Tag: Baby

  • ಮಾರ್ಚ್ 15ರ ನಂತ್ರ ಜೀವನವೇ ಬದಲಾಯ್ತು: ನಟಿ ಮಯೂರಿ

    ಮಾರ್ಚ್ 15ರ ನಂತ್ರ ಜೀವನವೇ ಬದಲಾಯ್ತು: ನಟಿ ಮಯೂರಿ

    ಬೆಂಗಳೂರು: ನಟಿ ಮಯೂರಿ ಕ್ಯಾತರಿ ಮಗುವಿನ ಫೋಟೋಗಳನ್ನು ಹಂಚಿಕೊಂಡು, ಆತನ ಹೆಸರನ್ನ ರಿವೀಲ್ ಗೊಳಿಸಿದ್ದಾರೆ. ಮಗನಿಗೆ ಆರವ್ ಎಂದು ಹೆಸರಿಟ್ಟಿದ್ದು, ಬಣ್ಣ ಬಣ್ಣದ ಬಟ್ಟೆ ತೊಡಿಸಿ ಫೋಟೋಶೂಟ್ ಮಾಡಿಸಿದ್ದಾರೆ.

    ಮಗ ಆರವ್ 15 ದಿನವನಿದ್ದಾಗ ಮಾಡಿಸಿದ ಫೋಟೋಶೂಟ್ ಇದಾಗಿದೆ. ಈತ ಬಂದ ಮೇಲೆ ನಮ್ಮ ಜೀವನವೇ ಸಂಪೂರ್ಣ ಬದಲಾಗಿದೆ. ಮಗ ಆರವ್ ಜೊತೆ ಮಯೂರಿ ಮತ್ತು ಅರುಣ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    2020 ಜೂನ್ 12 ರಂದು ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆಗೆ ಮಯೂರಿ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದರು. ನಂತರ ತಾಯಿ ಆಗುತ್ತಿರುವ ವಿಚಾರ, ಸಿಮಂತ ಫೋಟೋಗಳು ಹಾಗೂ ಬೇಬಿ ಬಂಪ್ ಫೋಟೋಗಳನ್ನು ಮಯೂರಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮಗ ಹುಟ್ಟಿದ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

    ನನಗೆ ಗಂಡು ಮಗುವಾಗಿದೆ. ಮದುವೆ ನಂತರ ಮತ್ತೊಂದು ಬ್ಯೂಟಿಫುಲ್ ಜರ್ನಿ ಶುರು ಮಾಡುತ್ತಿದ್ದೇನೆ. ಈ ಸುಂದರ ಭಾವನೆಯನ್ನು ವ್ಯಕ್ತಪಡಿಸಲು ಪದಗಳೆ ಸಿಗುತ್ತಿಲ್ಲ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ನಮ್ಮ ಮಗುವಿನ ಮೇಲೆ ಇರಲಿ ಎಂದು ಬರೆದುಕೊಂಡು ಮಗನ ಕೈ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದರು.

  • ಸಕಾಲದಲ್ಲಿ ಚಿಕಿತ್ಸೆ ಸಿಗದೆ ಹೊಟ್ಟೆಯಲ್ಲಿಯೇ 6 ತಿಂಗಳ ಗಂಡು ಮಗು ಸಾವು

    ಸಕಾಲದಲ್ಲಿ ಚಿಕಿತ್ಸೆ ಸಿಗದೆ ಹೊಟ್ಟೆಯಲ್ಲಿಯೇ 6 ತಿಂಗಳ ಗಂಡು ಮಗು ಸಾವು

    – ಸಾವು-ಬದುಕಿನ ಮಧ್ಯೆ ತಾಯಿ ಹೋರಾಟ

    ನೆಲಮಂಗಲ: ಕೊರೊನಾ ಸಂದರ್ಭದಲ್ಲಿ ನಾನ್ ಕೋವಿಡ್ ಗರ್ಭಿಣಿಗೆ ಸೂಕ್ತ ಪ್ರಥಮ ಚಿಕಿತ್ಸೆ ಸಿಗದ ಪರಿಣಾಮ ಇನ್ನೂ ಹುಟ್ಟದ 06 ತಿಂಗಳ ಕಂದಮ್ಮ ತಾಯಿಯ ಗರ್ಭದಲ್ಲಿ ಸಾವನ್ನಪ್ಪಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.

    ಒರಿಸ್ಸಾ ಮೂಲದ ಸೂರ್ಯಕಲಾ 6 ತಿಂಗಳ ಗರ್ಣಿಣಿ. ಹೊಟ್ಟೆ ನೋವು, ಫಿಡ್ಸ್, ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅವರು ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದಾರೆ. ಈ ವೇಳೆ ಸಿಬ್ಬಂದಿ ಸೂರ್ಯಕಲಾ ಅವರಿಗೆ ಕನಿಷ್ಟ ಪ್ರಥಮ ಚಿಕಿತ್ಸೆ ಕೂಡ ನೀಡದೆ ಅಮಾನವೀಯವಾಗಿ ವರ್ತಿಸಿದ್ದಾರೆ.

    ಚಿಕಿತ್ಸೆ ನೀಡುವಂತೆ ಕೇಳಿಕೊಂಡರು ಸಿಬ್ಬಂದಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲೂ ಚಿಕಿತ್ಸೆ ದೊರೆಯದೆ ಸೂರ್ಯ ಕಲಾ ಅವರಿಗೆ ರಕ್ತದೊತ್ತಡ ಹೆಚ್ಚಾಗಿದೆ. ಪಾರ್ಶ್ವವಾಯು ರೋಗವಿದ್ದ ಮಹಿಳೆಗೆ ಸೂಕ್ತ ಪ್ರಥಮ ಚಿಕಿತ್ಸೆ ದೊರೆಯದೆ 06 ತಿಂಗಳ ಗಂಡು ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿದೆ.

    ಸದ್ಯ ಗರ್ಭಿಣಿ ಐಸಿಯುನಲ್ಲಿದ್ದು ಸಾವು-ಬದುಕಿನ ಮಧ್ಯೆ ಹೋರಾಡುವ ಪರಿಸ್ಥಿತಿ ಬಂದಿದೆ. ಇದ್ದಕ್ಕೆಲ್ಲಾ ಮೂಲ ಕಾರಣ ಡಾಬಸ್ ಪೇಟೆಯ ಆಸ್ಪತ್ರೆಯ ಅಂಬುಲೆನ್ಸ್ ಚಾಲಕ ಸಕಾಲದಲ್ಲಿ ಕಾರ್ಯನಿರ್ವಹಿಸದೇ ಇರುವುದು ಎಂದು ರಾಯರಪಾಳ್ಯ ಪ್ರತಾಪ್ ಆರೋಪಿಸಿದ್ದಾರೆ. ಹೀಗಾಗಿ ಇಂದು ಆಸ್ಪತ್ರೆಯ ಮುಂದೆ ಸ್ಥಳೀಯ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದರು.

  • ಹೊಸಪೇಟೆಯಲ್ಲಿ ಅಪರೂಪದ ಮಗು ಜನನ

    ಹೊಸಪೇಟೆಯಲ್ಲಿ ಅಪರೂಪದ ಮಗು ಜನನ

    ವಿಜಯನಗರ: ಜಿಲ್ಲೆಯ ಹೊಸಪೇಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಒಂದೇ ಕಾಲಿನಲ್ಲಿ 9 ಬೆರಳವುಳ್ಳ ಗಂಡು ಮಗು ಜನಿಸಿದೆ. ಹೊಸಪೇಟೆ ಮೂಲದ ಮಹಿಳೆಗೆ ಇಂದು ಜನಿಸಿದ ಮಗುವಿನ ಬಲಗಾಲಿನಲ್ಲಿ ಒಂಬತ್ತು ಬೆರಳುಗಳಿದ್ದು ಅಚ್ಚರಿಗೆ ಕಾರಣವಾಗಿದೆ.

    ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಎಡಗಾಲಿನಲ್ಲಿ ಸಾಮಾನ್ಯವಾಗಿ ಐದು ಬೆರಳುಗಳಿದ್ದು ಎಡಗಾಲಿಗೆ ಮಾತ್ರ ಒಂಬತ್ತು ಬೆರಳುಗಳಿವೆ. ಆದರೆ ಸಿಜರೀನ್ ಮಾಡುವ ಮೂಲಕ ಹೆರಿಗೆಯನ್ನು ಮಾಡಿಸಲಾಗಿದೆ. ತಾಯಿ ಹೊಸಪೇಟೆ ತಾಲೂಕಿನ ನಿವಾಸಿಗಳಾಗಿದ್ದಾರೆ. ಆದರೆ ತಾಯಿ ಹೆಸರು ಹಾಗೂ ವಿಳಾಸವನ್ನು ಬಹಿರಂಗಪಡಿಸಲು ಕುಟುಂಬಸ್ಥರು ಒಪ್ಪಿಲ್ಲ.

    ಜಗತ್ತಿನಲ್ಲಿ 9 ಬೆರಳುಗಳುಳ್ಳ ಮಕ್ಕಳು ಜನಿಸುವುದು ತುಂಬಾ ಅಪರೂಪ. ಒಂಬತ್ತು ಬೆರಳುವುಳ್ಳ ಮಗು ಜನ್ಮತಾಳುವುದು ತೀರಾ ಕಡಿಮೆ. ಅಲ್ಲದೇ ಬೆರಳು ಇರುವುದು ಮುಂಚಿತವಾಗಿ ತಿಳಿಯುವುದಿಲ್ಲ. ಜನನವಾದ ಬಳಿಕ ಅದು ತಿಳಿಯಲಿದೆ ಎನ್ನುತ್ತಾರೆ ವೈದ್ಯರು.

  • ನರ್ಸ್ ಕೈಯಿಂದ ಜಾರಿ ಬಿದ್ದು ಹಸುಗೂಸು ಸಾವು: ಪೋಷಕರ ಆರೋಪ

    ನರ್ಸ್ ಕೈಯಿಂದ ಜಾರಿ ಬಿದ್ದು ಹಸುಗೂಸು ಸಾವು: ಪೋಷಕರ ಆರೋಪ

    ದಾವಣಗೆರೆ: ನರ್ಸ್ ಕೈಯಿಂದ ಜಾರಿ ಬಿದ್ದು ಹಸುಗೂಸು ಸಾವನಪ್ಪಿದೆ ಎಂಬ ಆರೋಪ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇಳಿ ಬಂದಿದೆ.

    ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಅದೇ ತಾನೆ ಜನಿಸಿದ ಮಗು ಕೆಲವೇ ಸೆಕೆಂಡುಗಳಲ್ಲಿ ಸಾವನ್ನಪ್ಪಿದೆ. ನರ್ಸ್ ಬೇಜವಾಬ್ದಾರಿಯಿಂದ ಅದೇ ತಾನೇ ಜನಿಸಿದ ಮಗು ಸಾವನಪ್ಪಿದೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಸಾಕಮ್ಮಾ ಎಂಬ ಸ್ಟಾಫ್ ನರ್ಸ್ ನಿಂದ ಹೆರಿಗೆ ಮಾಡಿಸುವಾಗ ಘಟನೆ ನಡೆದಿದೆ. ವೈದ್ಯರು ಇಲ್ಲದೆ ಇದ್ದರೂ ಸಾಕಮ್ಮ ಹೆರಿಗೆ ಮಾಡಿಸುತ್ತಿದ್ದರು.

    ದೇವರಹಳ್ಳಿ ಗ್ರಾಮದ ತಿಮ್ಮೇಶ್ ಮತ್ತು ಲಕ್ಷ್ಮಿ ದಂಪತಿಯ ಮಗು ಕೊನೆಯುಸಿರೆಳೆದಿದ್ದು, ಗಂಡು ಮಗುವಾಯಿತು ಅಂತ ಖುಷಿಯಲ್ಲಿದ್ದ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ದೇವರಹಳ್ಳಿ ಆಸ್ಪತ್ರೆ ಎದುರು ಜಮಾಯಿಸಿದ ಜನರು ಸಿಬ್ಬಂದಿಗಳನ್ನು ತರಾಟೆ ತೆಗೆದುಕೊಂಡರು.

  • ಕೊರೊನಾ ರಿಪೋರ್ಟ್ ಇಲ್ಲವೆಂದು ಅಡ್ಮಿಟ್ ಮಾಡ್ಕೊಳ್ಳದ ಸಿಬ್ಬಂದಿ- ನಿಂತಲ್ಲೇ ಹರಿಗೆಯಾಗಿ ಮಗು ಸಾವು

    ಕೊರೊನಾ ರಿಪೋರ್ಟ್ ಇಲ್ಲವೆಂದು ಅಡ್ಮಿಟ್ ಮಾಡ್ಕೊಳ್ಳದ ಸಿಬ್ಬಂದಿ- ನಿಂತಲ್ಲೇ ಹರಿಗೆಯಾಗಿ ಮಗು ಸಾವು

    ಮಂಡ್ಯ: ಕೋವಿಡ್ ವರದಿ ಇಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳದ ಕಾರಣ ಆಸ್ಪತ್ರೆಯ ಮುಂಭಾಗ ಗರ್ಭಿಣಿ ನಿಂತಿದ್ದ ವೇಳೆ ಹೆರಿಗೆಯಾದ ಪರಿಣಾಮ ನವಜಾತ ಶಿಶು ಕೆಳಗೆ ಬಿದ್ದು ಸಾವನ್ನಪ್ಪಿರುವ ಮನಕಲಕುವ ಘಟನೆ ಮಂಡ್ಯದ ಮಿಮ್ಸ್ ನ ಹೆರಿಗೆ ವಾರ್ಡ್ ಮುಂಭಾಗ ಜರುಗಿದೆ.

    ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ ಇಸ್ಮಾಯಿಲ್ ಪತ್ನಿ ಸೋನು ಅವರು ಏಳು ತಿಂಗಳ ಗರ್ಭಿಣಿ ಆಗಿದ್ದರು. ನಿನ್ನೆ ಆರೋಗ್ಯದಲ್ಲಿ ವ್ಯತ್ಯಾಸ ಆದ ಕಾರಣ ಮಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ವೈದ್ಯರು ಪರೀಕ್ಷೆ ಮಾಡಿದಾಗ ಮಗುವಿನ ಎದೆಯ ಬಡಿತ ಕೇಳುತ್ತಿಲ್ಲ ನಾಳೆ ಬಂದು ಆಸ್ಪತ್ರೆಗೆ ದಾಖಲಾಗಿ ಎಂದು ಪರೀಕ್ಷೆಗಳನ್ನು ನಡೆಸಿದ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ನಿನ್ನೆಯೇ ಇಸ್ಮಾಯಿಲ್ ತನ್ನ ಪತ್ನಿ ಸೋನುಗೆ ಕೊರೊನಾ ಟೆಸ್ಟ್ ಮಾಡಿದ್ದಾರೆ.

    ಇಂದು ಬೆಳಗ್ಗೆ ಸೋನು ಅವರಿಗೆ ನೋವು ಹೆಚ್ಚಾದ ಕಾರಣ ಇಸ್ಮಾಯಿಲ್ ತನ್ನ ಪತ್ನಿಯನ್ನು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲು ಬಂದಿದ್ದಾರೆ. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಕೋವಿಡ್ ರಿಪೋರ್ಟ್ ಇಲ್ಲದೇ ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕುಟುಂಬಸ್ಥರು ಹಾಗೂ ಅಲ್ಲಿದ್ದ ಸಾರ್ವಜನಿಕರು ದಾಖಲು ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದರು ಸಹ ದಾಖಲು ಮಾಡಿಕೊಂಡಿಲ್ಲ. ಈ ವೇಳೆ ಸೋನು ಆಸ್ಪತ್ರೆಯ ಹೊರ ಭಾಗ ನಿಂತಿದ್ದಾಗ ಹೆರಿಗೆ ಆದ ಕಾರಣ ನೆಲಕ್ಕೆ ಮಗು ಬಿದ್ದಿದೆ. ಇದಾದ ಬಳಿಕ ಮಗು ಹಾಗೂ ಸೋನು ಅವರನ್ನು ಆಸ್ಪತ್ರೆಯ ಒಳಕ್ಕೆ ಕರೆದುಕೊಳ್ಳಲಾಗಿದೆ.

    ಇಷ್ಟೇಲ್ಲಾ ಆದರೂ ಸಹ ಮಿಮ್ಸ್ ಅಧಿಕಾರಿಗಳು ಇದರಲ್ಲಿ ನಮ್ಮ ತಪ್ಪು ಆಗಿಲ್ಲ, ಇದಕ್ಕೆ ಪೋಷಕರೇ ಕಾರಣ ಎಂದು ನುಣುಚಿಕೊಳ್ಳುತ್ತಿದ್ದಾರೆ. ನಾವು ಸೋನು ಅವರು ಬಂದಾಗಾ ಆಂಟಿಜನ್ ಟೆಸ್ಟ್ ಮಾಡಿ ದಾಖಲು ಮಾಡಿಕೊಳ್ಳಲು ಮುಂದಾಗಿದ್ದವು. ಆಗ ಅವರು ಆಭರಣಗಳನ್ನು ಬಿಚ್ಚಿಡಲು ಹೊರಗೆ ಹೋದರು, ಈ ವೇಳೆ ಘಟನೆ ಜರುಗಿದೆ ಎಂದು ಮಿಮ್ಸ್ ಅಧಿಕಾರಿಗಳು ಹೇಳುತ್ತಿದ್ದಾರೆ.

  • ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲ ಗಂಟೆಯಲ್ಲೇ ಬಾಣಂತಿ ಸಾವು

    ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲ ಗಂಟೆಯಲ್ಲೇ ಬಾಣಂತಿ ಸಾವು

    ಮಂಡ್ಯ: ಕೊರೊನಾದಿಂದ ಬಳಲುತ್ತಿದ್ದ ಗರ್ಭಿಣಯೊಬ್ಬರುÂ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲ ಗಂಟೆಗಳಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ಜರುಗಿದೆ.

    ಮದ್ದೂರು ತಾಲೂಕಿನ ಅರೆತಿಪ್ಪೂರು ಗ್ರಾಮದ ಗುಣಶ್ರೀ (35) ಸಾವನ್ನಪ್ಪಿರುವ ದುರ್ದೈವಿ. ಹಲವು ದಿನಗಳಿಂದ ಕೊರೊನಾದಿಂದ ಬಳಲುತ್ತಿದ್ದ ಗುಣಶ್ರೀ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಿನ್ನೆ ಗುಣಶ್ರೀ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆದರೆ ಮಗು ಹುಟ್ಟಿದ ಕೆಲ ಗಂಟೆಯಲ್ಲೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

    ಗುಣಶ್ರೀ ಅವರು ಮಳವಳ್ಳಿ ತಾಲೂಕಿನ ಬೊಮ್ಮನದೊಡ್ಡಿ ಗ್ರಾಮದವರು. ಕಳೆದ ನಾಲ್ಕು ವರ್ಷದ ಹಿಂದೆ ಮದ್ದೂರು ತಾಲೂಕಿನ ಅರೆತಿಪ್ಪೂರಿನ ಮನೋಹರಗೌಡ ಎಂಬವರೊಂದಿಗೆ ಮದುವೆಯಾಗಿದ್ದರು. ಗುಣಶ್ರೀ ಅವರು ಮಳವಳ್ಳಿಯ ಶಾಂತಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.

    ನಾಲ್ಕು ವರ್ಷದಿಂದ ಇವರಿಗೆ ಮಕ್ಕಳಾಗಿರಲಿಲ್ಲ. ಇದೀಗ ಮಗುವಿನ ನೀರಿಕ್ಷೆಯಲ್ಲಿ ಇದ್ದ ಕುಟುಂಬ ಗುಣಶ್ರೀ ಅವರ ಸಾವಿನಿಂದ ದುಃಖತಪ್ತವಾಗಿದೆ. ಇತ್ತ ಒಂದು ದಿನದ ಹಸುಗೂಸು ತಾಯಿಯನ್ನು ಕಳೆದುಕೊಂಡಿರುವುದು ಕಣ್ಣೀರು ತರಿಸುವಂತಿದೆ.

  • ಚಿರು ಪುತ್ರನಿಗೆ 7 ತಿಂಗಳು – ಮುದ್ದಾದ ಫ್ಯಾಮಿಲಿ ಫೋಟೋ ಪ್ರಕಟ

    ಚಿರು ಪುತ್ರನಿಗೆ 7 ತಿಂಗಳು – ಮುದ್ದಾದ ಫ್ಯಾಮಿಲಿ ಫೋಟೋ ಪ್ರಕಟ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಪುತ್ರ ಜ್ಯೂನಿಯರ್ ಚಿರುಗೆ ಏಳು ತಿಂಗಳು ತುಂಬಿದೆ. ಈ ಹಿನ್ನೆಲೆ ಅಭಿಮಾನಿಗಳು ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಫೋಟೋವನ್ನು ಮೇಘನಾ ರಾಜ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಮುದ್ದಾದ ಮಗುವಿಗೆ ಮೇ 22ಕ್ಕೆ 7 ತಿಂಗಳು ಪೂರ್ಣಗೊಂಡಿದ್ದು, ಇದೇ ಸಂತಸದಲ್ಲಿ ಅಭಿಮಾನಿಯೊಬ್ಬರು ಚಿರು, ಮೇಘನಾ ರಾಜ್ ಹಾಗೂ ಜ್ಯೂನಿಯರ್ ಚಿರು ಒಟ್ಟಿಗೆ ಇರುವ ಫೋಟೋವೊಂದನ್ನು ರಚಿಸಿದ್ದಾರೆ. ಈ ಫೋಟೋವನ್ನು ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯ ಸ್ಟೇಟಸ್‍ನಲ್ಲಿ ಹಂಚಿಕೊಂಡಿದ್ದಾರೆ.

     

    ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಚಿರು, ಮೇಘನಾ ದಂಪತಿಗೆ ಗಂಡು ಮಗು ಜನಿಸಿದೆ. ಇದೀಗ ಜ್ಯೂನಿಯರ್ ಚಿರುಗೆ 7 ತಿಂಗಳು ತುಂಬಿದ ಬೆನ್ನಲ್ಲೇ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವ ಮೂಲಕ ವಿಶ್ ಮಾಡುತ್ತಿದ್ದಾರೆ.

    ಇತ್ತೀಚೆಗಷ್ಟೇ ಮೇಘನಾ ರಾಜ್ ಮನೆಯ ಸದಸ್ಯನಂತೆ ಇದ್ದ ಬ್ರೂನೋ ಎಂಬ ಶ್ವಾನ ಸಾವನ್ನಪ್ಪಿದ್ದು, ಶ್ವಾನದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಮೇಘನಾರಾಜ್ ಪೋಸ್ಟ್ ಮಾಡಿದ್ದರು.

     

    View this post on Instagram

     

    A post shared by Meghana Raj Sarja (@megsraj)

  • ಕೊರೊನಾ ನೆಗೆಟಿವ್ ವರದಿ ಇಲ್ಲದೆ ಒಳಗೆ ಸೇರಿಸದ ಸಿಬ್ಬಂದಿ- ಆಸ್ಪತ್ರೆ ಆವರಣದಲ್ಲೇ ತುಂಬು ಗರ್ಭಿಣಿ ನರಳಾಟ

    ಕೊರೊನಾ ನೆಗೆಟಿವ್ ವರದಿ ಇಲ್ಲದೆ ಒಳಗೆ ಸೇರಿಸದ ಸಿಬ್ಬಂದಿ- ಆಸ್ಪತ್ರೆ ಆವರಣದಲ್ಲೇ ತುಂಬು ಗರ್ಭಿಣಿ ನರಳಾಟ

    ಹಾಸನ: ಕೊರೊನಾ ವೈರಸ್ ನೆಗೆಟಿವ್ ರಿಪೋರ್ಟ್ ಇಲ್ಲದೆ ಒಳಗೆ ಸೇರಿಸದ ಪರಿಣಾಮ ತುಂಬು ಗರ್ಭಿಣಿಯೊಬ್ಬರು ಆಸ್ಪತ್ರೆಯ ಆವರಣದಲ್ಲಿಯೇ ನೋವಿನಿಂದ ಒದ್ದಾಡಿದ ಘಟನೆಯೊಂದು ಹಾಸನದಲ್ಲಿ ನಡೆದಿದೆ.

    ಕೋವಿಡ್ ರಿಪೋರ್ಟ್ ಇಲ್ಲದೆ ಗರ್ಭಿಣಿ ಹೇಮಾ ಅಡ್ಮಿಷನ್ ಸಿಕ್ಕಿಲ್ಲ. ಹೀಗಾಗಿ ತುಂಬು ಗರ್ಭಿಣಿ ಶಾಂತಿಗ್ರಾಮ ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಹೆರಿಗೆ ನೋವಿನಿಂದ ನರಳಾಡಿದ್ದಾರೆ. ಕೂಗಾಡಿ ನರಳಾಡಿದರು ಆಸ್ಪತ್ರೆ ಸಿಬ್ಬಂದಿ ನೆರವಿಗೆ ಬರಲಿಲ್ಲ ಎಂದು ಗರ್ಭಿಣಿ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

    ಹಾಸನ ತಾಲೂಕಿನ ಹಲಸಿನಹಳ್ಳಿ ಗ್ರಾಮದ ನಿವಾಸಿಯಾಗಿರುವ ಹೇಮಾ ಅವರು ರಾತ್ರಿ 11.30ಕ್ಕೆ ಹೆರಿಗೆಗೆಂದು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಕೋವಿಡ್ ನೆಗೆಟಿವ್ ವರದಿ ಕೇಳಿದ್ದಾರೆ. ಆದರೆ ಹೇಮಾ ಬಳಿ ರಿಪೋರ್ಟ್ ಇಲ್ಲದ ಕಾರಣ ಅವರನ್ನು ಆಸ್ಪತ್ರೆ ಒಳಗೆ ಸೇರಿಸಿಲ್ಲ. ಈ ಮೂಲಕ 24*7 ಹೆರಿಗೆ ಆಸ್ಪತ್ರೆಯಾದರೂ ಆರೋಗ್ಯ ಇಲಾಖೆ ಸಿಬ್ಬಂದಿ ಮಾನವೀಯತೆ ಮರೆತಿದ್ದಾರೆ.

    ಇತ್ತ ಆಸ್ಪತ್ರೆ ಒಳಗಡೆ ಸೇರಿಸದ ಪರಿಣಾಮ ಹೇಮಾ ಅವರು ಹೊರಗಡೆ ನರಳಿ ನರಳಿ ಅಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಹೆರಿಗೆಯಾದ ಬಳಿಕ ಆಕೆಯ ಕುಟುಂಬದ ಸದಸ್ಯರು ಅಂಬುಲೆನ್ಸ್ ನಲ್ಲಿ ಮಗು ಹಾಗೂ ಹೇಮಾರನ್ನು ಹಾಸನಕ್ಕೆ ಕರೆದುಕೊಂಡು ಹೋಗಿದ್ದಾರೆ.

  • ಇಸ್ರೇಲ್ ವಾಯುದಾಳಿಯಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡು ಬದುಕುಳಿದ ಮಗು

    ಇಸ್ರೇಲ್ ವಾಯುದಾಳಿಯಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡು ಬದುಕುಳಿದ ಮಗು

    ಜೆರುಸಲೇಮ್ : ಗಾಜಾದ ಹಮಾಸ್ ಬಂಡುಕೋರರೊಂದಿಗೆ ಆರಂಭಗೊಂಡ ಇಸ್ರೇಲ್ ಮಿಲಿಟಿರಿ ಪಡೆಯ ಯುದ್ಧ ದಿನೇ ದಿನೇ ತೀವ್ರತೆ ಪಡೆದುಕೊಳ್ಳುತ್ತಿದೆ. ಗಾಜಾ ನಗರದಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಿಂದ ಒಂದೇ ಕುಟುಂಬದ ಸುಮಾರು 10 ಮಂದಿ ಸಾವನ್ನಪ್ಪಿದ್ದು, ಪವಾಡಸದೃಶ್ಯವೆಂಬಂತೆ 6 ತಿಂಗಳ ಮಗು ಬದುಕುಳಿದಿದೆ.

    ಈದ್ ಅಲ್- ಫಿತರ್ ರಜಾದಿನವನ್ನು ಆಚರಿಸಲು ಪತ್ನಿ ಮತ್ತು ಐದು ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದರು. ದಾಳಿಗೆ ಸಿಲುಕಿ ಕುಟುಂಬದ ಬಹುತೇಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಮಗುವಿನ ತಂದೆ ಮೊಹಮ್ಮದ್ ಹದೀದಿ ಹೇಳಿದ್ದಾರೆ. ಕಳೆದ ಶನಿವಾರ ಘಟನೆ ನಡೆದಿದ್ದು, ಸಾವನ್ನಪ್ಪಿದ ಕುಟುಂಬದ 10 ಮದಿ ಪೈಕಿ ಬಹುತೇಕರು ಪುಟ್ಟ ಮಕ್ಕಳೆ ಆಗಿದ್ದಾರೆ.

    ಪತ್ನಿ ಮತ್ತು 6 ರಿಂದ 14 ವರ್ಷದ ಮಕ್ಕಳಲ್ಲಿ ಮೂವರು ಸಾವನ್ನಪಿದ್ದಾರೆ, 11 ವರ್ಷದ ಮಗು ಕಾಣೆಯಾಗಿದೆ. 6 ತಿಂಗಳ ಮಗ ಒಮರ್ ಮಾತ್ರ ಬದುಕುಳಿದಿದ್ದಾನೆ. ಮಗುವಿನ ಕಾಲು ಮುರಿದಿದೆ. ಮಗುವನ್ನು ಗಾಜಾದ ಅಲ್- ಶಿಫಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ದಾಳಿಯ ಬೆನ್ನಲ್ಲೇ ನೂರಾರು ಜನರು ಗಾಜಾ ನಗರದ ಬೀದಿಗಳಲ್ಲಿ ಕುಟುಂಬ ಸದಸ್ಯರ ಮೃತದೇಹಗಳನ್ನು ಹೊತ್ತು ಮೆರವಣಿಗೆ ನಡೆಸಿದ್ದಾರೆ ಎಂದು ಹದೀದಿ ತಿಳಿಸಿದ್ದಾರೆ.

    ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ನೂರಾರು ರಾಕೆಟ್‍ಗಳನ್ನು ಹಾರಿಸಿದ್ದಾರೆ. ಪ್ರತೀಕಾರವಾಗಿ ಇಸ್ರೇಲ್ ಗಾಜಾ ಪಟ್ಟಿ ಮೇಲೆ ವೈಮಾನೀಕ ದಾಳಿ ನಡೆಸಿದೆ. ಗಾಜಾದಲ್ಲಿ 31 ಮಕ್ಕಳು 20 ಮಹಿಳೆಯರು ಸೇರಿದಂತೆ ಕನಿಷ್ಠ 126 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್‍ನಲ್ಲಿ 6 ವರ್ಷದ ಬಾಲಕ, ಸೈನಿಕರು ಸೇರಿದಂತೆ 7ಮಂದಿ ಮೃತಪಟ್ಟಿದ್ದಾರೆ.

  • ಕಾರ್ ಖರೀದಿಸಲು ಕಂದಮ್ಮನನ್ನು ಮಾರಿದ ದಂಪತಿ

    ಕಾರ್ ಖರೀದಿಸಲು ಕಂದಮ್ಮನನ್ನು ಮಾರಿದ ದಂಪತಿ

    ಲಕ್ನೋ: ನವಜಾತ ಶಿಶುವನ್ನು ದಂಪತಿ ಉದ್ಯಮಿಗಳಿಗೆ 1.5 ಲಕ್ಷ ರೂಪಾಯಿಗೆ ಮಾರಿದ ಅಮಾನುಷ ಘಟನೆ ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ನಡೆದಿದೆ.

    ದಂಪತಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ತಮ್ಮ ಮಗುವನ್ನೇ ಮಾರಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಮಗುವಿನ ಅಜ್ಜ, ಅಜ್ಜಿಯಂದಿರು ಗುರುವಾರ ಪೊಲೀಸರನ್ನು ಸಂಪರ್ಕಿಸಿ ಪೋಷಕರ ವಿರುದ್ಧ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ತಿರ್ವಾ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

    ದಂಪತಿಗೆ ಮೂರು ತಿಂಗಳ ಹಿಂದೆ ಮಗು ಜನಿಸಿದ ಮಗುವಾಗಿದೆ. ಮಗಳು ಮತ್ತು ಅಳಿಯ ಮಗುವನ್ನು, ಗುರ್ಸಹೈಗಂಜ್ ಮೂಲದ ಉದ್ಯಮಿಯೊಬ್ಬರಿಗೆ 1.5 ಲಕ್ಷ ರೂ.ಗೆ ಮಾರಿದ್ದಾರೆ. ಸೆಕೆಂಡ್ ಹ್ಯಾಂಡ್ ಕಾರ್ ಕೊಳ್ಳಲು ಈ ಕೆಲಸ ಮಾಡಿದ್ದಾರೆ ಮಗುವಿನ, ಅಜ್ಜ, ಅಜ್ಜಿ ಪೊಲೀಸರ ಬಳಿ ಆರೋಪಿಸಿದ್ದಾರೆ.

     

    ಮಗು ಉದ್ಯಮಿ ಬಳಿ ಇದೆ. ನಾವು ಶುಕ್ರವಾರ ಮಹಿಳೆ ಮತ್ತು ಅವಳ ಪತಿಯನ್ನು ವಿಚಾರಣೆಗಾಗಿ ಕರೆದಿದ್ದೇವೆ. ದಂಪತಿ ಇತ್ತೀಚೆಗೆ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದ್ದಾರೆ ಎಂದೂ ಪೊಲೀಸರು ಹೇಳಿದ್ದಾರೆ.