Tag: baby arna

  • ಮಗಳಿಗೆ ಮುದ್ದಾದ ಹೆಸರಿಟ್ಟ ಪ್ರಣಿತಾ ಸುಭಾಷ್

    ಮಗಳಿಗೆ ಮುದ್ದಾದ ಹೆಸರಿಟ್ಟ ಪ್ರಣಿತಾ ಸುಭಾಷ್

    ಸ್ಯಾಂಡಲ್‌ವುಡ್ ಬ್ಯೂಟಿ ಪ್ರಣಿತಾ ಸುಭಾಷ್, ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ತಮ್ಮ ಮುದ್ದು ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮಗಳ ಚೆಂದದೊಂದು ಫೋಟೋಶೂಟ್ ಮಾಡಿಸಿ, ಅಭಿಮಾನಿಗಳಿಗೆ ಪರಿಚಯಸಿದ್ದಾರೆ. ಈ ಫೋಟೋ ಸದ್ಯ ಸಖತ್ ವೈರಲ್ ಆಗುತ್ತಿದೆ.

    ಸಾಲು ಸಾಲು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಬಹುಭಾಷಾ ನಟಿ ಪ್ರಣಿತಾ ಸದ್ಯ ನಟನೆಗೆ ಕೊಂಚ ಬ್ರೇಕ್ ಕೊಟ್ಟು ತಮ್ಮ ವೈಯಕ್ತಿಕ ಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಮಗಳ ಆರೈಕೆಯಲ್ಲಿ ಖುಷಿ ಕಾಣ್ತಿದ್ದಾರೆ. ಈಗ ಮಗಳ ಫೋಟೋಶೂಟ್ ಜೊತೆ ಹೆಸರನ್ನು ಕೂಡ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಖ್ಯಾತ ಹಿರಿಯ ಗಾಯಕಿ ನಿರ್ಮಲಾ ಮಿಶ್ರಾ ವಿಧಿವಶ

    ಪ್ರಣಿತಾ ದಂಪತಿ ತಮ್ಮ ಮುದ್ದು ಮಗಳಿಗೆ ʻಅರ್ನಾʼ ಅಂತಾ ಹೆಸರಿಟ್ಟಿದ್ದಾರೆ. ಜೊತೆಗೆ ಮಗುವಿನ ಚೆಂದದ ಫೋಟೋಶೂಟ್ ಕೂಡ ಶೇರ್‌ ಮಾಡಿದ್ದಾರೆ. ಈ ಫೋಟೋ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ. ಫೋಟೋ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]