Tag: baby bump photoshoot

  • ಸಂಕ್ರಾಂತಿಯಂದು ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ರಾಮ್ ಚರಣ್ ಪತ್ನಿ ಉಪಾಸನಾ

    ಸಂಕ್ರಾಂತಿಯಂದು ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ರಾಮ್ ಚರಣ್ ಪತ್ನಿ ಉಪಾಸನಾ

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಇತ್ತೀಚೆಗೆ ಜ್ಯೂ.ರಾಮ್ ಚರಣ್ ಆಗಮನದ ಬಗ್ಗೆ ಚಿರಂಜೀವಿ ತಿಳಿಸಿದ್ದರು. ಇದೀಗ ಈ ಬೆನ್ನಲ್ಲೇ ರಾಮ್ ಚರಣ್ ಪತ್ನಿ ಉಪಾಸನಾ  ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೇಬಿ ಬಂಪ್ ಫೋಟೋಶೂಟ್ ಮೂಲಕ ಹಬ್ಬಕ್ಕೆ ಶುಭಕೋರಿದ್ದಾರೆ.

    ಒಂದು ಕಡೆ `ಆರ್‌ಆರ್‌ಆರ್’ (Rrr Film)  ಚಿತ್ರದ ಸಂಗೀತಕ್ಕೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿರುವ ಸಂಭ್ರಮ, ಇನ್ನೊಂದು ಕಡೆ ಮನೆಗೆ ಪುಟ್ಟ ಮಗುವಿನ ಆಗಮನದ ಖುಷಿಯ ನಡುವೆ ಸಂಕ್ರಾಂತಿ ಹಬ್ಬವನ್ನು ಸ್ಪೆಷಲ್ ಆಗಿ ರಾಮ್ ಚರಣ್ ದಂಪತಿ ಆಚರಿಸಿದ್ದಾರೆ. ಈ ವೇಳೆ ರಾಮ್ ಪತ್ನಿ ಉಪಾಸನಾ ಚೆಂದದ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. ಇದನ್ನೂ ಓದಿ: `ವಾರಿಸು’ ನಟಿ ರಶ್ಮಿಕಾ ಹಾಡಿಗೆ ತಾಯಿ ಗರ್ಭದಲ್ಲಿರುವ ಮಗು ಡ್ಯಾನ್ಸ್!

    ಬೇಬಿ ಬಂಪ್ ಫೋಟೋಸ್ ಹಂಚಿಕೊಂಡ ಉಪಾಸನಾ, ನನಗೆ ಈ ಸಂಕ್ರಾಂತಿ ಮಾತೃತ್ವ ಮತ್ತು ಹೊಸ ಆರಂಭವನ್ನು ಆಚರಿಸುವ ಅವಕಾಶ ಕೊಟ್ಟಿದೆ ಎಂದು  ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದಿದ್ದಾರೆ. ಸಂಕ್ರಾಂತಿಯ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ.

    ರಾಮ್ ಚರಣ್ ಪತ್ನಿ ಉಪಾಸನಾ ಅವರು ಹೊಸ ಫೋಟೋನಲ್ಲಿ ಪ್ರೆಗ್ನೆನ್ಸಿ ಗ್ಲೋ ಕಾಣಬಹುದು. ಉಪಾಸನಾ ಅವರ ನಯಾ ಫೋಟೋಸ್ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೇಬಿ ಬಂಪ್ ಫೋಟೋಶೂಟ್‌ನಲ್ಲಿ `ನೀಲಕಂಠ’ ನಟಿ ನಮಿತಾ ಫುಲ್ ಮಿಂಚಿಂಗ್

    ಬೇಬಿ ಬಂಪ್ ಫೋಟೋಶೂಟ್‌ನಲ್ಲಿ `ನೀಲಕಂಠ’ ನಟಿ ನಮಿತಾ ಫುಲ್ ಮಿಂಚಿಂಗ್

    ಸೌತ್‌ನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಾಯಕಿ ನಮಿತಾ, ಕನ್ನಡ ಸಿನಿಮಾಗಳಿಂದ ಕೂಡ ಕನ್ನಡ ಸಿನಿಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸದ್ಯ ತಾಯ್ತನದ ಖುಷಿಯ ಕ್ಷಣಗಳನ್ನ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ನಮಿತಾ ಸೀಮಂತದ ಶಾಸ್ತ್ರದ ಸಂಭ್ರಮ ಅದ್ದೂರಿಯಾಗಿ ನೆರವೇರಿತ್ತು. ಈಗ ನಟಿಯ ಬೇಬಿ ಬಂಪ್ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಕನ್ನಡದ `ನೀಲಕಂಠ’ ಮತ್ತು `ಹೂ’ ಚಿತ್ರದಲ್ಲಿ ರವಿಚಂದ್ರನ್ ಜತೆ ನಮಿತಾ ಡ್ಯುಯೇಟ್ ಹಾಡಿದ್ದರು. ಹಾಗಾಗಿ ಕನ್ನಡ ಸಿನಿಪ್ರೇಕ್ಷಕರ ಮನದಲ್ಲಿ ನಮಿತಾ ಸ್ಥಾನ ಗಿಟ್ಟಿಸಿಕೊಂಡರು. ಚಿತ್ರರಂಗ ಜತೆ ರಾಜಕೀಯ ರಂಗದಲ್ಲೂ ನಮಿತಾ ಗುರುತಿಸಿಕೊಂಡಿದ್ದಾರೆ. ಬಳಿಕ 2017ರಲ್ಲಿ ಉದ್ಯಮಿ ವೀರೇಂದ್ರ ಚೌಧರಿ ಜತೆ ಹಸೆಮಣೆ ಏರಿದ್ದರು. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದಂದು ತಾವು ತಾಯಿಯಾಗುತ್ತಿರುವ ವಿಚಾರವನ್ನು ನಮಿತಾ ಹೇಳಿಕೊಂಡಿದ್ದರು. ಇದನ್ನೂ ಓದಿ: ಯಾವ ಫೈವ್‌ಸ್ಟಾರ್ ಹೋಟೆಲ್‌ಗೂ ಕಮ್ಮಿಯಿಲ್ಲ ಶಿಲ್ಪಾ ಶೆಟ್ಟಿಯ ವ್ಯಾನಿಟಿ ವ್ಯಾನ್

     

    View this post on Instagram

     

    A post shared by Raavanan (@raavananphotography)

    ಇತ್ತೀಚೆಗಷ್ಟೇ ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದ ನಮಿತಾ ಅವರ ಹೊಸ ಬೇಬಿ ಬಂಪ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ತಿಳಿ ನೇರಳೆ ಬಣ್ಣದ ಡ್ರೆಸ್‌ನಲ್ಲಿ ನಮಿತಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ಇನ್ನು ಮದುವೆಯ ಬಳಿಕವೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದ ಬಹುಭಾಷಾ ನಟಿ ನಮಿತಾ ಈಗ ಹೊಸ ಅತಿಥಿಯ ಬರುವಿಕೆಯ ಖುಷಿಯಲ್ಲಿದ್ದಾರೆ. ತುಂಬು ಗರ್ಭೀಣಿಯಾಗಿರುವ ನಟಿ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಸದ್ಯ ಬೇಬಿ ಬಂಪ್ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ `ನೀಲಕಂಠ’ ನಟಿ ನಮಿತಾ

    ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ `ನೀಲಕಂಠ’ ನಟಿ ನಮಿತಾ

    ಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಾಯಕಿ ನಮಿತಾ, ಕನ್ನಡ ಸಿನಿಮಾಗಳಿಂದ ಕೂಡ ಕನ್ನಡ ಸಿನಿಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸದ್ಯ ತಾಯ್ತನದ ಖುಷಿಯ ಕ್ಷಣಗಳನ್ನ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ನಮಿತಾ ಸೀಮಂತದ ಶಾಸ್ತ್ರದ ಸಂಭ್ರಮ ಅದ್ದೂರಿಯಾಗಿ ನೆರವೇರಿತ್ತು. ಈಗ ನಟಿಯ ಬೇಬಿ ಬಂಪ್ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ತೆಲುಗು, ತಮಿಳು ಸಿನಿಮಾಗಳ ಜತೆ ಕನ್ನಡದ `ನೀಲಕಂಠ’ ಮತ್ತು `ಹೂ’ ಚಿತ್ರದಲ್ಲಿ ರವಿಚಂದ್ರನ್ ಜತೆ ನಮಿತಾ ಡ್ಯುಯೇಟ್ ಹಾಡಿದ್ದರು. ಹಾಗಾಗಿ ಕನ್ನಡ ಸಿನಿಪ್ರೇಕ್ಷಕರ ಮನದಲ್ಲಿ ನಮಿತಾ ಸ್ಥಾನ ಗಿಟ್ಟಿಸಿಕೊಂಡರು. ಚಿತ್ರರಂಗ ಜತೆ ರಾಜಕೀಯ ರಂಗದಲ್ಲೂ ನಮಿತಾ ಗುರುತಿಸಿಕೊಂಡಿದ್ದಾರೆ. ಬಳಿಕ 2017ರಲ್ಲಿ ಉದ್ಯಮಿ ವೀರೇಂದ್ರ ಚೌಧರಿ ಜತೆ ಹಸೆಮಣೆ ಏರಿದ್ದರು.

    ಇತ್ತೀಚೆಗೆ ತಮ್ಮ ಹುಟ್ಟುಹಬ್ಬದಂದು ತಾವು ತಾಯಿಯಾಗುತ್ತಿರುವ ವಿಚಾರವನ್ನು ನಮಿತಾ ಹೇಳಿಕೊಂಡಿದ್ದರು. ಈಗ ಸೀಮಂತ ಶಾಸ್ತ್ರದ ಸಂಭ್ರಮದಲ್ಲಿದ್ದಾರೆ. ಸೀಮಂತದಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಸೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದ ನಮಿತಾ ಅವರ ಬೇಬಿ ಬಂಪ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬ್ಲ್ಯಾಕ್‌ ಕಲರ್‌ ಸೀರೆಯಲ್ಲಿ ಇನ್ನು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‍ವುಡ್ ನಟಿಯ ಸ್ನೇಹಿತ ವಂಚನೆ ಕೇಸಲ್ಲಿ ಅರೆಸ್ಟ್

    ಇನ್ನು ಮದುವೆಯ ಬಳಿಕವೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದ ಬಹುಭಾಷಾ ನಟಿ ನಮಿತಾ ಈಗ ಹೊಸ ಅತಿಥಿಯ ಬರುವಿಕೆಯ ಖುಷಿಯಲ್ಲಿದ್ದಾರೆ. ತುಂಬು ಗರ್ಭೀಣಿಯಾಗಿರುವ ನಟಿ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಸದ್ಯ ಬೇಬಿ ಬಂಪ್ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹುಟ್ಟುಹಬ್ಬದಂದು ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸೋನಮ್ ಕಪೂರ್ ಮಿಂಚಿಂಗ್

    ಹುಟ್ಟುಹಬ್ಬದಂದು ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸೋನಮ್ ಕಪೂರ್ ಮಿಂಚಿಂಗ್

    ಬಾಲಿವುಡ್ ಬ್ಯೂಟಿ ಸೋನಮ್ ಕಪೂರ್ `ಸಾವರಿಯಾ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮದುವೆಯ ನಂತರವೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಸೋನಮ್ ವಿಶೇಷವಾಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    `ಸಾವರಿಯಾ’ ಚಿತ್ರದ ಮೂಲಕ ನಾಯಕಿಯಾಗಿ ಪಾದರ‍್ಪಣೆ ಮಾಡಿದ ನಟಿ, ಸಾಲು ಸಾಲು ೨೦ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2018ರಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಉದ್ಯಮಿ ಆನಂದ್ ಅಹುಜಾ ಅವರನ್ನು ಮದುವೆಯಾದರು. ಈಗ ತುಂಬು ರ‍್ಭಿಣಿಯಾಗಿರುವ ಸೋನಮ್ ಕಪೂರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 27ನೇ ವರ್ಷಕ್ಕೆ ಕಾಲಿಟ್ಟರೋ ನಟಿ ವಿಶೇಷವಾಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿದ್ದಾರೆ.‌ ಇದನ್ನೂ ಓದಿ: ಹಸೆಮಣೆ ಏರುವ ಕೆಲವೇ ನಿಮಿಷಗಳ ಹಿಂದೆ ಭಾವಿಪತ್ನಿ ನಯನತಾರಾ ಜೊತೆಗಿನ ರಹಸ್ಯ ಹಂಚಿಕೊಂಡ ನಿರ್ದೇಶಕ ವಿಘ್ನೇಶ್ ಶಿವನ್

     

    View this post on Instagram

     

    A post shared by Sonam Kapoor Ahuja (@sonamkapoor)

    ವೈಟ್ ಕಲರ್ ಡ್ರೆಸ್‌ನಲ್ಲಿ ತುಂಬಾ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗೆ ಸೋನಮ್ ನಯಾ ಲುಕ್ಕಿಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ತಾಯ್ತನದ ಖುಷಿಯಲ್ಲಿರುವ ಸೋನಮ್ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ.

  • ಮತ್ತೆ ಬೇಬಿ ಬಂಪ್ ಫೋಟೋ ಹಂಚಿಕೊಂಡ ಪ್ರಣಿತಾ ಸುಭಾಷ್

    ಮತ್ತೆ ಬೇಬಿ ಬಂಪ್ ಫೋಟೋ ಹಂಚಿಕೊಂಡ ಪ್ರಣಿತಾ ಸುಭಾಷ್

    ಹುಭಾಷಾ ನಟಿ ಪ್ರಣಿತಾ ಸುಭಾಷ್ ಸಿನಿಮಾರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡು ವಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಪತಿ ನಿತಿನ್ ಜತೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದರು. ಈಗ ಮತ್ತೊಂದು ಬೇಬಿ ಬಂಪ್ ಫೋಟೋ ಶೇರ್ ಮಾಡಿದ್ದಾರೆ.

    ಕನ್ನಡ ಚಿತ್ರದಿಂದ ಸಿನಿ ಕೆರಿಯರ್ ಶುರು ಮಾಡಿದ ನಟಿ ಪ್ರಣಿತಾ ಬಾಲಿವುಡ್‌ವರೆಗೂ ತಮ್ಮ ನಟನೆಯ ಛಾಪೂ ಮೂಡಿಸಿದ್ರು. ಈಗ ಮದುವೆ, ಸಂಸಾರ ಅಂತಾ ಬ್ಯುಸಿಯಾಗಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಪ್ರಣಿತಾ, ನೀರಿನಲ್ಲಿ ಕುಳಿತು ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಹೊಸ ಬೇಬಿ ಬಂಪ್ ಲುಕ್ ನೋಡುಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಕನ್ನಡದಲ್ಲೇ ಖುಷಿ ಹಂಚಿಕೊಂಡ ರಾ.. ರಾ.. ರಕ್ಕಮ್ಮ ಬೆಡಗಿ ಜಾಕ್ವಲಿನ್

    ಪ್ರಣಿತಾ ನಟನೆಯ `ರಾಮನ ಅವತಾರ’ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ. ಮಗುವಿನ ಆಗಮನದ ನಂತರ ಮತ್ತೆ ಪ್ರಣಿತಾ ನಟನೆಗೆ ಕಂಬ್ಯಾಕ್ ಮಾಡಲಿದ್ದಾರೆ. ಚಾಲೆಂಜಿಂಗ್ ಪಾತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ.

  • ಪತಿ ಜೊತೆ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ಪ್ರಣಿತಾ

    ಪತಿ ಜೊತೆ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ಪ್ರಣಿತಾ

    ಸ್ಯಾಂಡಲ್‌ವುಡ್ ಬ್ಯೂಟಿ ಪ್ರಣಿತಾ ಸುಭಾಷ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಸೀಮಂತದ ಸಂಭ್ರಮ ಫೋಟೋ ಮೂಲಕ ತಮ್ಮ ತಾಯ್ತನದ ಖುಷಿಯನ್ನ ಅಭಿಮಾನಿಗಳ ಜತೆ ಹಂಚಿಕೊಂಡಿದ್ದರು. ಪತಿ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡು ಬೇಬಿ ಬಂಪ್ ಫೋಟೋಶೂಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    `ಪೊರ್ಕಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಲಗ್ಗೆಯಿಟ್ಟ ಬ್ಯೂಟಿ ಪ್ರಣಿತಾ ಸುಭಾಷ್ ನಂತರ ಸಾಲು ಸಾಲು ಸ್ಟಾರ್‌ಗಳ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ರು. ಬಳಿಕ ತೆಲುಗು, ತಮಿಳು, ಮತ್ತು ಬಾಲಿವುಡ್‌ನಲ್ಲಿಯೂ ನಟಿಸಿ ಸೈ ಎನಿಸಿಕೊಂಡ್ರು. ಪ್ರಣಿತಾಗೆ ಡಿಮ್ಯಾಂಡ್ ಇರೋವಾಗ್ಲೆ ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಉದ್ಯಮಿ ನಿತಿನ್ ರಾಜ್ ಹಸೆಮಣೆ ಏರಿದ್ದರು. ಇದೀಗ ತಾಯ್ತನದ ಖುಷಿಯನ್ನ ಸವಿಯುತ್ತಿದ್ದಾರೆ. ಸಂಭ್ರಮದ ಸೀಮಂತ ಶಾಸ್ತ್ರದ ನಂತರ ಪತಿಯ ಜತೆ ರೊಮ್ಯಾಂಟಿಕ್ ಆಗಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಐರೆನ್ ಲೆಗ್ ಅಂದವರಿಗೆ ಪೂಜಾ ತಿರುಗೇಟು:ಟೀಕಿಸಿದವರಿಗೆ ಪೂಜಾ ಹೆಗ್ಡೆ ಕ್ಲಾಸ್

    ಬಹುಭಾಷಾ ನಟಿ ಪ್ರಣಿತಾ, ಇತ್ತೀಚೆಗಷ್ಟೇ ತಾವು ತಾಯಿಯಾಗುತ್ತಿರುವ ವಿಚಾರವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಬಳಿಕ ಹಳದಿ ಸೀರೆಯುಟ್ಟು ಮಿರ ಮಿರ ಅಂತಾ ಮಿಂಚುತ್ತಾ ಸೀಮಂತ ಶಾಸ್ತ್ರದಲ್ಲಿ ಗಮನ ಸೆಳೆದಿದ್ದರು. ಈಗ ಪತಿ ನಿತಿನ್ ಪ್ರಣಿತಾಗೆ ರೊಮ್ಯಾಂಟಿಕ್ ಕಿಸ್ ಮಾಡುತ್ತಾ ಇರೋ ಬೇಬಿ ಬಂಪ್ ಫೋಟೋಶೂಟ್ ವೈರಲ್ ಆಗಿದೆ. ಚೆಂದದ ಲಾಂಗ್ ಗೌನ್‌ನಲ್ಲಿ ಸಖತ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ನಟಿಯ ಬೇಬಿ ಬಂಪ್ ಫೋಟೋಶೂಟ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

  • ಅಮ್ಮನಾಗ್ತಿದ್ದಾರೆ ಕಿರುತೆರೆ ನಟಿ ರಶ್ಮಿ ಜಯರಾಜ್: ಬೇಬಿ ಬಂಪ್ ಫೋಟೋಸ್ ವೈರಲ್

    ಅಮ್ಮನಾಗ್ತಿದ್ದಾರೆ ಕಿರುತೆರೆ ನಟಿ ರಶ್ಮಿ ಜಯರಾಜ್: ಬೇಬಿ ಬಂಪ್ ಫೋಟೋಸ್ ವೈರಲ್

    ಕಿರುತೆರೆಯಲ್ಲಿ ಸಾಕಷ್ಟು ಸೀರಿಯಲ್ ಮೂಲಕ ಮನೆಮಾತಾದ ಮುದ್ದು ಮುಖದ ನಟಿ ರಶ್ಮಿ ಜಯರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಸಂತಸದ ಸುದ್ದಿಯನ್ನು ಬೇಬಿ ಶವರ್ ಫೋಟೋಶೂಟ್ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಶೂಟ್‌ಗಳು ವೈರಲ್ ಆಗುತ್ತಿದೆ.

    ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ಗಮನ ಸೆಳೆದ ನಟಿ ರಶ್ಮಿ ಜಯರಾಜ್ ಕಳೆದ ವರ್ಷ ಫೆಬ್ರವರಿಯಲ್ಲಿ ಹಸೆಮಣೆ ಏರಿದ್ದರು. ರಿಚು ಎಂಬುವವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಚೆಂದದ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಆರೇಂಜ್ ಕಲರ್ ಫೋಟೋಶೂಟ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Rashmi Jayraj (@rashmi_jayraj)

    ಇತ್ತೀಚೆಗೆ ರಶ್ಮಿ ಜಯರಾಜ್ ಸೀಮಂತ ಫೋಟೋಗಳು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ `ಜಸ್ಟ್ ಮಾತ್ ಮಾತಲ್ಲಿ’ ನಟಿಯ ಬೇಬಿ ಬಂಪ್ ಫೋಟೋಶೂಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ನೆಚ್ಚಿನ ನಟಿಯ ಖುಷಿ ನೋಡಿ ಅಭಿಮಾನಿಗಳು ಕೂಡ ಖುಷಿಪಡ್ತಿದ್ದಾರೆ. ಇದನ್ನೂ ಓದಿ: ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

     

    View this post on Instagram

     

    A post shared by Rashmi Jayraj (@rashmi_jayraj)

    ಅಂದಹಾಗೆ, ಕಿರುತೆರೆಯ `ಮದು ಮಗಳು’, `ಜಸ್ಟ್ ಮಾತ್ ಮಾತಲ್ಲಿ’, `ನೀ ಹಚ್ಚಿದ ಕುಂಕುಮ’, `ವಿಧಿ’, ತಮಿಳಿನ `ನಾಮ್ ಇರುವರ್ ನಮಕ್ಕು ಇರುವರ್’ ಸೀರಿಯಲ್‌ಗಳಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಮಿಳಿನ ಈ ಸೀರಿಯಲ್ ಮೂಲಕ ನಟಿ ರಶ್ಮಿ ತಮಿಳಿನ ಪ್ರೇಕ್ಷಕರಿಗೂ ಹತ್ತಿರವಾಗಿದ್ದರು. ಸದ್ಯ ಬೇಬಿ ಬಂಪ್ ಫೋಟೋಶೂಟ್ ಮೂಲಕ ನಟಿ ರಶ್ಮಿ ಗಮನ ಸೆಳೆಯುತ್ತಿದ್ದಾರೆ.

  • ಸಂಜನಾ ಗಲ್ರಾನಿ ಬೇಬಿ ಬಂಪ್ ಫೋಟೋಶೂಟ್ ವೈರಲ್

    ಸಂಜನಾ ಗಲ್ರಾನಿ ಬೇಬಿ ಬಂಪ್ ಫೋಟೋಶೂಟ್ ವೈರಲ್

    ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಸೀಮಂತದ ಸಂಭ್ರಮದ ಕ್ಷಣಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ತಮ್ಮ ಬೇಬಿ ಬಂಪ್ ಫೋಟೋಶೂಟ್‌ನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

    `ಗಂಡ ಹೆಂಡತಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಸಂಜನಾ, ಬಳಿಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ್ರು. ಬಳಿಕ ಅಜೀಜ್ ಪಾಷಾ ಅವರೊಂದಿಗೆ ಸಂಜನಾ ವಿವಾಹವಾಗಿದ್ದರು. ಇತ್ತೀಚೆಗೆ ಸೀಮಂತ ಶಾಸ್ತ್ರದ ಸಂಭ್ರಮ ಕ್ಷಣಗಳನ್ನ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದರ ಬೆನ್ನೆಲ್ಲೇ ಸಂಜನಾ ಈಗ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್ ಸಖತ್ ವೈರಲ್ ಆಗುತ್ತಿದೆ.

    ಸಂಜನಾ ಗಲ್ರಾನಿ 9 ತಿಂಗಳ ತುಂಬು ಗರ್ಭೀಣಿಯಾಗಿದ್ದು, ಹೊಸ ಫೋಟೋಶೂಟ್‌ನಲ್ಲಿ ಮೆರುನ್ ಕಲರ್ ಡ್ರೇಸ್‌ನಲ್ಲಿ ಭಿನ್ನವಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ತಲೆಗೆ ಹ್ಯಾಟ್ ಹಾಕಿಕೊಂಡು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಜೀವನ ಎಷ್ಟು ವಿಭಿನ್ನ ಮತ್ತು ಕಷ್ಟಕರವೆಂದು ನಟಿ ಸಂಜನಾ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.

    ಐವತ್ತಕ್ಕೂ ಹೆಚ್ಚು ಚಿತ್ರಗಳು, ಹಲವಾರು ಶೋಗಳು, ನಾಲ್ಕು ಭಾಷೆಗಳಲ್ಲಿನ ಕಾರ್ಯಕ್ರಮಗಳ ಉದ್ಘಾಟನೆಯ ಜತೆಗೆ ವಿವಿಧ ನಗರಗಳಲ್ಲಿ ಓಡಾಟ ಮತ್ತು ತಾವು 18ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಜತೆಗೆ ತನ್ನ ಫ್ಯಾಮಿಲಿ ಜೀವನವನ್ನ 35ನೇ ವರ್ಷಕ್ಕೆ ಶುರು ಮಾಡಿದ್ದೇನೆ. ಕಳೆದ 2 ವರ್ಷಗಳಿಂದ ಜೀವನದಲ್ಲಿ ಸಾಕಷ್ಟು ಕಷ್ಟ ಮತ್ತು ಸವಾಲುಗಳನ್ನು ಏದುರಿಸಿದ್ದೇನೆ. ಇದೀಗ 18 ಕೆ.ಜಿ ತೂಕ ಹೆಚ್ಚಾಗಿರುವುದರಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.‌ ಇದನ್ನೂ ಓದಿ: ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

    ನನ್ನ ಕಷ್ಟದ ಸಮಯದಲ್ಲಿ ನನ್ನ ಮನಸ್ಸನ್ನು ಬೇರೆಡೆಗೆ ತಿರುಗಿಸಿದ್ದೆ, ನನ್ನ ನೆರೆಹೊರೆಯಲ್ಲಿ 40ಕ್ಕೂ ಹೆಚ್ಚು ಗಿಡಗಳನ್ನು ಸಂಜನಾ ಫೌಂಡೇಶನ್ ನೇತೃತ್ವದಲ್ಲಿ ನೆಡುವುದರ ಮೂಲಕ ನನ್ನ ಸಮಯವನ್ನು ಮೀಸಲಿಟ್ಟಿದ್ದೇನೆ. ನನ್ನ 9ನೇ ತಿಂಗಳ ಗರ್ಭಾವಸ್ಥೆಯ ಹಂತದಲ್ಲಿ ನಾನು ಹಿಂದೂ ಆಗಿ ಜನಿಸಿ ಮುಸ್ಲಿಂ ಕುಟುಂಬಕ್ಕೆ ಮದುವೆಯಾಗಿ ಎರಡು ಧರ್ಮದ ಪದ್ಧತಿಯನ್ನು ಖುಷಿಯಿಂದ ಜೀವಿಸುತ್ತಿದ್ದೇನೆ ಎಂದು ತಮ್ಮ ಅಭಿಪ್ರಾಯವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಪೋಸ್ಟ್ ಮತ್ತು ಬೇಬಿ ಬಂಪ್ ಫೋಟೋಶೂಟ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಂಜನಾ ಫೋಟೋಶೂಟ್ ವೈರಲ್ ಆಗುತ್ತಿದೆ.