Tag: Baby Shower

  • ಬಾಲಿವುಡ್ ನಟಿ ಸೋನಮ್ ಕಪೂರ್ ಸೀಮಂತ ರದ್ದು

    ಬಾಲಿವುಡ್ ನಟಿ ಸೋನಮ್ ಕಪೂರ್ ಸೀಮಂತ ರದ್ದು

    ಬಾಲಿವುಡ್ ನಟಿ ಸೋನಮ್ ಕಪೂರ್ ತಾಯ್ತನದ ಖುಷಿಯಲ್ಲಿದ್ದಾರೆ. ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಮುಂಬೈನಲ್ಲಿ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕಪೂರ್ ಕುಟುಂಬದದಿಂದ ಬ್ರೇಕಿಂಗ್ ನ್ಯೂಸ್‌ವೊಂದು ಹೊರಬಿದ್ದಿದೆ. ಸೋನಮ್ ಕಪೂರ್ ಸೀಮಂತ ಕಾರ್ಯವನ್ನು ಮುಂಬೈನಲ್ಲಿ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಇದೀಗ ರದ್ದಾಗಿದೆ.

    `ಸಾವರಿಯಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಚೆಲುವೆ ಸೋನಮ್ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿದ್ದರು. ಸ್ಟಾರ್ ನಟ ಅನಿಲ್ ಕಪೂರ್ ಅವರ ಮಗಳಾಗಿರುವ ಸೋನಮ್, 2018ರಲ್ಲಿ ಆನಂದ್ ಅಹುಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆಲ ತಿಂಗಳ ಹಿಂದೆ ತಾವು ತಾಯಿಯಾಗುತ್ತಿರುವ ವಿಚಾರವನ್ನ ಅಧಿಕೃತವಾಗಿ ತಿಳಿಸಿದ್ದರು. ಪತಿಯ ಕುಟುಂಬದ ಬೇಬಿ ಶವರ್‌ನಲ್ಲಿ ಮಿಂಚಿದ್ದ ಸೋನಮ್ ಕಪೂರ್, ತವರು ಮನೆ ಮುಂಬೈನಲ್ಲಿ ಸೀಮಂತ ಮಾಡಲು ಸಕಲ ಸಿದ್ಧತೆ ನಡೆದಿತ್ತು. ಈಗ ಸೀಮಂತ ಕಾರ್ಯಕ್ರಮಕ್ಕೆ ಬ್ರೇಕ್ ಬಿದ್ದಿದೆ. ಇದನ್ನೂ ಓದಿ:ಲಲಿತ್ ಮೋದಿ ಡೇಟಿಂಗ್ ವಿಚಾರ: ಟ್ರೋಲಿಗರಿಗೆ ಸುಶ್ಮಿತಾ ಸೇನ್ ತಿರುಗೇಟು

    ಸೀಮಂತ ಕಾರ್ಯಕ್ರಮಕ್ಕಾಗಿ ಸೋನಮ್ ಕಪೂರ್ ಮುಂಬೈಗೆ ಬಂದಿಳಿದಿದ್ದಾರೆ. ಕೋವಿಡ್ ಕೇಸ್ ಜಾಸ್ತಿಯಾಗುತ್ತಿರುವ ಹಿನ್ನಲೆ ಸೀಮಂತ ಕಾರ್ಯಕ್ರಮವನ್ನ ಕಪೂರ್ ಕುಟುಂಬ ರದ್ದು ಮಾಡಿದೆ. ಸೋನಮ್ ಕಪೂರ್ ಅವರ ಆರೋಗ್ಯ ಕ್ಷೇಮಕ್ಕಾಗಿ ಕೋವಿಡ್ ಕೇಸ್ ಹೆಚ್ಚಳ ಆಗುತ್ತಿರುವ ಸಂದರ್ಭದಲ್ಲಿ ಸೀಮಂತ ಕಾರ್ಯವನ್ನ ಕ್ಯಾನ್ಸಲ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶ್ವಾನಕ್ಕೂ ಲಭಿಸಿತು ಸೀಮಂತ ಭಾಗ್ಯ

    ಶ್ವಾನಕ್ಕೂ ಲಭಿಸಿತು ಸೀಮಂತ ಭಾಗ್ಯ

    ಬಾಗಲಕೋಟೆ: ಮನೆಯ ಸಾಕು ನಾಯಿಯೊಂದಕ್ಕೆ ಗರ್ಭಾವಸ್ಥೆ ಸಂದರ್ಭ ಸೀಮಂತ ಕಾರ್ಯಕ್ರಮ ನಡೆಸಿ ಬಾಗಲಕೋಟೆಯ ಮನೆ ಮಂದಿ ಸಂಭ್ರಮಿಸಿದ್ದಾರೆ.

    ಬಾಗಲಕೋಟೆ ಹುಳೇದಗುಡ್ಡದ ನಿವಾಸಿ, ರಂಗಭೂಮಿ ಕಲಾವಿದೆ ಜ್ಯೋತಿ ತಮ್ಮ ಮನೆಯ ಸಾಕು ನಾಯಿಗೆ ಸೀಮಂತ ಮಾಡಿಸಿದ್ದಾರೆ. ಜೂಲಿ ಜಾತಿಯ ಚಿಂಕವ್ವ(ಚಿಂಕಿ) ಹೆಸರಿನ ನಾಯಿಗೆ ಹಸಿರು ಬಳೆ, ಹಸಿರು ಸೀರೆ, ಕುಂಕುಮ, ಅರಿಶಿನ ಹಚ್ಚಿ, ಆರತಿ ಬೆಳಗಿ ಸೀಮಂತ ನಡೆಸಿದ್ದಾರೆ. ಇದನ್ನೂ ಓದಿ: ಗೃಹ ಪ್ರವೇಶದ ಮನೆಗೆ ನುಗ್ಗಿ ಮಂಗಳಮುಖಿಯರ ಕಿರಿಕ್ – ಕೇಳಿದಷ್ಟು ಹಣ ನೀಡದ್ದಕ್ಕೆ ದಾಂಧಲೆ

    ಶ್ವಾನಕ್ಕೆ ಅಚ್ಚುಮೆಚ್ಚಿನ ಹಣ್ಣು ಹಂಪಲು, ಸಿಹಿ ತಿನಿಸು ಮಾಡಿ ಜ್ಯೋತಿ ಹಾಗೂ ಮನೆ ಮಂದಿ ಬಡಿಸಿದ್ದಾರೆ. ಸೀಮಂತ ಕಾರ್ಯದ ವೇಳೆ ನಾಯಿಯೂ ಶಾಂತವಾಗಿ ಕುಳಿತಿದ್ದು, ಇದರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಸೀಮಂತ ಮಾಡಿಸಿಕೊಂಡ ನಾಯಿ ಇದೀಗ 1 ವಾರದ ಬಳಿಕ 6 ಮರಿಗಳಿಗೆ ಜನ್ಮ ನೀಡಿದೆ. 3 ಹೆಣ್ಣು ಹಾಗೂ 3 ಗಂಡು ಮರಿಗಳಿಗೆ ಚಿಂಕವ್ವ ಜನ್ಮ ನೀಡಿದೆ. ಇದನ್ನೂ ಓದಿ: ದೇವರ ಹೆಸರಲ್ಲಿ ಅರ್ಚಕರಿಂದಲೇ ಭಕ್ತರಿಗೆ ಪಂಗನಾಮ – ಕೋಟಿ ಕೋಟಿ ವಂಚನೆ

    Live Tv

  • ವೈರಲ್ ಆಯ್ತು ಸಂಜನಾ ಗಲ್ರಾನಿ ಬೇಬಿ ಶವರ್ ಸಮಾರಂಭದ ಫೋಟೋಗಳು

    ವೈರಲ್ ಆಯ್ತು ಸಂಜನಾ ಗಲ್ರಾನಿ ಬೇಬಿ ಶವರ್ ಸಮಾರಂಭದ ಫೋಟೋಗಳು

    ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಸೀಮಂತದ ಸಂಭ್ರಮದ ಕ್ಷಣಗಳನ್ನು ಮತ್ತು ಬೇಬಿ ಬಂಪ್ ಫೋಟೋಶೂಟ್‌ನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಸಂಜನಾ ಅವರ ಬೇಬಿ ಶವರ್ ಸಮಾರಂಭ ಫೋಟೋಗಳು ಭಾರೀ ವೈರಲ್ ಆಗುತ್ತಿದೆ.

    `ಗಂಡ ಹೆಂಡತಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಸಂಜನಾ, ಬಳಿಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ್ರು. ಬಳಿಕ ಅಜೀಜ್ ಪಾಷಾ ಅವರೊಂದಿಗೆ ಸಂಜನಾ ವಿವಾಹವಾಗಿದ್ದರು. ಇತ್ತೀಚೆಗೆ ಸೀಮಂತ ಶಾಸ್ತ್ರದ ಸಂಭ್ರಮ ಕ್ಷಣಗಳನ್ನ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಳಿಕ ಬೇಬಿ ಬಂಪ್ ಫೋಟೋಗಳು ಕೂಡ ಅಭಿಮಾನಿಗಳ ಗಮನ ಸೆಳೆದಿತ್ತು. ವಿಶ್ವ ಅಮ್ಮಂದಿರ ದಿನದಂದು ಸಂಜನಾ ಅವರ ಬೇಬಿ ಶವರ್ ಸಮಾರಂಭ ನಡೆದಿದೆ. ನಟಿಯ ಸಂಭ್ರಮದ ಕ್ಷಣದ ಫೋಟೋಗಳು ಭಾರೀ ವೈರಲ್ ಆಗುತ್ತಿದೆ.

    ಸಂಜನಾ ಗಲ್ರಾನಿ ಈಗ 9 ತಿಂಗಳ ತುಂಬು ಗರ್ಭಿಣಿಯಾಗಿದ್ದು, ತಮ್ಮ ತಾಯ್ತನದ ಸುಂದರ ಕ್ಷಣಗಳನ್ನು ಅಭಿಮಾನಿಗಳ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿದ್ದಾರೆ. ಇದೀಗ ಮದರ್ಸ್ ಡೇಯಂದು ಸಂಜನಾ ತಾಯ್ತನದ ಅಮೂಲ್ಯ ಕ್ಷಣಗಳು ವೈರಲ್ ಆಗುತ್ತಿದೆ. ಪತಿ ಜತೆಯಿರೋ ಸಂಜನಾ ಬೇಬಿ ಶವರ್ ಸಮಾರಂಭದ ಫೋಟೋಗಳು ವೈರಲ್ ಆಗುತ್ತಿದೆ.

  • ಸ್ಯಾಂಡಲ್‍ವುಡ್ ಪದ್ಮಾವತಿ ರಮ್ಯಾ ಕಮ್ ಬ್ಯಾಕ್ ಪಕ್ಕಾ

    ಸ್ಯಾಂಡಲ್‍ವುಡ್ ಪದ್ಮಾವತಿ ರಮ್ಯಾ ಕಮ್ ಬ್ಯಾಕ್ ಪಕ್ಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಬರುವುದು ಪಕ್ಕಾ ಆಗಿದೆ. ಹಾಗಾಗಿಯೇ ಅವರು ಪದೇ, ಪದೇ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೇ, ಮಾಧ್ಯಮಗಳ ಮುಂದೆಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

    ಇತ್ತೀಚೆಗಷ್ಟೇ ನಡೆದ ನಟಿ ಅಮೂಲ್ಯ ಅವರ ಸೀಮಂತ ಕಾರ್ಯಕ್ರಮದಲ್ಲಿ ರಮ್ಯಾ ಹಾಜರಿದ್ದರು. ಅಂದು ರಾಧಿಕಾ ಪಂಡಿತ್, ಗಣೇಶ್, ನೆನಪಿರಲಿ ಪ್ರೇಮ್, ಹರಿಪ್ರಿಯಾ, ಪ್ರಿಯಾಂಕ ಉಪೇಂದ್ರ, ಉಪೇಂದ್ರ, ಹಿರಿಯ ನಟಿ ಭಾರತೀ ವಿಷ್ಣುವರ್ಧನ್ ಸೇರಿದಂತೆ ಸಾಕಷ್ಟು ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಗಲೂ ಕೂಡ ರಮ್ಯಾ ಸಿನಿಮಾ ರಂಗಕ್ಕೆ ವಾಪಸ್ಸು ಬರುವ ಕುರಿತು ಮಾತನಾಡಿದ್ದಾರೆ. ಹಾಗಾಗಿ ಸ್ಯಾಂಡಲ್‍ವುಡ್ ಪದ್ಮಾವತಿ ಮತ್ತೆ ತೆರೆಯ ಮೇಲೆ ಮಿಂಚೋದು ಪಕ್ಕಾ ಆಗಿದೆ. ಇದನ್ನೂ ಓದಿ: ಚಂದನವನದಲ್ಲಿ ಲವ್ಲಿ ವ್ಯಾಲೆಂಟೈನ್ಸ್ ಡೇ – ಅಭಿಮಾನಿಗಳೊಂದಿಗೆ ಹಂಚಿಕೊಂಡ್ರು ಸ್ಪೆಷಲ್ ಫೋಟೋ!

    ಪುನೀತ್ ರಾಜ್ ಕುಮಾರ್ ನಿಧನರಾದ ಸಂದರ್ಭದಲ್ಲಿಯೂ ಕೂಡ ತಾವು ಸಿನಿಮಾ ರಂಗಕ್ಕೆ ವಾಪಸ್ಸಾಗುವ ಕುರಿತು ಮಾತನಾಡಿದ್ದರು. ಸ್ವತಃ ಪುನೀತ್ ರಾಜ್ ಕುಮಾರ್ ಅವರೇ ರಮ್ಯಾಗೆ ಕಾಲ್ ಮಾಡಿ, ತಮ್ಮ ಮುಂದಿನ ಚಿತ್ರದಲ್ಲಿ ನಟಿಸುವಂತೆ ಕೋರಿದ್ದರು. ಅಪ್ಪು ಮಾತಿಗೆ ರಮ್ಯಾ ಕೂಡ ಒಪ್ಪಿಗೆ ಸೂಚಿಸಿದ್ದರು. ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಪುನೀತ್ ಮತ್ತು ರಮ್ಯಾ ಕಾಂಬಿನೇಷನ್‍ನ ಚಿತ್ರ ಸೆಟ್ಟೇರುತ್ತಿತ್ತು. ಆದರೆ, ವಿಧಿ ಬೇರೆ ರೀತಿಯಲ್ಲಿಯೇ ಆಟವಾಡಿತು. ಇದನ್ನೂ ಓದಿ: ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್‍ವುಡ್ ತಾರೆಯರ ಮೆರುಗು

    ಭಾರೀ ಬೇಡಿಕೆ ಇರುವಾಗಲೇ ಸಿನಿಮಾ ರಂಗದಿಂದ ರಮ್ಯಾ ದೂರವಾದರು. ಆನಂತರ ರಾಜಕೀಯ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡರು. ಕೆಲ ತಿಂಗಳಿಂದ ಅವರು ರಾಜಕಾರಣದಲ್ಲೂ ಸಕ್ರಿಯರಾಗಿಲ್ಲ. ಸೋಶಿಯಲ್ ಮೀಡಿಯಾದ ಹೊರತಾಗಿ ರಮ್ಯಾ ಅವರ ಹಾಜರಾತಿ ಎಲ್ಲಿಯೂ ಇರುತ್ತಿರಲಿಲ್ಲ. ಇದೀಗ ಹೆಚ್ಚೆಚ್ಚು ಅವರು ಜನರ ಹತ್ತಿರಕ್ಕೆ ಬರುತ್ತಿದ್ದಾರೆ. ಈ ಮೂಲಕ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಸೂಚನೆಗಳನ್ನು ನೀಡುತ್ತಿದ್ದಾರೆ.

  • ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್‍ವುಡ್ ತಾರೆಯರ ಮೆರುಗು

    ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್‍ವುಡ್ ತಾರೆಯರ ಮೆರುಗು

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಹಾಗೂ ಜಗದೀಶ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಮೂಲ್ಯರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲಾಗಿದೆ. ಇದೀಗ ಸ್ಯಾಂಎಲ್‍ವುಡ್ ತಾರೆಯರು ಅಮೂಲ್ಯ ಸೀಮಂತ ಪಾರ್ಟಿ ಮಾಡಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಅಮೂಲ್ಯರ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ಮನೆಯವರಲ್ಲೇ ಸೇರಿ ಮಾಡಿದ್ದರು. ಆ ಕಾರ್ಯಕ್ರಮದ ನಂತರ ಅಮೂಲ್ಯ ಸ್ನೇಹಿತರು ಸೇರಿ ಸಹ ಒಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಇದರಲ್ಲಿ ನಟಿಯರಾದ ರಮ್ಯಾ, ಭಾರತಿ ವಿಷ್ಣುವರ್ಧನ್, ಸುಧಾರಾಣಿ, ರಾಧಿಕಾ ಪಂಡಿತ್, ಶ್ರುತಿ, ಮಾಳವಿಕಾ ಅವಿನಾಶ್, ಗಣೇಶ್  ಮುಂತಾದರು ಭಾಗವಹಿಸಿದ್ದಾರೆ. ಈ ಫೋಟೋಗಳನ್ನು ಅಮೂಲ್ಯ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಧರ್ಮ ಮುಖ್ಯ ಎಂದು ಪರೀಕ್ಷೆಯನ್ನೇ ಬಹಿಷ್ಕರಿಸಿದ ಶಿವಮೊಗ್ಗ ವಿದ್ಯಾರ್ಥಿನಿಯರು

     

    View this post on Instagram

     

    A post shared by Amulya (@nimmaamulya)

    ಪಾರ್ಟಿಯನ್ನು ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಆಯೋಜಿಸಲಾಗಿತ್ತು, ರಂಗು ರಂಗಿನಿಂದ ಕೂಡಿದ್ದ ಈ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿದೆ. ಅಮೂಲ್ಯ ಲೈಟ್ ಪಿಂಕ್ ಬಣ್ಣದ ಗೌನ್ ಧರಿಸಿ ಮಿಂಚಿದ್ದಾರೆ. ವಿಭಿನ್ನ ಥೀಮ್‍ನಲ್ಲಿ ನಡೆದ ಈ ಪಾರ್ಟಿಯಲ್ಲಿ ಹಲವಾರು ಗಣ್ಯರು ಭಾಗವಹಿಸಿ, ಅಮೂಲ್ಯಗೆ ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ. ತುಂಬು ಗರ್ಭಿಣಿ ಅಮೂಲ್ಯಗೆ ವಿಧ-ವಿಧವಾದ ಗಿಫ್ಟ್‍ಗಳನ್ನು ನೀಡಿ, ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಕಂದಮ್ಮನ ಆಗಮನಕ್ಕಾಗಿ ಕಾಯ್ತಿದ್ದೇನೆ- ಅಮೂಲ್ಯಗೆ ಹರಿಪ್ರಿಯಾ ವಿಶ್

     

    View this post on Instagram

     

    A post shared by Amulya (@nimmaamulya)

    ಅಮೂಲ್ಯ 2017ರಲ್ಲಿ ಜಗದೀಶ್ ಅವರ ಜೊತೆ ಸಪ್ತಪದಿ ತುಳಿದಿದ್ದರು. ಅಮೂಲ್ಯ ಜಗದೀಶ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸುದ್ದಿಯನ್ನು ಅಭಿಮಾನಿಗಳಿಗೆ ಇನ್ಸ್ಟಾಗ್ರಾಂ ಮೂಲಕ ತಿಳಿಸಿದ್ದರು.

  • ಹಸುಗೆ ಸೀಮಂತ ಕಾರ್ಯ ನೆರವೇರಿಸಿ ಸಂಭ್ರಮಿಸಿದ ಕುಟುಂಬಸ್ಥರು

    ಹಸುಗೆ ಸೀಮಂತ ಕಾರ್ಯ ನೆರವೇರಿಸಿ ಸಂಭ್ರಮಿಸಿದ ಕುಟುಂಬಸ್ಥರು

    ಚಿಕ್ಕೋಡಿ(ಬೆಳಗಾವಿ): ತುಂಬು ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ಮಾಡುವುದು ವಾಡಿಕೆ. ಆದರೇ ಇಲ್ಲೊಂದು ಗ್ರಾಮದಲ್ಲಿ ಮನೆಯಲ್ಲಿದ್ದ ಏಳು ತಿಂಗಳ ಗರ್ಭಿಣಿ ಆಕಳಿಗೆ ಸೀಮಂತ ಕಾರ್ಯ ನೆರವೇರಿಸಿ ಸಂಭ್ರಮಿಸಿದ್ದಾರೆ.

    ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಅಪ್ಪಾಸಾಹೇಬ ಪಾಟೋಳೆ ಎಂಬವರು ತಮ್ಮ ಆಕಳಿಗೆ ಸೀಮಂತ ಕಾರ್ಯಕ್ರಮ ನೆರೆವೇರಿಸಿದವರು. ಕಳೆದ ಹಲವಾರು ವರ್ಷಗಳಿಂದ ಅಪ್ಪಾಸಾಹೇಬ ಪಾಟೋಳೆ ಅವರು ತಮ್ಮ ಮನೆಯಲ್ಲಿರುವಂತಹ ಆಕಳುಗಳಿಗೆ ವಿಶೇಷ ಸ್ಥಾನಮಾನ ನೀಡುವದಲ್ಲದೇ ತಮ್ಮ ಮನೆಯ ಮಕ್ಕಳಂತೆ ಸಾಕುತ್ತಿದ್ದಾರೆ.

    ಇದೇ ಸಂದರ್ಭದಲ್ಲಿ ತಮ್ಮ ಮನೆಯಲ್ಲಿದ್ದ ಆಕಳೊಂದು 7 ತಿಂಗಳ ಗರ್ಭಿಣಿಯಾಗಿದೆ. ಹೀಗಾಗಿ ತಮ್ಮ ಮನೆ ಮಗಳಂತೆ ಹಸುಗೆ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಈ ವೇಳೆ ಗ್ರಾಮಸ್ಥರು ಹಾಗೂ ಪಾಟೋಳೆ ಕುಟುಂಬಸ್ಥರು ಸೇರಿಕೊಂಡು ಆಕಳಿಗೆ ಕುಂಕುಮ-ಅರಿಶಿಣ ಹಚ್ಚಿ, ಸೀರೆ ಉಡಿಸಿ, ಸೋಬಾನೆ ಪದಗಳನ್ನು ಹಾಡಿ, ಹೊಳಿಗೆ ತಿನ್ನಿಸಿ ಶಾಸ್ತ್ರೋಕ್ತವಾಗಿ ಸಂಭ್ರಮದಿಂದ ಸೀಮಂತ ಕಾರ್ಯಕ್ರಮವನ್ನು ಮಾಡಿದ್ದಾರೆ. ಇನ್ನೂ ಇವರ ಕಾರ್ಯಕ್ಕೆ ಜಿಲ್ಲೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

    ಸಂಧರ್ಭದಲ್ಲಿ ರೂಪಾಲಿ, ಪಾಟೋಳೆ, ಅಕ್ಕಾತಾಯಿ ಪಾಟೀಲ್, ರಾಧಿಕಾ ಶಿರಹಟ್ಟಿ, ರಾಜಶ್ರೀ ಘೋಸರವಾಡೆ ಸೇರಿದಂತೆ ಗ್ರಾಮಸ್ಥರು ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಆನ್‌ಸ್ಕ್ರೀನ್‌ ಮೇಲೆ ಸಮಂತಾ, ನನ್ನ ಜೋಡಿ ಚೆನ್ನಾಗಿತ್ತು: ನಾಗ ಚೈತನ್ಯ

  • ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಮಾಡಿ ಸುದ್ದಿಯಾದ ಉದ್ಯಮಿ!

    ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಮಾಡಿ ಸುದ್ದಿಯಾದ ಉದ್ಯಮಿ!

    ತಿರುವನಂತಪುರಂ: ಇತ್ತೀಚೆಗೆ ಸ್ವಾನ, ದನ-ಕರುಗಳ ಹುಟ್ಟುಹಬ್ಬವನ್ನು ಆಚರಿಸುವುದು ಸಾಮಾನ್ಯವಾಗಿದೆ. ಅಲ್ಲದೆ ಕೆಲವೆಡೆ ಮೂಕ ಪ್ರಾಣಿಗಳ ಸೀಮಂತ ಕಾರ್ಯಕ್ರಮವನ್ನು ಕೂಡ ಮಾಡುತ್ತಾರೆ. ಅಂತೆಯೇ ಇದೀಗ ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಮಾಡಿ ಉದ್ಯಮಿಯೊಬ್ಬರು ಸುದ್ದಿಯಾಗಿದ್ದಾರೆ.

    ಹೌದು. ಕೊಯಂಬತ್ತೂರು ಮೂಲದ ಉಮಾ ಮಹೇಶ್ವರನ್ ಎಂಬ ಉದ್ಯಮಿ 2 ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಕಾರ್ಯ ಮಾಡಿದ್ದಾರೆ. ಕ್ಷೀರ ಎಂಬ ಬೆಕ್ಕು 50 ದಿನದ ಗರ್ಭಿಣಿಯಾಗಿದ್ದರೆ, ಐರಿಶ್‍ಗೆ 35 ದಿನಗಳಾಗಿವೆ. ಈ ಹಿನ್ನೆಲೆಯಲ್ಲಿ ಪೆಟ್ ಕ್ಲಿನಿಕ್ ನಲ್ಲಿಯೇ ಉದ್ಯಮಿ ಶುಭ ಕಾರ್ಯ ನೆರವೇರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಶುವೈದ್ಯಾಧಿಕಾರಿ ವೇಣುಗೋಪಾಲ್ ಆಗಮಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕ ಮನೋಜ್ ತಿವಾರಿಗೆ ಕೊರೊನಾ ಪಾಸಿಟಿವ್

    ಈ ಸಂಬಂಧ ಮಾಧ್ಯಮದ ಜೊತೆಗೆ ಉಮಾಮಹೇಶ್ವರನ್ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಪ್ರಾರ್ಥಿಸುವ ಸಲುವಾಗಿ ಸೀಮಂತ ಕಾರ್ಯಕ್ರಮ ಮಾಡುತ್ತೇವೆ. ಅಂತೆಯೇ ಇಂದು ನಮ್ಮ ಮುದ್ದಿನ ಬೆಕ್ಕುಗಳಾದ ಕ್ಷೀರ ಮತ್ತು ಐರಿಶ್‍ಗೆ ಅದೇ ರೀತಿ ಮಾಡಿದ್ದೇವೆ. ಈ ಮೂಲಕ ನಮ್ಮ ಕುಟುಂಬ ಹಾಗೂ ಗೆಳೆಯರು ಬೆಕ್ಕುಗಳು ಮತ್ತು ಬೆಕ್ಕಿನ ಮರಿಗಳ ಉತ್ತಮ ಆರೋಗ್ಯಕ್ಕಾಗಿ ಆಶಿಸಿರುವುದಾಗಿ ತಿಳಿಸಿದರು.

    ಇದೇ ವೇಳೆ ಈಗಾಗಲೇ ನಾವು ಬೆಕ್ಕುಗಳಿಗೆ ಆರೋಗ್ಯಕರವಾದ ಆಹಾರಗಳನ್ನು ನೀಡುತ್ತಿದ್ದೇವೆ. ಹಾಲು, ಚಿಕನ್ ಮುಂತಾದ ಪ್ರೊಟೀನ್‍ಯುಕ್ತ ಆಹಾರ ಪದಾರ್ಥಗಳನ್ನು ನೀಡುತ್ತಿರುವುದಾಗಿ ಉಮಾಮಹೇಶ್ವರನ್ ಹೇಳಿದರು.

  • ನಿಖಿಲ್ ಪತ್ನಿ ರೇವತಿ ಸೀಮಂತ- ಗಣ್ಯರಿಂದ ಶುಭ ಹಾರೈಕೆ

    ನಿಖಿಲ್ ಪತ್ನಿ ರೇವತಿ ಸೀಮಂತ- ಗಣ್ಯರಿಂದ ಶುಭ ಹಾರೈಕೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿ ಸೀಮಂತ ಕಾರ್ಯಕ್ರಮದಲ್ಲಿ ಗಣ್ಯರು ಭಾಗಿಯಾಗಿದ್ದರು.

    ನಾಯಕ ನಟ ನಿಖಿಲ್ ಕುಮಾರಸ್ವಾಮಿ ಅವರ ಧರ್ಮಪತ್ನಿ ರೇವತಿ ಅವರ ಸೀಮಂತ ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಮುನಿರತ್ನ ಅವರು ಪಾಲ್ಗೊಂಡು ಶುಭ ಕೋರಿದರು. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸೀಮಂತ ಸಮಾರಂಭ ಇಂದು ನೇರವೇರಿತು. ಅನೇಕ ಗಣ್ಯರು ಸೀಮಂತ ಸಂಭ್ರಮದಲ್ಲಿರುವ ರೇವತಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ:  20 ಕೆಜಿ ಭಾರದ ಲಂಬಾಣಿ ಉಡುಗೆ ತೊಟ್ಟ ಶುಭಾ ಪೂಂಜಾ

    nikhil kumaraswamy Wife revathi baby shower ceremony Bengaluru

    ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರ ಪ್ರೀತಿಯ ಪುತ್ರ ನಿಖಿಲ್ ಕುಮಾರ್ ಸ್ವಾಮಿ ಪತ್ನಿ ರೇವತಿಗೆ ಇದೀಗ ಎಂಟು ತಿಂಗಳು ತುಂಬಿದ್ದು, ನಗರದ ಹೆಚ್‍ಎಸ್‍ಆರ್ ಲೇಔಟ್‍ನ ಮಾನ್ವಿ ಕನ್ವೆನ್ಷನ್ ಹಾಲ್‍ನಲ್ಲಿ ಸೀಮಂತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕೊರೊನಾ ಕಾರಣದಿಂದಾಗಿ ಈ ಕಾರ್ಯಕ್ರಮಕ್ಕೆ ಕೇವಲ ಆಪ್ತರು, ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಹಬ್ಬದ ಸಂಭ್ರಮ – ನಿಖಿಲ್ ಪತ್ನಿಗೆ ಸೀಮಂತ

    nikhil kumaraswamy Wife revathi baby shower ceremony Bengaluru

    2020ರ ಏಪ್ರಿಲ್ 17ರಂದು ಲಾಕ್‍ಡೌನ್ ಸಮಯದಲ್ಲಿ ನಿಖಿಲ್ ಹಾಗೂ ರೇವತಿ ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿರುವ ಫಾರ್ಮ್ ಹೌಸ್‍ನಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆಲವು ತಿಂಗಳ ಹಿಂದಷ್ಟೇ ಮಾಜಿ ಸಿಎಂ. ಹೆಚ್.ಡಿ ಕುಮಾರಸ್ವಾಮಿಯವರು ತಾವು ತಾತಾ ಆಗುತ್ತಿರುವ ಖುಷಿ ವಿಚಾರವನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದರು. ಇದೀಗ ಮುದ್ದಿನ ಸೊಸೆ ಸೀಮಂತವನ್ನು ಅದ್ದೂರಿಯಾಗಿ ಆಚರಿಸಿದ್ದು, ಗೌಡರ ಕುಟುಂಬದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದನ್ನೂ ಓದಿ: ನಾಮಧಾರಿಯಾದ ಡಿಂಪಲ್ ಕ್ವೀನ್ ರಚಿತಾ ರಾಮ್

    nikhil kumaraswamy Wife revathi baby shower ceremony Bengaluru

    ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಬ್ಯುಸಿ ಆಗಿರುವ ನಿಖಿಲ್ ಅವರು ಕುಟುಂಬದ ಕಡೆಗೂ ಹೆಚ್ಚು ಗಮನ ನೀಡುತ್ತಾರೆ. ಪತ್ನಿ ಜೊತೆ ಇರುವ ಫೋಟೋಗಳನ್ನು ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇತ್ತೀಚೆಗೆ ಅವರ ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಆ ಸಂದರ್ಭದ ಫೋಟೋವನ್ನು ಹಂಚಿಕೊಂಡ ನಿಖಿಲ್, ತಮ್ಮ ಅಭಿಮಾನಿಗಳಿಗೆ ವಿಶ್ ಮಾಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ನಿಖಿಲ್ ಮತ್ತು ರೇವತಿ ದಂಪತಿಗೆ ಎಲ್ಲರಿಂದ ಶುಭ ಹಾರೈಕೆಗಳು ಕೇಳಿಬರುತ್ತಿವೆ.

  • ಮುಂಬರುವ ವರ್ಷಗಳಲ್ಲಿ ನಮ್ಮ ಮನೆ ಡೈಪರ್‌ನಿಂದ ತುಂಬಿರುತ್ತೆ: ನಟಿ ರಾಧಿಕಾ

    ಮುಂಬರುವ ವರ್ಷಗಳಲ್ಲಿ ನಮ್ಮ ಮನೆ ಡೈಪರ್‌ನಿಂದ ತುಂಬಿರುತ್ತೆ: ನಟಿ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ನಾನು ಈಗ ಎರಡನೇ ಮಗುವಿಗೆ ಜನ್ಮ ನೀಡಲು ರೆಡಿ ಆಗಿದ್ದೇನೆ ಎಂದು ಹೇಳಿದ್ದಾರೆ.

    ರಾಧಿಕಾ ಪಂಡಿತ್ ಭಾನುವಾರ ತಮ್ಮ ಸ್ನೇಹಿತರ ಜೊತೆ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ರಾಧಿಕಾ ಸ್ನೇಹಿತರು ಆಯೋಜಿಸಿ ಅವರಿಗೆ ಸರ್ಪ್ರೈಸ್ ನೀಡಿದ್ದರು. ಮಂಗಳವಾರ ರಾಧಿಕಾ ಕಾರ್ಯಕ್ರಮದ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆದರೆ ಇಂದು ಕಾರ್ಯಕ್ರಮದ ಹಲವು ಫೋಟೋಗಳನ್ನು ಶೇರ್ ಮಾಡಿ, ನನ್ನ ಸ್ನೇಹಿತರು ನನಗೆ ಸೀಮಂತ ಪಾರ್ಟಿ ನೀಡಿದ್ದರು. ಈ ಪಾರ್ಟಿ ನೀಡಿದ ಎಲ್ಲ ಆಂಟಿಗಳಿಗೆ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಮಾಧ್ಯಮವೊಂದರ ಜೊತೆ ಮಾತನಾಡಿದ ರಾಧಿಕಾ, ನಾನು ಈಗ ಎರಡನೇ ಮಗುವಿಗೆ ಜನ್ಮ ನೀಡಲು ರೆಡಿಯಾಗಿದ್ದೇನೆ. ಈಗಾಗಲೇ ನಾವು ಟೇಬಲ್‍ಗಳನ್ನು ಬದಲಾಯಿಸುತ್ತಿದ್ದೇವೆ ಹಾಗೂ ಸಾಕಷ್ಟು ಬಟ್ಟೆಗಳನ್ನು ಕೂಡ ತೆಗೆದುಕೊಳ್ಳುತ್ತಿದ್ದೇವೆ. ಐರಾ ಹುಟ್ಟಿದ ಸಮಯದಲ್ಲಿ ನಾವು ಈಗಾಗಲೇ ಎಲ್ಲವನ್ನು ನೋಡಿದ್ದೇವೆ. ಮುಂಬರುವ ವರ್ಷಗಳಲ್ಲಿ ನಮ್ಮ ಮನೆ ಡೈಪರ್ ನಿಂದ ತುಂಬಿರುತ್ತೆ. ಅಲ್ಲದೆ ನಾನು ಈಗ ಹೆಚ್ಚು ಸಮಯ ಎಚ್ಚರವಾಗಿರುವುದನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ.

    ಭಾನುವಾರ ಬೆಳಗ್ಗೆ ನನ್ನ ಸೇಹಿತರು ಸೀಮಂತ ಕಾರ್ಯಕ್ರಮವನ್ನು ‘ಬೀ'(ಜೋನುನೊಣ) ಥೀಮ್‍ನಲ್ಲಿ ಆಯೋಜಿಸಿದ್ದರು. ಈ ಬಾರಿ ಸುತ್ತಮುತ್ತ ಆಗುತ್ತಿರುವುದು ನನಗೆ ಹೆಚ್ಚು ಪರಿಚಿತ ಭಾವನೆ ತರಿಸುತ್ತಿದೆ. ಏಕೆಂದರೆ ನಾನು ಈಗಾಗಲೇ ಈ ಅನುಭವವನ್ನು ಪಡೆದಿದ್ದೇನೆ. ನಾನು ಏನನ್ನು ನಿರೀಕ್ಷಿಸಬೇಕೆಂದು ತಿಳಿದಿದ್ದರಿಂದ ನಾನು ಅದನ್ನು ಸುಲಭವಾಗಿ ಕಂಡುಕೊಂಡೆ ಮತ್ತು ನನ್ನ ಗಮನವನ್ನು ಬೇರೆಡೆಗೆ ಇರಿಸಲು ನನ್ನ ಮಗಳು ಐರಾ ಇದ್ದಳು ಎಂದು ಹೇಳಿದ್ದಾರೆ.

    ಭಾನುವಾರದ ಸೀಮಂತ ಕಾರ್ಯಕ್ರಮ ನನಗೆ ಸರ್ಪ್ರೈಸ್ ಆಗಿತ್ತು. ಮೊದಲ ಬಾರಿ ಗರ್ಭಿಣಿಯಾದಾಗ ಮಾತ್ರ ಸಾಂಪ್ರದಾಯಿಕವಾಗಿ ಸೀಮಂತ ಕಾರ್ಯಕ್ರಮ ಮಾಡುತ್ತಾರೆ. ಎರಡನೇ ಬಾರಿಗೆ ಗರ್ಭಿಣಿ ಆಗಿದ್ದಾಗ ನಾನು ಇದನ್ನು ಮಿಸ್ ಮಾಡಿಕೊಳ್ಳಬಾರದೆಂದು ನನ್ನ ಸ್ನೇಹಿತರೇ ಈ ಸರ್ಪ್ರೈಸ್ ಪ್ಲಾನ್ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ‘ಮಮ್ಮಿ ಟು ಬೀ’ ಎಂದು ಹೆಸರಿಡಲಾಗಿದ್ದು, ಹಳದಿ ಮತ್ತು ಕಪ್ಪು ಬಣ್ಣವನ್ನು ಥೀಮ್ ಮಾಡಲಾಗಿತ್ತು ಎಂದು ರಾಧಿಕಾ ತಿಳಿಸಿದ್ದಾರೆ.

    ನನ್ನ ಸ್ನೇಹಿತರೇ ನನಗೆ ನಿಗದಿಪಡಿಸಿದ ಸ್ಥಳಕ್ಕೆ ಕರೆದುಕೊಂಡು ಹೋಗಿ ಹೊಸ ಗೌನ್ ನೀಡಿದ್ದರು. ಅವರೇ ನನಗೆ ಹೇರ್ ಸ್ಟೈಲ್ ಮಾಡಿ ಮೇಕಪ್ ಮಾಡಿದ್ದರು. ಇದೇ ವೇಳೆ ಈ ಕಾರ್ಯಕ್ರಮದಲ್ಲಿ ಹಲವು ವಿಭಿನ್ನ ಆಟಗಳನ್ನು ಆಯೋಜಿಸಲಾಗಿತ್ತು. ಮೊದಲು ಪಿಂಗ್‍ಪಾಂಗ್ ಚೆಂಡನ್ನು ನೇತು ಹಾಕಿದ್ದ ಡೈಪರೊಳಗೆ ಹಾಕಬೇಕಿತ್ತು. ಅಲ್ಲದೆ ಕಣ್ಣಿಗೆ ಬಟ್ಟೆ ಕಟ್ಟಿ ಗೊಂಬೆಗೆ ಡೈಪರ್ ಹಾಕಬೇಕಿತ್ತು. ಈ ಕಾರ್ಯಕ್ರಮದಲ್ಲಿ ನನ್ನ ಎಲ್ಲ ಸ್ನೇಹಿತೆಯರು ಇದ್ದರು. ಅಲ್ಲದೆ ಎಲ್ಲರಗಿಂತ ಕಿರಿಯ ವ್ಯಕ್ತಿ ನನ್ನ ಮಗಳು ಐರಾ ಕೂಡ ಇದ್ದಳು ಎಂದರು.

  • ಸೀಮಂತ ಕಾರ್ಯಕ್ರಮದಲ್ಲಿ ಸಿಂಡ್ರೆಲ್ಲಾರಂತೆ ಮಿಂಚಿದ ರಾಧಿಕಾ

    ಸೀಮಂತ ಕಾರ್ಯಕ್ರಮದಲ್ಲಿ ಸಿಂಡ್ರೆಲ್ಲಾರಂತೆ ಮಿಂಚಿದ ರಾಧಿಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಅವರು ಸೀಮಂತ ಮಾಡಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಸಿಂಡ್ರೆಲ್ಲಾರಂತೆ ಮಿಂಚಿದ್ದಾರೆ.

    ರಾಧಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. “ನನ್ನ ಆತ್ಮೀಯ ಸ್ನೇಹಿತರು ನನಗೆ ನೀಡಿದ ಅದ್ಭುತ ಸೀಮಂತ ಕಾರ್ಯಕ್ರಮದ ಒಂದು ಇಣುಕು ನೋಟ. ಹೆಚ್ಚಿನ ಫೋಟೋಗಳು ಹಾಗೂ ವಿವರಗಳು ಶೀಘ್ರದಲ್ಲೇ ಬರಲಿದೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A sneak peek into the wonderful Baby shower my dear friends gave me!! More pics and details coming soon ???? #radhikapandit #nimmaRP

    A post shared by Radhika Pandit (@iamradhikapandit) on

    ಪೋಸ್ಟ್ ಮಾಡಿರುವ ಫೋಟೋದಲ್ಲಿ ರಾಧಿಕಾ ಹಳದಿ ಬಣ್ಣದ ಗೌನ್ ಧರಿಸಿ ಕೈಯಲ್ಲಿ ಬಿಳಿ ಬಣ್ಣದ ಗುಲಾಬಿ ಹೂ ಹಿಡಿದು ಪೋಸ್ ನೀಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಬ್ಯೂಟಿಫುಲ್, ಸೂಪರ್ ಮಮ್ಮಿ ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಯಶ್ ಮಗಳಿಗೆ ಈಗ 10 ತಿಂಗಳಾಗಿದ್ದು, ಶೀಘ್ರದಲ್ಲೇ ರಾಧಿಕಾ ಮತ್ತೊಂದು ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಹಿಂದೆ ರಾಧಿಕಾ, ದೇವರ ದಯೆಯಿಂದ ಸಿಹಿ ಸುದ್ದಿ ಜೀವನದಲ್ಲಿ ಮತ್ತೆ ಬಂದಿದೆ. ಮತ್ತೊಂದು ಎಡಿಷನ್‍ಗೆ ಕಾಯುತ್ತಿದ್ದೇವೆ. ಎಲ್ಲದಕ್ಕೂ ಒಂದು ಹಣೆಬರಹ ಅಂತ ಒಂದು ಇರುತ್ತದೆ. ಆಯಿತಲ್ಲ ಇನ್ನೇನು ಎಂದು ಹೇಳಿದ್ದರು.

     

    View this post on Instagram

     

    Wishing u all a fantastic week ???? #radhikapandit #nimmaRP

    A post shared by Radhika Pandit (@iamradhikapandit) on

    ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು.

    ಅಲ್ಲದೆ ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಅಲಂಕಾರಗೊಂಡಿದ್ದ ಮದುವೆ ಮಂಟಪದಲ್ಲಿ ರಾಧಿಕಾ ಪಂಡಿತ್ ಅವರಿಗೆ ಯಶ್ ತಾಳಿ ಕಟ್ಟಿದ್ದರು. ಅರಮನೆ ಮೈದಾನದಲ್ಲಿ ಯಶ್-ರಾಧಿಕಾ ಪಂಡಿತ್ ರವರ ಅದ್ಧೂರಿ ಆರತಕ್ಷತೆ ನಡೆದಿತ್ತು.