Tag: baby tips

  • ಬೇಸಿಗೆಯಲ್ಲಿ ಮಗುವನ್ನು ಹೇಗೆ ನೋಡಿಕೊಳ್ಳಬೇಕು?- ಇಲ್ಲಿದೆ ಕೆಲವೊಂದು ಟಿಪ್ಸ್

    ಬೇಸಿಗೆಯಲ್ಲಿ ಮಗುವನ್ನು ಹೇಗೆ ನೋಡಿಕೊಳ್ಳಬೇಕು?- ಇಲ್ಲಿದೆ ಕೆಲವೊಂದು ಟಿಪ್ಸ್

    ಬೆಂಗಳೂರು: ಈಗಂತು ಬೇಸಿಗೆ ಪ್ರಾರಂಭವಾಗಿದೆ. ಮನೆ ಒಳಗೆ ಇರೋಕೆ ಆಗಲ್ಲ. ಏನಾದರೂ ತಣ್ಣಗೆ ಕುಡಿಬೇಕು ಅನ್ನಿಸುತ್ತಿರುತ್ತದೆ. ದೊಡ್ಡವರಾದ್ರೆ ಅದು ಬೇಕು. ಇದು ಬೇಕು ಅಂತ ಕೇಳಿ ಕುಡೀತಿವೆ. ಆದ್ರೆ ಮನೆಯಲ್ಲಿ ಸಣ್ಣಮಗು ಇದ್ದರೆ ಆ ಮಗುವನ್ನು ಬೇಸಿಗೆಯಲ್ಲಿ ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಇಲ್ಲಿವೆ ಕೆಲವೊಂದು ಟಿಪ್ಸ್.

    ಬೇಸಿಗೆಯಲ್ಲಿ ಕಾಡೋ ಸಮಸ್ಯೆಗಳು
    * ಬೇಸಿಗೆಯಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಚಿಕನ್ ಪಾಕ್ಸ್, ಮೈಯಲ್ಲಿ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಎಚ್ಚರವಹಿಸಿ.
    * ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ, ಸಾಮರ್ಥ್ಯ  ಕಡಿಮೆ ಆದ್ರೆ ಕಾಯಿಲೆ ಬೀಳೋದು ಹೆಚ್ಚು.
    * ಸೋಂಕು, ರೋಗಾಣು, ಬ್ಯಾಕ್ಟೀರಿಯಾದಿಂದ ಮಕ್ಕಳು ಅಸ್ವಸ್ಥರಾಗೋದು ಹೆಚ್ಚು.
    * ಮಗುವಿಗೆ ತುಂಬಾ ಸೆಕೆ, ಬೆವರು ಬರದಂತೆ ನೋಡಿಕೊಳ್ಳಬೇಕು.
    * ಧೂಳಿನಿಂದ ಮಗುವನ್ನು ಆದಷ್ಟು ದೂರವಿರಿಸಿ.

    ಸಮಸ್ಯೆಗೆ ಪರಿಹಾರಗಳು
    * ಬೇಸಿಗೆಯಲ್ಲಿ ಮಕ್ಕಳಿಗೆ ಸಡಿಲವಾದ ಹತ್ತಿ ಬಟ್ಟೆಯನ್ನು ಹಾಕಿ.
    * ಮಗು ಎಲ್ಲಿಂದರಲ್ಲಿ ಮೂತ್ರ ಮಾಡುತ್ತದೆ ಎಂದು ಡೈಪರ್ಸ್ ಜಾಸ್ತಿ ಹೊತ್ತು ಹಾಕಬೇಡಿ.
    * ಮಗು ಮೂತ್ರ, ಮಲ ಮಾಡಿದ್ರೆ ಆ ತಕ್ಷಣವೇ ಡೈಪರ್ಸ್‍ನ್ನು ಚೇಂಜ್ ಮಾಡಿ. ಇಲ್ಲದಿದ್ದರೆ ರ‍್ಯಾಶಸ್ ಆಗುವುದು ಖಂಡಿತ.
    * ಮಗುವನ್ನು ಬಿರುಬಿಸಿಲಿನಲ್ಲಿ ಹೊರಗೆ ಕರೆದುಕೊಂಡು ಹೋಗಬೇಡಿ.
    * ಬಿಸಿಲಿನಲ್ಲಿ ಹೆಚ್ಚು ಹೊತ್ತಿದ್ದರೆ ಮಗುವಿಗೆ ಬೆವರು ಹರಿದು ನಿರ್ಜಲೀಕರಣ ಆಗಬಹುದು.
    * ಜನಸಂದಣಿ ಇರುವ ಜಾಗದಲ್ಲಿ ಹೋದ್ರೆ ಗಾಳಿಯಾಡುವ ಕಡೆ ಕುಳಿತುಕೊಳ್ಳಿ.
    * ಮಗುವಿಗೆ ಸೆಕೆ ಆಗುವಂತೆ ಅತಿ ಬಿಗಿಯಾದ ಬಟ್ಟೆ ಹಾಕಬೇಡಿ.
    * ಬೇಸಿಗೆ ಆದ್ದರಿಂದ ಮಗುವಿಗೆ ಬಾಯಾರುವುದು ಸಹಜ. ಹೀಗಾಗಿ ಆಗಾಗ ಮಗುವಿಗೆ ನೀರು ಕುಡಿಸಿ.
    * ಮಗುವಿನ ಫ್ರೀಡ್ಜ್ ವಾಟರ್ ಕೊಡಬೇಡಿ.