Tag: Baburao chinchanasuru

  • ಬಾಬುರಾವ್ ಚಿಂಚನಸೂರಿಗೆ 11 ಕೋಟಿ ರೂ. ಸಾಲ ನೀಡಿದ್ದ ಮಹಿಳೆ ಆತ್ಮಹತ್ಯೆ

    ಬಾಬುರಾವ್ ಚಿಂಚನಸೂರಿಗೆ 11 ಕೋಟಿ ರೂ. ಸಾಲ ನೀಡಿದ್ದ ಮಹಿಳೆ ಆತ್ಮಹತ್ಯೆ

    ಬೆಂಗಳೂರು: ಮಾಜಿ ಸಚಿವ ಬಾಬುರಾವ್ ಚಿಂಚನಸೂರಿಗೆ 11 ಕೋಟಿ ರೂ. ಸಾಲ ನೀಡಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಅಂಜನಾ ವಿ ಶಾಂತವೀರ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಚಂದ್ರಲೇಔಟ್ ನ ತಮ್ಮ ನಿವಾಸದಲ್ಲಿ ಸಾವಿಗೆ ಶರಣಾಗಿದ್ದಾರೆ. ಮಗನಿಗೆ ದೂರವಾಣಿ ಕರೆ ಮಾಡಿದ ಅಂಜನಾ, ನಾನು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದೇನೆ ಎಂದು ಹೇಳಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಅಂಜನಾ ಅವರು ಬಾಬುರಾವ್ ಚಿಂಚನಸೂರಿಗೆ 11 ಕೋಟಿ ರೂ. ಸಾಲ ನೀಡಿದ್ದರು. ಬಳಿಕ ಅಂಜನಾ ಈ ವಿಚಾರವಾಗಿ ದೊಡ್ಡ ಗಲಾಟೆ ಮಾಡಿಕೊಂಡಿದ್ದು, ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಹಣಕಾಸಿನ ವಿಚಾರ ಇನ್ನೂ ಇತ್ಯರ್ಥ ಆಗಿರಲಿಲ್ಲ. ಹೀಗಾಗಿ ಅಂಜನಾ ಪದೇ ಪದೇ ಕೋರ್ಟಿಗೆ ಹಾಜರಾಗುತ್ತಿದ್ದರು. ಆದರೂ ಪ್ರಕರಣ ಇತ್ಯರ್ಥವಾಗಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗುತ್ತಿದೆ.

    ಗುರುವಾರ ರಾತ್ರಿ ಅಂಜನಾ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಅಂಜನಾ ಮಗ ವೈಯಕ್ತಿಕ ಕಾರಣಗಳಿಂದ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಶುಕ್ರವಾರವೇ ಅಂಜನಾ ಅಂತ್ಯಕ್ರಿಯೆ ನಡೆದಿದೆ.

  • ಯಮ ಕರೆದ್ರೂ ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸಿ ಹೋಗ್ತೀನಿ: ಚಿಂಚನಸೂರ್

    ಯಮ ಕರೆದ್ರೂ ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸಿ ಹೋಗ್ತೀನಿ: ಚಿಂಚನಸೂರ್

    ಕಲಬುರಗಿ: ಯಮ ಬಂದು ಹಗ್ಗ ಹಾಕಿ ಜಗ್ಗಿದರೂ ನಾನು ಹೋಗಲ್ಲ, ಕೋಲಿ ಸಮಾಜವನ್ನು ಎಸ್‍ಟಿ ವರ್ಗಕ್ಕೆ ಸೇರಿಸಿ ಮತ್ತೆ ಬರುತ್ತೇನೆ ಎನ್ನುತ್ತೇನೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

    ಚಿಂಚೋಳಿ ಪಟ್ಟಣದಲ್ಲಿ ಬಿಜೆಪಿ ಆಯೋಜನೆಯ ಕೋಲಿ ಸಮಾಜದ ಸಮಾವೇಶದಲ್ಲಿ ಬಾಬುರಾವ್ ಚಿಂಚನಸೂರ್ ಭಾಗಿಯಾಗಿದ್ದರು. ಈ ವೇಳೆ ನಾನು ಸುಮ್ಮನೆ ಸಾಯುವುದಿಲ್ಲ. ಯಮ ಕರೆದರೂ ನಾನು ಕೋಲಿ ಸಮಾಜವನ್ನು ಎಸ್‍ಟಿ ವರ್ಗಕ್ಕೆ ಸೇರಿಸಿಯೇ ಹೋಗುತ್ತೇನೆ ಎಂದರು. ಕೋಲಿ ಸಮಾಜವನ್ನು ಎಸ್‍ಟಿ ಮಾಡಿದರೆ ತಮ್ಮ ಸಮಾನಾಂತರ ಆಗುತ್ತಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೋಲಿ ಸಮಾಜದ ತಲೆ ಮೇಲೆ ಕಾಲಿಟ್ಟರು. ಹಾಗೆಯೇ ಇವನು ದಿನ ದಿನಾ ಸ್ಟ್ರಾಂಗ್ ಆಗುತ್ತಾನೆ. ನಾನು ಪ್ರತಿದಿನ ಶೈನ್ ಆಗುತ್ತೇನೆ ಎಂದು ನನ್ನ ಮಂತ್ರಿ ಪದವಿಯಿಂದ ತೆಗೆದರು ಎಂದು ಆರೋಪಿಸಿದರು.

    ಕಲಬುರಗಿಯಲ್ಲಿ ಸಮಾವೇಶಕ್ಕೆ ಪ್ರಧಾನಿಯವರು ಬಂದಿದ್ದಾಗ ನಾನು ಅವರ ಕಾಲಿಗೆ ಬಿದ್ದಾಗ ‘ಕೋಲಿ ಸಮಾಜ್ ಕೋ ಮಹಾನ್ ನಾಯಕ್ ಮಿಲಾ’ ನನ್ನ ಕಿವಿಯಲ್ಲಿ ಹೇಳಿದ್ದರು ಎಂದು ತಿಳಿಸಿದರು. ಅಷ್ಟೇ ಅಲ್ಲದೆ ಕೋಲಿ ಸಮಾಜದವರು ಸ್ವಾಭಿಮಾನಿಗಳು, ಮಾರಾಟವಾಗುವವರಲ್ಲ. ನನಗಂತೂ ಮಕ್ಕಳಿಲ್ಲ, ಅವಿನಾಶ್ ಜಾಧವ್‍ನನ್ನು ನನ್ನ ದತ್ತು ಪುತ್ರ ಎಂದು ತಿಳಿದು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

  • ಹೆಚ್‍ಡಿಡಿಗೆ 224 ಮೊಮ್ಮಕ್ಕಳು ಯಾಕಿಲ್ಲ?: ಚಿಂಚನಸೂರು

    ಹೆಚ್‍ಡಿಡಿಗೆ 224 ಮೊಮ್ಮಕ್ಕಳು ಯಾಕಿಲ್ಲ?: ಚಿಂಚನಸೂರು

    ಕಲಬುರಗಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮಗೆ 224 ಮೊಮ್ಮಕ್ಕಳಿಲ್ಲ ಯಾಕೆ ಇಲ್ಲ? ಇದಿದ್ದರೆ ಎಲ್ಲರಿಗೂ ಸೀಟು ಕೊಡಿಸಬಹುದಿತ್ತು ಎಂಬ ಚಿಂತೆ ಅವರಿಗೆ ಕಾಡುತ್ತಿದೆ ಎಂದು ಕಲಬುರಗಿಯಲ್ಲಿ ನಡೆದ ಕೋಲಿ ಸಮಾಜ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ವ್ಯಂಗ್ಯವಾಡಿದ್ದಾರೆ.

    ಸಭೆಯಲ್ಲಿ ಕುಟುಂಬ ರಾಜಕಾರಣ ಬಗ್ಗೆ ಪ್ರಸ್ತಾಪಿಸಿ ಚಿಂಚನಸೂರ್, ದೇವೇಗೌಡರಿಗೆ 224 ಮೊಮ್ಮಕ್ಕಳಿದ್ದಿದ್ದರೆ ಎಲ್ಲ ಕ್ಷೇತ್ರಗಳಲ್ಲಿ ಅವರೇ ಸ್ಪರ್ಧೆ ಮಾಡುತ್ತಿದ್ದರು. ಆದ್ರೆ ಅಷ್ಟು ಮಂದಿ ಯಾಕೆ ಮೊಮ್ಮಕ್ಕಳಿಲ್ಲ ಅಂತ ಅವರು ಚಿಂತೆ ಮಾಡುತ್ತಿದ್ದಾರೆ. ಅಲ್ಲದೆ ಕಲಬುರಗಿಯಲ್ಲಿಯೂ ತಂದೆ, ಮಗ ಅಷ್ಟೇ ಇರಬೇಕು ಅಂತಾ ಎಲ್ಲರನ್ನೂ ಹೊರಗೆ ಹೋಗೋ ಹಾಗೇ ಮಾಡಿದ್ದಾರೆ ಅಂತ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ ಬಾಬುರಾವ್ ಚಿಂಚನಸೂರು ವಾಗ್ದಾಳಿ ನಡೆಸಿದರು.

    ಕೇಂದ್ರದಲ್ಲಿ ಈ ಬಾರಿ ಮತ್ತೆ ಬಿಜೆಪಿ ಸರ್ಕಾರ ಬಂದರೆ ಕೋಲಿ ಸಮಾಜವನ್ನು ಎಸ್‍ಟಿ ವರ್ಗಕ್ಕೆ ಸೇರಿಸಲಾಗುವುದು ಎಂದು ಭರವಸೆಯನ್ನು ನೀಡಿದರು.

  • ಮೂವರು ಉದ್ಭವ ಮೂರ್ತಿಗಳು ಚುನಾವಣೆ ಮುಗಿದ್ಮೇಲೆ ಮನೆಗೆ ಹೋಗ್ತಾರೆ: ಪ್ರಿಯಾಂಕ್ ಖರ್ಗೆ

    ಮೂವರು ಉದ್ಭವ ಮೂರ್ತಿಗಳು ಚುನಾವಣೆ ಮುಗಿದ್ಮೇಲೆ ಮನೆಗೆ ಹೋಗ್ತಾರೆ: ಪ್ರಿಯಾಂಕ್ ಖರ್ಗೆ

    – ರಾಜ್ಯ ಸರ್ಕಾರದ ಬಗ್ಗೆ ಪ್ರಧಾನಿ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು

    ಕಲಬುರಗಿ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉಮೇಶ್ ಜಾಧವ್, ಮಾಲೀಕಯ್ಯ ಗುತ್ತೇದಾರ್ ಹಾಗೂ ಬಾಬುರಾವ್ ಚಿಂಚನಸೂರು ಉದ್ಭವ ಮೂರ್ತಿಗಳಾಗಿದ್ದು, ಚುನಾವಣೆ ಬಳಿಕ ಮನೆಗೆ ವಾಪಸ್ ಹೋಗ್ತಾರೆ ಎಂದು ಸಮಾಜಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕ ಉಮೇಶ್ ಜಾಧವ್, ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಈ ಮೂರು ಶಾಸಕರು ತ್ರಿಮೂರ್ತಿಗಳು ಒಂದು ರೀತಿ ಉದ್ಭವಮೂರ್ತಿಗಳ ಹಾಗೆ. ಈ ಚುನಾವಣೆ ಮುಗಿದ ನಂತರ ಉದ್ಭವ ಮೂರ್ತಿಗಳು ಪತನವಾಗ್ತಾರೆ ಎಂದಿದ್ದಾರೆ. ಹಾಗೆಯೇ ಚಿಂಚೋಳಿಯಲ್ಲಿ ಯಾವ ಪ್ರೈವೇಟ್ ಲಿಮಿಟೆಡ್ ಕಂಪನಿಯಿದೆ ಗೊತ್ತಿಲ್ವಾ ಎಂದು ಉಮೇಶ್ ಜಾಧವ್ ಅವರಿಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

    ಜಾಧವ್ ಅವರಿಗೆ ಬಿಜೆಪಿಯಲ್ಲಿ ದೊಡ್ಡ ಅವಮಾನ ಆಗಿದೆ. ಮೋದಿ ಕಲಬುರಗಿಯಲ್ಲಿ ಭಾಷಣ ಮಾಡಿದಾಗ ಜಾಧವ್ ಹೆಸರನ್ನಾದರು ಹೇಳಿದ್ದಾರಾ? ಹಾಗಾದರೇ ಅವರಿಗೆ ಏನು ಮರ್ಯಾದೆ ಉಳಿಯಿತು? ಬಿಜೆಪಿಯವರು ಲೋಕಸಭೆಗೆ ಜಾಧವ್ ಹೆಸರು ಘೋಷಿಸಿಲ್ಲ. ಜಾಧವ್ ಅವರೇ ಸ್ವಯಂ ಘೋಷಿತ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಮಾತಾಡಿದ್ದಾರೆ. ಜಾಧವ್ ಸೇರಿದಂತೆ ಯಾರೇ ಸ್ಪರ್ಧೆ ಮಾಡಿದರೂ ನಮಗೆ ಚುನಾವಣೆ ಮಾಡೋದು ಗೊತ್ತು. ಹಿಂದೆ ಎಂ.ವೈ.ಪಾಟೀಲ್‍ಗೆ ಕೈಕೊಟ್ಟಂತೆ ಬಿಜೆಪಿ ಜಾಧವಗೂ ಕೈಕೊಡಬಹುದು. ಕೈಕೊಡೋ ಗುಣ ಬಿಜೆಪಿ ಸ್ವಭಾವದಲ್ಲಿಯೇ ಇದೆ ಎಂದು ಕಿಡಿಕಾರಿದ್ದಾರೆ.

    ಕೇಂದ್ರದ ಯೋಜನೆಗಳು ರೈತರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ಅಡ್ಡಗೋಡೆ ಎಂಬ ಮೋದಿ ಹೇಳಿಕೆಗೆ ಆಕ್ರೋಶ ವ್ಯಕ್ತಿಪಡಿಸಿದ್ದಾರೆ. ಈ ರೀತಿ ಹೇಳಿಕೆ ನೀಡಲು ಪ್ರಧಾನಿ ನರೇಂದ್ರ ಮೋದಿಯವರಿಗೆ ನಾಚಿಕೆಯಾಗಬೇಕು. ನಿಜವಾಗಿ ರೈತರ ಪರವಾಗಿ ಮೋದಿ ಏನು ಕೆಲಸ ಮಾಡಿದ್ದಾರೆ? ಸಾಲ ಮನ್ನಾ ಬಗ್ಗೆ ಎಷ್ಟೇ ಒತ್ತಡ ಇದ್ದರೂ ಕ್ರಮ ತೆಗೆದುಕೊಂಡಿಲ್ಲ. ಸ್ವತಃ ನರೇಂದ್ರ ಮೋದಿ ಆರ್.ಎಸ್‍.ಎಸ್ ಕೈಗೊಂಬೆಯಾಗಿದ್ದಾರೆ  ಎಂದು ಕರ್ನಾಟಕದ ಸಿಎಂ ರಿಮೋಟ್ ಕಂಟ್ರೋಲ್ ಸಿಎಂ ಎಂಬ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೆಂಕಟರೆಡ್ಡಿ ಮುದ್ನಾಳ್ ಕ್ಷೇತ್ರ ಬದಲಾಯಿಸಬಾರದೆಂದು ವಿಷ ಸೇವಿಸಿದ ಬಿಜೆಪಿ ಕಾರ್ಯಕರ್ತ

    ವೆಂಕಟರೆಡ್ಡಿ ಮುದ್ನಾಳ್ ಕ್ಷೇತ್ರ ಬದಲಾಯಿಸಬಾರದೆಂದು ವಿಷ ಸೇವಿಸಿದ ಬಿಜೆಪಿ ಕಾರ್ಯಕರ್ತ

    ಯಾದಗಿರಿ: ವೆಂಕಟರೆಡ್ಡಿ ಮುದ್ನಾಳ್ ಅವರನ್ನು ಗುರುಮಠಕಲ್ ಕ್ಷೇತ್ರದಿಂದ ಬದಲಾವಣೆ ಮಾಡಬಾರದು ಎಂದು ಬಿಜೆಪಿ ಕಾರ್ಯಕರ್ತನೋರ್ವ ವಿಷ ಸೇವನೆಗೆ ಯತ್ನಿಸಿದ ಘಟನೆಯು ಯಾದಗಿರಿ ನಗರದ ಮುದ್ನಾಳ ಲೇಔಟ್ ನಲ್ಲಿ ನಡೆದಿದೆ.

    ಗುರುಮಠಕಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ವೆಂಕಟರೆಡ್ಡಿ ಮುದ್ನಾಳ್ ಅವರು ಬಿಜೆಪಿ ಪಕ್ಷದ ಇನ್ನೊರ್ವ ಆಕಾಂಕ್ಷಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಕಾರ್ಯಕರ್ತರು ತಪ್ಪಾಗಿ ಅರ್ಥೈಸಿಕೊಳ್ಳಬಾರದೆಂದು ವೆಂಕಟರೆಡ್ಡಿ ಅವರು ಸಭೆ ಕರೆದಿದ್ದರು.

    ಬಿಜೆಪಿ ಹೈಕಮಾಂಡ್ ಮಾತನ್ನು ಕೇಳಬೇಕೇ ಅಥವಾ ಗುರಮಠಕಲ್ ಕ್ಷೇತ್ರದ ಕಾರ್ಯಕರ್ತರ ಮಾತನ್ನು ಕೇಳಬೇಕೇ ಎನ್ನುವ ಗೊಂದಲದಲ್ಲಿ ವೆಂಕಟರೆಡ್ಡಿ ಮುದ್ನಾಳ್ ಇದ್ದು, ಸಭೆಯಲ್ಲಿ ಕಣ್ಣೀರು ಹಾಕಿದ್ದಾರೆ.

    2013ರ ಚುನಾವಣೆಯಲ್ಲಿ ವೆಂಕಟರೆಡ್ಡಿಯವರು ಕೆಜೆಪಿ ಪಕ್ಷದಿಂದ ಗುರುಮಠಕಲ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಕೆಜೆಪಿ ಪಕ್ಷ ಬಿಜೆಪಿ ಜೊತೆಗೆ ವಿಲೀನವಾದ ಬಳಿಕ ಈ ಬಾರಿ ಬಿಜೆಪಿ ಪಕ್ಷದಿಂದ ವೆಂಕಟರೆಡ್ಡಿ ಗುರುಮಠಕಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

    2013 ರ ಚುನಾವಣೆಯಲ್ಲಿ ವೆಂಕಟರೆಡ್ಡಿಯವರು 32,362 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. 3,689 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಎದರು ಸೋಲನ್ನುಕಂಡಿದ್ದರು.