ಕನ್ನಡದ ನಟಿ ಹರಿಪ್ರಿಯಾ (Haripriya) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ನಟಿಯ ಸೀಮಂತ ಶಾಸ್ತ್ರದ (Baby Shower) ಕಾರ್ಯಕ್ರಮ ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಅದ್ಧೂರಿಯಾಗಿ ಮಾಡಲಾಗಿದೆ. ಕಾರ್ಯಕ್ರಮದ ಸುಂದರ ಫೋಟೋಗಳು ಇಲ್ಲಿದೆ.

ನಟಿ ಹರಿಪ್ರಿಯಾ ಅವರು ಹಸಿರು ಬಣ್ಣದ ಸೀರೆಯುಟ್ಟ ಕಂಗೊಳಿಸಿದ್ರೆ, ಪತಿ ವಸಿಷ್ಠ ಸಿಂಹ (Vasishta Simha) ಬಿಳಿ ಬಣ್ಣದ ಉಡುಗೆ ಧರಿಸಿದ್ದಾರೆ. ಫೋಟೋದಲ್ಲಿ ನಟಿಯ ತಾಯ್ತನದ ಕಳೆ ಎದ್ದು ಕಾಣುತ್ತಿದೆ. ಇದನ್ನೂ ಓದಿ:ಯಶ್ ‘ಟಾಕ್ಸಿಕ್’ ಚಿತ್ರಕ್ಕಾಗಿ ಕಾಯುತ್ತಿದ್ದೇನೆ ಎಂದ ರಿಷಬ್ ಶೆಟ್ಟಿ

ಇನ್ನೂ ನಟಿಯ ಸೀಮಂತ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಆಗಮಿಸಿದ್ದರು. ಜೊತೆಗೆ ಸ್ಯಾಂಡಲ್‌ವುಡ್ ತಾರೆಯರು ಅನೇಕರು ಬಂದು ಹರಿಪ್ರಿಯಾ ಶುಭಕೋರಿದ್ದರು.

ಹಿರಿಯ ನಟಿಯರಾದ ಶ್ರುತಿ, ಮಾಳವಿಕಾ, ತಾರಾ, ಸುಧಾರಾಣಿ, ಗಿರಿಜಾ ಲೋಕೇಶ್ ಆಗಮಿಸಿದ್ದರು. ಹರಿಪ್ರಿಯಾ ಹಣೆಗೆ ಕುಂಕುಮವಿಟ್ಟು ಅಕ್ಷತೆ ಹಾಕಿ ಶುಭಕೋರಿದ್ದರು.

ಈ ಕಾರ್ಯಕ್ರಮದಲ್ಲಿ ಪತಿ ಜಗದೀಶ್ ಜೊತೆ ನಟಿ ಅಮೂಲ್ಯ ಪಾಲ್ಗೊಂಡಿದ್ದರು. ವಸಿಷ್ಠ ಸಿಂಹ ದಂಪತಿಗೆ ಶುಭಹಾರೈಸಿ ತೆರಳಿದರು.

ಇನ್ನೂ ಸೋನಲ್ ಮತ್ತು ಡೈರೆಕ್ಟರ್ ತರುಣ್ ಸುಧೀರ್ ಜೋಡಿ ಆಗಮಿಸಿದ್ದರು. ಇವರೆಲ್ಲರ ಆಗಮನ ಹರಿಪ್ರಿಯಾಗೆ ಖುಷಿ ಕೊಟ್ಟಿದೆ.

ಹಿರಿಯ ನಟ ದೊಡ್ಡಣ್ಣ, ನವೀನ್ ಶಂಕರ್, ತೇಜಸ್ವಿನಿ ಶರ್ಮಾ, ಮೇಘನಾ ಗಾಂವ್ಕರ್, ನಿರಂಜನ್ ದೇಶಪಾಂಡೆ, ಕೆಜಿಎಫ್ ನಟ ಗರುಡ ರಾಮ್ ಆಗಮಿಸಿದ್ದರು.

ಇನ್ನೂ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ 2023ರಲ್ಲಿ ಜ.26ರಂದು ಮೈಸೂರಿನಲ್ಲಿ ಹಸೆಮಣೆ ಏರಿದ್ದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.


ಕವಿತಾ ಮತ್ತು ನಟ ಚಂದನ್ ಕುಮಾರ್ (Chandan Kumar) ಮನೆಗೆ ಸದ್ಯದಲ್ಲೇ ಪುಟ್ಟ ಕಂದಮ್ಮನ ಆಗಮನವಾಗಲಿದೆ. ಇದೇ ಖುಷಿಯಲ್ಲಿ ತುಂಬು ಗರ್ಭಿಣಿ ಕವಿತಾಗೆ ಸರಳವಾಗಿ ಸೀಮಂತ ಶಾಸ್ತ್ರ ಮಾಡಿದ್ದಾರೆ. ಈ ಸಮಾರಂಭಕ್ಕೆ ನಟಿ ನಮ್ರತಾ ಗೌಡ, ತನಿಷಾ ಕುಪ್ಪಂಡ, ಹಿರಿಯ ನಟಿ ಶ್ರುತಿ, ನಿಮಿಕಾ ರತ್ನಾಕರ್, ನೇಹಾ ಗೌಡ (Neha Gowda), ಅನುಪಮಾ ಗೌಡ ಸೇರಿದಂತೆ ಅನೇಕರು ಭಾಗಿಯಾಗಿದ್ದರು.















