Tag: Baby

  • ಮಗನ ಕೈ ಹಿಡಿದಿರುವ ವೀಡಿಯೋ ಶೇರ್ ಮಾಡಿದ ನುಸ್ರತ್ ಜಹಾನ್

    ಮಗನ ಕೈ ಹಿಡಿದಿರುವ ವೀಡಿಯೋ ಶೇರ್ ಮಾಡಿದ ನುಸ್ರತ್ ಜಹಾನ್

    ಕೋಲ್ಕತ್ತಾ: ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ತಮ್ಮ ಪ್ರೀತಿಯ ಪುತ್ರನ ಕೈ ಹಿಡಿದಿರುವ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಸದಾ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಸುದ್ದಿ ಮೂಲಕ ಸದ್ದು ಮಾಡುವ ನುಸ್ರತ್ 2021ರ ಆಗಸ್ಟ್ 26ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯ 3 ತಿಂಗಳ ಬಳಿಕ ಮಗನ ಪುಟ್ಟ ಕೈ ಹಿಡಿದಿರುವ ಪೋಸ್ಟ್‌ವೊಂದನ್ನು ನುಸ್ರತ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಮಗನ ಕೈ ಫೋಟೋ ಅಷ್ಟೇ ಅಲ್ಲದೇ ಯಶ್ ಹಾಗೂ ತಮ್ಮ ಕೆಲವೊಂದು ಫೋಟೋಗಳನ್ನು ಕೋಲಾಜ್ ಮಾಡಿ ವೀಡಿಯೋವನ್ನು ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಹೆರಿಗೆ ಬಳಿಕ ಕ್ಯಾಮೆರಾ ಮುಂದೆ ನುಸ್ರತ್ ಜಹಾನ್ – ಮಗುವಿನ ತಂದೆ ಬಗ್ಗೆ ಹೇಳಿದ್ದೇನು?

     

    View this post on Instagram

     

    A post shared by Nusrat (@nusratchirps)

    ಈ ಮುನ್ನ ಸೆಪ್ಟೆಂಬರ್ 9 ರಂದು ಹೆರಿಗೆ ನಂತರ ಮೊದಲ ಬಾರಿಗೆ ಮಾಧ್ಯಮದವರ ಮುಂದೆ ಕಾಣಿಸಿಕೊಂಡಿದ್ದ ನುಸ್ರತ್‍ಗೆ ಮಗುವಿನ ಮುಖವನ್ನು ಯಾವಾಗ ತೋರಿಸುತ್ತೀರಾ ಎಂದು ಕೇಳಿದ್ದ ಪ್ರಶ್ನೆಗೆ ಅದನ್ನು ನೀವು ಅವನ ತಂದೆಯೊಂದಿಗೆ ಕೇಳಬೇಕು. ಸದ್ಯ ಅವರು ಯಾರನ್ನು ನೋಡಲು ಬಿಡುತ್ತಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ:  ಗಂಡು ಮಗುವಿಗೆ ಜನ್ಮ ನೀಡಿದ ಸಂಸದೆ ನುಸ್ರತ್ ಜಹಾನ್

    ಆಗಸ್ಟ್ 26ರಂದು ಕೋಲ್ಕತ್ತಾದ ನಿಯೀಟಿಯಾ ಆಸ್ಪತ್ರೆಯಲ್ಲಿ ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ನುಸ್ರತ್ ಮತ್ತು ಉದ್ಯಮಿ ನಿಖಿಲ್ ಜೈನ್ 2019ರಲ್ಲಿ ಟರ್ಕಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಬಳಿಕ ಕೆಲ ಕಾರಣಗಳಿಂದ ಇವರಿಬ್ಬರ ನಡುವೆ ಪರಸ್ಪರ ಬಿರುಕು ಮೂಡಿ ಬೇರೆ ಬೇರೆಯಾಗಿದ್ದರು ಎಂಬ ಸುದ್ದಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಕುರಿತಂತೆ ನುಸ್ರತ್ ನಿಖಿಲ್ ಜೈನ್ ಜೊತೆಗಿನ ಮದುವೆಗೆ ಯಾವುದೇ ಮಾನ್ಯತೆ ಇಲ್ಲ. ಟರ್ಕಿಯಲ್ಲಿ ಮದುವೆ ನಡೆದಿದ್ದು, ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್ ಶಿಪ್ ಅಷ್ಟೇ ಎಂದಿದ್ದರು.

  • ತೊಟ್ಟಿಲಲ್ಲಿ ಮಲಗಿದ್ದ ತಂಗಿಗೆ ಬಿಸಿಯಾದ ಫೋರ್ಕ್‍ನಿಂದ ಬರೆ ಹಾಕಿದ ಅಕ್ಕ

    ತೊಟ್ಟಿಲಲ್ಲಿ ಮಲಗಿದ್ದ ತಂಗಿಗೆ ಬಿಸಿಯಾದ ಫೋರ್ಕ್‍ನಿಂದ ಬರೆ ಹಾಕಿದ ಅಕ್ಕ

    ಭುವನೇಶ್ವರ: 5 ವರ್ಷದ ಬಾಲಕಿಯೊಬ್ಬಳು 1 ತಿಂಗಳ ತನ್ನ ತಂಗಿಗೆ ಬಿಸಿಯಾದ ಫೋರ್ಕ್‍ನಿಂದ ಬರೆ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ಘಟನೆ ಒಡಿಶಾದಲ್ಲಿ ನಡೆದಿದೆ.

    ಮಗುವಿನ ಮೈಮೇಲೆ ಇದ್ದ ಕೆಂಪು ಬಣ್ಣದ ಗುರುತು ನೋಡಿದ ಪೋಷಕರು ಕಂಗಾಲಾಗಿದ್ದರು. ಮಗು ಪ್ರತಿನಿತ್ಯವೂ ನೋವಿನಿಂದ ಅಳುತ್ತಿರುವುದನ್ನು ಕಂಡು ಏನು ಮಾಡಬೇಕೆಂದು ತೋಚದೆ, ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗು ಆರೋಗ್ಯವಾಗಿದೆ ಈ ಗುರುತು ಹೇಗೆ ಆಗುತ್ತಿದೆ ಎನ್ನುವುದನ್ನು ತಿಳಿದಿಲ್ಲ. ಆಗ ಮಗುವಿನ ಪೋಷಕರಿಗೆ ಮನೆಯೊಳಗೆ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸುವಂತೆ ಸಲಹೆ ನೀಡಿದ್ದಾರೆ.

    ನಡೆದಿದ್ದೇನು ಗೊತ್ತಾ?:
    ಆರಂಭದಲ್ಲಿ ಅವರು ಮಗುವಿಗೆ ಸೆಪ್ಸಿಸ್ ಅಥವಾ ಕೆಲವು ಅಲರ್ಜಿಯ ಕಾರಣದಿಂದಾಗಿ ಕಲೆಗಳು ಉಂಟಾಗುತ್ತವೆ ಎಂದು ಭಾವಿಸಿದ್ದರು. ಹೀಗಾಗಿ ಮಗುವಿಗೆ ಒಂದು ತಿಂಗಳ ಕಾಲ ಚಿಕಿತ್ಸೆ ನೀಡಲಾಯಿತು. ಆದರೆ ದೇಹದ ಬೇರೆ ಭಾಗಗಳಲ್ಲೂ ಗಾಯಗಳು ಹೆಚ್ಚುತ್ತಲೇ ಇತ್ತು. ಕೆಲವು ದಿನಗಳಾದಾಗ ಆ ಕೆಂಪು ಗಾಯವಾದ ಜಾಗದಲ್ಲಿ ಸುಟ್ಟು ಒಣಗಿದ ಗುರುತುಗಳಿದ್ದವು. ಹೀಗಾಗಿ ಇದು ಸುಟ್ಟ ಗಾಯವೆಂದು ವೈದ್ಯರಿಗೆ ಖಚಿತವಾಯಿತು. ಇದು ಯಾರ ಕೆಲಸವೆಂದು ತಿಳಿಯಲು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮಗುವಿನ ಪೋಷಕರಿಗೆ ಸೂಚಿಸಿದರು. ಇದನ್ನೂ ಓದಿ: ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ

    ಮನೆಯಲ್ಲಿರುವ ಸಿಸಿಟಿವಿ ಫೂಟೇಜ್ ನೋಡಿದಾಗ ಅದರಲ್ಲಿ ತಮ್ಮ ಮಗಳು ಯಾರು ಇಲ್ಲದ ಸಮಯವನ್ನು ನೋಡಿ ತೊಟ್ಟಿಲಲ್ಲಿ ಮಲಗಿದ್ದ 1ತಿಂಗಳ ಮಗುವಿನ ಮೇಲೆ ಪ್ರತಿ ದಿನವೂ ಫೋರ್ಕ್ ಅನ್ನು ಬಿಸಿ ಮಾಡಿ ಸುಡುತ್ತಿದ್ದಳು. ಇದನ್ನು ನೋಡಿ ಅವರು ಆಘಾತಕ್ಕೊಳಗಾದರು. ತನ್ನ ತಾಯಿ ಮನೆಯ ಕೆಲಸದಲ್ಲಿ ನಿರತರಾಗಿದ್ದಾಗ, ಅಪ್ಪ ಹೊರಗೆ ಹೋಗಿದ್ದಾಗ ಅವರ ದೊಡ್ಡ ಮಗಳು ಅಡುಗೆಮನೆಗೆ ಹೋಗಿ, ಫೋರ್ಕ್ ಬಿಸಿ ಮಾಡಿ ಮಗುವಿನ ದೇಹದ ಮೇಲೆ ಆ ಚಮಚವನ್ನು ಇಡುತ್ತಿದ್ದಳು. ಆಕೆ ಹುಟ್ಟಿದ ಮೇಲೆ ಅಪ್ಪ-ಅಮ್ಮ ತನ್ನ ಬಗ್ಗೆ ಪ್ರೀತಿ ತೋರಿಸುತ್ತಿಲ್ಲ ಎಂದು ಆಕೆ ಈ ರೀತಿ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪತ್ನಿಯ ಪ್ರಿಯಕರನಿಂದ ಗಂಡನ ಕೊಲೆ

  • ಸರ್ಕಾರಿ ಬಸ್‍ನಲ್ಲಿ ಇಬ್ಬರು ಮಕ್ಕಳ ಜನನ – ಗಿಫ್ಟ್ ಆಗಿ ಸಿಕ್ತು  ಜೀವನಪರ್ಯಂತ ಉಚಿತ ಪಾಸ್

    ಸರ್ಕಾರಿ ಬಸ್‍ನಲ್ಲಿ ಇಬ್ಬರು ಮಕ್ಕಳ ಜನನ – ಗಿಫ್ಟ್ ಆಗಿ ಸಿಕ್ತು ಜೀವನಪರ್ಯಂತ ಉಚಿತ ಪಾಸ್

    ಹೈದರಾಬಾದ್: ಸರ್ಕಾರಿ ಬಸ್‍ಗಳಲ್ಲಿ ಜನಿಸಿದ ಇಬ್ಬರು ಹೆಣ್ಣು ಮಕ್ಕಳಿಗೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‌ಆರ್‌ಟಿಸಿ) ಜೀವನಪರ್ಯಂತ ಪ್ರಯಾಣಿಸಲು ಉಚಿತ ಬಸ್ ಪಾಸ್ ನೀಡಿದೆ.

    ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಯು ಬಸ್‍ನಲ್ಲಿ ಜನಿಸಿದ ಎರಡು ಶಿಶುಗಳಿಗೆ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ಉಚಿತ ಜೀವಮಾನ ಪಾಸ್‍ಗಳನ್ನು ಘೋಷಿಸಿದೆ. ನವೆಂಬರ್ 30ರಂದು ನಾಗರಕರ್ನೂಲ್ ಡಿಪೋಗೆ ಸೇರಿದ ಬಸ್‍ನಲ್ಲಿ ಪೆದ್ದಕೋತಪಲ್ಲಿ ಗ್ರಾಮದ ಬಳಿ ಮಹಿಳೆಯೊಬ್ಬರಿಗೆ ಹೆಣ್ಣು ಮಗು ಜನಿಸಿತ್ತು. ನಂತರ ಡಿಸೆಂಬರ್ 7ರಂದು ಸಿದ್ದಿಪೇಟೆ ಬಳಿ ಆಸಿಫಾಬಾದ್ ಡಿಪೋಗೆ ಸೇರಿದ ಬಸ್‍ನಲ್ಲಿ ಇನ್ನೋರ್ವ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ಈ ಇಬ್ಬರು ಮಹಿಳೆಯರಿಗೆ ಅನಿರೀಕ್ಷಿತವಾಗಿ ಬಸ್‍ನಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಟಿಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ಸಹಾಯ ಮಾಡಿದ್ದರು. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ – ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಯಾರು ಗೊತ್ತಾ?

    ಬಳಿಕ ಟಿಎಸ್‌ಆರ್‌ಟಿಸಿ ಸಿಬ್ಬಂದಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ತಾಯಂದಿರು ಮತ್ತು ನವಜಾತ ಶಿಶುಗಳಿಗೆ ಹೆಚ್ಚಿನ ಚಿಕಿತ್ಸೆ ಗಾಗಿ ಆಂಬುಲೆನ್ಸ್ ಮೂಲಕ ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಇದೀಗ ತಾಯಿ ಮಕ್ಕಳು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:  ವೆಲ್ಲಿಂಗ್ಟನ್‍ನಲ್ಲಿ ಹುತಾತ್ಮ ಯೋಧರಿಗೆ ಅಂತಿಮ ನಮನ, ಸೇನಾ ಗೌರವ

    BUS

    ಟಿಎಸ್‌ಆರ್‌ಟಿಸಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ. ಸಿ. ಸಜ್ಜಾನರ್ ಟಿಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಪ್ರಯಾಣಿಕರ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಇಬ್ಬರು ಇಬ್ಬರು ಹೆಣ್ಣು ಮಕ್ಕಳಿಗೆ ಜೀವನಪರ್ಯಂತ ಉಚಿತವಾಗಿ ಪ್ರಯಾಣಿಸಲು ಬಸ್ ಪಾಸ್ ನೀಡುವುದಾಗಿ ಘೋಷಿಸಿದರು.

  • ಗಡಿಭಾಗದಲ್ಲಿ ಜನಿಸಿದ ಮಗುವಿಗೆ ಬಾರ್ಡರ್ ಎಂದು ಹೆಸರಿಟ್ಟ ಹೆತ್ತವರು

    ಗಡಿಭಾಗದಲ್ಲಿ ಜನಿಸಿದ ಮಗುವಿಗೆ ಬಾರ್ಡರ್ ಎಂದು ಹೆಸರಿಟ್ಟ ಹೆತ್ತವರು

    ಇಸ್ಲಾಮಾಬಾದ್‌: ಗಡಿ ಭಾಗದಲ್ಲಿ ಜನಿಸಿದ ಗಂಡು ಮಗುವಿಗೆ ದಂಪತಿ ಬಾರ್ಡರ್ ಎಂದು ಹೆಸರಿಡುವ ಮೂಲವಾಗಿ ಸುದ್ದಿಯಾಗಿದ್ದಾರೆ.

    ಪಂಜಾಬ್ ಪ್ರಾಂತ್ಯದ ರಾಜನ್‍ಪುರ್ ಜಿಲ್ಲೆಗೆ ಸೇರಿದ ಪೋಷಕರು, ನಿಂಬು ಬಾಯಿ ಮತ್ತು ಬಲಮ್ ರಾಮ್ ಅವರು ಭಾರತ -ಪಾಕ್ ಗಡಿಯಲ್ಲಿ ಜನಿಸಿದ ಕಾರಣ ಮಗುವಿಗೆ ಈ ಹೆಸರನ್ನು ಇಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು

    ಲಾಕ್‍ಡೌನ್‍ಗೂ ಮುನ್ನ ತನ್ನ ಸಂಬಂಧಿಕರನ್ನು ಭೇಟಿ ಮಾಡುವುದರ ಜೊತೆಗೆ ತೀರ್ಥಯಾತ್ರೆಗೆ 98 ಮಂದಿ ನಾಗರಿಕರೊಂದಿಗೆ ಭಾರತಕ್ಕೆ ಬಂದಿದ್ದರು. ಇವರು ದಾಖಲೆಗಳ ಕೊರತೆಯಿಂದಾಗಿ ಮನೆಗೆ ಮರಳಲು ಸಾಧ್ಯವಾಗಲಿಲ್ಲ. ಕಳೆದ 71 ದಿನಳಿಂದ ಇತರ 97 ಪಾಕಿಸ್ತಾನಿ ಪ್ರಜೆಗಳೊಂದಿಗೆ ಅಟಾರಿ ಗಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಇವರು ತಮ್ಮ ಸ್ವಗ್ರಾಮಕ್ಕೆ ತೆರಳವುದಕ್ಕೆ ಮೂಲ ದಾಖಲೆಗಳು ಇಲ್ಲದ ಕಾರಣ ಭಾರತ-ಪಾಕ್ ಗಡಿ ಭಾಗವಾದ ಅತ್ತಾರಿಯಲ್ಲಿ ಟೆಂಟ್‍ಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದನ್ನೂ ಓದಿ: ಹತ್ತು ವರ್ಷ ಹಾಸನ ಜಿಲ್ಲೆಗೆ ಎರಡು ಪಕ್ಷಗಳ ಕೊಡುಗೆ ಏನು: ರೇವಣ್ಣ ಪ್ರಶ್ನೆ

    ಆಗ ನಿಂಬು ಬಾಯಿ ತುಂಬು ಗರ್ಭಿಣಿಯಾಗಿದ್ದು, ಡಿಸೆಂಬರ್ 2ರಂದು ಹೆರಿಗೆ ನೋವು ಕಾಣಿಸಿಕೊಂಡಿದೆ. ಪಕ್ಕದ ಪಂಜಾಬ್ ಗ್ರಾಮಗಳಿಂದ ಕೆಲವು ಮಹಿಳೆಯರು ನಿಂಬು ಬಾಯಿಗೆ ಹೆರಿಗೆಗೆ ಸಹಾಯ ಮಾಡಲು ಬಂದಿದ್ದರು. ಸ್ಥಳೀಯರು ಹೆರಿಗೆಗೆ ವೈದ್ಯಕೀಯ ಸೌಲಭ್ಯಗಳ ಜೊತೆಗೆ ಇತರ ಸಹಾಯವನ್ನೂ ಮಾಡಿದರು. ಆಗ ನಿಂಬು ಬಾಯಿಗೆ ಗಂಡು ಮಗು ಜನಿಸಿದೆ. ಈ ಮಗುವಿಗೆ ಪೋಷಕರು ಬಾರ್ಡರ್ ಎಂದು ನಾಮಕರಣ ಮಾಡಿದ್ದಾರೆ.

    ಇನ್ನೊಬ್ಬ ಪಾಕಿಸ್ತಾನಿ ಪ್ರಜೆ ಲಗ್ಯಾ ರಾಮ್ ದಂಪತಿಗೆ 2020 ರಲ್ಲಿ ಜೋಧ್‍ಪುರದಲ್ಲಿ ಮಗು ಜನಿಸಿತ್ತು. ಭಾರತದಲ್ಲಿ ಜನಿಸಿದ್ದ ಕಾರಣ ಆ ಮಗುವಿಗೆ ಭರತ್ ಎಂದು ನಾಮಕರಣ ಮಾಡಿದ್ದರು. ಲಗ್ಯಾ ರಾಮ್ ಜೋಧ್‍ಪುರದಲ್ಲಿರುವ ತನ್ನ ಸಹೋದರನನ್ನು ಭೇಟಿಯಾಗಲು ಬಂದಿದ್ದರು. ಆದರೆ ಅವರು ಸಹ ಅತ್ತಾರಿ ಗಡಿಯಲ್ಲೇ ಸಿಲುಕೊಂಡಿದ್ದಾರೆ.

    ಇವರೆಲ್ಲರೂ ರಹೀಮ್ ಯಾರ್ ಖಾನ್ ಮತ್ತು ರಾಜನ್‍ಪುರ ಸೇರಿದಂತೆ ಪಾಕಿಸ್ತಾನದ ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಪಾಕಿಸ್ತಾನಿ ರೇಂಜರ್‌ಗಳು ತಮ್ಮ ಪ್ರಜೆಗಳನ್ನು ಕರೆಸಿಕೊಳ್ಳಲು ನಿರಾಕರಿಸಿದ್ದರಿಂದ ಅವರು ಪ್ರಸ್ತುತ ಅತ್ತಾರಿ ಗಡಿಯಲ್ಲಿ ಟೆಂಟ್‍ನಲ್ಲಿ ವಾಸಿಸುತ್ತಿದ್ದಾರೆ. ಈ ಕುಟುಂಬಗಳು ಅತ್ತಾರಿ ಅಂತಾರಾಷ್ಟ್ರೀಯ ಚೆಕ್ ಪೋಸ್ಟ್ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಬೀಡುಬಿಟ್ಟಿವೆ. ಸ್ಥಳೀಯರು ಇವರಿಗೆ ಮೂರು ಹೊತ್ತಿನ ಊಟ, ಔಷಧ, ಬಟ್ಟೆ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

  • ನವಜಾತ ಹೆಣ್ಣು ಶಿಶುವಿನ ಮೃತದೇಹ ಟಾಯ್ಲೆಟ್ ಫ್ಲಶ್ ಟ್ಯಾಂಕ್‍ನಲ್ಲಿ ಪತ್ತೆ

    ನವಜಾತ ಹೆಣ್ಣು ಶಿಶುವಿನ ಮೃತದೇಹ ಟಾಯ್ಲೆಟ್ ಫ್ಲಶ್ ಟ್ಯಾಂಕ್‍ನಲ್ಲಿ ಪತ್ತೆ

    ಚೆನ್ನೈ: ನವಜಾತ ಹೆಣ್ಣುಮಗುವಿನ ಮೃತದೇಹ ಶೌಚಾಲಯದ ಫ್ಲಶ್ ಟ್ಯಾಂಕ್‍ನಲ್ಲಿ ಪತ್ತೆಯಾದ ಘಟನೆ ತಂಜಾವೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆ(ಟಿಎಂಸಿಹೆಚ್)ಯಲ್ಲಿ ನಡೆದಿದೆ.

    ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯೊಬ್ಬರು ತೀವ್ರ ನಿಗಾ ಘಟಕದ (ಐಸಿಯು) ಶೌಚಾಲಯ ಸ್ವಚ್ಛಗೊಳಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಫ್ಲಶ್ ಟ್ಯಾಂಕ್ ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದಾಗ ಮುಚ್ಚಳವನ್ನು ತೆರೆದು ನೋಡಿದ್ದಾರೆ. ನವಜಾತ ಶಿಶುವಿನ ಶವ ಟ್ಯಾಂಕ್‍ನ ನೀರಿನಲ್ಲಿ ಮುಳುಗಿರುವುದು ಕಂಡುಬಂದಿದೆ.  ಇದನ್ನೂ ಓದಿ: ಜರತಾರಿ ಸೀರೆ, ಆಭರಣ ಧರಿಸಿ ರೈಲ್ವೇ ನಿಲ್ದಾಣದಲ್ಲಿ ಊಟ ಹಂಚಿದ ಮಹಿಳೆ

    ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಮಗು ಫ್ಲಶ್ ಟ್ಯಾಂಕ್‍ಗೆ ಬೀಳುವ ಮೊದಲೇ ಸಾವನ್ನಪ್ಪಿದೆಯೇ ಅಥವಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆಯೇ ಎಂದು ತಿಳಿದುಕೊಳ್ಳಲು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಕುಂಬ್ಳೆ ದಾಖಲೆ ಮುರಿದ ಅಶ್ವಿನ್‌ – ಭಾರತದ ಗೆಲುವಿಗೆ ಬೇಕಿದೆ 5 ವಿಕೆಟ್‌

    ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ತೆಗೆದುಕೊಂಡಿದ್ದು, ಅದರಲ್ಲಿ ಸಾಕ್ಷಿಗಳನ್ನು ಕಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.

  • ಸೈಕಲ್‌ನಲ್ಲಿ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ ನ್ಯೂಜಿಲೆಂಡ್‌ ಸಂಸದೆ

    ಸೈಕಲ್‌ನಲ್ಲಿ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ ನ್ಯೂಜಿಲೆಂಡ್‌ ಸಂಸದೆ

    ವಿಲ್ಲಿಂಗ್‌ಟನ್: ನ್ಯೂಜಿಲೆಂಡ್‌ನ ಸಂಸದೆ ಸೈಕಲ್‌ನಲ್ಲಿ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ.

    ಸಂಸದೆ ಜ್ಯೂಲಿ ಅನ್ನೆ ಜೆಂಟರ್‌ ಅವರಿಗೆ ಭಾನುವಾರ ನಸುಕಿನ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಸಂಸದೆ ಸ್ವತಃ ತಾವೇ ಸೈಕಲ್‌ ಚಲಾಯಿಸಿಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ಆಸ್ಪತ್ರೆಗೆ ತಲುಪಿದ 1 ಗಂಟೆಯ ಬಳಿಕ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇದನ್ನೂ ಓದಿ: ರಶೀದ್ ಖಾನ್ ಬೇಡಿಕೆ ಕಂಡು ದಂಗಾದ ಹೈದರಾಬಾದ್ ಫ್ರಾಂಚೈಸ್

    ಮಗುವಿಗೆ ಜನ್ಮ ನೀಡಿದ ನಂತರ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಖುಷಿಯನ್ನು ಹಂಚಿಕೊಂಡಿರುವ ಸಂಸದೆ, ಇಂದು ನಸುಕಿನ 3.04ರ ವೇಳೆಗೆ ನಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಸೈಕಲ್‌ನಲ್ಲಿ ಆಸ್ಪತ್ರೆಗೆ ಬರುವ ಯಾವುದೇ ಯೋಜನೆ ಇರಲಿಲ್ಲ. ಕೊನೆಗೆ ಸೈಕಲ್‌ನಲ್ಲೇ ಆಸ್ಪತ್ರೆಗೆ ಬರುವಂತಾಯಿತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯಿಸಿ ಕಾಶ್ಮೀರದ ವ್ಯಾಪಾರಿಗಳ ಮೇಲೆ ಹಲ್ಲೆ

    ಮಧ್ಯರಾತ್ರಿ 2ರ ಹೊತ್ತಿಗೆ ಆಸ್ಪತ್ರೆಗೆ ಹೊರಡುವಾಗ ಹೆರಿಗೆ ನೋವು ಅಷ್ಟಾಗಿ ಇರಲಿಲ್ಲ. 10 ನಿಮಿಷದಲ್ಲಿ ಆಸ್ಪತ್ರೆಗೆ ಸೇರಿದೆ. ಸುಲಲಿತವಾಗಿ ಹೆರಿಗೆಯಾಗಿದೆ. ನಾವು ಆರೋಗ್ಯವಾಗಿದ್ದೇವೆ ಎಂದು ತಿಳಿಸಿದ್ದಾರೆ. ಜ್ಯೂಲಿ ಅವರ ಪೋಸ್ಟ್‌ಗೆ ಸಾವಿರಾರು ಪ್ರತಿಕ್ರಿಯೆ, ಅಭಿನಂದನೆಗಳು ವ್ಯಕ್ತವಾಗಿವೆ.

    ಸಂಸದೆ ಜ್ಯೂಲಿ ಅವರು 2018ರಲ್ಲಿ ಮೊದಲ ಹೆರಿಗೆ ಸಂದರ್ಭದಲ್ಲಿಯೂ ಇದೇ ರೀತಿ ಸೈಕಲ್‌ನಲ್ಲಿ ಆಸ್ಪತ್ರೆಗೆ ಬಂದಿದ್ದರು.

  • 10 ತಿಂಗಳ ಕಂದಮ್ಮನ ಮೇಲೆ ಮನೆಕೆಲಸದವನಿಂದ ಅತ್ಯಾಚಾರ

    10 ತಿಂಗಳ ಕಂದಮ್ಮನ ಮೇಲೆ ಮನೆಕೆಲಸದವನಿಂದ ಅತ್ಯಾಚಾರ

    ಲಕ್ನೋ: 10 ತಿಂಗಳಿನ ಹೆಣ್ಣು ಮಗು ಮೇಲೆ ಮನೆಕೆಲಸದವನು ಅತ್ಯಾಚಾರ ಮಾಡಿರುವ ಪ್ರಕರಣ ಸಾದಾತ್‍ಗಂಜ್‍ನಲ್ಲಿ ಭಾನುವಾರ ನಡೆದಿರುವುದು ಬೆಳಕಿಗೆ ಬಂದಿದೆ.

    ಮಗುವನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗಕ್ಕೆ ದಾಖಲಿಸಲಾಗಿದೆ. ಮಗುವಿನ ಜನನಾಂಗಕ್ಕೆ ಹಾನಿಯಾಗಿದ್ದು, ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆ. ಆದಾಗ್ಯೂ, ಮೂತ್ರ ಮತ್ತು ಮಲ ವಿಸರ್ಜನೆ ಸಮಯದಲ್ಲಿ ಸ್ವಲ್ಪ ನೋವು ಇರುತ್ತದೆ. ಇದಕ್ಕಾಗಿ ಔಷಧಿ ನೀಡುತ್ತಿದ್ದೇವೆ. ಗುದದ್ವಾರದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕು ಕಡಿಮೆಯಾದ ಬಳಿಕ ಅಗತ್ಯ ಬಿದ್ದರೆ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುತ್ತದೆ ಎಂದು ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಪ್ರೊ ಜೆ.ಡಿ. ರಾವತ್ ತಿಳಿಸಿದ್ದಾರೆ. ಇದನ್ನೂ ಓದಿ: ಥ್ರೋಬಾಲ್ ಆಡಿ ಗಮನಸೆಳೆದ ನಟಿ ರೋಜಾ

    ನಡೆದಿದ್ದೇನು: ಮಗುವಿನ ತಾಯಿಯು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮಗ ಇದ್ದಕ್ಕಿದ್ದಂತೆ ಅಳುಲು ಪ್ರಾರಂಭಿಸಿದೆ. ಕೂಡಲೇ ಬೆಡ್ ರೂಂಗೆ ಬಂದು ನೋಡಿದಾಗ ಮನೆ ಕೆಲಸ ಮಾಡಿಕೊಂಡಿದ್ದ ಸನ್ನಿ ಮಗುವಿನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ. ಆಗ ಮಹಿಳೆಯನ್ನು ನೋಡುತ್ತಿದ್ದಂತೆ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಯ ಮಗುವಿನ ತಾತಿ ಕುಟುಂಬಸ್ಥರಿಗೆ ನಡೆದಿರುವ ವಿಚಾರವನ್ನು ತಿಳಿಸಿದ್ದಾಳೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆ – 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

    ಮಗುವಿನ ಕುಟುಂಬಸ್ಥರು ಪೊಲೀಸರಲ್ಲಿ ದೂರು ನೀಡಿದ್ದಾರೆ. ಕುಟುಂಬದ ದೂರಿನ ಮೇರೆಗೆ ಆರೋಪಿಯನ್ನು ಸೋಮವಾರ ಬಂಧಿಸಲಾಗಿದ್ದು, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸಾದತ್‍ಗಂಜ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಬ್ರಿಜೇಶ್ ಕುಮಾರ್ ಯಾದವ್ ತಿಳಿಸಿದ್ದಾರೆ.

  • 5.5 ತಿಂಗಳಿಗೆ ಜನಿಸಿದ ಮಗು ವಿಶ್ವ ದಾಖಲೆ

    5.5 ತಿಂಗಳಿಗೆ ಜನಿಸಿದ ಮಗು ವಿಶ್ವ ದಾಖಲೆ

    ನ್ಯೂಯಾರ್ಕ್: 2020ರ ಜುಲೈನಲ್ಲಿ ಅಮೆರಿಕಾದ ಅಲಬಾಮದಲ್ಲಿ ಐದೂವರೆ ತಿಂಗಳಲ್ಲೇ ಜನಿಸಿದ ಮಗುವು ಅವಧಿಗಿಂತ ಮುಂಚಿತವಾಗಿ ಹುಟ್ಟಿ ಬದುಕುಳಿದ ಮಗು ಎಂಬ ಗಿನ್ನಿಸ್ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ.

    2020 ಜುಲೈ4ರಂದು ಮಿಶೆಲ್ ಬಟ್ಲರ್ ಅವರಿಗೆ ಜನಿಸಿದ ಕುರ್ಟಿಸ್ ಝೈ-ಕೀರ್ತ್ ಗಿನ್ನಿಸ್ ದಾಖಲೆಗೆ ಭಾಜನವಾದ ಮಗುವಾಗಿದೆ. ಸಾಮಾನ್ಯವಾಗಿ ಮಹಿಳೆ ಗರ್ಭ ಧರಿಸಿದ 9 ತಿಂಗಳ ಬಳಿಕ ಮಗುವಿನ ಜನ್ಮ ನೀಡುತ್ತಾರೆ. ಆದರೆ ಐದೂವರೆ ತಿಂಗಳಿಗೆ ಈ ಮಗು ಜನಿಸಿದೆ. ಇದನ್ನೂ ಓದಿ: ಫೇಸ್‍ಬುಕ್ ತೆರೆದರೆ ಕೆನ್ನಗೆ ಬಾರಿಸಲು ಮಹಿಳೆ ನೇಮಿಸಕೊಂಡ ಉದ್ಯಮಿ

    ಮಿಶೆಲ್ 2020ರ ನವೆಂಬರ್ 11ರಂದು ತಮ್ಮ ಮಗುವಿನ ಜನ್ಮ ನೀಡಬೇಕಿತ್ತು. ಆದರೆ ಆರೋಗ್ಯ ಪರೀಕ್ಷೆಗೆ 2020ರ ಜುಲೈ 4 ರಂದು ಆಸ್ಪತ್ರೆಗೆ ಬಂದ ಮಿಶೆಲ್ ಅವರನ್ನು ಅಲಬಾಮನ ವಿವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದನ್ನೂ ಓದಿ: ಹಿಂದೂ ಪುರಾತನ ದೇವಾಲಯವನ್ನು ಪುನರ್‌ನಿರ್ಮಿಸಲು ಆದೇಶಿದ ಪಾಕ್ ನ್ಯಾಯಮೂರ್ತಿ

    ಮಿಶೆಲ್ ಅವರಿಗೆ ಒಂದು ಹೆಣ್ಣು, ಗಂಡು ಮಗು ಜನಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಹೆಣ್ಣು ಮಗುಸಾವನ್ನಪ್ಪಿತ್ತು. ಆದರೆ ಹುಟ್ಟಿದಾಗ ಗಂಡು ಮಗು ಕೇವಲ 420 ಗ್ರಾಂ ಅಂದರೆ ಒಂದು ಪುಟ್ಬಾಲ್ ತೂಕ ಕ್ಕಿಂತ ಕಡಿಮೆ ಇತ್ತು. ಈಗ ಇದು ಸಾಮಾನ್ಯ ಮಗುವಿನಂತೆ ಬೆಳೆಯುತ್ತಿದೆ.

  • ಅಗ್ನಿ ಅವಘಡ-  ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 4 ಶಿಶುಗಳು ಸಾವು

    ಅಗ್ನಿ ಅವಘಡ-  ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 4 ಶಿಶುಗಳು ಸಾವು

    ಭೋಪಾಲ್: ಸರ್ಕಾರಿ ಸ್ವಾಮ್ಯದ ಕಮಲಾ ನೆಹರು ಮಕ್ಕಳ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಟ ನಾಲ್ವರು ಮಕ್ಕಳು ಮೃತಪಟ್ಟಿರುವ ಘಟನೆ ನಡೆದಿದೆ.

    ಅಗ್ನಿ ಅವಘಡ ಸಂಭವಿಸಿದಾಗ 50 ಮಕ್ಕಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

    ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ಮಾತನಾಡಿದ್ದು, ಘಟನೆಯನ್ನು ದುರದೃಷ್ಟಕರವಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕೆ ಹಾಗೂ ರಕ್ಷಣಾ ಕಾರ್ಯಾಚರಣೆಗೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ.  ಇದನ್ನೂ ಓದಿ: ಅನ್ನ ಸಂತರ್ಪಣೆ ವೇಳೆ ಪುನೀತ್ ನೆನೆದು ಕಣ್ಣೀರಿಟ್ಟ ಅಶ್ವಿನಿ

    ಅಗ್ನಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂವರು ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಇದು ಅತ್ಯಂತ ನೋವಿನ ಸಂಗತಿ. ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದ್ದು, ಬೆಂಕಿಯ ಕೆನ್ನಾಲಿಗೆ ತಹಬದಿಗೆ ಬಂದಿದೆ ಎಂದು ಚೌಹಾಣ್ ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ: ಖುದ್ದು ರಕ್ತದಾನ ಮಾಡಿ ಮಾದರಿಯಾದ ನಟ ಶಿವರಾಜ್ ಕುಮಾರ್

    ಈ ದುರಂತಕ್ಕೆ ಕಾರಣ ತಿಳಿಯಲು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ. ವೈದ್ಯಕೀಯ ವಿಭಾಗ ಹಾಗೂ ವೈದ್ಯಕೀಯ ಶಿಕ್ಷಣ ವಿಭಾಗದ ಎಸಿಎಸ್ ಮೊಹಮ್ಮದ್ ಸುಲೇಮಾನ್ ಈ ತನಿಖೆಯ ನೇತೃತ್ವ ವಹಿಸಲಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ. ರಾತ್ರಿ 9 ರ ವೇಳೆಗೆ ಅಗ್ನಿ ಅವಘಡ ಸಂಭವಿಸಿದ್ದು, 8-10 ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾಗಿವೆ.

  • ಮಗನ ಮುಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೆತ್ತವರು

    ಮಗನ ಮುಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೆತ್ತವರು

    ಹೈದರಾಬಾದ್: ತಂದೆ ತಾಯಿ ಇಬ್ಬರೂ ಮಗು ಹುಟ್ಟಿದ ಮೇಲೆ ಮದುವೆಯಾಗಿರುವ ಘಟನೆ ತಮಿಳುನಾಡಿನ ಕುಡಲ್ಲೋರು ಊರಿನಲ್ಲಿ ನಡೆದಿದೆ.

    ವೆಲ್ಮುರುಗನ್ ಯುವತಿಯನ್ನು ಪ್ರೀತಿಸಿ ಗರ್ಭವತಿಯನ್ನಾಗಿ ಮಾಡಿದ್ದ. ಆದರೆ ಅದಾದ ನಂತರ ಮೋಸ ಮಾಡಿದ್ದ. ಆದರೆ ಮಗು ಜನಿಸಿದ ನಂತರ ಪೊಲೀಸರ ಭಯಕ್ಕೆ ಯುವತಿಯನ್ನು ಮದುವೆಯಾಗಿದ್ದಾನೆ.

    ಈ ಜೋಡಿ ಪ್ರಿತಿಸುತ್ತಿದ್ದರು. ಮದುವೆಯಾಗುತ್ತೇನೆ ಎಂದು ಹೇಳಿ ವೆಲ್ಮುರುಗನ್ ಲೈಂಗಿಕ ಸಂಪರ್ಕ ನಡೆಸಿದ್ದನು. ಯುವತಿ ಗರ್ಭವತಿಯಾಗಿದ್ದಾಳೆ, ಅದಾದ ನಂತರ ವೆಲ್ಮುರುಗನ್ ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಯುವತಿ ಆತನ ಮನೆಗೆ ಹೋಗಿ ಗಲಾಟೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಆಕೆ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗಬೇಕಾಯಿತು. ಇದನ್ನೂ ಓದಿ:  ಪುನೀತ್ ರಾಜ್‌ಕುಮಾರ್‌ಗೆ ಲಘು ಹೃದಯಾಘಾತ

    ನಂತರ ಯುವತಿ ಒಂಭತ್ತು ತಿಂಗಳು ನೋವಿನಲ್ಲೇ ಕಳೆದು ಗಂಡು ಮಗುವನ್ನು ಹೆತ್ತಳು ಆಸ್ಪತ್ರೆಯಲ್ಲಿ ಮಗುವಿನ ತಂದೆಯ ಹೆಸರು ಕೇಳಿದಾಗ, ಅವಳು ಅನಿವಾರ್ಯವಾಗಿ ವೆಲ್ಮುರುಗನ್ ಹೆಸರು ಹೇಳಬೇಕಾಯ್ತು. ಜೊತೆಗೆ ತಾನು ಅನುಭವಿಸಿದ ನೋವನ್ನು ಕೂಡ ನರ್ಸ್‍ಗೆ ಯುವತಿ ಹೇಳಿದ್ದಳು. ಆಗ ಈ ವಿಚಾರವಾಗಿ ಅದಾದ ನಂತರ ನರ್ಸ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವೆಲ್ಮುರುಗನ್‍ಗೆ ಕಿವಿ ಮಾತು ಹೇಳಿದ್ದಾರೆ. ಆಗ ಜೈಲಿಗೆ ಹೋಗುವ ಭಯಕ್ಕೋ, ತಪ್ಪಿನ ಅರಿವಾಗಿಯೋ ವೆಲ್ಮುರುಗನ್ ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಹಸುಗೂಸಿನ ಮುಂದೆಯೇ ಇಬ್ಬರೂ ಮದುವೆಯಾಗಿದ್ದಾರೆ.ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – 10 ಸಾವಿರ ಕೋಟಿ ರೂ. ಹಗರಣ!