Tag: Baby

  • ಮಗು ಸೇರಿ ಇಬ್ಬರು ಸಜೀವದಹನ – ಓರ್ವನ ಸ್ಥಿತಿ ಗಂಭೀರ

    ಮಗು ಸೇರಿ ಇಬ್ಬರು ಸಜೀವದಹನ – ಓರ್ವನ ಸ್ಥಿತಿ ಗಂಭೀರ

    – ಹಲವು ಅನುಮಾನಗಳಿಗೆ ಕಾರಣವಾಯ್ತು ಪ್ರಕರಣ

    ಮಂಡ್ಯ: 4 ವರ್ಷದ ಮಗು ಸೇರಿ ಇಬ್ಬರು ಸಜೀವದಹನ ಆಗಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಅಗಚಹಳ್ಳಿ ಗ್ರಾಮದಲ್ಲಿ ನಡೆದಿದೆ. ದುರ್ಘಟನೆಯಲ್ಲಿ ತನ್ವಿತ್(4), ದೀಪಕ್(33) ಸಾವನ್ನಪ್ಪಿದ್ದಾರೆ. ಮಗುವಿನ ತಂದೆ ಭರತ್ ದೇಹ ಶೇ.90 ರಷ್ಟು ಸುಟ್ಟಿರುವುದರಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

    ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯವರಾದ ಭರತ್ ನಾಗಮಂಗಲದಲ್ಲಿ ಪೇಂಟಿಂಗ್ ವೃತ್ತಿ ಮಾಡಿಕೊಂಡಿದ್ದರು. ಕಳೆದ 5ವರ್ಷಗಳ ಹಿಂದೆ ಮದುವೆಯಾಗಿದ್ದ ಭರತ್, ಇತ್ತೀಚೆಗೆ ಪತ್ನಿ ಜೊತೆ ಮುನಿಸಿಕೊಂಡು ದೂರಾಗಿದ್ದರು. ಬಳಿಕ ತನ್ನ ಮಗ ತನ್ವಿತ್ ಜೊತೆ ಬೆಳ್ಳೂರಿನ ಅಗಚಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ರು. ತಾನಾಯ್ತು ತನ್ನ ಕೆಲಸವಾಯ್ತು ಅಂತಿದ್ದ ಭರತ್ ಮನೆಗೆ ನಿನ್ನೆ ಆತನ ಸಂಬಂಧಿ ದೀಪಕ್ ಬಂದಿದ್ದಾನೆ. ಸಂಬಂಧಿ ಬಂದ ಖುಷಿಯಲ್ಲಿ ರಾತ್ರಿ ಇಬ್ಬರು ಎಣ್ಣೆ ಪಾರ್ಟಿ ಮುಗಿಸಿದ್ದಾರೆ. ಬಳಿಕ ಎಂದಿನಂತೆ ಪಕ್ಕದ ಮನೆಯವರನ್ನ ಮಾತನಾಡಿಸಿಕೊಂಡು ಭರತ್ ಮಲಗಲು ತೆರಳಿದ್ದಾನೆ. ಆದರೆ ಬೆಳಗ್ಗಿನ ಜಾವ 3:30ರಲ್ಲಿ ಭರತ್ ಮನೆಯಿಂದ ಜೋರಾದ ಶಬ್ದ ಕೇಳಿಬಂದಿದ್ದು, ಗಾಬರಿಯಿಂದ ಓಡಿಬಂದ ಪಕ್ಕದ ಮನೆಯವರಿಗೆ ಮಗು ಹಾಗೂ ಭರತ್‍ನ ಚೀರಾಟ ಕೇಳಿಬಂದಿದೆ. ಮನೆ ಕಿಟಕಿಯಿಂದ ಹೊಗೆ ಬರುತ್ತಿದ್ದರಿಂದ ಬೆಂಕಿ ತಗುಲಿರುವುದು ಖಚಿತವಾಗಿದೆ.

    ತಕ್ಷಣ ಮನೆಮಾಲೀಕ ಮನೆ ಬೀಗ ಒಡೆದು ಒಳನುಗ್ಗಿದ್ದು. ಬೆಂಕಿ ನಂದಿಸಿ ಗಾಯಾಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ತನ್ವಿತ್ ಹಾಗೂ ಸಂಬಂಧಿ ದೀಪಕ್ ಮೃತಪಟ್ಟಿದ್ದಾರೆ. ತಂದೆ ಭರತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಕಿ ಅವಘಡ ಎಂದುಕೊಂಡಿದ್ದ ಖಾಕಿಪಡೆಗೆ ಕೊಲೆಯ ವಾಸನೆ ಬಡಿದಿದ್ದು ತನಿಖೆ ಆರಂಭಿಸಿದ್ದಾರೆ.

    ಅಕ್ಕ-ಪಕ್ಕದ ಮನೆಯವರ ಹೇಳಿಕೆ ಸಂಗ್ರಹಿಸಿರುವ ಪೊಲೀಸರಿಗೆ, ನಿನ್ನೆ ರಾತ್ರಿ ದೀಪಕ್ ಜೊತೆ ಮತ್ತಿಬ್ಬರು ಭರತ್ ಮನೆಗೆ ಬಂದಿದ್ದ ಮಾಹಿತಿ ದೊರಕಿದೆ. ಎಲ್ಲರೂ ಒಟ್ಟಿಗೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಬರ್ತಿದ್ದ ಪೆಟ್ರೋಲ್ ವಾಸನೆ ಹಾಗೂ ಮನೆಗೆ ಆಚೆಯಿಂದ ಹಾಕಲಾಗಿದ್ದ ಬೀಗ ಪೊಲೀಸರ ಸಂದೇಹ ಮತ್ತಷ್ಟು ಹೆಚ್ಚಿಸಿದ್ದು. ಎಲ್ಲರೂ ನಿದ್ದೆಗೆ ಜಾರಿದ ಬಳಿಕ ಹಂತಕರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.

    ಅಗ್ನಿ ಅವಘಡ ಎಂದುಕೊಂಡಿದ್ದ ಪೊಲೀಸರಿಗೆ ಕೊಲೆಯ ಸುಳಿವು ಸಿಕ್ಕಿದ್ದು, ವಿವಿಧ ಆಯಾಮಗಳಿಂದ ತನಿಖೆ ಆರಂಭಿಸಿದ್ದಾರೆ.

  • 8ನೇ ತರಗತಿ ಫೇಲಾದವನಿಂದ ಶಸ್ತ್ರಚಿಕಿತ್ಸೆ- ತಾಯಿ, ಮಗು ದುರ್ಮರಣ

    8ನೇ ತರಗತಿ ಫೇಲಾದವನಿಂದ ಶಸ್ತ್ರಚಿಕಿತ್ಸೆ- ತಾಯಿ, ಮಗು ದುರ್ಮರಣ

    ಲಕ್ನೋ: 8ನೇ ತರಗತಿ ಫೇಲಾದವನೊಬ್ಬ ಸಿಸೇರಿಯನ್ ಮಾಡಿ ತಾಯಿ-ಮಗುವಿನ ಸಾವಿಗೆ ಕಾರಣವಾದ ದುರಂತ ಘಟನೆಯೊಂದು ಉತ್ತರಪ್ರದೇಶದ ಸುಲ್ತಾನ್‍ಪುರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

    ಘಟನೆಯಲ್ಲಿ ಸುಲ್ತಾನಪುರ ಜಿಲ್ಲೆಯ ಸೈನಿ ಗ್ರಾಮದ ನಿವಾಸಿ ಪೂನಮ್ ಹಾಗೂ ಆಕೆಯ ಪುಟ್ಟ ಕಂದಮ್ಮ ಮೃತಪಟ್ಟಿದ್ದಾರೆ. ಈ ಸಂಬಂಧ ರಾಜೇಂದ್ರ ಶುಕ್ಲಾ ಹಾಗೂ ಆಸ್ಪತ್ರೆಯ ಮಾಲೀಕ ರಾಜೇಶ್ ಸಹನಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮೃತ ಪೂನಂ ಪತಿ ರಾಜಾರಾಮ್ ಅವರು ಪತ್ನಿ ಹಾಗೂ ಮಗು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

    ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಪೂನಂನನ್ನು ಆಕೆಯ ಪತಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಅಲ್ಲಿದ್ದ ನರ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಳು. ಅಂತೆಯೇ ಆ ಸ್ಪತ್ರೆಗೆ ತೆರಳಿ ಮಗುವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಬೇಕು ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಿ ಮಗುವನ್ನು ಹೊರತೆಗೆಯುವಾಗ ತೀವ್ರ ರಕ್ತಸ್ರಾವವಾಗಿ ಪತ್ನಿ ಮೃತಪಟ್ಟರೆ, ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮಗು ಕೂಡ ಸಾವನ್ನಪ್ಪಿದೆ.

    ಸೌಕರ್ಯಗಳೇ ಇಲ್ಲದ ಆಸ್ಪತ್ರೆಯ ಆಪರೇಷನ್ ಬೆಡ್ ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪೂನಂ ನನ್ನು ನಂತರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗವಂತೆ ಶುಕ್ಲಾ ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ಪೂನಂ ಪತಿ, ಕೂಡಲೇ ಆಕೆಯನ್ನು ಲಕ್ನೋದ ಟ್ರಾಮಾ ಕೇರ್ ಸೆಂಟರ್‍ಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಲ್ಲಿ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಎಸ್‍ಪಿ ಅರವಿಂದ ಚತುರ್ವೇದಿ ಹೇಳಿದ್ದಾರೆ.

  • ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಪೋಷಕರು- ಪುಟ್ಟ ಕಂದಮ್ಮನ ಸಂತೈಸಿದ ಹೋಂಗಾರ್ಡ್

    ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಪೋಷಕರು- ಪುಟ್ಟ ಕಂದಮ್ಮನ ಸಂತೈಸಿದ ಹೋಂಗಾರ್ಡ್

    – ನೆಟ್ಟಿಗರ ಮನಗೆದ್ದ ಸುರೇಶ್ ವೀಡಿಯೋ ವೈರಲ್

    ತಿರುವನಂತಪುರಂ: ಹೋಂಗಾರ್ಡ್ ಒಬ್ಬರು ಪುಟ್ಟ ಕಂದಮ್ಮನನ್ನು ಎತ್ತಿಕೊಂಡು ಸಂತೈಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.

    7 ತಿಂಗಳ ಹೆಣ್ಣು ಮಗುವನ್ನು ಹೋಂಗಾರ್ಡ್ ಕೆಎಸ್ ಸುರೇಶ್ ಎತ್ತಿಕೊಂಡು ಸಂತೈಸಿದ್ದಾರೆ. ಇದರ ವೀಡಿಯೋವನ್ನು ಕೇರಳ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ವೀಡಿಯೋ ನೋಡಿದ ನೆಟ್ಟಿಗರು ಭಾವನಾತ್ಮಕ ಕಾಮೆಂಟ್ ಗಳೊಂದಿಗೆ ಸುರೇಶ್ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.

    https://twitter.com/TheKeralaPolice/status/1369301295660736521

    ನಡೆದಿದ್ದೇನು..?
    ಕಾಯಂಕುಲಂನ ರಾಮಪುರಂನಲ್ಲಿ ಪುಟ್ಟ ಕಂದಮ್ಮ ಹಾಗೂ ಆಕೆಯ ಪೋಷಕರಿದ್ದ ಕಾರು ಅಪಘಾತಕ್ಕೀಡಾಗಿದೆ. ಘಟನೆಯಿಂದ ತಂದೆ-ತಾಯಿ ಗಾಯಗೊಂಡಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತ ಹೆಣ್ಣು ಮಗು ಭಾರೀ ಅವಘಡದಿಂದ ಪಾರಾಗಿದೆ. ಹೆತ್ತವರು ಆಸ್ಪತ್ರೆಗೆ ದಾಖಲಾದ ಮೇಲೆ ಅವರ ಸಂಬಂಧಿಕರು ಬರುವವರೆಗೆ ಸುರೇಶ್ ಅವರು ಹೆಣ್ಣು ಮಗುವನ್ನು ಎತ್ತಿಕೊಂಡು ಸಮಾಧಾನ ಪಡಿಸಿದ್ದಾರೆ.

    ಕೇರಳ ಪೊಲೀಸ್ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ಕಾಯಮಕುಲಂನ ರಾಮಪುರಂನಲ್ಲಿ ಸಂಭವಿಸಿದ ಅಪಘಾತದಲ್ಲಿ ತಾಯಿ ಹಾಗೂ ಸಂಬಂಧಿಕರು ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ ಅಪಘಾತದಿಂದ ಪಾರಾದ ಏಳು ತಿಂಗಳ ಮಗುವನ್ನು ಅದರ ಸಂಬಂಧಿಕರು ಬರುವವರೆಗೂ ಕೆ.ಎಸ್.ಸುರೇಶ್ ನೋಡಿಕೊಂಡರು ಎಂದು ಮಲಯಾಳಂನಲ್ಲಿ ಬರೆದುಕೊಳ್ಳಲಾಗಿದೆ.

    ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸುಮಾರು 2 ಸಾವಿರ ಬಾರಿ ವೀಕ್ಷಣೆಯಾಗಿದೆ. ಹೋಂಗಾರ್ಡ್ ಕಾರ್ಯಕ್ಕೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಮರಿ ಮೃತಪಟ್ಟು ಹಲವು ದಿನಗಳೇ ಕಳೆದ್ರೂ, ಮಡಿಲಲ್ಲೇ ಹೊತ್ತು ತಿರುಗುತ್ತಿದ್ದಾಳೆ ತಾಯಿ

    ಮರಿ ಮೃತಪಟ್ಟು ಹಲವು ದಿನಗಳೇ ಕಳೆದ್ರೂ, ಮಡಿಲಲ್ಲೇ ಹೊತ್ತು ತಿರುಗುತ್ತಿದ್ದಾಳೆ ತಾಯಿ

    ಕೋಲಾರ: ತಾನು ಹೆತ್ತ ಮರಿ ಮೃತಪಟ್ಟು ಹಲವು ದಿನಗಳೇ ಕಳೆದರೂ ತನ್ನ ಮರಿಯನ್ನು ಬಿಡದೇ ತಾಯಿ ಕೋತಿ ತನ್ನೊಡಲಲ್ಲೇ ಹೊತ್ತು ತಿರುಗಾಡುತ್ತಿದೆ.

    ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಂದು ಸಂಜೆ ಈ ಘಟನೆ ನಡೆದಿದ್ದು, ಮೃತಪಟ್ಟ ಮರಿಯನ್ನು ತಾಯಿ ಕೋತಿ ಕಳೆದ 4-5 ದಿನಗಳಿಂದ ಹೊತ್ತುಕೊಂಡೇ ಓಡಾಡುತ್ತಿದೆ. ತನ್ನ ಮರಿ ಇನ್ನೂ ಬದುಕಿದೆ ಎಂದುಕೊಂಡು ತನ್ನೊಡಲಲ್ಲಿ ಇಟ್ಟುಕೊಂಡು ಪೋಷಣೆ ಮಾಡುತ್ತಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

    ಮಹಿಳಾ ದಿನಾಚರಣೆ ದಿನ ತಾಯಿ ಪ್ರೀತಿಗೆ ಮನಸೋತ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದೇನು ಹೀಗೆ ಇಟ್ಟುಕೊಂಡು ಓಡಾಡುತ್ತಿದೆ ಎಂದು ಮರುಗಿದರು. ಮೃತಪಟ್ಟು ವಾಸನೆ ಬಂದರೂ ತನ್ನ ಮಗುವನ್ನು ಬಿಗಿದಪ್ಪಿಕೊಳ್ಳುತ್ತಿರುವ ತಾಯಿ ಕೋತಿಯ ಪ್ರೀತಿ ಮನ ಕಲಕುವಂತಿತ್ತು.

  • ಪತಿ ಚಪ್ಪಲಿ ಕೊಡಿಸದ ಕೋಪಕ್ಕೆ ಮಗುವನ್ನ ನದಿಗೆ ಎಸೆದ್ಳು

    ಪತಿ ಚಪ್ಪಲಿ ಕೊಡಿಸದ ಕೋಪಕ್ಕೆ ಮಗುವನ್ನ ನದಿಗೆ ಎಸೆದ್ಳು

    – ಗಂಡ, ಹೆಂಡ್ತಿ ಜಗಳದಲ್ಲಿ 3ರ ಕಂದಮ್ಮ ಬಲಿ

    ಲಕ್ನೋ: ಪತಿ ಚಪ್ಪಲಿ ಕೊಡಿಸದಿದ್ದಕ್ಕೆ ಮಹಿಳೆ ತನ್ನ ಮೂರು ವರ್ಷದ ಮಗುವನ್ನ ನದಿಗೆ ಎಸೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಪೊಲೀಸರು ಮಗುವಿನ ಶವವನ್ನ ನದಿಯಿಂದ ಮೇಲೆಕ್ಕೆತ್ತಿದ್ದಾರೆ.

    ಬಾಂದಾ ಜಿಲ್ಲೆಯ ಗಂಛಾ ಗ್ರಾಮದ ಪಪ್ಪು ನಿಷಾದ್ ಮತ್ತು ರನ್ನೋ ನಡುವೆ ಸದಾ ಜಗಳ ನಡೆಯುತ್ತಿತ್ತು. ಶನಿವಾರ ಪಪ್ಪು ಪತ್ನಿಗೆ ಚಪ್ಪಲಿ ಕೊಡಿಸಲು ಹಿಂದೇಟು ಹಾಕಿದ್ದಾರೆ. ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳ ಆಗಿದೆ. ಕೆಲವೇ ದಿನಗಳಲ್ಲಿ ಹಣ ನೀಡೋದಾಗಿ ಪತಿ ಹೇಳಿದ್ದಾನೆ.

    ಶನಿವಾರ ಮಗು ಕಾಣದಿದ್ದಾಗ ಕುಟುಂಬಸ್ಥರು ಆತಂಕಗೊಂಡು ರನ್ನೋಳನ್ನ ವಿಚಾರಿಸಿದ್ದಾರೆ. ಆರಂಭದಲ್ಲಿ ತನಗೆ ಏನು ತಿಳಿಯದಂತೆ ನಾಟಕ ಮಾಡಿದ್ದಾಳೆ. ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಗು ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ರನ್ನೋಳನ್ನ ವಿಚಾರಣೆಗೆ ಒಳಪಡಿಸಿದಾಗ ಮಗುವನ್ನ ಕೇನ್ ನದಿಯಲ್ಲಿ ಎಸೆದಿರೋದಾಗಿ ಹೇಳಿದ್ದಾಳೆ.

    ಪೊಲೀಸರು ನದಿಗೆ ತೆರಳಿ ಸ್ಥಳೀಯ ಮೀನುಗಾರರು ಮತ್ತು ಗ್ರಾಮಸ್ಥರ ಸಹಾಯದೊಂದಿಗೆ ಮಗುವಿಗಾಗಿ ಶೋಧ ನಡೆಸಿದ್ದಾರೆ. ಕೆಲ ಗಂಟೆ ಬಳಿಕ ಮಗುವಿನ ಮೃತದೇಹ ಪತ್ತೆಯಾಗಿದೆ. ಆದ್ರೆ ರನ್ನೋ ಮಗುವನ್ನ ಎಷ್ಟೊತ್ತಿಗೆ ನದಿಗೆ ಎಸೆದಿರುವ ಬಗ್ಗೆ ಹೇಳದೇ ಮೌನವಾಗಿದ್ದಾಳೆ. ಪ್ರಕರಣಂ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯನ್ನ ಬಂಧಿಸಿದ್ದಾರೆ.

     

  • ಮಗುವಿನ ಜೊತೆ ಹೆಂಡ್ತಿ ನಾಪತ್ತೆ – ಪತಿಯ ಹುಡುಕಾಟ

    ಮಗುವಿನ ಜೊತೆ ಹೆಂಡ್ತಿ ನಾಪತ್ತೆ – ಪತಿಯ ಹುಡುಕಾಟ

    ಹಾವೇರಿ: ನಾಪತ್ತೆಯಾಗಿರುವ ಪತ್ನಿ ಮತ್ತು ಮಗುವಿಗಾಗಿ ಪತಿ ಹುಡುಕಾಟ ನಡೆಸುತ್ತಿರುವ ಘಟನೆ ಹಾವೇರಿಯ ರಾಣೇಬೆನ್ನೂರಿನಲ್ಲಿ ನಡೆದಿದೆ.

    ರಾಣೇಬೆನ್ನೂರು ನಿವಾಸಿ ಅಮಜದ್ ಖಾನ್ ಮೂರು ವರ್ಷಗಳ ಪ್ರೀತಿಸಿದ ರಟ್ಟಿಹಳ್ಳಿ ಪಟ್ಟಣದ ಬೀಬಿ ಫಾತಿಮಾ ಉರ್ಫ್ ನಗ್ಮಾರನ್ನ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ದಂಪತಿ ರಾಣೇಬೆನ್ನೂರಿನಲ್ಲಿ ವಾಸವಾಗಿದ್ದರು. ವರ್ಷದ ಹಿಂದೆ ಹೆರಿಗೆಗೆ ಅಂತ ನಗ್ಮಾ ತವರು ಸೇರಿದ್ದರು. ದಂಪತಿಗೆ ಮುದ್ದಾದ ಹೆಣ್ಣು ಮಗು ಸಹ ಇದೆ. ಜನವರಿ 22ರಂದು ಪತಿಯ ಬಳಿ ಹೋಗಿ ಬರೋದಾಗಿ ನಗ್ಮಾ ಮಗು ಜೊತೆ ರಟ್ಟಿಹಳ್ಳಿಯಿಂದ ಬಸ್ ಹತ್ತಿದ್ದರು. ಇತ್ತ ಮಗಳು ರಾಣೇಬೆನ್ನೂರಿನತ್ತ ಪ್ರಯಾಣ ಬೆಳೆಸಿರುವ ವಿಷಯವನ್ನ ಅಳಿಯ ಅಮಜದ್‍ಗೆ ನಗ್ಮಾ ಪೋಷಕರು ತಿಳಿಸಿದ್ದರು.

    ಇತ್ತ ಮಗಳು ಮತ್ತು ಪತ್ನಿಯನ್ನ ಕರೆದುಕೊಂಡು ಹೋಗಲು ಅಮಜದ್ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಆದ್ರೆ ಪತ್ನಿ ಮಾತ್ರ ಸಂಜೆಯಾದ್ರೂ ಬಾರದಿದ್ದಾಗ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸಂಬಂಧಿಕರ ಊರುಗಳಿಗೆ ಫೋನ್ ಮಾಡಿ ವಿಚಾರಿಸಿದದ್ರೂ ಪತ್ನಿ ಸಿಗದಿದ್ದಾಗ ಜನವರಿ 29ರಂದು ಅಮಜದ್ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ತನಿಖೆ ನಡೆಸುತ್ತಿದ್ದಾರೆ.

  • 13 ತಿಂಗಳ ಮಗುವಿಗೆ ವಿಷ ಕೊಟ್ಟು ಕತ್ತು ಕುಯ್ದುಕೊಂಡ ತಾಯಿ

    13 ತಿಂಗಳ ಮಗುವಿಗೆ ವಿಷ ಕೊಟ್ಟು ಕತ್ತು ಕುಯ್ದುಕೊಂಡ ತಾಯಿ

    ಲಕ್ನೋ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ತನ್ನ 13 ತಿಂಗಳ ಮಗುವನ್ನು ಕೊಂದು ನಂತರ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆಯನ್ನು ಜೀತೆಂದ್ರಿ (23) ಎಂದು ಗುರುತಿಸಲಾಗಿದೆ. ಜೀತೆಂದ್ರಿ ಗಂಡ ರಾಜಸ್ಥಾನದಲ್ಲಿ ಟೈಲರ್ ವೃತ್ತಿಯನ್ನು ನಿರ್ವಹಿಸುತ್ತಿದ್ದು, ಜೀತೆಂದ್ರಿ ಬುಲಂದ್‍ಶಹರ್ ಜಿಲ್ಲೆಯ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ಹಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಜೀತೆಂದ್ರಿ ತನ್ನ ಮಗುವನ್ನು ಕೊಂದು, ತಾನು ಕತ್ತು ಕೊಯ್ದುಕೊಂಡು ವಿಜಯ್ ನಾಗ್ಲಿಯಾದಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    ಜೀತೆಂದ್ರಿಯ ತಂಗಿ ಕೊಟ್ಟಿರುವ ಹೇಳಿಕೆಯ ಪ್ರಕಾರ, ಮನೆಯ ಛಾವಣಿಯಿಂದ ಯರೋ ಹಾರಿದನ್ನು ಕಂಡು ರೂಮ್ ಬಳಿ ಹೋದಾಗ ಜೀತೆಂದ್ರಿ ಮತ್ತು ಮಗು ರೂಮ್ ಒಳಗೆ ಲಾಕ್ ಹಾಕಿಕೊಂಡಿದ್ದರು. ಬಾಗಿಲು ತೆಗೆಯುವಂತೆ ಕೇಳಿದರು ಬಾಗಿಲು ತೆಗೆಯದೆ ಇದ್ದಾಗ ಡೋರ್ ನ್ನು ಒಡೆದು ಒಳಪ್ರವೇಶಿಸಿದಾಗ ಜೀತೆಂದ್ರಿ ಕತ್ತು ಕುಯ್ದುಕೊಂಡು ಬೆಡ್‍ನಲ್ಲಿ ನರಳುತ್ತಿದ್ದಳು. ಮಗು ಪಕ್ಕದಲ್ಲೇ ಸತ್ತು ಬಿದ್ದಿತ್ತು ಜೀತೆಂದ್ರಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮರಣ ಹೊಂದಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಗುವಿನ ಪಕ್ಕದಲ್ಲಿ ವಿಷ ಬೆರೆಸಿದ ಹಾಲಿನ ಬಾಟಲ್ ಪತ್ತೆಯಾಗಿದ್ದು, ಮಗು ಮತ್ತು ಜೀತೆಂದ್ರಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳೀಯ ಠಾಣೆಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

  • ಚಾಕಲೇಟ್ ಆಸೆ ತೋರಿಸಿ 5ರ ಕಂದಮ್ಮನ ಮೇಲೆ 60ರ ವೃದ್ಧನಿಂದ ಅತ್ಯಾಚಾರ

    ಚಾಕಲೇಟ್ ಆಸೆ ತೋರಿಸಿ 5ರ ಕಂದಮ್ಮನ ಮೇಲೆ 60ರ ವೃದ್ಧನಿಂದ ಅತ್ಯಾಚಾರ

    – ಪ್ರಕರಣ ಬೆಳಕಿಗೆ ಬರ್ತಿದ್ದಂತೆ ವಿಷ ಸೇವಿಸಿ ಹೈಡ್ರಾಮಾ

    ಕೋಲಾರ : 5 ವರ್ಷದ ಬಾಲಕಿ ಮೇಲೆ 60 ವರ್ಷದ ವ್ಯಕ್ತಿ ಅತ್ಯಚಾರ ಯತ್ನ ನಡೆಸಿರುವ ಘಟನೆ ಕೋಲಾರದಲ್ಲಿ ವರದಿಯಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ಅತ್ಯಚಾರ ಯತ್ನ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

    ವಿಚಾರ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಹಿರಿಯರೆಲ್ಲಾ ಸೇರಿ ಒಂದು ಸುತ್ತಿನ ಪಂಚಾಯತಿ ಮಾಡಿದ್ದು, ಮಗುವಿನ ಪೋಷಕರಿಗೆ ಪೊಲೀಸರಿಗೆ ದೂರು ನೀಡದಂತೆ ಒತ್ತಡ ಹಾಕಿದ್ದಾರೆ. ಆದ್ರೆ ಸಂಬಂದಿಕರ ಸಹಾಯ ಪಡೆದ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, 5 ವರ್ಷದ ಬಾಲಕಿಗೆ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಅತ್ಯಚಾರ ಯತ್ನ ಮಾಡಿದ ಅರೋಪಿ ಇಷ್ಟೆಲ್ಲಾ ಅವಾಂತರವಾಗುತ್ತಿದ್ದಂತೆ ಇಲಿ ಪಾಷಣ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆರೋಪಿಯನ್ನ ಬಂಧಿಸಿದ ಪೊಲೀಸರು ವಿಷ ಕುಡಿದು ಆತ್ಮಹತ್ಯಗೆ ಯತ್ನಿಸಿದ ವ್ಯಕ್ತಿಯನ್ನ ಅಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ.

  • ಗಂಡನ ಕಿರುಕುಳಕ್ಕೆ ಬೇಸತ್ತು ಮಗುವಿನೊಂದಿಗೆ ಬಾವಿಗೆ ಹಾರಿದ ಗೃಹಿಣಿ

    ಗಂಡನ ಕಿರುಕುಳಕ್ಕೆ ಬೇಸತ್ತು ಮಗುವಿನೊಂದಿಗೆ ಬಾವಿಗೆ ಹಾರಿದ ಗೃಹಿಣಿ

    ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಅರೋಲಿ ಗ್ರಾಮದಲ್ಲಿ ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಪತಿಯ ಕಾಟಕ್ಕೆ ಬೇಸತ್ತು ಗೃಹಿಣಿ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹನುಮಂತಿ(29), 14 ತಿಂಗಳ ಮಗು ಉದಯಯ್ ಸಾವನ್ನಪ್ಪಿರುವ ದುರ್ದೈವಿಗಳು. ಗ್ರಾಮದ ಹೊರವಲಯದ ಬಾವಿಯಲ್ಲಿ ಶವಗಳು ಪತ್ತೆಯಾಗಿವೆ.

    ಫೆಬ್ರವರಿ 20 ರಂದು ಮನೆಯಿಂದ ಹೊರಹೋಗಿದ್ದ ಗೃಹಿಣಿ ಹಾಗೂ ಮಗು ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಗಂಡ ಹುಲಿಗೆಯ್ಯ ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಅಲ್ಲದೆ ಅತ್ತೆ, ಮಾವನ ಬೆಂಬಲವೂ ಇರಲಿಲ್ಲ. ಇದರಿಂದ ಹನುಮಂತಿ ಬೇಸತ್ತು ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ ಅಂತ ಮೃತಳ ಕಡೆಯವರು ಆರೋಪಿಸಿದ್ದಾರೆ. ಮದುವೆಯಾಗಿ 7 ವರ್ಷವಾಗಿದ್ದು ದಂಪತಿಗೆ ಎರಡು ಮಕ್ಕಳಿದ್ದರು.

    ಮೃತರ ಶವಗಳನ್ನು ಗ್ರಾಮಸ್ಥರ ಸಹಾಯದೊಂದಿಗೆ ಪೊಲೀಸರು ಹೊರತೆಗೆದಿದ್ದಾರೆ. ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತಳ ಗಂಡ, ಅತ್ತೆ, ಮಾವನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಏಳಮ್ಮ, ಮನೆಗೆ ಹೋಗೋಣ- ಅಮ್ಮನ ಶವದ ಜೊತೆ 5ರ ಕಂದಮ್ಮನ ಆಟ

    ಏಳಮ್ಮ, ಮನೆಗೆ ಹೋಗೋಣ- ಅಮ್ಮನ ಶವದ ಜೊತೆ 5ರ ಕಂದಮ್ಮನ ಆಟ

    ಗಾಂಧೀನಗರ: 5 ವರ್ಷದ ಕಂದಮ್ಮ ಅಮ್ಮನ ಶವದ ಜೊತೆ ಆಟವಾಡಿದ ಹೃದಯವಿದ್ರಾವಕ ಘಟನೆ ಗುಜರಾತಿನ ರಾಜಧಾನಿ ಗಾಂಧೀನಗರದಲ್ಲಿ ನಡೆದಿದೆ.

    ಮಗುವಿನ ಜೊತೆಯಲ್ಲಿಯೇ ಮಹಿಳೆ ಅಡ್ಲಾಜ್-ಅಂಬಾಪುರ ರಸ್ತೆ ಬದಿಯ ಕಸವನ್ನ ಸ್ವಚ್ಛಗೊಳಿಸುತ್ತಿರುವಾಗ ಸಾವನ್ನಪ್ಪಿದ್ದಾರೆ. ಆದ್ರೆ ಏನು ಅರಿಯದ ಮುಗ್ಧ ಕಂದಮ್ಮ ಅಮ್ಮನ ಶವದ ಜೊತೆಯಲ್ಲಿ ಕೆಲ ಸಮಯ ಆಟವಾಡಿದೆ. ನಂತರ ಅಮ್ಮನ ಬಟ್ಟೆ ಹಿಡಿದು ಎಚ್ಚರಗೊಳಿಸುವ ಪ್ರಯತ್ನ ಮಾಡಿದೆ. ಮಗುವನ್ನ ಕಂಡ ಸಾರ್ವಜನಿಕರು ಮಹಿಳೆಯನ್ನ ಎಚ್ಚರಗೊಳಿಸಲು ಮುಂದಾಗ ಆಕೆ ಸಾವನ್ನಪ್ಪಿರೋದು ತಿಳಿದಿದೆ. ಕೂಡಲೇ ಸಾರ್ವಜನಿಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಗುವಿನ ಜೊತೆ ಪರೀಕ್ಷೆಗೆ ತೆರಳಿದ ತಾಯಿ- ಅಮ್ಮನಾದ ಪೇದೆಯ ಫೋಟೋ ವೈರಲ್

    ಮೃತ ಮಹಿಳೆ ಮಂಜೂ ದೇವಿ ಪತಿ ರಾಮನಾಥ್ ಜೋಗಿ ಹಾಗೂ ಮೂರು ಮಕ್ಕಳೊಂದಿಗೆ ಶನಿದೇವ ನಮಂದಿರದ ಬಳಿ ವಾಸವಾಗಿದ್ದರು. ಎಂದಿನಂತೆ ಪತಿ ಕೆಲಸಕ್ಕೆ ತೆರಳಿದ್ರೆ ಮಂಜೂ ದೇವಿ ಸಹ 5 ವರ್ಷದ ಕಂದಮ್ಮನ ಜೊತೆ ಪೌರ ಕೆಲಸಕ್ಕೆ ಆಗಮಿಸಿದ್ದರು. ರಸ್ತೆ ಬದಿ ಕೆಲಸ ಮಾಡೋವಾಗ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಮಂಜೂದೇವಿ ರಸ್ತೆಯಲ್ಲಿ ಕುಸಿದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಿನ್ನ ಹರಕೆಯಿಂದ ಮಗು ಹುಟ್ತು, ಆದರೆ ಈಗ ಪತಿಯನ್ನು ಕಿತ್ತುಕೊಂಡೆಯಾ ಅಮ್ಮಾ – ಬಾಣಂತಿ ರೋಧನೆ

    ಮಗು ಮಾತ್ರ ತುಂಬಾ ಸಮಯದವರೆಗೂ ಅಮ್ಮನ ಶವದ ಜೊತೆಯಲ್ಲಿಯೇ ಆಟವಾಡಿದೆ. ಅಮ್ಮ ಎಚ್ಚರಗೊಳ್ಳದಿದ್ದಾಗ ಮಗು ಜೋರಾಗಿ ಅಳಲು ಆರಂಭಿಸಿದಾಗ ಸಾರ್ವಜನಿಕರು ಮಹಿಳೆ ಬಳಿ ತೆರಳಿದಾಗ ಮಂಜೂದೇವಿ ಸಾವನ್ನಪ್ಪಿರೋದು ಖಚಿತವಾಗಿದೆ. ಪೊಲೀಸರು ಶವವನ್ನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಊಟ ಮಾಡಿಸಿ ಕೈ ತೊಳೆಯಲು ಹೋದ ಅಮ್ಮ – ಮಹಡಿಯಿಂದ ಬಿದ್ದು ಮಗು ಸಾವು