Tag: Babul Supriyo

  • TMC ನಾಯಕ ಬಾಬುಲ್ ಸುಪ್ರಿಯೋ, ಪತ್ನಿ, ತಂದೆಗೆ ಕೊರೊನಾ

    TMC ನಾಯಕ ಬಾಬುಲ್ ಸುಪ್ರಿಯೋ, ಪತ್ನಿ, ತಂದೆಗೆ ಕೊರೊನಾ

    ಕೋಲ್ಕತ್ತಾ: ತೃಣ ಮೂಲಕ ಕಾಂಗ್ರೆಸ್ ನಾಯಕ ಮತ್ತು ಲೋಕಸಭಾ ಮಾಜಿ ಸದಸ್ಯ ಬಾಬುಲ್ ಸುಪ್ರಿಯೊ ತಮಗೆ, ತಮ್ಮ ಪತ್ನಿ, ತಂದೆ ಮತ್ತು ಇಬ್ಬರು ಸಿಬ್ಬಂದಿ ಇಬ್ಬರಿಗೆ ಕೊರೊನಾ ವೈರಸ್ ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ.

    ಭಾರತೀಯ ಹಿನ್ನೆಲೆ ಗಾಯಕ ಮತ್ತು ಟೆಲಿವಿಷನ್ ಹೋಸ್ಟ್ ಆಗಿರುವ ಬಾಬುಲ್ ಸುಪ್ರಿಯೋ ಅವರು ಈ ಕುರಿತಂತೆ ತಮ್ಮ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. ನನಗೆ, ನನ್ನ ಪತ್ನಿ, ಕೆಲ ಸಿಬ್ಬಂದಿಗೆ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದೆ. ಒಂದು ಕಾಕ್‍ಟೈಲ್ ಜಬ್‍ನ ಬೆಲೆ ರೂ.61,000ದಷ್ಟು ದುಬಾರಿಯಾಗಿದೆ. ಇದನ್ನು ಗಂಭೀರವಾಗಿ ಅಸ್ವಸ್ಥರಾಗಿರುವ ಕೊರೊನಾ ಸೋಂಕಿತರಿಗೆ ನೀಡಬೇಕಾಗಿದೆ. ನನ್ನ ತಂದೆ 84 ವರ್ಷದವರಾಗಿದ್ದು, ಅವರಿಗೆ ಕಾಕ್‍ಟೈಲ್ ಜಬ್‍ನ ಅಗತ್ಯವಿತ್ತು. ಹಾಗಾಗಿ ಅದನ್ನು ನಾನು ಕೂಡಲೇ ಖರೀದಿಸಿದೆ. ಆದರೆ ಬಡವರು ಖರೀದಿಸಲು ಹೇಗೆ ಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ: ಬಿಜೆಪಿ ನಾಯಕ ಮನೋಜ್ ತಿವಾರಿಗೆ ಕೊರೊನಾ ಪಾಸಿಟಿವ್

    ಅಂದರೆ ಗಂಭೀರವಾಗಿ ಅಸ್ವಸ್ಥರಾಗಿರುವ ಕೊರೊನಾ ಸೋಂಕಿತರಿಗೆ ನೀಡಬೇಕಾದ ಕಾಕ್‍ಟೈಲ್ ಲಸಿಕೆಯ ಬೆಲೆ 61,000 ರೂ. ಆಗಿದ್ದು, ನನ್ನ 84 ವರ್ಷದ ತಂದೆಗೆ ಅಗತ್ಯ ಇರುವುದರಿಂದ ಅದನ್ನು ತಕ್ಷಣ ಖರೀದಿಸಿದೆ. ಆದರೆ ಈ ಲಸಿಕೆಯನ್ನು ಆರ್ಥಿಕವಾಗಿ ದುರ್ಬಲಗೊಂಡಿರುವ ಜನರಿಗೆ ಖರೀದಿಸಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಕೊರೊನಾ

    ಮತ್ತೊಂದೆಡೆ ಇಂದು  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಬಿಜೆಪಿ ನಾಯಕ ಮನೋಜ್ ತಿವಾರಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

  • ಬಂಗಾಳದ ಐವರು ಬಿಜೆಪಿ ಶಾಸಕರು ಪಕ್ಷ ತೊರೆಯಬಹುದು: ಬಾಬುಲ್ ಸುಪ್ರಿಯೋ

    ಬಂಗಾಳದ ಐವರು ಬಿಜೆಪಿ ಶಾಸಕರು ಪಕ್ಷ ತೊರೆಯಬಹುದು: ಬಾಬುಲ್ ಸುಪ್ರಿಯೋ

    ಕೋಲ್ಕತ್ತಾ: ಬಿಜೆಪಿ ವಾಟ್ಸಾಪ್ ಗ್ರೂಪ್‍ನಿಂದ ಹೊರಬಂದ ಪಶ್ಚಿಮ ಬಂಗಾಳದ ಐವರು ಅತೃಪ್ತ ಶಾಸಕರು ಕೇಸರಿ ಪಕ್ಷವನ್ನು ತೊರೆಯಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಬಾಬುಲ್ ಸುಪ್ರಿಯೋ ಹೇಳಿದ್ದಾರೆ.

    ಮೂರು ತಿಂಗಳ ಹಿಂದೆ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಸೇರ್ಪಡೆಗೊಂಡ ಕೇಂದ್ರದ ಮಾಜಿ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಬಾಬುಲ್ ಸುಪ್ರಿಯೋ ಅವರು ಈ ಕುರಿತಂತೆ ಟ್ವಿಟ್ಟರ್‌ನಲ್ಲಿ ಬಿಜೆಪಿಯಲ್ಲಿ ಒಂದರ ಹಿಂದೆ ಒಂದು ವಿಕೆಟ್ ಬೀಳುತ್ತಿದೆ. ಇನ್ನೂ ಐದು ವಿಕೆಟ್ ಬೀಳಲಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಪ್ರಚಾರದ ಮೇಲ್ವಿಚಾರಣೆ ನಡೆಸಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಇದೀಗ ಕೈಲಾಸ ಪರ್ವತಕ್ಕೆ ಹೋಗಿದ್ದಾರೆ. ನಿಮ್ಮನ್ನು ಹಿಂದಿನಿಂದ ಎಳೆಯುವ ಬಂಗಾಳಿ ಹೇಡಿಗಳನ್ನು ಹುಡುಕಲು ಪ್ರಯತ್ನಿಸುತ್ತದ್ದರೆ ಮುರಳೀಧರ್ ಲೇನ್‍ಗೆ ಹೋಗಿ ಎಂದಿದ್ದಾರೆ.

    ಪಶ್ಚಿಮ ಬಂಗಾಳದ ಐವರು ಶಾಸಕರಾದ ಮುಕುತ್ಮೋನಿ ಅಧಿಕಾರಿ (ರಣಘಾಟ್ ದಕ್ಷಿಣ), ಸುಬ್ರತಾ ಠಾಕೂರ್ (ಗೈಘಾಟ), ಅಂಬಿಕಾ ರಾಯ್ (ಕಲ್ಯಾಣಿ), ಅಶೋಕ್ ಕೀರ್ತಾನಿಯಾ (ಬೊಂಗಾವ್ ಉತ್ತರ), ಮತ್ತು ಅಸಿಮ್ ಸರ್ಕಾರ್ (ಹರಿಂಘಟ) ಬಿಜೆಪಿ ವಾಟ್ಸಾಪ್ ಗ್ರೂಪ್ ತೊರೆದಿದ್ದಾರೆ. ಇದನ್ನೂ ಓದಿ:  ಪ್ರಧಾನಿ ಮೋದಿ ನಮ್ಮ ದೇಶದ ಹೆಮ್ಮೆ: ಗುಲಾಂ ನಬಿ ಆಜಾದ್

    ಈ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಅವರು, ಐವರು ಶಾಸಕರಲ್ಲಿ ಯಾರನ್ನು ಸಹ ಬಿಡುವುದಿಲ್ಲ, ಹೊಸ ಸಮಿತಿಗಳಲ್ಲಿ ಅವರಿಗೆ ಅವಕಾಶ ಕಲ್ಪಿಸುತ್ತೇವೆ. ಎಲ್ಲರೂ ಸ್ವಲ್ಪ ತಾಳ್ಮೆಯಿಂದಿರಬೇಕು ಎಂದಿದ್ದಾರೆ. ಇದನ್ನೂ ಓದಿ: 40 ವರ್ಷ ಮೇಲ್ಪಟ್ಟ ಮಹಿಳೆಯರು ಮೋದಿಯಿಂದ ಪ್ರಭಾವಿತರಾಗಿದ್ದಾರೆಯೇ ಹೊರತು ಜೀನ್ಸ್ ತೊಟ್ಟ ಹುಡುಗಿಯರಲ್ಲ: ದಿಗ್ವಿಜಯ್ ಸಿಂಗ್

  • ಸಚಿವ ಸಂಪುಟದಿಂದ ಗೇಟ್ ಪಾಸ್- ಬಿಜೆಪಿ ಸಂಸದ ಬಬುಲ್ ಸುಪ್ರಿಯೋ ರಾಜಕೀಯಕ್ಕೆ ಗುಡ್ ಬೈ

    ಸಚಿವ ಸಂಪುಟದಿಂದ ಗೇಟ್ ಪಾಸ್- ಬಿಜೆಪಿ ಸಂಸದ ಬಬುಲ್ ಸುಪ್ರಿಯೋ ರಾಜಕೀಯಕ್ಕೆ ಗುಡ್ ಬೈ

    ನವದೆಹಲಿ: ಮಾಜಿ ಕೇಂದ್ರ ಸಚಿವ ಬಿಜೆಪಿ ಸಂಸದ ಬಬುಲ್ ಸುಪ್ರಿಯೋ ಕೇಂದ್ರ ಸಂಪುಟದಿಂದ ಕೂಕ್ ಪಡೆಯುತ್ತಿದ್ದಂತೆ ರಾಜಕೀಯ ನಿವೃತ್ತಿಗೆ ಮುಂದಾಗಿದ್ದಾರೆ.

    ಪಶ್ಚಿಮ ಬಂಗಾಳದಿಂದ ಸಂಸದರಾಗಿ ಆಯ್ಕೆಯಾಗಿದ್ದ ಹಾಡುಗಾರ ಬಬುಲ್ ಸುಪ್ರಿಯೋ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು. ಕೆಲದಿನಗಳ ಹಿಂದೆ ಸಚಿವ ಸಂಪುಟ ಪುನರ್ ರಚನೆಯಾದಾಗ ಸಚಿವ ಸ್ಥಾನ ಕಳೆದುಕೊಂಡಿದ್ದರು. ಬಳಿಕ ರಾಜಕೀಯ ತೊರೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದೀಗ ಇದಕ್ಕೆಲ್ಲ ತೆರೆ ಎಳೆದು ರಾಜಕಾರಣಕ್ಕೆ ನಿವೃತ್ತಿ ಘೋಷಿಸುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆನ್‍ಲೈನ್‍ಗೇಮ್ 40 ಸಾವಿರ ಕಳ್ಕೊಂಡು ಪ್ರಾಣ ಬಿಟ್ಟ ಬಾಲಕ

    ಗುಡ್ ಬೈ ನಾನು ಬೇರೆ ಯಾವುದೇ ಪಕ್ಷಕ್ಕೂ ಕೂಡ ಸೇರುವುದಿಲ್ಲ, ಟಿಎಂಸಿ, ಕಾಂಗ್ರೆಸ್, ಸಿಪಿಐಎಂ ಯಾವುದಕ್ಕೂ ಹೋಗಲಾರೆ. ನನ್ನನ್ನು ಯಾರು ಕೂಡ ಬನ್ನಿ ಎಂದು ಕರೆದು ಕೂಡ ಇಲ್ಲ. ನಾನು ಬೆಂಬಲಿಸಿದ್ದು ಒಂದೇ ಪಕ್ಷವನ್ನು. ಪಾರ್ಟಿಯಲ್ಲಿ ಹಲವು ಕಾಲಗಳವರೆಗೆ ಕೆಲಸ ನಿರ್ವಹಿಸಿಕೊಂಡು ಬಂದಿದ್ದೇನೆ. ಇದೀಗ ನಾನು ರಾಜೀನಾಮೆಗೆ ಮುಂದಾಗಿದ್ದೇನೆ. ನಾಳೆ ಸ್ಪೀಕರ್ ಬಳಿ ತೆರಳಿ ನನ್ನ ರಾಜೀನಾಮೆ ಪತ್ರವನ್ನು ನೀಡಲಿದ್ದೇನೆ. ಒಂದು ತಿಂಗಳ ಒಳಗಾಗಿ ನನ್ನ ಸರ್ಕಾರಿ ನಿವಾಸವನ್ನು ಕೂಡ ಖಾಲಿ ಮಾಡುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    ಬಬುಲ್ ಸುಪ್ರಿಯೋ ಅವರು ಪಶ್ಚಿಮ ಬಂಗಾಳದಿಂದ 2014 ಮತ್ತು 2019ರಲ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2019ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಅರೂಪ್ ಬಿಸ್ವಾಸ್ ವಿರುದ್ಧ ಜಯಗಳಿಸಿದ್ದರು.

  • ಕೇಂದ್ರ ಸಚಿವ ಸುಪ್ರಿಯೊರನ್ನು ಟ್ರೋಲ್‌ ಮಾಡಿದ ಹನುಮ ವಿಹಾರಿ

    ಕೇಂದ್ರ ಸಚಿವ ಸುಪ್ರಿಯೊರನ್ನು ಟ್ರೋಲ್‌ ಮಾಡಿದ ಹನುಮ ವಿಹಾರಿ

    ನವದೆಹಲಿ: ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದರೂ ತನ್ನ ಆಟವನ್ನು ಟೀಕಿಸಿದ್ದ ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೊ ಅವರನ್ನು ಹನುಮ ವಿಹಾರಿ ಟ್ರೋಲ್‌ ಮಾಡಿದ್ದಾರೆ.

    ಸಿಡ್ನಿ ಟೆಸ್ಟ್ ನಲ್ಲಿ ಭಾರತ ತಂಡದ ಕ್ರಿಕೆಟಿಗ ಹನುಮ ವಿಹಾರಿ ಕ್ರಿಕೆಟ್‌ ಅನ್ನು ಕೊಲೆ ಮಾಡಿದ್ದಾರೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಮತ್ತು ಕೇಂದ್ರ ಪರಿಸರ ಖಾತೆಯ ರಾಜ್ಯ ಸಚಿವ ಬಾಬುಲ್ ಸುಪ್ರಿಯೊ ಟ್ವೀಟ್‌ ಮಾಡಿದ್ದರು.

    ಈ ಟ್ವೀಟ್‌ನಲ್ಲಿ ಹನುಮ ವಿಹಾರಿ ಪದವನ್ನು ಬರೆಯುವ ಸಂದರ್ಭದಲ್ಲಿ ಹನುಮ ಬಿಹಾರಿ ಎಂದು ಬರೆದಿದ್ದರು. ಇಂದು ಹನುಮ ವಿಹಾರಿ ಟ್ವೀಟ್‌ ಮಾಡಿ ನಕ್ಷತ್ರ ಗುರುತು ಹಾಕಿ ಹನುಮ ವಿಹಾರಿ ಎಂಬುದಾಗಿ ಟ್ರೋಲ್‌ ಮಾಡಿದ್ದಾರೆ. ಈ ಟ್ವೀಟ್‌ನ ಸ್ಕ್ರೀನ್‌ ಶಾಟ್‌ ತೆಗೆದು ಅಶ್ವಿನ್‌ ROFLMAX!! ಎಂದು ಬರೆದು ಮೂರು ನಗುವ ಇಮೋಜಿ ಹಾಕಿ ಟ್ವೀಟ್‌ ಮಾಡಿದ್ದಾರೆ.

    ಸುಪ್ರಿಯೊ ಟ್ವೀಟ್‌ನಲ್ಲಿ ಏನಿತ್ತು?
    ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯ ಮೂರನೇ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿದೆ. ಸಿಡ್ನಿಯಲ್ಲಿ ಸೋಮವಾರ ನಡೆದ ಐದನೇ ದಿನದಾಟದಲ್ಲಿ ಭಾರತ ತಂಡ ಟೆಸ್ಟ್ ಡ್ರಾ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಸುದೀರ್ಘ ಓವರ್ ಎದುರಿಸಿದ ಹನುಮ ವಿಹಾರಿ, ಕ್ರಿಕೆಟ್ ಅನ್ನು ಕೊಲೆ ಮಾಡಿದ್ದಾರೆ.

    ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವಿನ ಅವಕಾಶವಿದ್ದರೂ, 109 ಎಸೆತ ಎದುರಿಸಿದ ಹನುಮ ಬಿಹಾರಿ ಕೇವಲ 7 ರನ್ ಗಳಿಸಿ ಕ್ರಿಕೆಟ್‌ ಕೊಲೆ ಮಾಡಿದ್ದಾರೆ. ಕ್ರಿಕೆಟ್‌ ಬಗ್ಗೆ ನನಗೆ ಗೊತ್ತಿಲ್ಲ ಎಂದು ಟ್ವೀಟ್‌ ಮಾಡಿದ್ದರು.

    ಈ ಟ್ವೀಟ್‌ ನೋಡಿ ನೆಟ್ಟಿಗರು ಗರಂ ಆಗಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ಬಗ್ಗೆ ತಿಳಿಯದ ನೀವು ರಾಜಕೀಯದಲ್ಲೇ ಇರಿ. ಕ್ರಿಕೆಟ್‌ ಬಗ್ಗೆ ವಿಶ್ಲೇಷಣೆ ನೀಡಬೇಡಿ ಎಂದು ಗರಂ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ.