Tag: Baby

  • ಒಂದೂವರೆ ವರ್ಷದ ಕಂದನ ಮೇಲೆ ರೇಪ್ – 26ರ ಯುವಕ ಅರೆಸ್ಟ್

    ಒಂದೂವರೆ ವರ್ಷದ ಕಂದನ ಮೇಲೆ ರೇಪ್ – 26ರ ಯುವಕ ಅರೆಸ್ಟ್

    ಲಕ್ನೋ: ಒಂದೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರದ ಆರೋಪದಡಿಯಲ್ಲಿ ಪೊಲೀಸರು 26 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಕೋತವಾಲಿ ಚಂದಪಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಹತ್ರಾಸ್ ಮೂಲದ ಮಹಿಳೆ ತನ್ನ ಒಂದೂವರೆ ವರ್ಷದ ಮಗು ಜೊತೆ ತವರು ಮನೆಗೆ ಬಂದಿದ್ದರು. ಈ ವೇಳೆ ಮಗುವನ್ನ ಆಟ ಆಡಿಸೋದಾಗಿ ಹೇಳಿ 26 ವರ್ಷದ ಯುವಕ ಕರೆದುಕೊಂಡು ಹೋಗಿದ್ದನು. ತುಂಬಾ ಸಮಯದ ಬಳಿಕ ಬಂದ ಯುವಕ ಮಗುವನ್ನ ತಾಯಿಗೆ ನೀಡಿ ಹಿಂದಿರುಗಿದ್ದನು.

    ಮಗು ಅಳುತ್ತಿದ್ದ ಗಮನಿಸಿದ ಮಹಿಳೆ ಕಂದಮ್ಮನ ಮೇಲೆ ಅತ್ಯಾಚಾರ ಆಗಿದೆ ಎಂದು ಆರೋಪಿಸಿ ಚಂದಪಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿರುವ ಸ್ಥಳೀಯ ವೈದ್ಯರು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸ್ಸು ಮಾಡಿದ್ದಾರೆ. ಸದ್ಯ ಮಗವನ್ನ ಅಲಿಗಢ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ವಿಷಯ ತಿಳಿದ ಎಸ್.ಪಿ. ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಪೋಷಕರ ದೂರಿನ ಆಧಾರದ ಮೇಲೆ ಅದೇ ಗ್ರಾಮದ 26 ವರ್ಷದ ಯುವಕನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು, ಮಗುವಿಗೆ ಚಿಕಿತ್ಸೆ ನೀಡಲಾಗ್ತಿದೆ ಎಂದು ಹೇಳಿದ್ದಾರೆ.

  • ಹೊಸ ವರ್ಷಕ್ಕೆ ಮದ್ಯ ಖರೀದಿಸಲು 6 ತಿಂಗಳ ಮಗನನ್ನೇ ಮಾರಾಟಕ್ಕಿಟ್ಟ ಭೂಪ!

    ಹೊಸ ವರ್ಷಕ್ಕೆ ಮದ್ಯ ಖರೀದಿಸಲು 6 ತಿಂಗಳ ಮಗನನ್ನೇ ಮಾರಾಟಕ್ಕಿಟ್ಟ ಭೂಪ!

    – ಪತ್ನಿ ಹಣ ಕೊಡದಿದ್ದಕ್ಕೆ ಕಂದಮ್ಮನನ್ನೇ ಮಾರಿದ

    ಹೈದರಾಬಾದ್: ಮದ್ಯದ ಚಟಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ಹೊಸ ವರ್ಷದ ಸಂಭ್ರಮಾಚರಣೆಗೆ ಮದ್ಯ ಖರೀದಿಸಲು ತನ್ನ ಮಗನನ್ನೇ ಮಾರಾಟಕ್ಕಿಟ್ಟು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ರಾಜು ಮತ್ತು ಸಾರಾ ದಂಪತಿ ಮಲಕ್‍ಪೇಟೆ ಏರಿಯಾ ಆಸ್ಪತ್ರೆಯ ಬಳಿ ಫುಟ್‍ಪಾತ್‍ನಲ್ಲಿ ವಾಸಿಸುತ್ತಾ ಜೀವನ ನಡೆಸುತ್ತಿದ್ದರು. ದಂಪತಿಗೆ 6 ತಿಂಗಳ ಗಂಡು ಮಗುವೊಂದಿತ್ತು. ಹೊಸ ವರ್ಷದ ಗುಂಗಿನಲ್ಲಿದ್ದ ರಾಜು ತನ್ನ ಪತ್ನಿ ಸಾರಾ ಜೊತೆ ಮದ್ಯ ಖರೀದಿಸಲು ಹಣ ಕೇಳಿದ್ದಾನೆ. ಆಕೆ ಹಣ ಕೊಡಲು ನಿರಾಕರಿಸಿದ್ದರಿಂದ ತನ್ನ 6 ತಿಂಗಳ ಮಗುವನ್ನೇ ಮಾರಾಟ ಮಾಡಲು ಹೊರಟಿದ್ದಾನೆ.

    ಹೊಸ ವರ್ಷದ ಆಚರಣೆಗಾಗಿ ಮದ್ಯಕುಡಿಯಲು ಹಣ ಕೊಡದಿದ್ದ ಪತ್ನಿಯ ವಿರುದ್ಧ ಕೋಪಗೊಂಡ ರಾಜು ತನ್ನ ಆರು ತಿಂಗಳ ಗಂಡು ಮಗುವನ್ನು ಆಫ್ರೀನ್ ಎಂಬ ಏಜೆಂಟ್‍ನ ಸಹಾಯದಿಂದ ಮಾರಾಟ ಮಾಡಲು ಯತ್ನಿಸಿದ್ದಾನೆ. ಅದರಂತೆ ಏಜೆಂಟ್, ಗಂಡು ಮಗುವನ್ನು ಬಯಸುವ ಗ್ರಾಹಕರನ್ನು ಸಂಪರ್ಕಿಸಿ 70,000 ರೂಪಾಯಿಗೆ ಮಾರಾಟ ಮಾಡಿ ಕೊಡುವುದಾಗಿ ರಾಜುಗೆ ತಿಳಿಸಿದ್ದಾನೆ.

    ಆಫ್ರೀನ್ ಮಗುವಿನೊಂದಿಗೆ ಎಬ್ಬಿ ನಗರಕ್ಕೆ ಕರೆದುಕೊಂಡು ಬಂದು ಮಾರಾಟ ಮಾಡುತ್ತಿರುವುದರ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಚಾದರ್‍ಘಾಟ್ ಪೊಲೀಸರು, ರಾಜು ಮತ್ತು ಆಫ್ರೀನ್ ನಡುವೆ ಹಣದ ವಿಚಾರವಾಗಿ ಚೌಕಾಸಿ ನಡೆಯುತ್ತಿರುವುದನ್ನು ಗಮನಿಸಿದ್ದಾರೆ. ನಂತರ ಸಿಸಿಟಿವಿ ಆಧಾರದ ಮೂಲಕ ಮಗುವನ್ನು ಮಾರಾಟ ಮಾಡಿದ ಸ್ಥಳವನ್ನು ಗುರುತು ಮಾಡಿ ಮಗುವನ್ನು ರಕ್ಷಿಸಿದ್ದಾರೆ. ರಾಜು ಮತ್ತು ಆಫ್ರೀನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಚಾದರ್‍ಘಾಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಒಲೆಯ ಕಿಡಿಗೆ ಸುಟ್ಟು ಕರಕಲಾದ ಜೋಪಡಿ – ಬೆಂಕಿಯ ಕೆನ್ನಾಲಿಗೆ ಸಿಲುಕಿ ಮಗು ಸಾವು

    ಒಲೆಯ ಕಿಡಿಗೆ ಸುಟ್ಟು ಕರಕಲಾದ ಜೋಪಡಿ – ಬೆಂಕಿಯ ಕೆನ್ನಾಲಿಗೆ ಸಿಲುಕಿ ಮಗು ಸಾವು

    – ಅಪಾಯದಿಂದ ಪಾರಾದ ಮೂರು ಮಕ್ಕಳು

    ಜೈಪುರ: ಒಲೆಯಲ್ಲಿನ ಕಿಡಿಗೆ ಗುಡಿಸಲು ಸುಟ್ಟು ಕರಕಲಾಗಿ ಎರಡು ವರ್ಷದ ಮಗು ಸಾವನ್ನಪ್ಪಿದೆ. ಶನಿವಾರ ಮಧ್ಯಾಹ್ನ ರಾಜಸ್ಥಾನದ ಸಿಕಾರ ಜಿಲ್ಲೆಯ ತಾರಾನಗರ ಬಳಿಯ ಬೂಚ್ವಾಸ್ ನಲ್ಲಿ ನಡೆದಿದೆ.

    ಎರಡು ವರ್ಷದ ಸೂರಜ್ ಬೆಂಕಿಗಾಹುತಿಯಾದ ಕಂದಮ್ಮ. ಸೂರಜ್ ತಂದೆ ಪಿತರಾಮ್ ಪತ್ನಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ನಾಲ್ವರು ಮಕ್ಕಳಲ್ಲಿ ಮೂವರು ಹೊರಗೆ ಆಟ ಆಡುತ್ತಿದ್ದರು. ಒಲೆಯಲ್ಲಿದ್ದ ಕಿಡಿ ಗಾಳಿಗೆ ಹಾರಿ ಇಡೀ ಗುಡಿಸಲು ಆವರಿಸಿದ ಪರಿಣಾಮ ಒಳಗಡೆ ಇದ್ದ ಸೂರಜ್ ಮೃತಪಟ್ಟಿದ್ದಾನೆ.

    ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ದೌಡಾಯಿಸಿದ್ದಾರೆ. ಬೆಂಕಿ ನಂದಿಸಲು ಪ್ರಯತ್ನಿಸುವ ವೇಳಗೆ ಇಡೀ ಗುಡಿಸಲನ್ನ ಅಗ್ನಿ ಆಹುತಿ ತೆಗೆದುಕೊಂಡಿತ್ತು. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿದ್ದಾರೆ. ಸುಟ್ಟು ಕರಕಲಾಗಿದ್ದ ಮಗುವಿನ ಮೃತದೇಹವನ್ನ ಮರಣೋತ್ತರ ಶವ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಇನ್ನು ಇಡೀ ಕುಟುಂಬ ಬೀದಿ ಬಂದಿದ್ದನು ಕಂಡ ಸ್ಥಳೀಯರು ಆರ್ಥಿಕ ಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

     

  • ಒಂದೂವರೆ ವರ್ಷದ ಹೆಣ್ಣು ಮಗುವನ್ನು ಬಟ್ಟೆಯಲ್ಲಿ ಸುತ್ತಿ ಬೇಲಿ ಬದಿ ಎಸೆದು ಹೋದ್ರು!

    ಒಂದೂವರೆ ವರ್ಷದ ಹೆಣ್ಣು ಮಗುವನ್ನು ಬಟ್ಟೆಯಲ್ಲಿ ಸುತ್ತಿ ಬೇಲಿ ಬದಿ ಎಸೆದು ಹೋದ್ರು!

    ಹಾಸನ: ಸುಮಾರು ಒಂದೂವರೆ ವರ್ಷದ ಹೆಣ್ಣು ಮಗುವನ್ನು ಪೋಷಕರು ಬೇಲಿಗೆ ಎಸೆದು ಹೋಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ವಿದ್ಯಾನಗರ ಸಮೀಪ ನಡೆದಿದೆ.

    ಮಗುವನ್ನು ಬಟ್ಟೆಯಲ್ಲಿ ಸುತ್ತಿ ಬೇಲಿಗೆ ಎಸೆದು ಹೋಗಿದ್ದಾರೆ. ಚಳಿ ಮತ್ತು ಹಸಿವು ತಾಳಲಾರದೆ ಮಗುವಿನ ಆಕ್ರಂದನ ಮುಗಿಲು ಮುಟ್ಟಿದೆ. ವಿಷಯ ತಿಳಿದ ಸ್ಥಳೀಯ ನಿವಾಸಿ ತಮನ್ನಾ ಮಗುವನ್ನು ಮನೆಗೆ ಕರೆತಂದು ಹಾಲು ಕುಡಿಸಿ ಪೋಷಣೆ ಮಾಡಿದ್ದಾರೆ.

    ಮಾಹಿತಿ ತಿಳಿದ ಪತ್ರಕರ್ತರೊಬ್ಬರು ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದಿದ್ದು, ಯಾರಿಗಾದರೂ ಮಗುವಿನ ಪೋಷಕರ ಬಗ್ಗೆ ತಿಳಿದಿದ್ದರೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

  • ಸರ್ಕಾರಿ ವೈದ್ಯನಿಂದಲೇ ಹೆಣ್ಣು ಮಗು ಮಾರಾಟ – ತಾಯಿಯನ್ನು ಹೆದರಿಸಿ ಮಗು ಕಿತ್ತುಕೊಂಡ್ರು

    ಸರ್ಕಾರಿ ವೈದ್ಯನಿಂದಲೇ ಹೆಣ್ಣು ಮಗು ಮಾರಾಟ – ತಾಯಿಯನ್ನು ಹೆದರಿಸಿ ಮಗು ಕಿತ್ತುಕೊಂಡ್ರು

    – ತಾಯಿಗೆ 5 ಸಾವಿರ ನೀಡಿ, ಮಗುವನ್ನು 50 ಸಾವಿರಕ್ಕೆ ಮಾರಿದ್ರು

    ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಯ ವೈದ್ಯರೇ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದಿದೆ.

    ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಯುವತಿಯೊಬ್ಬಳ ಕಳೆದ ಮಾರ್ಚ್ 14ರಂದು ಹೆರಿಗೆ ನೋವು ಬಂದಿದ್ದರಿಂದ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಹೆಣ್ಣು ಮಗು ಜನಿಸಿತ್ತು. ಆದರೆ ಆ ಯುವತಿಗೆ ಮದುವೆಯಾಗದ ಕಾರಣ ಕೊಪ್ಪ ತಾಲೂಕು ಆಸ್ಪತ್ರೆ ವೈದ್ಯ ಡಾ.ಬಾಲಕೃಷ್ಣ, ನಿನಗೆ ಮಗುವನ್ನ ಸಾಕಲು ಆಗುವುದಿಲ್ಲ. ಮಗುವನ್ನ ಇಲ್ಲೇ ಬಿಟ್ಟು ಹೋಗು, ಇಲ್ಲದ್ದಿದರೆ ಪೊಲೀಸರಿಗೆ ನಿನ್ನ ವಿರುದ್ಧ ದೂರು ನೀಡುವುದಾಗಿ ವೈದ್ಯ ಹೆದರಿಸಿದ್ದಾನೆ.

    ಮದುವೆಗೂ ಮುಂಚೆ ಮಗು ಜನಿಸಿದ್ದರಿಂದ ಹೆದರಿದ ಯುವತಿ ಮಗುವನ್ನು ಬಿಟ್ಟು ಹೋಗಿದ್ದಾಳೆ. ಆಗ ಸರ್ಕಾರಿ ಆಸ್ಪತ್ರೆ ವೈದ್ಯ ಬಾಲಕೃಷ್ಣ ಮಗುವನ್ನು ತಮಿಳುನಾಡಿನಿಂದ ಬಂದು ಶೃಂಗೇರಿಯಲ್ಲಿ ವಾಸವಿದ್ದ ಪ್ರೇಮಾಲತಾ ಎಂಬುವರಿಗೆ ಮಗುವನ್ನು ಮಾರಾಟ ಮಾಡಿದ್ದಾನೆ. ಯುವತಿಯ ತಾಯಿಗೆ ವೈದ್ಯ 5,000 ಹಣ ನೀಡಿದ್ದರು. ಆದರೆ ಈಗ 8 ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು ಮಗುವಿನ ತಾಯಿ ವೈದ್ಯ ಬಾಲಕೃಷ್ಣ ಹಾಗೂ ಇಬ್ಬರು ದಾದಿಯರಾದ ಶೋಭಾ ಹಾಗೂ ರೇಷ್ಮಾ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾಳೆ.

    ವೈದ್ಯರು ನನಗೆ 5000 ಹಣ ನೀಡಿ ನನ್ನ ಮಗುವನ್ನು 50 ಸಾವಿರಕ್ಕೂ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದ್ದಾರೆ ಎಂದು ದೂರು ನೀಡಿದ್ದಾಳೆ. ಹಣಕ್ಕಾಗಿ ಮಗು ಮಾರಾಟವಾಗಿರುವುದರಿಂದ ಇದೀಗ ಕೊಪ್ಪ ಠಾಣೆಯಲ್ಲಿ ಮಗು ಮಾರಾಟ ಮಾಡಿದವರು ಹಾಗೂ ಕೊಂಡವರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗುವನ್ನು ಚಿಕ್ಕಮಗಳೂರಿನ ಬಾಲಮಂದಿರಕ್ಕೆ ಬಿಟ್ಟು ತನಿಖೆ ಆರಂಭಿಸಿದ್ದಾರೆ.

    ಮದುವೆಯಾಗದೆ ಗರ್ಭಿಣಿಯಾದ ಯುವತಿಗೆ ಡೆಲಿವರಿ ಮಾಡಿಸಿದ ವೈದ್ಯ ಪೊಲೀಸ್ ಕಂಪ್ಲೆಂಟ್ ಆಗುತ್ತೆ ಎಂದು ಆ ಯುವತಿಗೆ ಹೆದರಿಸಿ ಮಗುವನ್ನ 50,000 ಸಾವಿರಕ್ಕೆ ಮಾರಿ, ಆ ಯುವತಿಗೆ 5 ಸಾವಿರ ಹಣ ನೀಡಿದ್ದ. 8 ತಿಂಗಳ ಬಳಿಕ ಇಬ್ಬರು ನರ್ಸ್ ಹಾಗೂ ವೈದ್ಯ ಸೇರಿ ಮಗುವನ್ನು ಕೊಂಡುಕೊಂಡವಳ ಮೇಲೆ ಎಫ್.ಐ.ಆರ್ ದಾಖಲಾಗಿದೆ.

  • ಚೊಚ್ಚಲ ಹೆರಿಗೆ ಬಳಿಕ ತಾಯಿ, ಮಗು ಸಾವು – ವೈದ್ಯರ ವಿರುದ್ಧ ಕುಟುಂಬಸ್ಥರ ಆರೋಪ

    ಚೊಚ್ಚಲ ಹೆರಿಗೆ ಬಳಿಕ ತಾಯಿ, ಮಗು ಸಾವು – ವೈದ್ಯರ ವಿರುದ್ಧ ಕುಟುಂಬಸ್ಥರ ಆರೋಪ

    ಮಂಗಳೂರು: ಚೊಚ್ಚಲ ಹೆರಿಗೆ ಬಳಿಕ ತಾಯಿ-ಮಗು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಬಂಟ್ವಾಳ ತಾಲೂಕಿನ ರಾಮನಗರ ನಿವಾಸಿ ಗರ್ಭಿಣಿ ಕಾಜಲ್ ಅವರನ್ನ ಹೆರಿಗೆಗಾಗಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದ್ರೆ ಹೆರಿಗೆ ಬಳಿಕ ಮಗು ಸಾವನ್ನಪ್ಪಿತ್ತು. ಅಧಿಕ ರಕ್ತಸ್ರಾವವಾದ ಕಾರಣ ಕಾಜಲ್ ಅವರನ್ನ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ ವೈದ್ಯರು ಕಾಜಲ್ ಮಾರ್ಗ ಮಧ್ಯೆಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

    ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಆಗಿದೆ ಎಂದು ಆರೋಪಿಸಿದ ಕುಟುಂಬಸ್ಥರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆ ಎದುರು ಜಮಾಯಿಸಿ ಆಕ್ರೋಶ ಹೊರ ಹಾಕಿದರು. ಆಸ್ಪತ್ರೆ ವಿರುದ್ಧ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

  • 14 ದಿನದ ಮಗುವನ್ನ 3ನೇ ಮಹಡಿಯಿಂದ ಎಸೆದ ತಾಯಿ

    14 ದಿನದ ಮಗುವನ್ನ 3ನೇ ಮಹಡಿಯಿಂದ ಎಸೆದ ತಾಯಿ

    – ಗಂಡನಿಂದ ದೂರವಾಗಿ ತವರು ಸೇರಿದ್ದ ಮಹಿಳೆ

    ಹೈದರಾಬಾದ್: 14 ದಿನದ ಮಗುವನ್ನು ತಾಯಿಯೇ ಮೂರನೇ ಮಹಡಿಯಿಂದ ಎಸೆದು ಕೊಂದಿರುವ ಭಯಾನಕ ಘಟನೆ ಆಂಧ್ರ ಪ್ರದೇಶದ ಫತೇನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

    ಲಾವಣ್ಯ ಮಗುವನ್ನ ಎಸೆದ ತಾಯಿ. 2016ರಲ್ಲಿ ಲಾವಣ್ಯ ಮದುವೆ ನೇತಾಜಿನಗರದ ವೇಣುಗೋಪಾಲ್ ಜೊತೆ ಮದುವೆಯಾಗಿತ್ತು. ಕೌಟುಂಬಿಕ ಕಲಹ ಹಿನ್ನೆಲೆ ಎರಡನೇ ಮಗುವಿನ ತಾಯಿಯಾಗುವ ವೇಳೆ ತವರು ಸೇರಿದ್ದಳು. ತವರು ಮನೆ ಸೇರಿದ ಕೆಲ ದಿನಗಳಲ್ಲೇ ಲಾವಣ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.

    ಪೋಷಕರು ಮಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಗರ್ಭಿಣಿ ಪುತ್ರಿಯನ್ನು ಬದುಕಿಸಿಕೊಂಡಿದ್ದರು. ಈ ವೇಳೆ ಲಾವಣ್ಯಗೆ ಶಸ್ತ್ರಚಿಕಿತ್ಸೆ ಮಾಡಿಸಿ ಹೆರಿಗೆ ಮಾಡಿಸಲಾಗಿತ್ತು. ಲಾವಣ್ಯ ವಿಷ ಸೇವಿಸಿದ್ರೂ ವೈದ್ಯರು ಮಗುವನ್ನು ಉಳಿಸಿಕೊಂಡಿದ್ದರು.

    ಮೂರನೇ ಮಹಡಿಯಿಂದ ಮಗ ಸ್ಥಳದಲ್ಲೇ ಸಾವನ್ನಪ್ಪಿದೆ. ಮಹಿಳೆಗೆ ಮೂರು ವರ್ಷದ ಒಂದು ಮಗು ಇದೆ. ಐಪಿಸಿ ಸೆಕ್ಷನ್ 302ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಫತೇನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

  • ಮನೆಯಲ್ಲಿದ್ದ ಮಗುವನ್ನ ಊರೆಲ್ಲಾ ಹುಡುಕಿದ್ರು – ಕೊನೆಗೆ ಠಾಣೆಗೆ ಹೋದ ಪೋಷಕರು

    ಮನೆಯಲ್ಲಿದ್ದ ಮಗುವನ್ನ ಊರೆಲ್ಲಾ ಹುಡುಕಿದ್ರು – ಕೊನೆಗೆ ಠಾಣೆಗೆ ಹೋದ ಪೋಷಕರು

    ಶಿವಮೊಗ್ಗ : ಮನೆಯಲ್ಲಿದ್ದ ಮಗು ಕಾಣೆಯಾಗಿದೆ ಎಂದು ಪೋಷಕರು ಹುಡುಕಾಟ ನಡೆಸಿ, ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಜಿಲ್ಲೆಯ ಸಾಗರದಲ್ಲಿ ನಡೆದಿದೆ.

    ಸಾಗರದ ಅಣಲೆಕೊಪ್ಪ ಬಡಾವಣೆಯಲ್ಲಿ ಸಂಜೆ ತಮ್ಮ ಮಗು ಕಾಣೆಯಾಗಿದೆ ಎಂದು ಪೋಷಕರು ಗಾಬರಿಗೊಂಡು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ನಂತರ ಇದು ಕಿಡ್ನಾಪ್ ಇರಬಹುದೆಂದು ಶಂಕಿಸಿ ಪೊಲೀಸರು ಎಲ್ಲಾ ಕಡೆ ಹುಡುಕಾಟ ನಡೆಸುತ್ತಿದ್ದರು.

    ಎಲ್ಲರೂ ಹುಡುಕಾಟ ನಡೆಸುತ್ತಿದ್ರೆ ಮಗು ಮನೆಯ ಪೇಪರ್ ಬಾಕ್ಸ್ ನಲ್ಲಿ ಅವಿತುಕೊಂಡು ಆಟ ಆಡುತ್ತಾ ಕುಳಿತುಕೊಂಡಿದೆ. ಅಷ್ಟರಲ್ಲಿ ಆಗಲೇ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದರು. ಈ ವೇಳೆಗಾಗಲೇ ಮಗು ಕಂಡು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಮಗು ಸಿಕ್ಕ ಕೂಡಲೇ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

  • ಶೌಚಾಲಯದಲ್ಲಿ ಬಿಟ್ಟು ಹೋಗಿದ್ದ ಹಸುಗೂಸಿನ ರಕ್ಷಣೆ

    ಶೌಚಾಲಯದಲ್ಲಿ ಬಿಟ್ಟು ಹೋಗಿದ್ದ ಹಸುಗೂಸಿನ ರಕ್ಷಣೆ

    ಯಾದಗಿರಿ: ಶೌಚಾಲಯಲ್ಲಿ ಬಿಟ್ಟು ಹೋಗಿದ್ದ ನವಜಾತ ಶಿಶುವನ್ನ ರಕ್ಷಣೆ ಮಾಡಲಾಗಿದೆ. ಸುರಪುರ ನಗರದ ಕಬಡಗೇರಾ ಓಣಿಯ ರಾಜ್ ಅಹ್ಮದ್ ಮನೆಯ ಹತ್ತಿರದ ಸರ್ಕಾರಿ ಶೌಚಾಲಯದಯಲ್ಲಿ 2 ದಿನಗಳ ಹಿಂದೆ ಜನಿಸಿದ ನವಜಾತ ಗಂಡು ಮಗು ಪತ್ತೆಯಾಗಿತ್ತು.

    ಶಿಶುವನ್ನು ಸಾರ್ವಜನಿಕರು ಕಾಪಾಡಿ ತಮ್ಮ ಮನೆಯಲ್ಲಿ ಸಂರಕ್ಷಣೆ ಮಾಡಿದ್ದರು. ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪ ನಿರ್ದೇಕರಾದ ಪ್ರಭಾಕರ್ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ಮತ್ತು ಪೊಲೀಸರ ಜೊತೆ ಮಗುವನ್ನು ವಶಕ್ಕೆ ಪಡೆದಿದ್ದಾರೆ.

    ಸದ್ಯ ಮಗುವಿಗೆ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಳಿಕ ನಿಯಮಾನುಸಾರ ಮಗುವನ್ನು ಕಲಬುರಗಿಯ ಅಮೂಲ್ಯ ಶಿಶು ಗೃಹಕ್ಕೆ ಕಳುಹಿಸುವ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಮಕ್ಕಳ ರಕ್ಷಣಾ ಇಲಾಖೆಯವರು ತಿಳಿಸಿದ್ದಾರೆ. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.

  • ಹದಗೆಟ್ಟ ರಸ್ತೆಗಳಿಗಿಲ್ಲ ಮುಕ್ತಿ – ಅಂಬುಲೆನ್ಸ್ ನಲ್ಲೇ ಹೆರಿಗೆ ಆಗುವುದರಲ್ಲಿ ರಾಯಚೂರು ನಂ.1

    ಹದಗೆಟ್ಟ ರಸ್ತೆಗಳಿಗಿಲ್ಲ ಮುಕ್ತಿ – ಅಂಬುಲೆನ್ಸ್ ನಲ್ಲೇ ಹೆರಿಗೆ ಆಗುವುದರಲ್ಲಿ ರಾಯಚೂರು ನಂ.1

    ರಾಯಚೂರು: ಕೆಟ್ಟ ರಸ್ತೆಗಳನ್ನ ಕಂಡಾಗ ಗರ್ಭಿಣಿಯರಿಗೆ ಇಲ್ಲೆ ಹೆರಿಗೆಯಾಗಿ ಬಿಡುತ್ತೆ ಅಂತ ಉದ್ಘಾರ ತೆಗೆಯುವುದು ಸಾಮಾನ್ಯ. ಆದರೆ ಅದು ರಾಯಚೂರು ಪಾಲಿಗೆ ಬಹುತೇಕ ನಿಜವಾಗಿದೆ. ಯಾಕಂದ್ರೆ ರಾಯಚೂರಿನ ರಸ್ತೆಗಳಲ್ಲೇ ಹೆರಿಗೆಯಾಗುವುದು ಸಾಮಾನ್ಯವಾಗಿದೆ. ಈ ಅಂಕಿ ಅಂಶಗಳನ್ನ ನೋಡಿದ್ರೆ ನೀವು ಗಾಬರಿಯಾಗದೆ ಇರಲ್ಲ. ಆಸ್ಪತ್ರೆ ಸೇರುವ ಮುನ್ನವೇ ಅಂಬುಲೆನ್ಸ್ ನಲ್ಲಿ ಹೆರಿಗೆಯಾಗುವುದರಲ್ಲಿ ರಾಜ್ಯದಲ್ಲೇ ರಾಯಚೂರು ಈಗ ನಂಬರ್ 1 ಆಗಿದೆ.ಅಂಬುಲೆನ್ಸ್ ನಲ್ಲಿ ಆರೋಗ್ಯ ಕವಚ ಸಿಬ್ಬಂದಿ ಸುಲಭ ಹೆರಿಗೆ ಮಾಡುವ ಮೂಲಕ ರಾಜ್ಯದಲ್ಲಿ ನೂರಾರು ಹೆರಿಗೆಗಳನ್ನ ಮಾಡಿಸಿ ತಾಯಿ, ಮಗುವನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಲ್ಲಿ ರಾಯಚೂರು ಜಿಲ್ಲೆ ಈಗ ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ಅಂಬುಲೆನ್ಸ್ ಕೊರತೆ ಸೇರಿ ನಾನಾ ಕಾರಣಗಳಿರಬಹುದು ಅದರಲ್ಲಿ ಹದಗೆಟ್ಟ ರಸ್ತೆಗಳೇ ಪ್ರಮುಖ ಪಾತ್ರ ವಹಿಸಿವೆ.

    2020 ಜನವರಿಯಿಂದ ಸೆಪ್ಟೆಂಬರ್ ವರೆಗೆ ಅಂಬುಲೆನ್ಸ್ ನಲ್ಲಿ ಆರೋಗ್ಯ ಕವಚ ಸಿಬ್ಬಂದಿ ಇದುವರೆಗೂ ರಾಜ್ಯದಲ್ಲಿ ಒಟ್ಟು 635 ಹೆರಿಗೆಗಳನ್ನು ಮಾಡಿಸಿದ್ದಾರೆ. ಇದರಲ್ಲಿ ರಾಯಚೂರು ಜಿಲ್ಲೆಯಲ್ಲಿ 81 ಹೆರಿಗೆಗಳು ಆಗಿದ್ದು, ಅಂಬುಲೆನ್ಸ್ ನಲ್ಲಿ ಹೆರಿಗೆ ಆಗುವುದರಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಕಲಬುರಗಿಯಲ್ಲಿ 76 ಹೆರಿಗೆಗಳು ಆಗುವ ಮೂಲಕ 2ನೇ ಸ್ಥಾನದಲ್ಲಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಆಸ್ಪತ್ರೆಗಳು ಹತ್ತಿರ ಸಿಗುವುದರಿಂದ ಅಂಬುಲೆನ್ಸ್ ನಲ್ಲಿ 11 ಹೆರಿಗೆಗಳು ಮಾತ್ರ ನಡೆದಿವೆ. ಬಳ್ಳಾರಿ 54, ಬೆಳಗಾವಿ 59, ವಿಜಯಪುರ 64, ಉತ್ತರ ಕನ್ನಡ 33 ಹೆರಿಗೆಗಳು ಅಂಬುಲೆನ್ಸ್ ನಲ್ಲೇ ಆಗಿದೆ. ಕೋವಿಡ್ ಸೋಂಕಿತರಿಗೂ ಸುರಕ್ಷಿತವಾಗಿ ಅಂಬ್ಯುಲೆನ್ಸ್ ನಲ್ಲೆ ಹೆರಿಗೆಯಾಗಿವೆ. ಅದೃಷ್ಟವಶಾತ್ ಇದುವರೆಗೂ ಹೆರಿಗೆಯಾದ ಎಲ್ಲಾ ತಾಯಂದಿರು ಮಕ್ಕಳು ಆರೋಗ್ಯವಾಗಿದ್ದಾರೆ. ತಜ್ಞ ವೈದ್ಯರ ಸಲಹೆ ಮೇರೆಗೆ ಆರೋಗ್ಯ ಕವಚ ಸಿಬ್ಬಂದಿಯೇ ಹೆರಿಗೆ ಮಾಡಿಸಿರುವುದು ಪ್ರಶಂಸನೀಯವಾಗಿದೆ.

    ಗ್ರಾಮೀಣ ಪ್ರದೇಶದಲ್ಲಿ ದೂರದ ಆಸ್ಪತ್ರೆಗೆ ಗರ್ಭಿಣಿಯರನ್ನ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಗರ್ಭಿಣಿಗೆ ತೀವ್ರ ನೋವು ಕಾಣಸಿಕೊಂಡ ಸಂದರ್ಭದಲ್ಲಿ ಮಗು ಮತ್ತು ತಾಯಿಯ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಕವಚ ಸಿಬ್ಬಂದಿ ಗರ್ಭಿಣಿಯರ ಕುಟುಂಬಸ್ಥರ ಸಹಾಯದಿಂದ ಅಂಬುಲೆನ್ಸ್ ನಲ್ಲಿ ಹೆರಿಗೆ ಮಾಡಿಸುತ್ತಾರೆ. ರಾಜ್ಯದಲ್ಲಿ ಆರೋಗ್ಯ ಕವಚದಡಿ ಸರಿ ಸುಮಾರು 714 ಅಂಬುಲೆನ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 3,500 ಶುಶ್ರೂಷಕರು ಮತ್ತು ಡ್ರೈವರ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 23 ಅಂಬುಲೆನ್ಸ್ ಗಳಿದ್ದು, 90 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.

    ಆದ್ರೆ ಅಂಬುಲೆನ್ಸ್‍ನಲ್ಲೆ ಹೆರಿಗೆಗಳು ಆಗುವುದು ಅಷ್ಟು ಸುರಕ್ಷಿತವಲ್ಲ ಈ ಕುರಿತು ಸರ್ಕಾರ ಹೆಚ್ಚು ಗಮನಹರಿಸಬೇಕು ಅಂತ ಸ್ಥಳೀಯರು ಒತ್ತಾಯಿಸಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ಕವಚ ಯೋಜನೆಯ ಅಂಬುಲೆನ್ಸ್ ಗಳು ಸಮಯಕ್ಕೆ ಲಭ್ಯವಾಗುತ್ತಿದ್ದರೂ ಹೆರಿಗೆಗಳು ಮಾರ್ಗ ಮಧ್ಯದಲ್ಲಿ ಆಗುತ್ತಿವೆ. ಹೀಗಾಗಿ ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ಕಡೆ ಸರ್ಕಾರ ಹೆಚ್ಚು ಒತ್ತುಕೊಡಬೇಕಿದೆ.