹಾಗಾಗಿ ನಮ್ಮ ಮನೆಗೆ ಆಗಮಿಸಿರುವ ಲಕ್ಷ್ಮಿಗೆ ಸಮಿಶಾ ಎಂದು ಹೆಸರಿಟ್ಟಿದ್ದೇವೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮಕ್ಕಳ ಮೇಲಿರಲಿ. ವಿಯಾನ್ ರಾಜ್ ಕುಂದ್ರಾ ಜೊತೆ ಆಡಲು ಪುಟ್ಟ ಸೋದರಿ ಆಗಮಿಸಿದ್ದಾಳೆ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: 13 ವರ್ಷದ ನಂತ್ರ ಬೆಳ್ಳಿತೆರೆಗೆ ಶಿಲ್ಪಾ ಶೆಟ್ಟಿ ಎಂಟ್ರಿ
ಈ ಹಿಂದೆ ಶಿಲ್ಪಾ, 37ನೇ ವರ್ಷದಲ್ಲಿ ನಾನು ತಾಯಿಯಾಗಬೇಕೆಂಬ ಇಚ್ಛೆ ನನ್ನದಾಗಿರಲಿಲ್ಲ. ಸೂಕ್ತ ಸಮಯದಲ್ಲಿ ಮಹಿಳೆ ತಾಯ್ತನದ ಅನುಭವ ಪಡೆಯಬೇಕು. ಆದರೆ ನನಗೆ ರಾಜ್ ಕುಂದ್ರಾ ಸರಿಯಾದ ಸಮಯದಲ್ಲಿ ಸಿಗದಿದ್ದಕ್ಕೆ 37ನೇ ವಯಸ್ಸಿನಲ್ಲಿ ತಾಯಿಯಾದೆ ಎಂದು ಹೇಳಿಕೊಂಡಿದ್ದರು.
ಹಾಸನ: ಒಂಬತ್ತು ತಿಂಗಳ ತುಂಬು ಗರ್ಭಿಣಿಯೊಬ್ಬರು ಕೆಎಸ್ಆರ್‌ಟಿಸಿ ಬಸ್ಸಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ಷಹೀನಾ ಬಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದವರು. ಹುಬ್ಬಳ್ಳಿ ಮೂಲದ ಷಹೀನಾರನ್ನ ಮಡಿಕೇರಿಯ ಹುಡುಗನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮಂಗಳವಾರ ಷಹೀನಾ ಪೋಷಕರ ಜೊತೆ ಬಸ್ಸಿನಲ್ಲಿ ಬರುತ್ತಿದ್ದಾಗ ಹಾಸನದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಸ್ವಲ್ಪ ಸಮಯದ ನಂತರ ಷಹೀನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ತಕ್ಷಣ ಬಸ್ ಚಾಲಕ ಮತ್ತು ನಿರ್ವಾಹಕ ಸ್ವಲ್ಪ ಸಮಯ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ಬಸ್ ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಗೆ ಹೊಸ ಪಂಚೆ ಮತ್ತು ಬಟ್ಟೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಕ್ಷಣ ಅಂಬುಲೆನ್ಸ್‌ಗೆ ಕರೆ ಮಾಡಿ ಮಗು ಮತ್ತು ತಾಯಿಯನ್ನು ಹಾಸನ ಹಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ತಾಯಿ ಮಗು ಆರೋಗ್ಯವಾಗಿದ್ದು, ಗರ್ಭಿಣಿಯ ಕಷ್ಟಕ್ಕೆ ಸ್ಪಂದಿಸಿದ ಕೆಎಸ್ಆರ್‌ಟಿಸಿ ನೌಕರರ ಗುಣಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೈಸೂರು: ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಇದೆ. ಅದೇ ರೀತಿ ಮೈಸೂರಿನಲ್ಲಿ ನಡೆದ ಒಂದು ಘಟನೆಯಲ್ಲಿ ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಮೋರಿ ಪಾಲಾಗಿದೆ.
ಪತಿ-ಪತ್ನಿ ಜಗಳ ಮಗುವನ್ನು ಮೋರಿಗೆ ಬಿಸಾಡೋ ಹಂತಕ್ಕೆ ಬಂದಿದೆ. 6 ತಿಂಗಳ ಹೆಣ್ಣು ಮಗುವನ್ನು ಹೆತ್ತ ತಾಯಿಯೇ ಮೋರಿಗೆ ಹಾಕಿದ್ದಾಳೆ. ಒಂದು ದಿನದ ನಂತರ ಇದು ನನ್ನ ಮಗು ಕೊಡಿ ಎಂದು ಬಂದ ತಂದೆಗೆ ಸ್ಥಳೀಯರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ರೇಣುಕಾರಾಧ್ಯ ಮತ್ತು ಪತ್ನಿ ರಾಣಿ ಮನೆಯಲ್ಲಿ ಜಗಳವಾಡಿಕೊಂಡಿದ್ದಾರೆ. ಹೆಣ್ಣು ಮಗು ಆಗಿದೆ ಎಂಬ ಕೋಪದಲ್ಲಿ ಜಗಳ ಜೋರಾಗಿದೆ. ಇದೇ ಕೋಪದಲ್ಲಿದ್ದ ಹೆಂಡತಿ, ಮಗುವನ್ನ ತಂದು ವಿದ್ಯಾರಣ್ಯಪುರಂನ ಸೂಯೆಜ್ ಫಾರಂನ ದೊಡ್ಡ ಮೋರಿಗೆ ಬಿಸಾಡಿದ್ದಾಳೆ. ಈ ವೇಳೆ ಮೋರಿಯಲ್ಲಿ ಬಿದ್ದ ಪುಟ್ಟ ಕಂದಮ್ಮನ ಕಾಲಿಗೆ ಗಾಯವಾಗಿ, ಮಗು ಚಿರಾಡಿದೆ. ಈ ವೇಳೆ ಮಗುವನ್ನು ಕಂಡ ಸ್ಥಳೀಯರು ಮೋರಿಗೆ ಇಳಿದು ಮಗುವನ್ನು ಮೇಲೆತ್ತಿ, ಸ್ನಾನ ಮಾಡಿಸಿದ್ದಾರೆ. ಮಗು ಯಾರದು ಎಂದು ಕೇಳಿದ್ರು, ಅಕ್ಕಪಕ್ಕದವರಿಗೆ ವಿಚಾರಿಸಿದ್ರು ಯಾರಿಗು ಗೊತ್ತಾಗಿಲ್ಲ. ಈ ವೇಳೆ ವಿದ್ಯಾರಣ್ಯಪುರಂ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು, ಬಳಿಕ ಪೊಲೀಸರ ಜೊತೆಯಲ್ಲೇ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮಕ್ಕಳ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರಿಸಿದ್ದಾರೆ.
ಮಗುವನ್ನು ಮೋರಿಗೆ ಹಾಕಿದ ತಾಯಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾಳು ಎನ್ನಲಾಗಿದೆ. ಹೀಗಂತಾ ಪತಿ ನನ್ನ ಮಗು ಬೇಕೆಂದು ಬಂದ ವೇಳೆ ಸಾರ್ವಜನಿಕರು ತರಾಟೆಗೆ ತೆಗೆದುಕೊಳ್ಳುವ ವೇಳೆ ತಿಳಿಸಿದ್ದಾನೆ. ಮಾತ್ರವಲ್ಲದೆ, ಕೆ.ಆರ್ ಆಸ್ಪತ್ರೆಯಲ್ಲಿ ಪತಿ-ಪತ್ನಿಗೆ ಕೌನ್ಸಿಲ್ ಕೊಡಲಾಗುತ್ತಿದ್ದು, ಮಾನಸಿಕೆ ಖಿನ್ನತೆಯಿಂದ ಮಗುವಿನ ತಾಯಿ ಹೀಗೆ ಮಾಡಿದ್ದಾಳೆ ಎಂಬುದು ಪತಿಯ ವಾದ. ಆದರೆ ಮಗುವನ್ನು ಕಾಪಾಡಿದವರು ಪೋಷಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಗೆ ತಕ್ಕಂತೆ ಮೈಸೂರಿನಲ್ಲಿ ಘಟನೆ ನಡೆದಿದ್ದು, ಪೋಷಕರಿಬ್ಬರ ವಿರುದ್ಧವೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಆದರೆ ಇದೀಗ ಪೊಲೀಸರು ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪತಿ-ಪತ್ನಿಯ ಕೌನ್ಸಿಲ್ ರಿಪೋರ್ಟ್ ಬಂದ ಬಳಿಕ ಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ.
ಮೈಸೂರು: ಹೆಣ್ಣು ಎಂಬ ಕಾರಣಕ್ಕೆ 6 ತಿಂಗಳ ಮಗುವನ್ನು ತಂದೆ-ತಾಯಿ ಇಬ್ಬರು ಮೋರಿಯಲ್ಲಿ ಬಿಸಾಡಿ ಕರುಣೆ ಇಲ್ಲದಂತೆ ನಡೆದುಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವಿದ್ಯಾರಣ್ಯಪುರಂನ ಸೂಯೆಜ್ ಫಾರಂನ ಮೋರಿಯಲ್ಲಿ 6 ತಿಂಗಳ ಹಸುಗೂಸನ್ನು ಬಿಸಾಡಿದ್ದ ಹೆತ್ತವರು, ಕಸ ಹಾಕುವ ಜಾಗದಲ್ಲಿ ಮಗುವನ್ನು ಎಸೆದಿದ್ದರು. ಸ್ಥಳೀಯರೊಬ್ಬರು ನಡೆದುಕೊಂಡು ಹೋಗುವಾಗ ಮಗುವಿನ ಅಳುವ ಶಬ್ಧ ಕೇಳಿ ಮಗು ರಕ್ಷಣೆ ಮಾಡಿದ್ದಾರೆ.
ಮೋರಿಯಲ್ಲಿ ಮಗುವನ್ನ ಕಂಡು ಆತಂಕಗೊಂಡ ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಸ್ಥಳೀಯರ ಸಹಾಯದಿಂದ ಪುಟ್ಟ ಕಂದಮ್ಮ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಪ್ರಾಥಮಿಕ ಚಿಕಿತ್ಸೆಗಾಗಿ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಮಗು ರವಾನೆ ಮಾಡಿದ್ದು, ಕರುಣೆ ಇಲ್ಲದೆ ಮಗುವನ್ನು ಮೋರಿಯಲ್ಲಿ ಎಸೆದಿದ್ದ ತಂದೆ-ತಾಯಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಚೆಲುವಾಂಬ ಆಸ್ಪತ್ರೆಯ ವಿಶೇಷ ವಾರ್ಡ್‍ನಲ್ಲಿ ಮಗುವಿನ ಹಾರೈಕೆ ನಡೆಯುತ್ತಿದ್ದು, ಮಗು ಆರೋಗ್ಯವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮಗುವಿನ ಯಶಸ್ವಿ ಶಸ್ತ್ರಚಿಕಿತ್ಸೆ ಕುರಿತು ಮಾತನಾಡಿದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್, ಫೆಬ್ರವರಿ 6ರಂದು 40 ದಿನದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. 7ರಂದು 12 ಜನರ ವೈದ್ಯರ ತಂಡದಿಂದ ಆಪರೇಷನ್ ಮಾಡಲಾಯಿತು. ಬಹಳ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಆಪರೇಷನ್ ಮಾಡಲಾಗಿತ್ತು. ಮಗುವಿನ ಹೃದಯದ ಎಡಭಾಗಕ್ಕೆ 4 ರಕ್ತನಾಳಗಳು ಕನೆಕ್ಟ್ ಆಗಬೇಕಿತ್ತು. ಆದರೆ ಬಲಭಾಗಕ್ಕೆ ಕನೆಕ್ಟ್ ಆಗಿತ್ತು. ಹೀಗಾಗಿ ಈ ಚಿಕಿತ್ಸೆ ಸವಾಲಾಗಿತ್ತು. ಆದರೆ ನಮ್ಮ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದೆ. ಮಗು ಕೂಡ ಆರೋಗ್ಯವಾಗಿದೆ ಎಂದರು.
ಮಗುವಿನ ಚಿಕಿತ್ಸೆಗೆ ಒಂದೂವರೆ ಲಕ್ಷ ರೂ. ಖರ್ಚಾಗಿದೆ. ಇದರಲ್ಲಿ ಬಿಪಿಎಲ್ ಕ್ಯಾಟಗರಿಯಿಂದ 1,20,000 ಬಿಪಿಎಲ್ ಕ್ಯಾಟಗರಿಯಿಂದ ಸಿಕ್ಕಿದೆ. ಉಳಿದ ಹಣವನ್ನು ಜಯದೇವ ಆಸ್ಪತ್ರೆಯ ಆಂತರಿಕ ಸಂಪನ್ಮೂಲದಿಂದ ಭರಿಸಲಾಗಿದೆ. ಮಗುವಿನ ಶಸ್ತ್ರಚಿಕಿತ್ಸೆಯ ಖರ್ಚು ಸಂಪೂರ್ಣವಾಗಿ ಉಚಿತವಾಗಿದ್ದು, ಪೋಷಕರು ಈ ಚಿಕಿತ್ಸೆಯಿಂದ ಖುಷಿಯಾಗಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಮಗುವಿನ ಪೋಷಕರು, ಮಂಗಳೂರಿಂದ ಬೆಂಗಳೂರಿಗೆ ಕರೆದುಕೊಂಡು ಬರುವಾಗ ಮಗುವಿನ ಜೀವದ ಮೇಲೆ ಆಸೆ ಕೈ ಬಿಟ್ಟಿದ್ದೇವು. ಆದರೆ ವೈದ್ಯರು ನಮ್ಮ ಮಗುವನ್ನು ಉಳಿಸಿದ್ದಾರೆ. ತುಂಬಾ ಖುಷಿಯಾಗುತ್ತಿದೆ. ವೈದ್ಯರಿಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರು ಕಡಿಮೆಯೇ ಎಂದು ವೈದ್ಯರ ಕಾರ್ಯವನ್ನ ಶ್ಲಾಘಿಸಿದರು.
ಶಿವಮೊಗ್ಗ: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 7 ದಿನದ ಹಸುಗೂಸಿನ ಜೀವ ಉಳಿಸಲು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಂಬುಲೆನ್ಸ್‌ನಲ್ಲಿ ರವಾನಿಸಲಾಗಿದೆ.
ಮೆಗ್ಗಾನ್ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಶಿವಮೊಗ್ಗದಿಂದ ಜೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಕಂದಮ್ಮನನ್ನು ಅಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮದ ಸ್ವಾಮಿ ಹಾಗೂ ಸುಧಾ ದಂಪತಿಗೆ ಫೆ. 4ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಜನನದ ನಂತರ ಮಗುವನ್ನು ಪರೀಕ್ಷಿಸಿದ ವೈದ್ಯರಿಗೆ ಮಗುವಿನ ಹೃದಯದಲ್ಲಿ ಸಣ್ಣ ರಂಧ್ರವಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಕೇವಲ 4 ಗಂಟೆ 32 ನಿಮಿಷದಲ್ಲಿ 370 ಕಿ.ಮೀ ಕ್ರಮಿಸಿ, ಹಸುಗೂಸು ಜೀವ ಉಳಿಸಿದ ಅಂಬುಲೆನ್ಸ್ ಚಾಲಕ
ಸ್ಕ್ಯಾನಿಂಗ್ ವರದಿಯಲ್ಲಿ ಸಹ ಹೃದಯದಲ್ಲಿ ರಂಧ್ರ ಇರುವುದು ದೃಢಪಟ್ಟಿದೆ. ಹೀಗಾಗಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಪೋಷಕರಿಗೆ ಸಲಹೆ ನೀಡಿದ್ದಾರೆ.
ಈ ಹಿನ್ನೆಲೆ ಇಂದು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಅಂಬುಲೆನ್ಸ್‌ನಲ್ಲಿ ಕಳುಹಿಸಲಾಯಿತು. ನಗರದ ದೊಡ್ಡಪೇಟೆ ಠಾಣೆ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಜೊತೆಗೆ ಎಸ್ಕಾರ್ಟ್ ವಾಹನವನ್ನು ಅಂಬುಲೆನ್ಸ್ ಜೊತೆ ಕಳುಹಿಸಿದ್ದಾರೆ.
– ಯಶವಂತಪುರದಿಂದ ಆಸ್ಪತ್ರೆಗೆ ಹೋಗಲು 15 ನಿಮಿಷ
– ಚಾಲಕ ಹನೀಫ್‍ಗೆ ಮೈಸೂರು ಪೇಟಾ ಹಾಕಿ ಸನ್ಮಾನ
ಮಂಗಳೂರು/ ಬೆಂಗಳೂರು: ಅಂಬುಲೆನ್ಸ್ ಚಾಲಕರೊಬ್ಬರು ಕೇವಲ 4 ಗಂಟೆ 32 ನಿಮಿಷದಲ್ಲಿ 370 ಕಿ.ಮೀ ಕ್ರಮಿಸಿ ಹಸುಗೂಸು ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ನಲ್ವತ್ತು ದಿನಗಳ ಹಸುಗೂಸನ್ನು ಹೃದಯದ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ಅಂಬುಲೆನ್ಸ್ ನಲ್ಲಿ ರವಾನಿಸಲಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಮಗುವಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ. ಚಾಲಕ ಹನೀಫ್ ಅವರು ಮಂಗಳೂರಿನಿಂದ ಆಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಗುವನ್ನು ಕೇವಲ ಆರು ಗಂಟೆಯಲ್ಲಿ ಬೆಂಗಳೂರು ತಲುಪಿಸಿದ್ದಾರೆ.
ಮಾರ್ಗ ಹೀಗಿತ್ತು?:
ಬೆಳ್ತಂಗಡಿ ತಾಲೂಕಿನ ಉಜಿರೆ ಮೂಲದ ಸೈಫುಲ್ ಅಜ್ಮಾನ್ ಎನ್ನುವ ಈ ಮಗುವಿಗೆ ಅಂಬುಲೆನ್ಸ್ ನಲ್ಲಿ ಹೃದಯ ಪಂಪಿಂಗ್ ವ್ಯವಸ್ಥೆ ಮಾಡಿಕೊಂಡು ಕರೆದೊಯ್ಯಲಾಯ್ತು. ಮಂಗಳೂರಿನಿಂದ, ಬಿ.ಸಿ.ರೋಡ್, ಕಲ್ಲಡ್ಕ, ಮಾಣಿ, ಉಪ್ಪಿನಂಗಡಿ, ನೆಲ್ಯಾಡಿ, ಶಿರಾಡಿ, ಸಕಲೇಶಪುರ, ಹಾಸನ, ನೆಲಮಂಗಲ ಮೂಲಕ ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಆಂಬುಲೆನ್ಸ್ ಬಂದಿದ್ದು ಹೆದ್ದಾರಿ ಉದ್ದಕ್ಕೂ ಜನರು ಟ್ರಾಫಿಕ್ ಸಂಚಾರ ಸುಗಮಗೊಳಿಸಿದ್ದಾರೆ. ಅಲ್ಲದೆ, ಆಯಾ ಭಾಗದ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಎಸ್ಕಾರ್ಟ್ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಂಬುಲೆನ್ಸ್ ಚಾಲಕ ಹನೀಫ್, ಮಗುವಿಗೆ ಪುನರ್ ಜನ್ಮ ಸಿಗಬೇಕು ಎನ್ನುವ ಆಸೆ ನನಗೆ ಇತ್ತು. ಮಂಗಳೂರಿನಿಂದ ಬೆಂಗಳೂರನ್ನು 5 ಗಂಟೆಯಲ್ಲಿ ತಲುಪಬಹುದು ಎಂಬ ಆಲೋಚನೆ ಹೊಂದಿದ್ದೆ. ಅದರಂತೆ 4 ಗಂಟೆ 32 ನಿಮಿಷದಲ್ಲಿ ಬೆಂಗಳೂರನ್ನು ತಲುಪಿದೆ. ಆದರೆ ಯಶವಂತಪುರದಿಂದ ನನಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಸಿಗಲಿಲ್ಲ. ಹೀಗಾಗಿ ಆಸ್ಪತ್ರೆಗೆ ತಲುಪಲು 15 ನಿಮಿಷ ಹೆಚ್ಚು ಸಮಯ ತೆಗೆದುಕೊಂಡೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಾರ್ವಜನಿಕರು ಚಾಲಕ ಹನೀಫ್ ಅವರಿಗೆ ಮೈಸೂರು ಪೇಟಾ ಹಾಕಿ ಸನ್ಮಾನಿಸಿದರು. ಹನೀಫ್ ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಜಯದೇವ ಹೃದಯಾಲಯದ ನಿರ್ದೇಶಕ ಡಾ. ಮಂಜುನಾಥ ಮಾತನಾಡಿ, ಮಂಗಳೂರಿನಿಂದ ಬಂದಿರುವ 40 ದಿನದ ನವಜಾತ ಶಿಶುವಿಗೆ ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆ ಇತ್ತು. ಇದನ್ನು ನಾವು ವೈದ್ಯಕೀಯ ಭಾಷೆಯಲ್ಲಿ ಟಿಎಪಿವಿಸಿ ಎಂದು ಕರೆಯಲಾಗುತ್ತದೆ. ಹೃದಯದ ಎಡಭಾಗ ಶುದ್ಧ ರಕ್ತ ಹಾಗೂ ಬಲಭಾಗ ಅಶುದ್ಧ ರಕ್ತವನ್ನು ಕ್ಯಾರಿ ಮಾಡುತ್ತದೆ. ನಾಲ್ಕು ಪಲ್ಮನರಿ ವೇಯ್ನ್ (ಶ್ವಾಸಕೋಶದ ಅಭಿದಮನಿ) ಹೃದಯದ ಎಡಭಾಗಕ್ಕೆ ಕನೆಕ್ಟ್ ಆಗಬೇಕು. ಆದರೆ ಸೈಫುಲ್ ಅಝ್ಮಾನ್‍ನ ಹೃದಯದ ಬಲಭಾಗಕ್ಕೆ ಪಲ್ಮನರಿ ವೇಯ್ನ್ ಗಳು ಕನೆಕ್ಟ್ ಆಗಿವೆ. ಇದರಿಂದಾಗಿ ಮಗುವಿಗೆ ಸರಿಯಾಗಿ ಆಮ್ಲಜನಕ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ ಮಗುವಿಗೆ ನಿಮೋನಿಯಾ ಕೂಡ ಇರುವುದರಿಂದ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತಿ ಒಂದು ಸಾವಿರ ಮಕ್ಕಳ ಪೈಕಿ 5ರಿಂದ 6 ಮಕ್ಕಳಲ್ಲಿ ಇಂತಹ ಕಾಯಿಲೆ ಕಂಡು ಬರುತ್ತದೆ. ಸಾಮಾನ್ಯವಾಗಿ ಇಂತಹ ಮಕ್ಕಳು ಒಂದು ವರ್ಷ ಮಾತ್ರ ಬದಕುಳಿಯುವ ಸಾಧ್ಯತೆ ಇದೆ. ಸೈಫುಲ್ ಅಝ್ಮಾನ್‍ಗೆ ಇರುವ ನಿಮೋನಿಯಾಗೆ ಚಿಕಿತ್ಸೆ ಕೊಡಲಾಗುತ್ತದೆ. ಬಳಿಕ ಓಪನ್ ಹಾರ್ಟ್ ಸರ್ಜರಿ ಮಾಡಲಾಗುತ್ತದೆ. ನಮ್ಮ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಇಂತಹ ಕಾಯಿಲೆ ಇರುವ 5ರಿಂದ 6 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಒಂದು ವರ್ಷಕ್ಕಿಂತ ಚಿಕ್ಕ ಮಗಳಿಗೆ ಓಪನ್ ಹಾರ್ಟ್ ಸರ್ಜರಿ ಮಾಡುವುದು ಕ್ಲಿಷ್ಟಕರ ಎಂದು ತಿಳಿಸಿದರು.
ಮಂಡ್ಯ: ಒಣ ಚರ್ಮ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ವಿಚಿತ್ರ ಹೆಣ್ಣು ಮಗುವೊಂದು ಮಂಡ್ಯ ಮಿಮ್ಸ್ ನಲ್ಲಿ ಮಂಗಳವಾರ ರಾತ್ರಿ ಜನಿಸಿದೆ.
ರಾಮನಗರ ಮೂಲದ ದಂಪತಿಯ ಮೊದಲ ಮಗು ಇದಾಗಿದ್ದು, ಹೆರಿಗೆಗಾಗಿ ಮಿಮ್ಸ್ ಗೆ ಗರ್ಭಿಣಿಯನ್ನು ದಾಖಲಿಸಲಾಗಿತ್ತು. ರಾತ್ರಿ ಡಾ.ಗೀತಾ ಹೆರಿಗೆ ಮಾಡಿಸಿದ್ದು, ಈ ವಿಚಿತ್ರ ಮಗು ಜನನವಾಗಿದೆ. ಮಗುವಿನ ದೇಹದ ಚರ್ಮವು ತೀರ ದಪ್ಪವಾಗಿದ್ದು, ಒಣಗಿದಂತಿದೆ. ಹೀಗಾಗಿ ಅಲ್ಲಲ್ಲಿ ದೇಹದ ಮೈಮೇಲಿನ ಚರ್ಮವು ಬಿರುಕು ಬಿಟ್ಟಿದೆ. ಬಿರುಕು ಬಿಟ್ಟಿದ್ದರಿಂದ ಮೈಮೇಲೆ ರಕ್ತ ಚೆಲ್ಲಿದಂತೆ ಕಾಣುತ್ತಿದೆ. ಸದ್ಯಕ್ಕೆ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ಮಿಮ್ಸ್ ವೈದ್ಯ ಅಧೀಕ್ಷಕ- ಡಾ. ಎಂ.ಆರ್. ಹರೀಶ್
ವಂಶಪಾರಂಪರ್ಯ ಕಾಯಿಲೆಗೆ ಒಳಗಾಗಿ ಈ ಮಗು ಜನಿಸಿದೆ. ಎಬಿಸಿಎ 12 ಜೀನ್ ಮ್ಯುಟೇಶನ್ ಕಾರಣದಿಂದ ಮಗುವು ಈ ರೀತಿ ಆದ ವಿಚಿತ್ರ ಒಣಚರ್ಮ ಕಾಯಿಲೆಗೆ ಒಳಗಾಗಿದೆ. ಐದು ಲಕ್ಷದಲ್ಲಿ 1 ಮಗುವಿಗೆ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ ಎಂದು ಚರ್ಮರೋಗ ತಜ್ಞರು ಹಾಗೂ ಮಿಮ್ಸ್ ವೈದ್ಯ ಅಧೀಕ್ಷಕ ಡಾ. ಎಂ.ಆರ್. ಹರೀಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಚೆನ್ನೈ: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ `ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ದ್ರೌಪದಿ ಪಾತ್ರದಲ್ಲಿ ನಟಿಸಿದ ನಟಿ ಸ್ನೇಹ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ನಟಿ ಸ್ನೇಹ ಇಂದು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ನೇಹ ಹಾಗೂ ಅವರ ಪತಿ ಪ್ರಸನ್ನ ಅವರಿಗೆ ಇದು ಎರಡನೇ ಮಗುವಾಗಿದ್ದು, ಈ ವಿಷಯವನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸ್ನೇಹ ಅವರು ಸಾಂಪ್ರದಾಯಿಕವಾಗಿ ತಮ್ಮ ಸೀಮಂತ ಕಾರ್ಯಕ್ರಮವನ್ನು ಮಾಡಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸ್ನೇಹ ಅವರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಆತ್ಮೀಯ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.
ಮೇ 11, 2012ರಲ್ಲಿ ಸ್ನೇಹ ತಮ್ಮ ಗೆಳೆಯ ಪ್ರಸನ್ನ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2009ರಲ್ಲಿ ‘ಅಚಮಂಡು ಅಚಾಮುಂಡು’ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರು ಪ್ರೀತಿಸಲು ಶುರು ಮಾಡಿದ್ದರು. ಬಳಿಕ ಇಬ್ಬರು ರಿಲೇಶಿನ್‍ಶಿಪ್‍ನಲ್ಲಿ ಇದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿತ್ತು. ನಂತರ ಇಬ್ಬರು ಪೋಷಕರನ್ನು ಒಪ್ಪಿಸಿ ಮದುವೆಯಾಗಿದ್ದರು.
ಮದುವೆಯಾಗಿ ಮೂರು ವರ್ಷಗಳ ನಂತರ ಸ್ನೇಹ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ‘ವಿಹಾನ್’ ಎಂದು ನಾಮಕರಣ ಮಾಡಿದ್ದರು. ಈಗ ಸ್ನೇಹ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಭಿಮಾನಿಗಳು ದಂಪತಿಗೆ ಶುಭಾಶಯ ತಿಳಿಸುತ್ತಿದ್ದಾರೆ.