Tag: Baby Shower

  • ತನ್ನ ಸೀಮಂತದಲ್ಲಿ ಖುಷಿಯಾಗಿ ಕುಣಿದು ಕುಪ್ಪಳಿಸಿದ ನಟಿ ರಂಭಾ- ಫೋಟೋ ವೈರಲ್!

    ತನ್ನ ಸೀಮಂತದಲ್ಲಿ ಖುಷಿಯಾಗಿ ಕುಣಿದು ಕುಪ್ಪಳಿಸಿದ ನಟಿ ರಂಭಾ- ಫೋಟೋ ವೈರಲ್!

    ಟೊರಂಟೊ: ಬಹುಭಾಷಾ ನಟಿ ರಂಭಾ ತಮ್ಮ ಮೂರನೇ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಇತ್ತೀಚಿಗೆ ಸೀಮಂತ ಕಾರ್ಯಕ್ರಮ ಕೆನಡಾದಲ್ಲಿ ಜರುಗಿದ್ದು, ರಂಭಾ ಕುಣಿದು ಕುಪ್ಪಳಿಸಿದ್ದಾರೆ.

    ರಂಭಾ ಉದ್ಯಮಿ ಇಂದ್ರಕುಮಾರ್ ಪತ್ಮನಾಥನ್ ಅವರನ್ನು 2010ರಲ್ಲಿ ಮದುವೆಯಾಗಿದ್ದರು. ಈಗಾಗಲೇ ಅವರಿಗೆ ಲಾನ್ಯ ಹಾಗೂ ಸಾಶಾ ಹೆಣ್ಣು ಮಕ್ಕಳಿದ್ದು, ಈಗ ಮೂರನೇ ಮಗುವಿನ ಆಗಮನಕ್ಕೆ ಕಾಯುತ್ತಿದ್ದಾರೆ. ಸದ್ಯ ರಂಭಾ ತನ್ನ ಪತಿ ಹಾಗೂ ಮಕ್ಕಳ ಜೊತೆ ಕೆನಡಾದಲ್ಲಿ ವಾಸಿಸುತ್ತಿದ್ದಾರೆ.

    ಕೆನಡಾದಲ್ಲಿರುವ ನಿವಾಸದಲ್ಲಿ ರಂಭಾ ಅವರ ಸೀಮಂತ ಕಾರ್ಯಕ್ರಮ ಸಂಪ್ರಾದಾಯದಂತೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಅವರ ಪತಿ ಇಂದ್ರಕುಮಾರ್, ಲಾನ್ಯ ಹಾಗೂ ಸಾಶಾ ಕೂಡ ಭಾಗಿಯಾಗಿದ್ದರು.

    ಸೋಮವಾರ ರಂಭಾ ಅವರ ಸೀಮಂತ ಕಾರ್ಯಕ್ರಮ ಜರುಗಿತ್ತು. ಕಾರ್ಯಕ್ರಮದ ಎಲ್ಲಾ ಫೋಟೋಗಳನ್ನು ರಂಭಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಂಭಾ ತುಂಬು ಗರ್ಭೀಣಿಯಾಗಿದ್ದರೂ, ತನ್ನ ಸೀಮಂತದ ಕಾರ್ಯಕ್ರಮದಲ್ಲಿ ಸಂಬಂಧಿಕರ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    With family ???? #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    With Kalamaster ???? #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    My family ???? #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    Happy moments ????????#rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

  • ಎರಡನೇ ಮಗುವನ್ನು ಸ್ವಾಗತಿಸುವ ಸಂಭ್ರಮದಲ್ಲಿ ಬಿ-ಟೌನ್ ಕ್ಯೂಟ್ ಕಪಲ್ಸ್

    ಎರಡನೇ ಮಗುವನ್ನು ಸ್ವಾಗತಿಸುವ ಸಂಭ್ರಮದಲ್ಲಿ ಬಿ-ಟೌನ್ ಕ್ಯೂಟ್ ಕಪಲ್ಸ್

    ಮುಂಬೈ: ಬಿ-ಟೌನ್‍ನ ಕ್ಯೂಟ್ ಜೋಡಿಗಳಾದ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ದಂಪತಿ ತಮ್ಮ ಎರಡನೇ ಮಗುವಿನ ಆಗಮನವನ್ನು ಸ್ವಾಗತಿಸುವ ಸಂತಸದಲ್ಲಿದ್ದಾರೆ.

    ಭಾನುವಾರದಂದು ಮೀರಾ ಅವರ ಎರಡನೇ ಸೀಮಂತ ಕಾರ್ಯಕ್ರಮ ನಡೆಯಿತು. ಶಾಹಿದ್ ಕಪೂರ್ ಮುದ್ದಿನ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಿಯ ಗೆಳೆಯರು ಹಾಗೂ ಕುಟುಂಬದವರೊಂದಿಗೆ ಸಂಭ್ರಮಿಸಿದರು. ಪಂಕಜ್ ಕಪೂರ್, ಜಾನ್ವಿ ಕಪೂರ್ ಹಾಗೂ ಇಶಾನ್ ಖಟ್ಟರ್ ಸೇರಿದಂತೆ ಹಲವರು ಸಂಭ್ರಮದಲ್ಲಿ ಭಾಗಿಯಾಗಿದ್ದರು

    ಕಾರ್ಯಕ್ರಮದಲ್ಲಿ ಮೀರಾ ಆಫ್ ಶೋಲ್ಡರ್ ಪೋಲ್ಕಾ ಡಾಟ್ ಡ್ರೆಸ್ ಹಾಗೂ ಶಾಹಿದ್ ಕಪೂರ್ ಫ್ಲಾರಲ್ ಶರ್ಟ್ ಧರಿಸಿ ಕೂಲ್ ಆಗಿ ತಮ್ಮ ಖುಷಿಯನ್ನು ಸಂಭ್ರಮಿಸಿದರು.

    ಶಾಹಿದ್ ಹಾಗೂ ಮೀರಾ ಅವರ ಪುತ್ರಿ ಮಿಶಾ ಕೈಯಲ್ಲಿ `ಹಿರಿಯ ಸಹೋದರಿ’ ಎಂದು ಬರೆದಿದ್ದ ಬಲೂನ್‍ನನ್ನು ಹಿಡಿದು ಪೋಸ್ ಕೊಟ್ಟಿರುವ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ದಂಪತಿ ಶೇರ್ ಮಾಡಿದ್ದಾರೆ. ಈ ಮೂಲಕ ದಂಪತಿಯು ತಮ್ಮ ಎರಡನೇ ಮಗುವಿನ ಆಗಮನದ ವಿಷಯವನ್ನು ಅಭಿಮಾನಿಗಳಿಗೆ ಹೊಸ ಬಗೆಯಲ್ಲಿ ತಿಳಿಸಿದ್ದಾರೆ.

    ಶಾಹಿದ್ ಹಾಗೂ ಮೀರಾ 2015ರ ಜುಲೈ 7 ರಂದು ದೆಹಲಿಯಲ್ಲಿ ವಿವಾಹವಾಗಿದ್ದರು. 2016ರ ಆಗಸ್ಟ್ 26 ರಂದು ಅವರ ಮೊದಲ ಮಗವನ್ನು ದಂಪತಿ ಸ್ವಾಗತಿಸಿದ್ದರು. ಹಾಗೆಯೇ ಶಾಹಿದ್ ಹಾಗೂ ಮೀರಾ ಇಬ್ಬರ ಹೆಸರಿನ ಮೊದಲ ಅಕ್ಷರವನ್ನು ಜೋಡಿಸಿ ಅವರ ಮಗಳಿಗೆ ‘ಮಿಶಾ’ ಎಂದು ನಾಮಕರಣ ಮಾಡಿದ್ದರು.

    https://www.instagram.com/p/BlR9pTeFZpS/?taken-by=shahidkapoor

    https://www.instagram.com/p/BlQq31DleoD/?taken-by=bollywood

  • ಗರ್ಭಿಣಿ ಸಿಬ್ಬಂದಿಗೆ ಪೊಲೀಸ್ ಠಾಣೆಯಲ್ಲೇ ಸೀಮಂತ

    ಗರ್ಭಿಣಿ ಸಿಬ್ಬಂದಿಗೆ ಪೊಲೀಸ್ ಠಾಣೆಯಲ್ಲೇ ಸೀಮಂತ

    ಮೈಸೂರು: ನಗರದ ಹೆಬ್ಬಾಳ ಪೊಲೀಸ್ ಠಾಣೆಯ ಸಿಬ್ಬಂದಿ ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಠಾಣೆಯಲ್ಲೇ ಸೀಮಂತ ಮಾಡಿದ್ದಾರೆ.

    ರೂಪಾ ಎಂಬವರು 7 ತಿಂಗಳ ಗರ್ಭಿಣಿಯಾಗಿದ್ದು, ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲೇ ಕೂರಿಸಿ ಸಿಬ್ಬಂದಿಯೆಲ್ಲಾ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ಸೀರೆ, ಬಳೆ, ಬಾಗಿನ ನೀಡಿ ಸಂಪ್ರದಾಯಬದ್ಧವಾಗಿ ಸೀಮಂತ ಶಾಸ್ತ್ರ ನೆರೆವೇರಿಸಿದ್ದಾರೆ.

    ಎರಡು ವರ್ಷ ಹಿಂದೆ ರೂಪಾ ಅವರ ಮದುವೆಯಾಗಿತ್ತು. ರೂಪಾ ತಮ್ಮ ಕೆಲಸದ ಮೂಲಕ ಠಾಣೆಯ ಎಲ್ಲಾ ಸಿಬ್ಬಂದಿಯ ಮೆಚ್ಚುಗೆಗೆ ಪಾತ್ರರಾಗಿದ್ದರು. ಹೀಗಾಗಿ ಎಲ್ಲರೂ ಸೇರಿ ಸೀಮಂತ ಕಾರ್ಯಕ್ರಮ ನೆರೆವೇರಿಸಿದ್ದಾರೆ. ನಾಳೆಯಿಂದ ಹೆರಿಗೆ ರಜೆ ಮಂಜೂರು ಮಾಡಿಕೊಂಡು ರೂಪಾ ಮನೆಗೆ ತೆರಳುತ್ತಿದ್ದಾರೆ.

    ಪೊಲೀಸರ ಈ ಕಾರ್ಯ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿದೆ.

    ಇದನ್ನೂ ಓದಿ: ಯದುವಂಶದ ರಾಣಿ ತ್ರಿಷಿಕಾ ಕುಮಾರಿ ಅವರ ಸೀಮಂತವನ್ನು ಫೋಟೋಗಳಲ್ಲಿ ನೋಡಿ

  • ಮೈಸೂರು ಅರಮನೆಯಲ್ಲಿಂದು ಮಹಾರಾಣಿ ತ್ರಿಷಿಕಾ ಸೀಮಂತ

    ಮೈಸೂರು ಅರಮನೆಯಲ್ಲಿಂದು ಮಹಾರಾಣಿ ತ್ರಿಷಿಕಾ ಸೀಮಂತ

    ಮೈಸೂರು: ಇವತ್ತು ಮೈಸೂರಿನ ಅರಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲಿದೆ. ವಿಜಯದಶಮಿಯ ನಂತರ ಮತ್ತೆ ಯದುವಂಶದಲ್ಲಿ ಸಂತಸ ಕ್ಷಣಗಳು ಮೂಡುತ್ತಿವೆ. ಅದಕ್ಕೆ ಕಾರಣ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಗರ್ಭವತಿ ಆಗಿರುವುದು.

    ಇವತ್ತು ಅರಮನೆಯಲ್ಲಿ ತ್ರಿಷಿಕಾ ಅವರಿಗೆ ಸೀಮಂತ ಕಾರ್ಯ ನಡೆಯಲಿದೆ. ಈ ಕಾರ್ಯಕ್ಕೆ ಈಗಾಗಲೇ ಅರಮನೆಯಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ತ್ರಿಷಿಕಾ ಅವರ ತಂದೆ, ತಾಯಿ, ಸಹೋದರ, ಸಹೋದರಿ ಈಗಾಗಲೇ ಅರಮನೆಗೆ ಆಗಮಿಸಿದ್ದಾರೆ.

    ರಾಜ ವಂಶಸ್ಥರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು ಅವರೆಲ್ಲಾ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ದಸರಾದ ಖಾಸಗಿ ದರ್ಬಾರ್‍ನಲ್ಲಿ ಭಾಗವಹಿಸಲು ತ್ರಿಷಿಕಾ ಅವರು ತವರು ಮನೆಯಿಂದ ಪತಿಯ ಮನೆಗೆ ಆಗಮಿಸಿದ್ದರು. ಪದೇ ಪದೇ ಓಡಾಟ ನಡೆಸುವುದು ಬೇಡ ಎಂಬ ಕಾರಣಕ್ಕೆ ಇವತ್ತೆ ಸೀಮಂತ ಕಾರ್ಯ ನಡೆಸಿ ಅವರನ್ನು ತವರು ಮನೆಗೆ ಕಳುಹಿಸಿ ಕೊಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಮಾಧ್ಯಮದವರು ಸೇರಿದಂತೆ ಎಲ್ಲಾ ಜನರಿಗೂ ಪ್ರವೇಶ ನಿರ್ಬಂಧಿಸಲಾಗಿದೆ.