Tag: Baby

  • ಪತಿಗೆ ಮಗು ತೋರಿಸಲು ಇಷ್ಟವಿಲ್ಲದಿದ್ದರಿಂದ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ: ತಪ್ಪೊಪ್ಪಿಕೊಂಡ ಸೇಠ್

    ಪತಿಗೆ ಮಗು ತೋರಿಸಲು ಇಷ್ಟವಿಲ್ಲದಿದ್ದರಿಂದ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ: ತಪ್ಪೊಪ್ಪಿಕೊಂಡ ಸೇಠ್

    ಪಣಜಿ: 4 ವರ್ಷದ ಪುತ್ರನನ್ನು ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರ ಕೈಗೆ ಬಿದ್ದ ಸಿಇಓ ಸುಚನಾ ಸೇಠ್‌ (Suchana Seth) ಇದೀಗ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

    ಗೋವಾ ಪೊಲೀಸರ ವಿಚಾರಣೆಯ ವೇಳೆ ಮಗುವನ್ನು (4 Year Son Murder Case) ತಾನೇ ಕೊಂದಿರುವುದಾಗಿ ಆಕೆ ಹೇಳಿದ್ದಾಳೆ. ಅಲ್ಲದೆ ಕಾರಣವನ್ನು ಕೂಡ ಸುಚನಾ ವಿವರಿಸಿದ್ದಾಳೆ.

    ಸೇಠ್‌ ಹೇಳಿದ್ದೇನು..?: ವಿಚ್ಛೇದನ (Divorce) ಕೋರ್ಟ್ ನಲ್ಲಿತ್ತು. ವಾರಕ್ಕೊಮ್ಮೆ ಪತಿ ವೆಂಕಟರಮಣನಿಗೆ ಮಗುವನ್ನ ವಿಡೀಯೋ ಕಾಲ್ ಮೂಲಕ ತೋರಿಸಬೇಕಿತ್ತು. ಆದರೆ ಗಂಡನಿಗೆ ಮಗುವನ್ನು ತೋರಿಸುವುದಕ್ಕೆ ಇಷ್ಟ ಇರಲಿಲ್ಲ. ನನ್ನ ಮಗು ಕಂಡರೆ ನನಗೂ ಕೂಡ ಬಹಳ ಪ್ರೀತಿ. ಹೀಗಾಗಿ ನಾನು ಮಗುವಿನ ಪ್ರಜ್ಞೆ ತಪ್ಪಿಸಲು ದಿಂಬಿನಿಂದ ಒತ್ತಿ ಹಿಡಿದೆ. ಮಗು ಪ್ರಜ್ಞೆ ತಪ್ಪಿದೆ ಎಂದುಕೊಂಡಿದ್ದೆ. ಆದರೆ ಮಗು ಸಾವನ್ನಪ್ಪಿತ್ತು ಎಂದಿದ್ದಾಳೆ.

    ಇದೇ ನೋವಿನಲ್ಲಿ ಕೈ ಕುಯ್ದ ಆತ್ಮಹತ್ಯೆಗೆ ಯತ್ನಿಸಿದೆ, ಆದರೆ ಅದು ಸಾಧ್ಯವಾಗಿಲ್ಲ. ಗಾಬರಿಯಲ್ಲಿ ಏನು ಮಾಡಬೇಕೆಂದು ತೋಚದೆ ಸೂಟ್ ಕೇಸ್ ನಲ್ಲಿ ಮಗುವಿನ ಬಾಡಿ ಹಾಕಿ ಪರಾರಿಯಾಗಲು ಯತ್ನಿಸಿದೆ ಎಂದು ವಿವರಿಸಿದ್ದಾಳೆ. ಇದನ್ನೂ ಓದಿ: ಅಪಾರ್ಟ್‌ಮೆಂಟ್‌‌ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಬೆಂಗ್ಳೂರಿನ CEO ಸಿಕ್ಕಿಬಿದ್ದ ರೋಚಕ ಕಥೆ ಓದಿ

    ನಡೆದಿದ್ದೇನು..?: ಬೆಂಗಳೂರು ಕಂಪನಿಯ CEO ಆಗಿರುವ ಸುಚನಾ ಸೇಠ್‌  ಗೋವಾದಲ್ಲಿ ಸರ್ವಿಸ್‌ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗ ಇದ್ದಳು. ಜನವರಿ 8 ರಂದು ಅಪಾರ್ಟ್‌ ಮೆಂಟ್‌ ಸಿಬ್ಬಂದಿ ಜೊತೆ ನಾನು ಬೆಂಗಳೂರು ಹೋಗಬೇಕು ಟ್ಯಾಕ್ಸ್‌ ಬುಕ್‌ ಮಾಡುವಂತೆ ಹೇಳಿದ್ದಾಳೆ. ಆಗ ಅವರು ಟ್ಯಾಕ್ಸ್‌ ಬದಲು ವಿಮಾನದಲ್ಲಿ ಪ್ರಯಾಣಿಸುವಂತೆ ಸೂಚಿಸುತ್ತಾರೆ. ಇದಕ್ಕೊಪ್ಪದ ಸೇಠ್‌ ನಾನು ಟ್ಯಾಕ್ಸಿಯಲ್ಲೇ ಹೋಗಬೇಕು ಎಂದು ಹಠಕ್ಕೆ ಬಿದ್ದಿದ್ದಾಳೆ. ಅಂತೆಯೇ ಸಿಬ್ಬಂದಿ ಟ್ಯಾಕ್ಸಿ ಬುಕ್‌ ಮಾಡುತ್ತಾರೆ.

    ಇತ್ತ ಸೇಠ್‌ ರೂಂ ಖಾಲಿ ಮಾಡುತ್ತಿದ್ದಂತೆಯೇ ಸಿಬ್ಬಂದಿ ಕ್ಲೀನ್‌ ಮಾಡಲು ಹೋದಾಗ ಬಟ್ಟೆಯಲ್ಲಿ ರಕ್ತದ ಕಲೆಗಳನ್ನು ಕಂಡು ಗಾಬರಿಗೊಳ್ಳುತ್ತಾರೆ. ಕೂಡಲೇ ಪೊಲೀಸರಿಗೂ ಮಾಹಿತಿ ರವಾನಿಸುತ್ತಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸೇಠ್‌ಗೆ ಕರೆ ಮಾಡಿ ಮಗ ಹಾಗೂ ರಕ್ತದ ಕಲೆಯ ಬಗ್ಗೆ ವಿಚಾರಿಸುತ್ತಾರೆ. ಆಗ ಆಕೆ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾಳೆ. ಸೇಠ್‌ ಹೇಳಿಕೆಯಿಂದ ಮತ್ತಷ್ಟು ಅನುಮಾನಗೊಂಡು ಗೋವಾ ಪೊಲೀಸರು ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿ ಹತ್ತಿರದ ಪೊಲೀಸ್‌ ಠಾಣೆಗೆ ತೆರಳುವಂತೆ ಸೂಚಿಸುತ್ತಾರೆ. ಹೀಗಾಗಿ ಚಿತ್ರದುರ್ಗದ ಐಮಂಗಲ ಪೊಲೀಸ್‌ ಠಾಣೆಯಲ್ಲಿ ಸೇಠ್‌ ಬಣ್ಣ ಬಯಲಾಗಿದೆ.

  • ‘ಬೇಬಿ’ ಹುಡುಗಿಗೆ ಬಂಪರ್ ಆಫರ್: ವೈಷ್ಣವಿ ಈಗ ಲಕ್ಕಿ ನಟಿ

    ‘ಬೇಬಿ’ ಹುಡುಗಿಗೆ ಬಂಪರ್ ಆಫರ್: ವೈಷ್ಣವಿ ಈಗ ಲಕ್ಕಿ ನಟಿ

    ಬೇಬಿ ಸಿನಿಮಾದ ಮೂಲಕ ಚಿತ್ರ ಜಗತ್ತಿನ ಡಾರ್ಲಿಂಗ್ ಆಗಿರುವ ವೈಷ್ಣವಿ (Vaishnavi Chaitanya) ಇದೀಗ ಏಕಕಾಲಕ್ಕೆ ಮೂರು ಚಿತ್ರಗಳಿಗೆ ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ತೆಲುಗು ಚಿತ್ರೋದ್ಯಮದಲ್ಲಿ ಇದು ಚರ್ಚೆಗೂ ಕಾರಣವಾಗಿದೆ. ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರಲಿರುವ ಮೂರು ಚಿತ್ರಗಳಿಗೆ ವೈಷ್ಣವಿ ನಾಯಕಿ ಎಂದು ಹೇಳಲಾಗುತ್ತಿದೆ.

    ಬೇಬಿ ಸಿನಿಮಾದ ಯಶಸ್ಸಿನ ನಂತರ ಇವರಿಗೆ ಸಾಕಷ್ಟು ಆಫರ್ಸ್ ಬಂದವು. ಆದರೆ, ಅವರು ಯಾವ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದೇ ಕುತೂಹಲವಾಗಿತ್ತು. ಈಗ ಕುತೂಹಲಕ್ಕೆ ತೆರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ವೈಷ್ಣವಿ. ಬೇಬಿ ನಂತರ ಲವ್ ಮಿ ಚಿತ್ರಕ್ಕೆ ಅವರು ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

     

    ದಿಲ್ ರಾಜು ಸೋದರಳಿಯ ಆಶಿಶ್ ರೆಡ್ಡಿ ಈ ಸಿನಿಮಾದ ನಾಯಕನಾಗಿದ್ದು, ನಾಯಕಿಯಾಗಿ ವೈಷ್ಣವಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಇದೊಂದು ಹಾರರ್‍ ಮತ್ತು ಕಾಮಿಡಿ ಸಿನಿಮಾವಾಗಿದೆಯಂತೆ. ಈ ಚಿತ್ರದ ನಂತರ ದಿಲ್ ರಾಜು ಅವರು ಇನ್ನೂ ಎರಡು ಚಿತ್ರಗಳಿಗೆ ವೈಷ್ಣವಿ ನಾಯಕಿ ಎನ್ನಲಾಗುತ್ತಿದೆ.

  • ಬೆಂಗಳೂರು ಗ್ರಾಮಾಂತರದಲ್ಲಿ ಮಗುವಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು ಗ್ರಾಮಾಂತರದಲ್ಲಿ ಮಗುವಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Corona Virus) ಭೀತಿ ಮತ್ತೆ ಶುರುವಾಗಿದ್ದು, ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಇದೀಗ ಬೆಂಗಳೂರು ಗ್ರಾಮಾಂತರದಲ್ಲಿ ಮೊದಲ ಕೇಸ್ ಪತ್ತೆಯಾಗಿದೆ.

    ದೇವನಹಳ್ಳಿ ತಾಲೂಕಿನ ನಲ್ಲೂರು ಬಳಿ ಮಗುವಿಗೂ ಕೊರೊನಾ ವಕ್ಕರಿಸಿದೆ. ಸ್ಪರ್ಶ ಮಕ್ಕಳಧಾಮದಲ್ಲಿದ್ದ ಮಗುವಿಗೆ ಕೊರೊನಾ ಪಾಸಿಟಿವ್ (Corona Positive For Baby) ಇರುವುದು ದೃಢವಾಗಿದೆ. ಜ್ವರ, ಕೆಮ್ಮು ಅಂತ ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ. ಸದ್ಯ ತೀವ್ರ ಉಸಿರಾಟದ ತೊಂದರೆ (ಸಾರಿ) ಕೇಸ್ ಹಿನ್ನೆಲೆ ತಾಲೂಕು ಆಸ್ಪತ್ರೆಯಲ್ಲಿ ಮಗುವನ್ನು ಐಸೋಲೆಷನ್‍ನಲ್ಲಿ ಇರಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಡಿ.ಸಿ ಶಿವಶಂಕರ್ ಹೇಳಿದ್ದಾರೆ.

    ಸ್ವರ್ಶ ಮಕ್ಕಳ ಧಾಮದಲ್ಲಿ ಮೊದಲ‌ ಕೊರೊನಾ ಕೇಸ್ ಹಿನ್ನೆಲೆಯಲ್ಲಿ ಮಕ್ಕಳ ಧಾಮದ 21 ಮಂದಿ ಮಕ್ಕಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಟೆಸ್ಟಿಂಗ್ ಮಾಡಲಾಗಿದೆ. ಗಂಟಲು ದ್ರವ ಸ್ಯಾಂಪಲ್ ಪಡೆದು ಅಧಿಕಾರಿಗಳು ಟೆಸ್ಟಿಂಗ್ ಗೆ ಕಳುಹಿಸಿದ್ದು, ಸಂಜೆ ರಿಪೋರ್ಟ್‌ ಬರಲಿದೆ. ಇದನ್ನೂ ಓದಿ: PublicTV Explainer: ಹೊಸ ವರ್ಷದ ಹೊತ್ತಲ್ಲೇ ದೇಶಕ್ಕೆ ಕಾಲಿಟ್ಟ ಕೊರೊನಾ ಹೊಸ ತಳಿ; ಏನಿದು ಜೆಎನ್‌.1? ಇದು ಅಪಾಯಕಾರಿಯೇ?

    ಪಾಸಿಟಿವ್‌ ಕಂಡು ಬಂದ ಹಿನ್ನೆಲೆಯಲ್ಲಿ ಇಂದು ಸಿಬ್ಬಂದಿ ಮಕ್ಕಳ ಧಾಮ ಹಾಗೂ ಶಾಲೆಗೆ ಸ್ಯಾನಿಟೈಸ್ ಮಾಡಲಿದ್ದಾರೆ. ಟೆಸ್ಟಿಂಗ್ ರಿಪೋರ್ಟ್ ಬರುವವರೆಗೂ ಎಲ್ಲಾ ಮಕ್ಕಳು ಹೋಂ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ. ಶಾಲೆ ಹಾಗೂ ಮಕ್ಕಳಧಾಮದಲ್ಲಿ ಕೆಮ್ಮು, ನೆಗಡಿ ಹಾಗೂ ಜ್ವರ ಇದೆಯಾ ಅನ್ನೋದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಮಕ್ಕಳ‌ ಜೊತೆ ಸಂಪರ್ಕದಲ್ಲಿದ್ದವರ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಇತ್ತ ಬೆಂಗಳೂರಿನ ಗಾಂಧಿನಗರ ನಿವಾಸಿ 25 ವರ್ಷದ ಯುವಕನಲ್ಲಿಯೂ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಯಾವುದೇ ಟ್ರಾವೆಲ್ ಹಿಸ್ಟರಿ (Travel History) ಇಲ್ಲದಿದ್ದರೂ ಕೊರೊನಾ ವಕ್ಕರಿಸಿಕೊಂಡಿದೆ. ಸದ್ಯ ಈತನಿಗೆ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ಜನರನ್ನ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಮೇಲೆ ಟೆಸ್ಟ್ ಗೆ ಒಳಪಡಿಸಲಾಗಿದೆ.

    ಬೆಂಗಳೂರಲ್ಲಿ ಸಕ್ರಿಯ ಕೇಸ್ ಶತಕದತ್ತ ಮುನ್ನುಗುತ್ತಿದೆ. ರಾಜ್ಯದಲ್ಲಿ 105 ಆಕ್ಟೀವ್ ಕೇಸ್ ಇದ್ದರೆ ಬೆಂಗಳೂರಲ್ಲಿ 93 ಕೊರೊನಾ ಪ್ರಕರಣಗಳಿವೆ. ಟ್ರಾವೆಲ್ ಹಿಸ್ಟರಿ ಇಲ್ಲದಿದ್ರು ಕೇಸ್ ಏರಿಕೆ ಆಗುವ ಮೂಲಕ ಆತಂಕ ಹೆಚ್ಚಿಸಿದೆ. ಗುರುವಾರದಿಂದ ಟೆಸ್ಟಿಂಗ್ ಪ್ರಮಾಣ ಕೂಡ ಹೆಚ್ಚಳವಾಗಿದ್ದು, ನಿನ್ನೆಯಿಂದ 1,500 ಮಂದಿಯನ್ನು ಟೆಸ್ಟಿಂಗ್‍ಗೆ ಒಳಪಡಿಸಲಾಗಿದೆ. ಟೆಸ್ಟಿಂಗ್ ಹೆಚ್ಚಳದಿಂದ ಸೋಂಕು ಹೆಚ್ಚಳ ಸಾಧ್ಯತೆ ಇದೆ.

  • ಕೆಸಿ ಜನರಲ್ ಆಸ್ಪತ್ರೆ ಎಡವಟ್ಟಿನಿಂದ ಮಗು ಸಾವು- ಮಗು ಸತ್ತೋದ ಮೇಲೆ ಬಿಲ್ ಕೇಳಿದ ಆರೋಪ

    ಕೆಸಿ ಜನರಲ್ ಆಸ್ಪತ್ರೆ ಎಡವಟ್ಟಿನಿಂದ ಮಗು ಸಾವು- ಮಗು ಸತ್ತೋದ ಮೇಲೆ ಬಿಲ್ ಕೇಳಿದ ಆರೋಪ

    – ಸಿಜೇರಿಯನ್‍ಗೆ ವೈದ್ಯರ ವಿಳಂಬ ಆರೋಪ

    ಬೆಂಗಳೂರು: ನಗರದ ಕೆಸಿ ಜನರಲ್ (KC General) ಅಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ಜಗತ್ತಿಗೆ ಬರುವ ಮುಂಚೆಯೇ ಕಂದಮ್ಮ ಕಣ್ಣು ಮುಚ್ಚಿದ ಘಟನೆಯೊಂದು ನಡೆದಿದೆ.

    ಚೊಕ್ಕಸಂದ್ರದ ದೇವಿಕಾ ಎಂಬವರಿಗೆ 9 ತಿಂಗಳು ಭರ್ತಿಯಾಗಿ 12 ದಿನದ ಬಳಿಕ ಆಸ್ಪತ್ರೆ ವೈದ್ಯರು ಡೆಲಿವರಿಗೆ ಡೇಟ್ ಕೊಟ್ಟರು. ಆದರೆ ಡೇಟ್ ಮೀರಿದೆ ಸಿಜೇರಿಯನ್ ಮಾಡಿ ಅಂತಾ ಕುಟುಂಬಸ್ಥರು ಮನವಿ ಮಾಡಿದರೂ ವೈದ್ಯರು ಒಪ್ಪದೇ ನಾರ್ಮಲ್ ಗೆ ರೆಡಿ ಮಾಡಿದ್ದಾರೆ. ಬಳಿಕ ನಾರ್ಮಲ್ ಆಗಲ್ಲ ಸಿಜೇರಿಯನ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಕೊನೆಗೆ ಮಗು ಗಲೀಜು ನೀರು ಕುಡಿದಾಗಿದ್ದು, ಮಗು ಸತ್ತು ಹೋಗಿದೆ ಎಂದು ತಿಳಿಸಿದ್ದಾರೆ.

    ಇದಾದ ಬಳಿಕ ಆಸ್ಪತ್ರೆಯಲ್ಲಿ ಕುಟುಂಬಸ್ಥರು ಗಲಾಟೆ ನಡೆಸಿದ್ದು, ಆಕ್ರೋಶ ಹೊರಹಾಕಿ ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೇ ಮಗು ಸತ್ತು ಹೋದ ಮೇಲೆಯೂ ದುಡ್ಡು ಕೊಡಿ ಎಂದು ಆಸ್ಪತ್ರೆಯವರು ಕೇಳಿದ್ದಾರೆ. ಭಾನುವಾರ 10 ಗಂಟೆಗೆ ಮಹಿಳೆ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಸಂಜೆ 7 ಗಂಟೆಯವರೆಗೆ ಆಸ್ಪತ್ರೆಯವರು ಕಾಯಿಸಿದ್ದಾರೆ. ಒಂದು ವಾರದ ಹಿಂದೆ ನಾರ್ಮಲ್ ಆಗಲ್ಲ, ಸಿಜೇರಿಯನ್ ಆಗುತ್ತೆ ಎಂದಿದ್ದರು. ಆದರೆ ನಿನ್ನೆ ಬಂದ ಬಳಿಕ ನಾರ್ಮಲ್ ಆಗುತ್ತೆ ಎಂದು ಅಸ್ಪತ್ರೆಯವರು ಹೇಳಿದ್ದಾರೆ. ಕುಟುಂಬಸ್ಥರು ದಿನ ತುಂಬಿದೆ ಕಾಯಬೇಡಿ ಅಂದ್ರೂ ಆಸ್ಪತ್ರೆಯವರು ಕೇಳಲಿಲ್ಲ ಎಂದು ದೇವಿಕಾ ಕುಟುಂಬಸ್ಥರು ಆರೋಪಿಸಿದ್ದಾರೆ. ಲಂಚ ಲಂಚ ಅಂತಾ ಸಾಯ್ತಾ ಇದ್ದಾರೆ. ವೈದ್ಯರನ್ನು ಹೊರಗೆ ಕರೆಸುವಂತೆ ಗಲಾಟೆ ಮಾಡಿ ಆಕ್ರೋಶ ಹೊರಹಾಕಿದ ಕುಟುಂಬಸ್ಥರು, ಆಸ್ಪತ್ರೆಯೊಳಗೆ ನುಗ್ಗಲು ಯತ್ನಿಸಿದ್ದಾರೆ. ವೈದ್ಯರನ್ನು ಸಸ್ಪೆಂಡ್ ಮಾಡಿ ಅಂತಾ ಕಿಡಿಕಾರಿದ್ದಾರೆ.

    ಇತ್ತ ಈ ಸಂಬಂಧ ಜನರಲ್ ಮೆಡಿಕಲ್ ಆಫೀಸರ್ ಡಾ ಮೋಹನ್ ಕೆಸಿ ಪ್ರತಿಕ್ರಿಯಿಸಿ, ಡಾ. ವಿಜಯಲಕ್ಷ್ಮಿ ವೈದ್ಯೆ ಇವರನ್ನು ನೋಡುತ್ತಿದ್ರು. ಡಿಸೆಂಬರ್ 10ಕ್ಕೆ ಡೆಲಿವರಿ ಡೇಟ್ ಇತ್ತು. ಸಿಜೇರಿಯನ್ ಅಗತ್ಯವಿಲ್ಲ ಅಂತಾ ನಿರ್ಧಾರಕ್ಕೆ ಬಂದಿದ್ರು. ಆದರೆ ನಾರ್ಮಲ್ ಆಗದೇ ಇರೋದ್ರಿಂದ ಸಿಜೇರಿಯನ್ ಮಾಡಿದ್ದಾರೆ. ಹಾರ್ಟ್ ಬೀಟ್ ಕಡಿಮೆ ಇತ್ತು, ಎನ್ ಐ ಸಿಯು ಗೆ ಶಿಫ್ಟ್ ಮಾಡಿದ್ದಾರೆ. ವೈದ್ಯೆ ನನ್ನ ಕಡೆಯಿಂದ ತಪ್ಪಾಗಿಲ್ಲ ಅಂತಾ ಹೇಳಿದ್ದಾರೆ. ಆದರೆ ವೈದ್ಯೆಯ ನಿರ್ಲಕ್ಷ್ಯ ಇದ್ರೆ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ. ಆಂತರಿಕ ತನಿಖೆ ಮಾಡುತ್ತೇವೆ. ವರದಿ ತಯಾರಿ ಮಾಡಿದ ಬಳಿಕ ಕೇಸ್ ಶೀಟ್ ತಗೊಂಡು ನಿರ್ಧಾರ ಮಾಡ್ತೇವೆ. ವೈದ್ಯರ ನಿರ್ಲಕ್ಷ್ಯ ದಾಖಲೆಯಲ್ಲಿ ಬಂದ್ರೇ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇವೆ. ದೂರು ಕೊಟ್ಟ ಮೇಲೆ ತನಿಖೆ ಮಾಡೇ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಮಲ್ಲೇಶ್ವರ ಠಾಣೆಯಲ್ಲಿ ಕುಟುಂಬಸ್ಥರು ವೈದ್ಯೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ಆಟವಾಡುತ್ತಾ ನದಿಗೆ ಬಿದ್ದ ಮಗುವಿನ ರಕ್ಷಣೆಗಾಗಿ ಧುಮುಕಿದ ಐವರು ಸಾವು!

    ಆಟವಾಡುತ್ತಾ ನದಿಗೆ ಬಿದ್ದ ಮಗುವಿನ ರಕ್ಷಣೆಗಾಗಿ ಧುಮುಕಿದ ಐವರು ಸಾವು!

    ಕಾರವಾರ: ಪ್ರವಾಸಕ್ಕೆಂದು ನದಿ ತೀರಕ್ಕೆ ತೆರಳಿದ್ದ ಒಂದೇ ಕುಟುಂಬದ ಐವರು ನದಿಯಲ್ಲಿ ಮುಳುಗಿ ಸಾವು ಕಂಡ ಘಟನೆ ಉತ್ತರಕನ್ನಡ (Uttara Kannada) ಜಿಲ್ಲೆಯ ಶಿರಸಿಯ ಶಾಲ್ಮಲಾ ನದಿಯ ಭೀಮನಗುಂಡಿಯಲ್ಲಿ ಭಾನುವಾರ ನಡೆದಿದೆ.

    ಮೃತರು ಶಿರಸಿಯ ರಾಮನಬೈಲ್ ಹಾಗೂ ಕಸ್ತೂರಬಾ ನಗರ ನಿವಾಸಿಗಳಾಗಿದ್ದು ರಾಮನಬೈಲಿನ ನಿವಾಸಿಗಳಾದ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ನಾದಿಯಾ ನೂರ್ ಅಹಮದ್ ಶೇಖ್ (20), ನಬಿಲ್ ನೂರ್ ಅಹಮದ್ ಶೇಖ್(22), ವಿದ್ಯಾರ್ಥಿ ಉಮರ್ ಸಿದ್ದಿಕ್ (14) ಹಾಗೂ ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಬಾ ತಬಸುಮ್ (21) ಸಾವಿಗೀಡಾದವರಾಗಿದ್ದಾರೆ.

    ಮಗುವೊಂದು ಆಡುವಾಗ ನದಿಗೆ ಬಿದ್ದಿದ್ದು ಮಗು ರಕ್ಷಣೆಗಾಗಿ ಸಲೀಮ್ ಕಲೀಲ್ ನದಿಗೆ ಧುಮುಕಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮಗು ರಕ್ಷಣೆಗೆ ಉಳಿದವರೂ ನದಿಗೆ ಇಳಿದಿದ್ದು, ಈ ಸಂದರ್ಭದಲ್ಲಿ ಮಗು ರಕ್ಷಣೆ ಮಾಡಿದ ಸಲೀಮ್ ಉಳಿದವರನ್ನು ಸಹ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೆ ನೀರಿಗಿಳಿದ ಎಲ್ಲರೂ ಮುಳುಗಿ ಸಾವು ಕಂಡಿದ್ದಾರೆ. ಇದನ್ನೂ ಓದಿ: ಮನೆ ಬಳಿ ಮೂತ್ರ ವಿಸರ್ಜಿಸಿದಳೆಂದು ಮಹಿಳೆಯ ಗುಪ್ತಾಂಗಕ್ಕೆ ರಾಡ್‍ನಿಂದ ಹಲ್ಲೆ!

    ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸಲೀಮ್ ಕಲೀಲ್ ರೆಹಮಾನ್, ನಾದಿಯಾ ನೂರ್ ಶವವನ್ನು ಹೊರಕ್ಕೆ ತೆಗೆದಿದ್ದು, ಮೂರು ಜನರ ಶವ ಪತ್ತೆಯಾಗಬೇಕಿದೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಐದು ಜನ ನೀರಿನಲ್ಲಿ ಸಾವು ಕಂಡವರು ಒಂದೇ ಕುಟುಂಬದವರಾಗಿದ್ದಾರೆ. ಇನ್ನು ಕಳೆದ ತಿಂಗಳಷ್ಟೇ ಹಸಮಣೆ ಏರಿ ಕುಟುಂಬದ ಕನಸು ಕಂಡಿದ್ದ ಶಿರಸಿಯ ನಾದಿಯಾ ನೂರ್ ಮಗು ರಕ್ಷಣೆ ಮಾಡಲು ಹೋಗಿ ಸಾವು ಕಂಡಿದ್ದು ವಿಧಿಯಾಟವೇ ಸರಿ.

  • BESCOM ನಿರ್ಲಕ್ಷ್ಯಕ್ಕೆ ತಾಯಿ, ಮಗು ಸಾವು ಪ್ರಕರಣ- ಇಂದು ಲೋಕಾಯುಕ್ತಕ್ಕೆ ವರದಿ ಸಲ್ಲಿಕೆ

    BESCOM ನಿರ್ಲಕ್ಷ್ಯಕ್ಕೆ ತಾಯಿ, ಮಗು ಸಾವು ಪ್ರಕರಣ- ಇಂದು ಲೋಕಾಯುಕ್ತಕ್ಕೆ ವರದಿ ಸಲ್ಲಿಕೆ

    ಬೆಂಗಳೂರು: ನಗರದ ಕಾಡುಗೋಡಿಯಲ್ಲಿ (Kadugodi Mother and Baby Death Case) ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ ಮಗು ಸುಟ್ಟುಕರಕಲಾದ ಪ್ರಕರಣ ಸಂಬಂಧ ಬೆಸ್ಕಾಂ (BESCOM) ಅವಘಡಕ್ಕೆ ಕಾರಣಗಳೇನು ಅಂತಾ ರಿಪೋರ್ಟ್ ರೆಡಿ ಮಾಡಿದ್ದಾರೆ. ಘಟನೆ ಸಂಬಂಧ ಲೋಕಾಯುಕ್ತದಲ್ಲಿ ಸುಮೊಟೊ ಕೇಸ್ ದಾಖಲಾಗಿದ್ದು, ಇಂದು ವರದಿ ಸಲ್ಲಿಸಲಿದ್ದಾರೆ.

    ವಿದ್ಯುತ್ ಪರಿವೀಕ್ಷಣಾಧಿಕಾರಿಗಳ ವರದಿಯಲ್ಲಿ ಏನಿದೆ?: ವಿದ್ಯುತ್ ಮಾರ್ಗ ತುಂಡಾಗಿ ಫುಟ್‍ಪಾತ್ ಮೇಲೆ ಲೋ ಫಲ್ಟ್ ಕರೆಂಟ್ ಪಾತ್ ಉಂಟಾಗಿದೆ. ನಿಗದಿತ ಫಲ್ಟ್ ಕರೆಂಟ್ ಭೂಮಿಗೆ ಹೋಗದೆ ಇರುವುದರಿಂದ ರಿಲೆ ಪಿಕ್‍ಆಪ್ ಕರೆಂಟ್ ಪ್ರವಹಿಸಿಲ್ಲ. ಇಎಫ್‍ಆರ್ ಮೇಲೆ ಟ್ರಿಪ್ ಆಗಲು ಬೇಕಾದ ನಿಗದಿತ ರಿಲೆ ಪಿಕ್‍ಆಪ್ ಕರೆಂಟ್ ಪ್ರವಹಿಸಿಲ್ಲ. ರಿಲೆ ಪಿಕ್‍ಆಪ್ ಕರೆಂಟ್ ಪ್ರವಹಿಸದಿದ್ದಕ್ಕೆ ಇಎಫ್‍ಆರ್ ಟ್ರಿಪ್ ಆಗದೇ ಇರುವುದು ಕಾರಣವಾಗಿದೆ.

    ಹಳೆಯ & ಶಿಥಿಲಗೊಂಡ ವಿದ್ಯುತ್ ಮಾರ್ಗಗಳನ್ನು ಗಮನಿಸಿ ಸುಸ್ಥಿಯಲ್ಲಿಟ್ಟುಕೊಂಡಿಲ್ಲ. ಎಲ್‍ಬಿಎಸ್‍ನ ನಿರ್ವಹಣೆ ಮಾಡಿ ವರ್ಮಿನ್ ಪ್ರೂಪ್ ಆಗಿ ನಿರ್ವಹಿಸಿದ್ರೆ ಅಪಘಾತ ಆಗ್ತಿರಲಿಲ್ಲ. ಸದರಿ ಓವರ್ ಹೆಡ್ ಬೇರ್ ವಾಹಕಗಳ ಮಾರ್ಗಗಳಲ್ಲಿ ಅರ್ಥ್‍ಗಾರ್ಡ ಅಳವಡಿಸಿದ್ರೆ ತಪ್ಪಿಸಬಹುದಿತ್ತು. ಬೆಸ್ಕಾಂ ದಿ ಸೆಂಟ್ರಲ್ ಎಲೆಕ್ಟ್ರಿಕಲ್ ಸೇಫ್ಟಿ ಅಥಾರಿಟಿ ರೆಗ್ಯುಲೇಷನ್- 2023 ಉಲ್ಲಂಘನೆ, ರೆಗ್ಯುಲೇಷನ್ 14(1), 24(1)(ಐ), 48(7) & 76(1) ಉಲ್ಲಂಘಿಸಿರೋದಾಗಿ ಹಾಗೂ ಬೆಸ್ಕಾಂ ಅಧಿಕಾರಿಗಳಿಗೆ ಅಪಘಾತ ತಡೆಗಟ್ಟಲು ಕ್ರಮಗಳನ್ನ ಅನುಸರಿಸುವಂತೆ ಸಲಹೆ ಕೊಡುವಂತೆ ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ತಾಯಿ-ಮಗು ಸಜೀವ ದಹನಕ್ಕೆ ದೃಶ್ಯಸಾಕ್ಷ್ಯದ ಬೆನ್ನಲ್ಲೇ ಹೆಲ್ಪ್‌ಲೈನ್

    ಅಪಘಾತ ತಡೆಗಟ್ಟಲು ಸುರಕ್ಷತಾ ಕ್ರಮಗಳೇನು..?: ಹಳೆಯ ಹಾಗೂ ಶಿಥಿಲಗೊಂಡ ವಿದ್ಯುತ್ ವಾಹಕಗಳನ್ನು ಗುರುತಿಸೋದು. ಯು.ಜಿ/ ಓವರ್ ಹೆಡ್ ಕೇಬಲ್‍ಗೆ ಬದಲಾಯಿಸಿ ಅಪಾಯರಹಿತ ಸುಸ್ಥಿಯಲ್ಲಿಟ್ಟುಕೊಳ್ಳುವುದು. ವಿದ್ಯುತ್ ವ್ಯವಸ್ಥೆಯಲ್ಲಿ ಅಳವಡಿಸುವ ಮೀಟರಿಂಗ್ ಕ್ಯುಬಿಕಲ್, ಎಲ್‍ಬಿಎಸ್‍ಆರ್ ಎಮ್‍ಯು ಇಂಟರ್‍ಮೀಡಿಯೇಟ್ ಒಡಿ ಹಾಗೂ ಇತರೆ ಉಪಕರಣಗಳನ್ನು ವರ್ಮಿನ್ ಫ್ಯೂಜ್ ಆಗಿರುವಂತೆ ನೋಡಿಕೊಳ್ಳುವುದು. ಆರ್ ಎಮ್‍ಯು ಇಂಟರ್‍ಮೀಡಿಯೇಟ್ ಒಡಿಗಳಲ್ಲಿರುವ ಪ್ರೊಟೆಕ್ಷನ್ ಸಿಸ್ಟಂ ಸುಸ್ಥಿತಿಯಲ್ಲಿರುವಂತೆ ನಿರ್ವಹಿಸುವುದು. ವಿದ್ಯುತ್ ಅವಘಡ ತಡೆಗಟ್ಟಲು ಅರ್ಥ್ ಗಾರ್ಡ್ ಅಳವಡಿಸುವುದು ಹಾಗೂ ಹೈ ಇಂಫೆಡೆನ್ಸ್ ಫಲ್ಟ್ ಪ್ರೊಟೆಕ್ಷನ್ ಸಿಸ್ಟಮ್ಸ್ ಅಳವಡಿಕೆಗೆ ಕ್ರಮ ವಹಿಸುವುದಾಗಿದೆ.

  • ಹಾಸನದಿಂದ ಜೀರೋ ಟ್ರಾಫಿಕ್‌ನಲ್ಲಿ ಬಂದ್ರೂ ಅರ್ಧ ಗಂಟೆ ಚಿಕಿತ್ಸೆಗೆ ವಿಳಂಬ – ನಿಮಾನ್ಸ್‌ನಲ್ಲಿ ಕಂದಮ್ಮ ಸಾವು

    ಹಾಸನದಿಂದ ಜೀರೋ ಟ್ರಾಫಿಕ್‌ನಲ್ಲಿ ಬಂದ್ರೂ ಅರ್ಧ ಗಂಟೆ ಚಿಕಿತ್ಸೆಗೆ ವಿಳಂಬ – ನಿಮಾನ್ಸ್‌ನಲ್ಲಿ ಕಂದಮ್ಮ ಸಾವು

    ಬೆಂಗಳೂರು: 10 ಅಡಿ ಎತ್ತರದಿಂದ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು (Child) ಹಾಸನದಿಂದ (Hassan) ಜೀರೋ ಟ್ರಾಫಿಕ್‌ನಲ್ಲಿ (Zero traffic) ಬೆಂಗಳೂರಿನ ನಿಮಾನ್ಸ್ (NIMHANS) ಆಸ್ಪತ್ರೆಗೆ ಕರೆದುಕೊಂಡು ಬಂದರೂ ಬೆಡ್ ಕೊಡದೇ ವೈದ್ಯರು ನಿರ್ಲಕ್ಷ್ಯವಹಿಸಿದ್ದಕ್ಕೆ 1 ವರ್ಷದ ಕಂದಮ್ಮ ಸಾವನ್ನಪ್ಪಿದೆ.

    1 ವರ್ಷದ ಮಗು ತಾಯಿ ಕೈಯಿಂದ 10 ಅಡಿ ಮೇಲಿಂದ ಜಾರಿ ಕೆಳಗೆ ಬಿದ್ದಿತ್ತು. ತಲೆಗೆ ತೀವ್ರವಾದ ಗಾಯವಾಗಿ, ಅಸ್ವಸ್ಥವಾಗಿದ್ದ ಮಗುವನ್ನು ಪೋಷಕರು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್‌ಗೆ ಹೋಗುವಂತೆ ಅಲ್ಲಿನ ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆ ಮಗುವನ್ನು ಜೀರೋ ಟ್ರಾಫಿಕ್‌ನಲ್ಲಿ ಕೊಂಡೊಯ್ದಿದ್ದು, ಆಸ್ಪತ್ರೆಯಲ್ಲಿ ಬೆಡ್ ಕಾಯ್ದಿರಿಸುವಂತೆ ನಿಮಾನ್ಸ್ ಆಡಳಿತ ಮಂಡಳಿಗೆ ಹಾಸನ ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.

    ಜೀರೋ ಟ್ರಾಫಿಕ್‌ನಲ್ಲಿ ಮಗುವನ್ನು ಹಾಸನದಿಂದ ನಿಮಾನ್ಸ್‌ಗೆ ಕೇವಲ 1 ಗಂಟೆ 40 ನಿಮಿಷದಲ್ಲಿ ತಲುಪಿಸಲಾಗಿತ್ತು. ಆದರೆ ಬೆಡ್ ಖಾಲಿಯಿಲ್ಲ ಎಂದು ಆಡಳಿತ ಮಂಡಳಿ ಮಗುವನ್ನು ಆಸ್ಪತ್ರೆಯ ಆವರಣದಲ್ಲಿಯೇ ನಿಲ್ಲಿಸಿದೆ. ಮಗುವಿಗೆ ಪ್ರಾಥಮಿಕ ಚಿಕಿತ್ಸೆಯನ್ನೂ ನೀಡದೆ ಬೇಜವಾಬ್ದಾರಿ ತೋರಿದ್ದಲ್ಲದೇ ಸುಮಾರು ಅರ್ಧ ಗಂಟೆಯಿಂದ ಮಗುವನ್ನು ಅಂಬುಲೆನ್ಸ್‌ನಲ್ಲಿಯೇ ಇರಿಸಲಾಗಿತ್ತು. ಇದನ್ನೂ ಓದಿ: ಹಣಕಾಸಿನ ವಿಚಾರಕ್ಕೆ ಟಿಪ್ಪರ್ ಹರಿಸಿ ವ್ಯಕ್ತಿಯ ಹತ್ಯೆ – ಇಬ್ಬರು ಗಂಭೀರ

    ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆ ಮಗುವಿನ ಆಕ್ಸಿಜನ್ ಲೆವೆಲ್ ಕಡಿಮೆಯಾಗಿ ಮೃತಪಟ್ಟಿದೆ. ಮಗುವಿಗೆ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ತೋರಿದ್ದಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಆಕ್ರಂದನ ಮುಗಿಲುಮುಟ್ಟಿದೆ.

    ಅತ್ತ ಆಸ್ಪತ್ರೆಯಲ್ಲಿ ಬೆಡ್ ಕೊಡದೆ ವೈದ್ಯರು ನಿರ್ಲಕ್ಷ್ಯವಹಿಸಿದರೆ, ಇತ್ತ ಪೊಲೀಸರು ಹಾಗೂ ಅಂಬುಲೆನ್ಸ್ ಚಾಲಕರ ನಡುವೆ ವಾಗ್ವಾದ ನಡೆದಿದೆ. ನಿಮಾನ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವನ್ನು ಖಂಡಿಸಿ ಮೃತ ಮಗುವನ್ನು ವಿಧಾನಸೌಧದ ಮುಂದೆ ತಂದು ಪೋಷಕರು ಹಾಗೂ ಅಂಬುಲೆನ್ಸ್ ಚಾಲಕರು ಪ್ರತಿಭಟನೆಗೆ ಯೋಜಿಸಿದ್ದಾರೆ. ಇದನ್ನೂ ಓದಿ: ಹಾರಾಟದಲ್ಲಿದ್ದ ವಿಮಾನದಲ್ಲೇ ಗಂಡ, ಹೆಂಡತಿ ಗಲಾಟೆ – ಬ್ಯಾಂಕಾಕ್‍ಗೆ ಹೊರಟಿದ್ದ ವಿಮಾನ ದೆಹಲಿಯಲ್ಲಿ ಲ್ಯಾಂಡ್

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ತಾಯಿ-ಮಗು ಸಜೀವ ದಹನಕ್ಕೆ ದೃಶ್ಯಸಾಕ್ಷ್ಯದ ಬೆನ್ನಲ್ಲೇ ಹೆಲ್ಪ್‌ಲೈನ್

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ತಾಯಿ-ಮಗು ಸಜೀವ ದಹನಕ್ಕೆ ದೃಶ್ಯಸಾಕ್ಷ್ಯದ ಬೆನ್ನಲ್ಲೇ ಹೆಲ್ಪ್‌ಲೈನ್

    ಬೆಂಗಳೂರು: ಕಾಡುಗೋಡಿ (Kadugodi) ಬಳಿ ವಿದ್ಯುತ್ ತಂತಿ ತುಳಿದು ತಾಯಿ ಮಗು ಪತಿಯ ಕಣ್ಮುಂದೆಯೇ ಸುಟ್ಟು ಕರಕಲಾಗಿದ್ರು. 11 ಕೆವಿ ಸಾಮಥ್ರ್ಯದ ವಿದ್ಯುತ್ ತಂತಿ ತುಂಡಾದ ಎರಡು ಗಂಟೆಗಳ ನಂತರ ಈ ದುರಂತ ನಡೆದಿತ್ತು.

    ಯಾರಾದ್ರೂ ದಾರಿ ಹೋಕರು, ಸ್ಥಳೀಯರು ಎಚ್ಚೆತ್ತು ಬೆಸ್ಕಾಂಗೆ (BESCOM) ದೂರು ಕೊಟ್ಟಿದ್ರೆ. ಬೆಸ್ಕಾಂ ಸಿಬ್ಬಂದಿ ಆ ಹೊತ್ತಲ್ಲಿಯೇ ಸ್ಪಂದಿಸಿದ್ರೆ ಘೋರ ದುರಂತ ತಪ್ಪುತ್ತಿತ್ತು. ಘನಘೋರ ದುರಂತದ ದೃಶ್ಯಾವಳಿ ಹಾಗೂ ದುರಂತಕ್ಕೆ ಮುನ್ನ ಮತ್ತು ನಂತರ ಏನೆಲ್ಲಾ ನಡೆಯಿತು ಎಂಬುದರ ದೃಶ್ಯಾವಳಿ ಪಬ್ಲಿಕ್ ಟಿವಿ ಲಭ್ಯವಾಗಿದೆ.

    ‌ಅಂದು ಏನೇನಾಗಿತ್ತು..?: ನವೆಂಬರ್ 19 ಮುಂಜಾನೆ 3.41ಕ್ಕೆ ವಿದ್ಯುತ್ ತಂತಿ ಕಟ್ ಆಗಿ ಬಿದ್ದು ಹೊತ್ತಿ ಉರಿದಿದೆ. 3.43ಕ್ಕೆ ಅದೇ ದಾರಿಯಲ್ಲಿ ಬರುತ್ತಿದ್ದ ಪಾದಾಚಾರಿಯೊಬ್ಬ ಬೆದರಿ ಓಡಿಹೋಗಿದ್ದಾನೆ. ಇನ್ನು 5.41ಕ್ಕೆ ಅದೇ ದಾರಿಯಲ್ಲಿ ಗಂಡ-ಹೆಂಡತಿ ಹಾಗೂ ಮಗು ಆಗಮಿಸಿದ್ದಾರೆ. 5.42ಕ್ಕೆ ಮಗು ಎತ್ತಿಕೊಂಡಿದ್ದ ತಾಯಿ ವೈರ್ ತುಳಿದಿದ್ದಾರೆ. 5.42ಕ್ಕೆ ಅಸಹಾಯಕನಾಗಿ ತಂದೆ ಪರದಾಡಿದ್ದಾರೆ. 5.42ಕ್ಕೆ ಬೆಸ್ಕಾಂ ವಾಹನ ಸ್ಥಳಕ್ಕೆ ಬಂದಿದೆ. ಇದನ್ನೂ ಓದಿ: ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ, ಮಗಳು ಬಲಿ- ಐವರು ಅಧಿಕಾರಿಗಳ ಅಮಾನತು

    ಈ ಸುದ್ದಿಯನ್ನು ಪಬ್ಲಿಕ್ ಟಿವಿ ಬಿತ್ತರಿಸಿದ ಕೂಡಲೇ ಎಚ್ಚೆತ್ತ ಬೆಸ್ಕಾಂ, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗಿದೆ. ಸಾರ್ವಜನಿಕರೇ ಗಮನಿಸಿ, ವಿದ್ಯುತ್ ಮಾರ್ಗದಲ್ಲಿ ವೈರ್ ತುಂಡಾಗಿದೆಯಾ? ವೈರ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ಯಾ? ಇತರೆ ಅಪಾಯಕಾರಿ ಸನ್ನಿವೇಶ ಕಂಡು ಬಂದಿದ್ಯಾ?. ಈ ಕೂಡಲೇ 1912 ಬೆಸ್ಕಾಂ ಸಹಾಯವಾಣಿ ಕರೆ ಮಾಡಿ ಎಂದು ಪ್ರಕಟಣೆ ಹೊರಡಿಸಿದೆ. ಈ ನಡುವೆ ಚೆಸ್ಕಾಂ ನಿರ್ಲಕ್ಷ್ಯಕ್ಕೆ ಕೆಆರ್ ಪೇಟೆಯ ಬೆಳತೂರು ಗ್ರಾಮದ ಜಮೀನಿನಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತ ರವಿಕುಮಾರ್ ಸಾವನ್ನಪ್ಪಿದ್ದಾರೆ.

  • 4 ತಿಂಗಳ ಪುಟ್ಟ ಕಂದಮ್ಮನಿಗೆ ಹಾಲುಣಿಸಿ ಸಂತೈಸಿದ ಮಹಿಳಾ ಪೊಲೀಸ್: ಭಾರೀ ಮೆಚ್ಚುಗೆ

    4 ತಿಂಗಳ ಪುಟ್ಟ ಕಂದಮ್ಮನಿಗೆ ಹಾಲುಣಿಸಿ ಸಂತೈಸಿದ ಮಹಿಳಾ ಪೊಲೀಸ್: ಭಾರೀ ಮೆಚ್ಚುಗೆ

    ತಿರುವನಂತಪುರಂ: ಈ ಹಿಂದೆ ಪರೀಕ್ಷೆ ಬರೆಯಲು ಹೋಗಿದ್ದಾಗ ಅಳುತ್ತಿದ್ದ ಪುಟ್ಟ ಕಂದಮ್ಮನನ್ನ ಮಹಿಳಾ ಪೊಲೀಸ್ ಸಮಾಧಾನ ಮಾಡಿದ್ದ ಸುದ್ದಿಯನ್ನು ಓದಿದ್ದೇವೆ. ಇದೀಗ ಅಂಥದ್ದೇ ಮನಸ್ಸಿಗೆ ಮುಟ್ಟುವಂತಹ ಘಟನೆಯೊಂದು ಕೇರಳದಲ್ಲಿ ನಡೆದಿದೆ.

    ಕೇರಳದ ಕೊಚ್ಚಿಯಲ್ಲಿ (Kochi Kerala) ಈ ಘಟನೆ ನಡೆದಿದ್ದು, ನಾಲ್ಕು ತಿಂಗಳ ಮಗುವಿಗೆ ಸ್ವತಃ ತಾವೇ ಎದೆ ಹಾಲುಣಿಸುವ ಮೂಲಕ ತಾಯಿ ಪ್ರೀತಿ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಮಹಿಳಾ ಪೊಲೀಸ್ ಅಧಿಕಾರಿಗೆ ಇಲಾಖೆ ಮತ್ತು ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡೀಪ್‌ಫೇಕ್ ವಿಡಿಯೋಗಳ ನಿಯಂತ್ರಣಕ್ಕೆ ವಿಶೇಷ ಅಧಿಕಾರಿಯ ತಂಡ ರಚನೆ

    ಘಟನೆ ಏನು..?: ಬಿಹಾರ (Bihar) ಮೂಲದ ಮಗುವಿನ ತಾಯಿಗೆ ಶಸ್ತ್ರಚಿಕಿತ್ಸೆಯೊಂದು ನಡೆದಿತ್ತು. ಆ ಬಳಿಕ ಆಕೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಆ ತಾಯಿಯನ್ನು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪುಟ್ಟ ಕಂದಮ್ಮನ ಆರೈಕೆಗೆ ಎರ್ನಾಕುಲಂ ವನಿತಾ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಆರ್ಯ ಅವರು ಮುಂದಾಗಿದ್ದಾರೆ. ಸದ್ಯ ಆರ್ಯ ಅವರ ಈ ಕಾರ್ಯಕ್ಕೆ ಸಹ ಅಧಿಕಾರಿಗಳು ಮತ್ತು ಸಾರ್ವಜನಿಕರು ಭೇಷ್ ಎಂದಿದ್ದಾರೆ.

    ಈ ಸಂಬಂಧ ಆ ತಾಯಿಯ 13 ವರ್ಷದ ಹಿರಿಯ ಪುತ್ರಿ ಪ್ರತಿಕ್ರಿಯಿಸಿ, ತಮ್ಮ ತಂದೆ ಜೈಲಿನಲ್ಲಿದ್ದಾರೆ. ನಾನು ಮತ್ತು ನನ್ನ ಒಡಹುಟ್ಟಿದವರು ಕ್ರಮವಾಗಿ 5 ಮತ್ತು 3 ವರ್ಷ ವಯಸ್ಸಿನ ಹುಡುಗ ಮತ್ತು ಹುಡುಗಿ, ತಾಯಿಯೊಂದಿಗೆ ಕೇರಳದಲ್ಲಿ ನೆಲೆಸಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ಬಿಟ್‌ಕಾಯಿನ್‌ ರೂಪದಲ್ಲಿ 8 ಕೋಟಿ ಕೊಡದಿದ್ರೆ ಮುಂಬೈ ಏರ್ಪೋರ್ಟ್‌ ಬ್ಲಾಸ್ಟ್‌ – ಬೆದರಿಕೆ

    ಮಲಯಾಳಂ ಅನ್ನು ಚೆನ್ನಾಗಿ ಮಾತನಾಡುವ ಬಾಲಕಿಗೆ ಬಿಹಾರದಲ್ಲಿ ತಾವಿರುವ ಸ್ಥಳದ ಬಗ್ಗೆ ಗೊತ್ತಿಲ್ಲ ಎಂದಿದ್ದಾಳೆ. ಪೊಲೀಸರು ಅವರ ತಾಯಿಯ ಆರೋಗ್ಯ ಸ್ಥಿತಿಯ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಜೊತೆಗೆ ಬಿಹಾರದಲ್ಲಿರುವ ಅವರ ಸಂಬಂಧಿಕರ ಪತ್ತೆಗೆ ಅಲ್ಲಿನ ಪೊಲೀಸರ ನೆರವು ಪಡೆಯುತ್ತಿದ್ದಾರೆ.

     

  • ಆಟವಾಡುತ್ತಾ ಬಾವಿಗೆ ಬಿದ್ದು ಮಗು ಸಾವು

    ಆಟವಾಡುತ್ತಾ ಬಾವಿಗೆ ಬಿದ್ದು ಮಗು ಸಾವು

    ಕಾರವಾರ: ಆಟವಾಡುತ್ತಾ ಆಕಸ್ಮಿಕವಾಗಿ ಬಾವಿಗೆ ಬಿದ್ದ ಮೂರು ವರ್ಷದ ಮಗು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿ ನಗರದ ಸಿ.ಪಿ. ಬಜಾರದಲ್ಲಿ ನಡೆದಿದೆ.

    ಅನುಶ್ರೀ ರಾಜಶೇಖರ ಶೆಟ್ಟರ್ (2) ಮೃತ ಬಾಲಕಿ. ಈಕೆ ಬಾವಿ ಸಮೀಪ ಆಟವಾಡುತ್ತಿದ್ದ ಮಗು ಆಟವಾಡುತ್ತ ನೇರವಾಗಿ ಬಾವಿಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ತಾಯಿ ಸಹಾಯಕ್ಕಾಗಿ ಕೂಗಿದ್ದಾರೆ. ಸ್ಥಳೀಯರಾದ ಶಂಭು ಶೆಂಮಡಿ ಎಂಬವರು ಕೂಡಲೇ ಬಾವಿಗೆ ಇಳಿದು ಮಗುವನ್ನು ಹೊರಕ್ಕೆ ತೆಗೆದಿದ್ದಾರೆ. ಆದರೆ ಆಕೆ ಬಾವಿಯಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾಳೆ.

    ಘಟನೆ ಸಂಬಂಧ ನಗರಠಾಣೆ ಪಿಎಸ್‍ಐ ರಾಜಕುಮಾರ ಉಕ್ಕಲಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]