Tag: Baby Bump

  • ವದಂತಿಗೆ ಫುಲ್‌ಸ್ಟಾಪ್ – ಪ್ರೆಗ್ನೆನ್ಸಿ ಘೋಷಿಸಿದ ಕತ್ರಿನಾ ಕೈಫ್

    ವದಂತಿಗೆ ಫುಲ್‌ಸ್ಟಾಪ್ – ಪ್ರೆಗ್ನೆನ್ಸಿ ಘೋಷಿಸಿದ ಕತ್ರಿನಾ ಕೈಫ್

    ಳೆದ ಕೆಲವು ದಿನಗಳಿಂದ ಕತ್ರಿನಾ ಕೈಫ್ (Katrina Kaif) ತಾಯಿಯಾಗುತ್ತಿರುವ ಬಗ್ಗೆ ವದಂತಿ ಹಬ್ಬಿತ್ತು. ಅಷ್ಟೇ ಅಲ್ಲದೇ ಮುಂದಿನ ತಿಂಗಳೇ ಮಗು ಆಗಮನದ ಕುರಿತಾಗಿಯೂ ಸುದ್ದಿಯಾಗಿತ್ತು. ವದಂತಿಗೆ ತೆರೆ ಬಿದ್ದಿದೆ.

    ಇದೀಗ ತಮ್ಮ ಪ್ರೆಗ್ನೆನ್ಸಿಯನ್ನು ಕತ್ರಿನಾ ಖಚಿತಪಡಿಸಿದ್ದಾರೆ. ತುಂಬು ಗರ್ಭಿಣಿ ಕತ್ರಿನಾ ಕೈಫ್ ಇದೀಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.‌

     

     

    View this post on Instagram

     

    A post shared by Katrina Kaif (@katrinakaif)

    ನಟ ವಿಕ್ಕಿ ಕೌಶಲ್‌ರನ್ನು (Vicky Kaushal) ಕತ್ರಿನಾ 2021ರಲ್ಲಿ ಮದುವೆಯಾಗಿದ್ದರು. ಇದೀಗ ಸ್ಟಾರ್ ದಂಪತಿ ಮೊದಲ ಮಗುವಿನ ನಿರೀಕ್ಷೆಯ ಸಂತಸವನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬೇಬಿ ಬಂಪ್ (Baby Bump) ಫೋಟೋಶೂಟ್‌ನ ಫೋಟೋವನ್ನ ಕೈಯಲ್ಲಿ ಹಿಡಿದು ಪೋಸ್ಟ್‌ ಮಾಡಿದ್ದಾರೆ.

    ಫೋಟೋ ಜೊತೆ ಸ್ಟಾರ್ ದಂಪತಿ “ನಮ್ಮ ಜೀವನದ ಹೊಸ ಅಧ್ಯಾಯವನ್ನು ತುಂಬಿದ ಹೃದಯಗಳೊಂದಿಗೆ ಆರಂಭಿಸುವ ಹಾದಿಯಲ್ಲಿ ನಾವಿದ್ದೇವೆ” ಎಂದು ಹೇಳುವ ಮೂಲಕ ಖುಷಿ ಕ್ಷಣವನ್ನ ಹಂಚಿಕೊಂಡಿದ್ದಾರೆ.

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಹುಲ್-ಅಥಿಯಾ – ಬೇಬಿ ಬಂಪ್ ಫೋಟೋ ಶೂಟ್

    ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಹುಲ್-ಅಥಿಯಾ – ಬೇಬಿ ಬಂಪ್ ಫೋಟೋ ಶೂಟ್

    ಮುಂಬೈ: ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಂಭ್ರಮದಲ್ಲಿರುವ ಕ್ರಿಕೆಟಿಗ ಕೆ.ಎಲ್ ರಾಹುಲ್-ಅಥಿಯಾ ಶೆಟ್ಟಿ ಮತ್ತೊಂದು ಸಂಭ್ರಮಾಚರಣೆಗೆ ಸಜ್ಜಾಗುತ್ತಿದ್ದಾರೆ.

    ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಅಥಿಯಾ ಶೆಟ್ಟಿ ಶೀಘ್ರವೇ ತಾಯಿಯಾಗಲಿದ್ದಾರೆ.

    ರಾಹುಲ್, ಅಥಿಯಾ ಶೆಟ್ಟಿ ದಂಪತಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದು, ಅದನ್ನು ತಮ್ಮ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

    ಈ ಫೋಟೋದಲ್ಲಿ ದಂಪತಿಗಳು ಅತ್ಯಂತ ಆತ್ಮೀಯ ಹಾಗೂ ಸಂತೋಷದಲ್ಲಿ ಇರುವುದು ಕಂಡುಬಂದಿದೆ. ರಾಹುಲ್, ಪತ್ನಿ ಅಥಿಯಾ ಅವರನ್ನ ಅಪ್ಪಿಕೊಂಡು ಸೋಫಾದ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಹಾಗೂ ಅವರ ಮಡಿಲಲ್ಲಿ ಮಲಗಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

     

     

     

  • ರಿಚಾ ಚಡ್ಡಾ ‘ಬೇಬಿ ಬಂಪ್‍’ಗೆ ಮುತ್ತಿಕ್ಕಿ ಟ್ರೋಲ್ ಆದ ನಟಿ ರೇಖಾ

    ರಿಚಾ ಚಡ್ಡಾ ‘ಬೇಬಿ ಬಂಪ್‍’ಗೆ ಮುತ್ತಿಕ್ಕಿ ಟ್ರೋಲ್ ಆದ ನಟಿ ರೇಖಾ

    ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿದ್ದ ರಿಚಾ ಚಡ್ಡಾ (Richa Chadda) ಅವರ ಬೇಬಿ ಬಂಪ್ (Baby Bump) ಗೆ ಮುತ್ತಿಕ್ಕುವ ಮೂಲಕ ಟ್ರೋಲ್ ಆಗಿದ್ದಾರೆ ಹಿರಿಯ ನಟಿ ರೇಖಾ ಚಡ್ಡಾ. ರಿಚಾ ನಟನೆಯ ಹೀರಾಮಂಡಿ ಚಿತ್ರದ ಪ್ರೀಮಿಯರ್ ಶೋಗೆ ಆಗಮಿಸಿದ್ದ ರೇಖಾ (Rekha) ಅವರು, ರಿಚಾ ನಟನೆ ಕಂಡು ತಬ್ಬಿಕೊಂಡರು. ನಂತರ ರಿಚಾರ ಬೇಬಿ ಬಂಪ್ ಗೆ ಕಿಸ್ ಮಾಡಿದ್ದಾರೆ.

    ಈ ಹಿಂದೆ ರಿಚಾ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂತಸದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಾಯಿಯ ಮಹತ್ವವನ್ನೂ ತಿಳಿಸಿದ್ದರು.

    ‘1 + 1= 3’ ಎಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ರಿಚಾ ಚಡ್ಡಾ ಮತ್ತು ಅಲಿ ಫಜಲ್ ದಂಪತಿ ಪೋಷಕರಾಗುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ‘ಒಂದು ಚಿಕ್ಕ ಹಾರ್ಟ್‌ಬೀಟ್  ನಮ್ಮ ಜಗತ್ತಿನಲ್ಲಿ ಅತಿದೊಡ್ಡ ಶಬ್ದ’ ಎಂದು ಈ ಜೋಡಿ ತಮ್ಮ ಚಿತ್ರಗಳಿಗೆ ಶೀರ್ಷಿಕೆ ನೀಡಿ ಪ್ರೆಗ್ನೆನ್ಸಿ ನ್ಯೂಸ್ ಹಂಚಿಕೊಂಡಿದ್ದರು. ರಿಚಾ ದಂಪತಿಗೆ ಕನ್ನಡದ ‘ಗೂಗ್ಲಿ’ ನಟಿ ಕೃತಿ ಕರಬಂಧ ಸೇರಿದಂತೆ ಅನೇಕರು ಶುಭಹಾರೈಸಿದ್ದರು.

     

    ಸೆಪ್ಟೆಂಬರ್ 23ರಂದು ರಿಚಾ ಮತ್ತು ಅಲಿ ಫಜಲ್ (Ali Fazal) ಅದ್ಧೂರಿಯಾಗಿ ಮದುವೆಯಾದರು. ಬಳಿಕ ಮುಂಬೈ, ದೆಹಲಿ ಮತ್ತು ಲಕ್ನೋದಲ್ಲಿ ಆರತಕ್ಷತೆ ಕಾರ್ಯಕ್ರಮ ಮಾಡಿದ್ದರು. ಅಂದಹಾಗೆ, ಸಿನಿಮಾ ಸೆಟ್‌ವೊಂದರಲ್ಲಿ ರಿಚಾ ಮತ್ತು ಅಲಿ ಅವರಿಗೆ ಪರಿಚಯವಾಗಿ ಆ ಸ್ನೇಹ ಪ್ರೇಮಕ್ಕೆ ತಿರುಗಿತ್ತು. 10 ವರ್ಷಗಳ ಡೇಟಿಂಗ್ ನಂತರ 2022ರಲ್ಲಿ ಈ ಜೋಡಿ ಮದುವೆಯಾದರು.

  • ನಟಿ ಇಲಿಯಾನಾ ಡಿಕ್ರೂಸ್ ಬೇಬಿ ಬಂಪ್ ಫೋಟೋಶೂಟ್

    ನಟಿ ಇಲಿಯಾನಾ ಡಿಕ್ರೂಸ್ ಬೇಬಿ ಬಂಪ್ ಫೋಟೋಶೂಟ್

    ಬಾಲಿವುಡ್ (Bollywood) ನಟಿ ಇಲಿಯಾನಾ ಡಿಕ್ರೂಸ್ (Ileana D’cruze) ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರಿಗೆ ಮದುವೆ ಆಗಿಲ್ಲ. ತಾವು ಪ್ರೆಗ್ನೆಂಟ್ ಎಂಬ ವಿಚಾರವನ್ನು ಅವರು ಕೆಲವು ದಿನಗಳ ಹಿಂದೆ ತಿಳಿಸಿದರು. ಆದರೆ ಆ ಮಗುವಿನ ತಂದೆ ಯಾರು ಎಂಬುದನ್ನು ಅವರು ಇದುವೆಗೂ ರಿವೀಲ್ ಮಾಡಿಲ್ಲ. ಅವರು ಆಗಾಗ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಸದ್ಯ ನಟಿ ತಾಯಿ ಆಗುತ್ತಿರುವ ಅವರು ಬಹಳ ಖುಷಿಯಲ್ಲಿದ್ದಾರೆ.

    ಇಲಿಯಾನಾ ಮದುವೆ ಆಗದೇ ಮಗು ಪಡೆಯುತ್ತಿರುವ ಇಲಿಯಾನಾ ಡಿಕ್ರೂಸ್ ಅವರ ನಿರ್ಧಾರಕ್ಕೆ ಅವರ ಕುಟುಂಬದವರ ಒಪ್ಪಿಗೆ ಕೂಡ ಇದೆ. ಈಗ ಇಲಿಯಾನಾ ಅವರು ಸಾಮಾಜಿಕ ಹೊಸ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗುತ್ತಿದೆ. ನಟಿಯ ಫೋಟೋಗೆ ನೆಟ್ಟಿಗರು ಬಗೆಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಬಹುಭಾಷೆಯಲ್ಲಿ ನಟಿಸಿರುವ ಇಲಿಯಾನಾ ಡಿಕ್ರೂಸ್ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಸದ್ಯ ಅವರು ಪ್ರೆಗ್ನೆನ್ಸಿ ಸಲುವಾಗಿ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಇದನ್ನೂ ಓದಿ:ಚಡ್ಡಿ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿ: ನೀತಿ ಪಾಠ ಮಾಡಿದ ಕಂಗನಾ

    ಏಪ್ರಿಲ್ 18ರಂದು ನಟಿ ಇಲಿಯಾನಾ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದರು. ಅಂದಿನಿಂದ ನಟಿಗೆ ಮಗುವಿನ ತಂದೆ ಯಾರು ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದರು. ಈಗಲೂ ಅದೇ ಪ್ರಶ್ನೆ ಎದುರಾಗಿದೆ. ಸದ್ಯ ನಟಿ ಮಿರರ್ ಸೆಲ್ಫಿಯ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.

    ನಟಿ ಇಲಿಯಾನಾ ಕತ್ರಿನಾ ಕೈಫ್ ಸಹೋದರ ಜೊತೆ ಡೇಟಿಂಗ್ ಮಾಡ್ತಿರುವ ಬಗ್ಗೆ ಈ ಹಿಂದೆ ವರದಿ ಮಾಡಲಾಗಿತ್ತು. ಸೆಬಾಸ್ಟಿಯನ್ ಲೊರಾನ್ ಜೊತೆ ಎಂಗೇಜ್ ಆಗಿರುವ ಬಗ್ಗೆ ಸುದ್ದಿ ಹಬ್ಬಿತ್ತು. ಇದೀಗ ಇಲಿಯಾನಾ ಪ್ರೆಗ್ನೆಂಟ್ ಆಗಿರುವ ಬೆನ್ನಲ್ಲೇ ನಟಿಯ ಡೇಟಿಂಗ್ ವಿಚಾರ ಮುನ್ನೆಲೆಗೆ ಬರುತ್ತಿದೆ.

  • ‘ರಾಧಾ ಕಲ್ಯಾಣ’ ನಾಯಕಿ ರಾಧಿಕಾ ಬೇಬಿ ಬಂಪ್ ಫೋಟೋಶೂಟ್

    ‘ರಾಧಾ ಕಲ್ಯಾಣ’ ನಾಯಕಿ ರಾಧಿಕಾ ಬೇಬಿ ಬಂಪ್ ಫೋಟೋಶೂಟ್

    ರಾವಳಿ ಬ್ಯೂಟಿ ರಾಧಿಕಾ ರಾವ್ (Radhika Rao) ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಪತಿ ಆಕರ್ಷ್ ಭಟ್ (Akarsh Bhat) ಜೊತೆ ಮುದ್ದಾದ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಟ್ರೆಡಿಷನಲ್ ಮತ್ತು ಮಾಡ್ರನ್ ಎರಡು ಲುಕ್‌ನಲ್ಲೂ ನಟಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:Exclusive- ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಹಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು ಹೇಗೆ?

    ಮಂಗ್ಳೂರ್ ಹುಡ್ಗಿ ಹುಬ್ಳಿ ಹುಡ್ಗ, ರಾಧಾ ಕಲ್ಯಾಣ (Radha Kalyana) ಸೀರಿಯಲ್‌ನಲ್ಲಿ ಗಮನ ಸೆಳೆದ ನಟಿ ರಾಧಿಕಾ ಅವರು ಕನ್ನಡ ಮತ್ತು ಸಾಕಷ್ಟು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೇಕ್ಷಕರಿಗೆ ರಾಧೆಯಾಗಿ ಮನಗೆದ್ದಿದ್ದಾರೆ.

    ಮಂಗಳೂರಿನ ಆಕರ್ಷ್ ಭಟ್ (Akarsh Bhat) ಇಂಟರ್‌ನ್ಯಾಷನಲ್ ಮ್ಯಾಜಿಷಿಯನ್- ಮೈಂಡ್ ರೀಡರ್ ಆಗಿದ್ದಾರೆ. ಆಕರ್ಷ್‌ ಜೊತೆ ರಾಧಿಕಾ ರಾವ್‌ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ರಾಧಿಕಾ ಮತ್ತು ಆಕರ್ಷ್ ಭಟ್, ಪ್ರೀತಿಸಲು ಆರಂಭಿಸಿದ್ದರು. ಇಬ್ಬರ ಮನೆಯಲ್ಲೂ ಲವ್ (Love) ವಿಚಾರ ತಿಳಿಸಿ ಒಪ್ಪಿಸಿ ಮದುವೆ ಆದರು. ಈಗ ರಾಧಿಕಾ, 8 ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ. ಸಾಂಪ್ರದಾಯಿಕ ಲುಕ್ ಮತ್ತು ಮಾಡ್ರನ್ ಗೌನ್ ಧರಿಸಿ ವಿವಿಧ ರೀತಿಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ.

    ಚಿನ್ನದ ಝರಿ ಬಾರ್ಡರ್‌ನ ಸಾಂಪ್ರದಾಯಿಕ ಸೀರೆಯಲ್ಲಿ ರಾಧಿಕಾ ಮಿಂಚಿದ್ದಾರೆ. ರಾಯಲ್ ಥೀಮ್ ಫೋಟೋಶೂಟ್‌ನಲ್ಲಿ ನಟಿ ಯಾವ ರಾಣಿಗಿಂತಲೂ ಕಡಿಮೆಯಾಗಿ ಕಾಣುತ್ತಿಲ್ಲ. ಪಿಂಕ್ ಬಣ್ಣದ ಸಿಲ್ಕ್ ಸೀರೆಯುಟ್ಟು ಗಾರ್ವ್ ಸಿಲ್ವರ್ ಜ್ಯುವೆಲರಿ ಧರಿಸಿ ಪತಿ ಆಕರ್ಷ್ ಭಟ್ ಜೊತೆ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. Swara Creations ಕ್ಯಾಮೆರಾ ಕೈಚಳಕದಲ್ಲಿ ರಾಧಿಕಾ ಫೋಟೋಶೂಟ್ ಮೂಡಿ ಬಂದಿದೆ.

    ಅಷ್ಟೇ ಅಲ್ಲದೇ, ಕೆಂಪು ಬಣ್ಣದ ಉಡುಗೆಯಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರಿಟಿ ಫೋಟೋಗ್ರಾಫರ್ ಕರುಣಾ (Karuna) ಕೈಚಳಕದಲ್ಲಿ ಈ ಚೆಂದದ ಫೋಟೋಗ್ರಾಫಿ ಮೂಡಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ರಾಧಿಕಾ ಬೇಬಿ ಬಂಪ್ ಫೋಟೋ ನೋಡಿ ಫ್ಯಾನ್ಸ್‌ ನಟಿಗೆ ಶುಭಹಾರೈಸಿದ್ದಾರೆ.

  • ತಾಯ್ತನದ ಫೋಟೋಶೂಟ್ ಹಂಚಿಕೊಂಡ ‘ರಾಧಾ ಕಲ್ಯಾಣ’ ನಟಿ ರಾಧಿಕಾ ರಾವ್

    ತಾಯ್ತನದ ಫೋಟೋಶೂಟ್ ಹಂಚಿಕೊಂಡ ‘ರಾಧಾ ಕಲ್ಯಾಣ’ ನಟಿ ರಾಧಿಕಾ ರಾವ್

    ‘ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ’ ಮತ್ತು ‘ರಾಧಾ ಕಲ್ಯಾಣ’ (Radha Kalyana) ಖ್ಯಾತಿಯ ರಾಧಿಕಾ ರಾವ್ (Radhika Rao) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಬೇಬಿ ಬಂಪ್ (Baby Bump) ಫೋಟೋಶೂಟ್ ಮೂಲಕ ನಟಿ ಸದ್ದು ಮಾಡ್ತಿದ್ದಾರೆ.

    ತುಳು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ರಾಧಿಕಾ ರಾವ್ (Radhika Rao) ಅವರು 2020ರಲ್ಲಿ ಆಕರ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ರಾಧಿಕಾ ಮತ್ತು ಆಕರ್ಷ್ ಭಟ್, ಪ್ರೀತಿಸಲು ಆರಂಭಿಸಿದ್ದರು. ಇಬ್ಬರ ಮನೆಯಲ್ಲೂ ಲವ್ ವಿಚಾರ ತಿಳಿಸಿ ಒಪ್ಪಿಸಿ ಮದುವೆ ಆದರು. ಸದ್ಯ ತಾಯಿಯಾಗಿ ಸಂತಸವನ್ನ ವಿಶ್ವ ತಾಯಿಂದಿರ ದಿನದಂದು (ಮೇ.14) ಫೋಟೋಶೂಟ್ ಮೂಲಕ ತಿಳಿಸಿದ್ದಾರೆ. ದೇಸಿ ಲುಕ್‌ನಲ್ಲಿ ನಟಿ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ:ಬ್ಯಾಕ್ ಟು ಬ್ಯಾಕ್ ಸಿನಿಮಾ ಸೋಲು- ಐಟಂ ಡ್ಯಾನ್ಸ್ ಮಾಡಲು ಸಜ್ಜಾದ ಪೂಜಾ ಹೆಗ್ಡೆ

    ಚಿನ್ನದ ಝರಿ ಬಾರ್ಡರ್‌ನ ಸಾಂಪ್ರದಾಯಿಕ ಸೀರೆಯಲ್ಲಿ ಮಿಂಚಿದ್ದಾರೆ. ರಾಯಲ್ ಥೀಮ್ ಫೋಟೋಶೂಟ್‌ನಲ್ಲಿ ನಟಿ ಯಾವ ರಾಣಿಗಿಂತಲೂ ಕಡಿಮೆಯಾಗಿ ಕಾಣುತ್ತಿಲ್ಲ. ಈ ಕ್ಲಾಸಿ ಬ್ಯಾಕ್‌ಡ್ರಾಪ್ ಒಟ್ಟಾರೆಯಾಗಿ ಫೋಟೋಶೂಟ್‌ನ ನೋಟಕ್ಕೆ ಹೆಚ್ಚು ಅಂದವನ್ನು ನೀಡುತ್ತಿದೆ. ಅಲ್ಲದೆ, ಇದರೊಂದಿಗೆ ಎಥ್ನಿಕ್ ಆಕ್ಸೆಸರಿ, ಚಿನ್ನಾಭರಣಗಳನ್ನು ಧರಿಸುವುದರೊಂದಿಗೆ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದಾರೆ.

     

    View this post on Instagram

     

    A post shared by Radhika Rao (@radhikarao_official)

    ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮಂಗಳೂರು ಹುಡ್ಗಿ, ಹುಬ್ಬಳ್ಳಿ ಹುಡ್ಗ’ ಮೂಲಕ ಟಿವಿಗೆ ಪಾದಾರ್ಪಣೆ ಮಾಡಿದರು ರಾಧಿಕಾ ರಾವ್. ನವಿರಾದ ಪ್ರೇಮಕಥೆಯನ್ನು ಹಾಸ್ಯವಾಗಿ ಪ್ರದರ್ಶಿಸಿದ್ದ ಈ ಧಾರಾವಾಹಿಯು ಬಹುಬೇಗನೆ ಹಿಟ್ ಆಗಿತ್ತು. ಸೃಜನ್ ಲೋಕೇಶ್ ನಿರ್ಮಾಣದಲ್ಲಿ ಈ ಸೀರಿಯಲ್ ಮೂಡಿ ಬಂದಿತ್ತು.

  • ಮದುವೆಗೂ ಮುನ್ನ ನಟಿ ರಾಖಿ ಸಾವಂತ್ ಪ್ರಗ್ನೆಂಟ್ : ಏನಿದು ಹುಚ್ಚಾಟ ಎಂದ ನೆಟ್ಟಿಗರು

    ಮದುವೆಗೂ ಮುನ್ನ ನಟಿ ರಾಖಿ ಸಾವಂತ್ ಪ್ರಗ್ನೆಂಟ್ : ಏನಿದು ಹುಚ್ಚಾಟ ಎಂದ ನೆಟ್ಟಿಗರು

    ಕೆಲ ತಿಂಗಳ ಹಿಂದೆಯಷ್ಟೇ ಮೈಸೂರು ಮೂಲದ ಆದಿಲ್ ಎಂಬ ಹುಡುಗನ ಜೊತೆ ಸುತ್ತಾಡುತ್ತಿದ್ದ ಬಾಲಿವುಡ್ ನಟಿ ರಾಖಿ ಸಾವಂತ್, ದಿಢೀರ್ ಅಂತ ಬೇಬಿ ಬಂಪ್ ಜೊತೆ ಕಾಣಿಸಿಕೊಂಡಿದ್ದಾರೆ. ಏಕಾಏಕಿ ಬೇಬಿ ಬಂಪ್ ಕಂಡ ಜನರು ಈ ಹುಚ್ಚಾಟಕ್ಕೆ ಉಗಿದಿದ್ದಾರೆ. ಪ್ರಚಾರ ಮತ್ತು ವಿವಾದಕ್ಕಾಗಿ ಈಕೆ ಏನೆಲ್ಲ ಮಾಡುವುದಕ್ಕೆ ರೆಡಿ ಎಂದು ಜರಿದಿದ್ದಾರೆ. ಅಷ್ಟಕ್ಕೂ ರಾಖಿ ಸಾವಂತ್ ಹಾಗೆ ಮಾಡಿದ್ದು ಮತ್ತು ತಾವು ಪೈಗಂಬರ್ ಮತ್ತು ಬಾಹುಬಲಿಗೆ ಜನ್ಮ ನೀಡುವೆ ಅಂತ ಹೇಳಿದ್ದಕ್ಕೂ ಕಾರಣವಿದೆ.

    ರಾಕಿ ಸಾವಂತ್ ಹೊಟ್ಟೆಗೆ ಬಲೂನ್ ಕಟ್ಟಿಕೊಂಡು ಅದು ಬೇಬಿ ಬಂಪ್ ಎಂದು ತೋರಿಸಲು ಹೋಗಿದ್ದಾರೆ. ತಮ್ಮ ಅಕ್ಕಪಕ್ಕದ ಮನೆಯವರನ್ನು ಸೇರಿಸಿ, ನೀವೆಲ್ಲ ಪಾಪ ಮಾಡಿದ್ದೀರಿ. ಪಾಪ ಪರಿಹಾರಕ್ಕಾಗಿ ನಾನು ಪೈಗಂಬರ್ ಮತ್ತು ಬಾಹುಬಲಿಗೆ ಜನ್ಮ ನೀಡುತ್ತೇನೆ. ಆಗ ನಿಮಗೆಲ್ಲ ಪಾಪದಿಂದ ಮುಕ್ತಿ ಸಿಗಲಿದೆ ಎಂದೆಲ್ಲ ಭಾಷಣ ಮಾಡಿದ್ದಾರೆ. ಅಂದರೆ, ತಾವು ಮುಸ್ಲಿಂ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಎಂದು ಅವನಿಂದ ಮಗುವನ್ನೂ ಪಡೆಯುತ್ತೇನೆ ಎನ್ನುವ ಅರ್ಥದಲ್ಲಿ ಅವರು ಪೈಗಂಬರಿಗೆ ಜನ್ಮ ನೀಡುತ್ತೇನೆ ಅಂದಿದ್ದಾರೆ. ಇದನ್ನೂ ಓದಿ:ಕನ್ನಡ, ಕನ್ನಡಿಗರನ್ನೇ ಮರೆತು ಬಿಟ್ಟರಾ ‘ಕೆಜಿಎಫ್ 2’ ನಿರ್ದೇಶಕ ಪ್ರಶಾಂತ್ ನೀಲ್ : ಏನಿದು ಹೊಸ ಆರೋಪ?

    ಇಷ್ಟೆಲ್ಲ ಭಾಷಣ ಮುಗಿದ ನಂತರ ತಾವೇ ಹೊಟ್ಟೆಗೆ ಸುತ್ತಿಕೊಂಡಿದ್ದ ಬಲೂನ್ ಒಡೆದು ನಗುತ್ತಾರೆ. ಈ ಹುಚ್ಚಾಟಕ್ಕೆ ದಾರಿ ಹೋಕರೆಲ್ಲ ನಕ್ಕು ಮುಂದೆ ಸಾಗುತ್ತಾರೆ. ಈ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಕೂಡ ಆಗಿದೆ. ಪಾಸಿಟಿವ್ ಗಿಂತ ನೆಗೆಟಿವ್ ಕಾಮೆಂಟ್ ಗಳೇ ಹೆಚ್ಚು ಬಂದಿವೆ.

    Live Tv
    [brid partner=56869869 player=32851 video=960834 autoplay=true]

  • ಮದರ್‌ವುಡ್‌ ಜರ್ನಿಯಲ್ಲಿ ತನ್ನ ತಾಯಿಯನ್ನ ನೆನೆದ ಪ್ರಣಿತಾ

    ಮದರ್‌ವುಡ್‌ ಜರ್ನಿಯಲ್ಲಿ ತನ್ನ ತಾಯಿಯನ್ನ ನೆನೆದ ಪ್ರಣಿತಾ

    ಹುಭಾಷಾ ನಟಿ ಪ್ರಣಿತಾ ಸುಭಾಷ್ ತಾಯ್ತನದ ಆನಂದದಲ್ಲಿದ್ದು, ಪ್ರತಿಕ್ಷಣವನ್ನು ವಿಶೇಷ ಎಂಬಂತೆ ಕಳೆಯುತ್ತಿದ್ದಾರೆ. ತಾಯಿಯಾಗುತ್ತಿರುವ ಕುರಿತು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ ಈ ನಟಿ ತಮ್ಮ ಅಪ್ಡೇಟ್‍ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದ ಪ್ರಣಿತಾ, ತಮ್ಮ ಸಿಹಿ ಅನುಭವಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇಂದು ಅಮ್ಮಂದಿರ ವಿಶೇಷ ದಿನವಾಗಿರುವುದರಿಂದ ಫೋಟೋವೊಂದನ್ನು ಶೇರ್ ಮಾಡಿ ತನ್ನ ಅಮ್ಮನನ್ನು ನೆನೆದಿದ್ದಾರೆ.

    ಕ್ಯೂಟ್ ಬೆಡಗಿ ಪ್ರಣಿತಾ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದು, ಇಂದು ಮತ್ತೊಂದು ಬೇಬಿ ಬಂಪ್ ಫೋಟೋ ಶೇರ್ ಮಾಡಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ, ನಾವು ಮಾತೃತ್ವದ ಪ್ರಯಾಣವನ್ನು ಪ್ರಾರಂಭಿಸುವವರೆಗೂ ನಮ್ಮ ಅಮ್ಮಂದಿರು ನಮಗಾಗಿ ಎಷ್ಟು ತ್ಯಾಗ ಮಾಡಿದ್ದಾರೆಂದು ನಮಗೆ ತಿಳಿದಿರುವುದಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಪ್ರಣಿತಾ ಮುದ್ದಾಗಿ ಕಾಣುತ್ತಿದ್ದಾರೆ. ಇದನ್ನೂ ಓದಿ:  ರಾಜಕೀಯ ಪಕ್ಷ ಅಧಿಕಾರ ಹಿಡಿಯಲು ಆಪರೇಷನ್ ಕಮಲ ಅನಿವಾರ್ಯ: ಕಟೀಲ್ 

    ಈ ಸಾಲುಗಳನ್ನು ಓದಿದ ಅಭಿಮಾನಿಗಳು, ಇದು ಸತ್ಯ. ನೀವು ತುಂಬಾ ಮುದ್ದಾಗಿ ಕಾಣುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಉಸಿರುಗಟ್ಟಿಸುವ ಚಿತ್ರ ಎಂದು ಕಾಮೆಂಟ್ ಮಾಡಿದ್ದಾರೆ.

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಪತಿ ನಿತಿನ್ ರಾಜು ಜೊತೆ ಫೋಟೋ ಶೇರ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದರು. ಅಲ್ಲದೇ ಇತ್ತೀಚೆಗೆ ನಟಿ ತನ್ನ ಬೇಬಿ ಬಂಪ್ ಫೋಟೋ ಶೇರ್ ಮಾಡುವ ಜೊತೆಗೆ ವರ್ಕೌಟ್ ಮಾಡುವ ವೀಡಿಯೋವನ್ನು ಶೇರ್ ಮಾಡಿದ್ದರು. ಈ ವೀಡಿಯೋಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಪ್ರೆಗ್ನೆನ್ಸಿಯಲ್ಲೂ ಫಿಟ್‍ನೆಸ್ ಇರಬೇಕು ಎಂದು ವೀಡಿಯೋ ಮಾಡಿದ ನಟಿ ಪ್ರಣಿತಾ

  • ಟೆನ್ನಿಸ್ ತಾರೆ ಮರಿಯಾ ಶರಪೋವಾರ ಬೇಬಿ ಬಂಪ್ ಫೋಟೋ ವೈರಲ್

    ಟೆನ್ನಿಸ್ ತಾರೆ ಮರಿಯಾ ಶರಪೋವಾರ ಬೇಬಿ ಬಂಪ್ ಫೋಟೋ ವೈರಲ್

    ಮಾಸ್ಕೋ: ಮಾಜಿ ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾ ಅವರು ಬೇಬಿ ಬಂಪ್ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಏಪ್ರಿಲ್ 19 ರಂದು ತಮ್ಮ 35ನೇ ಹುಟ್ಟುಹಬ್ಬದ ದಿನದಿಂದು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋವು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇಬ್ಬರ ಹುಟ್ಟುಹಬ್ಬದ ಕೇಕ್ ತಿನ್ನುವುದು ಯಾವಾಗಲೂ ನನ್ನ ವಿಶೇಷತೆಯಾಗಿದೆ ಎಂದು ಹಾರ್ಟ್ ಎಮೋಜಿಗಳನ್ನು ಹಾಕಿದ್ದಾರೆ.

     

    View this post on Instagram

     

    A post shared by Maria Sharapova (@mariasharapova)

    ಟೆನ್ನಿಸ್‍ನಲ್ಲಿ ಅವರು 5 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಅವಾರ್ಡ್ ಅನ್ನು ತಮ್ಮ ಮುಡಿಗೇರಿಸಿಕೋಡಿದ್ದಾರೆ. ಶರಪೋವಾ ಅವರು 2004ರಲ್ಲಿ ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ್ದರು. 2005 ರಲ್ಲಿ ಅಗ್ರಕ್ರಮಾಂಕದ ಆಟಗಾರ್ತಿಯಾಗಿ ಹೊರಹೊಮ್ಮಿದ್ದರು. 2012ರ ಒಲಂಪಿಕ್ಸ್‍ನಲ್ಲಿ ಬೆಳ್ಳಿ ಪದಕವನ್ನು ಜಯಸಿದ್ದರು.

    ಡಿಸೆಂಬರ್‌ನಲ್ಲಿ ಬ್ರಿಟಿಷ್ ಉದ್ಯಮಿ ಅಲೆಕ್ಸಾಂಡರ್ ಗಿಲ್ಕ್ಸ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  • ಬೇಬಿ ಬಂಪ್ ಫೋಟೋ ಶೂಟ್ ನಲ್ಲಿ ಸೋನಂ ಮುದ್ದು ಮುದ್ದು

    ಬೇಬಿ ಬಂಪ್ ಫೋಟೋ ಶೂಟ್ ನಲ್ಲಿ ಸೋನಂ ಮುದ್ದು ಮುದ್ದು

    ಟಿ ಸೋನಂ ಕಪೂರ್ ತಾಯಿ ಆಗಲಿದ್ದಾರೆ ಎಂದು ಸೋನಂ ಅಪ್ಪ, ಖ್ಯಾತ ನಟ ಅನಿಲ್ ಕಪೂರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅದಕ್ಕೆ ತಕ್ಕಂತೆ ಒಂದಷ್ಟು ಫೋಟೋಗಳನ್ನೂ ಅವರು ಶೇರ್ ಮಾಡಿದ್ದರು. ಬೇಬಿ ಬಂಪ್ ಫೋಟೋಗಳು ಅಭಿಮಾನಿಗಳಿಗೆ ಸರಿ ಕಂಡಿರಲಿಲ್ಲ. ಹಾಗಾಗಿ ಅನಿಲ್ ಕಪೂರ್ ಮೇಲೆ ಅಭಿಮಾನಿಗಳು ಕೋಪ ಮಾಡಿಕೊಂಡಿದ್ದರು. ಒಬ್ಬ ತಂದೆಯಾಗಿ ನೀವು ಆ ರೀತಿಯ ಫೋಟೋಗಳನ್ನು ಹಂಚಿಕೊಳ್ಳಬಾರದಿತ್ತು ಎಂದಿದ್ದರು. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

    ಇದೀಗ ಸ್ವತಃ ಸೋನಂ ಕಪೂರ್ ಮತ್ತೊಂದು ಬೇಬಿ ಬಂಪ್ ಫೋಟೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಕೆಲವೇ ನಿಮಿಷಗಳಲ್ಲಿ ವೈರಲ್ ಕೂಡ ಆಗಿದೆ. ತಾಯಿ ಆಗುತ್ತಿರುವ ಸೋನಂಗೆ ಹಾರೈಕೆಯ ಮಹಾಪುರವೇ ಹರಿದು ಬರುತ್ತಿದೆ. ಕಲಾ ಕುಟುಂಬದಲ್ಲಿ ಜನ್ಮ ತಾಳುತ್ತಿರುವ ಆ ಮಗು ಕಲಾಸೇವೆಯನ್ನು ಮುಂದುವರೆಯಲಿ ಎಂದು ಕೆಲವರು ಆಶೀರ್ವದಿಸಿದ್ದಾರೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?

    ಈ ಹಿಂದೆ ಅನಿಲ್ ಕಪೂರ್ ಹಂಚಿಕೊಂಡಿದ್ದ ಫೋಟೋದಲ್ಲಿ ಸೋನಂ ಕಪ್ಪು ಬಿಕಿನಿ ಧರಿಸಿದ್ದರು. ಪತಿ ಆನಂದ್ ಅಹುಜಾ ಅವರ ಮಡಿಲಲ್ಲಿ ಸೋನಂ ಮಲಗಿದ್ದ ಫೋಟೋವನ್ನು ಹಾಕಿದ್ದರು. ಆದರೆ, ಫೋಟೋದಲ್ಲಿ ಸೋನಂ ಮಲಗಿದ್ದ ಕೋನ ಚೆನ್ನಾಗಿರಲಿಲ್ಲ ಎನ್ನುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಸೋನಂ ಮೊದಲ ಬಾರಿಗೆ ಬೇಬಿ ಬಂಪ್ ನೊಂದಿಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಸ್ಟೈಲಿಶ್ ಲುಕ್ ನಲ್ಲಿ ಇದ್ದಾರೆ. ಹಾಗಾಗಿ ಸೋನಂಗೆ ಪ್ರೀತಿಯ ಮಹಾಮಳೆಯೇ ಸುರಿದಿದೆ.