Tag: Baby Boy

  • ಗಂಡು ಮಗುವಿಗೆ ಜನ್ಮ ನೀಡಿದ ಕೃನಾಲ್‌ ಪಾಂಡ್ಯ ಪತ್ನಿ

    ಗಂಡು ಮಗುವಿಗೆ ಜನ್ಮ ನೀಡಿದ ಕೃನಾಲ್‌ ಪಾಂಡ್ಯ ಪತ್ನಿ

    ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೃನಾಲ್‌ ಪಾಂಡ್ಯ (Krunal Pandya) ಅವರ ಪತ್ನಿ ಪಂಖುರಿ ಶರ್ಮಾ ಅವರಿಂದು ತಮ್ಮ 2ನೇ ಮಗುವಿಗೆ ಜನ್ಮನೀಡಿದ್ದಾರೆ. ಶುಭ ಶುಕ್ರವಾರವೇ ಗಂಡು ಮಗುವಿನ ಜನನವಾಗಿದ್ದು ದಂಪತಿಗಳಿಬ್ಬರು ಸಂಭ್ರಮದಲ್ಲಿದ್ದಾರೆ.

    ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ತೆಗೆಸಿರುವ ಫೋಟೋವನ್ನು ಕೃನಾಲ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಗುವಿನ ಹೆಸರು ವಾಯು ಎಂದು ಸಹ ಪಾಂಡ್ಯ ಹೇಳಿಕೊಂಡಿದ್ದಾರೆ. ಈ ಫೋಟೋ ಕಂಡು ಪಾಂಡ್ಯ ಅಭಿಮಾನಿಗಳೂ ಶುಭ ಹಾರೈಸಿದ್ದಾರೆ. 2022ರ ಜುಲೈನಲ್ಲಿ ಕೃನಾಲ್‌ ಮತ್ತು ಪಂಖುರಿ (Pankuri Sharma) ದಂಪತಿ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಮೊದಲ ಮಗುವಿನ ಹೆಸರು ಕವಿರ್‌. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮತ ಚಲಾಯಿಸಿದ ಟೀಂ ಇಂಡಿಯಾ ಮುಖ್ಯಕೋಚ್‌ – ಮತದಾನಕ್ಕೆ ಕರೆ ಕೊಟ್ಟ ಮಾಜಿ ಕ್ರಿಕೆಟರ್ಸ್‌!

    2017ರಲ್ಲಿ ಕೃನಾಲ್‌ ಪಾಂಡ್ಯ ಅವರು ತಮ್ಮ ಬಹುಕಾಲದ ಗೆಳತಿ ಪಂಖುರಿ ಶರ್ಮಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವೃತ್ತಿಯಲ್ಲಿ ಮಾಡೆಲ್‌ ಆಗಿದ್ದ ಪಂಖುರಿ, ತನಗೆ ಆಧಾರ ಸ್ತಂಭವಾಗಿ ನಿಂತಿದ್ದಾರೆ ಎಂದು ಕೃನಾಲ್‌ ಆಗಾಗ್ಗೆ ಹೇಳಿಕೊಂಡಿದ್ದಾರೆ.

    ಸದ್ಯ ಐಪಿಎಲ್‌ ಕಣದಲ್ಲಿರುವ ಕೃನಾಲ್‌ ಪಾಂಡ್ಯ ಅವರು ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಪರವಾಗಿ ಆಡುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು ನಗರ ಜಿಲ್ಲೆಯ 3 ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ಕೇಂದ್ರಗಳ ವಿವರ ಹೀಗಿದೆ..

  • ಕೊಹ್ಲಿ ಮನೆಗೆ ಜ್ಯೂನಿಯರ್ ವಿರಾಟ್ ಆಗಮನ

    ಕೊಹ್ಲಿ ಮನೆಗೆ ಜ್ಯೂನಿಯರ್ ವಿರಾಟ್ ಆಗಮನ

    ಮುಂಬೈ: ಟೀಂ ಇಂಡಿಯಾ (Team India) ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಅವರ ಮನೆಗೆ ಮತ್ತೊಬ್ಬ ಅತಿಥಿಯ ಆಗಮನವಾಗಿದೆ. ಬಾಲಿವುಡ್ ನಟಿ, ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಗಂಡು ಮಗುವಿಗೆ (Boy Baby)  ಜನ್ಮ ನೀಡಿದ್ದಾರೆ.

    ಅನುಷ್ಕಾ ಶರ್ಮಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಅಭಿಮಾನಿಗಳ ಜೊತೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಫೆ.15 ರಂದು ವಿರುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಮಂಗಳವಾರ (ಫೆ.20) ಹಂಚಿಕೊಂಡಿದ್ದಾರೆ. ವಮಿಕಾಳ ತಮ್ಮನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ತಿಳಿಸಲು ಸಂತೋಷವಾಗುತ್ತಿದೆ.  ಈ ಸಂತಸದ ಸಮಯದಲ್ಲಿ ನಿಮ್ಮ ಆಶೀರ್ವಾದ ಮತ್ತು ಶುಭಹಾರೈಕೆಗಳನ್ನು ಬಯಸುತ್ತೇವೆ. ಈ ಸಮಯದಲ್ಲಿ ನಮ್ಮ ಗೌಪತ್ಯೆಯನ್ನು ಗೌರವಿಸಲು ವಿನಂತಿಸುತ್ತೇನೆ  ಎಂದು ನಟಿ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಮಗುವಿಗೆ ಈಗಾಗಲೇ ‘ಅಕಾಯ್‌’ ಎಂದು ಹೆಸರಿಟ್ಟಿದ್ದಾರೆ. ಕೊಹ್ಲಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

     

    View this post on Instagram

     

    A post shared by AnushkaSharma1588 (@anushkasharma)

    ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್‌-ಭಾರತ ಟೆಸ್ಟ್‌ ಸರಣಿ ನಡೆಯುತ್ತಿದೆ. ಐದು ಸರಣಿಯಲ್ಲಿ ಈಗಾಗಲೇ ಮೂರು ಪಂದ್ಯಗಳು ನಡೆದಿವೆ. ಭಾರತ 3-2 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಸರಣಿ ಕೈವಶಕ್ಕೆ ಇನ್ನೊಂದೇ ಹೆಜ್ಜೆ ಬಾಕಿಯಿದೆ. ಟೆಸ್ಟ್‌ ಸರಣಿಗೆ ವಿರಾಟ್‌ ಕೊಹ್ಲಿ ಅಲಭ್ಯರಾಗಿದ್ದಾರೆ.

    ವೈಯಕ್ತಿಕ ಕಾರಣ ನೀಡಿ ವಿರಾಟ್‌ ಕೊಹ್ಲಿ ಟೆಸ್ಟ್‌ ಸರಣಿಯಿಂದ ಹೊರಗಿದ್ದಾರೆ. ಅನುಷ್ಕಾ ಶರ್ಮಾ ಈಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಟೆಸ್ಟ್‌ ಸರಣಿಯಿಂದ ಹೊರಗಿದ್ದಾರೆ.

  • ಗಂಡು ಮಗುವಿನ ತಂದೆಯಾದ ನಟ ಲೋಕೇಶ್

    ಗಂಡು ಮಗುವಿನ ತಂದೆಯಾದ ನಟ ಲೋಕೇಶ್

    ಕಿರುತೆರೆ ಮತ್ತು ಹಿರಿತೆರೆಯ ನಟ ಲೋಕೇಶ್ ಬಸವಟ್ಟಿ (Lokesh Basavatti) ಗಂಡು ಮಗುವಿನ (Baby boy) ತಂದೆಯಾಗಿದ್ದಾರೆ. ನಿನ್ನೆಯಷ್ಟೇ ಲೋಕೇಶ್ ಅವರ ಪತ್ನಿ ರಚನಾ ದಶರಥ್ (Rachana Dashrath) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂಭ್ರಮದ ಸಂಗತಿಯನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

    ಪತ್ನಿ ರಚನಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದೆ ಎಂದು ಲೋಕೇಶ್ ತಿಳಿಸಿದ್ದಾರೆ. ಜನವರಿ 27 ರಂದು ಚಾಮರಾಜ ನಗರದಲ್ಲಿರುವ ಅನುಭವ ಮಂಟಪದಲ್ಲಿ ರಚನಾ ಮತ್ತು ಲೋಕೇಶ್ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಮೊನ್ನೆಯಷ್ಟೇ ರಚನಾ ಅವರ ಸೀಮಂತ ಶಾಸ್ತ್ರವನ್ನೂ ಮಾಡಲಾಗಿತ್ತು.

    ಲೋಕೇಶ್ ಮತ್ತು ರಚನಾ ಒಟ್ಟಿಗೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಗೌರಿಪುರದ ಗಯ್ಯಾಳಿಗಳು ಧಾರಾವಾಹಿಯಲ್ಲಿ ಇಬ್ಬರು ಪರಿಚಯವಾಗಿ, ಸ್ನೇಹವಾಗಿ ನಂತರ ಮನೆಯವರ ಒಪ್ಪಿಗೆ ಪಡೆದುಕೊಂಡು ಮದುವೆಯಾಗಿದ್ದಾರೆ. ಎರಡೂ ಕುಟುಂಬಗಳು ಒಪ್ಪಿ, ಅದ್ಧೂರಿಯಾಗಿಯೇ ಮದುವೆ ಮಾಡಿಕೊಟ್ಟಿದ್ದರು.

     

    ರಚನಾ ದಶರಥ್ ನೇಪಾಳ ಮೂಲದವರಾದರೂ, ಕನ್ನಡದಲ್ಲೇ ನೆಲೆಯೂರಿದ್ದಾರೆ. ಚಾಮರಾಜನಗರದ ಲೋಕೇಶ್ ಬಣ್ಣದ ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಬೆಂಗಳೂರಿಗೆ ಬಂದವರು. ಇಬ್ಬರೂ ಸಿನಿಮಾ ಮತ್ತು ಧಾರಾವಾಹಿ ಲೋಕದಲ್ಲಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಂಡು ಮಗುವಿಗೆ ತಂದೆಯಾದ ನಟ ಧ್ರುವ ಸರ್ಜಾ

    ಗಂಡು ಮಗುವಿಗೆ ತಂದೆಯಾದ ನಟ ಧ್ರುವ ಸರ್ಜಾ

    ನ್ನಡದ ಹೆಸರಾಂತ ನಟ ಧ್ರುವ ಸರ್ಜಾ  (Dhruva Sarja) ಪತ್ನಿ ಪ್ರೇರಣಾ ಗಂಡು ಮಗುವಿಗೆ (Baby boy)ಜನ್ಮ ನೀಡಿದ್ದಾರೆ. ಬೆಂಗಳೂರಿನ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಮೊನ್ನೆಯಷ್ಟೇ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು ಧ್ರುವ ಸರ್ಜಾ. ಈ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ.

    ಮೊನ್ನೆಯಷ್ಟೇ ನಡೆದಿತ್ತು ಸೀಮಂತ

    ಸಿಹಿಸುದ್ದಿ ಜೊತೆ ಇತ್ತೀಚೆಗೆ ಧ್ರುವ ಪತ್ನಿ ಪ್ರೇರಣಾಗೆ (Prerana) ಸೀಮಂತ (Baby Shower) ಕಾರ್ಯಕ್ರಮ ನೆರವೇರಿತ್ತು, ಈ ಕುರಿತ ವಿಡಿಯೋವೊಂದನ್ನ ನಟ ಶೇರ್ ಮಾಡಿದ್ದರು. ಪತ್ನಿ ಪ್ರೇರಣಾ ಸೀಮಂತ ಸಂಭ್ರಮ ವಿಡಿಯೋವನ್ನ ನಟ ಹಂಚಿಕೊಂಡಿದ್ದು, ಹಸಿರು ಬಣ್ಣದ ಸೀರೆಯಲ್ಲಿ ಪ್ರೇರಣಾ ಕಂಗೊಳಿಸಿದ್ದರು. ಲೈಟ್ ಬಣ್ಣದ ಉಡುಗೆಯಲ್ಲಿ ಧ್ರುವ ಕಾಣಿಸಿಕೊಂಡಿದ್ದರು.

    ಕನಕಪುರ ರಸ್ತೆಯ ಫಾರ್ಮ್ ಹೌಸ್‌ನಲ್ಲಿ ಪ್ರೇರಣಾ ಸೀಮಂತ ಶಾಸ್ತ್ರ ಅದ್ದೂರಿಯಾಗಿ ನಡೆಯಿತು. ಚಿರು ಸರ್ಜಾ (Chiru) ಫೋಟೋವನ್ನ ಫೋನ್‌ನಲ್ಲಿ ಧ್ರುವ ಪುತ್ರಿ ನೋಡ್ತಿರುವ ತುಣುಕು ಗಮನ ಸೆಳೆಯುತ್ತಿದೆ. ಧ್ರುವ ದಂಪತಿ, ಮಗಳಿಗೆ ಚಿರು ಅಂತ ಹೆಸರು ಹೇಳಿ ಕೊಡುತ್ತಿರೋದು ಮುದ್ದಾಗಿದೆ.

     

    ಮನೆಗೆ ಕಳೆದ ವರ್ಷ ಮುದ್ದು ಮಗಳ ಆಗಮನವಾಗಿದೆ. 2ನೇ ಮಗುವಿನ ನಿರೀಕ್ಷೆಯಲ್ಲಿರುವ ಪ್ರೇರಣಾ, 8 ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ.  ಸೀಮಂತ ಶಾಸ್ತ್ರ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಆಪ್ತರು, ಅಭಿಮಾನಿಗಳು ವಿಶ್‌ ಮಾಡಿದ್ದಾರೆ.  ಆಗಸ್ಟ್ 25ರಂದು ವಿಶೇಷ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಧ್ರುವ ಸರ್ಜಾ 2ನೇ ಮಗುವಿನ ಬಗ್ಗೆ ಗುಡ್ ನ್ಯೂಸ್ ಹೇಳಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 29ರ ಪ್ರಿಯತಮೆಯಿಂದ ಮಗು ಪಡೆದು, 83ನೇ ವಯಸ್ಸಿನಲ್ಲಿ 4ನೇ ಮಗು ತಂದೆಯಾದ ನಟ

    29ರ ಪ್ರಿಯತಮೆಯಿಂದ ಮಗು ಪಡೆದು, 83ನೇ ವಯಸ್ಸಿನಲ್ಲಿ 4ನೇ ಮಗು ತಂದೆಯಾದ ನಟ

    ಖ್ಯಾತ ಹಾಲಿವುಡ್ (Hollywood) ನಟ ಆಲ್ಫ್ರೆಡೋ ಜೇಮ್ಸ್ ಪೆಸಿನೊ (Al Pacino) 83ನೇ ವಯಸ್ಸಿನಲ್ಲಿ 29 ವರ್ಷದ ಪ್ರಿಯತಮೆಯಿಂದ ಮಗು ಪಡೆದಿದ್ದಾರೆ. ತನ್ನ ಪ್ರಿಯತಮೆ ನೂರ್ ಅಲ್ಫಾಹ್‌ಗೆ (Noor Alfallah) ಗಂಡು ಮಗು ಜನಿಸಿದ್ದು, 4ನೇ ಮಗುವಿನ ತಂದೆಯಾಗಿದ್ದಾರೆ. ಮಗುವಿಗೆ ರೋಮನ್ ಪೆಸಿನೋ ಎಂದು ಹೆಸರಿಟ್ಟಿದ್ದಾರೆ.

    ಪೆಸಿನೋ ಅವರಿಗೆ ಇದು 4ನೇ ಮಗು. ಬೆವರ್ಲಿ ಡಿ ಏಂಜೆಲೊ ಎನ್ನುವ ಪ್ರಿಯತಮೆಯಿಂದ (Girlfriend) ಆಂಟೊನ್, ಒಲಿವಿಯಾ ಎಂಬ ಮಕ್ಕಳನ್ನ ಪಡೆದಿದ್ದಾರೆ. ಜಾನ್ ಟೆರಂಟ್ ಎನ್ನುವ ಗೆಳತಿಯಿಂದ ಜೂಲಿ ಮೇರಿ ಎನ್ನುವ ಮಗಳು ಪಡೆದಿದ್ದಾರೆ.

    ಓಲ್ಡ್ ಈಸ್ ಗೋಲ್ಡ್ ಅಂತಾರೆ:
    ಪೆಸಿನೋ, ಅಲ್ಫಲ್ಲಾಹ್ ಅವರು 2022ರಲ್ಲಿ ಮೊದಲ ಬಾರಿಗೆ ಭೇಟಿ ಮಾಡಿದ್ದರು. ಅಂದಿನಿಂದಲೇ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಸಾಕಷ್ಟು ಬಾರಿ ಡಿನ್ನರ್ ಡೇಟ್ ಕೂಡ ಮಾಡಿದ್ದರು ಎನ್ನಲಾಗಿದೆ. ಈ ವಿಷಯ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದಂತೆ ಒಲ್ಡ್ ಈಸ್ ಗೋಲ್ಡ್ ಅಂತಾ ನೆಟ್ಟಿಗರು ಕಾಲೆಳೆದಿದ್ದಾರೆ. ಇದನ್ನೂ ಓದಿ: ಇಂದು ಅಭಿ-ಅವಿವಾ ಬೀಗರ ಔತಣ – ಬಾಡೂಟದ ಮೆನು ಏನು?

    ಇನ್ನೂ 29ರ ಮಹಿಳೆ ಕ್ಯಾಲಿಫೋರ್ನಿಯಾದಲ್ಲಿ ಶಿಕ್ಷಣ ಪಡೆದಿರುವ ಅಲ್ಫಲ್ಲಾಹ್ ಅವರು ಸದ್ಯ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಫಲ್ಲಾಹ್ ಅವರು 2017ರಲ್ಲಿ ಮಿಕ್ ಜಾಗರ್ ಎನ್ನುವವರ ಜೊತೆ ಡೇಟ್ ಮಾಡಲು ಆರಂಭಿಸಿದ್ದರು. ಆಗ ಮಿಕ್‌ಗೆ 74 ವರ್ಷ ಆಗಿದ್ದರೆ ಅಲ್ಫಲ್ಲಾಹ್ ಅವರಿಗೆ 22 ಆಗಿತ್ತು. ಆ ನಂತರ ಅವರೊಂದಿಗೆ ಬ್ರೇಕಪ್ ಆಗಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಗರಡಿಯಲ್ಲಿ ಸುಂದರ ಹುಡುಗಿಯರ ಜೊತೆ ಕಾಣಿಸಿಕೊಂಡ ಸೂರ್ಯ

    20ನೇ ಶತಮಾನದಲ್ಲಿ ಬಹುಬೇಡಿಕೆಯ ನಟನಾಗಿದ್ದ ಪೆಸಿನೋ ನಟನೆಗೆ ಪ್ರೈಂಟೈಂ ಎಮಿ ಅವಾರ್ಡ್ಸ್, ಎಎಫ್‌ಐ ಜೀವಮಾನ ಸಾಧನಾ ಪ್ರಶಸ್ತಿ ಹಾಗೂ ಗೋಲ್ಡನ್ ಗ್ಲೋಬ್ ಸೆಸಿಲ್ ಬಿ. ಡಿಮಿಲ್ಲೆ ಪ್ರಶಸ್ತಿಗಳು ಸಂದಿವೆ.
  • ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸೋನಂ ಕಪೂರ್: ತಾತನಾದ ಅನಿಲ್ ಕಪೂರ್

    ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸೋನಂ ಕಪೂರ್: ತಾತನಾದ ಅನಿಲ್ ಕಪೂರ್

    ಬಾಲಿವುಡ್ ನಟಿ ಸೋನಂ ಕಪೂರ್ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಸೋನಂ ಕಪೂರ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ನಾನು ಗಂಡು ಮಗುವಿನ ತಾಯಿಯಾಗಿದ್ದೇನೆ. ನನ್ನ ಮಡಿಲಲ್ಲಿ ಪುಟ್ಟ ಕಂದ ಆಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಸೋನಂ ತಾಯಿ ಸುನೀತಾ ಕಪೂರ್ ಕೂಡ ಮಗಳಿಗೆ ಅಭಿನಂದಿಸಿ ಇನ್ಸ್ಟಾದಲ್ಲಿ ಪೋಸ್ಟ್ ಹಾಕಿದ್ದಾರೆ.

    ನಾವು ನಮ್ಮ ಸುಂದರ ಕುಟುಂಬಕ್ಕೆ ಗಂಡು ಮಗುವನ್ನು ಹೃದಯದಿಂದ ಸ್ವಾಗತಿಸಿದ್ದೇವೆ. ಈ ಪ್ರಯಾಣದಲ್ಲಿ ನಮ್ಮ ಬೆಂಬಲಕ್ಕೆ ನಿಂತ ವೈದ್ಯರಿಗೆ, ದಾದಿಯರಿಗೆ, ಸ್ನೇಹಿತರಿಗೆ ಮತ್ತು ಕುಟುಂಬದ ಎಲ್ಲ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಸೋನಂ ಮತ್ತು ಪತಿ ಆನಂದ್ ದಂಪತಿ ಕೂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ ಅನಿಲ್ ಕಪೂರ್ ತಾತನಾಗಿರುವ ಕುರಿತು ಸಂತಸ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕಾನಿಷ್ಕಾ ಸೋನಿ

    ಸೋನಂ ಪ್ರೆಗ್ನೆಂಟ್ ಆಗುತ್ತಿದ್ದಂತೆಯೇ ಅದನ್ನು ಬೇಬಿ ಬಂಪ್ ಫೋಟೋದ ಮೂಲಕ ತಿಳಿಸಿದ್ದರು. ಹಲವು ಬಾರಿ ಬೇಬಿ ಬಂಪ್ ಫೋಟೋಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ, ಅನಿಲ್ ಕಪೂರ್ ಕೂಡ ತಾವು ತಾತನಾಗುತ್ತಿರುವ ವಿಷಯವನ್ನೂ ಸಂಭ್ರಮದಿಂದಲೇ ಹೇಳಿಕೊಂಡಿದ್ದರು. ಇದೀಗ ಸೋನಂ ಗಂಡು ಮಗುವಿನ ತಾಯಿ ಆಗುವ ಮೂಲಕ ಕುಟುಂಬದ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೆರಿಗೆಯ ವಿಡಿಯೋ ಹಂಚಿಕೊಂಡ ಸಂಜನಾ ಗಲ್ರಾನಿ

    ಹೆರಿಗೆಯ ವಿಡಿಯೋ ಹಂಚಿಕೊಂಡ ಸಂಜನಾ ಗಲ್ರಾನಿ

    ಸ್ಯಾಂಡಲ್‌ವುಡ್ ನಟಿ ಸಂಜನಾ ಮನೆಯಲ್ಲಿ ಸಂತಸ ಮನೆ ಮಾಡಿದೆ. ಮುದ್ದು ಮಗನ ಆಗಮನದ ಖುಷಿಯಲ್ಲಿದ್ದಾರೆ. ಈ ಮಧ್ಯೆ ತನ್ನ ಸಿಸೇರಿಯನ್ ಹೆರಿಗೆಯ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಸಂಜನಾ ಗಲ್ರಾನಿ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದರು. ನಂತರ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ ನಂತರ ತಮ್ಮ ವೈಯಕ್ತಿಕ ಜೀವನದತ್ತ ಮುಖ ಮಾಡಿದ್ದಾರೆ. ಮದುವೆ, ಸಂಸಾರ ಅಂತಾ ತನ್ನದೇ ಪ್ರಪಂಚ ಕಟ್ಟಿಕೊಂಡು ಖುಷಿಯಾಗಿದ್ದಾರೆ. ಹೀಗಿರುವಾಗ ಇತ್ತೀಚೆಗಷ್ಟೇ ಗಂಡು ಮಗುವಿಗೆ ಸಂಜನಾ ತಾಯಿಯಾಗಿದ್ದರು. ಈ ಮೂಲಕ ಮನೆಗೆ ಹೊಸ ಅತಿಥಿಯ ಆಗಮನವಾಗಿತ್ತು. ತಮ್ಮ ಹೆರಿಗೆಯ ಅನುಭವ ಕಷ್ಟ ಹೇಗಿತ್ತು ಎಂಬ ಸಣ್ಣ ತುಣುಕನ್ನ ಸಂಜನಾ ಸಾಮಾಜಿಕ ಜಾತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ತಮಿಳು ಕಿರುತೆರೆಯತ್ತ `ಪಾರು’ ಖ್ಯಾತಿಯ ಮೋಕ್ಷಿತಾ ಪೈ

    ತಂಗಿ ನಿಕ್ಕಿ ಗಲ್ರಾನಿ ಮದುವೆಯ ದಿನವೇ ಮಗುವಿನ ಆಗಮನವಾಗಿತ್ತು. ಸಿಸೇರಿಯನ್ ಹೆರಿಗೆ ಸಂಜನಾಗೆ ಆಗಿತ್ತು. ಅಂದಿನ ದಿನ ಹೇಗಿತ್ತು. ಆ ದಿನ ಎಷ್ಟು ಕಷ್ಟವಾಗಿತ್ತು ಎಂಬುದನ್ನ ವಿಡಿಯೋ ಮುಖಾಂತರ ತಿಳಿಸಿದ್ದಾರೆ. ಈ ಮೂಲಕ ತಮಗೆ ಹೆರಿಗೆ ಮಾಡಿಸಿದ ಡಾಕ್ಟರ್ ಹೇಮಾ ನಂದಿನಿ ಅವರಿಗೆ ಸಂಜನಾ ಧನ್ಯವಾದ ತಿಳಿಸಿದ್ದಾರೆ. ಈ ವಿಡಿಯೋ ಈಗ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಗಂಡು ಮಗುವಿಗೆ ತಾಯಿಯಾದ ಕಿರುತೆರೆ ನಟಿ ಅಮೃತಾ ರೂಪೇಶ್

    ಗಂಡು ಮಗುವಿಗೆ ತಾಯಿಯಾದ ಕಿರುತೆರೆ ನಟಿ ಅಮೃತಾ ರೂಪೇಶ್

    ಕಿರುತೆರೆ ನಟಿ ಅಮೃತಾ ರೂಪೇಶ್ ಮನೆಯಲ್ಲಿ ಸಂತಸ ಮನೆ ಮಾಡಿದೆ. ಮನೆಗೆ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ಅಮೃತಾ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಮೂಲಕ ನಟಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

    ಸಾಕಷ್ಟು ಸಿನಿಮಾ, ಕಿರುತೆರೆಯ ಸೀರಿಯಲ್‌ ಮತ್ತು ಶೋ ಮೂಲಕ ಗುರುತಿಸಿಕೊಂಡಿದ್ದ ಅಮೃತಾ ರೂಪೇಶ್ ಬದುಕಲ್ಲಿ ಇತ್ತೀಚೆಗೆಷ್ಟೇ ಸಾಕಷ್ಟು ಕಷ್ಟದ ದಿನಗಳನ್ನ ಏದುರಿಸಿದ ನಂತರ ಇದೀಗ ಖುಷಿಯಾಗಿದ್ದಾರೆ. ಮುದ್ದು ಮಗಳು ಸಮನ್ವಿ ಸಾವಿನ ನಂತರ ಸಾಕಷ್ಟು ಕುಗ್ಗಿ ಹೋಗಿದ್ದ ಕುಟುಂಬಕ್ಕೆ ಇದೀಗ ಹೊಸ ಚೈತನ್ಯ ಸಿಕ್ಕಿದೆ. ಗಂಡು ಮಗುವಿಗೆ ಅಮೃತಾ ತಾಯಿಯಾಗಿದ್ದಾರೆ. ಇದನ್ನೂ ಓದಿ:ವಿಕ್ರಾಂತ್ ರೋಣ ಸಿನಿಮಾದ ಮತ್ತೊಂದು ಹಾಡು ರಿಲೀಸ್ : ಸೊಗಸಾದ ಲಾಲಿ ಹಾಡು

     

    View this post on Instagram

     

    A post shared by Amrutha Roopesh (@roopeshamrutha)

    ನಟಿ ಅಮೃತಾ ರೂಪೇಶ್ (ಜುಲೈ.2)ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿನ ಜನನವಾಗಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಮಗುವಿನ ಆಗಮನದ ಖುಷಿಯ ವಿಚಾರವನ್ನು ಅಮೃತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶುಭಹಾರೈಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

    Live Tv

  • ಸಂಜನಾ ಗಲ್ರಾನಿ ಮಗುವಿನ ನಾಮಕರಣ: ಹೆಸರೇನು ಗೊತ್ತಾ?

    ಸಂಜನಾ ಗಲ್ರಾನಿ ಮಗುವಿನ ನಾಮಕರಣ: ಹೆಸರೇನು ಗೊತ್ತಾ?

    ಸ್ಯಾಂಡಲ್‌ವುಡ್ ನಟಿ ಸಂಜನಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಈಗ ಮಗುವಿನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಮನೆಗೆ ಹೊಸ ಅತಿಥಿ, ಸಂಜನಾ ಮುದ್ದು ಮಗನ ಆಗಮನವಾಗಿ, ಒಂದು ತಿಂಗಳು ಕಳೆದಿದೆ. ಇದೇ ಖುಷಿಯಲ್ಲಿ ಮಗುವಿಗೆ ನಾಮಕರಣ ಮಾಡಿದ್ದಾರೆ.

    ನಟಿ ಸಂಜನಾ ಕಳೆದ 2020ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಅಜೀಜ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಗಂಡು ಮಗುವಿಗೆ ತಾಯಿಯಾಗಿ ಮಗುವಿನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮಗುವಿನ ನಾಮಕರಣ ನೆರವೇರಿದ್ದು, ʻಅಲಾರಿಕ್ʼ ಎಂಬ ಹೆಸರನ್ನು ಇಡಲಾಗಿದೆ. ಈ ಕುರಿತು ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಕಬ್ಬನ್ ಪಾರ್ಕ್‌ನಲ್ಲಿ ಜುಲೈ 1 ರಿಂದ ಸಾಕು ನಾಯಿ ಬ್ಯಾನ್ : ಮರುಪರಿಶೀಲನೆಗೆ ನಟಿ ಐಂದ್ರಿತಾ ರೇ ಮನವಿ

    ಸಂಜನಾ ಪತಿ ಅಜೀಜ್ ಮಗುವಿನ ಆರೈಕೆ ಮಾಡುತ್ತಿರುವ ವಿಡಿಯೋ ಶೇರ್ ಮಾಡಿ, ಮುದ್ದು ಮಗನ ಹೆಸರನ್ನು ಅನೌನ್ಸ್ ಮಾಡಿದ್ದಾರೆ. ಒಟ್ನಲ್ಲಿ ಈ ಸುದ್ದಿ ಕೇಳಿ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.

    Live Tv

  • ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಗಂಡುಮಗು ಸಾವು

    ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಗಂಡುಮಗು ಸಾವು

    ಲಿಸ್ಬನ್: ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್. ರೊನಾಲ್ಡೋ ಅವರು ತಮ್ಮ ಗಂಡುಮಗುವನ್ನು ಕಳೆದುಕೊಂಡಿದ್ದಾರೆ.

    ರೊನಾಲ್ಡೋ ತಮ್ಮ ಅವಳಿ ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ನಮ್ಮ ನವಜಾತ ಅವಳಿ ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿರುವುದು ನಾವು ದುಃಖದಿಂದ ಘೋಷಿಸಬೇಕಾಗಿದೆ. ಇದೀಗ ಹೆಣ್ಣು ಮಗು ಮಾತ್ರವೇ ಹುಟ್ಟಿದ್ದು, ಈ ಕ್ಷಣವನ್ನು ಸ್ವಲ್ಪ ಭರವಸೆಯಿಂದ ಬದುಕಲು ನಮಗೆ ಶಕ್ತಿ ನೀಡಿದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಟ್ಲರ್ ಬೊಂಬಾಟ್ ಶತಕ – ರಾಜಸ್ಥಾನ್ ರಾಯಲ್ಸ್‌ಗೆ 7ರನ್‌ಗಳ ರೋಚಕ ಜಯ

    ವೈದ್ಯರ ಆರೈಕೆ ಹಾಗೂ ಬೆಂಬಲಕ್ಕಾಗಿ ನಾವು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಈ ನಷ್ಟದಿಂದ ನಾವು ಕುಗ್ಗಿ ಹೋಗಿದ್ದೇವೆ. ಈ ಕಷ್ಟದ ಸಮಯದಲ್ಲಿ ನಾನು ನಿಮ್ಮಿಂದ ಶಾಂತಿಯನ್ನು ಬಯಸುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಅಪಘಾತವಾದರೆ ರಸ್ತೆ ಅಗೆದವರೆ ಹೊಣೆ – ಬಿಬಿಎಂಪಿಯಿಂದ ಆದೇಶ

    ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ಗೆಳತಿ ಜಾರ್ಜಿನಾರೊಂದಿಗೆ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದರು. ಆದರೆ ಅವಳಿ ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿರುವುದು ಅಭಿಮಾನಿಗಳಿಗೂ ದುಃಖ ತಂದಿದೆ.