Tag: Baby

  • ಮಗು ಕೊಂದ ಪ್ರಕರಣ – ನನ್ನ ಅಪ್ಪ ಅಂದಿದ್ರೆ ಸಾಕಾಗಿತ್ತು ಅಂತ ಕಿರಣ್ ಕಣ್ಣೀರು

    ಮಗು ಕೊಂದ ಪ್ರಕರಣ – ನನ್ನ ಅಪ್ಪ ಅಂದಿದ್ರೆ ಸಾಕಾಗಿತ್ತು ಅಂತ ಕಿರಣ್ ಕಣ್ಣೀರು

    ಬೆಂಗಳೂರು: ಮುದ್ದು ಮಗುವನ್ನ ಕಳೆದುಕೊಂಡ ತಂದೆಯ ಕಣ್ಣಲ್ಲಿ ಬತ್ತಿಲ್ಲ ಕಣ್ಣೀರು. ಹೆಂಡತಿ ಮಾಡಿದ ಕೃತ್ಯದಿಂದ ಹೊರ ಬಾರದ ತಂದೆ ಮಗುವಿನ ಬಗ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ.

    ಹೆತ್ತವರಿಗೆ ಹೆಗ್ಣ ಮುದ್ದು ಅನ್ನೋ ಹಾಗೆ ತಂದೆಗೆ ಪ್ರೀತಿ ಪಾತ್ರನಾಗಿದ್ದ ಮುದ್ದು ಮಗಳನ್ನ ಕಳೆದುಕೊಂಡ ಹೆತ್ತಪ್ಪನ ಕಣ್ಣಿನಲ್ಲಿ ವಾರ ಕಳೆದರೂ ಕಣ್ಣೀರು ಬತ್ತಿಲ್ಲ. ಮಗಳ ಬಗ್ಗೆ ಮಾತು ಆರಂಭಿಸುತ್ತಿದ್ದಂತೆ ಭಾವುಕರಾಗಿ ಕಿರಣ್ ಪಬ್ಲಿಕ್ ಟಿವಿ ಜೊತೆ ಅಳಲು ತೋಡಿಕೊಂಡಿದ್ದಾರೆ. ಮಗು ನಾಯಿ ರೀತಿ ಅವಳ ಹಿಂದೆ ಹಿಂದೆಯೇ ಸುತ್ತಾಡ್ತಾ ಇತ್ತು. ನನಗೆ ನನ್ನ ಮಗು ದೊಡ್ಡ ಡಾಕ್ಟರ್ ಆಗೋದಾಗ್ಲಿ, ಎಂಜಿನಿಯರ್ ಆಗೋ ಆಸೆ ಇರಲಿಲ್ಲ. ನನ್ನ ಮಗು ನನ್ನ ಅಪ್ಪ ಅಂದಿದ್ರೆ ಸಾಕಾಗಿತ್ತು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಊಟ ಬೇಕಂದ್ರೆ ಕೇಳಿ ಹಾಕಿಸ್ಕೋತಿನಿ ಬಿಡು ಗುರು – ನಟ ಕೋಮಲ್ ಶೈಲಿ ಕಾಪಿ ಹೊಡೆದ್ರಾ ಶಿಖರ್ ಧವನ್?

    ಹತ್ತು ವರ್ಷದಿಂದ ಕಾಯುತ್ತಾ ಇದ್ದೆ ಅಪ್ಪ ಅನ್ನೋದಕ್ಕೆ. ನಾನು ಏನೆಲ್ಲಾ ಟ್ರೈ ಮಾಡಿದ್ದೆ ಅಂದರೆ ಎಲ್ಲವನ್ನೂ ಮಾಡಿದ್ದೆ. ಅವಳು ಕೂಡ ಮಗುವನ್ನು ಚೆನ್ನಾಗಿ ನೋಡಿಕೊಳ್ತಾ ಇದ್ದಳು. ಇದ್ದಕ್ಕಿದ್ದಂತೆ ಯಾಕೆ ಹೀಗೆ ಮಾಡಿದ್ಲು ಅನ್ನೋದು ಗೊತ್ತಿಲ್ಲ. ಮಗು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರತಿ ಭಾನುವಾರ ಹೊರಗೆ ಕರೆದುಕೊಂಡು ಹೋಗ್ತಾ ಇದ್ದೆವು. ಡೇ ಕೇರ್ ಮಾಡ್ತಾ ಇದ್ವಿ. ಅದಕ್ಕೆ ಏನೇನೂ ಬೇಕು ಎಲ್ಲಾ ಮನೆಯಲ್ಲೆ ಸಿದ್ಧತೆ ಮಾಡಿಕೊಂಡಿದ್ವಿ. ಇದ್ದಕ್ಕಿದ್ದಂತೆ ಯಾಕೆ ಈ ತೀರ್ಮಾನ ಮಾಡಿದ್ಲು ಅನ್ನೋದು ತಿಳಿಯುತ್ತಿಲ್ಲ. ಮಗು ಸ್ವಲ್ಪ ಹಠ ಮಾಡುತ್ತಿತ್ತು. ಯಾವ ಮಗು ಹಠ ಮಾಡೊಲ್ಲ ಹೇಳಿ ಎಲ್ಲಾ ಮಕ್ಕಳು ಹಠ ಮಾಡ್ತಾರೆ. ಇದಕ್ಕೆ ಬುದ್ಧಿ ಬೆಳವಣಿಗೆ ಆಗಿರಲಿಲ್ಲ. ತುಂಬಾ ಕಷ್ಟ ಪಡುತ್ತಾ ಇತ್ತು ಎಂದರು.

    ಆ ಮಗು ಬಿಸಾಡಿದಾಗ ಮನೆಯಲ್ಲಿಯೇ ಇದ್ದೆ. ನಾನೇ ಆಸ್ಪತ್ರೆಗೆ ಕರೆದುಕೊಂಡು ಓಡಿ ಹೋದೆ ಮಗು ಬದುಕಲಿಲ್ಲ. ಆದರೆ ಅವಳ ಮನಸ್ಥಿತಿ ಏನಿತ್ತು ಅನ್ನೋದು ಗೊತ್ತಿಲ್ಲ.ನನ್ನ ಮಗು ನಾರ್ಮಲ್ ಆಗಿದ್ರೆ ಅಷ್ಟೇ ಸಾಕಾಗಿತ್ತು ಮಗುವನ್ನು ದೊಡ್ಡವಳು ಮಾಡಿ ಮದುವೆ ಮಾಡಬೇಕು ಅನ್ನೋ ಆಸೆ ಇರಲಿಲ್ಲ ಜೀವಂತವಾಗಿ ಕೊನೆಯ ತನಕ ನನ್ನ ಜೊತೆಯಲ್ಲಿ ಇದ್ದಿದ್ರೆ ಸಾಕಾಗಿತ್ತು ಕಣ್ಣಿರು ಹಾಕಿದ ತಂದೆ ಕಿರಣ್. ಮಗಳನ್ನ ಕೊಲೆ ಮಾಡಿದ ಪತ್ನಿಯ ಬಗ್ಗೆ ಮಾತನಾಡಲು ನಿರಾಕರಣೆ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ಅವಳಿಗೆ ಮಗು ನೋಡಿಕೊಳ್ಳೋಕೆ ಕಷ್ಟ ಅಂತಿದ್ರೆ ನಾನೇ ನೋಡಿಕೊಳ್ತಿದ್ದೆ: ಪತಿ ಕಣ್ಣೀರು

    ಅವಳಿಗೆ ಮಗು ನೋಡಿಕೊಳ್ಳೋಕೆ ಕಷ್ಟ ಅಂತಿದ್ರೆ ನಾನೇ ನೋಡಿಕೊಳ್ತಿದ್ದೆ: ಪತಿ ಕಣ್ಣೀರು

    ಬೆಂಗಳೂರು: ನನ್ನ ಪತ್ನಿಗೆ ಮಗು ನೋಡಿಕೊಳ್ಳುವುದಕ್ಕೆ ಕಷ್ಟ ಆಗುತ್ತೆ ಎಂದು ಹೇಳಿದ್ರೆ ನಾನೇ ಮಗಳನ್ನು ನೋಡಿಕೊಳ್ಳುತ್ತಿದ್ದೆ ಎಂದು ಜೀತಿ ತಂದೆ ಕಿರಣ್ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

    ಬೆಂಗಳೂರಿನ ಸಂಪಂಗಿರಾಮನಗರ ತಾಯಿಯಿಂದ ಮಗು ಹತ್ಯೆ ಪ್ರಕರಣ ಸಂಬಂಧ ಇದೀಗ ಆರೋಪಿ ತಾಯಿ ಸುಷ್ಮಾ ಪತಿ ಕಿರಣ್ ಹೇಳಿಕೆಯಿಂದ ಪೊಲೀಸರಿಗೆ ಅನುಮಾನ ಮೂಡಿದೆ. ಸುಷ್ಮಾ ಖಿನ್ನತೆಯಿಂದ ಬಳುತ್ತಿದ್ಲಾ ಅನ್ನೋ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಮಗು ಕೊಂದ ಕೇಸ್‍ಗೆ ಟ್ವಿಸ್ಟ್- ತಾಯಿ ಕುಕೃತ್ಯಕ್ಕೆ ಕಾರಣವಾಯ್ತಾ ಪರ್ಸನಲ್ ಮ್ಯಾಟರ್..?

    ಹೇಳಿಕೆ ವೇಳೆ ಪೊಲೀಸರ ಎದುರು ಕಣ್ಣೀರು ಹಾಕಿದ ಕಿರಣ್, ಅವಳಿಗೆ ಮಗು ನೋಡಿಕೊಳ್ಳೋಕೆ ಕಷ್ಟ ಅಂತಾ ಹೇಳಿದ್ರೆ ಮಗುವನ್ನು ನಾನೆ ನೊಡಿಕೊಳ್ತಿದ್ದೆ. ಮಗು ಚೂರು ಅಬ್ ನಾರ್ಮಲ್ ಆಗಿತ್ತು. ಆದರೆ ಅದಕ್ಕೆ ಚಿಕಿತ್ಸೆ ಕೂಡ ಕೊಡಿಸುತ್ತಿದ್ದೆವು. ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರು ಟು ಹೈದರಾಬಾದ್ ರೈಲಿನಲ್ಲಿ ಬಿಟ್ಟು ಬಂದಿದ್ದಳು. ಆದರೆ ತಾಯಿಯೇ ಮಗುವನ್ನು ಹೇಗೆ ಬಿಡಲು ಸಾಧ್ಯ ಅಂತಾ ನಮಗೆ ಸುಶ್ಮಾ ಮೇಲೆ ಅನುಮಾನ ಬರಲಿಲ್ಲ. ಮಗುನೇ ಮಿಸ್ ಆಗಿ ಹೋಗಿರಬಹುದು ಅನ್ಕೊಂಡಿದ್ವಿ. ಈ ವೇಳೆ ಎನ್ ಜಿ ಓ ಒಂದರ ಸಹಾಯದಿಂದ ಮಗು ಮತ್ತೆ ನಮಗೆ ಸಿಕ್ಕಿತ್ತು. ಆಮೇಲೆ ಇವಳೆ ಬಿಟ್ಟು ಬಂದಿದ್ದಾಳೆ ಅನ್ನೋದು ಗೊತ್ತಾಗಿತ್ತು. ಆದರೆ ಮಗುವನ್ನು ಕೊಲೆ ಮಾಡ್ತಾಳೆ ಅಂತಾ ನಾನು ಅನ್ಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ನಡೆದಿದ್ದೇನು..?
    ಡೆಂಟಲ್ ಡಾಕ್ಟರ್ ಆಗಿರುವ ಸುಷ್ಮಾ ತನ್ನ 4 ವರ್ಷದ ಮಗುವನ್ನು ತಮ್ಮ ನಿವಾಸ ಅದ್ವೈತ್ ಅಪಾರ್ಟ್ ಮೆಂಟ್‍ನ ನಾಲ್ಕನೇ ಮಹಡಿಯಿಂದ ನೂಕಿ ಕೊಂದಿದ್ದಳು. ಮನೆಯಲ್ಲಿ ಗಂಡ ಸಾಫ್ಟ್‍ವೇರ್ ಇಂಜಿನಿಯರ್, ಹೆಂಡತಿ ಡೆಂಟಲ್ ಡಾಕ್ಟರ್ ಆಗಿದ್ದು, ಆರ್ಥಿಕವಾಗಿ ಎಲ್ಲವಬೂ ಚೆನ್ನಾಗಿಯೇ ಇತ್ತು. ಇವರ 4 ವರ್ಷದ ಹೆಣ್ಣು ಮಗುವನ್ನು ನೋಡಿದ್ದ ಅಕ್ಕಪಕ್ಕದವರಿಗೂ ಮಗು ಬುದ್ಧಿಮಾಂದ್ಯ ಅನ್ನೋ ರೀತಿ ಯಾವುದೇ ಅನುಮಾನ ಕೂಡ ಇರಲಿಲ್ಲ. ಆದರೂ ಮಗುವನ್ನು ಆಟವಾಡಿಸುತ್ತಿದ್ದ ವೈದ್ಯೆ ಸುಷ್ಮಾ ಏಕಾಏಕಿ ಮಗುವನ್ನು ಕೆಳಗೆ ಎಸೆದಿದ್ದಾಳೆ. ಅಲ್ಲದೆ ಕೆಳಗೆ ಬಿದ್ದ ಮಗು ನರಳಾಡಿ ಸಾವನ್ನಪ್ಪುತ್ತಿದ್ದರೂ ಅರಾಮಾಗಿ ನಿಂತು ನೋಡುತ್ತಿದ್ದಲು. ಅದರ ಜೊತೆಗೆ ತಾನು ಕೂಡ ಕಂಬಿ ಮೇಲೆ ನಿಂತು ಎರಡು ನಿಮಿಷಗಳ ಕಾಲ ಕಾದಿದ್ದು, ಬಳಿಕ ಅಕ್ಕಪಕ್ಕದ ನಿವಾಸಿಗಳ ಸಹಾಯದಿಂದ ಬಚಾವ್ ಆಗಿದ್ದಳು.

    ಈ ಎಲ್ಲಾ ದೃಶ್ಯಗಳು ಅಪಾರ್ಟ್ ಮೆಂಟ್‍ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ತಾಯಿಯ ಕೃತ್ಯಕ್ಕೆ ಜಾಲತಾಣಿಗರು ಆಕ್ರೊಶ ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗು ಕೊಂದ ಕೇಸ್‍ಗೆ ಟ್ವಿಸ್ಟ್- ತಾಯಿ ಕುಕೃತ್ಯಕ್ಕೆ ಕಾರಣವಾಯ್ತಾ ಪರ್ಸನಲ್ ಮ್ಯಾಟರ್..?

    ಮಗು ಕೊಂದ ಕೇಸ್‍ಗೆ ಟ್ವಿಸ್ಟ್- ತಾಯಿ ಕುಕೃತ್ಯಕ್ಕೆ ಕಾರಣವಾಯ್ತಾ ಪರ್ಸನಲ್ ಮ್ಯಾಟರ್..?

    ಬೆಂಗಳೂರು: ಹೆತ್ತ ತಾಯಿಯೇ ತನ್ನ ಕಂದಮ್ಮನನ್ನ ನಾಲ್ಕನೇ ಮಹಡಿ ಮೇಲಿನಿಂದ ತಳ್ಳಿ ಕೊಲೆ ಮಾಡಿದ ಕೇಸ್‍ನಲ್ಲಿ ಖಾಕಿಗೆ ಡೌಟ್ ಶುರುವಾಗಿದೆ.

    ಹೌದು. ಡೆಂಟಲ್ ಡಾಕ್ಟರ್‍ರೊಬ್ಬರು ತನ್ನ 4 ವರ್ಷದ ಮಗುವನ್ನ ನಾಲ್ಕನೇ ಮಹಡಿಯಿಂದ ನೂಕಿ ಕೊಂದಿದ್ದ ಕೇಸ್‍ನಲ್ಲಿ ಈಗೊಂದು ಟ್ವಿಸ್ಟ್ ಸಿಕ್ತಿದೆ. ಘಟನೆ ಬಗ್ಗೆ ಸಂಪಂಗಿ ರಾಮನಗರ ಪೊಲೀಸರಿಗೆ ಒಂದಷ್ಟು ಅನುಮಾನ ಮೂಡಿದೆ. ಮನೆಯಲ್ಲಿ ಗಂಡ ಸಾಫ್ಟ್‍ವೇರ್ ಇಂಜಿನಿಯರ್, ಹೆಂಡತಿ ಡೆಂಟಲ್ ಡಾಕ್ಟರ್ ಆಗಿದ್ದು, ಆರ್ಥಿಕವಾಗಿ ಎಲ್ಲವಬೂ ಚೆನ್ನಾಗಿಯೇ ಇತ್ತು. ಇವರ 4 ವರ್ಷದ ಹೆಣ್ಣು ಮಗುವನ್ನು ನೋಡಿದ್ದ ಅಕ್ಕಪಕ್ಕದವರಿಗೂ ಮಗು ಬುದ್ಧಿಮಾಂದ್ಯ ಅನ್ನೋ ರೀತಿ ಯಾವುದೇ ಅನುಮಾನ ಕೂಡ ಇರಲಿಲ್ಲ. ಆದರೂ ಮಗುವನ್ನು ಆಟವಾಡಿಸುತ್ತಿದ್ದ ವೈದ್ಯೆ ಸುಷ್ಮಾ ಏಕಾಏಕಿ ಮಗುವನ್ನು ಕೆಳಗೆ ಎಸೆದಿದ್ದು ಯಾಕೆ..? ಕೆಳಗೆ ಬಿದ್ದ ಮಗು ನರಳಾಡಿ ಸಾವನ್ನಪ್ಪುತ್ತಿದ್ದರೂ ಅರಾಮಾಗಿ ನಿಂತು ನೋಡ್ತಿದ್ದು ಯಾಕೆ ಅನ್ನೋ ಅನುಮಾನ ಕಾಡಿದೆ. ಅದರ ಜೊತೆಗೆ ತಾನು ಕೂಡ ಕಂಬಿ ಮೇಲೆ ನಿಂತು ಎರಡು ನಿಮಿಷಗಳ ಕಾಲ ಕಾದಿದ್ದು ಯಾಕೆ ಅನ್ನೋ ಬಿಗ್ ಡೌಟ್ ಪೊಲೀಸರನ್ನು ಕಾಡುತ್ತಿದೆ.

    ಅಪಾರ್ಟ್ ಮೆಂಟ್‍ನಲ್ಲಿ ನಾಲ್ಕು ವರ್ಷದ ಮಗು ಜೊತೆಗೆ ಗಂಡ-ಹೆಂಡತಿ ಮೂವರೇ ಇದ್ದರು. ಒಂದು ವೇಳೆ ತಮ್ಮ ಮಗುಗೆ ಅಬ್ ನಾರ್ಮಲ್ ಆಗಿದ್ರೆ ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಬಹುದಿತ್ತು. ಆದರೆ ಅದನ್ನು ಬಿಟ್ಟು ಗಂಡ ಕೆಲಸಕ್ಕೆ ಹೋಗಿದ್ದ ವೇಳೆ ತನ್ನ ಮಗುವನ್ನೇ ಕೊಂದ ವೈದ್ಯೆ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದರ ಹಿಂದೆ ವೈಯಕ್ತಿಕ ಕಾರಣವಿರುವ ಸಾಧ್ಯತೆ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ. ಹೀಗಾಗಿ ಕೇಸ್ ಸಂಬಂಧ ಆರೋಪಿ ಸುಷ್ಮಾ, ಗಂಡ ಕಿರಣ್, ಅಕ್ಕಪಕ್ಕದವರ ಬಳಿ ಮಾಹಿತಿ ಕಲೆಹಾಕಿರುವ ಪೊಲೀಸರಿಗೆ, ಘಟನೆಯಲ್ಲಿ ವೈಯಕ್ತಿಕ ಕಾರಣ ಇರೋ ಸಾಧ್ಯತೆ ಬಗ್ಗೆ ಒಂದಷ್ಟು ಸಾಕ್ಷಿಗಳು ಸಿಕ್ಕಿದೆ ಎನ್ನಲಾಗಿದೆ. ಇದನ್ನೂ ಓದಿ: ಪತ್ನಿ ಸಂಬಂಧಿ ಜೊತೆ ಲವ್ವಿ-ಡವ್ವಿ, ವೇಶ್ಯೆ ಪ್ರೀತಿಗೆ ಬಿದ್ದು ಆದ ಸೈಕೋ ಕಿಲ್ಲರ್ – ಮಂಡ್ಯದಲ್ಲೊಂದು ಮರ್ಡರ್ ಮಿಸ್ಟ್ರಿ

    ಇನ್ನೂ ಘಟನೆ ಬಗ್ಗೆ ಗಂಡ ಕಿರಣ್ ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪಾಪಿ ತಾಯಿ ಸುಷ್ಮಾ ಪೊಲೀಸರ ವಶದಲ್ಲಿದ್ದಾರೆ. ವಿಚಾರಣೆ ವೇಳೆ ಆಕೆ ಸೂಕ್ತ ರೀತಿಯಲ್ಲಿ ಉತ್ತರ ನೀಡ್ತಿಲ್ಲ. ಹೀಗಾಗಿ ಸಂಬಂಧಪಟ್ಟ ವೈದ್ಯರಿಂದ ಕೌನ್ಸಲಿಂಗ್ ಮಾಡಿಸೋಕೆ ಖಾಕಿ ಪಡೆ ಮುಂದಾಗಿದೆ. ಅದೇನಿ ಇರಲಿ, ಸ್ವಂತ ಮಗುವಿನ ಮೇಲೆ ತಾಯಿಯೇ ಈ ರೀತಿ ಭೀಕರತೆ ಮೆರೆದಿರೋದು ದುರಂತ.

    Live Tv
    [brid partner=56869869 player=32851 video=960834 autoplay=true]

  • ಜಿರಳೆ ಔಷಧಿ ಸಿಂಪಡಿಸಿದ್ದರಿಂದ ಉಸಿರುಗಟ್ಟಿ ಬಾಲಕಿ ದುರ್ಮರಣ

    ಜಿರಳೆ ಔಷಧಿ ಸಿಂಪಡಿಸಿದ್ದರಿಂದ ಉಸಿರುಗಟ್ಟಿ ಬಾಲಕಿ ದುರ್ಮರಣ

    ಬೆಂಗಳೂರು: ಮನೆ ಮಾಲೀಕನ ಎಡವಟ್ಟಿಗೆ 6 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ವಸಂತನಗರದ 5ನೇ ಕ್ರಾಸ್ ಬಳಿ ನಡೆದಿದೆ.

    ಶಿವಶಂಕರ್ ಮನೆಯಲ್ಲಿ ವಿನೋದ್ ಕುಟುಂಬಸ್ಥರು ಬಾಡಿಗೆಗೆ ಇದ್ರು. ಆದರೆ ವಾರದ ಹಿಂದೆ ವಿನೋದ್ ಫ್ಯಾಮಿಲಿ ಊರಿಗೆ ಹೋಗಿದ್ದ ವೇಳೆ ಶಿವಶಂಕರ್ ಜಿರಳೆ ಔಷಧಿ ಸಿಂಪಡಿಸಿದ್ರು. ಇದರ ಅರಿವಿಲ್ಲದೆ ಮನೆಗೆ ಬಂದು ವಿನೋದ್ ಕುಟುಂಬಸ್ಥರು ಮಲಗಿದ್ರು. ಈ ವೇಳೆ ಉಸಿರಾಟದ ಸಮಸ್ಯೆಯಾಗಿ ಆರು ವರ್ಷದ ಬಾಲಕಿ ಅಹನಾ ಸಾನ್ನಪ್ಪಿದ್ರೆ, ಅಸ್ವಸ್ಥಗೊಂಡಿರೋ ಮನೆ ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

    ಈ ಸಂಬಂಧ ಮನೆ ಮಾಲೀಕ ಪ್ರಸಾದ್ ಪ್ರತಿಕ್ರಿಯಿಸಿ, ಮೂರು ದಿನ ಮುಂಚಿತವಾಗಿ ಅವರಿಗೆ ತಿಗಣೆ ಮದ್ದು ಹೊಡೆಯೋದಾಗಿ ಮಾಹಿತಿ ನೀಡಿದ್ದೆವು. ಅದೇ ಕಾರಣಕ್ಕಾಗಿಯೇ ಅವರು ಕೇರಳ ಹೋಗಿದ್ದರು. ನಿನ್ನೆ ನಮಗೆ ಹೇಳದೆ ಮನೆಗೆ ಬಂದುಬಿಟ್ಟಿದ್ದಾರೆ. ಮಗುವಿನ ಸಾವಿಗೆ ಪೋಷಕರ ನಿರ್ಲಕ್ಷವೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.

    ಮನೆಯಲ್ಲಿ ತಿಗಣೆ ಜಾಸ್ತಿ ಆಗಿದೆ ಅಂತ ಅವರೇ ಹೇಳಿದ್ದರು. ಹೀಗಾಗಿ ನಾಲ್ಕು ದಿನ ಬೇಕು ಸಮಯ ಬೇಕು ಅಂತ ಹೇಳಿದ್ದೆವು. ಅದರಂತೆ ಮನೆಗೆ ಪೆಸ್ಟ್ ಕಂಟ್ರೋಲ್ ಅವರನ್ನ ಕರೆಸಿ ಔಷಧಿ ಸಿಂಪಂಡಣೆ ಮಾಡಿದ್ವಿ. ನಂತರ ಮನೆ ಲಾಕ್ ಸಹ ಮಾಡಿದ್ವಿ. ಮನೆಯ ಕೀ ಸಹ ನಮ್ಮ ಬಳಿ ಇತ್ತು. ಡೂಪ್ಲಿಕೇಟ್ ಕೀ ಬಳಸಿ ಮನೆಗೆ ಬಂದಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿರಲ್ಲಿಲ್ಲ. ಇದರಿಂದಾಗಿಯೇ ಮಗು ಸಾವನ್ನಪ್ಪಿದೆ. ಇದು ಪೋಷಕರ ನಿರ್ಲಕ್ಷ ಎಂದು ಆರೋಪಿಸಿದರು.

    ಮಗು ಸೋಫಾ ಮೇಲೆ ಮಲಗಿತ್ತು. ಈ ವೇಳೆ ವಾಂತಿ ಮಾಡತ್ತಂತೆ. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ತಂದೆ-ತಾಯಿ ಇಬ್ಬರು ಇನ್ನೂ ಅನ್ ಕಾನ್ಸಿಯಸ್ ಸ್ಥಿತಿಯಲ್ಲಿದ್ದಾರೆ ಎಂದು ಪ್ರಸಾದ್ ತಿಳಿಸಿದ್ದಾರೆ. ಇದನ್ನೂ ಓದಿ: ಜಮೀನು ವಿವಾದ – ಬೆಳ್ಳಂಬೆಳಗ್ಗೆ ಟವರ್ ಏರಿ ವೃದ್ಧನ ಹೈಡ್ರಾಮಾ

    ಮೂಲತಃ ಕೇರಳದವರಾಗಿರುವ ವಿನೋದ್ ನಾಯರ್ ಕುಟುಂಬ ಸುಮಾರು 8 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿತ್ತು. ಬೆಂಗಳೂರಿನ ವಸಂತನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ವಿನೋದ್ ನಾಯರ್ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಗಳು ಅಹನಾ ವಸಂತನಗರದ ಶಾಲೆಯಲ್ಲಿ ಓದುತ್ತಿದ್ದಳು. ಸದ್ಯ ಘಟನೆ ಸಂಬಂಧ ಮನೆ ಮಾಲೀಕ ಶಿವಶಂಕರ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಗರ್ಭಿಣಿ ಮೇಲೆ ಹರಿದ ಟ್ರಕ್ – ಮಗುವಿಗೆ ಜನ್ಮ ನೀಡಿ ತಾಯಿ ಸಾವು

    ಗರ್ಭಿಣಿ ಮೇಲೆ ಹರಿದ ಟ್ರಕ್ – ಮಗುವಿಗೆ ಜನ್ಮ ನೀಡಿ ತಾಯಿ ಸಾವು

    ಲಕ್ನೋ: 26 ವರ್ಷದ ಗರ್ಭಿಣಿ ಮೇಲೆ ಟ್ರಕ್ ಒಂದು ಹರಿದಿದ್ದು, ಮಹಿಳೆ ಮಗುಚಿ ಬಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆ ಮತ್ತು ಆಕೆಯ ಪತಿ ಬೈಕ್‍ನಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರಿಗೆ ವೇಗವಾಗಿ ಬರುತ್ತಿದ್ದ ಕಾರಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆಕೆಯ ಪತಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಆಗ ಕೆಳಗೆ ಬಿದ್ದ ಗರ್ಭಿಣಿ ಮೇಲೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಹರಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಮಹಿಳೆಗೆ ರಸ್ತೆಯಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದನ್ನೂ ಓದಿ: 75 ದೇಶಗಳಲ್ಲಿ ಮಂಕಿಪಾಕ್ಸ್ – ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದ WHO

    crime

    ಸದ್ಯ ಮಗು ಆರೋಗ್ಯವಾಗಿದ್ದು, ಮಗುವಿಗೆ ಇಬ್ಬರು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಗೀತಾ ಅನೇಜಾ ಹೇಳಿದ್ದಾರೆ. ಇದನ್ನೂ ಓದಿ: ಇನ್ನೆರಡು ವರ್ಷಗಳಲ್ಲಿ ಮುಂಬೈ ರಸ್ತೆಗಳು ಗುಂಡಿ ಮುಕ್ತವಾಗಲಿದೆ: ಏಕನಾಥ ಶಿಂಧೆ

    ಘಟನೆ ಬಳಿಕ ನಾಪತ್ತೆಯಾಗಿರುವ ಟ್ರಕ್ ಚಾಲಕನ ವಿರುದ್ಧ ದೂರು ದಾಖಲಿಸಲಾಗಿದ್ದು, ಶೀಘ್ರದಲ್ಲಿಯೇ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೆಣ್ಣು ಮಗು ಹುಟ್ಟಿದ್ದಕ್ಕೆ ಮಹಿಳೆಗೆ ಆ್ಯಸಿಡ್ ಕುಡಿಸಿ ಪತಿ, ಅತ್ತೆಯಿಂದ ಹತ್ಯೆ

    ಹೆಣ್ಣು ಮಗು ಹುಟ್ಟಿದ್ದಕ್ಕೆ ಮಹಿಳೆಗೆ ಆ್ಯಸಿಡ್ ಕುಡಿಸಿ ಪತಿ, ಅತ್ತೆಯಿಂದ ಹತ್ಯೆ

    ಗುವಾಹಟಿ: ಮಹಿಳೆಯೊಬ್ಬಳು ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ ಆಕೆಯ ಪತಿ ಹಾಗೂ ಅತ್ತೆ ಬಲವಂತವಾಗಿ ಆ್ಯಸಿಡ್ ಕುಡಿಸಿ ಹತ್ಯೆ ಮಾಡಿದ ಘಟನೆ ಅಸ್ಸಾಂನ ಕರೀಮ್‍ಗಂಜ್ ಜಿಲ್ಲೆಯಲ್ಲಿ ನಡೆದಿದೆ.

    ಕರೀಂಗಂಜ್ ಜಿಲ್ಲೆಯ ರತಾಬರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಭೈರಬ್‍ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸುಮ್ನಾ ಬೇಗಂ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧಿಸಿ ಪತಿ ಶಕೀಲ್ ಅಹ್ಮದ್‍ನನ್ನು ಬಂಧಿಸಲಾಗಿದೆ.

    ಸುಮ್ನಾ ಬೇಗಂಗೆ ಕೆಲವು ದಿನಗಳಿಂದ ಗಂಡು ಮಗು ಜನಿಸಬೇಕು ಎಂದು ಆಕೆಯ ಅತ್ತೆ ಹಾಗೂ ಪತಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಿದ್ದರು. ಆದರೆ ಆಕೆಗೆ ಹೆಣ್ಣು ಮಗು ಜನಿಸಿತ್ತು. ಇದರಿಂದ ಪತಿ ಹಾಗೂ ಆತನ ಕುಟುಂಬಸ್ಥರು ಅವಳಿಗೆ ಬಲವಂತವಾಗಿ ಆ್ಯಸಿಡ್ ಕುಡಿಸಿದ್ದಾರೆ. ಇದನ್ನೂ ಓದಿ: ಹಜ್‍ನಿಂದ ಬಂದ ಯಾತ್ರಾರ್ಥಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಿದ ಕಾಶ್ಮೀರಿ ಹಿಂದೂಗಳು

    ಈ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡ ಸುಮ್ನಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಿ – ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಪಾಸ್‍ಪೋರ್ಟ್‍ಗಾಗಿ 2 ದಿನ ಕ್ಯೂನಲ್ಲಿ ನಿಂತು ಮಗುವಿಗೆ ಜನ್ಮ ನೀಡಿದ ಮಹಿಳೆ

    ಪಾಸ್‍ಪೋರ್ಟ್‍ಗಾಗಿ 2 ದಿನ ಕ್ಯೂನಲ್ಲಿ ನಿಂತು ಮಗುವಿಗೆ ಜನ್ಮ ನೀಡಿದ ಮಹಿಳೆ

    ಕೊಲೊಂಬೊ: ಪಾಸ್‍ಪೋರ್ಟ್‍ಗಾಗಿ ಕಳೆದ 2 ದಿನಗಳಿಂದ ಸರತಿ ಸಾಲಿನಲ್ಲಿ ನಿಂತಿದ್ದ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.

    ದ್ವೀಪರಾಷ್ಟ್ರ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟ ಹಿನ್ನೆಲೆಯಲ್ಲಿ 26 ವರ್ಷದ ಮಹಿಳೆಯೊಬ್ಬರು ತಮ್ಮ ಪತಿಯೊಂದಿಗೆ ಶ್ರೀಲಂಕಾ ಬಿಟ್ಟು ವಿದೇಶದಲ್ಲಿ ಹೋಗಿ ಅಲ್ಲಿ ಉದ್ಯೋಗ ಪಡೆಯಬೇಕೆಂದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಾಸ್‍ಪೋರ್ಟ್ ಪಡೆಯಲು ಕಳೆದ 2 ದಿನಗಳಿಂದ ಸರತಿ ಸಾಲಿನಲ್ಲಿದ್ದರು. ಆದರೆ ಇವರಿಗೆ ಅಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದೆ.

    ಅಲ್ಲೇ ಇದ್ದ ಶ್ರೀಲಂಕಾ ಸೇನೆಯ ಸಿಬ್ಬಂದಿಯೊಬ್ಬರು ಇದನ್ನು ಗಮನಿಸಿ ಮಹಿಳೆಯನ್ನು ತಕ್ಷಣ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಿಕ್ನಿಕ್‌ಗೆ ಹೋಗುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೂವರು ಸಾವು – MPಯಲ್ಲಿ ಒಂದೇ ದಿನ 11 ಬಲಿ

    ಜನವರಿ ಅಂತ್ಯದ ವೇಳೆಗೆ ಆರ್ಥಿಕ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ, ಪಾಸ್‍ಪೋರ್ಟ್‍ಗಳನ್ನು ಪಡೆಯಲು ಉದ್ದನೆಯ ಸಾಲುಗಳು ಪಾಸ್‍ಪೋರ್ಟ್ ಕಚೇರಿಯಲ್ಲಿ ನಿಯಮಿತವಾಗಿ ಕಂಡುಬರುತ್ತಿವೆ. ಒಂದು ದಿನದ ಸಂಚಿಕೆ ಸೇವೆಯಲ್ಲಿ ಹೆಚ್ಚಿನ ಜನರು ಪಾಸ್‍ಪೋರ್ಟ್‍ಗಳನ್ನು ಪಡೆಯಲು ಆಯ್ಕೆ ಮಾಡಿಕೊಂಡಿದ್ದಾರೆ.

    ಇತ್ತೀಚೆಗಷ್ಟೇ ಡೀಸೆಲ್‌ಗಾಗಿ ದೇಶದ ಪಶ್ಚಿಮ ಪ್ರಾಂತ್ಯದ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಐದು ದಿನಗಳ ಕಾಲ ಸರದಿಯಲ್ಲಿ ನಿಂತಿದ್ದ 63 ವಯಸ್ಸಿನ ಟ್ರಕ್‌ ಚಾಲಕ ಶ್ರೀಲಂಕಾದಲ್ಲಿ ಸಾವನ್ನಪ್ಪಿದ್ದರು. ಇದನ್ನೂ ಓದಿ: ಗುತ್ತಿಗೆ, ಹೊರ ಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಯತ್ನ, ಆರೋಗ್ಯ ವಿಮೆ ವಿಸ್ತರಣೆ: ಸುಧಾಕರ್

    Live Tv
    [brid partner=56869869 player=32851 video=960834 autoplay=true]

  • ಶಸ್ತ್ರಚಿಕಿತ್ಸೆ ವೇಳೆ ಮಗುವಿನ ತಲೆ ಕತ್ತರಿಸಿ ಹೊಟ್ಟೆಯಲ್ಲೇ ಬಿಟ್ಟ ಆಸ್ಪತ್ರೆ ಸಿಬ್ಬಂದಿ

    ಶಸ್ತ್ರಚಿಕಿತ್ಸೆ ವೇಳೆ ಮಗುವಿನ ತಲೆ ಕತ್ತರಿಸಿ ಹೊಟ್ಟೆಯಲ್ಲೇ ಬಿಟ್ಟ ಆಸ್ಪತ್ರೆ ಸಿಬ್ಬಂದಿ

    ಇಸ್ಲಾಮಾಬಾದ್: ಶಸ್ತ್ರಚಿಕಿತ್ಸೆ ವೇಳೆ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿ ತಾಯಿಯ ಹೊಟ್ಟೆಯಲ್ಲಿಯೇ ಬಿಟ್ಟಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಇದರಿಂದ ಮಹಿಳೆ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.

    ತಾರ್ಪಾರ್ಕರ್ ಜಿಲ್ಲೆಯ ಹಳ್ಳಿಯೊಂದಕ್ಕೆ ಸೇರಿದ 32 ವರ್ಷದ ಹಿಂದೂ ಮಹಿಳೆ, ಭಾನುವಾರ ಸಮೀಪದ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು. ಈ ವೇಳೆ ಮಹಿಳಾ ಡಾಕ್ಟರ್ ಇಲ್ಲದೇ ಇರುವ ಕಾರಣ ಅನುಭವಿ ಸಿಬ್ಬಂದಿ ತಾನೇ ಶಸ್ತ್ರ ಚಿಕಿತ್ಸೆ ನಡೆಸಲು ಮುಂದಾದಾಗ ಈ ಘಟನೆ ನಡೆದಿದೆ ಎಂದು ಜಮ್ಶೊರೊದಲ್ಲಿರುವ ಲಿಯಾಕತ್ ಯೂನಿವರ್ಸಿಟಿ ಆಫ್ ಮೆಡಿಕಲ್ ಅಂಡ್ ಹೆಲ್ತ್ ಸೈನ್ಸಸ್‍ನ ಸ್ತ್ರೀ ರೋಗ ಶಾಸ್ತ್ರ ಘಟಕದ ಮುಖ್ಯಸ್ಥರಾದ ರಾಹೀಲ್ ಸಿಕಂದರ್ ತಿಳಿಸಿದ್ದಾರೆ. ಇದನ್ನೂ ಓದಿ: ಸಿಗಂಧೂರು ಚೌಡೇಶ್ವರಿ ದೇವಿಯ ದರ್ಶನ ಪಡೆದ ಸುಪ್ರೀಂಕೋರ್ಟ್ ನ್ಯಾ.ಬಿ.ವಿ.ನಾಗರತ್ನ ದಂಪತಿ

    ನಂತರ ಮಹಿಳೆ ಸ್ಥಿತಿ ಗಂಭೀರವಾದಾಗ ಆಕೆಯನ್ನು ಮಿಥಿಯ ಹತ್ತಿರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಕೊನೆಗೆ ಆಸ್ಪತ್ರೆಗೆ ಭೇಟಿ ನೀಡಿದ ಮಹಿಳೆಯ ಕುಟುಂಬಸ್ಥರು ನವಜಾತ ಶಿಶುವಿನ ಉಳಿದ ದೇಹವನ್ನು ಗರ್ಭದಿಂದ ಹೊರತೆಗೆದು ಆಕೆಯ ಜೀವವನ್ನು ಉಳಿಸುವಂತೆ ತಿಳಿಸಿದರು.

    ಮಗುವಿನ ತಲೆ ಒಳಗೆ ಸಿಕ್ಕಿಹಾಕಿಕೊಂಡಿದ್ದರಿಂದ ತಾಯಿಯ ಗರ್ಭಕೋಶ ನಾಶವಾಗಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆಯ ಮೂಲಕ ಮಗುವಿನ ತಲೆಯನ್ನು ಹೊರತೆಗೆದು ಆಕೆಯ ಜೀವವನ್ನು ಉಳಿಸಲಾಯಿತು ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ನಾಡದೇವತೆ ಚಾಮುಂಡೇಶ್ವರಿಗೆ ಭಕ್ತಿಭಾವದ ಪೂಜೆ ಸಲ್ಲಿಸಿದ ಪ್ರಧಾನಿ – ಬೆಟ್ಟದಲ್ಲಿ ಹಬ್ಬದ ಸಡಗರ

    ಇದೀಗ ವೈದ್ಯರ ನಿರ್ಲಕ್ಷ್ಯದಿಂದಲೇ ಈ ಘಟನೆ ಸಂಭವಿಸಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿ ಆಕ್ರೋಶ ಹೊರಹಾಕುತ್ತಿದ್ದಾರೆ.

    Live Tv

  • ಮಗುವನ್ನು ಆಸ್ಪತ್ರೆಗೆ ಕರ್ಕೊಂಡು ಹೋಗ್ತಿದ್ದವ್ರ ಮೇಲೆ ಪೊಲೀಸರ ದರ್ಪ..!

    ಮಗುವನ್ನು ಆಸ್ಪತ್ರೆಗೆ ಕರ್ಕೊಂಡು ಹೋಗ್ತಿದ್ದವ್ರ ಮೇಲೆ ಪೊಲೀಸರ ದರ್ಪ..!

    ವಿಜಯನಗರ(ಬಳ್ಳಾರಿ): ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದವರ ಮೇಲೆ ಪೊಲೀಸರು ದರ್ಪ ತೋರಿದ ಘಟನೆಯೊಂದು ವಿಜಯನಗರದ ಹೊಸಪೇಟೆಯಲ್ಲಿ ನಡೆದಿದೆ.

    ಹೊಸಪೇಟೆಯ ಮೂರಂಗಡಿ ವೃತ್ತದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಕಾರಿಗೆ ಫೈನ್ ಹಾಕುವ ವಿಚಾರದಲ್ಲಿ ಗಲಾಟೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಪಟ್ಟಣ ಸೆರಗು ಗ್ರಾಮದಿಂದ ಕುಂಟುಂಬ ಮದುವೆ ಕಾರ್ಯಕ್ರಮಕ್ಕೆಂದು ಬಂದಿತ್ತು. ಈ ವೇಳೆ ಮಗುವಿನ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುತ್ತಿತ್ತು. ಈ ವೇಳೆ ಕಾರು ತಡೆದ ಪೊಲೀಸರು ದುರ್ವರ್ತನೆ ತೋರಿದ್ದಾರೆ.

    ಪೋಷಕರು ತಮ್ಮ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಪೊಲೀಸರು ಕಾರು ತಡೆದಿದ್ದಾರೆ. ಈ ವೇಳೆ ಪಾಪುಗೆ ಹುಷಾರಿಲ್ಲ, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಪೋಷಕರು ಪರಿಪರಿಯಾಗಿ ಬೇಡಿಕೊಂಡರೂ ಪೊಲೀಸರು ಕ್ಯಾರೇ ಎಂದಿಲ್ಲ. ಇದನ್ನೂ ಓದಿ: ರಾಹುಲ್ ಗಾಂಧಿ ಮೇಲೆ ಅತ್ಯಾಚಾರ ಆಗ್ತಿದೆ: ನಲಪಾಡ್

    ಕಾರು ತಡೆದು ಕ್ರೇನ್‍ಗೆ ಏರಿಸಿದ ಪೊಲೀಸರು, ಲೈಸನ್ಸ್ ಸೇರಿದಂತೆ ಡ್ಯಾಕ್ಯುಮೆಂಟ್ ತೋರಿಸಿ ಎಂದು ಪಟ್ಟು ಹಿಡಿದರು. ಪೊಲೀಸರ ಅತಿರೇಕದ ವರ್ತನೆಗೆ ಮಗು ಸಮೇತ ನಡು ರಸ್ತೆಯಲ್ಲೇ ಕುಟುಂಬಸ್ಥರು ಪ್ರತಿಭಟನೆ ಮಾಡಿದ್ದಾರೆ. ಪರಿಣಾಮ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಾರ್ವಜನಿಕರು ಪೊಲೀಸರಿಗೆ ಹಿಡಿ ಶಾಪ ಹಾಕಿದ ಪ್ರಸಂಗ ನಡೆದಿದೆ.

    Live Tv

  • ಇರುವೆಗಳು ಕಚ್ಚಿದ್ದಕ್ಕೆ 3 ದಿನದ ಹಸುಗೂಸು ಬಲಿ

    ಇರುವೆಗಳು ಕಚ್ಚಿದ್ದಕ್ಕೆ 3 ದಿನದ ಹಸುಗೂಸು ಬಲಿ

    ಲಕ್ನೋ: ಇರುವೆಗಳು ಕಚ್ಚಿದ್ದರಿಂದ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿದ್ದ (ಎನ್‍ಐಸಿಯು) ಮೂರು ದಿನದ ಹಸುಗೂಸು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮಹಿಳಾ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

    ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ. ಅಲ್ಲದೇ ವೈದ್ಯರು ನಮ್ಮ ಬಳಿ 6,500 ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸುವ ಮೂಲಕ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್

    ಕುಲ್ಪಹಾರ್ ತಹಸಿಲ್ ಪ್ರದೇಶದ ಮುಧರಿ ಗ್ರಾಮದ ನಿವಾಸಿ ಸುರೇಂದ್ರ ರೈಕ್ವಾರ್ ಅವರು ಮೇ 30 ರಂದು ತಮ್ಮ ಗರ್ಭಿಣಿ ಪತ್ನಿ ಸೀಮಾ ಅವರೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಈ ದಂಪತಿಗೆ ಗಂಡು ಮಗುವಿಗೆ ಜನಿಸಿತ್ತು. ಆದರೆ ನವಜಾತ ಶಿಶು ಅಸ್ವಸ್ಥಗೊಂಡ ಹಿನ್ನೆಲೆ ವೈದ್ಯರು ವಿಶೇಷ ನವಜಾತ ಶಿಶು ನಿಗಾ ಘಟಕಕ್ಕೆ ದಾಖಲಿಸಿದ್ದರು. ಇದನ್ನೂ ಓದಿ: ಉಡದ ಮೇಲೆ ಅತ್ಯಾಚಾರಗೈದ ನಾಲ್ವರು ಅರೆಸ್ಟ್

    ವಾರ್ಡ್ ಬಹಳ ಕೊಳಕಾಗಿದ್ದು, ಇರುವೆಗಳಿರುವ ಬಗ್ಗೆ ಈ ಮುನ್ನವೇ ಸಿಬ್ಬಂದಿ ಹಾಗೂ ವೈದ್ಯರಿಗೆ ದೂರು ನೀಡಿದ್ದರೂ ಗಮನಹರಿಸಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ಘಟನಾ ಸ್ಥಳಕ್ಕೆ ಆಗಮಿಸಿದ ಎಸ್‍ಡಿಎಂ ಸದರ್ ಜಿತೇಂದ್ರ ಕುಮಾರ್ ಅವರು, ಮುಖ್ಯ ವೈದ್ಯಕೀಯ ಅಧೀಕ್ಷಕರನ್ನು(ಸಿಎಂಎಸ್) ತನಿಖೆಗೆ ಒಳಪಡಿಸುವಂತೆ ಆದೇಶಿಸಿದ್ದಾರೆ.