Tag: Baburao Chinchanasur

  • ಈ ಬಾರಿ ಖರ್ಗೆ ಬದಲಾಗಿ ರಾಧಾಕೃಷ್ಣಗೆ ಕಲಬುರಗಿ ಎಂಪಿ ಟಿಕೆಟ್: ಚಿಂಚನಸೂರು

    ಈ ಬಾರಿ ಖರ್ಗೆ ಬದಲಾಗಿ ರಾಧಾಕೃಷ್ಣಗೆ ಕಲಬುರಗಿ ಎಂಪಿ ಟಿಕೆಟ್: ಚಿಂಚನಸೂರು

    ಯಾದಗಿರಿ: ಲೋಕಸಭಾ ಚುನಾವಣೆಯ (Loksabha Election) ಕಾವು ಈಗಿನಿಂದಲೇ ರಂಗೇರುತ್ತಿದೆ. ಕಾಂಗ್ರೆಸ್ (Congress) ಪಕ್ಷದಿಂದ ಇನ್ನೂ ಅಧಿಕೃತವಾಗಿ ಲೋಕಸಭಾ ಚುನಾವಣೆ ಅಧಿಕೃತ ಅಭ್ಯರ್ಥಿಗಳ ಘೋಷಣೆಗೂ ಮುನ್ನವೇ ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ (BabuRao Chinchanasur) ಅಚ್ಚರಿ ಹೇಳಿಕೆ ನೀಡಿದ್ದಾರೆ.

    ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರೇ ನಿಲ್ಲಬಹುದು ಅಂತಾ ಚಿಂಚನಸೂರು ಹೇಳಿದ್ದಾರೆ. ನನ್ನ ಪ್ರಕಾರ ರಾಧಾಕೃಷ್ಣ ಅವರನ್ನು ನಿಲ್ಲಿಸಬಹುದು, ರಾಧಾಕೃಷ್ಣ ಅವರು ನಿಂತರೆ ಅವರಿಗೆ ಹೆಚ್ಚಿನ ಮತ ನೀಡಿ ಎಂಪಿ ಮಾಡುತ್ತೇವೆ. ಇದನ್ನೂ ಓದಿ: ಕರ್ನಾಟಕ ಮತ್ತೊಂದು ಬಿಹಾರ ಆಗ್ತಿದೆ ಅನಿಸುತ್ತಿದೆ: ಆರ್. ಅಶೋಕ್

    ಕಲಬುರಗಿ ಎಂಪಿ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸ್ತಾರೆ ಗೊತ್ತಿಲ್ಲ. ನಾವು ರಾಧಾಕೃಷ್ಣ ಅವರಿಗೆ ಟಿಕೆಟ್ ನೀಡಲು ಒತ್ತಾಯ ಮಾಡುತ್ತೇವೆ. ರಾಧಾಕೃಷ್ಣ ಲೋಕಸಭಾ ಚುನಾವಣೆಗೆ ನಿಂತರೆ ಒಳ್ಳೆಯದು ಅಂತಾ ಯಾದಗಿರಿಯ ಗುರುಮಠಕಲ್ ನಲ್ಲಿ ಬಾಬೂರಾವ್ ಚಿಂಚನಸೂರು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ್‌ ಕಾರು ಅಪಘಾತ – ಮಾಜಿ ಸಚಿವ ಆಸ್ಪತ್ರೆಗೆ ದಾಖಲು

    ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ್‌ ಕಾರು ಅಪಘಾತ – ಮಾಜಿ ಸಚಿವ ಆಸ್ಪತ್ರೆಗೆ ದಾಖಲು

    ಯಾದಗಿರಿ: ಕಾಂಗ್ರೆಸ್ (Congress) ಅಭ್ಯರ್ಥಿ‌‌, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ (Baburao Chinchansur) ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಕಲಬುರಗಿ ಆಕಾಶವಾಣಿ ಕೇಂದ್ರದ ಬಳಿ ನಡೆದಿದೆ.

    ಯಾದಗಿರಿ (Yadagiri) ಜಿಲ್ಲೆಯ ಗುರುಮಠಕಲ್‌ ವಿಧಾನಸಭಾ ಕ್ಷೇತ್ರದ‌ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ ಚಿಂಚನಸೂರ್‌. ಇವರು ಯಾದಗಿರಿಯಿಂದ ಕಲಬುರಗಿಗೆ ಹೋಗುವಾಗ ಅಪಘಾತ ಸಂಭವಿಸಿದೆ. ರಾತ್ರಿ 12:30 ರ ಸುಮಾರಿಗೆ ಈ ಘಟನೆ ನಡೆದಿದೆ. ಇದನ್ನೂ ಓದಿ: ಸವದಿ ಪಕ್ಷ ಬಿಟ್ಟು ಹೋಗಿದ್ದು ಪೀಡೆ ತೊಲಗಿದಂತಾಗಿದೆ: ರಮೇಶ್‌ ಜಾರಕಿಹೊಳಿ

    ರಸ್ತೆಯ ಮಧ್ಯೆ ಇರುವ ಗುಂಡಿಯಲ್ಲಿ ಕಾರು ಹಾದುಹೋದ ಕಾರಣ ನಿಯಂತ್ರಣ ತಪ್ಪಿ ಕಾರು ಬಿದ್ದಿದೆ. ಚಾಲಕ ನಿದ್ರೆಯ ಮಂಪರಿನಲ್ಲಿ ವಾಹನ ಚಲಾಯಿಸಿದ್ದಕ್ಕೆ ಹೀಗೆ ಆಗಿದೆ ಎನ್ನಲಾಗಿದೆ. ಕಾರು ಬಿದ್ದ ರಭಸಕ್ಕೆ ಚಿಂಚನಸೂರ್‌ ತಲೆ ಹಾಗೂ ಕಾಲಿಗೆ ಗಾಯಗಳಾಗಿವೆ.

    ಸ್ಥಳೀಯರ ಸಹಕಾರದಿಂದ ಚಿಂಚನಸೂರ್‌ ಅವರನ್ನು ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಮತ್ತು ಗನ್‌ಮ್ಯಾನ್‌ಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಾರು-ಬಸ್ ನಡುವೆ ಡಿಕ್ಕಿ ; ಐವರ ಸಾವು

    ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗುರುಮಠಕಲ್‌ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಾಬುರಾವ್‌ ಚಿಂಚನಸೂರ್‌ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಯಾದಗಿರಿ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಗೆ ಟಿಕೆಟ್‌ ನೀಡಲಾಗಿದೆ.

  • ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಎಡವಟ್ಟು

    ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಎಡವಟ್ಟು

    ಯಾದಗಿರಿ: ಚುನಾವಣಾ ಪ್ರಚಾರದ (Election Campaign) ವೇಳೆ ಜೆಡಿಎಸ್ ಅಭ್ಯರ್ಥಿ (JDS Candidate) ಟೀಕಿಸೋ ಭರದಲ್ಲಿ ಹಣ-ಹೆಂಡ ಸ್ವೀಕರಿಸುವಂತೆ ಮತದಾರರಿಗೆ ಕಾಂಗ್ರೆಸ್ ಅಭ್ಯರ್ಥಿ (Congress Candidate) ಕರೆ ನೀಡಿ ಎಡವಟ್ಟು ಮಾಡಿಕೊಂಡಿರೋ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

    ಯಾದಗಿರಿಯ ಗುರುಮಠಕಲ್ ವಿಧಾನಸಭಾ ಕ್ಷೇತ್ರ (Gurumitkal Constituency) ದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ (BabuRao chinchanasur) ಎಡವಟ್ಟು ಮಾಡಿಕೊಂಡಿದ್ದು, ಜನರಿಗೆ ಹಣದ ಜೊತೆಗೆ ಹೆಂಡ ಸ್ವೀಕರಿಸುವಂತೆ ಪ್ರಚೋದನೆ ನೀಡಿದ್ದಾರೆ. ಇದನ್ನೂ ಓದಿ: ದೇಶಕ್ಕೆ ದೇವೇಗೌಡರು, ರಾಜ್ಯಕ್ಕೆ ಕುಮಾರಣ್ಣ, ಹಾಸನಕ್ಕೆ ರೇವಣ್ಣ; ಎ.ಮಂಜು – ಭವಾನಿ ಜುಗಲ್ ಬಂದಿ

    ಗುರುಮಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಮ್ಮನಳ್ಳಿ ಗ್ರಾಮದಲ್ಲಿ ಪ್ರಚಾರಕ್ಕೆ ಹೋಗಿದ್ದ ಬಾಬುರಾವ್ ಚಿಂಚನಸೂರ್ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು (Sharana Gowda Kandakuru) ಟಿಕಿಸೋ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಪಾಪದ ದುಡ್ಡು ಅವರ ಬಳಿ ತುಂಬಿ ತುಳುಕುತ್ತಿದೆ. ತಾಯಂದಿರೇ- ತಂಗಿಯಂದಿರೇ ಅವರ ಬಳಿ ಇರೋ ಪಾಪದ ದುಡ್ಡು ತಿನ್ನಿರಿ. ಒಲ್ಲೆ ಅನ್ನಬ್ಯಾಡ್ರಿ, ರೊಕ್ಕ ಹರೀತಿದೆ, ತುಂಬಿ ತುಳುಕಿದೆ. ಕುಡಿರಿ, ತಿನ್ನಿರಿ ಸಂತೋಷದಾಗ ಡ್ಯಾನ್ಸ್ ಮಾಡ್ರಿ. ಬಂದ ದುಡ್ಡನ್ನ ಜಾಡಿಸಬ್ಯಾಡ್ರಿ, ಲಕ್ಷಗಟ್ಟಲೇ ದುಡ್ಡು ತಿನ್ನಿರಿ. ಆದರೆ ವೋಟು ಮಾತ್ರ ನನಗೆ ಹಾಕ್ರಿ ಎಂದು ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

    ತಂದೆ ಎಮ್‍ಎಲ್‍ಎ ಆಗಿದ್ದಕ್ಕೆ ಈ ರೀತಿ ಆಗಿದೆ. ಇನ್ನೂ ಶರಣಗೌಡ ಎಮ್‍ಎಲ್‍ಎ ಆದರೆ ಎಲ್ಲಾ ಖಲ್ಲಾಸ್ ಎಂದು ಇದೇ ವೇಳೆ ಟೀಕಿಸಿದ್ದಾರೆ.

  • ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಧೂಳಿಪಟವಾಗಲಿದೆ: ಬಾಬುರಾವ್ ಚಿಂಚನಸೂರ್

    ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಧೂಳಿಪಟವಾಗಲಿದೆ: ಬಾಬುರಾವ್ ಚಿಂಚನಸೂರ್

    ಕಲಬುರಗಿ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ (BJP) ಪಕ್ಷ ಸಂಪೂರ್ಣ ಧೂಳಿಪಟವಾಗಲಿದೆ ಎಂದು ಕಾಂಗ್ರೆಸ್ (Congress) ಮುಖಂಡ, ಮಾಜಿ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ (Baburao Chinchanasur) ಹೇಳಿದ್ದಾರೆ.

    ಗುರುವಾರ ನಗರದ ಕಾಂಗ್ರೆಸ್ ಕಚೇರಿ (Congress Office) ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ಖರ್ಗೆಯವರ ಕೋಟೆ ಇನ್ನಷ್ಟು ಗಟ್ಟಿಯಾಗಿದೆ. ಚಿತಾಪುರ ಕ್ಷೇತ್ರದಲ್ಲಿ ಈ ಬಾರಿ ಪ್ರಿಯಾಂಕ್ ಖರ್ಗೆ (Priyank Kharge) ಗೆಲುವು ಸಾಧಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಿಷ್ಠ ಪಕ್ಷವಾಗಲಿದೆ ಎಂದರು.

    ಕಲ್ಯಾಣ ಕರ್ನಾಟಕದಲ್ಲಿ ಓಡಾಟ ಮಾಡಿ, ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುವ ಮೂಲಕ ನನ್ನ ಶಕ್ತಿಯನ್ನು ತೋರಿಸುತ್ತೇನೆ. ಕೋಲಿ, ಕಬ್ಬಲಿಗ ಸಮಾಜವನ್ನು ಎಸ್‍ಟಿಗೆ ಸೇರಿಸುವುದಾಗಿ ಹೇಳಿದ ಬಿಜೆಪಿ, ಇಲ್ಲಿಯವರೆಗೆ ಕೇವಲ ತುಟಿಗೆ ತುಪ್ಪ ಸವರುತ್ತಾ ಬಂದಿದೆ. ಹೀಗಾಗಿ ಅವರ ನಡೆಯಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಶಿವಮೊಗ್ಗ ನಗರ ಬಿಜೆಪಿ ಟಿಕೆಟ್‍ಗೆ ಫೈಟ್- ಈಶ್ವರಪ್ಪ V/S ಆಯನೂರು ಮಧ್ಯೆ ಜಟಾಪಟಿ

    ಕೋಲಿ, ಕಬ್ಬಲಿಗ ಸಮಾಜ ಎಸ್‍ಟಿಗೆ ಸೇರಿಸಬೇಕಾದರೆ ಅದಕ್ಕೆ ಮಲ್ಲಿಕಾರ್ಜುನ್ ಖರ್ಗೆ ಅವರೊಬ್ಬರೇ ಸರಿಸಾಟಿ. ಈ ಹಿಂದೆ ಎಸ್.ಎಂ.ಕೃಷ್ಣ (S M Krishna) ನೇತೃತ್ವದ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ (D K Shivakumar) ಅವರು ನನಗೆ ಸಪ್ತ ಖಾತೆಗಳನ್ನು ಕೊಡಿಸಿದ್ದರು. ಅವರ ಋಣವನ್ನು ತಿರಿಸಲು ಸಾಧ್ಯವಿಲ್ಲ ಎಂದ ಅವರು, ಖರ್ಗೆ ಮತ್ತು ನನ್ನ ನಡುವೆ ಇದ್ದ ರಾಜಕೀಯ ಭಿನ್ನಾಭಿಪ್ರಾಯ ತಂದೆ-ಮಗನ ನಡುವಿನ ಮುನಿಸುನಂತಿತ್ತು. ಹೀಗಾಗಿಯೇ ನಾನು ಬಿಜೆಪಿಗೆ ಹೋಗಿದ್ದೆ. ಮತ್ತೆ ತವರು ಪಕ್ಷಕ್ಕೆ ಸೇರಿದ್ದು ಖುಷಿ ತಂದಿದೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗದೇವ್ ಗುತ್ತೇದಾರ, ಅಲ್ಲಮಪ್ರಭು ಪಾಟೀಲ್, ರಾಜಗೋಪಾಲ್ ರೆಡ್ಡಿ, ನೀಲಕಂಠ ಮೂಲಗೆ, ಚಂದ್ರಿಕಾ ಪರಮೇಶ್ವರ್ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಸಿಎಂ ಆಗೋದು ಪಕ್ಕಾ : ತೇಜಸ್ವಿ ಸೂರ್ಯ

  • ಕಮಲ ಬಿಟ್ಟು ಕೈ ಹಿಡಿಯಲು ಮುಂದಾದ ಬಾಬೂರಾವ್ ಚಿಂಚನಸೂರ್

    ಕಮಲ ಬಿಟ್ಟು ಕೈ ಹಿಡಿಯಲು ಮುಂದಾದ ಬಾಬೂರಾವ್ ಚಿಂಚನಸೂರ್

    ಕಲಬುರಗಿ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ದಿನನಿತ್ಯ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಹಾಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಾಬೂರಾವ್ ಚಿಂಚನಸೂರ್ (BabuRao Chinchanasur) ಅವರು ಬಿಜೆಪಿ (BJP) ಬಿಟ್ಟು ಕೈ ಹಿಡಿಯಲು ಸಜ್ಜಾಗಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ.

    ಇಂದು ಬಿಜೆಪಿ ಎಂಎಲ್ ಸಿ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ಮೂಲಕ ಕೋಳಿ ಸಮಾಜದ ಪ್ರಭಾವಿ ಮುಖಂಡ ಮರಳಿ ಮಾತೃ ಪಕ್ಷಕ್ಕೆ ಸೇರಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಜೆಡಿಎಸ್‍ನಲ್ಲಿ ಮುಗಿಯದ ಟಿಕೆಟ್ ಗೊಂದಲ- ಅರಸೀಕೆರೆಗೆ ಬಾಣಾವರ ಅಶೋಕ್ ಫಿಕ್ಸ್

    ಈ ಬಗ್ಗೆ ಚಿಂಚನಸೂರ್ ಅವರು ಕೆಪಿಸಿಸಿ ಅಧ್ಯಕ್ಷರು, ಗುರುಮಠಕಲ್ ಹಾಗೂ ಚಿತ್ತಾಪುರ ಕೋಳಿ ಸಮಾಜದ ಮುಖಂಡರ ಮೂಲಕ ಕೈ ನಾಯಕರ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪಕ್ಷ ಸೇರ್ಪಡೆಗೆ ಪ್ರಿಯಾಂಕ್ ಖರ್ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    ಬಿಜೆಪಿಗೆ ರಾಜೀನಾಮೆ ಬಳಿಕ ಚಿಂಚನಸೂರ್ ಅವರು ಇದೇ ವಾರದಲ್ಲಿ ಕಾಂಗ್ರೆಸ್ (Congress) ಸೇರಲಿದ್ದಾರೆ. ಬಿಜೆಪಿಯಲ್ಲಿ ಕಡೆಗಣನೆ ಹಿನ್ನೆಲೆ ರಾಜೀನಾಮೆ ನೀಡುತ್ತಿದ್ದಾರೆ. ಇತ್ತ ಚಿಂಚನಸೂರ್ ಕೈ ಸೇರ್ಪಡೆಯಾಗುವುದನ್ನು ತಡೆಯಲು ಕಟೀಲ್ ಸೇರಿದಂತೆ ಹಲವು ನಾಯಕರು ಪ್ರಯತ್ನಿಸುತ್ತಿದ್ದಾರೆ. ಆದರೆ ಚಿಂಚನಸೂರ್ ಹಾಗೂ ಅವರ ಗನ್ ಮ್ಯಾನ್ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರಂತೆ.

    ಕೈ ಸೇರಿದ ಬಳಿಕ ಚಿಂಚನಸೂರ್ ಅವರು ಯಾದಗಿರಿಯ ಗುರುಮಠಕಲ್ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೈಡ್ರಾಮ..!

    ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೈಡ್ರಾಮ..!

    – ಶಾಲೆ ಉದ್ಘಾಟನೆ ನಿಲ್ಲಿಸಿ ರಂಪಾಟ

    ಯಾದಗಿರಿ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೈಡ್ರಾಮ ನಡೆಸಿದ ಘಟನೆ ಯಾದಗಿರಿ ತಾಲೂಕಿನ ಬಂದಳ್ಳಿ ಬಳಿ ನಡೆದಿದೆ.

    ಇಂದು ಏಕಲವ್ಯ ವಸತಿ ಶಾಲೆ ಉದ್ಘಾಟಣಾ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ಬಾಬುರಾವ್ ಅವರಿಗೆ ಆಹ್ವಾನ ಮಾಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಮಾಜಿ ಸಚಿವರು, ಕಾರ್ಯಕ್ರಮವನ್ನೇ ನಿಲ್ಲಿಸಿ, ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

    ಇದು ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುತ್ತೆ. ಈ ಶಾಲೆಯನ್ನು ನಾನು ಹೋರಾಟ ಮಾಡಿ ತಂದಿದ್ದೇನೆ. ಆದರೆ ಉದ್ಘಾಟನೆಗೆ ನನ್ನ ಕರೆದಿಲ್ಲ. ಜಿಲ್ಲಾಡಳಿತ ನನ್ನ ಕಡೆಗಣಸಿದೆ ಅದಕ್ಕಾಗಿ ನಾನು ಕಾರ್ಯಕ್ರಮವನ್ನು ಬಹಿಷ್ಕರಿಸುತ್ತೇನೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ

    ಏಕಲವ್ಯ ವಸತಿ ಶಾಲೆ ಉದ್ಘಾಟನಾ ಕಾರ್ಯಕ್ರಮಕ್ಕೆ ನನ್ನ ಯಾಕೆ ಕರೆದಿಲ್ಲ. ನನ್ನ ಕಡೆಗಣಿಸಿದ ಕಾರ್ಯಕ್ರಮವನ್ನು ಬಹಿಷ್ಕರಿಸ್ತೇನೆ. ಜಿಲ್ಲಾಡಳಿತದ ಅಧಿಕಾರಿಗಳು, ಸಿಬ್ಬಂದಿಗೆ ಚಿಂಚನಸೂರ್ ತರಾಟೆ ತೆಗೆದುಕೊಂಡರು. ಈ ವೇಳೆ ಕೈಮುಗಿದು ಮನವಿ ಮಾಡಿದ್ರೂ ಬಾಬುರಾವ್ ಒಪ್ಪಲಿಲ್ಲ. ಶಾಲೆ ಇನ್ನೂ ಒಂದು ಕಿಲೋಮೀಟರ್ ಅಂತರದಲ್ಲಿ ಬಾಬುರಾವ್ ಈ ಹೈಡ್ರಾಮಾ ಮಾಡಿದ್ದಾರೆ. ಹೀಗಾಗಿ ಸಚಿವ ಶ್ರೀರಾಮುಲು ಅವರು ಕಾರ್ಯಕ್ರಮವನ್ನು ಕ್ಯಾನ್ಸಲ್ ಮಾಡಿದರು. ಇದನ್ನೂ ಓದಿ: ದೇವೆಗೌಡ್ರು ಹುಟ್ಟುವ ಮೊದಲೇ RSS ಅಸ್ತಿತ್ವದಲ್ಲಿತ್ತು: ಕೆ.ಎಸ್ ಈಶ್ವರಪ್ಪ

    ಇತ್ತ ಶ್ರೀರಾಮುಲು ಅಭಿಮಾನಿಗಳು ಕಾರ್ಯಕ್ರಮವನ್ನು ನಿಲ್ಲಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಬಾಬುರಾವ್ ಅವರು ಮಾಧ್ಯಮಗಳ ಕಣ್ತಪ್ಪಿಸಿ ಯಾದಗಿರಿಯಿಂದ ಎಸ್ಕೇಪ್ ಆದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿ ಹಾಗೂ ಪಕ್ಷದ ಮುಖಂಡರು ಚಿಂಚನಸೂರ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರಿಂದಾಗಿ ವೇದಿಕೆ ಕಾರ್ಯಕ್ರಮಕ್ಕೆ ಬಾರದೇ ಜಾಗ ಖಾಲಿ ಮಾಡಿದ್ದಾರೆ. ಇದನ್ನೂ ಓದಿ: ನಾನು ಎಲ್ಲರಿಗಿಂತ ಸೀನಿಯರ್, ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ: ಸೋಮಣ್ಣ

  • ಲಿಂಗಾಯತರ ಕ್ಷಮೆ ಕೋರಿದ ಬಾಬುರಾವ್ ಚಿಂಚನಸೂರ್

    ಲಿಂಗಾಯತರ ಕ್ಷಮೆ ಕೋರಿದ ಬಾಬುರಾವ್ ಚಿಂಚನಸೂರ್

    ಕಲಬುರಗಿ: ಪೋಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಲಿಂಗಾಯತರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಮಾಜಿ ಸಚಿವ ಚಿಂಚನಸೂರ್ ಇದೀಗ ಕ್ಷಮೆ ಕೋರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಂಚೋಳಿ ಉಪಚುನಾವಣೆಯಲ್ಲಿ ಅವಿನಾಶ್‍ಗೆ ಕಡಿಮೆ ಮತ ಹಾಗೂ ಬೀದರ್ ಲೋಕಸಭೆ ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾಗೆ ಜಾಸ್ತಿ ಮತ ಬಂದಿದ್ದವು. ಈ ಹಿನ್ನೆಲೆಯಲ್ಲಿ ಲಿಂಗಾಯತ ಯಾರು ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿಲ್ಲ ಎಂದಿದ್ದು, ಈ ಬಗ್ಗೆ ಬೆಂಬಲಿಗರೊಂದಿಗೆ ಚರ್ಚೆ ಮಾಡಿದ್ದೆ ಅಷ್ಟೆ. ಈ ವಿಚಾರದಲ್ಲಿ ಲಿಂಗಾಯತರಿಗೆ ನೋವಾದರೆ ಕ್ಷಮಿಸಿಬಿಡಿ ಎಂದು ಹೇಳಿದ್ದಾರೆ.

    ಚಿಂಚನಸೂರ್ ಹೇಳಿದ್ದೇನು?
    ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರು ಉಮೇಶ್ ಜಾಧವ್ ಅವರಿಗೆ 14 ಸಾವಿರ ಲೀಡ್ ಕೊಟ್ಟಿದ್ದರು. ಆದರೆ ಚಿಂಚೋಳಿ ಉಪ ಚುನಾವಣೆಯಲ್ಲಿ ಏಳು ಸಾವಿರ ಮತಗಳ ಲೀಡ್ ಮಾತ್ರ ಅವಿನಾಶ್ ಅವರಿಗೆ ಬಂದಿದೆ. ಕಬ್ಬಲಿಗರು ಮತ್ತು ಬಂಜಾರ ಸಮುದಾಯದ ಮತಗಳಿಂದ ಮಾತ್ರ ಅವಿನಾಶ್ ಗೆದ್ದಿದ್ದಾರೆ. ಲಿಂಗಾಯತರು ಯಾರು ಕೂಡ ಬಿಜೆಪಿಗೆ ಮತ ಹಾಕಿಲ್ಲ ಬೆಂಬಲಿಗರ ಸಭೆಯಲ್ಲಿ ಚಿಂಚನಸೂರ್ ಹೇಳಿದ್ದರು.

  • 2 ಎತ್ತುಗಳು ಯಾವ ಸಂತೆಯಲ್ಲೂ ಮಾರಾಟವಾಗಲ್ಲ- ಪ್ರಿಯಾಂಕ್ ಖರ್ಗೆ

    2 ಎತ್ತುಗಳು ಯಾವ ಸಂತೆಯಲ್ಲೂ ಮಾರಾಟವಾಗಲ್ಲ- ಪ್ರಿಯಾಂಕ್ ಖರ್ಗೆ

    ಕಲಬುರಗಿ: ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್ ಹಾಗೂ ಉಮೇಶ್ ಜಾಧವ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

    ಚಿಂಚೋಳಿಯ ಚೆಂಗಟಾ ಗ್ರಾಮದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಲೀಕಯ್ಯ ಹಾಗೂ ಬಾಬುರಾವ್ ಚಿಂಚನಸೂರ್ ಜೋಡೆತ್ತು ಅಲ್ಲ. ಅವರು ಕಳ್ಳೆತ್ತುಗಳು. ಈ ಎರಡು ಎತ್ತುಗಳನ್ನು ಯಾವ ಸಂತೆಯಲ್ಲಿ ಮಾರಾಟ ಮಾಡಲು ಹೋದರೂ ಅವುಗಳು ಮಾರಾಟವಾಗಲ್ಲ ಎಂದು ಲೇವಡಿ ಮಾಡಿದ್ದಾರೆ.

    ಈ ಎತ್ತುಗಳು ತಮ್ಮ ಜಮೀನಿನಲ್ಲಿ ಮೇಯೋದಿಲ್ಲ. ಅವು ಬರೀ ಬೇರೆಯವರ ಜಮೀನಿನಲ್ಲಿ ಮೇಯೋದೇ ಕಾಯಕವಾಗಿದೆ. ಇವರಿಬ್ಬರು ಜೊಡೆತ್ತುಗಳಂತೆ ಕೆಲಸ ಮಾಡಿ ಖರ್ಗೆಯನ್ನು ಸೋಲಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಇಂತಹ ಸೋತ ಎತ್ತುಗಳು ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

    ಇನ್ನು ಇತ್ತೀಚೆಗೆ ಬಿಜೆಪಿ ಸೇರಿರುವ ಜಾಧವ್ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವರು, ಜಾಧವ್ ಅವರ ತಂದೆ ಮೋದಿ ಜೊತೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವ ಧೈರ್ಯ ಇರೋದು ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾತ್ರ ಎಂದರು.

  • ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಪಣ ತೊಟ್ಟರಾ ಮೋದಿ?

    ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಪಣ ತೊಟ್ಟರಾ ಮೋದಿ?

    -ಖರ್ಗೆ ಕೋಟೆಯಲ್ಲಿ ಮೋದಿ ರಣ ಕಹಳೆ
    -ಖರ್ಗೆ ಸೋಲಿಗೆ ಕಾದು ಕುಳಿತು ತ್ರಿಮೂರ್ತಿಗಳು!

    ಕಲಬುರಗಿ: ಪಾಕಿಸ್ತಾನಕ್ಕೆ ಮಧ್ಯರಾತ್ರಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮುಖಾಂತರ ಅದರ ಬೆನ್ನು ಮುಳೆ ಮುರಿದ ಮೋದಿ, ಇದೀಗ ಸಂಸತ್ತಿನಲ್ಲಿ ಅವರಿಗೆ ಪ್ರಬಲವಾಗಿ ದಿಟ್ಟ ಉತ್ತರ ನೀಡುವ ಮಲ್ಲಿಕಾರ್ಜುನ ಖರ್ಗೆ ಮಣಿಸಲು ಬುಧವಾರ ಮಧ್ಯಾಹ್ನವೇ ಖುದ್ದು ಮೋದಿ ಕಲಬುರಗಿಗೇ ಆಗಮಿಸುತ್ತಿದ್ದಾರೆ.

    ಸದ್ಯ ಸಂಸತ್ತಿನಲ್ಲಿ ಪ್ರಧಾನಿ ಮೋದಿಯ ಪ್ರತಿ ಮಾತಿಗೂ ಹರಿತವಾಗಿ ದಿಟ್ಟ ಉತ್ತರ ನೀಡುತ್ತಿದ್ದ ಮಲ್ಲಿಕಾರ್ಜುನ ಖರ್ಗೆಗೇ, ಈ ಬಾರಿ ಶತಾಯಗತಾಯ ಸೋಲಿಸಲು ಪ್ರಧಾನಿ ಮೋದಿ ಟೀಂ ಇದೀಗ ಸಿದ್ಧವಾಗಿದೆ. ಈ ಬಾರಿ ಕಲಬುರಗಿ ಕ್ಷೇತ್ರದಲ್ಲಿ ಖರ್ಗೆರನ್ನು ಸೋಲಿಸಿ ಕಮಲ ಅರಳಿಸಲು ಖುದ್ದು ಮೋದಿ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದು, ಖರ್ಗೆ ಸೋಲಿಸಲು ಕೈ ಶಾಸಕ ಡಾ.ಉಮೇಶ್ ಜಾಧವ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಮೂಲಕ ಖರ್ಗೆ ಅವರ ಕಲಬುರಗಿ ಕೋಟೆ ಭೇಧಿಸಲು ಮೋದಿ ಆ್ಯಂಡ್ ಟೀಂ ಸಜ್ಜಾಗಿದ್ದಾರೆ. ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಲಬುರಗಿಯ ನೂತನ ವಿದ್ಯಾಲಯ ಮೈದಾನದಲ್ಲಿ ಬಿಜೆಪಿಯ ಬೃಹತ ಸಮಾವೇಶ ನಡೆಯಲ್ಲಿದ್ದು, ಕಾರ್ಯಕರ್ತರನ್ನು ಪ್ರಧಾನಿ ಮೋದಿ ತಮ್ಮ ಮಾತುಗಳಿಂದ ಹುರಿದುಂಬಿಸಲಿದ್ದಾರೆ.

    ಮಲ್ಲಿಕಾರ್ಜುನ ಖರ್ಗೆ ಅವರ ಕಲಬುರಗಿ ಕೋಟೆಯ ಮೇಲೆ ಕಮಲ ಅರಳಿಸಲು ತ್ರಿಮೂತ್ರಿಗಳಾದ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಬಾಬುರಾವ್ ಚಿಂಚನಸೂರ್ ಮತ್ತು ಉಮೇಶ್ ಜಾಧವ್ ರಣತಂತ್ರ ರಚಿಸುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಾಳಯ ಸೇರುತ್ತಿರುವ ಡಾ.ಉಮೇಶ್ ಜಾಧವ್ ಅವರನ್ನು ಖರ್ಗೆ ಎದುರಿಗೆ ನಿಲ್ಲಿಸಲು ಎಲ್ಲ ರೀತಿಯ ತಯಾರಿಗಳು ನಡೆದಿವೆ. ಈ ಚುನಾವಣೆಯನ್ನು ಬಿಜೆಪಿಯ ಮೂರು ಜನ ಶಾಸಕರು ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಮೋದಿ ಕರೆ ಕೊಟ್ಟಿದ್ದು, ಈ ಬಾರಿ ಶತಾಯ ಗತಾಯ ಖರ್ಗೆ ಸೋಲಿಸಲು ಕೇಸರಿ ಪಕ್ಷ ಪಣ ತೊಟ್ಟಿದೆ ಎನ್ನಲಾಗುತ್ತಿದೆ.

    ಒಂದೆಡೆ ಜಿಲ್ಲೆಯ ಕೋಲಿ ಸಮಾಜದ ಮುಖಂಡ ಬಾಬುರಾವ್ ಚಿಂಚನಸೂರ್, ಇನ್ನೊಂದಡೆ ಮಾಲೀಕಯ್ಯ ಗುತ್ತೇದಾರ ಖರ್ಗೆ ಸಹ ಸೋಲಿಸಲು ಮುಂದಾಗಿದ್ದಾರೆ. ಇತ್ತ ಖಮರುಲ್ ಅವರನ್ನ ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ವಂಚಿತರಾಗಿ ಮಾಡಿರುವ ಹಿನ್ನೆಲೆ ಮುಸ್ಲಿಂ ಮತದಾರರು ಸಹ ಖರ್ಗೆ ಪರ ಮತ ಚಲಾಯಿಸದೇ ತಟಸ್ಥರಾಗಿರಲು ಯೋಚಿಸುತ್ತಿದ್ದಾರೆ. ಸೋಲಿನ ಹತಾಶೆಯಲ್ಲಿರುವ ಖರ್ಗೆ ಇದು ನನ್ನ ಕೊನೆಯ ಚುನಾವಣೆ ಅಂತಾ ಜನರಿಗೆ ಎಮೋಷನಲ್ ಮಾಡಿ ಮತಗಳಿಸಲು ಮುಂದಾಗಿದ್ದಾರೆ ಎಂದು ಬಿಜೆಪಿ ವ್ಯಂಗ್ಯ ಮಾಡುತ್ತಿದೆ.

    ಸದ್ಯ ಮೇಲನೋಟಕ್ಕೆ ಖರ್ಗೆ ಪ್ರಬಲವಾಗಿದ್ರು ಬದಲಾದ ರಾಜಕೀಯದಲ್ಲಿ ಅವರು ಇದೀಗ ಒಂಟಿಯಾದಂತಾಗಿದೆ. ಇನ್ನು ಧರಂಸಿಂಗ್ ಮತ್ತು ಖಮರುಲ್ ಇಸ್ಲಾಂ ಇಲ್ಲದ ಈ ಚುನಾವಣೆಯಲ್ಲಿ ಖರ್ಗೆ ಏಕಾಂಗಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಾಧವ್ ರಾಜೀನಾಮೆ ನೀಡಿದ್ದು ಖುಷಿಯ ವಿಚಾರ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್

    ಜಾಧವ್ ರಾಜೀನಾಮೆ ನೀಡಿದ್ದು ಖುಷಿಯ ವಿಚಾರ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್

    – ನಾನೇ ರಾಜೀನಾಮೆ ನೀಡೋದಕ್ಕೆ ಹೇಳಿದ್ದೆ

    ಯಾದಗಿರಿ: ಕಾಂಗ್ರೆಸ್ ರೆಬೆಲ್ ನಾಯಕ ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದು ಖುಷಿಯ ವಿಚಾರ. ನಾನೇ ಅವರಿಗೆ ರಾಜೀನಾಮೆ ನೀಡಲು ಹೇಳಿದ್ದೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

    ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವರು, ಇಂದು ನನಗೆ ಹಬ್ಬದ ಡಬಲ್ ಖುಷಿಯಾಗುತ್ತಿದೆ. ಉಮೇಶ್ ಜಾದವ್ ಅವರೇ ಈ ಬಾರಿಯ ಕಲಬುರಗಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ನನ್ನನ್ನು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಿಸಿದ್ದರು. ಇದೀಗ ಉಮೇಶ್ ಜಾಧವ್ ಎದುರು ಖರ್ಗೆ ಅವರು ಸೋಲುತ್ತಾರೆ. ಚುನಾವಣೆಯಲ್ಲಿ ಉಮೇಶ್ ಜಾಧವ್ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

    ಒಬ್ಬ ಶಾಸಕನ ರಾಜೀನಾಮೆ ಕೊಡಿಸುವ ಮೂಲಕ ಬಿಜೆಪಿ ದೊಡ್ಡ ಸಾಧನೆ ಮಾಡಿದೆ. ಹಣ ನೀಡಿ ಖರೀದಿಸಿದ್ದೇವೆ ಎಂದು ಹೊಟ್ಟೆ ಕಿಚ್ಚಿಗೆ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಆರೋಪ ಸಾಬೀತಾದ್ರೆ ನಮ್ಮ ಅಭ್ಯರ್ಥಿ (ಉಮೇಶ್ ಜಾಧವ್) ನೇಣು ಹಾಕಿಕೊಳ್ಳುತ್ತಾರೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv