Tag: Baby

  • ರಾಮನಗರದಲ್ಲಿ ಮೌಢ್ಯತೆ ಇನ್ನೂ ಜೀವಂತ- ಹಸಿ ಬಾಣಂತಿ, ಮಗು ಗ್ರಾಮದಿಂದ ಹೊರಕ್ಕೆ

    ರಾಮನಗರದಲ್ಲಿ ಮೌಢ್ಯತೆ ಇನ್ನೂ ಜೀವಂತ- ಹಸಿ ಬಾಣಂತಿ, ಮಗು ಗ್ರಾಮದಿಂದ ಹೊರಕ್ಕೆ

    ರಾಮನಗರ: ಇಂದು ಅಂಗೈಯಲ್ಲೇ ಎಲ್ಲವೂ ಅನ್ನೋ ಅಷ್ಟರಮಟ್ಟಿಗೆ ಜಗತ್ತು ಬೆಳೆದು ನಿಂತಿದೆ. ಆದರೂ ಈ ಮೂಢನಂಬಿಕೆ ಮಾತ್ರ ಇನ್ನೂ ಜೀವಂತವಾಗಿದೆ. ಗ್ರಾಮಕ್ಕೆ ಕೇಡಾಗುತ್ತದೆಯೆಂದು ಹೆದರಿ 20 ದಿನದ ಹಸುಗೂಸು ಹಾಗೂ ಬಾಣಂತಿಯನ್ನ ಗ್ರಾಮದ ಹೊರಗಿಟ್ಟಿರುವ ಘಟನೆ ನಡೆದಿದೆ.

    ಹೌದು. ರಾಮನಗರ ತಾಲೂಕಿನ ದೇವರದೊಡ್ಡಿ ಗ್ರಾಮದ ಹೊರವಲಯದ ಪ್ರದೇಶದಲ್ಲಿ ಮೌಢ್ಯತೆಯ ಅನಾವರಣವಾಗಿದೆ. ಇಲ್ಲಿ ತಲೆಮಾರುಗಳಿಂದಲೂ ಋತುಮತಿಯಾದವರು, ಬಾಣಂತಿಯರನ್ನ 2 ತಿಂಗಳು 3 ದಿನ ಊರ ಹೊರಗಿಟ್ಟು ಮೌಢ್ಯತೆಯ ಪರಮಾವಧಿ ಮೀರಿದ್ದಾರೆ.

    ಗ್ರಾಮದ ಶ್ರೀರಂಗಪ್ಪ ದೇವರಿಗಾಗಿ ಈ ಮೌಢ್ಯತೆಯನ್ನು ಆಚರಿಸಿಕೊಂಡು ಬರುತ್ತಿದ್ದು, ಉಲ್ಲಂಘಿಸಿದ್ರೇ ಗ್ರಾಮಕ್ಕೆ ಕೇಡಾಗುತ್ತೆ ಅನ್ನೋ ನಂಬಿಕೆ ಇಲ್ಲಿನ ಜನರನ್ನು ಆವರಿಸಿದೆ. ಈ ಮೌಢ್ಯ ಆಚರಣೆ ಕೇವಲ ಬಾಣಂತಿಯರಿಗೆ ಮಾತ್ರವಲ್ಲ, ಋತುಮತಿಗಳಿಗೆ ಹಾಗೂ ದೊಡ್ಡವರಾಗುವ ಬಾಲಕಿಯರಿಗೂ ಅನ್ವಯಿಸುತ್ತೆ. ಇವರಿಗಾಗಿ ಗ್ರಾಮದ ಹೊರಗೆ ಕೆಲವು ಕೊಠಡಿಗಳನ್ನು ನಿರ್ಮಿಸಿದ್ದಾರೆ. ತಮ್ಮ ದಿನದ ಅವಧಿ ಮುಗಿಯುವರೆಗೂ ಅವರು ಅಲ್ಲೇ ವಾಸವಿರಬೇಕು. ಇದನ್ನೂ ಓದಿ: ಮಕ್ಕಳು ಓಡಿ ಹೋಗದಂತೆ ತಡೆಯಲು ಕಾಲಿಗೆ ಕಬ್ಬಿಣ ಸರಪಳಿ ಕಟ್ಟಿದ ಮೌಲಾನಾ

    ಲೆಕ್ಕ ಹಾಕಿದರೆ ದೇವರದೊಡ್ಡಿ ಗ್ರಾಮದಲ್ಲಿ ಕೇವಲ 100 ರಿಂದ 139 ಮನೆಗಳಿವೆ. ರಾಜಧಾನಿಯಿಂದ ಕೇವಲ 45 ಕಿ.ಮೀ ದೂರ. ರಾಜಧಾನಿಯಲ್ಲಿ ಆಧುನೀಕತೆ ಅಬ್ಬರವಿದ್ದರೆ ಈ ಗ್ರಾಮದಲ್ಲಿ ಮೌಢ್ಯತೆ ಮನೆ ಮಾಡಿರೋದು ಮಾತ್ರ ವಿರ್ಪಯಾಸವೇ ಸರಿ. ಇದನ್ನೂ ಓದಿ: ಸಿಲಿಂಡರ್ ಸ್ಫೋಟದಿಂದ ಕಟ್ಟಡ ಕುಸಿದು ಮಗು ಸೇರಿದಂತೆ 4 ಮಂದಿ ಸಾವು

  • ಸಿಲಿಂಡರ್ ಸ್ಫೋಟದಿಂದ ಕಟ್ಟಡ ಕುಸಿದು ಮಗು ಸೇರಿದಂತೆ 4 ಮಂದಿ ಸಾವು

    ಸಿಲಿಂಡರ್ ಸ್ಫೋಟದಿಂದ ಕಟ್ಟಡ ಕುಸಿದು ಮಗು ಸೇರಿದಂತೆ 4 ಮಂದಿ ಸಾವು

    ಅಮರಾವತಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಟ್ಟಡ ಕುಸಿದು 3 ವರ್ಷದ ಮಗು ಸೇರಿದಂತೆ 4 ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅನನಪುರ್ ಜಿಲ್ಲೆಯ ಮುಳಕೇಡು ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ಜೈನಬಿ (60), ದಾದು (36), ಶರ್ಫುನ್ನಿ (28) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 3 ವರ್ಷದ ಮಗು ಕೂಡಾ ಸಾವನ್ನಪ್ಪಿದೆ. ಇನ್ನೂ ಇಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಅಕ್ಕಪಕ್ಕದ ಎರಡು ಮನೆಗಳಿಗೂ ಹಾನಿಯಾಗಿದೆ. ಇದನ್ನೂ ಓದಿ: ಮಕ್ಕಳು ಓಡಿ ಹೋಗದಂತೆ ತಡೆಯಲು ಕಾಲಿಗೆ ಕಬ್ಬಿಣ ಸರಪಳಿ ಕಟ್ಟಿದ ಮೌಲಾನಾ

    ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದನ್ನೂ ಓದಿ: ಹೊರಗುತ್ತಿಗೆ ನೀಡುವ ನಿರ್ಧಾರ ಖಂಡಿಸಿ ಇಂದಿನಿಂದ ಮಹಾರಾಷ್ಟ್ರ ನರ್ಸ್‍ಗಳಿಂದ ಮುಷ್ಕರ

     

  • ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ ಮಾಡಿಸಿದ 108 ಸಿಬ್ಬಂದಿ

    ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ ಮಾಡಿಸಿದ 108 ಸಿಬ್ಬಂದಿ

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಬೆಳಗುರ್ಕಿ ಗ್ರಾಮದ ಗರ್ಭಿಣಿಗೆ ಆಸ್ಪತ್ರೆ ಮಾರ್ಗ ಮಧ್ಯೆಯೇ ಆಂಬ್ಯುಲೆನ್ಸ್‍ನಲ್ಲಿ ಹೆರಿಗೆಯಾಗಿದೆ.

    ಹೆರಿಗೆ ನೋವು ತೀವ್ರವಾಗಿ ಕಾಣಿಸಿಕೊಂಡಿದ್ದರಿಂದ 108 ಸಿಬ್ಬಂದಿ ಹೆರಿಗೆ ಮಾಡಿಸಿದ್ದಾರೆ. ಪ್ರಸ್ತುತ ತಾಯಿ ಪಾರ್ವತಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.  ತಾಯಿ-ಮಗಳು ಆರೋಗ್ಯವಾಗಿ ಇದ್ದಾರೆ.

    ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಬಾದರ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿತ್ತು. ಆದರೆ ಆಸ್ಪತ್ರೆ ಮಾರ್ಗ ಮಧ್ಯೆದಲ್ಲೇ ನೋವು ತೀವ್ರಗೊಂಡಿದ್ದರಿಂದ ಶುಶ್ರೂಷಕ ಬಸವರಾಜ್ ಮಾರ್ಗ ಮಧ್ಯೆ ಆಂಬ್ಯುಲೆನ್ಸ್‌ನಲ್ಲೇ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಇದನ್ನೂ ಓದಿ: ಹೋಟೆಲ್‍ಗಳಿಗೆ ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿ: ಬೆಸ್ಕಾಂ ಭರವಸೆ 

    ಹೆರಿಗೆಯಾದ ನಂತರ ತಾಯಿ ಮಗುವನ್ನು ಬಾದರ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

  • ಮಗು ನೋಡಲು ಬಂದ ಪ್ರಿಯತಮೆಯ ತಾಯಿಗೆ ಚಾಕು ಇರಿದ!

    ಮಗು ನೋಡಲು ಬಂದ ಪ್ರಿಯತಮೆಯ ತಾಯಿಗೆ ಚಾಕು ಇರಿದ!

    ಕಾರವಾರ: ಮಗು ನೋಡಲು ಬಂದ ಪ್ರಿಯತಮೆಯ ತಾಯಿಗೆ ಕುಡಿದ ಅಮಲಿನಲ್ಲಿ ಆಸ್ಪತ್ರೆಯಲ್ಲೇ ಚಾಕು ಇರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಕದ್ರಾ ಮೂಲದ ಮಮ್ಮದಬೀ ಚಾಕು ಇರಿತಕ್ಕೊಳಗಾಗಿದ್ದು, ದಾಂಡೇಲಿ ಮೂಲದ ರಮಜಾನ್ ಚಾಕು ಇರಿದವನಾಗಿದ್ದಾನೆ. ರಮಜಾನ್ ಮಮ್ಮದಬೀ ಮಗಳ ಜೊತೆ ಮದುವೆಯಾಗದೇ 4 ವರ್ಷಗಳಿಂದ ಲಿವಿಂಗ್ ರಿಲೇಷನ್‌ನಲ್ಲಿದ್ದ. ಮದುವೆಯಾಗದೇ ಮಗು ಆಗಿದ್ದಕ್ಕೆ ಮಮ್ಮದಬೀ ರಮಜಾನ್‌ನೊಂದಿಗೆ ಜಗಳವಾಡಿದ್ದರು. ಇದನ್ನೂ ಓದಿ: ಆಸ್ಪತ್ರೆಯಲ್ಲಿ ರೋಗಿಯ ಕಣ್ಣಿಗೆ ಕಚ್ಚಿದ ಇಲಿ

     

    ಈ ವಿಚಾರಕ್ಕೆ ಕೋಪಗೊಂಡಿದ್ದ ರಮಜಾನ್ ಕುಡಿದ ನಶೆಯಲ್ಲಿ ಮಗಳನ್ನು ನೋಡಲು ಬಂದಿದ್ದ ಮಮ್ಮದಬೀಗೆ ಆಸ್ಪತ್ರೆಯ ಐಸಿಯುನಲ್ಲಿ ಹಲ್ಲೆ ಮಾಡಿ ಹೊಟ್ಟೆಗೆ ಚಾಕು ಇರಿದಿದ್ದಾನೆ. ತಕ್ಷಣ ಅಲ್ಲೇ ಇದ್ದ ಜನರು ಆತನನ್ನು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಗಡಿಯುದ್ದಕ್ಕೂ ಕಾಡ್ಗಿಚ್ಚು – ನೆಲಬಾಂಬ್‌ಗಳು ಸ್ಫೋಟ

    ಚಾಕು ಇರಿತಕ್ಕೊಳಗಾದ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜನಿಸಿದ ಕೆಲವೇ ನಿಮಿಷಗಳಲ್ಲಿ ಪುಟ್ಟ ಕಂದಮ್ಮನನ್ನು ರಸ್ತೆಗೆ ಎಸೆದ ತಾಯಿ

    ಜನಿಸಿದ ಕೆಲವೇ ನಿಮಿಷಗಳಲ್ಲಿ ಪುಟ್ಟ ಕಂದಮ್ಮನನ್ನು ರಸ್ತೆಗೆ ಎಸೆದ ತಾಯಿ

    ಆನೇಕಲ್: ನವಜಾತ ಶಿಶುವನ್ನು ಹೆತ್ತ ತಾಯಿಯೇ ರಸ್ತೆಗೆ ಎಸೆದು ಹೋಗಿದ್ದು, ಸ್ಥಳೀಯರು ಮಗುವಿನ ಅಳುವಿನ ಶಬ್ದ ಕೇಳಿ ರಕ್ಷಣೆ ಮಾಡಿರುವ ಘಟನೆ ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿ ನಡೆದಿದೆ.

    ಮುಂಜಾನೆ ವಿವರ್ಸ್ ಕಾಲೋನಿಯ 5ನೇ ಕ್ರಾಸ್ ರಸ್ತೆ ಬದಿಯಲ್ಲಿ ಮಗುವಿನ ಅಳುವಿನ ಶಬ್ದ ಕೇಳಿಸಿಕೊಂಡ ನಿವಾಸಿಗಳು ಹೊರ ಬಂದು ನೋಡಿದಾಗ ರಕ್ತಸಿಕ್ತ ಸ್ಥಿತಿಯಲ್ಲಿ ಆಗಷ್ಟೇ ಜನಿಸಿದ ಮಗು ಪತ್ತೆಯಾಗಿದೆ. ಅಕ್ಕಪಕ್ಕದ ನಿವಾಸಿಗಳು ಮಗುವನ್ನು ರಕ್ಷಣೆ ಮಾಡಿದ್ದು, ಏರಿಯಾದ ಚೂಡಾಮಣಿ ಎಂಬ ಮಹಿಳೆ ರಕ್ತಸಿಕ್ತವಾಗಿದ್ದ ಮಗುವನ್ನು ಶುಚಿ ಮಾಡಿ ಸ್ನಾನ ಮಾಡಿಸಿದ್ದಾರೆ.

    ಇನ್ನೂ ಪ್ರಪಂಚವೇ ಅರಿಯದ ಹಸುಗೂಸುನ್ನು ರಸ್ತೆಗೆಸೆದಿರುವ ಹೆತ್ತಮ್ಮ ಅಪ್ರಾಪ್ತೆ ಇಲ್ಲವೇ ಅನೈತಿಕ ಸಂಬಂಧಕ್ಕೆ ಜನಿಸಿರುವ ಸಂಶಯ ವ್ಯಕ್ತವಾಗಿದ್ದು, ಪುಟ್ಟ ಕಂದನನ್ನು ರಸ್ತೆಯಲ್ಲಿ ಎಸೆದು ಹೋಗಿರುವ ನಿರ್ದಯಿ ತಾಯಿಯ ವಿರುದ್ಧ ಸ್ಥಳೀಯರು ಆಕ್ರೋಶವನ್ನು ಹೊರಹಾಕಿದರು. ಇದನ್ನೂ ಓದಿ: ಕೆಲಸದಲ್ಲಿ ತೃಪ್ತಿ ಇಲ್ಲ – ಡೆತ್ ನೋಟ್ ಬರೆದು ಪೊಲೀಸ್ ಆತ್ಮಹತ್ಯೆ

    ವಿಷಯ ತಿಳಿದು ಸ್ಥಳಕ್ಕೆ ಬಂದ ಕೋಣನಕುಂಟೆ ಪೊಲೀಸರು ಬೇಟಿ ನೀಡಿದ್ದಾರೆ. ಬಳಿಕ ಕಂದಮ್ಮನನ್ನ ರಕ್ಷಣೆ ಮಾಡಿದ ಮಹಿಳೆ ಚೂಡಾಮಣಿ ಮಗುವನ್ನು ಸಾಕಲು ನಮ್ಮ ಸುಪರ್ದಿಗೆ ನೀಡಿ ಎಂದು ಗೊಗರೆದ್ದಾರೆ. ಆದರೆ ಕೊಂಣನಕುಂಟೆ ಪೊಲೀಸರು ನವಜಾತ ಹೆಣ್ಣು ಮಗುವನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈಗಲೂ ಬೇಕಾದ್ರೆ ಅವಳನ್ನೇ ಮದುವೆ ಆಗ್ತೀನಿ: ಆ್ಯಸಿಡ್ ನಾಗನ ದುರಹಂಕಾರದ ಮಾತು

  • ಖಾನಾಪುರದ ತಹಶೀಲ್ದಾರ್ ಕಚೇರಿ ಎದುರು ಪ್ಲಾಸ್ಟಿಕ್ ಚೀಲದಲ್ಲಿ ನವಜಾತ ಶಿಶು ಪತ್ತೆ

    ಖಾನಾಪುರದ ತಹಶೀಲ್ದಾರ್ ಕಚೇರಿ ಎದುರು ಪ್ಲಾಸ್ಟಿಕ್ ಚೀಲದಲ್ಲಿ ನವಜಾತ ಶಿಶು ಪತ್ತೆ

    ಬೆಳಗಾವಿ: ಖಾನಾಪುರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ್ದ ಸ್ಥಿತಿಯಲ್ಲಿ ಎರಡು ದಿನದ ನವಜಾತ ಶಿಶು ಪತ್ತೆಯಾಗಿದೆ.

    ಖಾನಾಪುರದ ತಹಶೀಲ್ದಾರ್ ಕಚೇರಿ ಮುಂಭಾಗದ ಮಾವಿನ ಮರದ ಕೆಳಗೆ ಪ್ಲಾಸ್ಟಿಕ್ ಚೀಲದಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಸ್ಥಳೀಯರು ಶಿಶುವನ್ನು ನೋಡಿ ಗಮನಿಸಿ ಸ್ಥಳದಲ್ಲಿ ಯಾರು ಪತ್ತೆಯಾಗದೇ ಇದ್ದಾಗ ಖಾನಾಪೂರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 250 ರೂ. ಹಣ ಕೊಡದಿದ್ದಕ್ಕೆ ಬಿಯರ್ ಬಾಟಲ್‍ನಿಂದ ತಲೆಗೆ ಹೊಡೆದು ಕೊಲೆ

    ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಿಶುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮತ್ತು ದಾದಿಯರು ಮಗುವನ್ನು ಪರೀಕ್ಷಿಸಿ ಶಿಶು ಕಲ್ಯಾಣಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಆ ಬಳಿಕ ಮಗುವನ್ನು ಬೆಳಗಾವಿಗೆ ಕಳುಹಿಸಲಾಗಿದೆ. ಸದ್ಯ ಮಗು ಆರೋಗ್ಯವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಲೈಂಗಿಕ ತೃಷೆ ತೀರಿಸಿಕೊಳ್ಳಲು ಹೋಗಿ ವ್ಯಕ್ತಿ ಎಡವಟ್ಟು – ಎಕ್ಸ್ ರೇ ನೋಡಿ ವೈದ್ಯರೇ ಶಾಕ್

  • ಪತಿ ಸಾವಿನ ಸುದ್ದಿ ಕೇಳಿ ಮಗುವಿನೊಂದಿಗೆ ಗೃಹಿಣಿ ಆತ್ಮಹತ್ಯೆ

    ಪತಿ ಸಾವಿನ ಸುದ್ದಿ ಕೇಳಿ ಮಗುವಿನೊಂದಿಗೆ ಗೃಹಿಣಿ ಆತ್ಮಹತ್ಯೆ

    ರಾಯಚೂರು: ಅಪಘಾತದಲ್ಲಿ ಗಾಯಗೊಂಡು ಪತಿ ಸಾವನ್ನಪ್ಪಿದ ಸುದ್ದಿ ತಿಳಿದು ಪತ್ನಿ ಐದು ತಿಂಗಳ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ನಡೆದಿದೆ.

    ಮೃತರನ್ನು ಶೃತಿ(30) ಮತ್ತು 5 ತಿಂಗಳ ಮಗು ಅಭಿರಾಮ್ ಎಂದು ಗುರುತಿಸಲಾಗಿದೆ. ಮಂಗಳೂರು ಜಿಲ್ಲೆಯ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪತಿ ಗಂಗಾಧರ್ ಶನಿವಾರ ರಸ್ತೆ ಅಪಘಾತದಲ್ಲಿ ಸಾವನ್ನಪಿದ್ದರು. ಈ ಸುದ್ದಿ ತಿಳಿದು ಪತ್ನಿ ಶೃತಿ ದಿಕ್ಕು ಕಾಣದಂತೆ ಆಗಿ ಮನನೊಂದು ಮನೆಯ ಕಿಟಕಿಗೆ ಐದು ತಿಂಗಳ ಮಗುವಿಗೆ ನೇಣು ಹಾಕಿ ಕೊಂದು ಆ ಬಳಿಕ ಮನೆಯಲ್ಲಿನ ಫ್ಯಾನ್‍ಗೆ ತಾನು ಕೂಡ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯನ್ನು ಕೆಜಿ ಹಳ್ಳಿ, ಡಿಜೆಹಳ್ಳಿ ಘಟನೆಗೆ ಹೋಲಿಸಿದ ಗೃಹಸಚಿವ

    ಮಾಹಿತಿ ತಿಳಿದು ಸ್ಥಳಕ್ಕೆ ಲಿಂಗಸೂಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಿಂಗಸೂಗೂರು ಡಿವೈಎಸ್‍ಪಿ ಎಸ್.ಎಸ್. ಹೂಲ್ಲೂರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಗಳು ಮತ್ತು ಮೊಮ್ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಮೃತರ ಶವಗಳನ್ನು ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.  ಇದನ್ನೂ ಓದಿ: ಪೊಲೀಸ್ ವಾಹನಗಳೇ ಟಾರ್ಗೆಟ್ – ದಿಡ್ಡಿ ಹನುಮಂತ ದೇಗುಲಕ್ಕೂ ಕಲ್ಲೇಟು

  • ಪತಿಯೊಂದಿಗೆ ಜಗಳವಾಡಿದ ಕೋಪದಲ್ಲಿ ಮಗುವಿನ ಕತ್ತು ಹಿಸುಕಿ ಕೊಂದ್ಲು

    ಪತಿಯೊಂದಿಗೆ ಜಗಳವಾಡಿದ ಕೋಪದಲ್ಲಿ ಮಗುವಿನ ಕತ್ತು ಹಿಸುಕಿ ಕೊಂದ್ಲು

    ನವದೆಹಲಿ: ಪತಿಯೊಂದಿಗೆ ಜಗಳವಾಡಿದ ಕೋಪದಲ್ಲಿ ಮಹಿಳೆಯೊಬ್ಬಳು ತನ್ನ ಮೂರು ತಿಂಗಳ ಮಗುವನ್ನೆ ಕತ್ತು ಹಿಸುಕಿ ಕೊಂದ ಘಟನೆ ನವದೆಹಲಿಯಲ್ಲಿ ನಡೆದಿದೆ.

    ವಾಯುವ್ಯ ದೆಹಲಿಯ ಶಾಲಿಮಾರ್ ಬಾಗ್ ನಿವಾಸಿ ಅಂಜಲಿ ದೇವಿ(26) ಬಂಧಿತ ಆರೋಪಿ. ತನ್ನ ಪತಿಯೊಂದಿಗೆ ಕ್ಷುಲ್ಲಕ ವಿಚಾರಕ್ಕಾಗಿ ಅಂಜಲಿ ದೇವಿ ಜಗಳವಾಡಿದ್ದಳು. ಇದಾದ ಬಳಿಕ ಪತಿ ಕೆಲಸಕ್ಕೆ ತೆರಳಿದ್ದರು. ಕೋಪದ ಭರದಲ್ಲಿದ್ದ ಅಂಜಲಿ ತನ್ನ ಮೂರು ತಿಂಗಳ ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾಳೆ.

    ಈ ಬಗ್ಗೆ ಉಪ ಪೊಲೀಸ್ ಆಯುಕ್ತರಾದ ಉಷಾ ರಂಗಾನಿ ಮಾತನಾಡಿ, ತಾಯಿ ಶಿಶುವನ್ನು ಕೊಂದಿರುವ ಬಗ್ಗೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಅಂಜಲಿದೇವಿಯು ಮಗುವಿನ ಕುತ್ತಿಗೆಗೆ ದಾರದಿಂದ ಬಿಗಿದು ಕೊಂದಿದ್ದಾರೆ ಎಂದು ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಧರ್ಮ ದಂಗಲ್‌ಗೆ ನಾವು ಕಾರಣರಲ್ಲ: ಹಿಜಬ್ ಪರ ವಿದ್ಯಾರ್ಥಿನಿಯರು

    ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದಾದ ನಂತರ ಅದನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು. ಈ ಕುರಿತು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಂಜಲಿ ದೇವಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬೈಕ್‍ಗೆ ಲಾರಿ ಡಿಕ್ಕಿ – ಫಾರ್ಮಾ ಕಂಪನಿ ನೌಕರ ಸಾವು

  • ಪುಟ್ಟ ಮಗುವಿಗೆ ಮನಬಂದಂತೆ ಥಳಿಸಿದ ಮಹಿಳೆ – ವೀಡಿಯೋ ವೈರಲ್

    ಪುಟ್ಟ ಮಗುವಿಗೆ ಮನಬಂದಂತೆ ಥಳಿಸಿದ ಮಹಿಳೆ – ವೀಡಿಯೋ ವೈರಲ್

    ಶ್ರೀನಗರ: ಮಹಿಳೆಯೊಬ್ಬಳು ಪುಟ್ಟ ಮಗುವಿಗೆ ಅಮಾನುಷವಾಗಿ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ. ವೀಡಿಯೋದಲ್ಲಿ ಮಹಿಳೆ ತನ್ನ ಮಡಿಲ ಮೇಲೆ ಅಳುತ್ತಿರುವ ಮಗುವನ್ನು ಮಲಗಿಸಿಕೊಂಡು ಹಾಸಿಗೆಯ ಮೇಲೆ ಕುಳಿತು ಯಾರೊಂದಿಗಾದರೂ ಜಗಳವಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಮಗು ಅಳುತ್ತಲೇ ಇದ್ದಾಗ, ತಿಂಗಳುಗಳಷ್ಟೇ ತುಂಬಿರುವ ಮಗುವನ್ನು ಹಾಸಿಗೆಯ ಮೇಲೆ ಬಡಿಯುತ್ತಾ, ಗುದ್ದುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

    crime

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ವಿಚಾರವಾಗಿ ತನಿಖೆ ಆರಂಭಿಸಿದ್ದಾರೆ. ತನಿಖೆ ವೇಳೆ ಶಿಶುವಿಗೆ ಥಳಿಸಿದ ಮಹಿಳೆ ಮಗುವಿನ ತಾಯಿ ಎಂದು ತಿಳಿದು ಬಂದಿದ್ದು, ಈಕೆ ಜಮ್ಮು ವಿಭಾಗದ ಸಾಂಬಾ ಜಿಲ್ಲೆಯ ನಿವಾಸಿಯಾಗಿದ್ದಾಳೆ. ಇದೀಗ ಮಗು ಸುರಕ್ಷಿತವಾಗಿದ್ದು, ಆರೋಪಿಯನ್ನು ಬಂಧಿಸಿ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಣ್ಣಾವ್ರ 16ನೇ ಪುಣ್ಯಸ್ಮರಣೆ: ಡಾ.ರಾಜ್ ಸ್ಮಾರಕಕ್ಕೆ ಹರಿದು ಬಂತು ಜನಸಾಗರ

  • ಮೊಬೈಲ್ ಬೆಳಕಿನಲ್ಲೇ ಹೆರಿಗೆ ಮಾಡಿಸಿದ ವೈದ್ಯರು

    ಮೊಬೈಲ್ ಬೆಳಕಿನಲ್ಲೇ ಹೆರಿಗೆ ಮಾಡಿಸಿದ ವೈದ್ಯರು

    ಹೈದರಾಬಾದ್: ಗರ್ಭಿಣಿಯೊಬ್ಬರಿಗೆ ವೈದ್ಯರು ಮೊಬೈಲ್ ಬೆಳಕಿನಲ್ಲಿ ಹೆರಿಗೆ ಮಾಡಿಸಿರುವ ಘಟನೆ ಆಂಧ್ರಪ್ರದೇಶದ ನರಸೀಪಟ್ಟಣಂನಲ್ಲಿರುವ ಎಸ್‍ಟಿಆರ್ ಆಸ್ಪತ್ರೆಯಲ್ಲಿ ನಡೆದಿದೆ.

    ನಡೆದಿದ್ದೇನು?: ಗರ್ಭಿಣಿಗೆ ರಾತ್ರಿ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ ಆಸ್ಪತ್ರೆಯಲ್ಲಿ ಕರೆಂಟ್ ಇರಲಿಲ್ಲ. ಇದರಿಂದ ಗರ್ಭಿಣಿ ಕಡೆಯವರಿಗೆ ಆತಂಕ ಎದುರಾಗಿತ್ತು. ಆದರೆ ಆಸ್ಪತ್ರೆಯ ನರ್ಸ್‍ಗಳು ಗರ್ಭಿಣಿಯ ಪತಿಗೆ ಎಷ್ಟು ಸಾಧ್ಯವೋ ಅಷ್ಟು ಮೊಬೈಲ್, ಕ್ಯಾಂಡಲ್ ಟಾರ್ಚ್‍ಲೈಟ್‍ಗಳನ್ನು ಅರೇಂಜ್ ಮಾಡಲು ಹೇಳಿದರು.

    ಕ್ಯಾಂಡಲ್ ಹಾಗೂ ಸಂಬಂಧಿಕರ ಮೊಬೈಲ್‍ಗಳನ್ನು ತಂದು ನರ್ಸ್‍ಗಳು ಕೈಗೆ ಕೊಟ್ಟರು. ಆ ಸೆಲ್‍ಫೋನ್‍ಗಳು, ಕ್ಯಾಂಡಲ್ ಬೆಳಕಿನಿಂದ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದೇವೆ. ತಾಯಿ, ಮಗು ಆರೋಗ್ಯವಾಗಿದ್ದಾರೆ.

    ಆಸ್ಪತ್ರೆಯಲ್ಲಿ ಕರೆಂಟ್ ಹೋದಾಗ ಯಾವುದೇ ಜನರೇಟರ್, ಯುಪಿಎಸ್ ಬ್ಯಾಕಪ್ ಇಲ್ಲದಿರುವುದಕ್ಕೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ರಾತ್ರಿಯಲ್ಲಿ ನಾನು ಟಾರ್ಚ್, ಮೊಬೈಲ್‍ಗಳ ವ್ಯವಸ್ಥೆ ಮಾಡಲು ಬಹಳ ಪರದಾಡಬೇಕಾಯಿತು. ಆಸ್ಪತ್ರೆಯಲ್ಲಿ ಇಷ್ಟು ರಾತ್ರಿ ವೇಳೆ ಆ ಎಲ್ಲಾ ವ್ಯವಸ್ಥೆಗಳನ್ನು ನಾನು ಮಾಡಬೇಕಾ? ಅಥವಾ ಆಸ್ಪತ್ರೆಯವರು ಅದಕ್ಕೆ ಮುಂಚಿತವಾಗಿ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕಾ? ಆ ಆಸ್ಪತ್ರೆಯಲ್ಲಿ ನನ್ನ ಹೆಂಡತಿ ಮಾತ್ರವಲ್ಲ. ಇತರ ಮಹಿಳೆಯರೂ ಇದ್ದರು. ಎಲ್ಲರೂ ನರಳುತ್ತಿದ್ದರು. ಅದನ್ನು ಕಂಡು ನನಗೆ ಹೆದರಿಕೆಯಾಗಿತ್ತು. ನನ್ನ ಹೆಂಡತಿ ಮತ್ತು ಮಗುವಿನ ಪ್ರಾಣದ ಬಗ್ಗೆ ನನಗೆ ಬಹಳ ಭಯವಾಗಿತ್ತು ಎಂದು ಆ ಗರ್ಭಿಣಿಯ ಪತಿ ಖಾಸಗಿ ವಾಹಿನಿ ಜೊತೆಗೆ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನದಿಗೆ ಹಾರಿ ಅರಣ್ಯಾಧಿಕಾರಿ ಆತ್ಮಹತ್ಯೆ? 

    ಬುಧವಾರ ಮತ್ತು ಗುರುವಾರದ ಮಧ್ಯರಾತ್ರಿಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿರುವ ಘಟನೆ ವರದಿಯಾಗಿದೆ. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಆಂಧ್ರಪ್ರದೇಶದ ವಿದ್ಯುತ್ ಇಲಾಖೆಯು ಶೇ. 50ರಷ್ಟು ವಿದ್ಯುತ್ ಕಡಿತವನ್ನು ಘೋಷಿಸಿದೆ. ಆಂಧ್ರಪ್ರದೇಶವು ದಿನಕ್ಕೆ ಸುಮಾರು 5 ಲಕ್ಷ ಯೂನಿಟ್ ಕೊರತೆಯನ್ನು ಎದುರಿಸುತ್ತಿದೆ. ಇದು ಸುದೀರ್ಘ ವಿದ್ಯುತ್ ಕಡಿತಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಭುವನ ಸುಂದರಿ ಶ್ರೀದೇವಿ ಮಗಳು ಈಗ ಬ್ಯಾಕ್‍ಲೆಸ್ ಸುಂದರಿ 

    ಆಸ್ಪತ್ರೆಗೆಯಲ್ಲಿ ಕರೆಂಟ್ ಹೋದಾಗ ಯಾವುದೇ ಜನರೇಟರ್, ಯುಪಿಎಸ್ ಬ್ಯಾಕಪ್ ಇಲ್ಲದಿರುವುದಕ್ಕೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.