Tag: baby film

  • ದೇವರಕೊಂಡ ಸಹೋದರನ ಸಿನಿಮಾಗೆ ಕ್ಲ್ಯಾಪ್- ಶುಭ ಕೋರಿದ ರಶ್ಮಿಕಾ

    ದೇವರಕೊಂಡ ಸಹೋದರನ ಸಿನಿಮಾಗೆ ಕ್ಲ್ಯಾಪ್- ಶುಭ ಕೋರಿದ ರಶ್ಮಿಕಾ

    ನಂದ್ ದೇವರಕೊಂಡ ಮತ್ತು ವೈಷ್ಣವಿ ಚೈತನ್ಯ (Vaishnavi Chaitanya) ಮತ್ತೆ ಹೊಸ ಸಿನಿಮಾಗಾಗಿ ಒಂದಾಗಿದ್ದಾರೆ. ‘ಬೇಬಿ’ (Baby) ಜೋಡಿಯ ಹೊಸ ಚಿತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕ್ಲ್ಯಾಪ್ ಮಾಡುವ ಮೂಲಕ ತಂಡಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ:ರೆಡ್ಡಿ ಮಗನ ಸಿನಿಮಾದಲ್ಲಿ ಶ್ರೀಲೀಲಾ- 3 ವರ್ಷಗಳ ಬಳಿಕ ಕನ್ನಡಕ್ಕೆ ಬಂದ ನಟಿ

    ವಿಜಯ್ ದೇವರಕೊಂಡ (Vijay Devarakonda) ಸಹೋದರ ಆನಂದ್ (Anand Devarakonda) ಸಿನಿಮಾಗೆ ರಶ್ಮಿಕಾ ಸಾಥ್ ನೀಡಿದ್ದಾರೆ. ಆನಂದ್ ಮತ್ತು ವೈಷ್ಣವಿ ನಟನೆಯ ಹೊಸ ಸಿನಿಮಾದ ಮುಹೂರ್ತ ಇಂದು (ಮೇ 15) ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಸಿನಿಮಾಗೆ ರಶ್ಮಿಕಾ ಕ್ಲ್ಯಾಪ್ ಮಾಡಿ ಟೀಮ್‌ಗೆ ವಿಶ್ ಮಾಡಿದ್ದಾರೆ.‌ ಇದನ್ನೂ ಓದಿ:ನನ್ನನ್ನು ಜಗಲಿಯಲ್ಲಿ ಬಿಟ್ಟು ಮನೆಗೆ ಬೀಗ ಹಾಕ್ಕೊಂಡು ಬಿಗ್ ಬಾಸ್‌ಗೆ ಹೋಗಿದ್ದಳು- ಚೈತ್ರಾ ಕುಂದಾಪುರ ತಂದೆ ಕಿಡಿ

    2023ರಲ್ಲಿ ತೆರೆಕಂಡ ‘ಬೇಬಿ’ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು. ಮತ್ತೆ ಅದೇ ಜೋಡಿ ಜೊತೆಯಾಗಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಈ ಸಿನಿಮಾವನ್ನು ಆದಿತ್ಯ ಹಾಸನ್ ನಿರ್ದೇಶನ ಮಾಡಿದ್ದಾರೆ. ಸಿತಾರಾ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

    ‘ಬೇಬಿ’ ಚಿತ್ರದ ಮೂಲಕ ತ್ರಿಕೋನ ಪ್ರೇಮಕಥೆ ತೋರಿಸಿದ್ದರು. ಆನಂದ್ ದೇವರಕೊಂಡ ಮತ್ತು ವೈಷ್ಣವಿ ಹೊಸ ಸಿನಿಮಾ ಯಾವ ಜಾನರ್ ಕಥೆ ಹೇಳಲು ಹೊರಟಿದ್ದಾರೆ ಎಂಬುದನ್ನು ನೋಡಲು ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.

  • ಲವ್ ಮಿ ಎನ್ನುತ್ತಾ ಮತ್ತೆ ಎಂಟ್ರಿ ಕೊಟ್ಟ ‘ಬೇಬಿ’ ನಟಿ

    ಲವ್ ಮಿ ಎನ್ನುತ್ತಾ ಮತ್ತೆ ಎಂಟ್ರಿ ಕೊಟ್ಟ ‘ಬೇಬಿ’ ನಟಿ

    ಟಾಲಿವುಡ್ ನಟಿ ವೈಷ್ಣವಿ ಚೈತನ್ಯ ‘ಬೇಬಿ’ (Baby Film) ಸಿನಿಮಾದ ಮೂಲಕ ಸೂಪರ್ ಸಕ್ಸಸ್ ಕಂಡಿದ್ದರು. ಇದೀಗ ‘ಲವ್ ಮಿ’ ಎನ್ನುತ್ತಾ ಮತ್ತೆ ಟಿಟೌನ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ತೆಲುಗಿನ ನಟ ಆಶಿಶ್‌ಗೆ ನಾಯಕಿ ಬೇಬಿ ವೈಷ್ಣವಿ (Vaishnavi Chaitanya) ಚೈತನ್ಯ ಎಂಟ್ರಿ ಕೊಟ್ಟಿದ್ದಾರೆ.

    ‘ಬೇಬಿ’ ಸಿನಿಮಾದಲ್ಲಿ ಆನಂದ್ ದೇವರಕೊಂಡಗೆ ನಾಯಕಿಯಾಗಿ ವೈಷ್ಣವಿ ನಟಿಸಿದ್ದರು. ಈ ಚಿತ್ರದ ಸಕ್ಸಸ್ ನಂತರ ನಟಿಗೆ ಬೇಡಿಕೆ ಹೆಚ್ಚಾಗಿತ್ತು. ತೆಲುಗಿನ ಹಲವು ಸಿನಿಮಾಗಳಿಗೆ ನಾಯಕಿಯಾಗಿ ಅವಕಾಶಗಳು ಹರಿದು ಬರುತ್ತಿವೆ. ಇದನ್ನೂ ಓದಿ:ಆತ್ಮಹತ್ಯೆಗೆ ಶರಣಾದ ನಟ ಚಂದ್ರು ಮೇಲೆ ಪತ್ನಿಯ ಆರೋಪಗಳೇನು?

    ಹೀಗಿರುವಾಗ ಈ ಬಾರಿ ಹೀರೋ ಆಶಿಶ್ (Ashish) ಜೊತೆ ಸೇರಿ ಹಾರರ್ ಕಥೆ ಹೇಳೋಕೆ ನಟಿ ವೈಷ್ಣವಿ ಹೊರಟಿದ್ದಾರೆ. ಎಂದೂ ನಟಿಸಿರದ ಡಿಫರೆಂಟ್ ಪಾತ್ರದಲ್ಲಿ ಬೇಬಿ ನಟಿ ಕಾಣಿಸಿಕೊಂಡಿದ್ದಾರೆ. ಸದ್ಯ ‘ಲವ್ ಮಿ’ (Love Me) ಸಿನಿಮಾದ ಟ್ರೈಲರ್ ರಿಲೀಸ್ ಆಗಿ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ.

    ಹಾರರ್ ಜೊತೆ ಒಂದು ಸುಂದರ ಲವ್ ಸ್ಟೋರಿ ಕೂಡ ಸಿನಿಮಾದಲ್ಲಿದೆ. ಇದೇ ಮೇ 25ಕ್ಕೆ ಸಿನಿಮಾ ರಿಲೀಸ್‌ ಆಗುತ್ತಿದೆ. ‘ಬೇಬಿ’ ಮೂಲಕ ಗೆದ್ದಿರುವ ವೈಷ್ಣವಿ ಇದೀಗ ‘ಲವ್ ಮಿ’ ಚಿತ್ರದ ಮೂಲಕ ಗೆದ್ದು ಬೀಗುತ್ತಾರಾ? ಕಾದುನೋಡಬೇಕಿದೆ.

  • ‘ಬೇಬಿ’ಗೆ ಮತ್ತೆ ಜೋಡಿಯಾದ ಆನಂದ್ ದೇವರಕೊಂಡ

    ‘ಬೇಬಿ’ಗೆ ಮತ್ತೆ ಜೋಡಿಯಾದ ಆನಂದ್ ದೇವರಕೊಂಡ

    ವರ್ಷ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದ ಸಿನಿಮಾ ಅಂದರೆ ‘ಬೇಬಿ’. ವೈಷ್ಣವಿ ಚೈತನ್ಯ- ಆನಂದ್ ದೇವರಕೊಂಡ (Anand Devarakonda) ಜೋಡಿ ಈ ಚಿತ್ರದ ಮೂಲಕ ಮೋಡಿ ಮಾಡಿದ್ದರು. ಈಗ ಮತ್ತೆ ಇದೇ ಜೋಡಿ ಒಟ್ಟಾಗಿ ನಟಿಸುತ್ತಿದ್ದಾರೆ.

    ಸಾಯಿ ರಾಜೇಶ್ ನೀಲಂ ನಿರ್ದೇಶನದ ‘ಬೇಬಿ’ (Baby) ಸಿನಿಮಾದಲ್ಲಿ ಆನಂದ್, ವಿರಾಜ್, ವೈಷ್ಣವಿ ಈ ಮೂವರು ಚಿತ್ರದ ಪ್ರಮುಖ ಪಾತ್ರಧಾರಿಗಳಾಗಿ ನಟಿಸಿದ್ದರು. ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ಇದೀಗ ಖ್ಯಾತ ನಿರ್ಮಾಣ ಸಂಸ್ಥೆಯೊಂದು ವೈಷ್ಣವಿ-ಆನಂದ್ ಜೋಡಿಯನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ:ಯುದ್ಧಕ್ಕೆ ನಿಂತ ಮೇಲೆ ಸೋತರೂ ಪರವಾಗಿಲ್ಲ, ಸತ್ತಾದರೂ ಗೆಲ್ಲಿ- ಕಿಚ್ಚನ ಕ್ಲಾಸ್

    ‘ಬೇಬಿ’ ಚಿತ್ರದ ನಿರ್ದೇಶರಾದ ಸಾಯಿ ರಾಜೇಶ್ ಅವರು ಈ ಸಿನಿಮಾಗಾಗಿ ಚಿತ್ರಕಥೆ ಹೆಣೆದಿದ್ದಾರೆ. ರವಿ ನಂಬುರಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಕೂಡ ಶುರುವಾಗಿದ್ದು, ಮುಂದಿನ ವರ್ಷ ಚಿತ್ರ ರಿಲೀಸ್ ಆಗಲಿದೆ.

    ಬೇಬಿ ಸಿನಿಮಾದಲ್ಲಿ ವೈಷ್ಣವಿ(Vaishnavi Chaitanya) -ಆನಂದ್ ಮೋಡಿ ಮಾಡಿದ ಹಾಗೆಯೇ ಹೊಸ ಚಿತ್ರದಲ್ಲೂ ಗೆದ್ದು ಬೀಗುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾವಿ ಪತಿ, ಮದುವೆ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ‘ಬೇಬಿ’ ನಟಿ

    ಭಾವಿ ಪತಿ, ಮದುವೆ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ‘ಬೇಬಿ’ ನಟಿ

    ‘ಬೇಬಿ’ (Baby) ಸಿನಿಮಾದ ಮೂಲಕ ತೆಲುಗಿನ ಲೇಟೆಸ್ಟ್ ಕ್ರಶ್ ಆಗಿ ಸದ್ದು ಮಾಡುತ್ತಿರುವ ವೈಷ್ಣವಿ ಚೈತನ್ಯ (Vaishnavi Chaitanya) ಇದೀಗ ತನ್ನ ಭಾವಿ ಪತಿ, ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಸಂದರ್ಶನ ಮಾತುಗಳು ಸಖತ್ ವೈರಲ್ ಆಗುತ್ತಿವೆ.

    ಆನಂದ್ ದೇವರಕೊಂಡ(Anand Devarakonda), ವಿರಾಜ್‌ಗೆ (Viraj) ನಾಯಕಿಯಾಗುವ (Heroine) ಮೂಲಕ ‘ಬೇಬಿ’ ಚಿತ್ರದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ ನಟಿ ವೈಷ್ಣವಿ ಚೈತನ್ಯ ತಮ್ಮ ಮದುವೆಯ ಬಗ್ಗೆ ಮೌನ ಮುರಿದ್ದಾರೆ. ಭಾವಿ ಪತಿ ಹೇಗಿರಬೇಕು ಎಂದು ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ನಟಿ, ಭಾವಿ ಗಂಡನ ಬಗ್ಗೆ ಹೆಚ್ಚಿನ ನಿರೀಕ್ಷೆ ಇಲ್ಲ. ಯಾವುದೇ ಐಶ್ವರ್ಯ ಮತ್ತು ಸೌಂದರ್ಯ ಇಲ್ಲದೇ ಇದ್ರೂ ಪರ್ವಾಗಿಲ್ಲ. ಒಳ್ಳೆಯ ಮನಸಿದ್ದರೆ ಸಾಕು ಎಂದು ಹೇಳಿದ್ದಾರೆ.

    ವೈಷ್ಣವಿ ಮಾತು ಕೇಳಿ ಪಡ್ಡೆಹುಡುಗರ ಬಾಯಿಗೆ ಸಕ್ಕರೆ ಹಾಕಿದಂತೆ ಆಗಿದೆ. ನಟಿಯ ಸರಳತೆಗೆ ಅಭಿಮಾನಿಗಳು ಭೇಷ್ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:‘ಛೂಮಂತರ್’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದ ರವಿಚಂದ್ರನ್

    ಟಿಕ್ ಟಾಕ್, ರೀಲ್ಸ್ ಮಾಡುತ್ತಿದ್ದ ನಟಿ, ಕಿರುಚಿತ್ರಗಳು, ಕವರ್ ಸಾಂಗ್ಸ್ ಮೂಲಕ ನಟನೆಗೆ ಕಾಲಿಟ್ಟರು. ಬಳಿಕ ಸ್ಟಾರ್ ನಟರ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನ ಮಾಡುತ್ತಿದ್ದರು. ಬಳಿಕ ಬೇಬಿ (Baby Film) ಚಿತ್ರಕ್ಕೆ ನಾಯಕಿಯಾಗಿ ಗೆದ್ದು ಬೀಗಿದ್ದರು. ಇದೀಗ ರಾಮ್‌ ಪೋತಿನೇನಿ (Ram Pothineni) ಮುಂದಿನ ಚಿತ್ರಕ್ಕೆ ವೈಷ್ಣವಿ ನಾಯಕಿಯಾಗಿ ಸೆಲೆಕ್ಟ್‌ ಆಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರೀಲೀಲಾಗೆ ಸೆಡ್ಡು ಹೊಡೆದ ವೈಷ್ಣವಿ- ‘ಬೇಬಿ’ ನಾಯಕಿಗೆ ಬಂಪರ್ ಆಫರ್ಸ್

    ಶ್ರೀಲೀಲಾಗೆ ಸೆಡ್ಡು ಹೊಡೆದ ವೈಷ್ಣವಿ- ‘ಬೇಬಿ’ ನಾಯಕಿಗೆ ಬಂಪರ್ ಆಫರ್ಸ್

    ಟಾಲಿವುಡ್ (Tollywood) ಅಂಗಳದಲ್ಲಿ ತೆಲುಗು ಅಮ್ಮಾಯಿ ನಟಿ ವೈಷ್ಣವಿ ಚೈತನ್ಯ (Vaishnavi Chaitanya) ಹವಾ ಶುರುವಾಗಿದೆ. ‘ಬೇಬಿ’ (Baby Film) ಸಿನಿಮಾದ ಸಕ್ಸಸ್ ನಂತರ ನಾಯಕಿ ವೈಷ್ಣವಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಸಾಲು ಸಾಲು ಸಿನಿಮಾಗಳ ಭರ್ಜರಿ ಆಫರ್ ಬಾಚಿಕೊಳ್ತಿದ್ದ ನಟಿ ಶ್ರೀಲೀಲಾಗೆ ವೈಷ್ಣವಿ ಸೆಡ್ಡು ಹೊಡೆದಿದ್ದಾರೆ. ಇದನ್ನೂ ಓದಿ:ಅಮ್ಮನ ಜೊತೆ ಅಮರನಾಥ ಯಾತ್ರೆಯಲ್ಲಿ ಸಾನ್ಯ ಅಯ್ಯರ್

    ರಶ್ಮಿಕಾ ಮಂದಣ್ಣಗೆ (Rashmika Mandanna) ಪೈಪೋಟಿ ನೀಡಿ ಭರಾಟೆ ಬ್ಯೂಟಿ ಶ್ರೀಲೀಲಾ (Sreeleela) ತೆಲುಗಿನಲ್ಲಿ ಬಂಪರ್ ಅವಕಾಶಗಳನ್ನ ಬಾಚಿಕೊಳ್ತಿದ್ದರು. ಪೆಳ್ಳಿ ಸಂದಡಿ, ಧಮಾಕ (Dhamaka) ಸಿನಿಮಾದ ನಂತರ ಶ್ರೀಲೀಲಾ ನಟನೆ, ಡ್ಯಾನ್ಸ್ ನೋಡಿ ಫಿದಾ ಆದರು. ರಶ್ಮಿಕಾ ಕೈಬಿಟ್ಟ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗುವ ಮೂಲಕ ಠಕ್ಕರ್ ಕೊಟ್ಟಿದ್ರು. ಈಗ ಶ್ರೀಲೀಲಾ ಆಟಕ್ಕೆಲ್ಲಾ ಬ್ರೇಕ್ ಬೀಳುವ ಸಮಯ ಬಂತಾ ಅಂತಾ ಗುಸು ಗುಸು ಟಾಲಿವುಡ್‌ನಲ್ಲಿ ಶುರುವಾಗಿದೆ.

    ಅದಕ್ಕೆಲ್ಲಾ ಕಾರಣ ‘ಬೇಬಿ’ ಸಿನಿಮಾದ ಸಕ್ಸಸ್. ಹೌದು, ಆನಂದ ದೇವರಕೊಂಡ (Anand Devarakonda) ಮತ್ತು ವಿರಾಜ್‌ಗೆ ನಾಯಕಿಯಾಗುವ ಮೂಲಕ ವೈಷ್ಣವಿ ಚೈತನ್ಯ ಅದ್ಭುತವಾಗಿ ನಟಿಸಿದ್ದಾರೆ. ಇತ್ತೀಚಿಗೆ ತೆರೆಕಂಡ ‘ಬೇಬಿ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡ್ತಿದೆ. ಸಿನಿಮಾ ಕಂಟೆಂಟ್ ಮತ್ತು ಪ್ರಮುಖ ಪಾತ್ರಧಾರಿಗಳ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲು ಅರ್ಜುನ್ ಅವರು ಅಂದಿರುವ ಅಂದಿನ ಮಾತು ನಿಜವಾಗುವ ಕಾಲ ಬಂದಿದೆ. ತೆಲುಗು ಸಿನಿಮಾರಂಗದಲ್ಲಿ ಮೊದಲು ತೆಲುಗಿನ ನಟಿಯರು ಸದ್ದು ಮಾಡುವಂತೆ ಆಗಲಿ ಎಂದಿದ್ದರು. ಅದನ್ನ ನಿರ್ಮಾಪಕರು ಕೂಡ ಕೊಂಚ ಸೀರಿಯಸ್ ಆಗಿ ತೆಗೆದುಕೊಂಡಂತಿದೆ.

    ಇತ್ತೀಚಿಗೆ ‘ಬೇಬಿ’ ಸಿನಿಮಾ ಸಕ್ಸಸ್ ಸಮಾರಂಭದಲ್ಲಿ ಅಲ್ಲು ಅರ್ಜುನ್ (Allu Arjun) ಸತ್ಯವನ್ನೇ ಹೇಳಿದ್ದಾರೆ. ಒಬ್ಬ ತೆಲುಗು ಸ್ಟಾರ್ ತೆಲುಗು ನೆಲದಲ್ಲಿ ನಿಂತು ಏನು ಮಾತಾಡಬೇಕೊ ಅದನ್ನೇ ನುಡಿದಿದ್ದಾರೆ. ಕನ್ನಡ ನಟಿಯರನ್ನು ಕಂಡರೆ ಅವರಿಗೆ ಹೊಟ್ಟೆ ಉರಿ ಇದೆ ಎನ್ನುವುದು ಸತ್ಯ. ಅದು ಈಗ ಅವರಿಗೆ ಮಾತ್ರ ಅಲ್ಲ ಇಡೀ ಟಾಲಿವುಡ್ ಸಿನಿಮಾರಂಗಕ್ಕೆ ನುಂಗಲಾರದ ತುಪ್ಪ. ಬೇರೆ ಸ್ಟಾರ್ಸ್, ನಿರ್ಮಾಪಕರು, ನಿರ್ದೇಶಕರು ಈ ಬಗ್ಗೆ ಮಾತನಾಡಿಲ್ಲ. ಅಲ್ಲು ಅರ್ಜುನ್ ಕೆಂಡದ ಮೇಲಿನ ಬೂದಿಯನ್ನು ಸರಿಸಿದ್ದಾರೆ ಅಷ್ಟೇ. ಅದೇ ಸತ್ಯ. ಈಗ ಅವರು ಹೇಳಿರುವುದು ಏನು? ನಮ್ಮ ನೆಲದಲ್ಲಿ ಕನ್ನಡದ ನಟಿಯರು, ಪರಭಾಷಾ ನಾಯಕಿಯರು ಬೆಳೆಯುತ್ತಿದ್ದಾರೆ. ಅದರ ಬದಲು ನಮ್ಮ ತೆಲುಗು ಹುಡುಗಿಯರು ಬಣ್ಣದ ಲೋಕಕ್ಕೆ ಬರಬೇಕು ಮಿಂಚಬೇಕು ಎಂದು ಮಾತನಾಡಿದ್ದರು.

    ನಮ್ಮ ಭಾಷೆ ನಮ್ಮ ನೆಲದ ಹೆಣ್ಣು ಮಕ್ಕಳು ಬೆಳೆಯಬೇಕು. ಉಳಿಯಬೇಕು. ಕನ್ನಡ ನಟಿಯರ ದರ್ಬಾರ್ ಇದೇ ರೀತಿ ಮುಂದುವರೆದರೆ ನಮ್ಮ ಹುಡುಗಿಯರಿಗೆ ಉಳಿಗಾಲ ಇಲ್ಲ ಎನ್ನುವ ಕಾಳಜಿಯೂ ಇದರಲ್ಲಿ ಸೇರಿದೆ. ಫೈನಲಿ ಇಷ್ಟೆಲ್ಲ ಕಾರಣ ಇಟ್ಟುಕೊಂಡು ಅಲ್ಲು ಅರ್ಜುನ್ ಬಾಯಿ ಬಿಟ್ಟಿದ್ದರು.

    ಶ್ರೀಲೀಲಾ ಹತ್ತಕ್ಕೂ ಹೆಚ್ಚು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಡೇಟ್ಸ್ ಸಿಗದೇ ಕೆಲ ನಿರ್ಮಾಪಕರು ವೈಷ್ಣವಿ ಚೈತನ್ಯ ಅವರತ್ತ ಮುಖ ಮಾಡಿದ್ದಾರೆ. ಬೇಬಿ ಸಿನಿಮಾದಲ್ಲಿ ವೈಷ್ಣವಿ ಅವರನ್ನ ನೋಡಿ ಪಡ್ಡೆಹುಡುಗರು ಬೋಲ್ಡ್ ಆಗಿದ್ದಾರೆ. ಬೇಬಿ ನಾಯಕಿಗೆ ಈಗ ಭರ್ಜರಿ ಅವಕಾಶ ಸಿಕ್ತಿದೆ. ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ವೈಷ್ಣವಿ ಕಿರುಚಿತ್ರಗಳ ಮೂಲಕ ಮೊದಲಿಗೆ ಕ್ಯಾಮೆರಾ ಫೇಸ್ ಮಾಡಿದ್ದರು. ಕಿರುಚಿತ್ರದಿಂದ ದೊಡ್ಡ ಚಿತ್ರಕ್ಕೆ ಕೆಲಸ ಮಾಡಲು ಎಂಟು ವರ್ಷ ಬೇಕಾಯಿತು. ವೈಷ್ಣವಿ ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಪುರಂನಲ್ಲಿ’ ಅಲ್ಲು ಅರ್ಜುನ್ ಅವರ ತಂಗಿ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರ ಅಭಿನಯಕ್ಕೆ ಮೆಚ್ಚುಗೆ ಬಂದಿತ್ತು.

    ‘ಬೇಬಿ’ ಸಿನಿಮಾದ ಯಶಸ್ಸಿನ ನಂತರ ವೈಷ್ಣವಿ ಚೈತನ್ಯ ಅವರು ರಾಮ್ ಪೊತಿನೇನಿ-ಪುರಿ ಜಗನ್ನಾಥ್ ಕಾಂಬೋ ಸಿನಿಮಾಗೆ ನಾಯಕಿಯಾಗಿದ್ದಾರೆ. ಯುವ ನಟರ ಸಿನಿಮಾಗಳಿಗೆ ಬೇಬಿ ನಾಯಕಿ ಬುಕ್ ಆಗ್ತಿದ್ದಾರೆ. ಈ ಮೂಲಕ ಶ್ರೀಲೀಲಾಗೆ ವೈಷ್ಣವಿ ಸೆಡ್ಡು ಹೊಡೆದಿದ್ದಾರೆ. ಇನ್ಮುಂದೆ ಶ್ರೀಲೀಲಾ- ವೈಷ್ಣವಿ ಜಟಾಪಟಿ ಹೇಗಿರಲಿದೆ, ಏನಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟಾಲಿವುಡ್‌ನಲ್ಲಿ ಕನ್ನಡತಿಯರ ದರ್ಬಾರ್- ತೆಲುಗು ನಟಿಯರ ಬಗ್ಗೆ ಅಲ್ಲು ಅರ್ಜುನ್ ಬೇಸರ

    ಟಾಲಿವುಡ್‌ನಲ್ಲಿ ಕನ್ನಡತಿಯರ ದರ್ಬಾರ್- ತೆಲುಗು ನಟಿಯರ ಬಗ್ಗೆ ಅಲ್ಲು ಅರ್ಜುನ್ ಬೇಸರ

    ತೆಲುಗು ಸಿನಿಮಾರಂಗದಲ್ಲಿ ಸದ್ಯ ಆನಂದ್ ದೇವರಕೊಂಡ, ವೈಷವಿ, ವಿರಾಜ್ ನಟನೆಯ ಬೇಬಿ ಸಿನಿಮಾದ ಹವಾ ಜೋರಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದೀಗ ‘ಬೇಬಿ’ (Baby) ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮಕ್ಕೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಸಾಥ್ ನೀಡಿದ್ದಾರೆ. ಜೊತೆಗೆ ನಮ್ಮ ಟಾಲಿವುಡ್‌ನಲ್ಲಿ ತೆಲುಗು ನಟಿಯರ ಬೆಳವಣಿಗೆ ಕಮ್ಮಿಯಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.

    ‘ಪುಷ್ಪ’ (Pushpa) ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ನಟನಾಗಿ ಮಿಂಚ್ತಿರೋ ಅಲ್ಲು ಅರ್ಜುನ್ ಅವರು ಇತ್ತೀಚಿಗೆ ‘ಬೇಬಿʼ  ಸಕ್ಸಸ್ ಮೀಟ್‌ಗೆ ಸಾಥ್ ನೀಡಿ, ಇಡೀ ಚಿತ್ರತಂಡಕ್ಕೆ ಶುಭಕೋರಿದ್ದರು. ಸಿನಿಮಾದ ಕಥೆ, ನಿರ್ದೇಶನ- ಆನಂದ್, ವೈಷ್ಣವಿ, ವಿರಾಜ್ ಪ್ರಮುಖ ಪಾತ್ರಧಾರಿಗಳ ನಟನೆಗೆ ಭೇಷ್ ಎಂದು ಹೊಗಳಿದ್ದರು. ಇದನ್ನೂ ಓದಿ:ದುಬೈನಲ್ಲಿ ಬಿಗ್ ಬಾಸ್ ದೀಪಿಕಾ ದಾಸ್ ಮೋಜು-ಮಸ್ತಿ

    ಇನ್ನೂ ನಾಯಕಿ ವೈಷ್ಣವಿ ಚೈತನ್ಯ ಅವರು ಬೇಬಿ ಸಿನಿಮಾದಲ್ಲಿನ ನಟನೆಗೆ ಹಾಡಿ ಹೊಗಳಿದ್ದಾರೆ. ಈ ಹಿಂದೆ ‘ಅಲ್ಲಾ ವೈಕುಂಠಪುರಮಲ್ಲೋ’ ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ತಂಗಿಯಾಗಿ ವೈಷ್ಣವಿ ನಟಿಸಿದ್ದರು. ವೈಷ್ಣವಿ ಬೆಳವಣಿಗೆ ಬಗ್ಗೆ ಐಕಾನ್ ಸ್ಟಾರ್ ಹೆಮ್ಮೆಯಿಂದ ಮಾತನಾಡಿದ್ದರು. ‘ಬೇಬಿʼ ಸಿನಿಮಾದ ನಿಮ್ಮ ನಟನೆಗೆ ಖಂಡಿತವಾಗಿಯೂ ಬೆಸ್ಟ್ ಹೀರೋಯಿನ್ ಅವಾರ್ಡ್ ಬರುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

    ಇತ್ತೀಚಿಗೆ ನಾನು ಪ್ರಶಸ್ತಿ ಸಮಾರಂಭಕ್ಕೆ ಹೋಗಿದ್ದೆ, ಅಲ್ಲಿ ಆಯಾ ಭಾಷಾ ನಾಯಕಿಯರು ಬೆಸ್ಟ್ ನಾಯಕಿ ಅವಾರ್ಡ್ ಪಡೆಯುತ್ತಿದ್ದರು. ನಮ್ಮ ತೆಲುಗಿನಿಂದ ತೆಲುಗು ನಟಿಯರೇ ಇಲ್ಲದಂತೆ ಭಾಸವಾಗಿತ್ತು. ಟಾಲಿವುಡ್ ಚಿತ್ರರಂಗ ಫಾಸ್ಟ್ ಬೆಳಯುತ್ತಿರುವ ಇಂಡಸ್ಟ್ರಿ, ನಮ್ಮ ತೆಲುಗಿನಲ್ಲಿ ಕಡಿಮೆ ಅವಧಿಯಲ್ಲಿ ರಶ್ಮಿಕಾ(Rashmika)- ಶ್ರೀಲೀಲಾ (Sreeleela) ಅಂತಹ ನಾಯಕಿಯರು ಗುರುತಿಸಿಕೊಳ್ಳುತ್ತಿದ್ದಾರೆ. ಅಪ್ಪಟ ತೆಲುಗಿನ ನಟಿಯರು ಕೂಡ ಗುರುತಿಸಿಕೊಳ್ಳಬೇಕು ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ನಮ್ಮ ನೆಲದಲ್ಲಿ ನಮ್ಮ ನಟಿಯರು ಬೆಳೆಯಬೇಕು. ಹೆಣ್ಣು ಮಕ್ಕಳು ಬೆಳೆಯಲು ಕುಟುಂಬದವರು ಕೂಡ ಸಾಥ್ ನೀಡಬೇಕು ಎಂದು ನಟ ಕಿವಿ ಮಾತು ಹೇಳಿದ್ದಾರೆ. ಜೊತೆಗೆ ಕನ್ನಡತಿಯರ ದರ್ಬಾರ್‌ಗೆ ತೆಲುಗು ನಟಿಯರಿಗೆ ಐಕಾನ್ ಸ್ಟಾರ್ ಬುಲಾವ್ ಹೇಳಿದ್ದಾರೆ.

    ಇನ್ನೂ ರಶ್ಮಿಕಾ ಮಂದಣ್ಣ- ಶ್ರೀಲೀಲಾ ಇಬ್ಬರು ಕನ್ನಡದವರು. ಕನ್ನಡ ಸಿನಿಮಾದಿಂದ ಪರಿಚಿತರಾಗಿ, ತೆಲುಗಿನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡವರು. ರಶ್ಮಿಕಾ, ತೆಲುಗು ಸಿನಿಮಾದಿಂದ ಪ್ಯಾನ್‌ ಇಂಡಿಯಾ ಸ್ಟಾರ್‌ ನಟಿ ಗುರುತಿಸಿಕೊಳ್ಳುತ್ತಿದ್ದರೆ, ಶ್ರೀಲೀಲಾ ಅವರು ತೆಲುಗಿನ 10ಕ್ಕೂ ಹೆಚ್ಚ ಸಿನಿಮಾಗಳಿಗೆ ನಾಯಕಿಯಾಗಿದ್ದಾರೆ. ಹಾಗಾಗಿ ಅಲ್ಲು ಅರ್ಜುನ್‌ ಅವರು ಈ ಬಗ್ಗೆ ಮಾತನಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಭಿಮಾನಿ ವರ್ತನೆಗೆ ಬೆಚ್ಚಿಬಿದ್ದ ವಿಜಯ್ ದೇವರಕೊಂಡ

    ಅಭಿಮಾನಿ ವರ್ತನೆಗೆ ಬೆಚ್ಚಿಬಿದ್ದ ವಿಜಯ್ ದೇವರಕೊಂಡ

    ಟಾಲಿವುಡ್‌ನಲ್ಲಿ (Tollywood) ಸದ್ಯ ಗಮನ ಸೆಳೆಯುತ್ತಿರುವ ಸಿನಿಮಾ ಅಂದರೆ ಆನಂದ್ ದೇವರಕೊಂಡ(Anand Devarakonda) ನಟನೆಯ ‘ಬೇಬಿ’ ಸಿನಿಮಾ. ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್, ಸಹೋದರ ಆನಂದ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಈ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಭಾಗಿಯಾಗಿರುವ ವಿಜಯ್ ದೇವರಕೊಂಡಗೆ (Vijay Devarakonda) ಶಾಕ್ ಆಗಿದೆ. ಅಭಿಮಾನಿಯ ವರ್ತನೆ ನೋಡಿ ಆತಂಕಗೊಂಡಿದ್ದಾರೆ.

    ಆನಂದ್ ದೇವರಕೊಂಡ, ವೈಷ್ಣವಿ ಚೈತನ್ಯ, ವಿರಾಜ್ ಅಶ್ವೀನ್ ನಟನೆಯ ‘ಬೇಬಿ’ (Baby Film) ಸಿನಿಮಾ ಜುಲೈ 14ಕ್ಕೆ ತೆರೆ ಕಂಡಿತ್ತು. ಪ್ರೀತಿಯಲ್ಲಿನ ಎಮೋಷನ್ಸ್, ಬ್ರೇಕಪ್ ಕಥೆಯನ್ನ ನಿರ್ದೇಶಕರು ಅದ್ಬುತವಾಗಿ ತೋರಿಸಿದ್ದಾರೆ. ಈಗಿನ ಜನರೇಷನ್‌ಗೆ ಕನೆಕ್ಟ್ ಆಗುವ ಹಾಗಿದೆ ಈ ಕಥೆ. ಹಾಗಾಗಿ ಬೇಬಿ ಸಿನಿಮಾ ಸದ್ಯ ಸಕ್ಸಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದನ್ನೂ ಓದಿ:ವಾಸುಕಿ ವೈಭವ್ ಮತ್ತು ಐಶ್ವರ್ಯ ರಂಗರಾಜನ್ ಕಂಠದಲ್ಲಿ ‘ಸಂಜು’ ಸಾಂಗ್

    ತಮ್ಮ ಆನಂದ್ ದೇವರಕೊಂಡ (Anand Devarakonda) ಸಿನಿಮಾ ಸಕ್ಸಸ್ ಮೀಟ್‌ಗೆ ವಿಜಯ್ ದೇವರಕೊಂಡ ಅತಿಥಿಯಾಗಿ ಭಾಗವಹಿಸಿದ್ದರು. ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯವನ್ನ ನಟ ಹಂಚಿಕೊಳ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ವೇದಿಕೆ ಮೇಲೆ ಹತ್ತಿ ಅವರ ಪಾದ ಮುಟ್ಟಲು ಯತ್ನಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಜಯ್ ವೇದಿಕೆ ಮೇಲೆ ಮಾತನಾಡುತ್ತಿದ್ದಾಗ, ಅಭಿಮಾನಿಯೊಬ್ಬ ಓಡುತ್ತಲೇ ವೇದಿಕೆ ಏರಿದ್ದಾರೆ. ಸಡನ್ ಬಂದಿರೋ ರೀತಿ ವಿಜಯ್ ಶಾಕ್ ಆಗಿದ್ದಾರೆ. ಕಾಲು ಮುಟ್ಟಲು ಬಂದ ಅಭಿಮಾನಿಗೆ, ಕಾಲಿಗೆ ಬೀಳದಂತೆ ಪಕ್ಕಕ್ಕೆ ಓಡಿದ್ದಾರೆ. ಅಷ್ಟರಲ್ಲಿ ಅಲ್ಲಿನ ಸಿಬ್ಬಂದಿ ಗಮನ ಹರಿಸಿ, ಆ ಅಭಿಮಾನಿಯನ್ನು (Fan) ಹಿಡಿದುಕೊಂಡು ತೆರಳಿದ್ದಾರೆ.

    ಇನ್ನೂ ಈ ಸಿನಿಮಾದ ಪ್ರಿ-ರಿಲೀಸ್ ಈವೆಂಟ್ ಮತ್ತು ಸೆಲೆಬ್ರಿಟಿ ಶೋಗೆ ಸಾಥ್ ನೀಡಿದ್ದ ರಶ್ಮಿಕಾ ಮಂದಣ್ಣ (Rashmika Mandanna) ಅವರು ‘ಬೇಬಿ’ ಸಿನಿಮಾ ನೋಡಿ ಭಾವುಕರಾಗಿದ್ದರು. ಸಿನಿಮಾ ಕಂಟೆಂಟ್, ನಟನೆ ನೋಡಿ ಮೆಚ್ಚಿಕೊಂಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]