Tag: Baby

  • ಅಕ್ರಮ ಸಂಬಂಧದಿಂದ ಜನಿಸಿದ ಮಗುವನ್ನು ದಾರಿಯಲ್ಲೇ ಬಿಟ್ಟು ಹೋದ ಜೋಡಿ!

    ಅಕ್ರಮ ಸಂಬಂಧದಿಂದ ಜನಿಸಿದ ಮಗುವನ್ನು ದಾರಿಯಲ್ಲೇ ಬಿಟ್ಟು ಹೋದ ಜೋಡಿ!

    – ರಕ್ಷಣೆಯ ನೆಪದಲ್ಲಿ ಬಂದು ಪೊಲೀಸರ ಬಲೆಗೆ ಬಿದ್ರು

    ಅಹಮದಾಬಾದ್: ಅಕ್ರಮಸಂಬಂಧದಿಂದ ಜನಿಸಿದ ಮಗುವನ್ನು ಬಿಟ್ಟುಹೋಗಿ ಬಳಿಕ ಮಗುವನ್ನು ರಕ್ಷಿಸುವ ನೆಪದಲ್ಲಿ ಜೋಡಿಯೊಂದು ಬಂದು ಪೊಲೀಸರ ಅತಿಥಿಯಾಗಿರುವ ಘಟನೆ ಅಹಮದಾಬಾದ್‍ನಲ್ಲಿ ನಡೆದಿದೆ.

    ಸಫ್ರುದ್ದೀನ್ ಶೇಖ್ ನವಜಾತ ಶಿಶುವಿನ ತಂದೆ. ಈತ ತನ್ನದೇ ಮಗುವನ್ನು ದಾರಿಯಲ್ಲಿ ಬಿಟ್ಟು ಹೋಗಿ ನಂತರ ಮಗುವನ್ನು ರಕ್ಷಣೆ ಮಾಡುವ ನೆಪದಲ್ಲಿ ಬಂದಿದ್ದಾನೆ. ಈ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

    ಆಟೋ ಚಾಲಕನಾಗಿರುವ ಸಫ್ರುದ್ದೀನ್ ಶೇಖ್ ವರ್ಷದ ಹಿಂದೆ ಮದುವೆಯಾಗಿದ್ದನು. ಆದರೆ ಈತ ಇನ್ನೊಬ್ಬ ಯುವತಿಯೊಂದಿಗೆ ಸಂಬಂಧದಲ್ಲಿದ್ದನು. ಈ ಇಬ್ಬರ ಅಕ್ರಮ ಸಂಬಂಧದಲ್ಲಿ ಮಗು ಜನಿಸಿದೆ. ಅಲ್ಲದೆ ತಮ್ಮ ಸಂಬಂಧ ಯಾರಿಗೂ ತಿಳಿಯಬಾರದು ಎಂದು ಮಗುವನ್ನು ದಾರಿಯಲ್ಲಿ ಬಿಟ್ಟು ಹೋಗಿದ್ದಾರೆ.

    ನಂತರ ಸ್ವಲ್ಪ ಸಮಯದ ಬಳಿಕ ಸಫ್ರುದ್ದೀನ್ ಶೇಖ್ ಪೊಲೀಸರಿಗೆ ಫೋನ್ ಮಾಡಿ ನನಗೆ ಮಾರ್ಗ ಮಧ್ಯದಲ್ಲಿ ಒಂದು ಮಗು ಸಿಕ್ಕಿದೆ. ನಾಯಿಗಳಿಂದ ರಕ್ಷಣೆ ಮಾಡಿದ್ದೇನೆ ಎಂದು ಹೇಳಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಈತನ ಮೇಲೆ ಅನುಮಾನಗೊಂಡು ವಿಚಾರಿಸಿದಾಗ ತನ್ನದೇ ಮಗು ಎಂಬ ಸತ್ಯವನ್ನು ಬಾಯಿಬಿಟ್ಟಿದ್ದಾನೆ.

  • ಬಟ್ಟೆಯಲ್ಲಿ ಸುತ್ತಿ ನವಜಾತ ಶಿಶುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟುಹೋದ ತಾಯಿ

    ಬಟ್ಟೆಯಲ್ಲಿ ಸುತ್ತಿ ನವಜಾತ ಶಿಶುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟುಹೋದ ತಾಯಿ

    ಗದಗ: ನವಜಾತ ಶಿಶುವೊಂದನ್ನು ಬಟ್ಟೆನಲ್ಲಿ ಸುತ್ತಿ ಬಸ್ ನಿಲ್ದಾಣ ಬಳಿ ಇಟ್ಟು ಹೋಗಿರುವ ಅಮಾನವೀಯ ಘಟನೆ ಜಿಲ್ಲೆಯ ಗಜೇಂದ್ರಗಡ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಗಜೇಂದ್ರಗಡ ಬಸ್ ನಿಲ್ದಾಣ ಗೇಟ್ ಒಳಭಾಗದ ಬಳಿ ಈ ನವಜಾತ ಶಿಶು ಪತ್ತೆಯಾಗಿದೆ. ಇದು ಗಂಡು ಶಿಶುವಾಗಿದ್ದು, ಯಾರೋ ಪಾಪಿಗಳು ಬಟ್ಟೆಯಲ್ಲಿ ಸುತ್ತಿಟ್ಟು ನಾಪತ್ತೆಯಾಗಿದ್ದಾರೆ. ನಂತರ ಹಸಿವಿನಿಂದ ನರಳಾಡುತ್ತಿದ್ದ ಹಸುಗೂಸಿನ ಧ್ವನಿ ಕೇಳಿ ಸಾರ್ವಜನಿಕರು ಗಮನಿಸಿ ಕೂಡಲೇ ಗಜೇಂದ್ರಗಡ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಪೊಲೀಸರು ಸ್ಥಳಕ್ಕೆ ಆಗಮಿಸಿ ಶಿಶುವನ್ನು ರಕ್ಷಣೆ ಮಾಡಿ ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಸರ್ಕಾರಿ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದು, ಗಜೇಂದ್ರಗಡ ಪೊಲೀಸರು ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ತೆಂಗಿನ ಚಿಪ್ಪಿನಲ್ಲಿ ಆಟವಾಡ್ತಿದ್ದ ಬಾಲಕಿ ನೀರಿನ ತೊಟ್ಟಿಗೆ ಬಿದ್ದು ಸಾವು

    ತೆಂಗಿನ ಚಿಪ್ಪಿನಲ್ಲಿ ಆಟವಾಡ್ತಿದ್ದ ಬಾಲಕಿ ನೀರಿನ ತೊಟ್ಟಿಗೆ ಬಿದ್ದು ಸಾವು

    ಹಾಸನ: ತೆಂಗಿನ ಚಿಪ್ಪು ಹಿಡಿದು ನೀರಿನಲ್ಲಿ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕಿಯನ್ನು ಶ್ರೇಯಾ(4) ಎಂದು ಗುರುತಿಸಲಾಗಿದೆ. ಈಕೆ ಚನ್ನರಾಯಪಟ್ಟಣ ತಾಲೂಕಿನ ಬಿಳಿಕೆರೆ ಗ್ರಾಮದ ನಿವಾಸಿ ಧರಣೇಶ್ ಹಾಗೂ ಕುಮಾರಿ ದಂಪತಿ ಪುತ್ರಿ.

    ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಶ್ರೇಯಾ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದಳು. ಕಂದಮ್ಮ ಆಟವಾಡುತ್ತಿರುವುದನ್ನು ಗಮನಿಸಿಕೊಂಡ ಪೋಷಕರು ಕೂಡ ಕೆಲಸದಲ್ಲಿ ತೊಡಗಿದ್ದರು. ಆದರೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ರೇಯಾ ಎಲ್ಲೂ ಕಾಣಿಸುತ್ತಿರಲಿಲ್ಲ.

    ಮಗು ಕಾಣಿಸದಿದ್ದಾಗ ಗಾಬರಿಗೊಂಡ ಪೋಷಕರು ಸುತ್ತಮುತ್ತ ಹುಡುಕಾಟ ಆರಂಭಿಸಿದ್ದಾರೆ. ಕೊನೆಗೆ ಮನೆಯ ಹಿತ್ತಲಿನಲ್ಲಿರುವ ಬಾತ್ ರೂಮ್ ನಲ್ಲಿ ಹುಡುಕಿದಾಗ ಮಗುವಿನ ಮೃತದೇಹ ನೀರಿನ ತೊಟ್ಟಿಯಲ್ಲಿ ತೇಲುತ್ತಿತ್ತು. ತೆಂಗಿನ ಚಿಪ್ಪಿನಲ್ಲಿ ಆಟವಾಡುತ್ತಿದ್ದ ಶ್ರೇಯ ಅದರಲ್ಲಿ ನೀರು ತರಲು ಹೋದಾಗ ತೊಟ್ಟಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

    ಇತ್ತ ಕಂದನ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದ್ದು, ಸಂಜೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

  • ಹಾಸಿಗೆಯಲ್ಲಿ ಶೌಚ ಮಾಡಿದ್ದಕ್ಕೆ 5ರ ಮಗುವನ್ನ ಕೊಂದ್ಳು

    ಹಾಸಿಗೆಯಲ್ಲಿ ಶೌಚ ಮಾಡಿದ್ದಕ್ಕೆ 5ರ ಮಗುವನ್ನ ಕೊಂದ್ಳು

    – ಮಗಳ ಕೃತ್ಯಕ್ಕೆ ತಂದೆಯ ಸಾಥ್
    – ಚೀಲದಲ್ಲಿ ಹೆಣ ಒಯ್ದು ಅರಣ್ಯದಲ್ಲಿ ಹೂತರು

    ಲಕ್ನೋ: ಪ್ರತಿನಿತ್ಯ ಹಾಸಿಗೆಯಲ್ಲಿ ಶೌಚ ಮಾಡಿದ 5 ವರ್ಷದ ಮಗುವನ್ನ ದೊಡ್ಡಮ್ಮ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಫರೂಖಾಬಾದ್ ನಲ್ಲಿ ನಡೆದಿದೆ. ಮಗುವನ್ನ ಕೊಂದ ದೊಡ್ಡಮ್ಮ ಮತ್ತು ಆಕೆಯ ಕೃತ್ಯಕ್ಕೆ ಸಾಥ್ ನೀಡಿದ ತಂದೆಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಐದು ವರ್ಷದ ಯಶ್ ಪ್ರತಾಪ್ ಕೊಲೆಯಾದ ಮಗು. ತಾಯಿ ಇಲ್ಲದ ಕಾರಣ ಯಶ್ ತಂದೆ ರಾಮ್ ಬಹದ್ದೂರ್ ಮಗನನ್ನು ಸೋದರನ ಮನೆಯಲ್ಲಿ ಬಿಟ್ಟಿದ್ದರು. ಓರ್ವ ಮಗಳ ಜೊತೆಯಲ್ಲಿ ಯಶ್ ಜುಜುಟಾ ಗ್ರಾಮದಲ್ಲಿ ವಾಸವಾಗಿದ್ದರು. ದೊಡ್ಡಮ್ಮನ ಆರೈಕೆಯಲ್ಲಿ ಮಗ ಚೆನ್ನಾಗಿ ಬೆಳೆಯುತ್ತಾನೆಂಬ ಭರವಸೆಯಲ್ಲಿ ಯಶ್ ತಂದೆ ನಂಬಿದ್ದರು. ಆದ್ರೆ ರಾಕ್ಷಸಿ ದೊಡ್ಡಮ್ಮ ಕ್ಷುಲ್ಲಕ ಕಾರಣಕ್ಕೆ ಮಗುವಿನ ಉಸಿರನ್ನೇ ನಿಲ್ಲಿಸಿದ್ದಾಳೆ.

    ಫರೂಖಾಬದ್ ನಗರದ ನ್ಯೂ ಫೌಜಿ ಕಾಲೋನಿಯ ದೊಡ್ಡಪ್ಪ-ದೊಡ್ಡಮ್ಮನೊಂದಿಗೆ ಯಶ್ ವಾಸವಾಗಿದ್ದನು. ಆದ್ರೆ ಯಶ್ ರಾತ್ರಿ ಹಾಸಿಗೆಯಲ್ಲಿಯೇ ಶೌಚ ಮಾಡುತ್ತಿದ್ದನು. ಬೆಳಗ್ಗೆ ದೊಡ್ಡಮ್ಮನಿಗೆ ಇದನ್ನ ಸ್ವಚ್ಛಗೊಳಿಸುವುದು ದೊಡ್ಡ ಕೆಲಸವಾಗಿತ್ತು. ಫೆಬ್ರವರಿ 6ರಂದು ಎಂದಿನಂತೆ ಯಶ್ ಹಾಸಿಗೆಯಲ್ಲಿಯೇ ಶೌಚ ಮಾಡಿದ್ದನು. ಇದರಿಂದ ರಾಕ್ಷಸಿ ರೂಪ ತಾಳಿದ ದೊಡ್ಡಮ್ಮ ಮಗುವನ್ನ ಮನಸೋಯಿಚ್ಛೆ ಥಳಿಸಿದ್ದಾಳೆ. ಪರಿಣಾಮ ಯಶ್ ಸಾವನ್ನಪ್ಪಿದ್ದಾನೆ.

    ಮಗು ಸಾವನ್ನಪ್ಪುತ್ತಲೇ ಮಹಿಳೆ ತನ್ನ ತಂದೆಗೆ ವಿಷಯ ತಿಳಿಸಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾಳೆ. ಮಗಳ ಸಹಾಯಕ್ಕೆ ಬಂದ ವೃದ್ಧ, ಶವವನ್ನ ಬ್ಯಾಗಿನಲ್ಲಿ ತುಂಬಿಕೊಂಡು ಅರಣ್ಯ ಪ್ರದೇಶದಲ್ಲಿ ಹೂತು ಹಾಕಿ ಬಂದಿದ್ದನು. ಸಂಜೆ ಯಶ್ ಕಾಣಿಸುತ್ತಿಲ್ಲ ಎಂದು ದೊಡ್ಡಮ್ಮ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

    ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಆರಂಭದಲ್ಲಿಯೇ ದೊಡ್ಡಮ್ಮಳ ಮೇಲೆ ಅನುಮಾನ ವ್ಯಕ್ತಪಡಿಸಿದರು. ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದಾಗ ಸತ್ಯ ಬಾಯಿ ಬಿಟ್ಟದ್ದಾಳೆ. ಮಹಿಳೆ ಹೇಳಿಕೆಯನ್ನಾಧಾರಿಸಿ ಆಕೆಯ ತಂದೆಯನ್ನ ಸಹ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಬೇರೆಯವನ ಜೊತೆ ಟಾಕಿಂಗ್ – ಪತಿ ಪ್ರಶ್ನಿಸಿದ್ದಕ್ಕೆ ಮಗನನ್ನೇ ಕೊಂದ ತಾಯಿ

    ಬೇರೆಯವನ ಜೊತೆ ಟಾಕಿಂಗ್ – ಪತಿ ಪ್ರಶ್ನಿಸಿದ್ದಕ್ಕೆ ಮಗನನ್ನೇ ಕೊಂದ ತಾಯಿ

    ಹಾಸನ : ಬೇರೊಬ್ಬ ವ್ಯಕ್ತಿಯ ಜೊತೆ ಫೋನ್ ನಲ್ಲಿ ಮಾತನಾಡಿದ್ದನ್ನು ಪತಿ ಪ್ರಶ್ನಿಸಿದ್ದಕ್ಕೆ ಸ್ವಂತ ಮಗನನ್ನೇ ತಾಯಿ ಕೊಲೆಮಾಡಿದ ಘಟನೆ ನುಗ್ಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಕೊಲೆ ಮಾಡಿದ ಆರೋಪಿಯನ್ನು ಸುಮಾ ಎಂದು ಗುರುತಿಸಲಾಗಿದೆ. ಸುಮಾ ಚನ್ನರಾಯಪಟ್ಟಣ ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದು, ಜನವರಿ 19ರಂದು ಪರ ಪುರುಷನೊಂದಿಗೆ ಫೋನ್‍ನಲ್ಲಿ ಮಾತನಾಡಿದ ಕಾರಣಕ್ಕೆ ಪತಿ ನಂಜಪ್ಪ ಮತ್ತು – ಪತ್ನಿ ಸುಮಾ ನಡುವೆ ಗಲಾಟೆ ನಡೆದಿದೆ.

    ಬಳಿಕ ಬೇಸರಗೊಂಡ ನಂಜಪ್ಪ ತಮ್ಮ ಜಮೀನಿನ ಬಳಿ ಹೋಗಿದ್ದರು. ಸ್ವಲ್ಪ ಸಮಯದ ನಂತರ ಮಗ ತನ್ಮಯ್ ವಾಂತಿ ಮಾಡಿಕೊಂಡು ಅಸ್ವಸ್ಥನಾಗಿದ್ದಾನೆ ಎಂದು ಗಂಡನಿಗೆ ಸುಮಾ ಬಂದು ತಿಳಿಸಿದ್ದಾರೆ. ನಂತರ ತನ್ಮಯ್‍ನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವಿಗೀಡಾಗಿದೆ.

    ಮಗನ ಸಾವಿನ ಬಗ್ಗೆ ಅನುಮಾನದಿಂದ ನಂಜಪ್ಪ ಜ. 21ರಂದು ನುಗ್ಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಜ. 25ರಂದು ಮೃತ ಮಗುವಿನ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಯಲ್ಲಿ ತಲೆಗೆ ಬಿದ್ದ ಬಲವಾದ ಪೆಟ್ಟಿನಿಂದ ಮಗು ಸಾವಿಗೀಡಾಗಿದೆ ಎಂದು ತಿಳಿದುಬಂದಿದೆ. ನಂತರ ತಾಯಿ ಸುಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

    ಈ ವೇಳೆ ಪೊಲೀಸರ ಬಳಿ ಮಗುವನ್ನು ಕೊಲೆ ಮಾಡಿರುವುದಾಗಿ ತಾಯಿ ಸುಮಾ ಒಪ್ಪಿಕೊಂಡಿದ್ದಾಳೆ. ಪ್ರಕರಣ ಸಂಬಂಧ ಕೇಸು ದಾಖಲಿಸಿಕೊಂಡಿರುವ ಚನ್ನರಾಯಪಟ್ಟಣದ ನುಗ್ಗೆಹಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿಗಳು ತನಿಖೆ ನಡೆಸಿ ಆರೋಪಿ ಸುಮಾಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

  • ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ – ಟಂಟಂ ಚಾಲಕ ಅರೆಸ್ಟ್

    ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ – ಟಂಟಂ ಚಾಲಕ ಅರೆಸ್ಟ್

    – ಮಗುವನ್ನು ಹಿಡ್ಕೊಂಡು ಹೊಲದ ಕಡೆ ಓಡೋದ ಚಾಲಕ

    ರಾಯಚೂರು: ಸಹಾಯ ಕೇಳಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ಮೇಲೆ ಚಾಲಕ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರ್ಜಾಪುರ ಬಳಿ ಘಟನೆ.

    ಟಂಟಂ ವಾಹನ ಚಾಲಕ ಬಾಗಲಕೋಟೆ ಮೂಲದ ಶಂಕರಪ್ಪ ಮುಳಗುಂದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದಾನೆ. ಮೂರು ವರ್ಷದ ಮಗುವನ್ನ ಆಸ್ಪತ್ರೆಗೆ ತೋರಿಸಲು ಲಿಂಗಸುಗೂರಿಗೆ ತೆರಳುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಯತ್ನ ನಡೆದಿದೆ.

    ಮಾರ್ಗ ಮಧ್ಯೆ ಮೂತ್ರ ವಿಸರ್ಜನೆ ನೆಪದಲ್ಲಿ ವಾಹನ ನಿಲ್ಲಿಸಿ ಮಹಿಳೆ ಜೊತೆಗಿದ್ದ ಮಗುವನ್ನು ಕಸಿದುಕೊಂಡು ಜೋಳದ ಹೊಲದತ್ತ ಚಾಲಕ ಓಡಿದ್ದಾನೆ. ಮಗುವನ್ನು ಆತನಿಂದ ಬಿಡಿಸಿಕೊಳ್ಳಲು ತೆರಳಿದಾಗ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಅಂತ ಮಹಿಳೆ ಆರೋಪಿಸಿದ್ದಾಳೆ.

    ರಸ್ತೆಯಲ್ಲಿ ತೆರಳುತ್ತಿದ್ದ ಜನ ಕೂಗಾಟದ ಶಬ್ದ ಕೇಳಿ ಮಹಿಳೆಯನ್ನ ರಕ್ಷಣೆ ಮಾಡಿದ್ದಾರೆ. ತಪ್ಪಿಸಿಕೊಂಡು ಹೋಗುತ್ತಿದ್ದ ಚಾಲಕನನ್ನ ವಾಹನ ಸಮೇತ ಹಿಡಿದು ಸಾರ್ವಜನಿಕರು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ತಡ ರಾತ್ರಿ ಪ್ರಕರಣ ದಾಖಲಾಗಿದ್ದಕ್ಕೆ ಮಹಿಳೆ ಪೊಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

    ಆರೋಪಿ ಬಾಗಲಕೋಟೆಯ ಶಂಕರಪ್ಪ ಮುಳಗುಂದ ವಿರುದ್ಧ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ನೀರಿನ ಸಂಪಿಗೆ ಬಿದ್ದು ಪುಟ್ಟ ಕಂದಮ್ಮ ದುರ್ಮರಣ

    ನೀರಿನ ಸಂಪಿಗೆ ಬಿದ್ದು ಪುಟ್ಟ ಕಂದಮ್ಮ ದುರ್ಮರಣ

    ಮೈಸೂರು: ನೀರಿನ ಸಂಪಿಗೆ ಬಿದ್ದು ಪುಟ್ಟ ಕಂದಮ್ಮ ಸಾವನ್ನಪ್ಪಿದ ಘಟನೆ ಹುಣಸೂರು ತಾಲೂಕು ತೆಂಕಲಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಮೃತ ದುರ್ದೈವಿ ಮಗುವನ್ನು ಒಂದೂವರೆ ವರ್ಷದ ದಯಾನಂದ ಎಂದು ಗುರುತಿಸಲಾಗಿದೆ. ಈತ ತೆಂಕಲಕೊಪ್ಪಲಿನ ನಟರಾಜ್ ಎಂಬವರ ಪುತ್ರ. ಪುಟ್ಟ ಕಂದಮ್ಮ ನಿರ್ಮಾಣ ಹಂತದಲ್ಲಿದ್ದ ಮನೆ ಮುಂದಿನ ಸಂಪಿಗೆ ಬಿದ್ದು ಮೃತಪಟ್ಟಿದೆ.

    ದಯಾನಂದ ಮನೆ ಮುಂದೆ ತನ್ನ ಅಕ್ಕನೊಂದಿಗೆ ಆಟವಾಡುತ್ತಿದ್ದ. ಆದರೆ ಅಕ್ಕ ಮನೆ ಒಳಗೆ ಹೋಗಿ ಬರುವಷ್ಟರಲ್ಲಿ ಮಗು ನಾಪತ್ತೆಯಾಗಿದ್ದ. ಈ ವೇಳೆ ಹುಡುಕಾಡಿದಾಗ ಮಗುವಿನ ಮೃತದೇಹ ನೀರಿನ ಸಂಪಿನಲ್ಲಿ ಪತ್ತೆಯಾಗಿದೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

    ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 5 ಮಂದಿಯ ಬಾಳಿಗೆ ಬೆಳಕಾದ 20 ತಿಂಗಳ ಹೆಣ್ಣು ಮಗು!

    5 ಮಂದಿಯ ಬಾಳಿಗೆ ಬೆಳಕಾದ 20 ತಿಂಗಳ ಹೆಣ್ಣು ಮಗು!

    – 5 ಮಂದಿ ರೋಗಿಗಳ ಜೀವ ಉಳಿಸಿದ ದೇವತೆ
    – ಬಾಲ್ಕನಿಯಿಂದ ಬಿದ್ದ ಮೃತಪಟ್ಟಿದ್ದ ಧನಿಷ್ಠಾ

    ನವದೆಹಲಿ: 20 ತಿಂಗಳ ಪುಟ್ಟ ಕಂದಮ್ಮ 5 ಮಂದಿಯ ಪ್ರಾಣ ಉಳಿಸುವ ಮೂಲಕ ಭಾರತದ ಅತ್ಯಂತ ಕಿರಿಯ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

    ಧನಿಷ್ಠಾ ತಾನು ಸಾವಿಗೀಡಾದರೂ 5 ಮಂದಿಯ ಪ್ರಾಣ ಉಳಿಸಿದ ಪುಟ್ಟ ಕಂದಮ್ಮ. ನವದೆಹಲಿಯ ರೋಹಿಣಿ ಮೂಲದವಳಾಗಿರುವ ಈಕೆ, ಮನೆಯ ಬಾಲ್ಕನಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದಳು. ಪ್ರಜ್ಞಾಹೀನಳಾಗಿದ್ದ ಆಕೆಯನ್ನು ಪೋಷಕರು ಕೂಡಲೇ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಪುಟ್ಟ ಕಂದಮ್ಮನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಆಕೆ ಬದುಕುಳಿಯುವುದು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ದೇಹದ ಅಂಗಾಂಗಗಳನ್ನು ದಾನ ಮಾಡಲು ಹೆತ್ತವರು ನಿರ್ಧಾರ ಮಾಡಿದರು. ಅಂತೆಯೇ ಪುಟ್ಟ ಕಂದಮ್ಮ ಸದ್ಯ 5 ಮಂದಿ ರೋಗಿಗಳ ಪ್ರಾಣ ಉಳಿಸಿದ ದೇವತೆಯಾಗಿದ್ದಾಳೆ.

    ಪುಟಾಣಿಯ ಹೃದಯ, ಲಿವರ್ ಹಾಗೂ ಎರಡೂ ಕಿಡ್ನಿಗಳು ಮುಂತಾದ ದೇಹದ ಮುಖ್ಯವಾದ ಅಂಗಾಂಗಗಳನ್ನು ಆಸ್ಪತ್ರೆ ಸಿಬ್ಬಂದಿ 5 ಮಂದಿ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಜೀವ ಉಳಿಸಿದ್ದಾರೆ.

    ಜನವರಿ 8 ರಂದು ಧನಿಷ್ಠಾ ಆಟವಾಡುತ್ತಿದ್ದ ಸಂದರ್ಭದಲ್ಲಿ ಮನೆಯ ಬಾಲ್ಕನಿಯ ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಳು. ಗಂಭೀರ ಗಾಯಗೊಂಡಿದ್ದ ಆಕೆ ಜನವರಿ 11ರಂದು ಮೃತಪಟ್ಟಿದ್ದಾಳೆ. ಅವಳ ದೇಹದ ಅಂಗಾಂಗಗಳು ಅತ್ಯುತ್ತಮ ಸ್ಥಿತಿಯಲ್ಲಿದ್ದವು. ತಮ್ಮ ಮಗಳನ್ನು ಮತ್ತೆ ಎಂದಿಗೂ ಕಾಣದೇ ಇರುವುದನ್ನು ಮನಗಂಡ ಪೋಷಕರಾದ ಆಶಿಶ್ ಕುಮಾರ್ ಹಾಗೂ ಬಬಿತಾ ಆಕೆಯ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದರು.

    ನಾವು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಅಂಗಾಂಗಗಳ ಅವಶ್ಯಕತೆ ಇರುವ ಅನೇಕ ರೋಗಿಗಳನ್ನು ಭೇಟಿ ಮಾಡಿದ್ದೇವೆ. ಹೀಗಾಗಿ ನಾವು ನಮ್ಮ ಮಗುವನ್ನು ಕಳೆದುಕೊಂಡರೂ ಆಕೆ ಬದುಕು ಮುಂದುವರಿಸುತ್ತಾಳೆ. ಈ ಮೂಲಕ ಆಕೆ ಬೇರೆಯವರಿಗೆ ಜೀವ ನೀಡುತ್ತಾಳೆ ಎಂದು ತಂದೆ ಆಶಿಶ್ ಕುಮಾರ್ ಗದ್ಗದಿತರಾದರು.

    ಪುಟ್ಟ ಕಂದಮ್ಮನ ಕುಟುಂಬದ ಈ ಉದಾತ್ತ ಕಾರ್ಯವು ನಿಜವಾಗಿಯೂ ಪ್ರಶಂಸನೀಯವಾಗಿದೆ. ಈ ಮಹತ್ತರ ಕಾರ್ಯ ಇತರರನ್ನು ಪ್ರೇರೇಪಿಸಬೇಕು. ನಮ್ಮ ದೇಶದಲ್ಲಿ ಅಂಗಾಂಗ ದಾನ ಮಾಡುವುದು ಅತ್ಯಂತ ವಿರಳ. ಅಂಗಾಂಗಗಳ ಕೊರತೆಯಿಂದ ಪ್ರತಿ ವರ್ಷ ಸರಾಸರಿ ಐದು ಲಕ್ಷ ಭಾರತೀಯರು ಸಾಯುತ್ತಾರೆ ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ಅಧ್ಯಕ್ಷ ಡಿ.ಎಸ್ ರಾಣಾ ತಿಳಿಸಿದ್ದಾರೆ.

  • ನಡುಗುವ ಚಳಿಯಲ್ಲಿ ಬಾಣಂತಿ, ಮಗು – ರಾಮನಗರದಲ್ಲಿ ಮೂಢ ನಂಬಿಕೆ

    ನಡುಗುವ ಚಳಿಯಲ್ಲಿ ಬಾಣಂತಿ, ಮಗು – ರಾಮನಗರದಲ್ಲಿ ಮೂಢ ನಂಬಿಕೆ

    ರಾಮನಗರ: 2021ನೇ ವರ್ಷ ಶುರುವಾಗಿದೆ. ಆದ್ರೆ 21ನೇ ಶತಮಾನದಲ್ಲೂ ಮೂಢನಂಬಿಕೆಗಳಿಗೆ ಕೊನೆ ಇಲ್ಲವಾಗಿದೆ. ಹೆರಿಗೆಯನ್ನು ಸೂತಕವೆಂದು ಭಾವಿಸಿ ಬಾಣಂತಿಯನ್ನು ಊರ ಹೊರಗೆ ಗುಡಿಸಲಲ್ಲಿ ಇರಿಸುವ ಸಂಪ್ರದಾಯ ಇನ್ನೂ ರಾಮನಗರದಲ್ಲಿ ಜೀವಂತವಾಗಿದೆ.

    ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯನ್ನು ಗ್ರಾಮದ ಹೊರಗೆ ಸಣ್ಣ ಗುಡಿಸಲು ಮಾಡಿ ಅದರಲ್ಲಿ ವಾಸಿಸಲು ಹೇಳಿದ್ದಾರೆ. ನಡುಗುವ ಚಳಿಯಲ್ಲಿ ಬಾಣಂತಿ ಪರದಾಡುತ್ತಿದ್ದಾಳೆ. ಮಾಗಡಿ ತಾಲೂಕಿನ ಗೊಲ್ಲರಹಟ್ಟಿಯ ಕೋಮಲಾ ಅವರು ಗುಡಿಸಲಲ್ಲಿ ವಾಸಿಸುತ್ತಿದ್ದಾರೆ. 2 ವರ್ಷದ ಹಿಂದೆ ಚಂದ್ರಯ್ಯ ಜೊತೆ ಇವರ ಮದುವೆ ಆಗಿತ್ತು. ಸೂತಕ ದೂರ ಮಾಡಲು ಬಾಣಂತಿ ಮತ್ತು ಮಗುವನ್ನು ಒಂದೂವರೆ ತಿಂಗಳು ಮನೆಯಿಂದ ದೂರ ಇಡಬೇಕು, ಇಲ್ಲವಾದ್ರೆ ಹುಲಿಗಪ್ಪ, ಜಿಂಜಪ್ಪ ದೇವರು ತಮ್ಮ ಮನೆತನಕ್ಕೆ ಕೆಡಕು ಮಾಡುತ್ತಾರೆ ಎನ್ನುವುದು ನಂಬಿಕೆ.

    ಊಟ ತಂದು ಗುಡಿಸಿಲಿನಿಂದ ದೂರವೇ ಇಟ್ಟುಹೋಗುತ್ತಾರೆ. ಯಾರೂ ಆಕೆಯನ್ನು ಮುಟ್ಟುವುದಿಲ್ಲ. ಆ ಚಿಕ್ಕ ಗುಡಿಸಿನಲ್ಲಿ ಬಾಣಂತಿ ವಾಸ ಮಾಡಿ 15 ದಿವಸ ಕಳೆದಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿಯಿದ್ದರೂ ಕುಟುಂಬಸ್ಥರಿಗೆ ತಿಳುವಳಿಕೆ ನೀಡುವ ಪ್ರಯತ್ನ ಮಾಡಿಲ್ಲ.

  • ಇಯರ್ ಫೋನ್ ವೈರ್ ಬಿಗಿದು ನವಜಾತ ಶಿಶುವಿನ ಕೊಂದ ತಾಯಿ!

    ಇಯರ್ ಫೋನ್ ವೈರ್ ಬಿಗಿದು ನವಜಾತ ಶಿಶುವಿನ ಕೊಂದ ತಾಯಿ!

    – ಮೊದಲ ಮಗುವಾದ ಕೂಡ್ಲೆ ಗರ್ಭಿಣಿಯಾಗಿದ್ದರಿಂದ ಕೊಲೆ

    ಮಂಗಳೂರು: ಪಾಪಿ ತಾಯಿಯೊಬ್ಬಳು ನವಜಾತ ಶಿಶುವನ್ನು ಇಯರ್ ಫೋನ್ ವೈರ್‍ನಿಂದ ಬಿಗಿದು ಕೊಲೆಗೈದ ಘಟನೆ ಕಾಸರಗೋಡಿನ ಬದಿಯಡ್ಕದಲ್ಲಿ ನಡೆದಿದೆ.

    ಪಾಪಿ ತಾಯಿಯನ್ನು ಶಾಹಿನಾ ಎಂದು ಗುರುತಿಸಲಾಗಿದ್ದು, ಈಕೆ ಚೆದಕ್ಕೋಲ್ ನಿವಾಸಿ. ಘಟನೆಗೆ ಸಂಬಂಧಿಸಿದಂತೆ ಸದ್ಯ ಪಾಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

    2020ರ ಡಿಸೆಂಬರ್ 15ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂದು ಶಾಹಿನಾಗೆ ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ದೌಡಾಯಿಸಿದ್ದಳು. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು, ಕೆಲ ಗಂಟೆಗಳ ಹಿಂದೆ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಹಿನಾ ಕುಟುಂಬಸ್ಥರು ಮನೆಯಲ್ಲಿ ಹುಡುಕಾಡಿದಾಗ ಮಗುವಿನ ಮೃತದೇಹ ಸಿಕ್ಕಿದೆ. ಮಂಚದ ಕೆಳಗೆ ಬಟ್ಟೆಯಿಂದ ಸುತ್ತಿದ್ದ ರೀತಿಯಲ್ಲಿ ಮಗುವಿನ ದೇಹ ಪತ್ತೆಯಾಗಿದೆ.

    ಈ ಸಂಬಂಧ ಆರೋಪಿ ಶಾಹಿನಾಳನ್ನು ತನಿಖೆ ನಡೆಸಿದಾಗ ಆಕೆ, ತಾನು ಮಗುವನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮೊದಲ ಮಗುವಾದ ಕೂಡಲೇ ಮತ್ತೆ ಗರ್ಭಿಣಿಯಾಗಿದ್ದರಿಂದ ಬೇರಸಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾಳೆ. ಅಲ್ಲದೆ ಈಕೆ ಗರ್ಭಿಣಿಯಾಗಿರುವುದು ಆಕೆಯ ಪತಿ ಕುಟುಂಬಸ್ಥರಿಗೆ ತಿಳಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 15ರಂದು ಮಗು ಹುಟ್ಟಿದ ಕೂಡಲೇ ಅದನ್ನು ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ.

    ಇತ್ತ ಮಗುವಿನ ಮೃತದೇಹವನ್ನು ಕಣ್ಣೂರಿನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ವರದಿಯಲ್ಲಿ ಮಗುವನ್ನು ದಪ್ಪವಾದ ಕೇಬಲ್ ನಿಂದ ಬಿಗಿದು ಕೊಲೆ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ತಾಯಿಯನ್ನು ವಿಚಾರಣೆ ನಡೆಸಿದಾಗ ಆಕೆ ಮೊಬೈಲ್ ಇಯರ್ ಫೋನ್ ವೈರ್ ಬಳಸಿ ಹತ್ಯೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾಳೆ.