Tag: Baby

  • ಕೊರೊನಾ ಆತಂಕ- ಮಗುವಿಗೆ ಹಾಲುಣಿಸುವ ಮುನ್ನ ತಾಯಂದಿರು ತೆಗೆದುಕೊಳ್ಳಬೇಕಾದ ಕ್ರಮಗಳು

    ಕೊರೊನಾ ಆತಂಕ- ಮಗುವಿಗೆ ಹಾಲುಣಿಸುವ ಮುನ್ನ ತಾಯಂದಿರು ತೆಗೆದುಕೊಳ್ಳಬೇಕಾದ ಕ್ರಮಗಳು

    ಬೆಂಗಳೂರು: ಕೊರೊನಾ ಆತಂಕ ಮಾತ್ರ ಕಡಿಮೆ ಆಗುತ್ತಲೇ ಇಲ್ಲ. ಪಕ್ಕದ ಬೀದಿಯಲ್ಲಿ ಬಂತು, ಮನೆಯ ಹಿಂದೆಯ ನಿವಾಸಿಗೆ ಸೋಂಕು ತಗುಲಿತು ಎಂಬ ವಿಷಯಗಳನ್ನು ನೀವು ಕೇಳಿರುತ್ತೀರಿ. ಕೊರೊನಾ ಭಯ ಬೇಡ ಮುಂಜಾಗ್ರತೆ ಇರಲಿ ಎಂದು ತಜ್ಞರು ಸೇರಿದಂತೆ ಸರ್ಕಾರ ಸಲಹೆಗಳನ್ನು ನೀಡುತ್ತಾ ಬಂದಿದೆ. ಆರೋಗ್ಯ ಇಲಾಖೆ ಸಹ ಕೊರೊನಾಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರು ನೀಡುವ ಪ್ರಯತ್ನವನ್ನು ಮಾಡುತ್ತಿದೆ.

    ಮನೆಯಲ್ಲಿ ಮಕ್ಕಳು ಮತ್ತು ಹಿರಿಯರು ಇದ್ರೆ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ತಾಯಂದಿರು ಮಕ್ಕಳಿಗೆ ಹಾಲುಣಿಸುವ ಮುನ್ನ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕರ್ನಾಟಕ ಆರೋಗ್ಯ ಇಲಾಖೆ ತಿಳಿಸಿದೆ.

    ಮುಂಜಾಗ್ರತ ಕ್ರಮಗಳು:
    1. ಮಗುವಿಗೆ ಹಾಲುಣಿಸುವ ಮುನ್ನ ಮತ್ತು ನಂತರ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು.
    2. ಹಾಲುಣಿಸುವಾಗ ತಾಯಿ ಮಾಸ್ಕ್ ಧರಿಸಿದ್ರೆ ಒಳ್ಳೆಯದು.
    3. ಮಗು ಇರೋ ಸ್ಥಳವನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.

    ಮಕ್ಕಳಿರುವ ಮನೆಗಳಲ್ಲಿರುವ ಹಿರಿಯರು ಹೊರಗಡೆಯಿಂದ ಒಳಗೆ ಬರುತ್ತಿದ್ದಂತೆ ಸ್ನಾನ ಮಾಡಿಕೊಳ್ಳಬೇಕು. ಹೊರಗಡೆ ಹೋದಾಗ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಕೈಗಳನ್ನು ಆಗಾಗ್ಗೆ ಸಾಬೂನಿನಿಂದ ಅಥವಾ ಸ್ಯಾನಿಟೈಸ್ ನಿಂದ ತೊಳೆಯುತ್ತಿರಬೇಕು.

  • 36 ಗಂಟೆ ಸುತ್ತಿದ್ರೂ ಚಿಕಿತ್ಸೆ ಸಿಗದೇ ಪ್ರಾಣಬಿಟ್ಟ ಕಂದಮ್ಮ

    36 ಗಂಟೆ ಸುತ್ತಿದ್ರೂ ಚಿಕಿತ್ಸೆ ಸಿಗದೇ ಪ್ರಾಣಬಿಟ್ಟ ಕಂದಮ್ಮ

    ಬೆಂಗಳೂರು: ಕೊರೊನಾ ನಡುವೆ ಚಿಕಿತ್ಸೆ ಸಿಗದೇ ತಿಂಗಳ ಹಸುಗೂಸೊಂದು ಜೀವ ಬಿಟ್ಟಿದೆ.

    ಜುಲೈ 11ರಂದು ಹೃದಯದ ಸಮಸ್ಯೆಗೆ ತುತ್ತಾದ ಒಂದು ತಿಂಗಳ ಮಗುವನ್ನು ಉಳಿಸಿಕೊಳ್ಳಲು ಬೆಂಗಳೂರಿನ ಮಂಜುನಾಥನಗರದ ಪೋಷಕರು ಪಟ್ಟ ಪಾಡು ಅಷ್ಟಿಷ್ಟಲ್ಲ. ಬರೋಬ್ಬರಿ 36 ಗಂಟೆಗಳ ಕಾಲ 200 ಕಿಲೋಮೀಟರ್ ಸುತ್ತಿದ್ರೂ, ಹತ್ತಾರು ಆಸ್ಪತ್ರೆಗಳ ಮೆಟ್ಟಿಲನ್ನು ಹತ್ತಿಳಿದ್ರೂ, ನಿರ್ದಯಿ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಪರೀಕ್ಷಿಸಿ ಅಡ್ಮಿಟ್ ಮಾಡಿಕೊಂಡಿಲ್ಲ.

    ಬೆಡ್ ಮತ್ತು ಕೊರೊನಾ ನೆಪ ಹೇಳಿದ ಆಸ್ಪತ್ರೆಗಳು ಮಗುವನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿವೆ. ಕೊನೆಗೆ ಸೋಮವಾರ ಸಂಜೆ ಹೊತ್ತಿಗೆ ಮಾರತ್ ಹಳ್ಳಿಯ ಆಸ್ಪತ್ರೆಯೊಂದು ಹಸುಗೂಸನ್ನು ಅಡ್ಮಿಟ್ ಮಾಡಿಕೊಂಡಿದೆ. ಆದ್ರೆ ಅಷ್ಟೊತ್ತಿಗೆ ಸಮಯ ಮೀರಿತ್ತು. ಚಿಕಿತ್ಸೆ ವಿಳಂಬದ ಕಾರಣ ಎಳೆಯ ಕಂದಮ್ಮ ಉಸಿರು ಚೆಲ್ಲಿತು.

    ಈ ಬಗ್ಗೆ ಮಾತನಾಡಿದ ಮಗುವಿನ ತಂದೆ ವೆಂಕಟೇಶ್, ನನ್ನ ಮಗಿವಿಗಾದ ಸ್ಥಿತಿ ಯಾರಿಗೂ ಬರಬಾರದು. ಕೆಲ ಖಾಸಗಿ ಆಸ್ಪತ್ರೆಗಳು ಬಡವರ ರಕ್ತ ಹೀರುತ್ತಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ

  • ರಾಯುಡು ಮನೆಗೆ ಹೊಸ ಅತಿಥಿಯ ಆಗಮನ

    ರಾಯುಡು ಮನೆಗೆ ಹೊಸ ಅತಿಥಿಯ ಆಗಮನ

    ಮುಂಬೈ: ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ಅಂಬಟಿ ರಾಯುಡು ದಂಪತಿಗೆ ಹೆಣ್ಣು ಮಗು ಜನಿಸಿದೆ.

    ರಾಯುಡು ಪತ್ನಿ ಚೆನ್ನುಪಲ್ಲಿ ವಿದ್ಯಾ ಅವರು ಭಾನುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಐಪಿಎಲ್‌ನಲ್ಲಿ ರಾಯುಡು ಚೆನ್ನೈ ಸೂಪರ್‌ ಕಿಂಗ್ಸ್ ಪರವಾಗಿ ಆಡುತ್ತಿದ್ದು, ರಾಯುಡು ತಂದೆಯಾದ ವಿಚಾರವನ್ನು, ಸಿಎಸ್‌ಕೆ ತಂಡ ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

    ರಾಯುಡು ದಂಪತಿಗೆ ಹೆಣ್ಣು ಮಗು ಜನಿಸಿದೆ ಎಂಬ ವಿಚಾರ ತಿಳಿಯುತ್ತಿದಂತೆ ಅವರ ಅಭಿಮಾನಿಗಳು ಮತ್ತು ಸಾವಿರಾರು ನೆಟ್ಟಿಗರು ಸಾಮಾಜಿಕ ಜಾಲತಾಣದ ಮೂಲಕ ವಿಶ್‌ ಮಾಡುತ್ತಿದ್ದಾರೆ. ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಈಗ ಡ್ಯಾಡೀಸ್‌ ಆರ್ಮಿಯಿಂದ ಆಫ್-ಫೀಲ್ಡ್ ಪಾಠಗಳನ್ನು ಬಳಸಲಾಗುವುದು. ವಿಸಿಲ್ ಪೋಡು ಎಂದು ಬರೆದು ಅಂಬಟಿ ರಾಯುಡು ಮತ್ತು ಅವರು ಮಗಳು ಹಾಗೂ ಅವರ ಪತ್ನಿ ಜೊತೆಗಿರುವ ಮುದ್ದಾದ ಸೆಲ್ಫಿಯನ್ನು ಹಂಚಿಕೊಂಡಿದೆ.

    ತನ್ನ ತಂಡದ ಸಹ ಆಟಗಾರ ಅಂಬಟಿ ರಾಯುಡು ಅವರಿಗೆ ವಿಶ್‌ ಮಾಡಿರುವ ಸುರೇಶ್‌ ರೈನಾ ಅವರು, ಮಗಳ ಜನನವಾಗಿದ್ದಕ್ಕೆ ಅಂಬಟಿ ರಾಯುಡು ಹಾಗೂ ವಿದ್ಯಾ ಅವರಿಗೆ ಶುಭಾಶಯಗಳು. ನಿಮ್ಮ ಮುದ್ದು ಮಗಳ ಜೊತೆಗೆ ಪ್ರತಿ ಕ್ಷಣವನ್ನು ಆನಂದಿಸಿ. ನಿಮಗೆ ದೇವರು ಹೆಚ್ಚಿನ ಖುಷಿ ಕೊಡಲಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ರಾಯಡು ಅವರು, ಧನ್ಯವಾದಗಳು ಸಹೋದರ ಎಂದು ರೈನಾ ಅವರಿಗೆ ತಿಳಿಸಿದ್ದಾರೆ.

    ರಾಯುಡು ಅವರು ಭಾರತ ತಂಡದ ಮಿಡಲ್‌ ಆರ್ಡರ್ ಬ್ಯಾಟ್ಸ್‌ ಮ್ಯಾನ್‌ ಆಗಿದ್ದು, ಭಾರತದ ಪರವಾಗಿ 55 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಮೂರು ಸೆಂಚುರಿಗಳನ್ನು ಹೊಡೆದಿದ್ದಾರೆ. ಭಾರತದ ಪರವಾಗಿ ಅಂಬಟಿ ರಾಯುಡು ಅವರು, ಆರು ಟಿ-೨೦ ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಅಂಬಟಿ 2010ರಲ್ಲಿ ಮುಂಬೈ ಇಂಡಿಯನ್ಸ್‌ ತಂಡದಿಂದ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಈವರೆಗೂ ಸುಮಾರು 147 ಐಪಿಎಲ್‌ ಪಂದ್ಯಗಳನ್ನು ರಾಯುಡು ಆಡಿದ್ದಾರೆ.

    ಕಾಲೇಜು ಗೆಳತಿ ಚೆನ್ನುಪಲ್ಲಿ ವಿದ್ಯಾ ಅವರನ್ನು 2009ರ ಫೆಬ್ರವರಿ14ರಂದು ಹೈದರಾಬಾದಿನಲ್ಲಿ ಅಂಬಟಿ ರಾಯುಡು ವರಿಸಿದ್ದರು.

  • 89ನೇ ವಯಸ್ಸಲ್ಲಿ ತಂದೆಯಾದ 5 ಮೊಮ್ಮಕ್ಕಳ ಅಜ್ಜ

    89ನೇ ವಯಸ್ಸಲ್ಲಿ ತಂದೆಯಾದ 5 ಮೊಮ್ಮಕ್ಕಳ ಅಜ್ಜ

    ಬೆರ್ನ್: ಒನ್ ಫಾರ್ಮುಲಾದ ಮಾಜಿ ಮುಖ್ಯಸ್ಥ ಬರ್ನಿ ಎಕ್ಲೆಸ್ಟೋನ್ ತಮ್ಮ 89ನೇ ವಯಸ್ಸಿನಲ್ಲಿ ತಂದೆಯಾಗಿದ್ದಾರೆ. 44 ವರ್ಷದ ಪತ್ನಿ ಫೆಬಿಯಾನಾ ಫ್ಲೊಸಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬರ್ನಿ ಇದೇ ಅಕ್ಟೋಬರ್ ನಲ್ಲಿ 90ನೇ ವರ್ಷಕ್ಕೆ ಕಾಲಿಡಲಿದ್ದಾರೆ.

    ಬಿರ್ನಿಗೆ ಇದು ಮೂರನೇ ಮದುವೆಯಾಗಿದ್ದು, ಇಬ್ಬರಿಂದಲೂ ವಿಚ್ಛೇಧನ ಪಡೆದುಕೊಂಡಿದ್ದಾರೆ. ಮೂವರು ಹೆಣ್ಣು ಮಕ್ಕಳು 5 ಮೊಮ್ಮಕ್ಕಳನ್ನು ಬಿರ್ನಿ ಹೊಂದಿದ್ದಾರೆ. ಮೊದಲ ಗಂಡು ಮಗುವಿಗೆ ತಂದೆಯಾದ ಖುಷಿಯಲ್ಲಿ ಮಾತನಾಡಿದ ಬರ್ನಿ, ನಮಗೂ ಒಬ್ಬ ಮಗನಿದ್ದಾನೆ. ಅವನ ಹೆಸರು ಏಸ್. ನನಗೆ ತುಂಬಾನೇ ಖುಷಿಯಾಗ್ತಿದೆ ಎಂದು ಹೇಳಿಕೊಂಡಿದ್ದಾರೆ. ಬರ್ನಿ ಪತ್ನಿ ಫೆಬಿಯಾನಾ, ಹೆರಿಗೆ ಸೂಸುತ್ರವಾಗಿ ಆಯ್ತು. ಮಗುವನ್ನು ಕರುಣಿಸಿದ ದೇವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

    ಬಿರ್ನಿ 2009ರಲ್ಲಿ ಮೋಟರ್ಸ್ ಸ್ಪೋರ್ಟ್ಸ್ ಕೌನ್ಸಿಲ್ ನಲ್ಲಿ ಫೆಬಿಯಾನಾರನ್ನ ಭೇಟಿಯಾಗಿದ್ದರು. ಎರಡನೇ ಪತ್ನಿ ಸ್ಲವಿಕಾರಿಗೆ ವಿಚ್ಛೇಧನ ನೀಡಿದ ಬಳಿಕ 2012ರಲ್ಲಿ ಫೆಬಿಯಾನಾ ಮತತು ಬರ್ನಿ ಮದುವೆಯಾಗಿದ್ದರು.

  • ಮದ್ವೆ ಮುನ್ನ ಹುಟ್ಟಿದ ಮಗು ದತ್ತು ಕೊಟ್ರು- ಅಂಗವಿಕಲ ಅಂತಾ ಕೊಂದೇ ಬಿಟ್ರು

    ಮದ್ವೆ ಮುನ್ನ ಹುಟ್ಟಿದ ಮಗು ದತ್ತು ಕೊಟ್ರು- ಅಂಗವಿಕಲ ಅಂತಾ ಕೊಂದೇ ಬಿಟ್ರು

    -2 ಲಕ್ಷ ರೂ.ಗೆ ದತ್ತು ಕೊಟ್ಟಿದ್ದ ಪೋಷಕರು

    ಬೆಳಗಾವಿ/ಚಿಕ್ಕೋಡಿ: ಮದುವೆ ಮುನ್ನ ಹುಟ್ಟಿದ ಮಗುವನ್ನು ಮೂರು ವರ್ಷದ ಬಳಿಕ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದಲ್ಲಿ ನಡೆದಿದೆ.

    ಮದ್ವೆಗೆ ಮೊದಲೇ ಹುಟ್ಟಿದ್ದ ಮಗುವನ್ನು ಹುಬ್ಬಳ್ಳಿಯ ಸುವರ್ಣಲತಾ ಗದಿಗೆಪ್ಪಗೌಡರ ಎಂಬವರಿಗೆ ದತ್ತು ನೀಡಲಾಗಿತ್ತು. ಅಂಗವಿಕಲ ಮಗುವನ್ನ ನಕಲಿ ದಾಖಲೆ ಸೃಷ್ಟಿಸಿದ್ದ ಪಾಲಕರು ಚಿಕ್ಕೋಡಿಯ ವೈದ್ಯ ಮಾರುತಿ ಮುಸಾಳೆ ಹಾಗೂ ಅವರ ಪತ್ನಿ ರೇಖಾ ಮುಸಾಳೆ ಮಧ್ಯಸ್ಥಿಕೆಯಲ್ಲಿ ಹುಬ್ಬಳ್ಳಿ ಸುವರ್ಣಲತಾ ಅವರಿಗೆ ದತ್ತು ನೀಡಲಾಗಿತ್ತು. ಈ ವೇಳೆ ಸುವರ್ಣಾರ ಬಳಿ 2 ಲಕ್ಷ ರೂ. ಪಡೆದುಕೊಂಡಿದ್ದರು.

    ಮಗು ಅಂಗವಿಕಲ ಎಂದು ತಿಳಿದ ಸುವರ್ಣಾ ಮೂರು ವರ್ಷದ ಕಂದನನ್ನು ವೈದ್ಯ ಮಾರುತಿ ಮಸಾಳೆ ವಾಪಾಸ್ ನೀಡಿದ್ದಾರೆ. ವೈದ್ಯ ಮಾರುತಿ ಮುಸಾಳೆ ಹಾಗೂ ಮಗುವಿನ ಅಜ್ಜ ರಾಮು ಚೌಗಲೆ ಎಂಬವರು ಮಗುವಿನ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಘಟನೆ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ.

  • ಉಗ್ರರ ಗುಂಡಿಗೆ ಬಲಿಯಾದ ಅಜ್ಜನ ಶವದ ಮೇಲೆ ಕುಳಿತ ಮೊಮ್ಮಗನ ರಕ್ಷಣೆ

    ಉಗ್ರರ ಗುಂಡಿಗೆ ಬಲಿಯಾದ ಅಜ್ಜನ ಶವದ ಮೇಲೆ ಕುಳಿತ ಮೊಮ್ಮಗನ ರಕ್ಷಣೆ

    -ಎದ್ದೇಳು ಅಜ್ಜ, ತಿಂಡಿ ಕೊಡಿಸು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಗುಂಡಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಉಗ್ರರ ದಾಳಿಗೆ ನಾಗರಿಕೊಬ್ಬರು ಬಲಿಯಾಗಿದ್ದು, ಇದನ್ನಾವುದು ತಿಳಿಯದ ಮೂರು ವರ್ಷದ ಕಂದಮ್ಮ ಅಜ್ಜನ ಎದೆ ಮೇಲೆ ಕುಳಿತು ಎದ್ದೇಳು ಎಂದು ಹೇಳುತ್ತಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭದ್ರತಾ ಸಿಬ್ಬಂದಿ ಮಗುವನ್ನು ರಕ್ಷಣೆ ಮಾಡಿದ್ದು, ಪೋಷಕರ ಮಡಿಲಿಗೆ ಸೇರಿಸಿದ್ದಾರೆ.

    ಉಗ್ರರು ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಗೆ ಬಲಿಯಾದ ವ್ಯಕ್ತಿ ರಸ್ತೆಯಲ್ಲೇ ಸಾವನ್ನಪ್ಪಿದ್ದಾರೆ. ಆತನ ಜೊತೆಯಲ್ಲಿದ್ದ ಮಗು ಮಾತ್ರ ಅಜ್ಜನನ್ನು ಬಿಟ್ಟು ಕದಲಿಲ್ಲ. ಕೊನೆಗೆ ಸೈನಿಕರು ಮಗುವನ್ನು ತಮ್ಮ ಬಳಿ ಕರೆದುಕೊಂಡು ಬಂದು ರಕ್ಷಣೆ ಮಾಡಿದ್ದರೆ.

    ಸೊಪೊರದಲ್ಲಿ ಉಗ್ರರು ಮತ್ತು ಸಿಆರ್ ಪಿಎಫ್ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಈ ಗುಂಡಿನ ಘರ್ಷಣೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ರೆ, ಸ್ಥಳೀಯ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವ ವ್ಯಕ್ತಿ ಮೊಮ್ಮಗನಿಗೆ ತಿಂಡಿ ಕೊಡಿಸಲು ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಉಗ್ರರ ದಾಳಿಗೆ ಬಲಿಯಾಗಿದ್ದಾರೆ.

  • ಕೆರೆಗೆ ಬಿತ್ತು ತಾಯಿಯ ಕಂಕುಳದಲ್ಲಿದ್ದ ಮೂರು ವರ್ಷದ ಕಂದಮ್ಮ

    ಕೆರೆಗೆ ಬಿತ್ತು ತಾಯಿಯ ಕಂಕುಳದಲ್ಲಿದ್ದ ಮೂರು ವರ್ಷದ ಕಂದಮ್ಮ

    -ಸಿನಿಮೀಯ ರೀತಿಯಲ್ಲಿ ಬದುಕುಳಿದ ಮಗು

    ಭೋಪಾಲ್: ತಾಯಿಯ ಕಂಕುಳದಲ್ಲಿದ್ದ ಮೂರು ವರ್ಷದ ಮಗು ಜಾರಿ ಕೆರೆಯ ಪಾಲಾಗಿದ್ದ ಕಂದಮ್ಮ ಸಿನಿಮೀಯ ರೀತಿಯಲ್ಲಿ ಬದುಕುಳಿದಿದೆ.

    ಶನಿವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ನಗರದ ವಿಐಪಿ ರಸ್ತೆಯ ರಾಜಾ ಬೋಜ ಪ್ರತಿಮೆ ಬಳಿ ಕಾಜೀ ಕ್ಯಾಂಪ್ ನಿವಾಸಿಯಾದ ಇರ್ಷಾದ್ ತನ್ನ ಪತ್ನಿ ಹಾಗೂ ಮಗು ಜೊತೆ ಬಂದಿದ್ದರು. ಪ್ರತಿಮೆ ವೀಕ್ಷಣೆ ವೇಳೆ ದಿಢೀರ್ ಅಂತಾ ಕಂಕುಳದಲ್ಲಿದ್ದ ಮಗು ಜಾರಿ ಕೆರೆಯಲ್ಲಿ ಬಿದ್ದಿದೆ. ಪತಿ-ಪತ್ನಿ ಮಗುವಿನ ರಕ್ಷಣೆಗೆ ಕೂಗುತ್ತಿದ್ದಂತೆ ದಡದಲ್ಲಿ ಐಸ್ ಕ್ರೀಂ ಮಾರುತ್ತಿದ್ದ ಹರಿಓಂ ವರ್ಮಾ, ಪೌರ ಕಾರ್ಮಿಕ ವಾಹನದ ಚಾಲಕ ಸೋಹೆಲ್ ಕೆರೆಗೆ ಧುಮುಕಿ ಮಗುವನ್ನು ರಕ್ಷಿಸಿದ್ದಾರೆ.

    ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಮಗುವನ್ನು ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆಯ ಬಳಿಕ ಮಗು ಚೇತರಿಸಿಕೊಂಡಿದೆ.

  • ತಾಯಿಯಾದ ಸಂತಸದಲ್ಲಿ ಬಿಗ್‍ಬಾಸ್ ಸ್ಪರ್ಧಿ ನೇಹಾ ಗೌಡ

    ತಾಯಿಯಾದ ಸಂತಸದಲ್ಲಿ ಬಿಗ್‍ಬಾಸ್ ಸ್ಪರ್ಧಿ ನೇಹಾ ಗೌಡ

    ವಾಷಿಂಗ್ಟನ್: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 3’ರ ಸ್ಪರ್ಧಿ ನೇಹಾ ಗೌಡ ತಾಯಿಯಾದ ಸಂತಸದಲ್ಲಿದ್ದು, ಇತ್ತೀಚೆಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ತಾವು ತಾಯಿಯಾಗಿರುವ ವಿಚಾರವನ್ನ ನೇಹಗೌಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕುವ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ನೇಹಾ ಗೌಡ ಪತಿಯೊಂದಿಗೆ ಅಮೆರಿಕಾದ ನಾರ್ತ್ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಪತಿ ಸೇರಿದಂತೆ ಕುಟುಂಬದವರು ತಮ್ಮ ಮನೆಗೆ ಹೊಸ ಸದಸ್ಯೆಯನ್ನು ಬರಮಾಡಿಕೊಂಡಿದ್ದಾರೆ.

    ನೇಹಾ ಗೌಡ ಸೀಮಂತ ಕಾರ್ಯಕ್ರಮ ಸರಳವಾಗಿ ನಡೆದಿದ್ದು, ಆಪ್ತರು, ಸ್ನೇಹಿತರು ಮಾತ್ರ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವೇಳೆ ನೇಹಾ ತಮಗೆ ಹೆಣ್ಣು ಮಗು ಹುಟ್ಟಬೇಕೆಂಬ ಆಸೆಯಿದೆ ಅಂತ ಹೇಳಿಕೊಂಡಿದ್ದರು. ಅದರಂತೆಯೇ ಅವರಿಗೆ ಹೆಣ್ಣು ಮಗು ಹುಟ್ಟಿದೆ.

    ನೇಹಾ ಗೌಡ ವೃತ್ತಿಯಲ್ಲಿ ಗಗನಸಖಿಯಾಗಿದ್ದು, ಕನ್ನಡದಲ್ಲಿ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 3’ರಲ್ಲಿ ಭಾಗವಹಿಸಿದ್ದರು. ಬಿಗ್‍ಬಾಸ್ ಮನೆಯಲ್ಲಿ ಉತ್ತಮವಾಗಿ ಆಟವಾಡಿದ್ದರು. ಆದರೆ ಬಿಗ್‍ಬಾಸ್ ಮನೆಯಿಂದ 5ನೇ ಸ್ಪರ್ಧಿ ಆಗಿ ನೇಹಾ ಗೌಡ ಹೊರ ಬಂದಿದ್ದರು. ಜೊತೆಗೆ ‘ಡಾನ್ಸಿಂಗ್ ಸ್ಟಾರ್’ ರಿಯಾಲಿಟಿ ಶೋದಲ್ಲಿಯೂ ನೇಹಾ ಭಾಗವಹಿಸಿದ್ದರು.

  • ರೈಲಿನಲ್ಲಿದ್ದ ಮಗುವಿಗೆ ಮನೆಯಿಂದ್ಲೇ ಹಾಲು ತಂದುಕೊಟ್ಟ ಮಹಿಳಾ ಪೊಲೀಸ್

    ರೈಲಿನಲ್ಲಿದ್ದ ಮಗುವಿಗೆ ಮನೆಯಿಂದ್ಲೇ ಹಾಲು ತಂದುಕೊಟ್ಟ ಮಹಿಳಾ ಪೊಲೀಸ್

    – ಮಹಿಳಾ ಅಧಿಕಾರಿಯ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ರಾಂಚಿ: ನಿಂತಿದ್ದ ರೈಲಿನಲ್ಲಿ ಅಳುತ್ತಿದ್ದ ಮಗುವಿಗೆ ಮಹಿಳಾ ಪೊಲೀಸೊಬ್ಬರು ತನ್ನ ಮನೆಯಿಂದಲೇ ಹಾಲು ತಂದುಕೊಟ್ಟಿದ್ದು, ಇದೀಗ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಮಹಿಳಾ ಪ್ರಯಾಣಿಕೆ ಮೆಹರುನ್ನಿಸಾ ಅವರು ತನ್ನ 4 ತಿಂಗಳ ಗಂಡು ಮಗುವಿನ ಜೊತೆ ಬೆಂಗಳೂರಿನಿಂದ ಗೊರಖ್ ಪುರಕ್ಕೆ ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಹೀಗೆ ಹೋಗುತ್ತಿದ್ದಾಗ ರೈಲು ಹಾತಿಯಾ ಪೊಲೀಸ್ ಠಾಣೆಯಲ್ಲಿ ನಿಲುಗಡೆಯಾಯಿತು. ಇದೇ ವೇಳೆ ಮಗು ಹಸಿವಿನಿಂದ ಜೋರಾಗಿ ಅಳುತ್ತಿತ್ತು. ಹೀಗಾಗಿ ರೈಲು ನಿಲ್ಲುತ್ತಿದ್ದಂತೆ ಮೆಹರುನ್ನಿಸಾ ಅವರು, ತನ್ನ ಮಗುವಿಗೆ ಹೇಗಾದರೂ ಮಾಡಿ ಸ್ವಲ್ಪ ಹಾಲು ತಂದು ಕೊಡಿ ಎಂದು ರೈಲ್ವೇ ನಿಲ್ದಾಣದಲ್ಲಿದ್ದ ಅಧಿಕಾರಿಗಳ ಬಳಿ ಕೇಳಿಕೊಂಡಿದ್ದಾರೆ. ಮೇಹರುನ್ನಿಸಾ ಅವರು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡ ಸಂದರ್ಭದಲ್ಲಿ ಎಎಸ್‍ಐ ಸುಶೀಲ ಬರೈಕ್ ಕೂಡ ಅಲ್ಲೇ ಇದ್ದರು.

    ಸುಶೀಲ ಅವರು ಮನೆ ರೈಲ್ವೇ ನಿಲ್ದಾಣದ ಪಕ್ಕದಲ್ಲೇ ಇದೆ. ಹೀಗಾಗಿ ಮೆಹರುನ್ನಿಸಾ ಅವರು ಮನವಿ ಮಾಡಿಕೊಂಡ ತಕ್ಷಣ ಎಎಸ್‍ಐ ಸುಶೀಲ ಅವರು ತಮ್ಮ ಮನೆಗೆ ಓಡಿದ್ದಾರೆ. ಅಲ್ಲದೆ ಒಂದು ಬಾಟ್ಲಿಯಲ್ಲಿ ಹಾಲು ತುಂಬಿಕೊಂಡು ತಂದುಕೊಟ್ಟಿದ್ದಾರೆ. ಎಎಸ್‍ಐ ಅವರು ಮಹಿಳೆಗೆ ಹಾಲು ತಂದು ಕೊಡುತ್ತಿರುವಾಗ ಅಲ್ಲೇ ಇದ್ದ ಇತರ ಪ್ರಯಾಣಿಕರು ಫೋಟೋ ಕ್ಲಿಕ್ಕಿಸಿದ್ದಾರೆ. ಈ ಫೋಟೋವನ್ನು ಡಿಆರ್‍ಎಂ ರಾಂಚಿ ಎಂಬ ಟ್ವಿಟ್ಟರ್ ಅಕೌಂಟಿನಿಂದ ಟ್ವೀಟ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಮಹಿಳಾ ಪೊಲೀಸ್ ಮಾನವೀಯತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಇದೇ ವರ್ಷದ ಮೇ ತಿಂಗಳಲ್ಲಿ ಆರ್‍ಪಿಎಫ್ ಕಾನ್‍ಸ್ಟೇಬಲ್ ಒಬ್ಬರು ಚಲಿಸುತ್ತಿದ್ದ ಶ್ರಮಿಕ್ ರೈಲಿನ ಹಿಂದೆಯೇ ಓಡಿ 4 ತಿಂಗಳ ಮಗುವಿಗೆ ಹಾಲಿನ ಪ್ಯಾಕೆಟ್ ಕೊಟ್ಟಿದ್ದರು. ರೈಲು ಭೋಪಾಲ್ ನಿಲ್ದಾಣದಲ್ಲಿ ನಿಂತಿದ್ದಾಗ ಮಗುವಿನ ಫೋಷಕರು ಹಾಲು ನೀಡಿ ಮಗುವಿಗೆ ಸಹಾಯ ಮಾಡುವಂತೆ ಕಾನ್‍ಸ್ಟೇಬಲ್ ಬಳಿ ಕೇಳಿಕೊಂಡಿದ್ದರು. ಹೀಗೆ ಅಂಗಡಿಗೆ ತೆರಳಿ ಪ್ಯಾಕೆಟ್ ಹಾಲು ತೆಗೆದುಕೊಂಡು ಬರುತ್ತಿದ್ದಾಗ ರೈಲು ಚಲಿಸಲು ಆರಂಭಿಸಿದೆ.

    ರೈಲು ಚಲಿಸುತ್ತಿರುವುದನ್ನು ಅರಿತ ಕಾನ್ಸ್ ಸ್ಟೇಬಲ್ ಅದರ ಹಿಂದೆ ಓಡಿ ಹೋಗಿ ಹೇಗೋ ಮಗುವಿನ ಪೋಷಕರಿಗೆ ಹಾಲನ್ನು ಒಪ್ಪಿಸಿದ್ದರು. ಈ ವೇಳೆ ಕಾನ್ಸ್ ಸ್ಟೇಬಲ್ ಧೈರ್ಯ ಹಾಗೂ ಮನವೀಯತೆಗೆ ಜನ ಪ್ರಶಂಸೆ ವ್ಯಕ್ತಪಡಿಸಿದ್ದರು.

  • ಪಾಳುಬಿದ್ದ ಜಾಗದಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ

    ಪಾಳುಬಿದ್ದ ಜಾಗದಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ

    -ಒಂದು ಗಂಟೆ ಹಿಂದೆ ಜನಿಸಿದ ಮಗುವಿನ ರಕ್ಷಣೆ

    ಬೆಂಗಳೂರು: ಪಾಳುಬಿದ್ದ ಜಾಗದಲ್ಲಿ ಪತ್ತೆಯಾದ ನವಜಾತ ಶಿಶುವನ್ನು ರಕ್ಷಣೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ನಗರದ ವಾಜರಹಳ್ಳಿ ರಸ್ತೆಯಲ್ಲಿ ನಡೆದಿದೆ.

    ಸುಮಾರು ಒಂದು ಗಂಟೆ ಹಿಂದೆ ಹೆಣ್ಣು ಮಗು ಜನಿಸಿದೆ ಎನ್ನಲಾಗಿದ್ದು, ಕಂದಮ್ಮ ಅಳುವಿನ ಶಬ್ಧ ಕೇಳಿದ ಸ್ಥಳೀಯರು ನವಜಾತ ಶಿಶುವನ್ನು ರಕ್ಷಿಸಿದ್ದಾರೆ. ಮಗುವನ್ನು ರಕ್ಷಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಾಯಿಗಳ ದಾಳಿಗೆ ಒಳಗಾಗುತ್ತಿದ್ದ ಕಂದಮ್ಮ ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಬದುಕಿ ಉಳಿದಿದೆ.

    ಸ್ಥಳಕಾಗಮಿಸಿ ಪೊಲೀಸರು ಮಗುವನ್ನು ವಶಕ್ಕೆ ಪಡೆದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮಗುವಿನ ತಾಯಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.