Tag: baby john

  • ಬಾಲಿವುಡ್ ಸಿನಿಮಾ ರಿಲೀಸ್‌ಗೂ ಮುನ್ನ ಕೀರ್ತಿ ಸುರೇಶ್ ಟೆಂಪಲ್ ರನ್

    ಬಾಲಿವುಡ್ ಸಿನಿಮಾ ರಿಲೀಸ್‌ಗೂ ಮುನ್ನ ಕೀರ್ತಿ ಸುರೇಶ್ ಟೆಂಪಲ್ ರನ್

    ಬಾಲಿವುಡ್ ಬೆಡಗಿ ಕೀರ್ತಿ ಸುರೇಶ್ (Keerthy Suresh) ನಟಿಸಿರುವ ಬಾಲಿವುಡ್ ಸಿನಿಮಾ ‘ಬೇಬಿ ಜಾನ್’ ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆ ಚಿತ್ರತಂಡದ ಜೊತೆ ಮಹಾಕಾಳೇಶ್ವರ ಟೆಂಪಲ್‌ಗೆ (Mahakaleshwara Temple) ನಟಿ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್‌ಗೆ ಖಾಕಿ ಫುಲ್ ಡ್ರಿಲ್- ಪೊಲೀಸರಿಂದ ಪ್ರಶ್ನೆಗಳ ಸುರಿಮಳೆ

    ಬಾಲಿವುಡ್ ನಟ ವರುಣ್ ಧವನ್ (Varun Dhawan) ಜೊತೆಗಿನ ಸಿನಿಮಾ ಡಿ.25ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆ ಉಜ್ಜಯಿನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಕೀರ್ತಿ ಸುರೇಶ್ ಆ್ಯಂಡ್ ಟೀಮ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಟಿಸಿರುವ ಮೊದಲ ಬಾಲಿವುಡ್ ಸಿನಿಮಾಗೆ ಸಕ್ಸಸ್ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

    ಅಂದಹಾಗೆ, ‘ಬೇಬಿ ಜಾನ್’ ಚಿತ್ರವು ತಮಿಳಿನ ರಿಮೇಕ್ ತೇರಿ ಚಿತ್ರದಾಗಿದೆ. ಈ ಸಿನಿಮಾದಲ್ಲಿ ದಳಪತಿ ವಿಜಯ್ ಮತ್ತು ಸಮಂತಾ ನಟಿಸಿದರು. ಈ ಚಿತ್ರದ ಸೂಪರ್ ಸಕ್ಸಸ್ ಕಂಡಿತ್ತು. ಇದೇ ಚಿತ್ರವನ್ನು ‘ಜವಾನ್’ ಡೈರೆಕ್ಟರ್ ಅಟ್ಲಿ ಹಿಂದಿ ವರ್ಷನ್‌ನಲ್ಲಿ ಹೊಸ ಜೋಡಿಯ ಮೂಲಕ ಹೇಳಲು ಹೊರಟಿದ್ದಾರೆ. ಇದೇ ಡಿ.25ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ‘ಮಹಾನಟಿ’ ಕೀರ್ತಿಗೆ ಈ ಚಿತ್ರದ ಮೂಲಕ ಬ್ರೇಕ್ ಸಿಗುತ್ತಾ? ಎಂದು ಕಾದುನೋಡಬೇಕಿದೆ.

  • ಬಾಲಿವುಡ್ ಸಿನಿಮಾ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಕೀರ್ತಿ ಸುರೇಶ್

    ಬಾಲಿವುಡ್ ಸಿನಿಮಾ ಬಗ್ಗೆ ಗುಡ್ ನ್ಯೂಸ್ ಕೊಟ್ಟ ಕೀರ್ತಿ ಸುರೇಶ್

    ‘ಮಹಾನಟಿ’ ಕೀರ್ತಿ ಸುರೇಶ್ (Keerthy Suresh) ಅವರು ವರುಣ್ ಧವನ್‌ಗೆ ಜೋಡಿಯಾಗೋ ಮೂಲಕ ಬಾಲಿವುಡ್‌ಗೆ (Bollywood) ಎಂಟ್ರಿ ಕೊಟ್ಟಿದ್ದಾರೆ. ನಟಿಯ ಮೊದಲ ಹಿಂದಿ ಸಿನಿಮಾಗಾಗಿ ಕಾಯುತ್ತಿದ್ದ ಫ್ಯಾನ್ಸ್‌ಗೆ ಕೀರ್ತಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಬೇಬಿ ಜಾನ್’ (Baby John) ಸಿನಿಮಾದ ಫಸ್ಟ್‌ ಸಾಂಗ್ ರಿಲೀಸ್ ಕುರಿತು ನಟಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಸ್ಟೈಲೀಶ್ ಆದ ಸಂಜನಾ ಬುರ್ಲಿ ಲುಕ್‌ಗೆ ಪಡ್ಡೆಹುಡುಗರು ಫಿದಾ

    ವರುಣ್ ಧವನ್ (Varun Dhawan) ಜೊತೆ ಕೀರ್ತಿ ಡ್ಯಾನ್ಸ್ ಮಾಡಿರುವ ಚಿತ್ರದ ಮೊದಲ ಸಾಂಗ್ ಅನ್ನು ಇದೇ ನ.25ಕ್ಕೆ ರಿಲೀಸ್ ಮಾಡೋದಾಗಿ ನಟಿ ಮಾಹಿತಿ ಹಂಚಿಕೊಂಡಿದ್ದಾರೆ. ಅದಕ್ಕೂ ಮುನ್ನ ಸಾಂಗ್‌ನ ಸಣ್ಣ ಪ್ರೋಮೋವೊಂದನ್ನು ನಟಿ ಶೇರ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳಲ್ಲಿ ಈ ಸಿನಿಮಾದ ಸಾಂಗ್‌ ಬಗ್ಗೆ ಕ್ರೇಜ್ ಹೆಚ್ಚಾಗಿದೆ.

    ವರುಣ್ ಜೊತೆ ಕೀರ್ತಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಡಿನ ಮ್ಯೂಸಿಕ್ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಫುಲ್ ಸಾಂಗ್ ನೋಡಲು ಕಾತರದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನೂ ಈ ಚಿತ್ರವನ್ನು ‘ಜವಾನ್’ ಡೈರೆಕ್ಟರ್ ಅಟ್ಲಿ ನಿರ್ದೇಶನ ಮಾಡಿದ್ದಾರೆ.

    ಸಿನಿಮಾದಲ್ಲಿ ವರುಣ್ ಧವನ್ ಪವರ್‌ಫುಲ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಟ್ಲಿ ನಿರ್ದೇಶನ ಮಾಡಿದ್ದ ತಮಿಳಿನ ‘ತೇರಿ’ ಚಿತ್ರದ ಕಥೆಯನ್ನೇ ಬಾಲಿವುಡ್‌ನಲ್ಲಿ ತೋರಿಸಲು ರೆಡಿಯಾಗಿದ್ದಾರೆ. ತಮಿಳಿನಲ್ಲಿ ವಿಜಯ್ ದಳಪತಿ, ಸಮಂತಾ ನಟಿಸಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.