Tag: baby born

  • ಭೂಮಿಯಿಂದ 42,000 ಅಡಿ ಎತ್ತರದಲ್ಲಿ ಮಗು ಜನನ!

    ಭೂಮಿಯಿಂದ 42,000 ಅಡಿ ಎತ್ತರದಲ್ಲಿ ಮಗು ಜನನ!

    – ಪ್ರಸವದ ವೇಳೆ ಸಹಾಯಕ್ಕೆ ಬಂದ ಟರ್ಕಿಶ್ ಏರ್‍ಲೈನ್ಸ್ ಸಿಬ್ಬಂದಿ

    ಅಂಕಾರಾ: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರು 42,000 ಅಡಿ ಎತ್ತರದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಭಾನುವಾರ ನಡೆದಿದೆ.

    ನಫೀ ದಿಯಾಬೇ ಎಂಬ 28 ವರ್ಷದ ಗರ್ಭಿಣಿ ಟರ್ಕಿಶ್ ಏರ್‍ಲೈನ್ಸ್ ಪ್ರಯಾಣಿಸುತ್ತಿದ್ದರು. ಅಂತೆಯೇ ವಿಮಾನ ಭೂಮಿಯಿಂದ 42,000 ಅಡಿ ಎತ್ತರದಲ್ಲಿ ಹೋಗುತ್ತಿದ್ದ ವೇಳೆ ದಿಯಾಬೇಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡು ವಿಮಾನದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ರು.

    ಮಹಿಳೆಗೆ ಪ್ರಸವಾಗುತ್ತಿದ್ದಂತೆಯೇ ವಿಮಾನದಲ್ಲಿದ್ದ ಇತರ ಪ್ರಯಾಣಿಕರು ಹಾಗೂ ಸಿಬ್ಬಂದಿ ವರ್ಗ ಸಹಾಯ ಮಾಡಿದ್ದಾರೆ. ವಿಮಾನವು ಗಿನಿ ರಾಜಧಾನಿ ಕೊನಾರ್ಕ್ ಮೂಲಕ ಟರ್ಕಿಯ ಇಸ್ತಾಂಬೂಲ್‍ನಿಂದ ಕಡೆಗೆ ಸಂಚರಿಸುತಿತ್ತು.

    ಮಗುವಿಗೆ `ಕಡಿಜೂ’ ಅಂತಾ ನಾಮಕರಣ ಮಾಡಿದ್ದು, ಸದ್ಯ ತಾಯಿ ಹಾಗೂ ನವಜಾತ ಹೆಣ್ಣು ಶಿಶು ಆರೋಗ್ಯವಾಗಿದ್ದು, ಆಫ್ರಿಕಾದ ಬುರ್ಕಿನಾ ಫ್ಯಾಶೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಟರ್ಕಿಶ್ ಏರ್‍ಲೈನ್ಸ್ ಸಿಬ್ಬಂದಿ ಈ ಬಗ್ಗೆ ಫೇಸ್ಬುಕ್ ಹಾಗೂ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ. ಫೇಸ್‍ಬುಕ್ ನಲ್ಲಿ ಹಾಕಿದ್ದ ಈ ಪೋಸ್ಟ್ ಗೆ 32,000 ಮಂದಿ ಲೈಕ್ ಮಾಡಿದ್ದಾರೆ. ಹಾಗೆಯೇ ಟಿಟ್ಟರ್‍ನಲ್ಲಿ ಹಾಕಿರೋ ಈ ಪೋಸ್ಟ್‍ಗೆ ಸುಮಾರು 16,000ಕ್ಕೂ ಹೆಚ್ಚು ರೀ ಟ್ವೀಟ್ ಗಳು ಬಂದಿವೆ.