Tag: Baby

  • ಪತಿ ಭಯಕ್ಕೆ ಮಗುವನ್ನು ಬಿಟ್ಟು ಹೋದ್ಲು – ಪಶ್ಚಾತ್ತಾಪದಿಂದ ಮಗುವನ್ನು ಮರಳಿ ಪಡೆದ್ಲು

    ಪತಿ ಭಯಕ್ಕೆ ಮಗುವನ್ನು ಬಿಟ್ಟು ಹೋದ್ಲು – ಪಶ್ಚಾತ್ತಾಪದಿಂದ ಮಗುವನ್ನು ಮರಳಿ ಪಡೆದ್ಲು

    ಚೆನ್ನೈ: ಪತಿಯ ಭಯಕ್ಕೆ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದ ತಾಯಿ ನಂತರ ಪಶ್ಚಾತ್ತಾಪಪಟ್ಟು ಮಗುವನ್ನು ಮರಳಿ ಪಡೆಯಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

    ಮೂರನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ 25 ವರ್ಷದ ಮಹಿಳೆಗೆ ಪತಿ ಬೆದರಿಸಿದ ಹಿನ್ನೆಲೆ ಮಗುವನ್ನು ತಿರುಚ್ಚಿಯ ಆಸ್ಪತ್ರೆಯೊಂದರ ಹೊರಗೆ ಬಿಟ್ಟು ಹೋಗಿದ್ದಳು. ಆದರೆ ಈ ವೇಳೆ ಕೆಲವು ಕಟ್ಟಡ ಕಾರ್ಮಿಕರು ಮಗುವನ್ನು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಿರ್ಭಯಾ ದಳ: ಮಹಿಳೆಯರ ರಕ್ಷಣೆಗಾಗಿ ಮುಂಬೈ ಪೊಲೀಸರ ಕಾರ್ಯಕ್ಕೆ ಬಿಟೌನ್ ಮಂದಿ ಮೆಚ್ಚುಗೆ

    ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮಗುವನ್ನು ವಶಪಡಿಸಿಕೊಂಡು ತಿರುಚ್ಚಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದರು. ಅಲ್ಲದೇ ಮಗುವಿನ ಪೋಷಕರನ್ನು ಹುಡುಕಲು ಆರಂಭಿಸಿದ್ದರು. ವಿಚಿತ್ರವೆಂದರೆ ಜನವರಿ 27ರ ಬೆಳಗ್ಗೆ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಮಗು ತನ್ನದೆಂದು ತಿಳಿಸಿದ್ದಾಳೆ. ಮಗುವನ್ನು ತಾನೇ ಬಿಟ್ಟುಹೋಗಿದ್ದು, ನಂತರ ಮಗುವನ್ನು ಮರಳಿ ಹೋದಾಗ ಸ್ಥಳೀಯರು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿಸಿರುವುದಾಗಿ ಹೇಳಿದ್ದಾಳೆ.

    POLICE JEEP

    ನಂತರ ಪೊಲೀಸ್ ಠಾಣೆಗೆ ಆಗಮಿಸಿದ ಮಹಿಳೆ ಪತಿಯ ಒತ್ತಡದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿ ಪಶ್ಚಾತಾಪಪಟ್ಟಿದ್ದಾಳೆ. ಸದ್ಯ ಮಗುವಿಗೆ ಇನ್ನೂ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಭ್ರಷ್ಟಾಚಾರದಲ್ಲೇ ಬಿಜೆಪಿ ಸರ್ಕಾರ ಕಾಲ ಕಳೆಯುತ್ತಿದೆ: ಪ್ರಿಯಾಂಕ್ ಖರ್ಗೆ


    Woman, Baby, Police Station, Tamil Nadu

  • ಸ್ವಚ್ಛತಾ ಸಿಬ್ಬಂದಿ ಕೊಟ್ಟ ಬದಲಿ ಚುಚ್ಚುಮದ್ದಿನಿಂದ ಮಗುವಿನ ಪ್ರಾಣವೇ ಹೋಯ್ತು!

    ಸ್ವಚ್ಛತಾ ಸಿಬ್ಬಂದಿ ಕೊಟ್ಟ ಬದಲಿ ಚುಚ್ಚುಮದ್ದಿನಿಂದ ಮಗುವಿನ ಪ್ರಾಣವೇ ಹೋಯ್ತು!

    ಮುಂಬೈ: ಬದಲಿ ಚುಚ್ಚು ಮದ್ದು ನೀಡಿದುದರ ಪರಿಣಾಮ 2 ವರ್ಷದ ಮಗು ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಗೋವಂಡಿಯ ನೂರ್ ಆಸ್ಪತ್ರೆಯಲ್ಲಿ ನಡೆದಿದೆ. ಚುಚ್ಚು ಮದ್ದನ್ನು ಆಸ್ಪತ್ರೆಯಲ್ಲಿ ಕೆಲಸಕ್ಕಿದ್ದ 18 ವರ್ಷದ ಸ್ವಚ್ಛತಾ ಸಿಬ್ಬಂದಿ ನೀಡಿರುವ ವಿಷಯ ಆಘಾತ ತಂದಿದೆ.

    ಲೂಸ್ ಮೋಶನ್ ಸಮಸ್ಯೆಯಿಂದ ಬಳಲುತ್ತಿದ್ದ 2 ವರ್ಷದ ಮಗುವನ್ನು ಜನವರಿ 8 ರಂದು ನೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗು ದಾಖಲಾಗಿದ್ದ ವಾರ್ಡ್ನಲ್ಲಿಯೇ ಮತ್ತೊಬ್ಬ ಮಲೇರಿಯಾ ರೋಗಿ ದಾಖಲಾಗಿದ್ದ. ಆತನಿಗೆ ನೀಡಬೇಕಿದ್ದ ಚುಚ್ಚು ಮದ್ದನ್ನು ತಪ್ಪಾಗಿ ಮಗುವಿಗೆ ನೀಡಲಾಗಿದೆ. ಇದರಿಂದ ಮಗು ಮೃತಪಟ್ಟಿದೆ ಎನ್ನಲಾಗಿದೆ. ಇದನ್ನೂ ಓದಿ: ಡಾನ್ಸ್ ಮಾಡಿದ ವಧುವಿನ ಕೆನ್ನೆಗೆ ಹೊಡೆದ ವರ- ಮದುವೆ ಮುರಿದು ಬಿತ್ತು

    ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ವಚ್ಚತಾ ಸಿಬ್ಬಂದಿ ಚುಚ್ಚು ಮದ್ದನ್ನು ನೀಡಿರುವ ವಿಷಯ ತಿಳಿದು ಬಂದಿದೆ. ಇದರಿಂದ ಜನವರಿ 13ರಂದು ಮಗು ಸಾವನ್ನಪ್ಪಿದೆ. ವಿಷಯ ತಿಳಿದ ಪೋಷಕರು ಆಸ್ಪತ್ರೆಯಲ್ಲಿ ಗಲಾಟೆ ನಡೆಸಲು ಪ್ರಾರಂಭಿಸಿದ್ದಾರೆ. ಈ ನಡುವೆ ಮಗುವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದನ್ನೂ ಓದಿ: ಬೀದಿ ನಾಯಿಗಳ ಅಟ್ಟಹಾಸಕ್ಕೆ 3 ವರ್ಷದ ಬಾಲಕಿ ಬಲಿ

    POLICE JEEP

    ಮಗುವನ್ನು ಕಳೆದುಕೊಂಡ ಕುಟುಂಬ ಬುಧವಾರ ಆಸ್ಪತ್ರೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆಸ್ಪತ್ರೆ ಮಾಲೀಕ ನಾಸಿರುದ್ದೀನ್ ಸೈಯದ್(63), ಡಾ. ಅಲ್ತಫ್ ಖಾನ್, ನರ್ಸ್ ಸಲೀಮುನ್ನಿಸಾ ಖಾನ್(21) ಹಾಗೂ ಸ್ವಚ್ಛತಾ ಸಿಬ್ಬಂದಿ ನರ್ಗೀಸ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

  • ಹುಟ್ಟಿದ ಒಂದು ದಿನದ ನವಜಾತ ಶಿಶುವಿಗೆ ಕೊರೊನಾ

    ಹುಟ್ಟಿದ ಒಂದು ದಿನದ ನವಜಾತ ಶಿಶುವಿಗೆ ಕೊರೊನಾ

    ಗದಗ: ಹುಟ್ಟಿ ಒಂದು ದಿನದ ನವಜಾತ ಶಿಶು ಸೇರಿದಂತೆ ಜಿಲ್ಲೆಯ ಒಟ್ಟು 87 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಡಿ.ಎಚ್.ಓ ಜಗದೀಶ್ ನುಚ್ಚಿನ ಹೇಳಿದ್ದಾರೆ.

    ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಾಲ್ವರು ಗರ್ಭಿಣಿಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಗದಗ ಇಬ್ಬರು ಹಾಗೂ ರೋಣ ಪಟ್ಟಣದ ಇಬ್ಬರು ಹೀಗೆ ನಾಲ್ಕು ಜನ ಗರ್ಭಿಣಿಯರಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಆದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ದೂಧ್ ಸಾಗರ್ ಬಳಿ ಹಳಿ ತಪ್ಪಿದ ರೈಲು

    DHO Jagdish

     

    ಇನ್ನು ಹುಟ್ಟಿದ ಮಗುವಿಗೆ ಹಾಸ್ಪಿಟಲ್ ನಲ್ಲೇ ಇನ್ಫೆಕ್ಷನ್‍ನಿಂದ ಪಾಸಿಟಿವ್ ಆಗಿರಬಹುದು. ಆದರೆ ತಾಯಿಗೆ ನೆಗೆಟಿವ್ ಇದ್ದು, ಮಗುವನ್ನು ಖಾಸಗಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ 4 ವರ್ಷದ ಮಗು, 11 ವರ್ಷದ ಮಗುವಿಗೂ ಕೊರೊನಾ ಸೋಂಕು ತಗುಲಿದ್ದು, ಉಳಿದಂತೆ 84 ಮಕ್ಕಳು 11 ವರ್ಷದ ಮೇಲ್ಪಟ್ಟವರಾಗಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಆತಂಕ ಪಡೆವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.

     

    2ನೇ ಅಲ್ಲಿಯಲ್ಲಿ ಮಕ್ಕಳಲ್ಲಿ ಶೇಕಡಾ 9 ರಷ್ಟು ಮಾತ್ರ ಕಾಣಿಸಿಕೊಂಡಿತ್ತು. ಆದರೆ 3ನೇ ಅಲೆಯಲ್ಲಿ ಡಬಲ್ ಆಗಿದೆ. ಇನ್ನು ಶೇಕಡಾ 95 ರಷ್ಟು ಸೋಂಕಿತರು ಹೋಮ್ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

  • ಕಸದ ತೊಟ್ಟಿಯಲ್ಲಿ ಹೆಣ್ಣು ಮಗು ಪತ್ತೆ – ಸ್ಥಳೀಯರಿಂದ ರಕ್ಷಣೆ

    ಕಸದ ತೊಟ್ಟಿಯಲ್ಲಿ ಹೆಣ್ಣು ಮಗು ಪತ್ತೆ – ಸ್ಥಳೀಯರಿಂದ ರಕ್ಷಣೆ

    ಚೆನ್ನೈ: ಹೆಣ್ಣುಮಗುವನ್ನು ಕಸದ ತೊಟ್ಟಿಯಲ್ಲಿ ನಿರ್ದಾಕ್ಷಿಣ್ಯವಾಗಿ ಪೋಷಕರು ಬಿಟ್ಟು ಹೋಗಿರುವ ಘಟನೆ ವೆಲ್ಲೂರಿನಲ್ಲಿ ನಡೆದಿದೆ.

    ಮಗು ಅಳುತ್ತಿರುವ ಶಬ್ದವನ್ನು ಕೇಳಿ ಸ್ಥಳೀಯರು ಕಸದ ತೊಟ್ಟಿಯನ್ನು ಪರಿಶೀಲಿಸಿದಾಗ ಕಸದ ರಾಶಿಯ ಮಧ್ಯೆ ಮಗು ಪತ್ತೆಯಾಗಿದೆ. ಕೂಡಲೇ ಸ್ಥಳೀಯರು ವೆಲ್ಲೂರು ಉತ್ತರ ಠಾಣೆಯ ಪೊಲೀಸರಿಗೆ ಹಾಗೂ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಾಚ್ ಆರ್ಡರ್ ಮಾಡಿ ಬಂದಿದ್ದು ಕಾಂಡೋಮ್!

    ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಮಗು ಪತ್ತೆಯಾದ ಸ್ಥಳದ ಪಕ್ಕದಲ್ಲಿ ಬಟ್ಟೆಗಳಿರುವ ಸಣ್ಣ ಬ್ಯಾಗ್ ಕಂಡು ಬಂದಿದೆ. ಇದೀಗ ಮಗುವನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಚೇತರಿಸಿಕೊಳ್ಳುತ್ತಿದೆ. ಸದ್ಯ ಘಟನೆ ಕುರಿತಂತೆ ಪ್ರಾಥಮಿಕ ತನಿಖೆ ವೇಳೆ ಮಗುವಿಗೆ ಕೇವಲ ಎರಡ್ಮೂರು ದಿನವಾಗಿರಬಹುದು ಎಂದು ಶಂಕಿಸಲಾಗಿದ್ದು, ಇದೀಗ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದದ್ದಾರೆ ಹಾಗೂ ಮಗುವಿನ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    POLICE JEEP

    ಇದೇ ರೀತಿ ಇತ್ತೀಚೆಗಷ್ಟೇ ನವಜಾತ ಶಿಶುವೊಂದನ್ನು ವಿಮಾನದ ಟಾಯ್ಲೆಟ್‍ನಲ್ಲಿ ಪೇಪರ್‌ನಿಂದ ಸುತ್ತಿ ಅಲ್ಲಿದ್ದ ಕಸದ ಬುಟ್ಟಿಗೆ ಎಸೆದು ಹೋದ ಘಟನೆ ಮಾರಿಷಸ್‍ನಲ್ಲಿ ನಡೆದಿತ್ತು. ಏರ್‍ಮರಿಷಸ್ ಏರ್‌ಬಸ್ 330-900 ವಿಮಾನವನ್ನು ತಪಾಸಣೆ ನಡೆಸುವ ವೇಳೆ ಟಾಯ್ಲೆಟ್‍ನಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಆ ಬಳಿಕ ಈ ಸಂಬಂಧ ಮಡಗಾಸ್ಕರ್‌ನ ಮಹಿಳೆಯನ್ನು(20) ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಇದನ್ನೂ ಓದಿ: ವಿಮಾನದ ಟಾಯ್ಲೆಟ್‍ನಲ್ಲಿ ನವಜಾತ ಶಿಶು ಪತ್ತೆ

    ಬಂಧಿತ ಮಹಿಳೆ ನಾನು ಆ ಮಗವಿಗೆ ಜನ್ಮನೀಡಿಲ್ಲ ಎಂದು ವಾದಿಸುತ್ತಿದ್ದು, ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆ ಮಾಡಲು ಮುಂದಾಗಿದ್ದರು. ಅಂತರಾಷ್ಟ್ರೀಯ ವಿಮಾನ ಪ್ರಯಾಣದ ನಿಯಮದ ಪ್ರಕಾರ 28 ವಾರದ ಬಳಿಕ ಗರ್ಭಿಣಿ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಇಲ್ಲದ ಕಾರಣ ಮಹಿಳೆ ಸುಳ್ಳು ಹೇಳಿರುವುದಾಗಿ ತಿಳಿಸಿ ಮಗು ತನ್ನದೇ ಎಂದು ಒಪ್ಪಿಕೊಂಡಳು. ನಂತ ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

  • ಆಗ ತಾನೇ ಜನಿಸಿದ ಮಗುವನ್ನು ಬಿಟ್ಟು ಹೋದ ತಾಯಿ- ಸ್ಥಳೀಯರಿಂದ ಶಿಶುವಿನ ರಕ್ಷಣೆ

    ಆಗ ತಾನೇ ಜನಿಸಿದ ಮಗುವನ್ನು ಬಿಟ್ಟು ಹೋದ ತಾಯಿ- ಸ್ಥಳೀಯರಿಂದ ಶಿಶುವಿನ ರಕ್ಷಣೆ

    ಹಾವೇರಿ: ಆಗತಾನೇ ಜನಿಸಿದ ನವಜಾತ ಶಿಶುವನ್ನ ನಿಷ್ಕರುಣಿ ತಾಯಿಯೊಬ್ಬಳು ಬಿಟ್ಟು ಹೋಗಿದ್ದು, ಮಗುವನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

    ಹಾನಗಲ್ ತಾಲೂಕಿನ ಮಾರನಬೀಡ ಗ್ರಾಮದ ಗುಡ್ಡದಲ್ಲಿ ಶಿಶು ಪತ್ತೆಯಾಗಿದೆ. ಆಗತಾನೇ ಜನಿಸಿದ ನವಜಾತ ಗಂಡು ಮಗು ಅಳುತ್ತಿದ್ದ ಧ್ವನಿ ಕೇಳಿ ಮಗುವನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸ್ಪಂದನಾ ದತ್ತು ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಅಲ್ಪಸ್ವಲ್ಪ ಗಾಯಗೊಂಡಿದ್ದರಿಂದ ನವಜಾತ ಶಿಶುವಿಗೆ ನರೇಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೆ ಶಿಶುವನ್ನ ಸ್ಪಂದನಾ ದತ್ತು ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಗೆ ಹಸ್ತಾಂತರ ಮಾಡಲಾಗಿದೆ. ಇದನ್ನೂ ಓದಿ: ಲೋಕಲ್ ಕಂಟೈನ್ಮೆಂಟ್‍ಗೆ ಮೋದಿ ಸಲಹೆ

    ಕಿಂಚಿತ್ತೂ ಕರುಣೆ ಇಲ್ಲದಂತೆ ನವಜಾತ ಶಿಶುವನ್ನ ಗುಡ್ಡದಲ್ಲಿ ಎಸೆದು ಹೋಗಿರೋ ನಿಷ್ಕರುಣಿ ತಾಯಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಪ್ರತಿದಿನ ಒಬ್ಬೊಬ್ಬರು ರಾಜೀನಾಮೆ ನೀಡುತ್ತಾ ಹೋಗ್ತಾರೆ: ಧರಂ ಸಿಂಗ್ ಸೈನಿ

  • ಗರ್ಭಿಣಿ ಅಂತಾ ಸುಳ್ಳು ಹೇಳಿ ಮಗುವಿಗೆ ಜನ್ಮ ಕೊಟ್ಟಳು- ಆದರೆ ಕಂದಮ್ಮ ಇಲ್ಲ

    ಗರ್ಭಿಣಿ ಅಂತಾ ಸುಳ್ಳು ಹೇಳಿ ಮಗುವಿಗೆ ಜನ್ಮ ಕೊಟ್ಟಳು- ಆದರೆ ಕಂದಮ್ಮ ಇಲ್ಲ

    ಅಮರಾವತಿ: 9 ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂದು ನಿಂದಿಸುವ ಜನರಿಂದ ತಪ್ಪಿಸಿಕೊಳ್ಳಲು, ಮಹಿಳೆ 9 ತಿಂಗಳು ಕುಟುಂಬಸ್ಥರನ್ನೇ ಮೂರ್ಖರನ್ನಾಗಿ ಮಾಡಿರುವ ಸುದ್ದಿಯಾಗಿದೆ.

    ಮಹಿಳೆಯೊಬ್ಬರು 9 ವರ್ಷಗಳ ಹಿಂದೆ ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದರು. ಮದುವೆಯಾಗಿ 9 ವರ್ಷಗಳು ಕಳೆದ್ರೂ ಮಕ್ಕಳಾಗಿರಲಿಲ್ಲ. ಮಕ್ಕಳಿಲ್ಲವಾ ಎಂದು ನೆರೆಹೊರೆಯವರು, ಕುಟುಂಬಸ್ಥರು, ಸ್ನೇಹಿತರು ಕೇಳುತ್ತಿದ್ದರು. ಈ ವಿಚಾರವಾಗಿ ಮಾನಸಿಕವಾಗಿ ನೊಂದಿದ್ದ ಮಹಿಳೆ ಖತರ್ನಾಕ್ ಉಪಾಯವನ್ನು ಮಾಡಿ ಸಿಕ್ಕಿ ಬಿದ್ದಿದ್ದಾಳೆ.

    ಗರ್ಭಧರಿಸಿದ್ದೇನೆ ಎಂದು ಅತ್ತೆಗೆ ಸುಳ್ಳು ಹೇಳಿ ತವರು ಮನೆಗೆ ಹೆರಿಗೆಗೆ ಹೋಗಿದ್ದಾಳೆ. ತನ್ನ ತಾಯಿಯೊಂದಿಗೆ 9 ತಿಂಗಳು ಗರ್ಭಿಣಿಯಂತೆಯೇ ನಟಿಸಿದ್ದಾಳೆ. ಪ್ರತಿ ತಿಂಗಳು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದಾಳೆ. ವೈದ್ಯರು ತನ್ನ ಹೆರಿಗೆಯ ದಿನಾಂಕವನ್ನು ಜನವರಿ 5 ಬುಧವಾರದಂದು  ನೀಡಿದ್ದಾರೆ ಎಂದು ಎಲ್ಲರಿಗೂ ತಿಳಿಸಿದ್ದಾಳೆ. ಒಂದು ದಿನ ಮಧ್ಯರಾತ್ರಿ ತನಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಕುಟುಂಬದವರಿಗೂ ತಿಳಿಸಿದ್ದಾಳೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

    ಹೆರಿಗೆಯನ್ನೂ ಮಾಡಿಕೊಂಡಂತೆ ನಟನೆ ಕೂಡಾ ಮಾಡಿದ್ದಾಳೆ. ಬಳಿಕ ಮಗು ನೋಡಲು ಬಂದ ಮನೆಯವರಿಗೆ ಕಥೆ ಕಟ್ಟಿದ್ದಾಳೆ. ಹೆರಿಗೆಗೆ ಸಹಾಯ ಮಾಡಲು ಬಂದ ಇಬ್ಬರು ವ್ಯಕ್ತಿಗಳು ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾಳೆ. ಮಹಿಳೆಯ ಮಾತಿನ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಈ ವಿಚಾರವಾಗಿ ಪೊಲೀಸರು ಆಕೆಯನ್ನು ವಿಚಾರಿಸಿದಾಗ ನಿಜ ಗೊತ್ತಾಗಿದೆ. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ

  • 6 ದಿನದ ಹೆಣ್ಣು ಮಗುವನ್ನು ಗುಟ್ಟಾಗಿ ಸಮಾಧಿ ಮಾಡಿ ದಂಪತಿ ಎಸ್ಕೇಪ್!

    6 ದಿನದ ಹೆಣ್ಣು ಮಗುವನ್ನು ಗುಟ್ಟಾಗಿ ಸಮಾಧಿ ಮಾಡಿ ದಂಪತಿ ಎಸ್ಕೇಪ್!

    ಚೆನ್ನೈ: 6 ದಿನದ ಹಿಂದಷ್ಟೇ ಜನಿಸಿದ್ದ ನವಜಾತ ಶಿಶುವನ್ನು ಗುಟ್ಟಾಗಿ ಹೂತು ದಂಪತಿ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನಾಪತ್ತೆಯಾದ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದೆ.

    ಮುತ್ತುಪಾಂಡಿ(30) ಮತ್ತು ಎಂ.ಕೌಸಲ್ಯ (23) ದಂಪತಿಗೆ ಈಗಾಗಲೇ 4 ಮತ್ತು 2 ವರ್ಷದ ಇಬ್ಬರು ಮಕ್ಕಳಿದ್ದಾರೆ. ಈ ದಂಪತಿಗೆ ಡಿ.21ರಂದು ತಮಿಳುನಾಡಿನ ಮಧುರೈ ಜಿಲ್ಲೆಯ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಣ್ಣು ಮಗು ಜನಿಸಿತ್ತು. ಡಿ.26ರಂದು ಗ್ರಾಮದ ನರ್ಸ್, ಮಗುವಿನ ಆರೋಗ್ಯವನ್ನು ವಿಚಾರಿಸಲು ಬಂದಿದ್ದಾರೆ. ಈ ವೇಳೆ ತಾಯಿ ಬಳಿ ಮಗು ಇಲ್ಲದಿರುವುದನ್ನು ಕಂಡು ಕೇಳಿದ್ದಾರೆ.

    ಮಗು ಸಾವನ್ನಪ್ಪಿದೆ. ಮನೆಯ ಹಿಂದುಗಡೆ ಸಮಾಧಿ ಮಾಡಿದ್ದೇವೆ ಎಂದು ನರ್ಸ್ಗೆ ತಾಯಿ ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ನರ್ಸ್, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಂಜಾಬ್ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಮಾಜಿ ಕ್ರಿಕೆಟಿಗ ದಿನೇಶ್ ಮೊಂಗಿಯಾ 

    POLICE JEEP

    ಆರು ದಿನಗಳ ಹಿಂದೆ ಜನಿಸಿ ಆರೋಗ್ಯಕರವಾಗಿಯೇ ಇದ್ದ ಹಸುಳೆ ನಿಗೂಢವಾಗಿ ಸಾವನ್ನಪ್ಪಿರುವ ಬಗ್ಗೆ ಸ್ಥಳೀಯ ಆರೋಗ್ಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಿಶು ಮೃತಪಟ್ಟಿರುವ ಬಗ್ಗೆ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡದೇ ಹೂತು ಹಾಕಿರುವ ಹಿನ್ನೆಲೆಯಲ್ಲಿ ಹೆಣ್ಣು ಶಿಶು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು, ತನಿಖೆಯನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಗ್ರಾಪಂ ಸದಸ್ಯ 15 ಲಕ್ಷ ಲಂಚ ಪಡೆಯುವುದು ಭ್ರಷ್ಟಾಚಾರವಲ್ಲ: ಬಿಜೆಪಿ ಸಂಸದ

  • ಗೋಣಿಚೀಲದಲ್ಲಿ ನವಜಾತ ಶಿಶುವಿನ ಶವ ಪತ್ತೆ – ತಾಯಿ, ಪ್ರಿಯಕರನ ಬಂಧನ

    ಗೋಣಿಚೀಲದಲ್ಲಿ ನವಜಾತ ಶಿಶುವಿನ ಶವ ಪತ್ತೆ – ತಾಯಿ, ಪ್ರಿಯಕರನ ಬಂಧನ

    ತಿರುವನಂತಪುರಂ: ನವಜಾತ ಶಿಶುವನ್ನು ಕೊಂದು ಗೋಣಿಚೀಲದಲ್ಲಿ ಕಟ್ಟಿ ಕಾಲುವೆಗೆ ಬೀಸಾಕಿದ್ದ ಯುವತಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ.

    ಆರೋಪಿಗಳನ್ನು ಮೇಘಾ (22) ಮತ್ತು ಮ್ಯಾನುಯೆಲ್ (25) ಮತ್ತು ಆತನ ಸ್ನೇಹಿತ ಅಮಲ್ (24) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆ ಗೋಣಿಚೀಲದಲ್ಲಿ ಮಗುವಿನ ಶವ ಪತ್ತೆಯಾಗಿದ್ದು, ಈ ಕುರಿತಂತೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಮಗುವಿನ ಶವವನ್ನು ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಇದನ್ನೂ ಓದಿ: ಇನ್ಮುಂದೆ 21 ವಯಸ್ಸಿನವರೂ ʻಎಣ್ಣೆʼ ಹೊಡಿಯಬಹುದು – ಹರಿಯಾಣ

    ಈ ಘಟನೆ ಸಂಬಂಧ ತನಿಖೆ ಆರಂಭಿಸಿದ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿದ್ದು, ವೀಡಿಯೋದಲ್ಲಿ ಬೈಕ್‍ನಲ್ಲಿ ಬಂದ ಇಬ್ಬರು ಯುವಕರು ಗೋಣೀಚೀಲವನ್ನು ಕಾಲುವೆಗೆ ಎಸೆದುಹೋಗಿರುವುದು ಕಂಡು ಬಂದಿದೆ. ನಂತರ ವರಾಯಿಡಂ ಮೂಲದ ಆರೋಪಿ ಮ್ಯಾನುಯೆಲ್ ಮತ್ತು ಆತನ ಸ್ನೇಹಿತ ಅಮಲ್ ಅನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರು.

    ಈ ವೇಳೆ ಮೇಘಾ ಮತ್ತು ಮ್ಯಾನುಯೆಲ್ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದರು. ಮೇಘಾ ಗರ್ಭಿಣಿಯಾದಾಗ ಈ ವಿಚಾರವನ್ನು ಇಬ್ಬರು ಕುಟುಂಬದವರಿಂದ ಮರೆಮಾಚಿದ್ದರು. ಆದರೆ ಶನಿವಾರ ಮೇಘಾ ತನ್ನ ಕೋಣೆಯಲ್ಲಿ ಮಗುವಿಗೆ ಜನ್ಮನೀಡಿದ್ದಾಳೆ. ನಂತರ ಮಗುವನ್ನು ಬಕೆಟ್‍ನಲ್ಲಿ ಮುಳುಗಿಸಿ ಕೊಂದಿದ್ದು, ನಂತರ ಮಗುವನ್ನು ಗೋಣಿ ಚೀಲದಲ್ಲಿ ಸುತ್ತಿ, ಮ್ಯಾನುಯೆಲ್‍ಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದಾಳೆ. ಇದನ್ನೂ ಓದಿ: ಮನೆಯಲ್ಲಿ ಬಂದೂಕು ಬಚ್ಚಿಟ್ಟಿದ್ದಕ್ಕೆ ಭಾರತೀಯ ವ್ಯಕ್ತಿಗೆ 6 ವರ್ಷ ಜೈಲು ಶಿಕ್ಷೆ

    ಮರುದಿನ ಬೆಳಗ್ಗೆ ಮೇಘಾ ತನ್ನ ಸ್ನೇಹಿತನ ಸಹಾಯದೊಂದಿಗೆ ಗೋಣಿ ಚೀಲವನ್ನು ಮ್ಯಾನುಯೆಲ್‍ಗೆ ತಲುಪಿಸಿದ್ದಾಳೆ. ಮೊದಲಿಗೆ ಮಗುವಿನ ಶವವನ್ನು ಸುಡಲು 150 ರೂ. ಪೆಟ್ರೋಲ್ ಅನ್ನು ಖರೀದಿಸಿದ್ದ ಮ್ಯಾನುಯೆಲ್ ಸುಡಲು ಸಾಧ್ಯವಾಗದೇ ಹೂಳಲು ಪೇರಮಂಗಲಕ್ಕೆ ಆಗಮಿಸಿದ್ದನು. ಈ ವೇಳೆ ಜನರಿದ್ದ ಕಾರಣ ಹೂಳಲು ಸಾಧ್ಯವಾಗದೇ ನಂತರ ಕಾಲುವೆಗೆ ಎಸೆದು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್‌ ಬಗ್ಗೆ ಸಿಕ್ತು ಗುಡ್‌ ನ್ಯೂಸ್‌ – ಪ್ರಾಥಮಿಕ ಅಧ್ಯಯನ ವರದಿಗಳು ಬಹಿರಂಗ

    ಮೇಘಾ ಎಂಕಾಂ ಪದವೀಧರೆಯಾಗಿದ್ದು, ತ್ರಿಶೂರ್‌ನ ಹಣಕಾಸು ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ. ಮ್ಯಾನುಯೆಲ್ ಪೇಂಟಿಂಗ್ ಕೆಲಸಗಾರನಾಗಿದ್ದಾನೆ. ಸದ್ಯ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಮಗುವಿನ ಡಿಎನ್‍ಎ ಪರೀಕ್ಷೆಯ ಆಧಾರದ ಮೇಲೆ ಹೆಚ್ಚಿನ ತನಿಖೆ ನಡೆಸಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ನವಜಾತ ಶಿಶುವನ್ನು ರಕ್ಷಿಸಿದ ಶ್ವಾನ

    ನವಜಾತ ಶಿಶುವನ್ನು ರಕ್ಷಿಸಿದ ಶ್ವಾನ

    ರಾಯಪುರ: ಕೊರೆಯುವ ಚಳಿಯಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ನವಜಾತ ಶಿಶುವೊಂದನ್ನು ಹೊಲದಲ್ಲಿ ಬಿಟ್ಟು ಹೋಗಿದ್ದು, ರಾತ್ರಿಯಿಡೀ ನಾಯಿಯೊಂದು ಆರೈಕೆ ಮಾಡಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.

    ಮುಂಗೇಲಿ ಜಿಲ್ಲೆಯ ಲೊರ್ಮಿಯ ಸರಿಸ್ಟಾಲ್ ಗ್ರಾಮದ ಹೊಲವೊಂದರಲ್ಲಿ ಈ ಘಟನೆ ನಡೆದಿದೆ. ಹೆಣ್ಣು ಮಗುವನ್ನು ಹೊಲದಲ್ಲಿ ಬಿಟ್ಟು ಹೋಗಲಾಗಿದ್ದು, ರಾತ್ರಿಯಿಡೀ ನಾಯಿಯೊಂದು ಆರೈಕೆ ಮಾಡುತ್ತಿತ್ತು. ಮಗುವಿನ ಅಳುವನ್ನು ಕೇಳಿದ ಗ್ರಾಮಸ್ಥರು ರಕ್ಷಿಸಿದ್ದಾರೆ. ಮಗುವನ್ನು ಹೊಲದಲ್ಲಿ ಬಿಟ್ಟಿದ್ದಕ್ಕಾಗಿ ಜನರು ವಿರೋಧ ವ್ಯಕ್ತಪಡಿಸಿದ್ದು, ಪ್ರಾಣಿಯು ತೋರಿದ ಸಹಾನುಭೂತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಹೊಕ್ಕುಳಬಳ್ಳಿಯೊಂದಿಗೆ ಯಾವುದೇ ಬಟ್ಟೆ ಇಲ್ಲದೆ ಮಗುವನ್ನು ಹೊಲದಲ್ಲೇ ಬಿಟ್ಟು ಹೋಗಲಾಗಿತ್ತು. ಆಶ್ಚರ್ಯ ಎನ್ನುವಂತೆ ಪಕ್ಕದಲ್ಲಿಯೇ ಓಡಾಡುತ್ತಿದ್ದ ಬೀದಿನಾಯಿಗಳು ನವಜಾತ ಶಿಶುವನ್ನು ರಕ್ಷಿಸಿವೆ. ಮಗುವಿನ ಅಳು ಕೇಳಿದ ಗ್ರಾಮಸ್ಥರು ನಾಯಿಮರಿಗಳ ಜೊತೆಯಲ್ಲಿ ಮಗು ಇರುವುದನ್ನು ಕಂಡಿದ್ದಾರೆ. ಯಾವುದೇ ಗಾಯಗಳಿಲ್ಲದೆ ಮಗು ಪತ್ತೆಯಾಗಿದ್ದು, ನಾಯಿಯೊಂದು ತನ್ನ ಮರಿಗಳೊಂದಿಗೆ ಮಗುವನ್ನು ಕಾವಲು ಕಾಯುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಮಗುವನ್ನು ನೋಡಿದ ಗ್ರಾಮಸ್ಥರು ಕೂಡಲೇ ಸ್ಥಳೀಯ ಪೊಲೀಸರಿಗೆ ಹಾಗೂ ಪಂಚಾಯತ್‌ಗೆ ಮಾಹಿತಿಯನ್ನು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಬೀದಿನಾಯಿಗಳ ಬಾಯಿಗೆ ಪುಟ್ಟ ಬಾಲಕಿ ಬಲಿ

    ನವಜಾತ ಶಿಶುವನ್ನು ಎಎಸ್‌ಐ ಚಿಂತಾರಾಮ್ ಬಿಂಜ್ವಾರ್ ಹಾಗೂ ಅವರು ತಂಡ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಥಮ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ನಂತರ, ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಿದ್ದಾರೆ. ನವಜಾತ ಶಿಶುವಿನ ಕುಟುಂಬದ ಪತ್ತೆಗಾಗಿ ಪೊಲೀಸರ ತಂಡ ಶೋಧ ನಡೆಸುತ್ತಿದ್ದಾರೆ ಹಾಗೂ ಈ ಬಗ್ಗೆ ತನಿಖೆ ಪ್ರಾರಂಭವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮಂಗ, ಶ್ವಾನಗಳ ವಾರ್‌ನಲ್ಲಿ ಪ್ರಾಣ ಕಳೆದುಕೊಂಡ 80 ನಾಯಿಮರಿಗಳು

    ಸ್ಥಳೀಯರು ಮಗುವಿನ ಕುಟುಂಬದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಜೊತೆಗೆ ಈ ರೀತಿ ನಡೆಸಿಕೊಳ್ಳುವ ಕುಟುಂಬಕ್ಕೆ ಮಗುವನ್ನು ಹಿಂತಿರುಗಿಸಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

  • ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಬಿದ್ದು ಮಗು ಸಾವು

    ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಬಿದ್ದು ಮಗು ಸಾವು

    ಆನೇಕಲ್:  ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ಆನೆಕಲ್‌ನಲ್ಲಿ ನಡೆದಿದೆ.

    ದಿವ್ಯಾಂಶ್ ರೆಡ್ಡಿ (2) ಮೃತಪಟ್ಟ ಬಾಲಕ. ಎಲೆಕ್ಟ್ರಾನಿಕ್ ಸಿಟಿ ನೀಲಾದ್ರಿ ಇನ್ವೆಸ್ಟ್ ಮೆಂಟ್ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಮಗು ಸಾವನ್ನಪ್ಪಿದೆ.

    ಬಾಡಿಗೆ ಮನೆ ವಿಚಾರಿಸಲು ದಿವ್ಯಾಂಶ್ ಅಜ್ಜಿಯೊಂದಿಗೆ ತೆರಳಿದ್ದನು. ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಲ್ಲಿ ಅಜ್ಜಿ ಮನೆ ನೋಡುತ್ತಿದ್ದರೆ, ದಿವ್ಯಾಂಶ್ ಬಾಲ್ಕನಿಯಲ್ಲಿ ಆಟವಾಡುತ್ತಿದ್ದನು. ಆ ವೇಳೆ ಬಾಲ್ಕನಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ದಿವ್ಯಾಂಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: 6 ಲಕ್ಷ ರೂ. ಬಹುಮಾನ ಘೋಷಣೆಯಾಗಿದ್ದ ಇಬ್ಬರು ಮಹಿಳಾ ನಕ್ಸಲರ ಹತ್ಯೆ

    POLICE JEEP

    ಪ್ರಕರಣ ಸಂಬಂಧ  ಅಪಾರ್ಟ್‌ಮೆಂಟ್‌ನ ಮಾಲೀಕನ ವಿರುದ್ಧ ದೂರು ದಾಖಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಕನ್ನಡಿಗ ಕೆ.ಎಲ್ ರಾಹುಲ್ ಟೀಂ ಇಂಡಿಯಾದ ಉಪನಾಯಕ?