Tag: Baby

  • ಉಸಿರಾಟದ ತೊಂದರೆಯಿಂದ 1 ವರ್ಷದ ಕಂದಮ್ಮ ಸಾವು

    ಉಸಿರಾಟದ ತೊಂದರೆಯಿಂದ 1 ವರ್ಷದ ಕಂದಮ್ಮ ಸಾವು

    ಶಿವಮೊಗ್ಗ: ಉಸಿರಾಟದ ತೊಂದರೆಯಿಂದ ಒಂದು ವರ್ಷದ ಕಂದಮ್ಮ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಪಟ್ಟಣದಲ್ಲಿ ನಡೆದಿದೆ.

    ಮಗುವಿನ ಪೋಷಕರು ಸಾಗರ ತಾಲೂಕಿನ ಕಳಸವಳ್ಳಿ ಕ್ಯಾಂಪಿನಲ್ಲಿ ವಾಸವಾಗಿದ್ದಾರೆ. ಕೆಲಸಕ್ಕಾಗಿ ಬಂದು ಇಲ್ಲಿಯೇ ಉಳಿದುಕೊಂಡಿದ್ದರು. ಕಳೆದ ಮೂರು ದಿನಗಳಿಂದ ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಹಾಗಾಗಿ ಪೋಷಕರು ತಮ್ಮ ಮೂರು ವರ್ಷ ಹೆಣ್ಣು ಮಗುವನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದರು.

    ಹೆಣ್ಣು ಮಗು ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ವೈದ್ಯರು ಮುನ್ನೆಚ್ಚರಿಕ ಕ್ರಮವಾಗಿ ಮಗುವನ್ನು ಕೊರೊನಾ ಚಿಕಿತ್ಸೆಗೆ ಒಳಪಡಿಸಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮುದ್ದು ಕಂದಮ್ಮ ಸಾವನ್ನಪ್ಪಿದೆ. ಆದ್ರೆ ಮಗುವಿನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೈದ್ಯರು ಮಗುವಿನ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ.

  • ಮೊಪೆಡ್‍ಗೆ ಲಾರಿ ಡಿಕ್ಕಿ – ಗರ್ಭಿಣಿ ಸೇರಿ ಮೂವರು ಸಾವು

    ಮೊಪೆಡ್‍ಗೆ ಲಾರಿ ಡಿಕ್ಕಿ – ಗರ್ಭಿಣಿ ಸೇರಿ ಮೂವರು ಸಾವು

    ರಾಯಚೂರು: ಜಿಲ್ಲೆಯ ಸಿಂಧನೂರಿನ ಉಮಲೂಟಿ ಬಳಿ ಲಾರಿ ಗಾಲಿಗೆ ಸಿಲುಕಿ ಚಿಕ್ಕ ಮಗು ಮತ್ತು ಗರ್ಭಿಣಿ ಸೇರಿ ಮೂವರು ಸಾವನ್ನಪ್ಪಿದ್ದಾರೆ.

    ಮೃತರನ್ನು ಚಿಕ್ಕಬೇರ್ಗಿಯ ಪರಸಣ್ಣ, ಕನಕಮ್ಮ ದಂಪತಿ ಹಾಗೂ ಅವರ ಮಗಳು ನಾಗಮ್ಮ ಎಂದು ಗುರುತಿಸಲಾಗಿದೆ. ಗರ್ಭಿಣಿಯ ಚೆಕಪ್‍ಗಾಗಿ ಚಿಕ್ಕಬೇರ್ಗಿ ಗ್ರಾಮದಿಂದ ಮೊಪೆಡ್‍ನಲ್ಲಿ ಬಾಗಲಕೋಟೆಯ ಇಳಕಲ್ ಗೆ ಹೊರಟಿದ್ದವರಿಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಒಂದೂವರೆ ವರ್ಷದ ಮಗು ಹಾಗೂ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗರ್ಭಿಣಿ ಆಸ್ಪತ್ರೆ ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

    ಪರಸಣ್ಣ ಹಾಗೂ ನಾಗಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಗರ್ಭಿಣಿ ಕನಕಮ್ಮ ಸಿಂಧನೂರು ತಾಲೂಕು ಆಸ್ಪತ್ರೆ ರವಾನಿಸುವಾಗ ಸಾವನ್ನಪ್ಪಿದ್ದಾರೆ. ಇಳಕಲ್ ಹತ್ತಿರವಾಗುತ್ತೆ ಎಂದು ಮೊಪೆಡ್ ನಲ್ಲೇ ಪತ್ನಿಯನ್ನು ಆಸ್ಪತ್ರೆಗೆ ಪರಸಣ್ಣ ಕರೆದೊಯ್ಯುತ್ತಿದ್ದ ವೇಳೆ ಅಪಘಾತವಾಗಿದೆ. ಘಟನೆ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಕ್ತಸ್ರಾವವಾದ ರಕ್ತವನ್ನು ಗರ್ಭಿಣಿ ಕೈಯಲ್ಲೇ ಕ್ಲೀನ್ ಮಾಡಲು ಒತ್ತಾಯ- ಹೊಟ್ಟೆಯಲ್ಲೇ ಮಗು ಸಾವು

    ರಕ್ತಸ್ರಾವವಾದ ರಕ್ತವನ್ನು ಗರ್ಭಿಣಿ ಕೈಯಲ್ಲೇ ಕ್ಲೀನ್ ಮಾಡಲು ಒತ್ತಾಯ- ಹೊಟ್ಟೆಯಲ್ಲೇ ಮಗು ಸಾವು

    – ಚಪ್ಪಲಿಯಿಂದ ತುಂಬು ಗರ್ಭಿಣಿ ಮೇಲೆ ಹಲ್ಲೆ

    ರಾಂಚಿ: ಕೊರೊನಾ ಹರಡಿಸುತ್ತಾಳೆ ಎಂದು ಆರೋಪಿಸಿ ರಕ್ತಸ್ರಾವವಾಗಿ ನೆಲದ ಮೇಲೆ ಬಿದ್ದ ರಕ್ತವನ್ನು ಗರ್ಭಿಣಿಯ ಕೈಯಲ್ಲೇ ಕ್ಲೀನ್ ಮಾಡುವಂತೆ ಆಸ್ಪತ್ರೆ ಸಿಬ್ಬಂದಿ ಒತ್ತಾಯಿಸಿದ್ದಾರೆ. ಪರಿಣಾಮ ಮಗು ಹೊಟ್ಟೆಯಲ್ಲೇ ಮೃತಪಟ್ಟಿರುವ ಅಮಾನವೀಯ ಘಟನೆಯೊಂದು ಜಾರ್ಖಂಡ್ ನಲ್ಲಿ ನಡೆದಿದೆ.

    ಪ್ರಕರಣವು ಜಾರ್ಖಂಡ್ ಪೊಲೀಸರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜೆಮ್‍ಶೆಡ್‍ಪುರ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಈ ಸಂಬಂಧ ತನಿಖೆ ನಡೆಸುವಂತೆಯೂ ತಿಳಿಸಿದ್ದಾರೆ.

    30 ವರ್ಷದ ರಿಝ್ವಾನಾ ಖತನ್ ಅವರಿಗೆ ಗುರುವಾರ ಮಧ್ಯಾಹ್ನದ ಬಳಿಕ ತೀವ್ರವಾಗಿ ರಸ್ತಸ್ರಾವವಾಗುತ್ತಿತ್ತು. ಹೀಗಾಗಿ ಕೂಡಲೇ ಮಹಿಳೆಯನ್ನು ಜೆಮ್‍ಶೆಡ್‍ಪುರದಲ್ಲಿರುವ ಮಹಾತ್ಮಾ ಗಾಂಧಿ ಮೆಮೊರಿಯಲ್ ಮೆಡಿಕಲ್ ಕಾಲೇಜ್ & ಹಾಸ್ಪಿಟಲ್(ಎಂಜಿಎಂ)ಗೆ ದಾಖಲಿಸಲಾಯಿತು. ಈ ವೇಳೆ ಅಲ್ಲಿ ತಾನು ಅನುಭವಿಸಿದ ಕಷ್ಟವನ್ನು ಮಹಿಳೆ ಪತ್ರದ ಮೂಲಕ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಗಮನಕ್ಕೆ ತಂದಿದ್ದಾರೆ.

    ಪತ್ರದಲ್ಲೇನಿದೆ..?
    ನಾನು ಆಸ್ಪತ್ರೆಗೆ ತೆರಳಿದಾಗ ಅಲ್ಲಿಯ ಸಿಬ್ಬಂದಿ ಧರ್ಮವನ್ನಿಟ್ಟುಕೊಂಡು ನನ್ನನ್ನು ನಿಂದಿಸಿದರು. ಅಲ್ಲದೆ ರಕ್ತಸ್ರಾವವಾಗಿ ನೆಲದಲ್ಲಿ ಬಿದ್ದಿದ್ದ ರಕ್ತವನ್ನು ನನ್ನ ಕೈಯಲ್ಲಿಯೇ ಕ್ಲೀನ್ ಮಾಡಲು ಒತ್ತಾಯಿಸಿದರು. ಆದರೆ ನಾನು ಕ್ಲೀನ್ ಮಾಡೋ ಸ್ಥಿತಿಯಲ್ಲಿ ಇರಲಿಲ್ಲ, ದೇಹ ಆಯಾಸದಿಂದ ಕೂಡಿತ್ತು. ಕೈ-ಕಾಲುಗಳು ನಡುಗಲು ಆರಂಭವಾಗಿತ್ತು. ಹೀಗಾಗಿ ಕ್ಲೀನ್ ಮಾಡಲು ನಿರಾಕರಿಸಿದಾಗ ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ಕೂಡ ಮಾಡಿದ್ದು, ಹೆರಿಗೆ ಮಾಡಲು ನಿರಾಕರಿಸಿದರು. ಇದರಿಂದ ನಾನು ಶಾಕ್ ಗೆ ಒಳಗಾದೆ. ನಂತರ ಅಲ್ಲೇ ಇದ್ದ ನರ್ಸಿಂಗ್ ಹೋಂಗೆ ತೆರಳಿದೆ. ಅಲ್ಲಿ ಮಗುವಿಗೆ ಜನ್ಮ ನೀಡಿದೆಯಾದರೂ ನನ್ನ ಪುಟ್ಟ ಕಂದಮ್ಮ ಅದಾಗಲೇ ಇಹಲೋಕ ಸೇರಿಬಿಟ್ಟಿತು ಎಂದು ಮಹಿಳೆ ತನ್ನ ನೋವಿನ ಕಥೆಯನ್ನು ಪತ್ರದಲ್ಲಿ ಬಿಚ್ಚಿಟ್ಟಿದ್ದಾರೆ.

    ಅಲ್ಲದೆ ಘಟನೆಗೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಮಹಿಳೆ ಆಗ್ರಹಿಸಿದ್ದು, ಇಂತಹ ಘಟನೆ ಮತ್ತೆ ಮರುಕಳಿಸಬಾರದು ಎಂದು ಅವರು ಸಿಎಂ ಬಳಿ ಮನವಿ ಮಾಡಿಕೊಂಡಿದ್ದಾರೆ.

  • ಬಾಣಂತಿ, ಮಗುವಿನ ಆರೈಕೆ ಜವಾಬ್ದಾರಿ ಬಿಟ್ಟು ಪೇದೆಯಿಂದ 18 ಗಂಟೆ ಡ್ಯೂಟಿ

    ಬಾಣಂತಿ, ಮಗುವಿನ ಆರೈಕೆ ಜವಾಬ್ದಾರಿ ಬಿಟ್ಟು ಪೇದೆಯಿಂದ 18 ಗಂಟೆ ಡ್ಯೂಟಿ

    – ಪ್ರೇಮ ವಿವಾಹದಿಂದ ಬೆಂಬಲಕ್ಕೆ ನಿಲ್ಲದ ಪೋಷಕರು
    – ಪೇದೆಯ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

    ಯಾದಗಿರಿ: ಕೊರೊನಾ ವಾರಿಯರ್ಸ್ ಗಳು ವೈಯಕ್ತಿಕ ಜೀವನಕ್ಕಿಂತಲೂ ಹೆಚ್ಚಾಗಿ ಸಾರ್ವಜನಿಕರ ಜೀವ ಉಳಿಸುವ, ಸೋಂಕು ಹರಡದಂತೆ ದಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತೆ ಯಾದಗಿರಿಯ ಪೊಲೀಸ್ ಪೇದೆಯೊಬ್ಬರು ಬಾಣಂತಿ ಪತ್ನಿ, ಮಗುವಿನ ಆರೈಕೆ ಜವಾಬ್ದಾರಿ ಬಿಟ್ಟು ದಿನದ 18 ಗಂಟೆ ಡ್ಯೂಟಿ ನಿರ್ವಹಿಸುತ್ತಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯರು ತಮ್ಮ ವೃತ್ತಿ ಪರಾಕಾಷ್ಠೆಯನ್ನು ಮೆರೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇವರ ಜೊತೆ ಪೊಲೀಸ್ ಕಾರ್ಯ ಸಹ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಇಂತಹ ಪೊಲೀಸ್ ಇಲಾಖೆಯಲ್ಲಿ ಕೆಲ ಪೇದೆಗಳು ಎಲೆಮರೆಯ ಕಾಯಿಗಳಂತೆ, ತಮ್ಮ ವೈಯಕ್ತಿಕ ಬದುಕನ್ನು ಸಹ ಬಲಿಕೊಟ್ಟು ಕೊರೊನಾ ಯುದ್ಧದಲ್ಲಿ ಹೊರಾಡುತ್ತಿದ್ದಾರೆ. ಇದನ್ನೂ ಓದಿ: ಅಮ್ಮಾ ನೀನು ಬಂದ್ಯಾ? -21 ದಿನಗಳ ಬಳಿಕ ತಾಯಿಯ ಮಡಿಲು ಸೇರಿದ ಕಂದಮ್ಮ

    ಯಾದಗಿರಿ ನಗರ ಠಾಣೆಯ ವಿಶೇಷ ಶಾಖೆಯ ಪೇದೆ ಸಾಬರೆಡ್ಡಿ ಅವರು ಮನೆಯ ವಿರೋಧದ ನಡುವೆಯೂ ಏಳು ವರ್ಷಗಳಿಂದ ಪ್ರೀತಿಸಿದ್ದ ಗೆಳತಿಯನ್ನು ಕೈ ಹಿಡಿದಿದ್ದರು. ಇದರಿಂದಾಗಿ ಅವರು ಕುಟುಂಬವರಿಂದ ದೂರವಾಗಿದ್ದಾರೆ. ಸಾಬರೆಡ್ಡಿ ದಂಪತಿ ಪ್ರೀತಿಯ ಸಂಕೇತವಾಗಿ ಆರು ತಿಂಗಳ ಮಗು ಈಗ ಮಡಿಲಲ್ಲಿದೆ.

    ಪತ್ನಿ ಹೆರಿಗೆಯ ಸಮಯದಲ್ಲಿ ಕೆಲಸದ ಜೊತೆ ಆಸ್ಪತ್ರೆಗೆ ಕರೆದುಕೊಂಡು ಪರೀಕ್ಷೆ ಮಾಡಿಸುವ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಈಗ ಪತ್ನಿ ಮಗುವಿಗೆ ಮಗುವಿಗೆ ಜನ್ಮ ನೀಡಿದ್ದು, ಆರು ತಿಂಗಳ ಆರೈಕೆ ಹೊಣೆ ಸಾಬರೆಡ್ಡಿ ಅವರ ಮೇಲಿದೆ. ಹೀಗಿದ್ದರೂ ಅದನ್ನು ಬದಿಗೊತ್ತಿರುವ ಸಾಬರೆಡ್ಡಿ ತಮ್ಮ ಕರ್ತವ್ಯ ನಿಷ್ಠೆಯನ್ನು ಮೆರೆಯುತ್ತಿದ್ದಾರೆ.

    ದಿನದ 18 ಗಂಟೆ ಲಾಕ್‍ಡೌನ್ ಕಾನೂನು ಕಾಪಾಡುವ ಸಾಬರೆಡ್ಡಿ ಅವರು, ಮಧ್ಯರಾತ್ರಿ ಪತ್ನಿ ಮಗು ಮಲಗಿದ ಬಳಿಕ ಮನೆಗೆ ಹೋಗುತ್ತಾರೆ. ಅಷ್ಟೇ ಅಲ್ಲದೆ ಬೆಳಗ್ಗೆ ಪತ್ನಿಗಿಂತ ಮೊದಲೇ ಎದ್ದು ಠಾಣೆಗೆ ಬಂದು ಕಾರ್ಯಕ್ಕೆ ಹಾಜರಾಗುತ್ತಾರೆ. ಕೆಲವು ಬಾರಿ ರಾತ್ರಿ ತಡವಾದರೆ ಠಾಣೆಯಲ್ಲಿಯೇ ಮಲಗಿ ಬಿಡುತ್ತಾರೆ. ಪತ್ನಿ ಮತ್ತು ಮಗುವಿನ ಸ್ವಹಿತಾಸಕ್ತಿಗಿಂತ ಜನರ ಹಿತ ಮೊದಲು ಎನ್ನುವ ಸಾಬರೆಡ್ಡಿ, ಕೊರೊನಾ ವಿರುದ್ಧ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ.

  • ಡ್ಯೂಟಿ ಫಸ್ಟ್, ಫ್ಯಾಮಿಲಿ ನೆಕ್ಸ್ಟ್- 2 ತಿಂಗ್ಳ ಮಗುವನ್ನ ನೋಡದ ಪಿಎಸ್‍ಐ

    ಡ್ಯೂಟಿ ಫಸ್ಟ್, ಫ್ಯಾಮಿಲಿ ನೆಕ್ಸ್ಟ್- 2 ತಿಂಗ್ಳ ಮಗುವನ್ನ ನೋಡದ ಪಿಎಸ್‍ಐ

    – ಮೊಬೈಲಲ್ಲೇ ಪತ್ನಿ, ಪೋಷಕರ ಜೊತೆ ಮಾತು

    ನೆಲಮಂಗಲ: ಪ್ರಪಂಚದಾದ್ಯಂತ ಕೊರೊನಾ ಮಾಹಾಮಾರಿ ತಾಂಡವವಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಇಡೀ ಭಾರವನ್ನೇ  ಲಾಕ್ ಡೌನ್ ಮಾಡಲಾಗಿದೆ. ಈ ಸಮಯದಲ್ಲಿ ನಿದ್ದೆ, ಊಟ, ಸಂಬಂಧಗಳನ್ನು ಬಿಟ್ಟು ಕೆಲಸ ಮಾಡುವವರನ್ನು ನೋಡಿದ್ದೇವೆ. ಕೊರೊನಾ ವಾರಿಯರ್ಸ್ ವೈದ್ಯರು, ಪೊಲೀಸರು, ಆಶಾಕಾರ್ಯಕರ್ತೆಯರು ಹಾಗೂ ಮಾಧ್ಯಮದವರು ಸಹ ಸಾರ್ವಜನಿಕರಿಗೆ ಮಾಹಿತಿ ಜೊತೆಗೆ ಕೊರೊನಾ ಹೋಗಲಾಡಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಅನೇಕರ ಮಧ್ಯೆ ಎತ್ತರಕ್ಕೆ ನಿಲ್ಲುತ್ತಾರೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅಂಜನ್ ಕುಮಾರ್.

    ಹೌದು. ಕೊರೊನಾ ಎನ್ನುವ ಮಹಾಮಾರಿ ಕಾಣಿಸಿಕೊಂಡಾಗ ಅಂಜನ್ ಕುಮಾರ್ ದಂಪತಿಗೆ ಗಂಡು ಮಗು ಜನನವಾಗಿ ಕೆಲ ದಿನಗಳಷ್ಟೆ ಆಗಿತ್ತು. ಆ ಸಮಯದಲ್ಲೂ ಕೂಡ ಮಗುವಿನ ಜೊತೆಗೆ ಕಳೆದಿದ್ದು ಕೆಲವೇ ಕೆಲವು ದಿನಗಳು ಮಾತ್ರ. ಅಷ್ಟರಲ್ಲೇ ಮಹಾಮಾರಿ ಕೊರೊನಾದಿಂದ ದೇಶವೇ ಲಾಕ್ ಡೌನ್ ಆಗೋಯ್ತು. ಜೊತೆಗೆ ಅಂಜನ್ ಕುಮಾರ್ ಸಹ ಕೊರೊನಾ ಮಾಹಾಮಾರಿ ಜೊತೆ ಹೋರಾಡಲು ಸಿದ್ಧರಾದರು.

    ಪ್ರತಿದಿನ ನೆಲಮಂಗಲ ಗ್ರಾಮಾಂತರ ಪ್ರದೇಶದಿಂದ ಹಾದು ಹೋಗುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ತಪಾಸಣೆ ಮಾಡುವ ಜವಬ್ದಾರಿಯನ್ನು ಹೊತ್ತ ಅವರು, ಹಗಲಿರುಳು ಎನ್ನದೆ ಕೊರೊನಾ ಯುದ್ಧದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಪ್ರತಿದಿನ ಕೊರೊನಾ ಟೆಸ್ಟ್ ಮಾಡುತ್ತಿದ್ದರಿಂದ ತನ್ನ ಮಗು ಹೆಂಡತಿ ಹಾಗೂ ತಂದೆ ತಾಯಿಯನ್ನು ನೋಡಲು ಆಗದ ಪರಿಸ್ಥಿತಿ ಅಂಜನ್ ಕುಮಾರ್ ಅವರದ್ದು. ಹೀಗಾಗಿ ಮನೆಗೂ ಹೋಗದೆ, ಮೊಬೈಲ್ ನಲ್ಲಿಯೇ ತನ್ನ ಮಗು, ಪತ್ನಿ ಹಾಗೂ ತಂದೆ-ತಾಯಿಯ ಜೊತೆ ಸಂಪರ್ಕಿಸಿ ಅವರಿಗೂ ಧೈರ್ಯ ತುಂಬುವಂತ ಕೆಲಸ ಮಾಡುತ್ತಿದ್ದಾರೆ.

  • ಮಗಳ ಚಿಕಿತ್ಸೆಗಾಗಿ ಒಡವೆ ಅಡವಿಟ್ಟ ತಂದೆ – ಕಣ್ಣೀರಲ್ಲಿ ಟ್ಯಾಕ್ಸಿ ಚಾಲಕನ ಕುಟುಂಬ

    ಮಗಳ ಚಿಕಿತ್ಸೆಗಾಗಿ ಒಡವೆ ಅಡವಿಟ್ಟ ತಂದೆ – ಕಣ್ಣೀರಲ್ಲಿ ಟ್ಯಾಕ್ಸಿ ಚಾಲಕನ ಕುಟುಂಬ

    – ಉಚಿತ ಹಾಲೇ ಮಗುವಿಗೆ ಊಟ

    ಬೆಳಗಾವಿ: ಕೊರೊನಾದ ಲಾಕ್‍ಡೌನ್‍ನಿಂದ ಅನೇಕ ಬಡ ಕುಟುಂಬಗಳು ತಿನ್ನಲು ಊಟವಿಲ್ಲದೇ ಪರದಾಡುತ್ತಿವೆ. ಅದರಂತೆಯೇ ಜಿಲ್ಲೆಯ ರಾಮನಗರದಲ್ಲಿ ಟ್ಯಾಕ್ಸಿ ಚಾಲಕನ ಕುಟುಂಬವೊಂದು ಕಣ್ಣೀರಲ್ಲಿ ಕೈತೊಳೆಯುತ್ತಿದೆ.

    ಚಾಲಕ ನಾಗರಾಜ್ ಕುಟುಂಬ ತಿನ್ನಲು ಅನ್ನ ಇಲ್ಲದೇ ಪರದಾಟ ಮಾಡುತ್ತಿದೆ. ನಾಗರಾಜ್ ತನ್ನ ಮಗಳಿಗೆ ಚಿಕಿತ್ಸೆ ಕೊಡಿಸುವುದಕ್ಕೆ ಹೆಂಡತಿಯ ಒಡವೆ ಅಡವಿಟ್ಟಿದ್ದಾರೆ. ರೇಷನ್ ಕಾರ್ಡ್ ಇಲ್ಲದವರಿಗೆ ಪಡಿತರವನ್ನು ವಿತರಿಸುತ್ತಿಲ್ಲ. ಹೀಗಾಗಿ ಬೆಳಗ್ಗೆ ಕೊಡುವ ಉಚಿತ ಹಾಲನ್ನೇ ನನ್ನ ಮಗಳಿಗೆ ಕೊಡುತ್ತಿದ್ದೇವೆ ಎಂದು ನಾಗರಾಜ್ ನೋವಿನಿಂದ ಹೇಳಿದ್ದಾರೆ.

    ನಾಗರಾಜ್ ಟ್ಯಾಕ್ಸಿ ಓಡಿಸಿಯೇ ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ಟಾಕ್ಸಿ ಓಡಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮನೆಗೆ ಬೇಕಾಗುವ ದಿನಸಿ ತೆಗೆದುಕೊಳ್ಳಲು ಹಣವಿಲ್ಲ. ಇತ್ತ ಬೆಳಗಾವಿಯ ರಾಮನಗರದ ಬಾಡಿಗೆ ಮನೆಯಲ್ಲಿ ನಾಗರಾಜ್ ದಂಪತಿ ವಾಸಮಾಡುತ್ತಿದ್ದಾರೆ. ಈ ನಡುವೆ ಮಗುವಿಗೆ ಅನಾರೋಗ್ಯ ಉಂಟಾಗಿತ್ತು. ಆಗ ಚಿಕಿತ್ಸೆಗಾಗಿ 2 ದಿನಗಳ ಹಿಂದೆ ಹೆಂಡತಿ ಒಡವೆಯನ್ನು ಅಡವಿಟ್ಟಿದ್ದರು.

    ಒಟ್ಟಿನಲ್ಲಿ ಮನೆಯಲ್ಲಿ ತನ್ನ ಹೆಂಡತಿ, ಪುಟ್ಟ ಕಂದಮ್ಮನೊಂದಿಗೆ ತುತ್ತು ಅನ್ನಕ್ಕಾಗಿ ಡ್ರೈವರ್ ನಾಗರಾಜ್ ಪರದಾಡುತ್ತಿದ್ದಾರೆ.

  • ಅಪ್ಪ, ಅಮ್ಮನಿಗೆ ಕೊರೊನಾ ಪಾಸಿಟಿವ್- 1 ದಿನದ ಕಂದಮ್ಮನಿಗೆ ನೆಗೆಟಿವ್

    ಅಪ್ಪ, ಅಮ್ಮನಿಗೆ ಕೊರೊನಾ ಪಾಸಿಟಿವ್- 1 ದಿನದ ಕಂದಮ್ಮನಿಗೆ ನೆಗೆಟಿವ್

    ಬೆಂಗಳೂರು: ಹೆತ್ತ ಕೂಡಲೇ ತಾಯಿ ಹಾಗೂ ಮಗುವನ್ನು ಕೊರೊನಾ ವೈರಸ್ ಬೇರ್ಪಡಿಸಿದ ಘಟನೆಗೆ ಸಂಬಂಧಿಸಿದಂತೆ ಇದೀಗ ಮಗುವಿಗೆ ಕೋವಿಡ್-19 ನೆಗೆಟಿವ್ ಎಂದು ವರದಿ ಬಂದಿದೆ.

    ಪುಟ್ಟ ಕಂದಮ್ಮನ ಅಪ್ಪ- ಅಮ್ಮ ಇಬ್ಬರಿಗೂ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಸದ್ಯ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ತಾಯಿ ಬಳಿ ಬಿಟ್ಟಿಲ್ಲ.

    ಪತಿಗೆ ಕೊರೊನಾ ಇದ್ದಿದ್ದರಿಂದ ಪತ್ನಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಹೀಗಾಗಿ ಮಗುವಿಗೆ ಜನ್ಮ ನೀಡಿದ ತಕ್ಷಣ ತಾಯಿಯನ್ನು ವಿಕ್ಟೋರಿಯಾ ಹಾಗೂ ಮಗುವನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ವೈದ್ಯರು ಹಾಗೂ ನರ್ಸ್ ಗಳನ್ನು ಕೂಡ ಶಿಫ್ಟ್ ಮಾಡಲಾಗಿದೆ.

    ಆಘಾತಕಾರಿ ವಿಚಾರವೆಂದರೆ ಪತಿ ಹಾಗೂ ಇಬ್ಬರೂ ತಮಗೆ ಕೊರೊನಾ ಇರುವುದನ್ನು ಮುಚ್ಚಿಟ್ಟಿದ್ದಾರೆ. ಹೀಗಾಗಿ ಆಸ್ಪತ್ರೆಯವರಿಗೆ ಮಾಹಿತಿ ಇಲ್ಲದೆ ಸರ್ಜರಿ ಮಾಡಿದ್ದಾರೆ. ಡೆಲಿವರಿ ಮಾಡಿಸಿದ ಮೇಲೆ ಕೊರೊನಾ ಇರುವುದು ಗೊತ್ತಾಗಿದೆ. ಪರಿಣಾಮ ಇದೀಗ ಕುರುಬರಹಳ್ಳಿಯಲ್ಲಿರುವ ಖಾಸಗಿ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.

    ಘಟನೆಯಿಂದ ಆಸ್ಪತ್ರೆ ಸುತ್ತಮುತ್ತ ಬರೋಬ್ಬರಿ 3 ಬಾರಿ ಔಷಧಿ ಸಿಂಪಡನೆ ಮಾಡುವ ಮೂಲಕ ಆಸ್ಪತ್ರೆ ಪಕ್ಕದ ಕಟ್ಟಡ ವಾಸಿಗಳ ಮೇಲೂ ನಿಗಾ ವಹಿಸಲಾಗಿದೆ. ಪದೇ ಪದೇ ಸಹಾಯವಾಣಿ ಕರೆ ಮಾಡಿ ಸುರಕ್ಷತಾ ಕ್ರಮಗಳ ಬಗ್ಗೆ ಜನರು ಮಾಹಿತಿ ಪಡೆಯುತ್ತಿದ್ದಾರೆ. ಇಂದು ಆರೋಗ್ಯ ಇಲಾಖಾ, ಪಾಲಿಕೆ ಸಿಬ್ಬಂದಿ ಭೇಟಿ ನೀಡಿ ಅಗತ್ಯ ಕ್ರಮಗಳ ಬಗ್ಗೆ ನಿಗಾ ಇರಿಸಿದ್ದಾರೆ.

  • ಬೆಂಗ್ಳೂರಲ್ಲಿ ಹುಟ್ಟುತ್ತಲೇ ತಾಯಿ- ಮಗುವನ್ನು ಬೇರ್ಪಡಿಸಿದ ಕೊರೊನಾ

    ಬೆಂಗ್ಳೂರಲ್ಲಿ ಹುಟ್ಟುತ್ತಲೇ ತಾಯಿ- ಮಗುವನ್ನು ಬೇರ್ಪಡಿಸಿದ ಕೊರೊನಾ

    – ಕೋವಿಡ್ 19 ಇರೋದನ್ನು ಮುಚ್ಚಿಟ್ಟು ಡೆಲಿವರಿ

    ಬೆಂಗಳೂರು: ಹುಟ್ಟುತ್ತಲೇ ತಾಯಿ ಮತ್ತು ಕಂದನನ್ನು ಮಹಾಮಾರಿ ಕೊರೊನಾ ದೂರ ಮಾಡಿದ ಮನ ಮಿಡಿಯುವ ಘಟನೆಯೊಂದು ಕುರುಬರಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

    ಗರ್ಭಿಣಿಗೆ ಸರ್ಜರಿ ಆಗಿದ್ದು ಮಗುವನ್ನು ಹೆತ್ತಿದ್ದಾರೆ. ಪತಿಗೆ ಕೊರೊನಾ ಇದ್ದಿದ್ದರಿಂದ ಪತ್ನಿ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಹೀಗಾಗಿ ಮಗುವಿಗೆ ಜನ್ಮ ನೀಡಿದ ತಕ್ಷಣ ತಾಯಿಯನ್ನು ವಿಕ್ಟೋರಿಯಾ ಹಾಗೂ ಮಗುವನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವೈದ್ಯರು ಹಾಗೂ ನರ್ಸ್ ಗಳನ್ನು ಕೂಡ ಶಿಫ್ಟ್ ಮಾಡಲಾಗಿದೆ.

    ಆಘಾತಕಾರಿ ವಿಚಾರವೆಂದರೆ ದಂಪತಿ ಕೆಂಗೇರಿ ಉಪನಗರ ಕಡೆಯವರಾಗಿದ್ದು, ಪತಿ ಹಾಗೂ ಇಬ್ಬರೂ ತಮಗೆ ಕೊರೊನಾ ಇರುವುದನ್ನು ಮುಚ್ಚಿಟ್ಟಿದ್ದಾರೆ. ಹೀಗಾಗಿ ಆಸ್ಪತ್ರೆಯವರಿಗೆ ಮಾಹಿತಿ ಇಲ್ಲದೆ ಸರ್ಜರಿ ಮಾಡಿದ್ದಾರೆ. ಡೆಲಿವರಿ ಮಾಡಿಸಿದ ಮೇಲೆ ಕೊರೊನಾ ಇರುವುದು ಗೊತ್ತಾಗಿದೆ. ಪರಿಣಾಮ ಇದೀಗ ಕುರುಬರಹಳ್ಳಿಯಲ್ಲಿರುವ ಖಾಸಗಿ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಘಟನೆಯಿಂದ ಆಸ್ಪತ್ರೆ ಸುತ್ತಮುತ್ತ ಬರೋಬ್ಬರಿ 3 ಬಾರಿ ಔಷಧಿ ಸಿಂಪಡನೆ ಮಾಡುವ ಮೂಲಕ ಆಸ್ಪತ್ರೆ ಪಕ್ಕದ ಕಟ್ಟಡ ವಾಸಿಗಳ ಮೇಲೂ ನಿಗಾ ವಹಿಸಲಾಗಿದೆ. ಪದೇ ಪದೇ ಸಹಾಯವಾಣಿ ಕರೆ ಮಾಡಿ ಸುರಕ್ಷತಾ ಕ್ರಮಗಳ ಬಗ್ಗೆ ಜನರು ಮಾಹಿತಿ ಪಡೆಯುತ್ತಿದ್ದಾರೆ. ಇಂದು ಆರೋಗ್ಯ ಇಲಾಖಾ, ಪಾಲಿಕೆ ಸಿಬ್ಬಂದಿ ಭೇಟಿ ನೀಡಿ ಅಗತ್ಯ ಕ್ರಮಗಳ ಬಗ್ಗೆ ನಿಗಾ ಇರಿಸಿದ್ದಾರೆ. ಸದ್ಯ ತಾಯಿ, ಮಗುವಿನ ಪರೀಕ್ಷಾ ವರದಿಗಾಗಿ ವೈದ್ಯರು ಕಾಯುತ್ತಿದ್ದಾರೆ.

  • ಅಮ್ಮನಿಗೆ ಕೊರೊನಾ ಸೋಂಕು-ನರ್ಸ್ ಗಳ ಆರೈಕೆಯಲ್ಲಿ 3 ತಿಂಗಳ ಕಂದಮ್ಮ

    ಅಮ್ಮನಿಗೆ ಕೊರೊನಾ ಸೋಂಕು-ನರ್ಸ್ ಗಳ ಆರೈಕೆಯಲ್ಲಿ 3 ತಿಂಗಳ ಕಂದಮ್ಮ

    ರಾಯ್ಪುರ: ಮೂರು ತಿಂಗಳ ಮಗುವನ್ನು ನರ್ಸ್ ಗಳು ಆರೈಕೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

    ಛತ್ತೀಸಗಢ ರಾಜ್ಯದ ರಾಯ್ಪುರದ ಏಮ್ಸ್ ಆಸ್ಪತ್ರೆ ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಮಗುವಿನ ತಾಯಿಗೆ ಕೊರೊನಾ ಸೋಂಕು ತಗುಲಿದ್ದು, ಮಹಿಳೆಯನ್ನು ಐಸೋಲೇಷನ್ ವಾರ್ಡಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಮ್ಮನ ಆರೈಕೆಯಲ್ಲಿರಬೇಕಾದ ಪುಟ್ಟ ಕಂದಮ್ಮನನ್ನು ಏಮ್ಸ್ ಆಸ್ಪತ್ರೆಯ ನರ್ಸ್ ಗಳು ಆರೈಕೆ ಮಾಡುತ್ತಿದ್ದಾರೆ.

    ಮನೆಯಿಂದ ದೂರ ಉಳಿದು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ಸಿಬ್ಬಂದಿ, ಮೂರು ತಿಂಗಳ ಕಂದಮ್ಮನಿಗೆ ಅಮ್ಮನಾಗಿದ್ದಾರೆ. ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ನೆಟ್ಟಿಗರು ಶೇರ್ ಮಾಡಿಕೊಳ್ಳುತ್ತಿದ್ದಾರೆ.

  • “ಅನ್ನ ಬಿಟ್ರೆ ಏನಿಲ್ಲ, ಎದೆಯಲ್ಲಿ ಹಾಲು ಬರ್ತಿಲ್ಲ- 8 ದಿನದ ಮಗುವಿಗೆ ಏನು ನೀಡಲಿ”

    “ಅನ್ನ ಬಿಟ್ರೆ ಏನಿಲ್ಲ, ಎದೆಯಲ್ಲಿ ಹಾಲು ಬರ್ತಿಲ್ಲ- 8 ದಿನದ ಮಗುವಿಗೆ ಏನು ನೀಡಲಿ”

    – ಕಂದನ ಸ್ಥಿತಿ ಕಂಡು ಬಾಣಂತಿಯ ಕಣ್ಣೀರು

    ನವದೆಹಲಿ: ಕಳೆದು ಕೆಲವು ದಿನಗಳಿಂದ ಅನ್ನ ಹೊರತು ಬೇರೆ ಯಾವುದೇ ಪೌಷ್ಠಿಕಾಂಶ ಆಹಾರ ಸೇವಿಸುತ್ತಿಲ್ಲ. ಹಾಗಾಗಿ ಎದೆಯಲಿ ಹಾಲು ಬರುತ್ತಿಲ್ಲ. ಈಗ ನನ್ನ 8 ದಿನದ ಮಗಳಿಗೆ ಏನು ಕುಡಿಸಲಿ ಎಂದು ಬಾಣಂತಿ ಕಣ್ಣೀರು ಹಾಕುತ್ತಿದ್ದಾರೆ.

    ಲಾಕ್‍ಡೌನ್ ಕೆಳವರ್ಗದ ಜನರನ್ನು ಮತ್ತಷ್ಟು ಕೆಳಗೆ ತೆಗೆದುಕೊಂಡು ಹೋಗ್ತಿದೆ. ಪ್ರತಿದಿನದ ದುಡಿಮೆಯನ್ನು ನಂಬಿಕೊಂಡು ಜೀವನ ಸಾಹಿಸುತ್ತಿದ್ದ ಅದೆಷ್ಟೋ ಕುಟುಂಬಗಳು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ತಲುಪಿವೆ. ಅಂತಹ ಪ್ರತಿ ಕುಟುಂಬಗಳದ್ದು ಒಂದೊಂದು ಕಷ್ಟ. ಬಾಣಂತಿ ಸರಿಯಾದ ಪೌಷ್ಠಿಕಾಂಶ ಆಹಾರ ಸಿಗದಕ್ಕೆ ಕಣ್ಣೀರಿಡುತ್ತಿದ್ದಾರೆ. ತಾಯಿ ಮಾತು ಕೇಳಿದ್ರೆ ನೀವು ಸಹ ಭಾವುಕರಾಗುತ್ತೀರಿ.

    ದೆಹಲಿಯ ಮೆಹಕ್ ಎಂಟು ದಿನಗಳ ಹಿಂದೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮೆಹಕ್ ಮತ್ತು ಪತಿ ಗೋಪಾಲ್ ಉತ್ತರಾಖಂಡ ರಾಜ್ಯದ ನೈನಿತಾಲ್ ನಿವಾಸಿಗಳು. ಕೂಲಿ ಅರಸಿ ವಲಸೆ ಬಂದಿರೋ ದಂಪತಿ ಹಳೆ ದೆಹಲಿಯ ಟೌನ್ ಹಾಲ್ ವ್ಯಾಪ್ತಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು. ಲಾಕ್‍ಡೌನ್ ನಿಂದ ಎಲ್ಲವೂ ಸ್ತಬ್ಧಗೊಂಡಿದ್ದು, ಜೀವ ಉಳಿಸಿಕೊಳ್ಳಲು ಮನೆ ಸೇರುವಂತಾಗಿದೆ. ಈ ಸಮಯದಲ್ಲಿ ಮೆಹಕ್ ಮಗುವಿಗೆ ಜನ್ಮ ನೀಡಿದ್ದು, ಕುಟುಂಬಕ್ಕೆ ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತಾಗಿದೆ. ಇದನ್ನೂ ಓದಿ: ಅಣ್ಣನ ಚಿತೆಗೆ ತಂಗಿಯಿಂದಲೇ ಅಂತ್ಯಕ್ರಿಯೆ- ಸ್ಮಶಾನದಲ್ಲಿದ್ದ ಅರೆಸುಟ್ಟ ಕಟ್ಟಿಗೆ ಆಯ್ದು ತಂದ ತಾಯಿ

    ಮಗು ಹುಟ್ಟಿದ ಖುಷಿಗಿಂತ ಅದರ ಆರೈಕೆ, ಲಾಲನೆ-ಪಾಲನೆ ಹೇಗೆ ಮಾಡಬೇಕೆಂಬ ಚಿಂತೆ ದಂಪತಿಯನ್ನು ಕಾಡ್ತಿದೆ. ಎರಡು ದಿನದಲ್ಲಿ ಒಂದು ಬಾರಿ ಊಟ ಸಿಕ್ಕರೆ ನಮ್ಮ ಪುಣ್ಯ. ಪೌಷ್ಠಿಕಾಂಶ ಆಹಾರ ಎಲ್ಲಿ ಸಿಗಬೇಕು. ನಾನು ಸರಿಯಾಗಿ ಆಹಾರ ಸೇವನೆ ಮಾಡದೇ ಇರೋದರಿಂದ ಎದೆಯಲ್ಲಿ ಹಾಲು ಬರುತ್ತಿಲ್ಲ. ಎಂಟು ದಿನದ ಈ ಪುಟ್ಟ ಮಗುವಿಗೆ ಏನು ಕುಡಿಸಲಿ ಎಂದು ಮೆಹಕ್ ಕಣ್ಣೀರು ಹಾಕುತ್ತಾರೆ.