Tag: Baby Boy

  • ಗಂಡು ಮಗುವಿನ ತಾಯಿಯಾದ್ರು ಟೆನ್ನಿಸ್ ತಾರೆ

    ಗಂಡು ಮಗುವಿನ ತಾಯಿಯಾದ್ರು ಟೆನ್ನಿಸ್ ತಾರೆ

    ನವದೆಹಲಿ: ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಸಾನಿಯಾ ಮಿರ್ಜಾ ಪತಿ, ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲ್ಲಿಕ್ ತಮಗೆ ಗಂಡು ಮಗು ಜನ್ಮವಾಗಿದೆ ಎಂದು ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ.

    ಶೋಯೆಬ್ ಮಲ್ಲಿಕ್ ತಮ್ಮ ಟ್ವಿಟ್ಟರಿನಲ್ಲಿ, “ಇದನ್ನು ಹೇಳಲು ನಾನು ತುಂಬಾ ಉತ್ಸಾಹಕನಾಗಿದ್ದೀನಿ. ನಮಗೆ ಗಂಡು ಮಗು ಜನ್ಮವಾಗಿದೆ. ನನ್ನ ಹುಡುಗಿ(ಸಾನಿಯಾ) ಕೂಡ ಕ್ಷೇಮವಾಗಿದ್ದಾಳೆ. ಯಾವಾಗಲೂ ಇರುವ ತರಹ ಆಕೆ ಸ್ಟ್ರಾಂಗ್ ಆಗಿದ್ದಾಳೆ. ನಿಮ್ಮ ಶುಭಾಶಯಕ್ಕೆ ಹಾಗೂ ಆಶೀರ್ವಾದಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

    ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲ್ಲಿಕ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಸಾನಿಯಾ ಇಂದು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿ ಸಂತಸದಲ್ಲಿದ್ದಾರೆ. ಸಾನಿಯಾ ಗರ್ಭಿಣಿಯಾಗಿದ್ದಾಗ ನನ್ನ ಮಗುವಿಗೆ ಮಿರ್ಜಾ ಹಾಗೂ ಮಲ್ಲಿಕ್ ಮೂಲನಾಮ ಇರುತ್ತದೆ ಎಂದು ಹೇಳಿದ್ದರು.

    ಸದ್ಯ ಶೋಯೆಬ್ ತನ್ನ ಪತ್ನಿ ಸಾನಿಯಾ ಮಿರ್ಜಾ ಹೇಳಿದ ಹಾಗೆ ತಮ್ಮ ಟ್ವಿಟ್ಟರಿನಲ್ಲಿ ಬೇಬಿ ಮಿರ್ಜಾಮಲ್ಲಿಕ್ ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ವಿಟ್ಟರಿನಲ್ಲಿ ಸಿಹಿ ಸುದ್ದಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಂಡು ಮಗು ಹೆರಲಿಲ್ಲ ಎಂದು ಪತ್ನಿಗೆ ಬೆಂಕಿಯಿಟ್ಟ ಪತಿ!

    ಗಂಡು ಮಗು ಹೆರಲಿಲ್ಲ ಎಂದು ಪತ್ನಿಗೆ ಬೆಂಕಿಯಿಟ್ಟ ಪತಿ!

    ಬೆಂಗಳೂರು: ಪತ್ನಿ ಗಂಡು ಮಗು ಹೆರಲಿಲ್ಲ ಎಂದು ಗಂಡನೇ ಹೆಂಡತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಆನೇಕಲ್ ಕೊಪ್ಪಗೆಟ್ ಬಳಿ ನಡೆದಿದೆ.

    ವೀಣಾ (27) ಗಂಡನಿಂದ ಕೊಲೆಯಾದ ದುರ್ದೈವಿ. ಮಾರ್ಚ್ ತಿಂಗಳ 28 ರಂದು ತನ್ನ ಮನೆಗೆ ಆಕಸ್ಮಿಕ ಬೆಂಕಿ ಬಿದ್ದು ಪತ್ನಿ ಬೆಂಕಿಗೆ ಸಾವನ್ನಪ್ಪಿದ್ದಾಳೆ ಎಂದು ವೀಣಾಳ ಪತಿ ಶಶಿಕುಮಾರ್ ಕಥೆ ಕಟ್ಟಿದ್ದನು.

    ಆದರೆ ವೀಣಾಳ ಪೋಷಕರು ಮಗಳ ಸಾವು ಕೊಲೆಯೆಂದು ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಶಶಿಕುಮಾರ್ ಗಂಡು ಮಗು ಹೇರಲಿಲ್ಲ ಎಂದು ವೀಣಾಗೆ ಬೆಂಕಿ ಹಚ್ಚಿ ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ.

    ವೀಣಾ ಹಾಗೂ ಶಶಿಕುಮಾರ್ ಮದುವೆಯಾಗಿ 7 ವರ್ಷವಾಗಿದ್ದು, ಇವರಿಗೆ ಸಂಜನಾ ಹಾಗೂ ರುಚಿತಾ ಎಂಬ ಎರಡು ಹೆಣ್ಣುಮಕ್ಕಳಿದ್ದಾರೆ. ಆದರೆ ಗಂಡು ಮಗು ಹೆರಲಿಲ್ಲ ಎಂದು ನಿತ್ಯವೂ ಶಶಿಕುಮಾರ್ ವೀಣಾಗೆ ಕಿರುಕುಳ ನೀಡುತ್ತಿದ್ದ ಎಂದು ವೀಣಾ ಪೋಷಕರು ತಿಳಿಸಿದ್ದಾರೆ.