Tag: Baby Shower

  • 2ನೇ ಮಗುವಿನ ನಿರೀಕ್ಷೆಯಲ್ಲಿ ದ್ರೌಪದಿ ಪಾತ್ರಧಾರಿಯ ಸ್ನೇಹ

    2ನೇ ಮಗುವಿನ ನಿರೀಕ್ಷೆಯಲ್ಲಿ ದ್ರೌಪದಿ ಪಾತ್ರಧಾರಿಯ ಸ್ನೇಹ

    ಚೆನ್ನೈ: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ದ್ರೌಪದಿ ಪಾತ್ರದಲ್ಲಿ ನಟಿಸಿದ ನಟಿ ಸ್ನೇಹ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಈಗ ಅವರು ಸೀಮಂತ ಕಾರ್ಯಕ್ರಮ ಮಾಡಿಸಿಕೊಂಡಿದ್ದಾರೆ.

    ಸ್ನೇಹ ಅವರು ಸಾಂಪ್ರದಾಯಿಕವಾಗಿ ತಮ್ಮ ಸೀಮಂತ ಕಾರ್ಯಕ್ರಮವನ್ನು ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸ್ನೇಹ ಅವರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಆತ್ಮೀಯ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಸದ್ಯ ಸೀಮಂತ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೇ 11, 2012ರಲ್ಲಿ ಸ್ನೇಹ ತಮ್ಮ ಗೆಳೆಯ ಪ್ರಸನ್ನ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2009ರಲ್ಲಿ ‘ಅಚಮಂಡು ಅಚಾಮುಂಡು’ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರು ಪ್ರೀತಿಸಲು ಶುರು ಮಾಡಿದ್ದರು. ಬಳಿಕ ಇಬ್ಬರು ರಿಲೇಶಿನ್‍ಶಿಪ್‍ನಲ್ಲಿ ಇದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿತ್ತು. ನಂತರ ಇಬ್ಬರು ಪೋಷಕರನ್ನು ಒಪ್ಪಿಸಿ ಮದುವೆಯಾಗಿದ್ದರು.

    ಮದುವೆಯಾಗಿ ಮೂರು ವರ್ಷಗಳ ನಂತರ ಸ್ನೇಹ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ‘ವಿಹಾನ್’ ಎಂದು ನಾಮಕರಣ ಮಾಡಿದ್ದರು. ಈ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಅಭಿಮಾನಿಗಳು ದಂಪತಿ ಶುಭಾಶಯ ತಿಳಿಸುತ್ತಿದ್ದಾರೆ.

  • ಸಾಕು ಶ್ವಾನಕ್ಕೆ ಅದ್ಧೂರಿ ಸೀಮಂತ

    ಸಾಕು ಶ್ವಾನಕ್ಕೆ ಅದ್ಧೂರಿ ಸೀಮಂತ

    ಬೆಳಗಾವಿ: ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ನಾಯಿಗಳನ್ನ ಸಾಕುವುದು ಟ್ರೆಂಡ್ ಆಗಿ ಬಿಟ್ಟಿದೆ. ನಾಯಿಗೆ ಬೇಕಾದ ಆಹಾರದಿಂದ ಹಿಡಿದು ಬಟ್ಟೆ ಹಾಕುವವರೆಗೂ ಅದನ್ನ ಮನೆ ಸದಸ್ಯನಂತೆ ನೋಡಿಕೊಳ್ಳುತ್ತಾರೆ. ತಮಗೆ ತಿನ್ನಲು ಕಡಿಮೆಯಾದರೂ ಪರವಾಗಿಲ್ಲ, ಸಾಕು ನಾಯಿಗೆ ಏನನ್ನೂ ಕಡಿಮೆ ಮಾಡವುದಿಲ್ಲ. ಆದರೆ ಇಲ್ಲೊಂದು ಕುಟುಂಬ ನಾಯಿ ಜೊತೆಗಿನ ನಂಟನ್ನ ನೋಡಿ ಬಿಟ್ಟರೆ ನೀವು ಕೂಡ ಅಚ್ಚರಿ ಪಡುತ್ತೀರಿ.

    ಬೆಳಗಾವಿ ನಗರದ ಕಾಳಿ ಅಮ್ರಾನ್ ಗಲ್ಲಿಯ ನಿವಾಸಿ ರತ್ನಾ ಹಿರೇಮಠ ಅವರು ಅದ್ಧೂರಿ ಹಾಗೂ ಸಂಭ್ರಮದಿಂದ ಸಾಕು ನಾಯಿಗೆ ಸೀಮಂತ ಮಾಡಿದ್ದಾರೆ. ತಮ್ಮ ಮನೆ ಮಗಳಂತಿರುವ ಈ ಸಾಕು ನಾಯಿಯ ಹೆಸರು ಬೇಬೋ ಎಂದು. ಸದ್ಯ ಗರ್ಭವತಿಯಾಗಿರುವ ಇದಕ್ಕೆ ಇನ್ನೊಂದು ವಾರದಲ್ಲಿ ಡೆಲಿವರಿ ಕೂಡ ಆಗಲಿದೆ. ಹೀಗಾಗಿ ತಮ್ಮ ಮನೆ ಮಗಳು ಗರ್ಭವತಿಯಾದರೆ ಹೇಗೆ ಕುಟುಂಬಸ್ಥರೆಲ್ಲರೂ ಸೇರಿಕೊಂಡು ಅದ್ಧೂರಿಯಾಗಿ ಸೀಮಂತ ಕಾರ್ಯ ಮಾಡುತ್ತಾರೋ ಅದೇ ರೀತಿ ಈ ಬೇಬೋವನ್ನ ಮಗಳೆಂದುಕೊಂಡಿರುವ ಕುಟುಂಬ ಇಂದು ಅಕ್ಕಪಕ್ಕದವರನ್ನೆಲ್ಲ ಕರೆದು ಮಗಳ ಸೀಮಂತ ಮಾಡುವ ಹಾಗೇ ಅದ್ಧೂರಿಯಾಗಿ ಸೀಮಂತ ಮಾಡಿದ್ದಾರೆ.

    ಕಳೆದ ನಾಲ್ಕು ತಿಂಗಳ ಹಿಂದೆ ಪಕ್ಕದ ಮನೆಯವರು ಸಾಕುವಂತೆ ಈ ಬೇಬೋವನ್ನ ರತ್ನಾ ಅವರಿಗೆ ಕೊಟ್ಟು ಹೋಗಿದ್ದಾರೆ. ಇಬ್ಬರು ಗಂಡು ಮಕ್ಕಳು ಈ ರತ್ನಾ ಅವರಿಗಿದ್ದು ಈ ನಾಯಿ ಬಂದ ಮೇಲೆ ಮಗಳಂತೆ ಅದನ್ನ ನೋಡಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಇಂದು ಹತ್ತು ತೆರನಾದ ಬಗೆ ಬಗೆಯ ಸಿಹಿ ತಿನಸುಗಳು, ಹಣ್ಣುಗಳು, ಗೋವಿನ ಜೋಳ, ಟೊಮೆಟೋ, ಅರಿಶಿನ, ಕುಂಕುಮ, ಹಸಿರು ಬಳೆಗಳು, ಅಡಿಕೆ ಎಲೆ, ತಾಂಬೂಲ ಎಲ್ಲವನ್ನೂ ಇಡಲಾಗಿತ್ತು.

    ಬೇಬೋಗೆ ಹಸಿರು ಬಣ್ಣದ ಸೀರೆಯನ್ನ ಉಡಿಸಿ ಕತ್ತಲ್ಲಿ ಹಾರ ಹಾಕಿ ಸಿಂಗರಿಸಲಾಗಿತ್ತು. ನೆಲದ ಮೇಲೆ ಅಕ್ಷತೆ ಕಾಳುಗಳನ್ನ ಹಾಕಿ ಅದರ ಸುತ್ತಲು ಬಲೂನ್ ಗಳನ್ನ ಕಟ್ಟಿ ಮಧ್ಯದಲ್ಲಿ ಬೇಬೋ ನಿಲ್ಲಿಸಿ ಮುತ್ತೈದೆಯರೆಲ್ಲರೂ ಆರತಿ ಮಾಡಿ ಹಾಡುಗಳನ್ನ ಹಾಡಿದರು. ಇದಾದ ಬಳಿಕ ಸೀಮಂತ ಕಾರ್ಯಕ್ಕೆ ಬಂದವರಿಗೆ ಹಬ್ಬದೂಟ ಬಡಿಸಿದರು ಎಂದು ಪಕ್ಕದ ಮನೆ ನಿವಾಸಿ ಸರೋಜಿನಿ ತಿಳಿಸಿದ್ದಾರೆ.

    ಪ್ರಾಣಿಗಳನ್ನ ಹೀನಾಯವಾಗಿ ಕಾಣುವ ಅದೆಷ್ಟೋ ಜನರ ಮಧ್ಯೆ ಈ ಕುಟುಂಬ ಸಾಕುನಾಯಿಗೆ ಮಗಳ ಸ್ಥಾನ ಕೊಟ್ಟು ಅದ್ಧೂರಿಯಾಗಿ ಸೀಮಂತ ಮಾಡಿ ಪ್ರಾಣಿ ಮೇಲೆ ವಿಶೇಷ ಪ್ರೀತಿ ತೋರಿದ್ದಾರೆ.

  • ಸೀಮಂತ ಕಾರ್ಯಕ್ರಮದಲ್ಲಿ ಮಿಂಚಿದ ವಿಲನ್ ಬ್ಯೂಟಿ

    ಸೀಮಂತ ಕಾರ್ಯಕ್ರಮದಲ್ಲಿ ಮಿಂಚಿದ ವಿಲನ್ ಬ್ಯೂಟಿ

    ಲಂಡನ್: ಬ್ರಿಟಿಷ್ ಬ್ಯೂಟಿ ಆ್ಯಮಿ ಜಾಕ್ಸನ್ ಅವರು ತಮ್ಮ ಪ್ರೆಗ್ನಿಂಸಿಯನ್ನು ತುಂಬಾ ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆ ಆ್ಯಮಿ ಅವರು ತಮ್ಮ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ಆ್ಯಮಿ ತಮ್ಮ ಸೀಮಂತದ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ನನ್ನ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದವರು ನನ್ನ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನನ್ನ ಮಗ ತುಂಬಾ ಅದೃಷ್ಟವಂತ ಏಕೆಂದರೆ ಆತನನ್ನು ಪ್ರೀತಿಸುವ ಸಾಕಷ್ಟು ಮಹಿಳೆಯರು ಇಲ್ಲಿ ಇದ್ದಾರೆ. ಹೂವಿನ ಅಲಂಕಾರಕ್ಕಾಗಿ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

    ನಟಿ ಆ್ಯಮಿ ಗರ್ಭಿಣಿಯಾದಾಗಿನಿಂದಲೂ ಹೊಸ ಹೊಸ ಫೋಟೋಶೂಟ್‍ನಲ್ಲಿ ಮಿಂಚುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಆ್ಯಮಿ ಸ್ವಿಮಿಂಗ್ ಪೂಲ್‍ನಲ್ಲಿ ಪ್ರಿಯಕರ ಜಾರ್ಜ್ ಪನಯೌಟು ಜೊತೆ ಇರುವ ಕೂಲ್ ಫೋಟೋವನ್ನು ಇನ್‍ಸ್ಟಾಗ್ರಾಂ ಹಂಚಿಕೊಂಡಿದ್ದರು. ಈ ಮೊದಲು ಆ್ಯಮಿ ಟಾಪ್‍ಲೆಸ್ ಆಗಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

    2018 ಜನವರಿ 1ರಂದು ಆ್ಯಮಿ ಜಾಕ್ಸನ್ ಉದ್ಯಮಿ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳವುದಾಗಿ ಘೋಷಿಸಿದ್ದರು. ಬ್ರಿಟನ್ ಮದರ್ಸ್ ಡೇಯಂದು ಆ್ಯಮಿ ಜಾಕ್ಸನ್ ಗೆಳೆಯನೊಂದಿಗೆ ಕುಳಿತ ಬೇಬಿ ಬಂಪ್ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಳ್ಳುವ ಮೂಲಕ ತಾಯಿ ಆಗುತ್ತಿರುವ ವಿಷಯವನ್ನು ತಿಳಿಸಿದ್ದರು. ಗರ್ಭಿಣಿಯಾದ ಬಳಿಕ ಗೆಳೆಯ ಜಾರ್ಜ್ ಜೊತೆ ಮೇ 5ರಂದು ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು.

  • ಹಸುವಿಗೆ ಸೀಮಂತ ಮಾಡಿ ವ್ಯಕ್ತಿಯಿಂದ ಸಂಭ್ರಮಾಚರಣೆ

    ಹಸುವಿಗೆ ಸೀಮಂತ ಮಾಡಿ ವ್ಯಕ್ತಿಯಿಂದ ಸಂಭ್ರಮಾಚರಣೆ

    ದಾವಣಗೆರೆ: ಮನೆಯ ಮಗಳು ಚೊಚ್ಚಲ ಗರ್ಭಿಣಿಯಾದರೆ ಮನೆಯ ಮಂದಿಯಲ್ಲಿ ಎಲ್ಲಿಲ್ಲದ ಸಂಭ್ರಮ ಸಡಗರ ಕಂಡು ಬರುತ್ತದೆ. ಅದೇ ರೀತಿಯಲ್ಲಿ ಇಲ್ಲಿ ವ್ಯಕ್ತಿಯೊಬ್ಬರು ತನ್ನ ತುಂಬು ಗರ್ಭಿಣಿಯ ಹಸುವಿನ ಸೀಮಂತ ಮಾಡಿ ಸಂಭ್ರಮ ಆಚರಣೆ ಮಾಡಿದ್ದಾರೆ.

    ದಾವಣಗೆರೆ ತಾಲೂಕಿನ ಕಕ್ಕರಗೊಳ ಗ್ರಾಮದಲ್ಲಿ ಯುವರಾಜ್ ಎಂಬವರು ಮನೆಯಲ್ಲಿ ಒಂದು ಆಕಳು(ಹಸು) ಚೊಚ್ಚಲ ಬಾರಿ ಬಸಿರಿ ಆಗಿದೆ. ಆ ವ್ಯಕ್ತಿ ತನ್ನ ಅಕ್ಕ ಅಥವಾ ತಂಗಿ ಎಂದು ಭಾವಿಸಿ ಗರ್ಭಿಣಿ ಹಸುವಿಗೆ ಸೀಮಂತ ಮಾಡಿದ್ದಾರೆ.

    ಯುವರಾಜ್ ದೂರದ ಸಂಬಂಧಿಕರು ಮತ್ತು ಒಡಹುಟ್ಟಿದವರನ್ನು ಕರೆಸಿ, ಮನೆಯಲ್ಲಿ ಹಸುವಿನ ಕೊರಳಿಗೆ ಹೂವಿನಿಂದ ಅಲಂಕರಿಸಿ ಮತ್ತು ಹೊಸ ಸೀರೆಯಿಂದ ಸಿಂಗಾರ ಮಾಡಿದ್ದಾರೆ. ಅಲ್ಲದೆ ಐದು ಬಗೆಯ ಸಿಹಿ ತಿಂಡಿ, ಐದು ಬಗೆಯ ಹಣ್ಣು- ಹಂಪಲುಗಳು, ಐದು ಬಗ್ಗೆಯ ಆರತಿ, ಊರಿನ ಐದು ಮುತ್ತೈದೆಯರನ್ನು ಕರಸಿ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ್ದಾರೆ.

    ನಾವು ನಮ್ಮ ಜಾನವಾರುಗಳಿಂದಾಗಿ ಆರ್ಥಿಕಾವಾಗಿ ಬೆಳವಣಿಗೆ ಆಗಿದ್ದೇವೆ. ನಮ್ಮ ಮನೆಯಲ್ಲಿ ಯಾವುದೇ ಪ್ರಾಣಿಗಳು ಚೊಚ್ಚಲು ಬಸರಿ ಆದರೆ ಇದೇ ರೀತಿಯಲ್ಲಿ ಆಚರಣೆ ಮಾಡುತ್ತೇವೆ. ಅಲ್ಲದೆ ಇಡೀ ಊರಿನ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಬಂದವರಿಗೆ ವಿವಿಧ ರೀತಿಯ ಅಡುಗೆ ಮಾಡಿ ಊಟೋಪಚಾರ ಮಾಡುತ್ತೇವೆ. ಈ ರೀತಿ ಮಾಡುವುದರಿಂದ ನಮ್ಮ ಮನೆಯಲ್ಲಿ ಹೈನುಗಾರಿಕೆ ಹೆಚ್ಚುತ್ತದೆ ಹಾಗೂ ಆರ್ಥಿಕವಾಗಿ ಬೆಳೆವಣಿಗೆ ಆಗುತ್ತವೆ ಎಂದು ಯುವರಾಜ್ ಹೇಳಿದ್ದಾರೆ.

    ಮನೆಯ ಹೆಣ್ಣು ಮಕ್ಕಳಿಗೆ ಹೇಗೆ ನಾವು ಸೀಮಂತ ಮಾಡುತ್ತೇವೆ ಅದೇ ರೀತಿಯಲ್ಲಿ ನಮ್ಮ ಹಸುವಿಗೆ ಸೀಮಂತ ಮಾಡಿಸಿದ್ದೇವೆ. ನಮ್ಮ ಅಣ್ಣ ನಮಗೆ ಫೋನ್ ಮಾಡಿ ಎಲ್ಲರೂ ಊರಿಗೆ ಬನ್ನಿ ನಮ್ಮ ಮನೆಯಲ್ಲಿ ಸೀಮಂತ ಕಾರ್ಯಕ್ರಮ ಇದೆ ಎಂದು ಹೇಳಿದ್ದಾರೆ. ಆದರೆ ನಾವು ಬಂದು ನೋಡಿದರೆ ನಮಗೆ ಆಶ್ಚರ್ಯವಾಗಿತ್ತು. ನಾವು ಚೊಚ್ಚಲು ಬಸಿರಿ ಇದ್ದಾಗ ಹೇಗೆ ಕಾರ್ಯಕ್ರಮ ಮಾಡಿದ್ದಾರೋ, ಅದೇ ರೀತಿ ಈ ಹಸುವಿಗೆ ನಮ್ಮಣ್ಣ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ನಾವು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಪಟ್ಟಿದ್ದೇವೆ ಎಂದು ಯುವರಾಜ್ ಸಹೋದರಿ ತಿಳಿಸಿದ್ದಾರೆ.

    ಕಾಮಧೇನು ಕಲ್ಪವೃಕ್ಷ ಅನ್ನುವ ಮಾತು ಇದೆ. ವರ್ಷ ಇಡೀ ದಿನ ಹಾಲು ಹಿಂಡಿ ಹಣ ಮಾಡಿಕೊಳ್ಳವ ಜನರೇ ಹೆಚ್ಚು. ಆದರೆ ಈ ರೈತ ತಮ್ಮ ಹಸುವಿನ ಸೀಮಂತ ಮಾಡಿ, ಈ ಸಮಾಜಕ್ಕೆ ಮೂಕ ಪ್ರಾಣಿಗಳಿಗೆ ಭಾವನೆಗಳು ಇವೆ ಎಂದು ತೋರಿಸಿಕೊಟ್ಟಿದ್ದಾರೆ.

  • ಸೀಮಂತ ಕಾರ್ಯಕ್ರಮ – ಕೇಕ್ ಕತ್ತರಿಸಿ ಸಂಭ್ರಮಿಸಿದ ಶ್ರುತಿ ಹರಿಹರನ್

    ಸೀಮಂತ ಕಾರ್ಯಕ್ರಮ – ಕೇಕ್ ಕತ್ತರಿಸಿ ಸಂಭ್ರಮಿಸಿದ ಶ್ರುತಿ ಹರಿಹರನ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶ್ರುತಿ ಹರಿಹರನ್ ಇತ್ತೀಚೆಗೆ ತಾವೂ ಗರ್ಭಿಣಿ ಎಂದು ಅಧಿಕೃತವಾಗಿ ಹೇಳಿಕೊಂಡಿದ್ದರು. ಇದೀಗ ಶ್ರುತಿ ಹರಿಹರನ್ ಅವರು ಸೀಮಂತ ಸಂಭ್ರಮದ ವಿಡಿಯೋವನ್ನು ಪ್ರಕಟಿಸಿದ್ದಾರೆ.

    ನಟಿ ಶ್ರುತಿ ಹರಿಹರನ್ ಅವರು ಬೇಬಿ ಶವರ್ ಕಾರ್ಯಕ್ರಮದ ಕೆಲವು ಫೋಟೋಗಳನ್ನು ಒಂದು ಸ್ಲೈಡ್ ಮಾಡಿ ಆ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಶ್ರುತಿ ಬಿಳಿ ಬಣ್ಣದ ಗೌನ್ ಧರಿಸಿದ್ದು, ವಿಭಿನ್ನವಾಗಿ ಡಿಸೈನ್ ಆಗಿರುವ ಕೇಕ್ ಕತ್ತರಿಸುವ ಮೂಲಕ ಸಂಭ್ರಮಾಚಾರಣೆ ಮಾಡಿದ್ದಾರೆ. ಜೊತೆಗೆ ಅವರ ಸ್ನೇಹಿತರ ಜೊತೆ ಫೋಟೋಗೆ ಪೋಸ್ಟ್ ಕೊಟ್ಟಿದ್ದು, ಬೇಬಿ ಶವರ್ ಕಾರ್ಯಕ್ರಮವನ್ನು ಸಖತ್ ಎಂಜಾಯ್ ಮಾಡಿದ್ದಾರೆ.

    ಕಾರ್ಯಕ್ರಮದ ವಿಡಿಯೋ ಹಂಚಿಕೊಂಡಿದ್ದು, ಈ ಸಂಭ್ರಮ, ಸಡಗರಕ್ಕೆ ಕಾರಣರಾದ ಸ್ನೇಹಿತರು ಮತ್ತು ಕುಂಟುಂಬದ ಕೆಲವರಿಗೆ ಶ್ರುತಿ ಹರಿಹರನ್ ಧನ್ಯವಾದ ತಿಳಿಸಿದ್ದಾರೆ.

    ಕೆಲವು ದಿನಗಳ ಹಿಂದೆಯಷ್ಟೆ ಶ್ರುತಿ ಬ್ಲರ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, “ಈ ಸರ್ಕಸ್‍ಗೆ ನಿನಗೆ ಸ್ವಾಗತ ಪುಟ್ಟ. ನಿನ್ನನ್ನು ನೋಡಲು ನಮಗೆ ಕಾಯಲು ಆಗುತ್ತಿಲ್ಲ. ನಿನ್ನ ತಂದೆ ರಾಮ್ ಕಳಾರಿ ಉತ್ಸುಕರಾಗಿದ್ದಾರೆ” ಎಂದು ಬರೆದುಕೊಂಡಿದ್ದರು. ಈ ಮೂಲಕ ಶ್ರುತಿ ಅವರು ತಾವೂ ಗರ್ಭಿಣಿ ಎಂಬುದನ್ನು ಅಧಿಕೃತವಾಗಿ ಹೇಳಿಕೊಂಡಿದ್ದರು.

    https://www.instagram.com/p/Bz-rVWjJHRH/

    ನಟಿ ಶ್ರುತಿ ಹರಿಹರನ್ ಅವರು ತಾನು ಮದುವೆಯಾಗಿದ್ದೇನೆ ಎನ್ನುವ ವಿಚಾರವನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪ ಕೇಳಿ ಬಂದ ಸಂದರ್ಭದಲ್ಲಿ ದೂರು ನೀಡುವಾಗ ಮದುವೆಯಾಗಿದ್ದ ವಿಚಾರ ಬಹಿರಂಗವಾಗಿತ್ತು. ಶ್ರುತಿ ಡ್ಯಾನ್ಸ್ ಮಾಸ್ಟರ್ ಮತ್ತು ಪ್ರಸಿದ್ಧ ಕಲರಿ ಪಟ್ಟು ಕಲಾವಿದರಾಗಿರುವ ರಾಮ್ ಕುಮಾರ್ ಅವರನ್ನು ಮದುವೆಯಾಗಿದ್ದಾರೆ.

    https://www.instagram.com/p/B0DCgkRnLhY/

  • ಠಾಣೆಯಲ್ಲೇ ಸಿಬ್ಬಂದಿಗೆ ಸೀಮಂತ ನೆರವೇರಿಸಿ ಸಂಭ್ರಮಿಸಿದ ಪೊಲೀಸರು

    ಠಾಣೆಯಲ್ಲೇ ಸಿಬ್ಬಂದಿಗೆ ಸೀಮಂತ ನೆರವೇರಿಸಿ ಸಂಭ್ರಮಿಸಿದ ಪೊಲೀಸರು

    ಮಂಡ್ಯ: ಸದಾ ಕಾನೂನು ಸುವ್ಯವಸ್ಥೆಯಲ್ಲಿ ಬ್ಯುಸಿ ಆಗಿರುವ ಪೊಲೀಸರು ತಮ್ಮ ಕರ್ತವ್ಯದ ನಡುವೆ ಬಿಡುವು ಮಾಡಿಕೊಂಡು, ಮಹಿಳಾ ಸಿಬ್ಬಂದಿಯೊಬ್ಬರ ಸೀಮಂತ ಕಾರ್ಯವನ್ನು ಪೊಲೀಸ್ ಠಾಣೆಯಲ್ಲಿ ನೆರವೇರಿಸಿ ಸಂಭ್ರಮಿಸಿದ್ದಾರೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಪೊಲೀಸ್ ಠಾಣೆಯಲ್ಲಿ ಪಿಸಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಲ್ಮಾಭಾನು ಗರ್ಭಿಣಿಯಾಗಿದ್ದು, ಪೊಲೀಸ್ ಠಾಣೆಯಲ್ಲೇ ಸೀಮಂತ ಮಾಡಿ ಸಿಬ್ಬಂದಿ ಗೌರವ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ಠಾಣೆಯಲ್ಲಿಯೇ ಮಹಿಳಾ ಪೇದೆಗೆ ಸೀಮಂತ

    ತಮ್ಮ ಒತ್ತಡದ ಕೆಲಸದ ನಡುವೆ ಬಿಡುವು ಮಾಡಿಕೊಂಡು ತಮ್ಮ ಸೀಮಂತ ನೆರವೇರಿಸಿದ ಸಹೋದ್ಯೋಗಿಗಳ ಪ್ರೀತಿಗೆ ಸಲ್ಮಾ ಭಾನು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗರ್ಭಿಣಿ ಸಿಬ್ಬಂದಿಗೆ ಪೊಲೀಸ್ ಠಾಣೆಯಲ್ಲೇ ಸೀಮಂತ

    ಈ ಹಿಂದೆ ಮೈಸೂರಿನಲ್ಲಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯೊಬ್ಬರಿಗೆ ಸೀಮಂತ ಶಾಸ್ತ್ರವನ್ನು ಮಾಡಲಾಗಿತ್ತು. ಆದರೆ ಮಡಿಕೇರಿಯಲ್ಲಿ ಮೊದಲ ಬಾರಿಗೆ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕರು ಹಾಗೂ ಸಹಪಾಠಿ ಸೇರಿ ಸೀಮಂತ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗರ್ಭಿಣಿ ಜೊತೆ ಕೋತಿಗೂ ನಡೀತು ಸೀಮಂತ!

    ಗರ್ಭಿಣಿ ಜೊತೆ ಕೋತಿಗೂ ನಡೀತು ಸೀಮಂತ!

    ತುಮಕೂರು: ಗರ್ಭಿಣಿಯೊಬ್ಬರ ಸೀಮಂತದ ಕಾರ್ಯಕ್ರಮದ ವೇಳೆ ತುಂಬು ಗರ್ಭಿಣಿಯಾಗಿದ್ದ ಕೋತಿಗೂ ಸೀಮಂತ ಮಾಡಿದ ಅಚ್ಚರಿಯ ಘಟನೆ ಜಿಲ್ಲೆಯ ಗಂಗೋತ್ರಿ ಬಡಾವಣೆಯಲ್ಲಿ ನಡೆದಿದೆ.

    ನಗರದ ಗಂಗೋತ್ರಿ ಬಡಾವಣೆಯ ನಿವಾಸಿ ಅನುಷಾ ಅಶೋಕ್ ಎನ್ನುವವರ ಸೀಮಂತ ಶಾಸ್ತ್ರ ಮಂಗಳವಾರ ನಡೆಯುತ್ತಿತ್ತು. ಇದೇ ವೇಳೆ ತುಂಬು ಗರ್ಭಿಣಿ ಕೋತಿಯೊಂದು ಪದೇ ಪದೇ ಅವರ ಮನೆಯ ಕಿಟಕಿಯಿಂದ ಇಣಕಿ ನೋಡುತಿತ್ತು. ಇದನ್ನು ಗಮನಿಸಿದ ಗರ್ಭಿಣಿ  ಕೋತಿಯನ್ನು ಮುದ್ದಾಡಿದ್ದಾರೆ. ಅಲ್ಲದೆ ತಮಗೆ ಸೀಮಂತ ಶಾಸ್ತ್ರ ಮಾಡಿದಂತೆ ಕೋತಿಗೂ ಸೀಮಂತ ಮಾಡಿಸಿದ್ದಾರೆ.

    ಕೋತಿಗೂ ಕೂಡ ಹಣ್ಣು, ಸಿಹಿ, ಖಾರ, ಚಕ್ಕುಲಿ, ಹೂವಿನ ಸಿಂಗಾರ ಮಾಡಿ ಸೀಮಂತ ಮಾಡಿದ್ದಾರೆ. ಅನುಷಾ ಅವರು ಆಂಜನೇಯ ಭಕ್ತೆ. ಆದ್ದರಿಂದ ಆಂಜನೇಯ ಚಿತ್ರ ಇರುವ ಬ್ರಾಸ್‍ಲೈಟ್‍ನ್ನು ಸದಾ ಧರಿಸುತ್ತಾರೆ. ಹಾಗಾಗಿ ಮಹಿಳೆ ಸಿಮಂತ ಕಾರ್ಯ ನಡೆಯುವ ವೇಳೆ ಕಾಕತಾಳಿಯ ಎಂಬಂತೆ ಗರ್ಭಿಣಿ ಕೋತಿಗೂ ಸೀಮಂತ ನಡೆದಿದ್ದು ಸ್ಥಳದಲ್ಲಿ ನೆರೆದವರ ಅಚ್ಚರಿ ಹಾಗು ಕುತೂಹಲಕ್ಕೆ ಕಾರಣವಾಗಿತ್ತು.

    https://www.youtube.com/watch?v=MfNsXlBW_xk

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಸಹಪಾಠಿ, ಬೋಧಕರಿಂದ ಸೀಮಂತ ಶಾಸ್ತ್ರ

    ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಸಹಪಾಠಿ, ಬೋಧಕರಿಂದ ಸೀಮಂತ ಶಾಸ್ತ್ರ

    ಮಡಿಕೇರಿ: ತನ್ನ ಕಾಲೇಜಿನಲ್ಲೇ ಓದುತ್ತಿರುವ ವಿದ್ಯಾರ್ಥಿನಿಯ ಸೀಮಂತ ಶಾಸ್ತ್ರವನ್ನು ಬೋಧಕರು ನೆರವೇರಿಸಿದ ಅಪರೂಪದ ಕ್ಷಣಕ್ಕೆ ಗೋಣಿಕೊಪ್ಪ ಕಾವೇರಿ ಕಾಲೇಜು ಸಾಕ್ಷಿಯಾಗಿದೆ.

    ವಿದ್ಯಾರ್ಥಿನಿ ಶಾಲಿನಿ ಸೀಮಂತ ಶಾಸ್ತ್ರ ಆಚರಿಸಿ ಸಹಪಾಠಿಗಳು ಸಂತಸಪಟ್ಟಿದ್ದಾರೆ. ಶಾಲಿನಿ ಕಾವೇರಿ ಕಾಲೇಜಿನಲ್ಲಿ ದ್ವಿತೀಯ ಎಂಕಾಂ ಓದುತ್ತಿದ್ದಾರೆ. ಶಾಲಿನಿಗೆ 9 ತಿಂಗಳು ಪೂರೈಸಿರುವ ಹಿನ್ನೆಲೆಯಲ್ಲಿ ಸೀಮಂತ ಶಾಸ್ತ್ರ ಗುರುವಾರ ನಡೆದಿದೆ. ಇದನ್ನೂ ಓದಿ: ಪೊಲೀಸರಿಂದ ಠಾಣೆಯಲ್ಲಿಯೇ ಮಹಿಳಾ ಪೇದೆಗೆ ಸೀಮಂತ

    ಗುರುವಾರ ಶಾಲಿನಿ ಅವರು ಎಂದಿನಂತೆ ಕಾಲೇಜಿಗೆ ಹೋಗಿದ್ದಾರೆ. ಈ ವೇಳೆ ಅವರ ಸಹಪಾಠಿಗಳು ಹಾಗೂ ಬೋಧಕರು ಸೀಮಂತ ಶಾಸ್ತ್ರ ನೆರವೇರಿಸಿ ಶಾಲಿನಿ ಅವರಿಗೆ ಅಚ್ಚರಿ ನೀಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಶಾಲಿನಿ ಅವರು ಸಹಪಾಠಿಗಳ ನೀಡಿದ ಅಚ್ಚರಿಗೆ ಖುಷಿಪಟ್ಟಿದ್ದಾರೆ.

    ಹೆಣ್ಣು ಮಕ್ಕಳು ಕಾಲೇಜಿಗೆ ಆರತಿ ತಟ್ಟೆ ಹಿಡಿದು, ಹತ್ತಿ ಕಂಕಣ, ಅರಿಶಿಣ-ಕುಂಕುಮ ತಂದಿದ್ದರು. ಬಳಿಕ ಶಾಲಿನಿ ಅವರಿಗೆ ಅರಿಶಿಣ ಕುಂಕುಮ ಹಚ್ಚಿ, ಹೂ ಮೂಡಿಸಿ, ಆರತಿ ಬೆಳಗಿ, ಉಡುಗೊರೆ ನೀಡುವ ಮೂಲಕ ಸೀಮಂತ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ. ಇದನ್ನೂ ಓದಿ: ಗರ್ಭಿಣಿ ಸಿಬ್ಬಂದಿಗೆ ಪೊಲೀಸ್ ಠಾಣೆಯಲ್ಲೇ ಸೀಮಂತ

    ಈ ಹಿಂದೆ ಮೈಸೂರಿನಲ್ಲಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯೊಬ್ಬರಿಗೆ ಸೀಮಂತ ಶಾಸ್ತ್ರವನ್ನು ಮಾಡಲಾಗಿತ್ತು. ಆದರೆ ಇದೇ ಮೊದಲ ಬಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಸೀಮಂತ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ.

    https://www.youtube.com/watch?v=0ivTqKMMVfg&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾಗೆ ರೆಡ್ಡಿಯಿಂದ ಭಾರೀ ಗಿಫ್ಟ್

    ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾಗೆ ರೆಡ್ಡಿಯಿಂದ ಭಾರೀ ಗಿಫ್ಟ್

    ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರ ಸೀಮಂತ ಕಾರ್ಯಕ್ರಮ ಇಂದು ನಡೆದಿದ್ದು, ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿಯವರು ಸ್ಯಾಂಡಲ್ ವುಡ್ ಸಿಂಡ್ರೆಲ್ಲಾಗೆ ಭಾರೀ ಉಡುಗೊರೆಯೊಂದನ್ನು ನೀಡಿದ್ದಾರೆ.

    ನಟರಾದ ಅಂಬರೀಶ್-ಸುಮಲತಾ ದಂಪತಿ, ಪುನೀತ್ ರಾಜ್ ಕುಮಾರ್-ಅಶ್ವಿನಿ ದಂಪತಿ, ನಿರ್ದೇಶಕ ಯೋಗರಾಜ್ ಭಟ್ ಕುಟುಂಬ, ರವಿಚಂದ್ರನ್ ಪತ್ನಿ, ತಾರಾ, ಸುಧಾರಾಣಿ, ನಿರ್ದೇಶಕ ಹರ್ಷ, ನಿರ್ಮಾಪಕ ಕೆ.ಮಂಜು, ಕಿರುತೆರೆ ಕಲಾವಿದರು ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ಇತರ ಗಣ್ಯರು ಆಗಮಿಸಿ ರಾಧಿಕಾಗೆ ಶುಭ ಹಾರೈಸಿದ್ದಾರೆ.

    ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸೀಮಂತ ನಡೆದಿದ್ದು, ಹಸಿರು ಬಣ್ಣದ ಉಡುಗೆಯಲ್ಲಿ ಯಶ್- ರಾಧಿಕಾ ದಂಪತಿ ಮಿಂಚಿದ್ದಾರೆ.  ಗೌಡರ ಸಂಪ್ರದಾಯದಂತೆ ಸೀಮಂತ ನಡೆದಿದೆ. ಇವರಿಬ್ಬರ ಮದುವೆ ಕಾರ್ಯಕ್ರಮವೂ ಇದೇ ಹೋಟೆಲ್ ನಲ್ಲಿ ನಡೆದಿದ್ದು, ಇದೀಗ ಸೀಮಂತ ಕೂಡ ಅಲ್ಲೇ ನಡೆದಿದ್ದು ವಿಶೇಷವಾಗಿದೆ.

    ಯಶ್ ಹಾಗೂ ರಾಧಿಕ ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅದೇ ದಿನವೇ ಮಗು ಜನನವಾಗುತ್ತದೆ ಅಂತ ವೈದ್ಯರು ಹೇಳಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಇಂದು ಸೀಮಂತ ಕಾರ್ಯಕ್ರಮ ನಡೆದಿದ್ದು, ಡಿಸೆಂಬರ್ 9ಕ್ಕೆ ಜೂನಿಯರ್ ರಾಕಿಂಗ್ ಸ್ಟಾರ್ ಅಥವಾ ಪುಟಾಣಿ ಸ್ಯಾಂಡಲ್ ಪ್ರಿನ್ಸೆಸ್ ಆಗಮನವಾಗುತ್ತಿರುವ ಖುಷಿಯಲ್ಲಿ ಯಶ್ ಅಭಿಮಾನಿಗಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪ್ರೀತಿಯ ನಾಯಿಗೆ ಅದ್ಧೂರಿ ಸೀಮಂತ

    ಪ್ರೀತಿಯ ನಾಯಿಗೆ ಅದ್ಧೂರಿ ಸೀಮಂತ

    ಬಳ್ಳಾರಿ: ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡೋದು ಪದ್ಧತಿ. ಆದ್ರೆ ಬಳ್ಳಾರಿಯಲ್ಲಿ ಪ್ರೀತಿಯಿಂದ ಸಾಕಿದ ನಾಯಿಗಳಿಗೂ ಸಹ ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.

    ಬಳ್ಳಾರಿಯ ವಂದನಾ ಶಾಲೆಯಲ್ಲಿ ಸಾಕಿ ಬೆಳೆಸಿದ ಸ್ವೀಟಿ ಹಾಗೂ ಪಂಡೂ ಅನ್ನೋ ನಾಯಿಗಳಿಗೆ ಗರ್ಭಿಣಿಯರಿಗೆ ಸೀಮಂತ ಮಾಡೋ ರೀತಿಯಲ್ಲೆ ಅದ್ಧೂರಿಯಾಗಿ ಕಾರ್ಯ ಮಾಡಿದ್ದಾರೆ. ಈ ಸೀಮಂತ ಕಾರ್ಯದಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಸ್ವೀಟಿ ಹಾಗೂ ಪಂಡೂಗೆ ಆರತಿ ಮಾಡಿ ಹರಸಿ ಹಾರೈಸಿದ್ದಾರೆ.

    ಕಾರ್ಯಕ್ಕೆ ಬಂದವರಿಗೆಲ್ಲಾ ಭರ್ಜರಿ ಊಟದ ವ್ಯವಸ್ಥೆ ಮಾಡಿದ್ದು ಮತ್ತೊಂದು ವಿಶೇಷವಾಗಿತ್ತು. ಸೀಮಂತ ಕಾರ್ಯದಲ್ಲಿ ಸ್ಥಳೀಯ ಮಹಿಳೆಯರು ಮತ್ತು ಮಕ್ಕಳು ಸಹ ಭಾಗವಹಿಸಿದ್ದರು. ನಾಯಿಗಳ ಮುಂದೆ ವಿವಿಧ ತಿನಿಸುಗಳನ್ನು ಇಟ್ಟು ಆರತಿ ಮಾಡಲಾಯಿತು.

    ಬೆಂಗಳೂರಿನಲ್ಲಿ ಅರುಣ್ ಎಂಬವರು ತಮ್ಮ ನೆಚ್ಚಿನ ನಾಯಿಯ ತಿಥಿಯನ್ನು ಮಾಡಿದ್ದರು. ಅರುಣ್ 17 ವರ್ಷಗಳಿಂದಲೂ ಸಿಂಧೂ ಹೆಸರಿನ ನಾಯಿಯನ್ನು ಸಾಕಿದ್ದರು. 12 ಜುಲೈ 1999 ರಲ್ಲಿ ಜನಿಸಿದ ಸಿಂಧೂ,ಶಸ 17 ಜುಲೈ 2017 ರಲ್ಲಿ ಸಾವನ್ನಪ್ಪಿತ್ತು. ಅದರ ನೆನಪಿಗಾಗಿ ಅರುಣ್ ಈ ಪುಣ್ಯ ತಿಥಿ ಕಾರ್ಯವನ್ನು ಮಾಡಿದ್ದರು. ಸಂಪ್ರದಾಯ ಬದ್ಧವಾಗಿ, ವಿಧಿವಿಧಾನಗಳ ಮೂಲಕ ನಾಯಿಯ ಒಂದು ವರ್ಷದ ಪುಣ್ಯ ತಿಥಿಯನ್ನು ಅರುಣ್ ಮಾಡಿದ್ದಾರೆ. ವಿಶೇಷ ಏನೆಂದರೆ 100 ಕ್ಕೂ ಹೆಚ್ಚು ಜನರಿಗೆ ಅರುಣ್ ಊಟ ಹಾಕಿ ಪ್ರೀತಿಯ ನಾಯಿಯ ಪುಣ್ಯಸ್ಮರಣೆಯನ್ನು ಕೈಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv