ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ದಂಪತಿಗೆ ಗಂಡು ಮಗು ಜನನವಾಗಿದೆ.
ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಂಪತಿಗೆ ಇಂದು ಗಂಡು ಮಗು ಜನಿಸಿದೆ. ಈ ಮೂಲಕ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ರೇವತಿ ಜನ್ಮ ನಿಡಿದ್ದಾರೆ.
ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಾಜಿ ಸಿಎಂ ಹೆಚ್‍ಡಿಕೆ ಆಸ್ಪತ್ರೆಗೆ ಭೇಟಿ ನೀಡಿ ತಾಯಿ, ಮಗುವಿನ ಆರೋಗ್ಯ ವಿಚಾರಿಸಲಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ನಾಗ್ಪುರ vs ಇಟಲಿ ಫೈಟ್
ಹೆಚ್.ಡಿ ಕುಮಾರಸ್ವಾಮಿಯವರ ಪ್ರೀತಿಯ ಪುತ್ರ ನಿಖಿಲ್ ಕುಮಾರ್ ಸ್ವಾಮಿ ಪತ್ನಿ ರೇವತಿಗೆ ಕೆಲವು ದಿನಗಳ ಹಿಂದೆ ನಗರದ ಹೆಚ್‍ಎಸ್‍ಆರ್ ಲೇಔಟ್‍ನ ಮಾನ್ವಿ ಕನ್ವೆನ್ಷನ್ ಹಾಲ್‍ನಲ್ಲಿ ಸೀಮಂತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕೊರೊನಾ ಕಾರಣದಿಂದಾಗಿ ಈ ಕಾರ್ಯಕ್ರಮಕ್ಕೆ ಕೇವಲ ಆಪ್ತರು, ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಈ ಕುರಿತಂತೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೋ ಶೇರ್ ಮಾಡಿರುವ ಮಂಜು, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನವೀನ್ ಹಾಗೂ ಜ್ಯೋತಿ ದಂಪತಿಯ ಮಗು ಜನೀಶ್, ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ. ಮಗುವನ್ನು ಗುಣಪಡಿಸಲು ನಮ್ಮ ದೇಶದಲ್ಲಿ ಯಾವುದೇ ಚಿಕಿತ್ಸೆಗಳಿಲ್ಲ. ಚಿಕಿತ್ಸೆ ಕೊಡಿಸಲು ಬೇರೆ ದೇಶದಿಂದ ಒಂದು ಇಂಜೆಕ್ಷನ್ ತರಿಸಲು 16 ಕೋಟಿಯಾಗುತ್ತದೆ. ಈಗಾಗಲೇ 8 ಕೋಟಿ ರೂ ಸಂಗ್ರಹಿಸಲಾಗಿದೆ. ಆದರೆ ಇನ್ನೂ 3 ತಿಂಗಳ ಒಳಗೆ ಮತ್ತೆ 8 ಕೋಟಿ ಬೇಕಾಗಿದೆ. ಹಾಗಾಗಿ ಆದಷ್ಟು ಬೇಗ ನಿಮ್ಮ ಕೈಯಲ್ಲಿ ಆದಷ್ಟು ಹಣ ಸಹಾಯ ಮಾಡಿ ಹಾಗೂ ನಮ್ಮ ಕೈಯಲ್ಲಿ ಕೂಡ ಆದಷ್ಟು ಸಹಾಯ ಮಾಡಿ ಆ ಮಗುವನ್ನು ಉಳಿಸಿಕೊಳ್ಳೋಣ ಎಂದು ಕೈಮುಗಿದು ಬೇಡಿಕೊಂಡಿದ್ದಾರೆ. ಮಗು ತುಂಬಾ ಕಷ್ಟದಲ್ಲಿದ್ದು, ಅದನ್ನು ನೋಡಲು ಸಹ ಸಾಧ್ಯವಾಗುತ್ತಿಲ್ಲ. ಆ ಮಗುವನ್ನು ಉಳಿಸಿ, ಮಗುವಿನ ಮುಖದಲ್ಲಿ ನಗುವನ್ನು ತರಿಸಿ ಎಂದಿದ್ದಾರೆ.
ಮಗುವಿನ ಪೋಷಕರು ಮಗುವಿಗೆ 17 ತಿಂಗಳಾಗಿದ್ದರೂ ಕತ್ತು ನಿಂತಿಲ್ಲ, ಪೈಪ್ ಮೂಲಕವೇ ಊಟ ನೀಡುತ್ತಿದ್ದೇವೆ. ಈ ಕಾಯಿಲೆ ಬಂದರೆ ಮಗು ಉಳಿಯುವುದು ಬಹಳ ಕಷ್ಟ. ಕನಿಷ್ಠ 2 ವರ್ಷ ಬದುಕಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಇದು ನಿಮ್ಮ ಮನೆಯ ಮಗು ಅಂದುಕೊಂಡು ಮರು ಜನ್ಮ ನೀಡಿ. ಕಾಲಾವಕಾಶ ಬಹಳ ಕಡಿಮೆ ಇದೆ. ದಯವಿಟ್ಟು ಮಗುವನ್ನು ಉಳಿಸಿಕೊಡಿ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ಇಳಿಮುಖ – ಉಡುಪಿ ಕೃಷ್ಣಮಠದಲ್ಲಿ ಸಾರ್ವಜನಿಕ ಅನ್ನಪ್ರಸಾದ ಸೇವೆ ಆರಂಭ
ಮಗುವಿನ ತಂದೆ ನವೀನ್‍ರನ್ನು ಪರಿಚಯ ಮಾಡಿಕೊಟ್ಟ ಮಂಜು 8 ಲಕ್ಷ ಜನ 100ರೂ. ಎಂದು ಸಹಾಯ ಮಾಡಿದರೂ 8 ಕೋಟಿಯಾಗುತ್ತದೆ. 8 ಕೋಟಿ ಈಗಾಗಲೇ ದೊರೆತಿದ್ದು, ಇನ್ನೂ 8 ಕೋಟಿ ಬೇಕಾಗಿದೆ ದಯವಿಟ್ಟು ಎಲ್ಲರೂ ಸಪೋರ್ಟ್ ಮಾಡಿ ಎಂದು ಕೇಳಿ ಕೊಂಡಿದ್ದಾರೆ.
ಕೊಪ್ಪಳ: ದಲಿತರ ಮಗು ಪ್ರವೇಶಿಸಿ ಅಪವಿತ್ರ ಆಗಿದೆ ಎಂದು ಹೇಳಿ ದೇವಸ್ಥಾನ ಶುದ್ಧೀಕರಿಸಿದ್ದಲ್ಲದೇ ಮಗುವಿನ ಪೋಷಕರಿಗೆ ದೇವಸ್ಥಾನದ ಶುದ್ಧೀಕರಣ ಹೆಸರಲ್ಲಿ 10 ಸಾವಿರ ರೂಪಾಯಿ ದಂಡ ಹಾಕಲಾಗಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೀಯಾಪೂರ ಗ್ರಾಮದಲ್ಲಿ ಅಮಾನವೀಯ ಕೃತ್ಯ ನಡೆದಿದೆ. ಚನ್ನದಾಸರ ಸಮುದಾಯದ ಮಗು ಗ್ರಾಮದ ಆಂಜನೇಯ ದೇವಸ್ಥಾನ ಪ್ರವೇಶಿಸಿದೆ. ದಲಿತರು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಅಪವಿತ್ರವಾಗಿದೆ ಎಂದು ಸವರ್ಣಿಯರು ದೇವಸ್ಥಾನ ಶುದ್ದಿಕರಿಸಿದ್ದರು. ಜೊತೆಗೆ ದೇವಸ್ಥಾನ ಶುದ್ಧೀಕರಣದ ಖರ್ಚಿಗಾಗಿ 11 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಇದನ್ನೂ ಓದಿ: ನನ್ನ ಹೆತ್ತ ತಾಯಿಯನ್ನ ಮತಾಂತರ ಮಾಡಿದ್ದಾರೆ: ಗೂಳಿಹಟ್ಟಿ ಶೇಖರ್
ಗ್ರಾಮದ ಸವರ್ಣಿಯರು ಸಭೆ ನಡೆಸಿ ದಂಡ ವಿಧಿಸಿದ್ದರು. ಇದನ್ನು ವಿರೋಧಿಸಿ ಚನ್ನದಾಸರ ಸಮುದಾಯ ಪ್ರತಿಭಟನೆ ಮಾಡಿತ್ತು. ದೇವಸ್ಥಾನ ಪ್ರವೇಶ ಮಾಡಿರೋ ದಲಿತ ಮಗುವಿನ ಕುಟುಂಬಕ್ಕೆ ದಂಡ ವಿಧಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಜೀವಂತ ಇರಿಸಿದ್ದು ತಡವಾಗಿ ಬೆಳಕಿಗೆ ಬಂದು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಸಭೆ ಮಾಡಿದ್ದಾರೆ. ಗ್ರಾಮಕ್ಕೆ ಕುಷ್ಟಗಿ ತಹಶೀಲ್ದಾರ ಸಿದ್ದೇಶ, ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಭೇಟಿ ನೀಡಿ ಸಭೆ ನಡೆಸಿದ್ದಾರೆ.
ಮಾನ್ವಿ ಪಟ್ಟಣದ ಉಮ್ಮೇ ಕುಲ್ಸುಮ್(5) ಮೃತ ಬಾಲಕಿ. ಚಿಕಿತ್ಸೆ ಫಲಕಾರಿಯಾಗದೇ ಮಗು ಹೈದರಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ. ಮಾನ್ವಿ ಪಟ್ಟಣದ ನಿವಾಸಿ ಸೈಯದ್‍ರವರ ಮಗಳು ಉಮ್ಮೇ ಕುಲ್ಸುಮ್‍ಗೆ ಮಾನ್ವಿ, ರಾಯಚೂರು ಹಾಗೂ ಹೈದರಾಬಾದ್‍ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಉಮ್ಮೇ ಕುಲ್ಸುಮ್ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದೆ.
ಜಿಲ್ಲೆಯಲ್ಲಿ ಈವರೆಗೆ ಮೂರು ಮಕ್ಕಳು ಡೆಂಗ್ಯೂವಿನಿಂದ ಸಾವನ್ನಪ್ಪಿದ್ದಾರೆ. ಮಾನ್ವಿ ಪಟ್ಟಣದಲ್ಲಿ ಡೆಂಗ್ಯೂ ಜ್ವರದಿಂದ ಹೆಚ್ಚು ಮಕ್ಕಳು ಬಾಧಿತರಾಗಿದ್ದಾರೆ. ಪಟ್ಟಣದ ತಾಲೂಕಾಸ್ಪತ್ರೆ ಹಾಗೂ ರಾಯಚೂರು ನಗರದ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ ಎದುರಾಗಿದೆ. ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಪೋಷಕರು ಪರದಾಡುವಂತಾಗಿದೆ. ಇದನ್ನೂ ಓದಿ: 40 ಕೆಜಿ ತೂಕ ಇಳಿಸಿಕೊಂಡ ಬಾಲಿವುಡ್‍ನ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಪತ್ನಿ
ಬೆಂಗಳೂರು: ದಾಂಪತ್ಯದಲ್ಲಿ ತಾಳಮೇಳ ಇಲ್ಲ ಅಂದ್ರೆ ಏನಾಗುತ್ತೆ ಎಂಬುದಕ್ಕೆ ಶುಕ್ರವಾರ ಸಂಜೆ ಬೆಂಗಳೂರಿನ ತಿಗಳರಪಾಳ್ಯದಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣವೇ ಉದಾಹರಣೆ. 9 ತಿಂಗಳ ಮಗು ಸೇರಿದಂತೆ ಐವರ ಸಾವಿಗೆ ಕಾರಣವಾದ ಪ್ರಕರಣದ ಒಂದೊಂದೇ ಸತ್ಯಗಳು ಈಗ ಹೊರಕ್ಕೆ ಬರುತ್ತಿವೆ.
ಹಲ್ಲೆಗೆರೆ ಶಂಕರ್ ಕುಟುಂಬಕ್ಕೆ ಹಣ, ಆಸ್ತಿ, ಅಂತಸ್ತು ಎಲ್ಲವೂ ಬೇಕಾಗಿದ್ದಕ್ಕಿಂತ ಹೆಚ್ಚೇ ಇತ್ತು. ಆದರೆ ನೆಮ್ಮದಿ ಮಾತ್ರ ಇರಲಿಲ್ಲ. ಹಲ್ಲೆಗೆರೆ ಶಂಕರ್ ಪತ್ನಿಯ ಕಿರಿಕಿರಿ. ಇಬ್ಬರು ಹೆಣ್ಣುಮಕ್ಕಳ ದಾಂಪತ್ಯ ಜೀವನದ ಬಿರುಕು ನೆಮ್ಮದಿ ಕದಡಿತ್ತು. ಶಂಕರ್ ತಮ್ಮ ಮೂವರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ರು. ಹೆಣ್ಣು ಮಕ್ಕಳಿಬ್ಬರನ್ನು ಐಎಎಸ್ ಕೋಚಿಂಗ್‍ಗೂ ಕಳುಹಿಸಿದ್ದರು. ಎಂಜಿನಿಯರ್ ಮಗನಿಗೆ ಬಾರ್ ಲೈಸೆನ್ಸ್ ಕೊಡಿಸಿದ್ರು. ಏನು ಕೊರತೆ ಆಗದಂತೆ ಶಂಕರ್ ನೋಡಿಕೊಂಡಿದ್ರು. ಆದರೂ ಪತ್ನಿ ಭಾರತಿ ಯಾರನ್ನೂ ನೆಮ್ಮದಿಯಾಗಿ ಇರಲು ಬಿಟ್ಟಿರಲಿಲ್ಲ. ಪರಿಣಾಮವೇ ಈ ಘನಘೋರ ದುರಂತ.
ಬ್ಯಾಡರಹಳ್ಳಿ ಠಾಣೆಗೆ ತಮ್ಮ ಕೌಟುಂಬಿಕ ಕಲಹದ ಬಗ್ಗೆ ಹಲ್ಲೆಗೆರೆ ಶಂಕರ್ ಏಳುಪುಟಗಳ ದೂರು ನೀಡಿದ್ದು, ಅದರಲ್ಲಿ ಎಲ್ಲವನ್ನು ಕೂಡ ಇಂಚಿಂಚಾಗಿ ವಿವರಿಸಿದ್ದಾರೆ. ನನ್ನ ಪತ್ನಿ ಭಾರತಿಯೇ ದುರಂತದ ಸೂತ್ರಧಾರಿ. ಆಸ್ತಿ, ಹಣ ಪತ್ನಿ, ಮಗನ ಹೆಸರಿನಲ್ಲಿತ್ತು. ಬೇಕಾದಾಗ ಕೇಳಿ ಪಡೆಯುತ್ತಿದ್ದೆ. ಇಬ್ಬರು ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಕಳುಹಿಸಲು ಭಾರತಿ ನಿಕಾರಿಸುತ್ತಿದ್ದು, ಗಲಾಟೆ ಮಾಡುತ್ತಿದ್ದಳು. ಒಮ್ಮೆ ಮಗಳನ್ನು ಬಚ್ಚಿಟ್ಟು ನನ್ನ ಬಳಿ ಪತ್ನಿ ನಾಟಕ, ಗಲಾಟೆ ಮಾಡಿದ್ದಳು.
ಬೀಗರನ್ನು ಹೆದರಿಸಲು ಕೈಕೊಯ್ದುಕೊಳ್ಳುವಂತೆ ಮಗಳಿಗೆ ಪ್ರೇರೇಪಿಸಿದ್ದಳು. ಹೆಣ್ಣುಮಕ್ಕಳ ಸಂಸಾರ ಸರಿ ಮಾಡಲು ನೋಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಳು. ಇಲ್ಲಸಲ್ಲದ ಮಾತನ್ನಾಡಿ ಮಗಳು ಸಿಂಧೂ ಪತಿಯನ್ನು ಮನೆಗೆ ಬರದಂತೆ ಮಾಡಿದ್ದಳು. ಅಲ್ಲದೆ ಸೆ.09ರಂದು ನಡೆಯಬೇಕಿದ್ದ ಸಿಂಧೂ ಮಗಳ ನಾಮಕರಣ ವಿಚಾರದಲ್ಲಿ ಗಲಾಟೆ ತೆಗೆದಿದ್ದರು.
ಕಿವಿ ಚುಚ್ಚುವ ವಿಚಾರದಲ್ಲಿ ಗಲಾಟೆ ಶುರುವಾಗಿತ್ತು. ಅದಾದ ಬಳಿಕ ಮಗನ ಹೆಸರಲ್ಲಿ ಬಾರ್ ಓಪನ್ ಮಾಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ, ಜಗಳವಾಗಿತ್ತು. ವೈರಾಗ್ಯದಿಂದ 10 ಲಕ್ಷಕ್ಕೆ ಬೇಡಿಕೆಯಿಟ್ಟು ಆಶ್ರಮ ಸೇರಲು ನಿರ್ಧಾರ ಮಾಡಿದ್ದೆ. ಆಗ ಹಣ ಕೊಡಲ್ಲ ಎಂದು ಪತ್ನಿ ಹಾಗೂ ಮಗ ಗಲಾಟೆ ಮಾಡಿದ್ದರು. ಇದನ್ನೂ ಓದಿ: ಬೋರ್ವೆಲ್ಗೆ ಬಿದ್ದ ಎರಡೂವರೆ ವರ್ಷದ ಮಗು ಶವವಾಗಿ ಪತ್ತೆ
ಇದರಿಂದ ಬೇಸರಗೊಂಡು ಭಾನುವಾರ ಮನೆಬಿಟ್ಟಿದ್ದೆ. ಅದೇ ದಿನ ಸಂಜೆ ಹಣ ಕೊಡ್ತೀನಿ ಬನ್ನಿ ಎಂದು ಮಗ ವಾಟ್ಸಪ್ ಸಂದೇಶ ಕಳುಹಿಸಿದ್ದನು. ಆದರೆ ನಾನು ಅದಕ್ಕೆ ಸ್ಪಂದಿಸಿಲ್ಲ. ಮೊನ್ನೆ ಮನೆ ಬಳಿ ಬಂದಿದ್ದಾಗ ಬೀಗ ಹಾಕಿದ್ದು ನೋಡಿ ಗೆಳೆಯನ ಮನೆಯಲ್ಲಿ ಉಳಿದಿದ್ದೆ. ನಿನ್ನೆ ಸಂಜೆ ಅನುಮಾನ ಬಂದು ಮನೆ ಬಳಿ ಬಂದು ಪರಿಶೀಲನೆ ನಡೆಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಶಂಕರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಹಲ್ಲೆಗೆರೆ ಶಂಕರ್ ಮನೆಯಲ್ಲಿ ಭಾನುವಾರ ಜಗಳ ನಡೆದಿದ್ದು, ಸೋಮವಾರ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಒಬ್ಬೊಬ್ಬರು ಒಂದೊಂದು ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ. 9 ತಿಂಗಳ ಕಂದಮ್ಮ ಹಸಿವಿನಿಂದ ಸಾವನ್ನಪ್ಪಿದೆ. ತಾಯಿ, ಅಕ್ಕಂದಿರು ಹಾಗೂ 9 ತಿಂಗಳ ಮಗುವಿನ ಶವದ ಮಧ್ಯೆ ಎರಡು ದಿನವಿದ್ದ ಮಧುಸಾಗರ್, ಬುಧವಾರ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಗಳಿವೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಒಂದೇ ಕುಟುಂಬದ ಐವರು ಸಾವು ಪ್ರಕರಣ- ಐದು ದಿನ ಅನ್ನ, ನೀರಿಲ್ಲದೆ ಬದುಕುಳಿದ ಎರಡೂವರೆ ವರ್ಷದ ಕಂದಮ್ಮ
ಮಧುಸಾಗರ್ ನೇಣಿಗೆ ಶರಣಾಗುವ ಮುನ್ನ, ಬದುಕುಳಿದ ಎರಡೂವರೆ ವರ್ಷದ ಪ್ರೇಕ್ಷಾಗೆ ಬೇಕಾದ ಆಹಾರ, ಬಿಸ್ಕೆಟ್‍ಗಳನ್ನು ಪಕ್ಕದಲ್ಲೇ ಇಟ್ಟಿದ್ದ ಎಂದು ತಿಳಿದುಬಂದಿದೆ. ಸಾಮೂಹಿಕ ಆತ್ಮಹತ್ಯೆ ಪೂರ್ವನಿಯೋಜಿತ ಎನ್ನಲಾಗುತ್ತಿದೆ. ನಿನ್ನೆ ಸಂಜೆ ಶಂಕರ್ ಪೊಲೀಸರ ನೆರವಿನಿಂದ ಬಾಗಿಲು ಒಡೆದು ಮನೆ ಒಳಗೆ ಹೋದಾಗ, ಅಲ್ಲಿನ ಪರಿಸ್ಥಿತಿಯನ್ನು ನೋಡಿ ಶಾಕ್ ಆಗಿದ್ದರು. ಎಲ್ಲರೂ ಸತ್ತು ಹೋಗಿದ್ದಾರೆ ಎಂದು ಭಾವಿಸಿದ್ರು. ಆದರೆ ಪೊಲೀಸರು ಪ್ರೇಕ್ಷಾ ಉಸಿರಾಡ್ತಿರೋದನ್ನು ಗಮನಿಸಿದ್ರು. ಕೂಡಲೇ ಮೊಮ್ಮಗಳನ್ನು ಎತ್ತಿಕೊಂಡು ಹೊರಗೆ ಓಡಿದ ಶಂಕರ್, ಯಾರಾದ್ರೂ ನೀರು ಕೊಡಿ ಎಂದು ಕೂಗಿಕೊಂಡಿದ್ರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಒಂದೇ ಕುಟುಂಬದ ಐವರು ಸಾವು- ಆತ್ಮಹತ್ಯೆಗೂ ಮುನ್ನ ಪುಟ್ಟ ಕಂದಮ್ಮನ ಕೊಂದ್ರು!
ಅತ್ತ ಸಿಂಧೂರಾಣಿ ಪತಿ ಶ್ರೀಕಾಂತ್, ತಮ್ಮ ಮಗಳನ್ನು ನೋಡಲು ಹಾತೊರೆಯುತ್ತಿದ್ರು. ಗಂಡ-ಹೆಂಡ್ತಿ ನಡುವೆ ಗಲಾಟೆ ಇದ್ರೂ ವೀಡಿಯೋ ಕಾಲ್ ಮೂಲಕ ಮಗಳನ್ನು ಗಂಡನಿಗೆ ಸಿಂಧೂರಾಣಿ ತೋರಿಸ್ತಿದ್ರು. ಆದರೆ ಸೋಮವಾರದಿಂದ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ ಅಂದು ಸಂಜೆ ಮನೆ ಬಳಿ ಬಂದಿದ್ರು. ಮನೆ ಬಾಗಿಲು ಹಾಕಿದ್ದು ನೋಡಿ ವಾಪಸ್ಸಾಗಿದ್ರು ಎನ್ನಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆದು, ಸಂಜೆ ಸುಮ್ಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು. ಇದನ್ನೂ ಓದಿ: ಭಾನುವಾರ ಮನೆ ಬಿಟ್ಟಿದ್ದ ಮನೆ ಯಜಮಾನ ನಿನ್ನೆ ವಾಪಸ್ ಬಂದಾಗ ಕಂಡಿದ್ದು ಐವರ ಮೃತದೇಹ
ಸಾಮೂಹಿಕ ಆತ್ಮಹತ್ಯೆಗೆ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಹಲ್ಲೆಗೆರೆ ಶಂಕರ್ ಮತ್ತು ಇಬ್ಬರು ಅಳಿಯಂದಿರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಡೆತ್ ನೋಟ್ ಏನಾದ್ರೂ ಇದ್ಯಾ ಎಂದು ಪೊಲೀಸರು ಮನೆಯಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ಮಧುಸಾಗರ್ ಡೈರಿ ಸಿಕ್ಕಿದ್ದು, ಅದ್ರಲ್ಲಿ ತಂದೆಯ ಬಗ್ಗೆ ಇರುವ ಮಾಹಿತಿ ಪರಿಶೀಲಿಸಿದ್ದಾರೆ. ಮನೆಯ ಒಳಗಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆಯನ್ನು ನಡೆಸಿದ್ದಾರೆ. ಶಂಕರ್ ಮನೆಯ ಕೆಲಸದಾಕೆ ಭಾನುವಾರದಿಂದ ಮನೆ ಕಡೆ ಸುಳಿದಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬೆಂಗಳೂರು: ಕೌಟುಂಬಿಕ ಕಲಹದಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಪುಟ್ಟ ಮಗುವನ್ನು ಕೊಂದ ಘಟನೆ ಬೆಂಗಳೂರಿನ ತಿಗಳರಪಾಳ್ಯದಲ್ಲಿ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.
ತಿಗಳರಪಾಳ್ಯದಲ್ಲಿ ವಾಸವಿದ್ದ ಶಾಸಕರ ಪತ್ರಿಕೆ ಸಂಪಾದಕ ಶಂಕರ್ ಕುಟುಂಬದ ಐದು ಮಂದಿ ಅಕಾಲಿಕ ಸಾವು ಕಂಡಿದ್ದಾರೆ. ಮೃತರನ್ನು ಶಂಕರ್ ಪತ್ನಿ ಭಾರತಿ(50), ಮಗಳು ಸಿಂಚನ(33), 2ನೇ ಮಗಳು ಸಿಂಧುರಾಣಿ (30), ಮಗ ಮಧುಸಾಗರ್(27), ಹಾಗೂ 9 ತಿಂಗಳ ಮಗು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸಿಂಚನ ಮಗಳು ಬದುಕುಳಿದಿದ್ದಾಳೆ.
ಮೂರು ನಾಲ್ಕು ದಿನಗಳ ಹಿಂದೆ ಬ್ಯಾಡರ್ ಹಳ್ಳಿಯ ಚೇತನ್ ಸರ್ಕಲ್ 4 ಕ್ರಾಸ್ ನಲ್ಲಿರೋ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದ್ದು, ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ಆದರೆ ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಪ್ರತಿದಿನ ಗಲಾಟೆ ಆಗುತ್ತಿತ್ತು.ಹೀಗೆ ಪತ್ನಿಯೊಂದಿಗೆ ಜಗಳ ಮಾಡಿಕೊಂಡು ಶಂಕರ್ ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟಿದ್ದರು. ಇದರಿಂದ ಮನನೊಂದ ಶಂಕರ್ ಪತ್ನಿ, ಪುತ್ರ, ಇಬ್ಬರು ಹೆಣ್ಣುಮಕ್ಕಳು ಪತಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಸಿಂಧೂರಾಣಿಯ 9 ತಿಂಗಳ ಹಸುಗೂಸನ್ನು ಕೊಂದಿದ್ದಾರೆ.
ಬದುಕುಳಿದ ಕಂದಮ್ಮ..!
ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅದರಲ್ಲಿ 3 ವರ್ಷದ ಹೆಣ್ಣು ಮಗು ಅದೃಷ್ಟವಶಾತ್ ಪಾರಾಗಿದೆ. ಈ ಮಗು ಮೂರು ದಿನಗಳ ಕಾಲ ಹೆಣಗಳ ನಡುವೆ ಇತ್ತು. ಅನ್ನ ನೀರು ಇಲ್ಲದೇ ಸಾವಿನ ಮನೆಯಲ್ಲೇ ಮಗು ಇತ್ತು. ಸದ್ಯ ಆತ್ಮಹತ್ಯೆ ಸ್ಥಳದಲ್ಲಿಂದ ಮಗುವಿನ ರಕ್ಷಣೆ ಮಾಡಲಾಗಿದ್ದು, ಅಲ್ಲೇ ಸಮೀಪದ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: 10ನೇ ತರಗತಿಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಶೂಟ್ ಮಾಡಿಕೊಂಡು ಆತ್ಮಹತ್ಯೆ
ಘಟನೆಯ ಬಗ್ಗೆ ಡಿಸಿಪಿ ಸಂಜೀವ್ ಎಂ ಪಾಟೀಲ್ ಮಾತನಾಡಿ, ಈ ಮನೆಯಲ್ಲಿರುವವರು ಕಳೆದ ಮೂರು ನಾಲ್ಕು ದಿನಗಳಿಂದ ಫೋನ್ ರೀಸಿವ್ ಮಾಡತ್ತಿಲ್ಲ ಎಂದು ಇಂದು ಸಾಯಂಕಾಲ ಪೋಲೀಸ್ ಠಾಣೆಗೆ ಸ್ಥಳೀಯರಿಂದ ಕರೆ ಬಂದಿದೆ. ಬಂದು ಕಿಟಕಿ ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಐದು ಮೃತ ದೇಹ ಪತ್ತೆಯಾಗಿದೆ, ಅದರಲ್ಲಿ ಒಂದು ಮಗು ಇನ್ನೂ ನಾಲ್ಕು ವಯಸ್ಕರ ಮೃತ ದೇಹ ಪತ್ತೆಯಾಗಿದೆ. ಒಂದು ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳದಲ್ಲಿ ಶೋಧ ನಡೆಯುತ್ತಿದೆ. ಇನ್ನೂ ಘಟನೆ ಯಾವ ಕಾರಣಕ್ಕೆ ಆಗಿದೆ ಅಂತಾ ತನಿಖೆ ನಡೆಸುತ್ತಿದ್ದೇವೆ ಎಂದರು.
ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ: ಹೆತ್ತವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ಮಗ ಆತ್ಮಹತ್ಯೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತೀಹಳ್ಳಿ ಗ್ರಾಮದಲ್ಲಿ ಜರುಗಿದೆ.
ಮೃತ ದುರ್ದೈವಿ ಗಿರೀಶ್(32) ಆಗಿದ್ದು, ತನ್ನ ಆತ್ಮಹತ್ಯೆಗೆ ಅಪ್ಪ ರಾಜು, ಅಮ್ಮ ದೇವಮಣಿ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಗಿರೀಶ್ ತಂದೆ ರಾಜು ನಿವೃತ್ತ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದರೆ, ತಾಯಿ ದೇವಮಣಿ ಈಗಲೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. 11 ವರ್ಷದ ಹಿಂದೆ ತ್ರಿವೇಣಿ ಎಂಬಾಕೆಯನ್ನು ಗಿರೀಶ್ ಮದುವೆಯಾಗಿದ್ದ. ಇಷ್ಟು ವರ್ಷವಾದರೂ ಸಹ ಇವರಿಗೆ ಮಕ್ಕಳಾಗಿರಲಿಲ್ಲ. ಇದನ್ನೂ ಓದಿ: ಲಂಕೆಯಲ್ಲಿ ‘ಪಿಪಿಪಿ’ ಸಾಂಗ್ ಗುಂಗು – ಭರ್ಜರಿ ಸ್ಟೆಪ್ಸ್ ಹಾಕಿದ ಯೋಗಿ, ಕೃಷಿ ತಾಪಂಡ
ಹೀಗಾಗಿ ಅಪ್ಪ-ಅಮ್ಮ ಮಗ ಗಿರೀಶ್‍ಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಅಲ್ಲದೇ ಆಸ್ತಿ ಕೊಟ್ಟಿರಲಿಲ್ಲ. ಜೊತೆಗೆ ವಾಸ ಮಾಡಲು ಮನೆ ಕೂಡ ನೀಡಿರಲಿಲ್ಲ ಎಂದು ಆರೋಪ ಮಾಡಿದ್ದಾರೆ. ತಾವು ಚೆಂದದ ಮನೆಯಲ್ಲಿ ವಾಸವಿದ್ದು, ಗಿರೀಶ್ ಮತ್ತು ಅವರ ಪತ್ನಿಗೆ ತಮ್ಮ ಮನೆಯ ಕೊಟ್ಟಿಯಲ್ಲಿ ವಾಸ ಮಾಡಲು ಬಿಟ್ಟಿದ್ದರು. ಮಕ್ಕಳಾಗಲಿಲ್ಲ ಎಂದು ದಿನೇ, ದಿನೇ ತಂದೆ-ತಾಯಿಗಳು ಗಿರೀಶ್ ಹಾಗೂ ಆತನ ಪತ್ನಿಯನ್ನು ಹಂಗಿಸುತ್ತಿದ್ದರು. ಇದರಿಂದ ಮನನೊಂದು ಗಿರೀಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಸಾಲಬಾಧೆ ತಾಳದೆ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ
ತನ್ನ ಸಾವಿಗೆ ಅಪ್ಪ, ಅಮ್ಮನ ಕಿರುಕುಳವೇ ಕಾರಣ ಎಂದು ಡೆತ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗನ ಸಾವಿನ ನಂತರ ತಂದೆ-ತಾಯಿಗಳು ತಲೆ ಮರೆಸಿಕೊಂಡಿದ್ದು, ಸದ್ಯ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲ್ಕತ್ತಾ: ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ತಮ್ಮ ಚೊಚ್ಚಲ ಹೆರಿಗೆ ನಂತರ ಇದೇ ಪ್ರಥಮ ಬಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ.
ಆಗಸ್ಟ್ 8 ರಂದು ಗಂಡು ಮಗುವಿಗೆ ಜನ್ಮ ನೀಡಿದ ನುಸ್ರತ್ ಜಹಾನ್, ಒಂದು ತಿಂಗಳ ಒಳಗೆ ಇದೀಗ ಕೆಲಸವನ್ನು ಪುನರಾಂಭಿಸಿದ್ದಾರೆ. ಈ ಮಧ್ಯೆ ಶುಕ್ರವಾರ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್ ಜಹಾನ್ ಮಗುವಿನ ತಂದೆ ಬಗ್ಗೆ ಮಾಧ್ಯಮದ ಎದುರಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಸಂಸದೆ ನುಸ್ರತ್ ಜಹಾನ್
ಆಗಸ್ಟ್ 8ರಂದು ಕೋಲ್ಕತ್ತಾದ ನಿಯೀಟಿಯಾ ಆಸ್ಪತ್ರೆಯಲ್ಲಿ ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ನುಸ್ರತ್ ಮತ್ತು ಉದ್ಯಮಿ ನಿಖಿಲ್ ಜೈನ್ 2019ರಲ್ಲಿ ಟರ್ಕಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಬಳಿಕ ಕೆಲ ಕಾರಣಗಳಿಂದ ಇವರಿಬ್ಬರ ನಡುವೆ ಪರಸ್ಪರ ಬಿರುಕು ಮೂಡಿ ಬೇರೆ ಬೇರೆಯಾಗಿದ್ದರು ಎಂಬ ಸುದ್ದಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಕುರಿತಂತೆ ನುಸ್ರತ್ ನಿಖಿಲ್ ಜೈನ್ ಜೊತೆಗಿನ ಮದುವೆಗೆ ಯಾವುದೇ ಮಾನ್ಯತೆ ಇಲ್ಲ. ಟರ್ಕಿಯಲ್ಲಿ ಮದುವೆ ನಡೆದಿದ್ದು, ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್ ಶಿಪ್ ಅಷ್ಟೇ ಎಂದಿದ್ದರು.
ನಿಮ್ಮೊಂದಿಗೆ ಹಂಚಿಕೊಳ್ಳಲು ಒಂದು ಸಂತಸದ ವಿಚಾರವಿದೆ. ಕೆಲವು ದಿನಗಳಿಂದ ನಾನು ಕಾಣಿಸದೇ ಇರುವುದಕ್ಕೆ ಕಾರಣ ಇಲ್ಲಿದೆ. ಮಾರ್ಚ್ 2022ಕ್ಕಾಗಿ ನಾವು ಕಾಯುತ್ತಿದ್ದೇವೆ. ನಾವು ಮೂವರಿಂದ ನಾಲ್ವರಾಗುತ್ತಿದ್ದೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ದಿಶಾ ಮದನ್ ಬರೆದುಕೊಂಡು ಒಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮೂರನೇ ಅಲೆ ತಡೆಯಲು ಸಜ್ಜಾಗಿ: ಗೋಪಾಲಯ್ಯ
ತಮ್ಮ ಲವ್ ಜರ್ನಿ ಕುರಿತಾಗಿ ಒಂದು ವಿಡಿಯೋವನ್ನೂ ಇನ್ಸ್ಟಾಗ್ರಾಮ್‍ನಲ್ಲಿ ನಟಿ ದಿಶಾ ಮದನ್ ಹಂಚಿಕೊಂಡಿದ್ದಾರೆ. ಇದು ನಮ್ಮ ಕಥೆ, ನಾನು ಶಶಾಂಕ್ ವಾಸುಕಿ ಗೋಪಾಲ್ ಭೇಟಿಯಾಗಿದ್ದು 2016ರಲ್ಲಿ. 2017ರಲ್ಲಿ ನಮ್ಮ ಪ್ರೀತಿ ಅಧಿಕೃತವಾಯಿತು. ವೈವಾಹಿಕ ಬದುಕಿಗೆ ಕಾಲಿಟ್ಟೆವು, 2018ರಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವು, 2019ರಲ್ಲಿ ಗಂಡು ಮಗು ಜನಿಸಿತು. 2022ರಲ್ಲಿ ನಮ್ಮ ಮೊದಲನೇ ಮಗ ಅಣ್ಣನಾಗಲಿದ್ದಾನೆ. 2022ರಲ್ಲಿ ನಾವು ಮೂವರಿಂದ ನಾಲ್ವರಾಗುತ್ತೇವೆ ಎಂದು ವೀಡಿಯೋ ಮೂಲಕ ನಟಿ ದಿಶಾ ಮದನ್ ಹಾಗೂ ಶಶಾಂಕ್ ವಾಸುಕಿ ಗೋಪಾಲ್ ದಂಪತಿ ತಿಳಿಸಿದ್ದಾರೆ.
ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಸಕ್ರಿಯವಾಗಿರುವ ನಟಿ ದಿಶಾ ಮದನ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ಆಗ್ಗಾಗ ತಮ್ಮ ಮುದ್ದು ಮಗನ ಜೊತೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕ್ಯಾಮೆರಾಗೆ ಫೋಸ್ ಕೊಡುವ ದಿಶಾ ಮದನ್ ಈಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ನವದೆಹಲಿ: 1ವರ್ಷದ ಮಗು ಹುಟ್ಟುಹಬ್ಬದ ಆಚರಣೆಯ ದಿನ 12ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ನವದೆಹಲಿಯಲ್ಲಿರುವ ಕಾಸಾ ಗ್ರೀನ್ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ.
ರಿವಾನ್(1) ಮೃತನಾಗಿದ್ದಾನೆ. ಒಂದನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಮಗು ರಿವಾನ್, 12ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಸಂಭ್ರಮದಲ್ಲಿ ಪಾಲ್ಗೊಳ್ಳಲು ಬಂದವರೆಲ್ಲೂ ದುಃಖ ಮಡುಗಟ್ಟಿತ್ತು. ಇದನ್ನೂ ಓದಿ: ರಾಜೀನಾಮೆಯಿಂದ ಮತ್ತೆ ಹಿಂದೆ ಸರಿದ ಸಚಿವ ಆನಂದ್ ಸಿಂಗ್
ಒಂದು ವರ್ಷದ ಮಗುವಿನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮನೆ ಒಂದೇ ಕ್ಷಣದಲ್ಲಿ ಸೂತಕದ ಮನೆಯಾಗಿ, ಶೋಕದ ಮನೆಯಾಗಿ ಮಾರ್ಪಾಡದ ದುರ್ಘಟನೆ ಗ್ರೇಟರ್ ನೊಯ್ಡಾದ ಬಿಸ್ರಕ್ ಪೊಲೀಸ್ ಸ್ಟೇಶನ್ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ. ಇದನ್ನೂ ಓದಿ: ಮೊಮ್ಮಗಳಿಗೆ ಮೇಕೆ ಗುದ್ದಿದ್ದಕ್ಕೆ ಗಲಾಟೆ- ತಾತ ಸಾವು
ಸತ್ಯೇಂದ್ರ ಕಸನಾ ತನ್ನ ಒಂದು ವರ್ಷದ ಮಗನ ಹುಟ್ಟುಹಬ್ಬ ಆಚರಿಸಲು ಭರ್ಜರಿ ಸಿದ್ಧತೆ ನಡೆಸಿದ್ದರು. ಕೆಲವು ಅತಿಥಿಗಳು ಪಾಲ್ಗೊಂಡಿದ್ದರು. ಮನೆಯನ್ನೆಲ್ಲ ಶೃಂಗರಿಸಲಾಗಿತ್ತು. ಆದರೆ ಈ ಸಡಗರದ ಮಧ್ಯೆ ಮಗು ಫ್ಲ್ಯಾಟ್‍ನ ಬಾಗಿಲ ಬಳಿ ಆಡುತ್ತಿರುವುದನ್ನು ಯಾರೂ ಗಮನಿಸಲೇ ಇಲ್ಲ. ರಿವಾನ್ ಆಡುತ್ತ 12ನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.