Tag: Baby

  • ಎರಡು ತಲೆ, ಮೂರು ಕೈ ಇರುವ ಅಪರೂಪದ ಸಯಾಮಿ ಮಗು ಜನನ

    ಎರಡು ತಲೆ, ಮೂರು ಕೈ ಇರುವ ಅಪರೂಪದ ಸಯಾಮಿ ಮಗು ಜನನ

    ಭೋಪಾಲ್: ಮಹಿಳೆಯೊಬ್ಬರು ಎರಡು ತಲೆ ಮತ್ತು ಮೂರು ಕೈಗಳನ್ನು ಹೊಂದಿರುವ ಅಪರೂಪದ ಮಗುವಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್‍ನಲ್ಲಿ ನಡೆದಿದೆ. ಮಗು ಡೈಸೆಫಾಲಿಕ್ ಪ್ಯಾರಾಪಾಗಸ್‌ನಿಂದ ಬಳಲುತ್ತಿದೆ ಎಂದು ತಿಳಿಸಲಾಗಿದೆ.

    ಪ್ರಸ್ತುತ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಇಂದೋರ್‌ನ ಎಂವೈ ಆಸ್ಪತ್ರೆಯ ಡಾ. ಬ್ರಜೇಶ್ ಲಹೋಟಿ ಅವರು ಹೇಳಿದ್ದಾರೆ. ಸೋಜಿಗದ ಸಯಾಮಿನಲ್ಲಿ ಒಂದು ರೀತಿ ಎರಡು ತಲೆಗಳನ್ನು ಅಕ್ಕಪಕ್ಕದಲ್ಲಿ ಹೊಂದಿರುವ ಅಪರೂಪದ ಅವಳಿ ರೂಪವಾಗಿರುತ್ತಾರೆ. ಇದನ್ನು ಡೈಸೆಫಾಲಿಕ್ ಪ್ಯಾರಾಪಾಗಸ್‌ ಎಂದು ಕರೆಯುತ್ತಾರೆ. ಇದನ್ನೂ ಓದಿ: ಕೇಜ್ರಿವಾಲ್ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಬಲಿಪಶು: ಗಂಭೀರ್

    ಈ ರೀತಿ ಜನಿಸಿದ ಅನೇಕ ಮಕ್ಕಳ ಫೋಟೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿಲೇ ಇರುತ್ತದೆ. ಡೈಸೆಫಾಲಿಕ್ ಪ್ಯಾರಾಪಾಗಸ್‌ ಸಮಸ್ಯೆಯಿಂದ ಹುಟ್ಟಿದ ಅನೇಕ ಮಕ್ಕಳು ಹುಟ್ಟುತ್ತಲೆ ಸಾಯುತ್ತಾರೆ. ಆದರೆ ಬದುಕಿ ಉಳಿಯುವುದು ಕೆಲವು ಮಕ್ಕಳು ಮಾತ್ರ. ಇದನ್ನೂ ಓದಿ: ನಿರಾಶ್ರಿತನನ್ನು ಅಪ್ಪಿಕೊಂಡು ಮಡಿಲಲ್ಲಿ ಮಲಗಿದ ಶ್ವಾನ- ನೆಟ್ಟಿಗರ ಮನಗೆದ್ದ ವೀಡಿಯೋ

  • ಎರಡು ತಿಂಗಳ ಮಗು ಮೈಕ್ರೋವೇವ್‍ನಲ್ಲಿ ಶವವಾಗಿ ಪತ್ತೆ!

    ಎರಡು ತಿಂಗಳ ಮಗು ಮೈಕ್ರೋವೇವ್‍ನಲ್ಲಿ ಶವವಾಗಿ ಪತ್ತೆ!

    ನವದೆಹಲಿ: ಎರಡು ತಿಂಗಳ ಹೆಣ್ಣು ಮಗುವೊಂದು ಮೈಕ್ರೋವೇವ್ ಓವನ್‍ನಲ್ಲಿ ಶವವಾಗಿ ಪತ್ತೆಯಾದ ಘಟನೆ ದಕ್ಷಿಣ ದೆಹಲಿಯ ಚಿರಾಗ್ ಡಿಲ್ಲಿ ಪ್ರದೇಶದಲ್ಲಿ ನಡೆದಿದೆ.

    ಗುಲ್ಶನ್ ಕೌಶಿಕ್ ಮತ್ತು ಡಿಂಪಲ್ ಕೌಶಿಕ್ ಮಗುವಿನ ಪೋಷಕರು. ಇವರಿಗೆ 4 ವರ್ಷದ ಗಂಡು ಮಗನಿದ್ದಾನೆ. ಜನವರಿಯಲ್ಲಿ ಹೆಣ್ಣು ಮಗುವೊಂದು ಜನಿಸಿತ್ತು. ಆದರೆ ಡಿಂಪಲ್ ಕೌಶಿಕ್‍ಗೆ ಹೆಣ್ಣುಮಗುವಿನ ಬಗ್ಗೆ ಅಸಮಾಧಾನವಿತ್ತು. ಪ್ರತಿನಿತ್ಯ ಪತಿಯ ಜೊತೆ ಜಗಳವಾಡುತ್ತಿದ್ದರು.

    ಆದರೆ ನಿನ್ನೆ ಡಿಂಪಲ್ ಕೌಶಿಕ್ ಮನೆ ಬೀಗ ಹಾಕಿಕೊಂಡಿದ್ದರು. ಎಷ್ಟೇ ಪ್ರಯತ್ನಿಸಿದ್ದರೂ ಮನೆಯ ಬೀಗ ತೆಗೆಯುತ್ತಿರಲಿಲ್ಲ. ಇದರಿಂದಾಗಿ ಆಕೆಯ ಅತ್ತೆ, ಬಾಗಿಲನ್ನು ತೆಗಿಯದಿದ್ದರೇ ನಾವು ಗಾಜು ಒಡೆದು ಮನೆಯನ್ನು ಪ್ರವೇಶಿಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಆದರೂ ತೆಗೆಯಿದ್ದಾಗ ಅವರೇ ಗಾಜನ್ನು ಒಡೆದು ಮನೆ ಪ್ರವೇಶಿಸಿದ್ದಾರೆ. ಅಲ್ಲಿ ಡಿಂಪಲ್ ಕೌಶಿಕ್ ಹಾಗೂ ಅವಳ ಮಗ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಆದರೆ ಎರಡು ತಿಂಗಳ ಮಗು ಕಾಣೆಯಾಗಿತ್ತು.

    ಇದರಿಂದಾಗಿ ನೆರೆಹೊರೆಯವರ ಸಹಾಯದಿಂದ ಮಗುವನ್ನು ಮನೆಯಲ್ಲಿ ಹುಡುಕಿದಾಗ 2ನೇ ಮಹಡಿಯಲ್ಲಿದ್ದ ಮೈಕ್ರೋವೇವ್‍ನಲ್ಲಿ ಪತ್ತೆಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಮಗುವಿನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸಮಯದಲ್ಲಿ ಮಗುವಿನ ತಂದೆ ಹತ್ತಿರದ ಅಂಗಡಿಗೆ ತೆರಳಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಪ್ರದರ್ಶನ: ರಾಜಸ್ಥಾನದ ಕೋಟಾದಲ್ಲಿ 144 ಸೆಕ್ಷನ್ ಜಾರಿ

    POLICE JEEP

    ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಸಾಧ್ಯವಿರುವ ಎಲ್ಲಾ ಕೋನಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಬೆನಿಟಾ ಮೇರಿ ಜೈಕರ್ ತಿಳಿಸಿದರು. ಈಗಾಗಲೇ ಮಗುವಿನ ಪೋಷಕರಾದ ಗುಲ್ಶನ್ ಕೌಶಿಕ್ ಮತ್ತು ಡಿಂಪಲ್ ಕೌಶಿಕ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇಮ್ರಾನ್ ಖಾನ್ ಬಳಿಕ ಪಾಕ್ ಪ್ರಧಾನಿ ಆಗ್ತಾರಾ ಶೆಹಬಾಜ್ ಷರೀಫ್?

  • ಆಗ ತಾನೇ ಹುಟ್ಟಿದ ಮಗುವನ್ನು ಜೀವಂತವಾಗಿ ಹೂತಿಟ್ಟ ಪಾಪಿ ಅಮ್ಮ!

    ಆಗ ತಾನೇ ಹುಟ್ಟಿದ ಮಗುವನ್ನು ಜೀವಂತವಾಗಿ ಹೂತಿಟ್ಟ ಪಾಪಿ ಅಮ್ಮ!

    ಲಕ್ನೋ: ಪಾಪಿ ತಾಯಿಯೊಬ್ಬಳು ಆಗ ತಾನೇ ಹುಟ್ಟಿದ ತನ್ನ ಕಂದಮ್ಮನನ್ನು ಜೀವಂತವಾಗಿ ಹೂತಿಟ್ಟ ಘಟನೆಯೊಂದು ಉತ್ತರಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.

    ಅಚ್ಚರಿ ವಿಚಾರವೆಂದರೆ ದೇಹವನ್ನು ಅರ್ಧಂಬರ್ಧ ಹೂತಿಟ್ಟದ್ದರಿಂದ ಮಗು ಅಪಾಯದಿಂದ ಪಾರಾಗಿದೆ. ಮಹಿಳೆ ಯಾವ ಕಾರಣಕ್ಕೆ ಮಗುವನ್ನು ಜೀವಂತ ಸಮಾಧಿ ಮಾಡಲು ಹೊರಟಿದ್ದಾಳೆ ಎಂಬುದು ತಿಳಿದುಬಂದಿಲ್ಲ. ಇದನ್ನೂ ಓದಿ: ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ – ಆದಿತ್ಯ ರಾವ್‍ಗೆ 20 ವರ್ಷ ಜೈಲು ಶಿಕ್ಷೆ

    ಮಹಿಳೆಯೊಬ್ಬರಿಗೆ ಮಗು ಜೋರಾಗಿ ಅಳುತ್ತಿರುವ ಶಬ್ಧ ಕೇಳಿಸಿದೆ. ಹೀಗಾಗಿ ಅಳುತ್ತಿರುವ ಶಬ್ಧ ಬರುವ ಕಡೆ ಹೋಗಿ ನೋಡಿದ್ದಾರೆ. ಈ ವೇಳೆ ಮಣ್ಣಿನಡಿಯಲ್ಲಿ ಅರ್ಧ ಹೂತ ಸ್ಥಿತಿಯಲ್ಲಿ ಕಂದಮ್ಮ ಕಂಡುಬಂದಿದೆ. ಕೂಡಲೇ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಹಿಳೆಯ ದೂರಿನಂತೆ ಪೊಲೀಸರ ತಂಡ ಸ್ಥಳಕ್ಕೆ ದೌಡಾಯಿಸಿದೆ. ಅಲ್ಲದೆ ಪುಟ್ಟ ಕಂದಮ್ಮನನ್ನು ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಎಲ್ಲರಿಗೂ ಅಚ್ಚರಿ ಆಗಿದೆ. ಸದ್ಯ ಜಿಲ್ಲಾಸ್ಪತ್ರೆಯ ಅಧಿಕಾರಿ ಡಾ. ಸರ್ಫರಾಜ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ಮಗುವಿನ ಆರೈಕೆ ಮಾಡುತ್ತಿದ್ದಾರೆ.

    ಇತ್ತ ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದು, ಮಹಿಳೆಯ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೆ ಕೊಲ್ಲಲು ಪ್ರಯತ್ನಿಸಿದ್ದು ಯಾಕೆ ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬುರ್ಕಾ ಹಾಕಬೇಕು, ನಮಾಜ್ ಮಾಡಬೇಕು, ಮುಸ್ಲಿಂ ಸಂಸ್ಕೃತಿ ಪಾಲಿಸಬೇಕೆಂದು ಒತ್ತಾಯಿಸುತ್ತಿದ್ದ: ಪತ್ನಿ ನೇರ ಆರೋಪ

  • ಸೊಸೆ ಮೇಲಿನ ಕೋಪಕ್ಕೆ ಮೊಮ್ಮಗಳನ್ನು ಬಲಿ ಪಡೆದ ಅತ್ತೆ

    ಸೊಸೆ ಮೇಲಿನ ಕೋಪಕ್ಕೆ ಮೊಮ್ಮಗಳನ್ನು ಬಲಿ ಪಡೆದ ಅತ್ತೆ

    ತುಮಕೂರು: ಸೊಸೆ ಮೇಲಿನ ಕೋಪಕ್ಕೆ ಏನೂ ಅರಿಯದ 2 ವರ್ಷದ ಪುಟಾಣಿ ಮೊಮ್ಮಗಳನ್ನು ಅತ್ತೆ ಬಲಿ ಪಡೆದಿರುವ ಅಮಾನವೀಯ ಘಟನೆ ಕುಣಿಗಲ್ ತಾಲೂಕಿನ ಸಾಸಲು ಗ್ರಾಮದಲ್ಲಿ ನಡೆದಿದೆ.

    ತ್ರಿಷಾ ಮೃತಪಟ್ಟ ಮಗು. ಹುಚ್ಚು ನಾಯಿ ಕಡಿತಕ್ಕೆ ಒಳಗಾದ 1 ತಿಂಗಳು 10 ದಿನದ ನಂತರ ಮಗು ಮೃತಪಟ್ಟಿದೆ. ಆರೋಪಿ ಜಯಮ್ಮ, ಹಸು ಮೇಯಿಸಲು ಹೊಲದ ಬಳಿ ಹೋಗುವಾಗ ತನ್ನ ಜೊತೆ ಮಗುವನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಹುಚ್ಚು ನಾಯಿಯೊಂದು ಹಸು ಹಾಗೂ ಮಗುವಿಗೆ ಕಚ್ಚಿದೆ. ಆದರೆ ಸೊಸೆ ಮೇಲಿನ ಕೋಪದಿಂದ ಈ ವಿಚಾರವನ್ನು ಯಾರಿಗೂ ಹೇಳದೇ ಜಯಮ್ಮ ಮುಚ್ಚಿಟ್ಟಿದ್ದರು. ಹುಚ್ಚು ನಾಯಿ ಕಡಿದ ಮೂರೇ ದಿನಕ್ಕೆ ಹಸು ಮೃತಪಟ್ಟಿತ್ತು. ಕಳೆದ ಒಂದು ವಾರದ ಹಿಂದೆ ಮಗು ತ್ರಿಷಾ ರಕ್ತ ವಾಂತಿ ಮಾಡಿಕೊಂಡಿತ್ತು. ಈ ವೇಳೆ ಪಾಲಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿಗೆ ಯಾವುದೋ ಬೆಕ್ಕು, ಇಲ್ಲ ನಾಯಿ ಕಚ್ಚಿರುವ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದರು. ಮಗು ಗಂಭೀರ ಸ್ಥಿತಿ ತಲುಪಿದ ಬಳಿಕ ಜಯಮ್ಮ ಹುಚ್ಚು ನಾಯಿ ಕಡಿದ ಬಗ್ಗೆ ಬಾಯ್ಬಿಟ್ಟರು. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬಿಜೆಪಿ ಏಜೆಂಟ್: ಕಾಂಗ್ರೆಸ್

    ಘಟನೆ ನಡೆದು 1 ತಿಂಗಳು 10 ದಿನಗಳ ಬಳಿಕ ಎಲ್ಲ ವಿಚಾರವನ್ನು ಜಯಮ್ಮ ತಿಳಿಸಿದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ. ಮಗ ಪುಟ್ಟರಾಜುವಿಗೆ 2 ವರ್ಷದ ಹಿಂದೆ ಚಿಕ್ಕಮ್ಮ ಅವರ ಜೊತೆ ವಿವಾಹವಾಗಿತ್ತು. ಆದರೆ ಮಗನ ವಿವಾಹದ ಬಗ್ಗೆ ಜಯಮ್ಮ ಅಸಮಾಧಾನ ಹೊಂದಿದ್ದರು. ಅತ್ತೆ-ಸೊಸೆಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜಗಳದಲ್ಲಿ ಮಗುವಿಗೆ ಹುಚ್ಚು ನಾಯಿ ಕಡಿದ ವಿಷಯವನ್ನು ಅತ್ತೆ ಬಚ್ಚಿಟ್ಟಿದ್ದರು. ಇದೀಗ ಒಂದು ಎಡವಟ್ಟು ಮಗುವಿನ ಪ್ರಾಣ ಕಸಿದಿದೆ. ಈ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಯಾವುದೇ ಧರ್ಮದ ಬಗ್ಗೆ ಅಗೌರವ ತೋರಿದ್ರೆ ಸಹಿಸುವುದಿಲ್ಲ: ಭಗವಂತ್ ಮಾನ್

  • ಹೆರಿಗೆ ವೇಳೆ ತಾಯಿ ಸಾವು – ತಬ್ಬಲಿಯಾದ ನವಜಾತ ಶಿಶು

    ಹೆರಿಗೆ ವೇಳೆ ತಾಯಿ ಸಾವು – ತಬ್ಬಲಿಯಾದ ನವಜಾತ ಶಿಶು

    ಚಿಕ್ಕಬಳ್ಳಾಪುರ: ಹೆರಿಗೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತಳ ಕುಟುಂಬಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ತಾಯಿ ಹಾಗೂ ಮಕ್ಕಳ ಆಸ್ಪತ್ರೆ ಎದುರು ನಡೆದಿದೆ.

    ತಾಲೂಕಿನ ಬೈರಾಪುರ ಗ್ರಾಮದ ಸವಿತಾ(22) ಮೃತ ಮಹಿಳೆ. ಹೆರಿಗೆಗಾಗಿ ತಾಯಿ, ಮಗು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ಆಧಿಕ ರಕ್ತಸ್ರಾವದಿಂದ ಹೆರಿಗೆಯಾದ ಕ್ಷಣದಲ್ಲೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಇದೀಗ ತಾಯಿ ಕಳೆದುಕೊಂಡು ನವಜಾತ ಶಿಶು ಅನಾಥವಾಗಿದ್ದು, ಕುಟುಂಬಸ್ಥರು ವೈದ್ಯರ ವಿರುದ್ಧ ಸರ್ಕಾರಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಮೃತಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಹೊಟ್ಟೆಯಲ್ಲಿದ್ದ ಮಗು 4 ಕೆ.ಜಿ. ತೂಕ ಇದ್ದು ಹೆರಿಗೆ ಮಾಡಿಸುವುದು ಸವಾಲಿನ ಕೆಲಸವಾಗಿತ್ತು. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರೆ, ನಾವು ಕರೆದುಕೊಂಡು ಹೋಗುತ್ತಿದ್ದೆವು. ಆದರೆ ವೈದ್ಯರು ಇಲ್ಲಿಯೇ ಹೆರಿಗೆ ಮಾಡುವುದಾಗಿ ಧೈರ್ಯ ಹೇಳಿ ಕೊನೆಗೆ ಜೀವವನ್ನು ತೆಗೆದಿದ್ದಾರೆ. ಹುಟ್ಟಿದ ಕ್ಷಣದಲ್ಲಿ ಮಗುವಿಗೆ ತಾಯಿ ಇಲ್ಲದಂತೆ ಮಾಡಿದ್ದಾರೆ ಎಂದು ಮೃತಳ ಗಂಡ ರಮೇಶ್ ಆರೋಪಿಸಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದಿಗೆ ಮಾತ್ರ ಅಮೆರಿಕ ನಿರ್ಬಂಧ – ಯುರೇನಿಯಂಗೆ ಇಲ್ಲ ನಿಷೇಧ

  • ಉಕ್ರೇನ್ ಬಂಕರ್‌ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

    ಉಕ್ರೇನ್ ಬಂಕರ್‌ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

    ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ್ದು, ವಿಶ್ವದಾದ್ಯಂತ ಭಯದ ವಾತಾವರಣ ನಿರ್ಮಾಣವಾಗಿದೆ. ಮನೆಯನ್ನು ಕಳೆದುಕೊಂಡು ಇರಲು ಜಾಗ ವಿಲ್ಲದೆ ಪರದಾಡುತ್ತಿದ್ದಾರೆ. ಈ ಮಧ್ಯೆ ಮಹಿಳೆಯೊಬ್ಬರು ಬಂಕರ್‌ನಲ್ಲಿ ಮಗುವಿಗೆ ಜನ್ಮವನ್ನು ನೀಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    23 ವರ್ಷದ ಅಮೀದ್ ಚವ್ಸ್ ರಷ್ಯಾ ದಾಳಿಗೆ ಹೆದರಿ ಮೆಟ್ರೋ ಸ್ಟೇಶನ್ ಸಿಟಿ ಬಳಿ ಇರುವ ಬಂಕರ್‌ನಲ್ಲಿ ಅಡಗಿ ಕುಳಿತಿದ್ದರು. ಈ ವೇಳೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಮಹಿಳೆಯ ಕಿರುಚಾಟವನ್ನು ಕೇಳಿ ಉಕ್ರೇನ್ ಪೊಲೀಸರು ಸಹಾಯ ಬಂದಿದ್ದಾರೆ. ಆಗ ವೈದ್ಯರು ಬಂಕರ್‌ನಲ್ಲಿ ಹೆರಿಗೆ ಮಾಡಿಸಿದ್ದಾರೆ. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

    ಉಕ್ರೇನ್ ಮೇಲೆ ಮಿಲಿಟರಿ ದಾಳಿ ನಡೆಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ರಷ್ಯಾ ಸೇನೆ ಮತ್ತು ಕ್ಷಿಪಣಿಗಳು ಉಕ್ರೇನ್ ಮೇಲೆ ದಾಳಿ ನಡೆಸಿತು. ರಷ್ಯಾ ನಡೆಗೆ ಅಮೆರಿಕ ಸೇರಿದಂತೆ ಅನೇಕ ಯೂರೋಪ್ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಉಕ್ರೇನ್ ಮೇಲೆ ಸತತ ಮೂರನೇ ದಿನವೂ ರಷ್ಯಾ ದಾಳಿ ಮುಂದುವರಿಸಿದೆ. ಉಕ್ರೇನ್‍ನಲ್ಲಿ ಈವರೆಗೆ 198 ಮಂದಿ ಸಾವಿಗೀಡಾಗಿದ್ದಾರೆ. ಸದ್ಯ ರಷ್ಯಾ ಸೇನಾ ಪಡೆ ಉಕ್ರೇನ್ ರಾಜಧಾನಿ ಕೀವ್ ಪ್ರವೇಶಿಸಿದ್ದು, ಬೃಹತ್ ಕಟ್ಟಡಗಳ ಮೇಲೆ ಕ್ಷಿಪಣಿಗಳ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ಬಾಂಬ್ ಸ್ಫೋಟಕ್ಕೆ ಜನರು ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಈಗಾಗಲೇ ಕೀವ್ ನಗರವನ್ನು ರಷ್ಯಾ ಸೇನೆ ಸಂಪೂರ್ಣವಾಗಿ ಸುತ್ತವರಿದಿದ್ದು, ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಯಾಗುತ್ತಿದೆ. ಕೀವ್‌ನಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಇಂಟರ್‍ನೆಟ್ ಸೇವೆ ಕೂಡ ಸ್ಥಗಿತಗೊಂಡಿದೆ. ಈ ಮಧ್ಯೆಯೂ ಉಕ್ರೇನ್ ಅಧ್ಯಕ್ಷ ದಿಟ್ಟತನದ ಮಾತಗಳನ್ನಾಡಿದ್ದಾರೆ. ಇದನ್ನೂ ಓದಿ:  ಉಕ್ರೇನ್‌ ಬಿಕ್ಕಟ್ಟು – ಬೆಂಗಳೂರು ವಿದ್ಯಾರ್ಥಿನಿಯ ವೀಡಿಯೋ ಶೇರ್‌ ಮಾಡಿ ಕೇಂದ್ರಕ್ಕೆ ರಾಗಾ ಮನವಿ

    ಕೀವ್ ತೊರೆಯುವಂತೆ ಅಮೆರಿಕ ಝೆಲೆಸ್ಕಿಗೆ ಸಲಹೆ ನೀಡಿತ್ತು. ಆದರೆ ದೊಡ್ಡಣ್ಣನ ಸಲಹೆಯನ್ನು ಉಕ್ರೇನ್ ಅಧ್ಯಕ್ಷ ಧಿಕ್ಕರಿಸಿದ್ದಾರೆ. ನಾನು ನನ್ನ ದೇಶದಲ್ಲಿಯೇ ಇರುತ್ತೇನೆ. ನನಗ್ಯಾವ ಜೀವ ಭಯ ಇಲ್ಲ. ಹೀಗಾಗಿ ನನಗೆ ಸ್ಥಳಾಂತರ ಬೇಡ, ಮದ್ದುಗುಂಡುಗಳು ಬೇಕು. ರಷ್ಯಾ ಸೇನೆ ವಿರುದ್ಧ ನಾನು ಕೊನೆಯವರೆಗೂ ಹೋರಾಟ ಮಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

  • ವೈದ್ಯರ ಎಡವಟ್ಟು ಆಟವಾಡುತ್ತಲೇ ಪ್ರಾಣಬಿಟ್ಟ ಮುದ್ದಾದ ಮಗು

    ವೈದ್ಯರ ಎಡವಟ್ಟು ಆಟವಾಡುತ್ತಲೇ ಪ್ರಾಣಬಿಟ್ಟ ಮುದ್ದಾದ ಮಗು

    ಧಾರವಾಡ: ಮಗುವೊಂದು ವೈದ್ಯರ ಎಡವಟ್ಟಿನಿಂದಾಗಿ ಆಟವಾಡುತ್ತಲೇ ಪ್ರಾಣಬಿಟ್ಟ ಘಟನೆ ಹುಬ್ಬಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ರಕ್ಷಾ (2) ಮೃತ ಕಂದಮ್ಮ. ಹುಬ್ಬಳ್ಳಿಯ ಉಣಕಲ್‍ನ ನಿವಾಸಿ ಸಂಜಯ್ ಮತ್ತು ಕೀರ್ತಿ ಎನ್ನುವ ಪೋಷಕರ ಮಗು ಇದಾಗಿದೆ. ರವಿವಾರವಷ್ಟೇ ಮಗುವನ್ನು ಅವರ ಪೋಷಕರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಇದನ್ನೂ ಓದಿ: ರಕ್ತದಾನ ಮಾಡಿದ ಹೃತಿಕ್ ರೋಷನ್

    ರಕ್ಷಾ ಹೆಮಾಂಜಿಯೋಮಾ ಎನ್ನುವ ರೋಗದಿಂದ ಬಳಲುತ್ತಿದ್ದಳು. ಈ ವೇಳೆ ಆಪರೇಷನ್ ಮಾಡುವ ಮೂಲಕ ಅದನ್ನ ತೆಗೆಯಬೇಕು ಅಂತ ವೈದ್ಯರು ಹೇಳಿದ್ದರು. ಆದರೆ ನಗುನಗುತ್ತಲೇ ಇದ್ದ ಮಗುವಿಗೆ ಧಿಡೀರ್ ಆಪರೇಷನ್ ಯಾಕೆ ಅಂತ ವೈದ್ಯರನ್ನ ಪೋಷಕರು ಕೇಳಿದ್ದಾರೆ. ಇದನ್ನೂ ಓದಿ: ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗ

    ಆದರೆ ಚುಚ್ಚುಮದ್ದು ನೀಡುವಾಗ ಮಗುವಿಗೆ ರಕ್ತಸ್ರಾವ ಹೆಚ್ಚಾಗಿದೆ ಅಂತ ಪೋಷಕರ ಅನುಮತಿಯನ್ನು ಸಹ ಪಡೆಯದೆ ಆಪರೇಷನ್ ಮಾಡಿದ್ದಾರೆ. ನಂತರ 2 ದಿನಗಳ ಕಾಲ ಜೀವನ್ಮರಣದ ಜೊತೆ ಹೋರಾಡಿದ ಮಗು ಇಂದು ಬೆಳಗ್ಗೆ ಕೊನೆಯುಸಿರೆಳೆದಿದೆ.

    ಇನ್ನೇನು ಮಗು ಉಳಿಯುದಿಲ್ಲ ಅನ್ನುವುದು ಯಾವಾಗ ಕಿಮ್ಸ್‍ನ ವೈದ್ಯರಿಗೆ ತಿಳಿದಿದೆಯೋ, ಆಗ ಮಗುವಿನ ಷಕರ ಬಳಿ ಪತ್ರ ಬರೆಸಿಕೊಂಡಿದ್ದಾರೆ. ಪೋಷಕರ ಬಳಿ ಆಪರೇಷನ್ ಬಳಿಕ ಸಹಿ ಮಾಡಿಸಿಕೊಂಡಿದ್ದು, ಆಪರೇಷನ್ ಮಾಡುತ್ತೇವೆ ಅನ್ನುವ ಒಂದೇ ಒಂದು ಮಾತನ್ನು ಸಹ ವೈದ್ಯರು ಪೋಷಕರಿಗೆ ತಿಳಿಸಿರಲಿಲ್ಲ.

    ಈ ಕುರಿತು ರೊಚ್ಚಿಗೆದ್ದ ಮಗುವಿನ ಪೋಷಕರು ಆಪರೇಷನ್ ಮಾಡುತ್ತೇವೆ ಅಂತ ಒಂದೇ ಒಂದು ಮಾತು ಹೇಳಿದ್ದರೆ ನಾವು ಮಗುವನ್ನು ಜಿವಂತವಾಗಿ ಮನೆಗೆ ಕರೆದುಕೊಂಡು ಹೋಗುತ್ತಿದ್ದೇವು. ಚೆಕಪ್ ಅಂತ ಹೇಳಿ ಈ ರೀತಿ ಮಗುವಿನ ಸಾವಿಗೆ ನೇರ ಕಾರಣರಾಗಿದ್ದೀರಾ ಎಂದು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

  • ರಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದ ಶಿಶು ಏಕಾಏಕಿ ಸಾವು – ಪೋಷಕರಿಂದ ಆಕ್ರೋಶ

    ರಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದ ಶಿಶು ಏಕಾಏಕಿ ಸಾವು – ಪೋಷಕರಿಂದ ಆಕ್ರೋಶ

    ರಾಯಚೂರು: ನಗರದ ರಿಮ್ಸ್ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಯಲ್ಲಿ ಚೆನ್ನಾಗಿದ್ದ ನವಜಾತ ಶಿಶು ಏಕಾಏಕಿ ಸಾವನ್ನಪ್ಪಿದ ಹಿನ್ನೆಲೆ ಶಿಶುವಿನ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Rims Hospital

    ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಬೆಳಿಗ್ಗೆ ಎಲ್ಲಾ ಚೆನ್ನಾಗಿದ್ದ ಮಗು ರಾತ್ರಿ ವೇಳೆಗೆ ಏಕಾಏಕಿ ಸಾವನ್ನಪ್ಪಿರುವುದಕ್ಕೆ ವೈದ್ಯರ ಹಾಗೂ ನರ್ಸ್‍ಗಳ ನಿರ್ಲಕ್ಷ್ಯವೇ ಕಾರಣ ಅಂತ ಆರೋಪಿಸಲಾಗಿದೆ. ನಾಲ್ಕು ದಿನಗಳ ಕೆಳಗೆ ತಾಯಿ ರೇಣುಕಾಗೆ ನಾರ್ಮಲ್ ಡೆಲಿವರಿಯಾಗಿತ್ತು. ನಾಲ್ಕು ದಿನದಿಂದ ಆರೋಗ್ಯವಾಗಿದ್ದ ಮಗು ಏಕಾಏಕಿ ಸಾವನ್ನಪ್ಪಿದೆ. ಮಗುವಿನ ಸಮಸ್ಯೆ ಬಗ್ಗೆ ಮೊದಲೇ ಹೇಳಿದ್ದರೆ ಬೇರೆ ಆಸ್ಪತ್ರೆಗೆ ಹೋಗುತ್ತಿದ್ದೇವು ಎಂದು ಪೋಷಕರು ಕಿಡಿಕಾರಿದ್ದಾರೆ. ಇದನ್ನೂ ಓದಿ:  ಕೋರ್ಟ್‍ಗೆ ಹಾಜರಾಗಲು ಮಲ್ಯಗೆ ಸುಪ್ರೀಂ ಕೊನೆಯ ಅವಕಾಶ

    Rims Hospital

    ಮಗುವಿನ ಸಾವಿನ ಬಗ್ಗೆ ವೈದ್ಯರು ನಿಖರ ಕಾರಣ ಹೇಳಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿ ಶಿಶು ಪೋಷಕರ ಕಡೆಯವರಿಂದ ಆಕ್ರೋಶ ವ್ಯಕ್ತವಾಗಿದೆ. ತಾಯಿಗೆ ಮದುವೆಯಾಗಿ ಒಂಭತ್ತು ವರ್ಷಗಳ ಬಳಿಕ ಮಗುವಾಗಿದ್ದು, ತಾಯಿ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಹೆರಿಗೆ ಬಳಿಕ ಆಸ್ಪತ್ರೆಯಲ್ಲಿ ಉಳಿದಿದ್ದರು. ತಾಯಿ ಮಗುವಿಗೆ ಹಾಲುಣಿಸುವಾಗ ಸಮಸ್ಯೆಯಾಗಿರಬಹುದು. ಇಲ್ಲವಾದಲ್ಲಿ ಸಡನ್ ಇನ್ಫಾಂಟ್ ಡೆತ್ ಸಿಂಡ್ರೋಮ್‍ಗೆ ಮಗು ಬಲಿಯಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಬುರ್ಕಾ ಧರಿಸದೇ ಧೈರ್ಯ ಪ್ರದರ್ಶಿಸಿ: ಕಂಗನಾ ರಣಾವತ್

  • ನವಜಾತ ಶಿಶುವಿನ ದೇಹವನ್ನು ಕಿತ್ತು ತಿಂದ ಶ್ವಾನಗಳು

    ನವಜಾತ ಶಿಶುವಿನ ದೇಹವನ್ನು ಕಿತ್ತು ತಿಂದ ಶ್ವಾನಗಳು

    ಹಾಸನ: ನವಜಾತ ಶಿಶುವಿನ ದೇಹವನ್ನು ನಾಯಿಗಳು ಕಿತ್ತು ತಿಂದಿರುವ ಮನಕಲಕುವ ಘಟನೆ ಹಾಸನ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ನಡೆದಿದೆ.

    ಹಾಸನದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ನಾಯಿಗಳು ತಿಂದಿರುವ ರುಂಡವಿಲ್ಲದ ಮಗು ಪತ್ತೆಯಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮೃತಮಗುವಿನ ದೇಹವನ್ನು ವಶಕ್ಕೆ ಪಡೆದಿದ್ದಾರೆ.

    ಮಗು ಯಾರದ್ದು, ಇಲ್ಲಿ ಹೇಗೆ ಬಂದು ಬಿದ್ದಿದೆ ಎಂಬುದು ತಿಳಿದು ಬಂದಿಲ್ಲ. ಯಾರೋ ಮಗುವನ್ನು ಹೆತ್ತು ಬಿಸಾಡಿ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದರಿಂದ ನಾಯಿಗಳು ಕಿತ್ತು ತಿಂದು ಕೊಂದು ಹಾಕಿರಬಹುದು ಎನ್ನಲಾಗಿದೆ. ದನ್ನೂ ಓದಿ: ಕಾಡು ಪ್ರಾಣಿಗಳಿಗಿಟ್ಟ ನಾಡಬಾಂಬ್ ಸ್ಫೋಟ- ಬಾಲಕಿ ಸಾವು

    POLICE JEEP

    ಈ ಬಗ್ಗೆ ತನಿಖೆ ನಡೆಸಿ ಮಗು ಯಾರದ್ದು ಎಂದು ಪತ್ತೆ ಹಚ್ಚಬೇಕು. ಇದರಲ್ಲಿ ಹೆತ್ತವರ ತಪ್ಪಿದ್ದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಹಾಸನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದನ್ನೂ ಓದಿ:  ಟಾಟಾ ಏಸ್ ವಾಹನಕ್ಕೆ ಗುದ್ದಿದ ಅಪರಿಚಿತ ವಾಹನ – 2 ಸಾವು, 10 ಮಂದಿಗೆ ಗಾಯ

  • 3 ತಿಂಗಳ ಲಸಿಕೆ ಪಡೆದ ಮಗು ಸಾವು- ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆರೋಪ

    3 ತಿಂಗಳ ಲಸಿಕೆ ಪಡೆದ ಮಗು ಸಾವು- ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆರೋಪ

    ಕೋಲಾರ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಮಗುವೊಂದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

    ಸೋಮಯಾಜಲಹಳ್ಳಿ ಗ್ರಾಮದ ಸುಬ್ರಮಣಿ ಹಾಗೂ ಗಂಗರತ್ನ ದಂಪತಿಯ ಗಂಡು ಮಗು. ನಿನ್ನೆ ಆಸ್ಪತ್ರೆಯಲ್ಲಿ ಮಗು 3 ತಿಂಗಳ ಲಸಿಕೆ ಪಡೆದಿತ್ತು. ವ್ಯಾಕ್ಸಿನ್ ಪಡೆದ ಮಗು ನಿನ್ನೆಯಿಂದ ರಾತ್ರಿ ಮನೆಯಲ್ಲಿ ನಿದ್ದೆ ಮಾಡದೆ ಅಳುತಿತ್ತು. ಹೀಗಾಗಿ ಪೋಷಕರು ಪುನಃ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆ ಡಾಕ್ಟರ್ ಸೌಮ್ಯ ಮಗುಗೆ ಏನೂ ಆಗಿಲ್ಲವೆಂದು ಸಮಜಾಯಿಸಿ ಕಳುಹಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

    ವೈದ್ಯೆಯು ಒಂದೇ ಸಮನೆ ಅಳುತ್ತಿದ್ದ ಮಗುವಿಗೆ ಚಿಕಿತ್ಸೆ ನೀಡದೆ ಖಾಸಗಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರು. ಈ ವೇಳೆ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಗು ಸಾವನ್ನಪ್ಪಿದೆ. ಇದನ್ನೂ ಓದಿ: ನಕ್ಸಲ್ ನಿಗ್ರಹ ದಳ ಸಿಬ್ಬಂದಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿದ ಸರ್ಕಾರ

    ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಪೋಷಕರು ಆರೋಪ ವ್ಯಕ್ತಪಡಿಸಿದ್ದು, ಮಗುವಿನ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ.

    ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಘಟನೆ ನಡೆದಿದೆ.