Tag: Babaleshwar

  • ಬಬಲೇಶ್ವರ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟ

    ಬಬಲೇಶ್ವರ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟ

    ವಿಜಯಪುರ: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ (Nandi Cooperative Sugar Factory) ಮತ್ತೆ ಬಾಯ್ಲರ್ (Boiler) ಸ್ಫೋಟಗೊಂಡಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ಲ್ಲಿರೋ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಘಟನೆ ನಡೆದಿದೆ.

    ಅದೃಷ್ಟವಶಾತ್ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಸುಕಿನ ಜಾವ ಟೀ‌ ಕುಡಿಯಲು 15 ಕಾರ್ಮಿಕರು ತೆರಳಿದ್ದ ವೇಳೆ ಬಾಯ್ಲರ್ ಬ್ಲಾಸ್ಟ್ ಆಗಿದೆ. ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಪಾರಾಗಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಇದನ್ನೂ ಓದಿ: 24 ಗಂಟೆಯಲ್ಲಿ ಟಿಬಿ ಡ್ಯಾಂಗೆ ಬಂತು 4 ಟಿಎಂಸಿ ನೀರು

    ಮುಂದಿನ ಅವಧಿಗೆ  ಕಬ್ಬು ನುರಿಸಲು ಕಾರ್ಖಾನೆ ಸಿದ್ದತೆ ಮಾಡುವ ವೇಳೆ ಬಾಯ್ಲರ್ ಬ್ಲಾಸ್ಟ್ ಆಗಿದೆ. ಈ‌ ಹಿಂದೆ 2023 ರ ಮಾರ್ಚ್ 4 ರಂದು ಕೂಡ ಬಾಯ್ಲರ್ ಬ್ಲಾಸ್ಟ್ ಆಗಿತ್ತು.

    ಈ ವೇಳೆ ಓರ್ವ ಕಾರ್ಮಿಕ ಮೃತಪಟ್ಟು ಇತರೇ ನಾಲ್ವರು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದವು. ಕಳಪೆ ಬಾಯ್ಲರ್ ನಿರ್ಮಾಣವೇ ಅವಘಢಕ್ಕೆ ಕಾರಣವೆಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಇದನ್ನೂ ಓದಿ: ಆಟ ಆಡೋ ಮಕ್ಕಳೆಲ್ಲ ಮದ್ಯ ವ್ಯಸನಿಗಳಾಗಿದ್ದಾರೆ, ಬಾರ್ ಬಂದ್ ಮಾಡ್ಸಿ – ಸಚಿವರ ಬಳಿ ಮಹಿಳೆಯ ಅಳಲು

     

  • ತಂದೆಗೆ ಬಿಜೆಪಿ ಟಿಕೆಟ್ ಸಿಕ್ಕ ಖುಷಿಗೆ ಗಾಳಿಯಲ್ಲಿ ಗುಂಡು ಪ್ರಕರಣ – ಅಭ್ಯರ್ಥಿ ಪುತ್ರನ ವಿರುದ್ಧ ಎಫ್‍ಐಆರ್

    ತಂದೆಗೆ ಬಿಜೆಪಿ ಟಿಕೆಟ್ ಸಿಕ್ಕ ಖುಷಿಗೆ ಗಾಳಿಯಲ್ಲಿ ಗುಂಡು ಪ್ರಕರಣ – ಅಭ್ಯರ್ಥಿ ಪುತ್ರನ ವಿರುದ್ಧ ಎಫ್‍ಐಆರ್

    ವಿಜಯಪುರ: ಬಿಜೆಪಿ (BJP) ಟಿಕೆಟ್ ಘೋಷಣೆ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಸಮರ್ಥ ಪಾಟೀಲ್ ವಿರುದ್ಧ ಗಾಂಧಿ ಚೌಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಜಿಲ್ಲೆಯ ಬಬಲೇಶ್ವರ (Babaleshwar) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜಯಕುಮಾರ್ ಪಾಟೀಲ್ ಅವರಿಗೆ ಟಿಕೆಟ್ ಘೋಷಣೆ ಮಾಡಿದ ದಿನ ಅವರ ಪುತ್ರ ಸಮರ್ಥ ಪಾಟೀಲ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಆರೋಪಿಸಿದ್ದರು. ಇದರ ವಿಸ್ತೃತ ವರದಿಯನ್ನು ‘ಪಬ್ಲಿಕ್ ಟಿವಿ’ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಸಮರ್ಥ ವಿರುದ್ಧ ಪ್ರಕರಣ ದಾಖಲಿಸಿದೆ. ಇದನ್ನೂ ಓದಿ: ಇವಿಎಂ ಖರೀದಿಯಲ್ಲಿ ಅಕ್ರಮ ಆರೋಪ – ಚುನಾವಣಾ ಆಯೋಗದ ವಿರುದ್ಧದ ಪಿಐಎಲ್ ವಜಾಗೊಳಿಸಿದ ಸುಪ್ರೀಂ

    ಟನೆಯ ವಿರುದ್ಧ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಕಿಡಿಕಾರಿದ್ದರು. ಗುಂಡು ಹಾರಿಸುವುದು ಸರಿಯಾದ ವರ್ತನೆಯಲ್ಲ ಎಂಬ ಆರೋಪವನ್ನು ಕಾಂಗ್ರೆಸ್ (Congress) ಮುಖಂಡರು ಮಾಡಿದ್ದರು. ಅಲ್ಲದೇ ಬಿಜೆಪಿ ಅಭ್ಯರ್ಥಿಯ ಪುತ್ರನ ಮೇಲೆ ಕೇಸ್ ದಾಖಲಿಸುವಂತೆ ಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದರು.

    ಸಮರ್ಥ ಪಾಟೀಲ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ (Arms Act) ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 12 ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿದ ಪಾಕ್ ವಿದೇಶಾಂಗ ಸಚಿವ

  • ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ ನಟಿ ರಮ್ಯಾ

    ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ ನಟಿ ರಮ್ಯಾ

    ಬೆಂಗಳೂರು: ಕಾಂಗ್ರೆಸ್ (Congress) ಸ್ಟಾರ್ ಪ್ರಚಾರಕಿಯಾಗಿರುವ ಮಾಜಿ ಸಂಸದೆ, ನಟಿ ರಮ್ಯಾ (Ramya) ಚುನಾವಣೆ ಸಲುವಾಗಿ ಕಾಂಗ್ರೆಸ್‌ನ ಹಲವು ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.

    ಚುನಾವಣೆ (Election) ಸಂದರ್ಭದಲ್ಲಿ ಜನರ ಮತಗಳನ್ನು ತನ್ನತ್ತ ಸೆಳೆಯುವ ಸಲುವಾಗಿ ವಿವಿಧ ಪಕ್ಷಗಳು ಸ್ಟಾರ್ ಪ್ರಚಾರಕರ ಮೂಲಕ ಮತಯಾಚನೆ ಮಾಡಿಸುತ್ತಾರೆ. ಅದರಂತೆ ನಟಿ ರಮ್ಯಾ ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಮೇ 4ರಂದು ರಮ್ಯಾ ವರುಣಾ (Varuna) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಪರ ಪ್ರಚಾರ ನಡೆಸಲಿದ್ದಾರೆ. ಇದನ್ನೂ ಓದಿ: ತಪ್ಪಿ ಮೋದಿಯತ್ತ ಎಸೆದ ಮೊಬೈಲ್ ಮರಳಿ ಮಹಿಳೆಯ ಕೈಗೆ ಸಿಕ್ತು!

    ಮೇ 6ರಂದು ಬಬಲೇಶ್ವರ (Babaleshwar) ಕ್ಷೇತ್ರದಲ್ಲಿ ಪ್ರಚಾರ ನಡೆಸಲಿರುವ ರಮ್ಯಾ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ (M.B.Patil) ಪರ ಮತಯಾಚಿಸಲಿದ್ದಾರೆ. ನಂತರ ಬೆಂಗಳೂರಿನ (Bengaluru) ಸರ್ವಜ್ಞ ನಗರದಲ್ಲಿ (Sarvagnanagar) ಕೆ.ಜೆ.ಜಾರ್ಜ್ (K.J.George) ಪರ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ. ಅಲ್ಲದೇ ಮಂಡ್ಯ (Mandya) ಜಿಲ್ಲೆಯಲ್ಲೂ ಸಹ ಪ್ರಚಾರಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಹಳೇ ಮೈಸೂರು ಕ್ಷೇತ್ರಗಳನ್ನು ಕಬ್ಜ ಮಾಡಲು ಮೋದಿ ಪಣ – 25+ ಸ್ಥಾನ ಗೆಲ್ಲಲು ರಣತಂತ್ರ

  • ಬಬಲೇಶ್ವರ, ತಿಕೋಟ ಜನರಿಗೆ ಸಿಹಿ ಸುದ್ದಿ- ಮಿನಿ ವಿಧಾನಸೌಧ ನಿರ್ಮಾಣಕ್ಕೆ ಟೆಂಡರ್ ಆಹ್ವಾನ

    ಬಬಲೇಶ್ವರ, ತಿಕೋಟ ಜನರಿಗೆ ಸಿಹಿ ಸುದ್ದಿ- ಮಿನಿ ವಿಧಾನಸೌಧ ನಿರ್ಮಾಣಕ್ಕೆ ಟೆಂಡರ್ ಆಹ್ವಾನ

    ವಿಜಯಪುರ: ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಬಲೇಶ್ವರ ಮತ್ತು ತಿಕೋಟಾ ನೂತನ ತಾಲೂಕು ಕೇಂದ್ರಗಳಾಗಿ ಒಂದು ವರ್ಷ ಕಳೆದಿದೆ. ಆದರೂ ತಾಲೂಕು ಅಡಳಿತ ಕಚೇರಿ ಇಲ್ಲ. ಇದೀಗ ಎರಡೂ ತಾಲೂಕುಗಳ ಜನತೆಗೆ ಸಿಹಿ ಸುದ್ದಿ ಸಿಕ್ಕಿದ್ದು, ಮಿನಿ ವಿಧಾನಸೌಧ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದೆ.

    ಎರಡು ನೂತನ ತಾಲೂಕಿನ ಜನರು ತಾಲೂಕು ಕಚೇರಿಗಳನ್ನು ನಿರ್ಮಿಸಲು ಅನೇಕ ಹೋರಾಟ ಮಾಡಿದ್ದರು. ಆದರೆ ಸೂಕ್ತ ಕಟ್ಟಡಗಳ ಕೊರತೆ ಇರುವುದರಿಂದ ತಾಲೂಕು ಕಚೇರಿ ನಿರ್ಮಾಣಕ್ಕೆ ಹಿಂದೇಟು ಹಾಕಿದ್ದರು. ಇದೀಗ ಎರಡು ನೂತನ ತಾಲೂಕಿನ ಜನರಿಗೆ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಂ.ಬಿ.ಪಾಟೀಲ್ ಖುಷಿ ವಿಚಾರ ಪ್ರಕಟಿಸಿದ್ದಾರೆ. ತಾಲೂಕು ಕೇಂದ್ರಗಳಾದ ಬಬಲೇಶ್ವರ ಮತ್ತು ತಿಕೋಟಾದಲ್ಲಿ ಮಿನಿ ವಿಧಾನಸೌಧಗಳನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ.

    ನೂತನ ತಾಲೂಕು ಕೇಂದ್ರಗಳಲ್ಲಿ ಎಲ್ಲ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ತಲಾ 10 ಕೋಟಿ ರೂ. ವೆಚ್ಚದಲ್ಲಿ ಬಬಲೇಶ್ವರ ಹಾಗೂ ತಿಕೋಟಾ ಎರಡು ಕಡೆ ಸುಸಜ್ಜಿತ ಮಿನಿ ವಿಧಾನಸೌಧ ನಿರ್ಮಿಸಲಾಗುತ್ತಿದೆ. ಬಬಲೇಶ್ವರದಲ್ಲಿ ಅಡವಿಸಂಗಾಪುರ ರಸ್ತೆಯಲ್ಲಿರುವ ಸರ್ಕಾರಿ ಜಾಗದಲ್ಲಿ ಹಾಗೂ ತಿಕೋಟಾದಲ್ಲಿ ಹಳೆ ಪ್ರವಾಸಿ ಮಂದಿರದ ಜಾಗದಲ್ಲಿ ಈ ಮಿನಿ ವಿಧಾನಸೌಧಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಎಂ.ಬಿ.ಪಾಟೀಲ್ ಪ್ರಕಟಿಸಿದ್ದಾರೆ.

  • ಡೀಸೆಲ್ ತರಲು ಹೋದ ಯುವಕನ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆ

    ಡೀಸೆಲ್ ತರಲು ಹೋದ ಯುವಕನ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆ

    ವಿಜಯಪುರ: ಡೀಸೆಲ್ ತರುವುದಾಗಿ ಹೇಳಿ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಹೋದ ಯುವಕನ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

    ಮೃತ ಯುವಕನನ್ನು ನಗರದ ಎಸ್ಪಿ ಕಛೇರಿ ಹಿಂಭಾಗದ ಕುಂಬಾರ ಓಣಿಯ ನಿವಾಸಿ ಅಕ್ಷಯ ಲವಗಿ ಎಂದು ಗುರುತಿಸಲಾಗಿದೆ. ಕಳೆದ ಶುಕ್ರವಾರ ಡೀಸೆಲ್ ತರುವುದಾಗಿ ಹೇಳಿ ಅಕ್ಷಯ ಮನೆಯಿಂದ ತೆಳಿದ್ದ. ಆದರೆ ಮರಳಿ ಮನೆಗೆ ಬಂದಿರಲಿಲ್ಲ. ನಾಪತ್ತೆಯಾಗಿದ್ದ ಅಕ್ಷಯ ಮೃತದೇಹ ನಿನ್ನೆ ಬಬಲೇಶ್ವರ ತಾಲೂಕಿನ ಕಂಬಾಗಿ ಗ್ರಾಮದ ಬಳಿ ಪತ್ತೆಯಾಗಿದೆ.

    ಮೃತ ಅಕ್ಷಯ ಮನೆಗೆ ವಾಪಸ್ ಆಗದಿದ್ದ ಕಾರಣ ಆತನ ಪೋಷಕರು ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ನಿನ್ನೆ ಅಕ್ಷಯನ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಕ್ಷಯ ಮನೆಯಿಂದ ತೆಗೆದು ಹೋಗಿದ್ದ ಸ್ಕೂಟರ್ ಸಹ ಮೃತದೇಹದ ಸಮೀಪ ಪತ್ತೆಯಾಗಿದ್ದು, ದೇಹ ಸುಟ್ಟು ಕರಕಲಾದ ಕಾರಣದಿಂದ ಬೈಕ್ ನೆರವಿನೊಂದಿಗೆ ಆತನ ಗುರುತನ್ನು ಪತ್ತೆ ಮಾಡಲಾಗಿದೆ.

    ಯುವಕನ್ನು ಉಸಿರು ಗಟ್ಟಿಸಿ ಕೊಲೆ ಮಾಡಿ ಬಳಿಕ ಸುಟ್ಟು ಹಾಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಸಿಪಿಐ ಮಹಾಂತೇಶ ಧಾಮಣ್ಣವರ, ಬಬಲೇಶ್ವರ ಪಿಎಸ್‍ಐ ಕಲ್ಲೂರ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ವಿಜಯಪುರ ಜಿಲ್ಲೆಯಲ್ಲಿ ಚಿರತೆ ಪ್ರತ್ಯಕ್ಷ

    ವಿಜಯಪುರ ಜಿಲ್ಲೆಯಲ್ಲಿ ಚಿರತೆ ಪ್ರತ್ಯಕ್ಷ

    ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಡೆಡ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಕ್ಯಾಮೆರಾದಲ್ಲಿ ಚಿರತೆ ಓಡಾಟ ಸೆರೆ ಆಗಿದೆ.

    ಜಿಲ್ಲೆಯ ಬಬಲೇಶ್ವರ ತಾಲೂಕಿನ ಶಿರಬೂರು ಗ್ರಾಮದ ನದಿ ತೀರದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆಯ ಓಡಾಟದ ದೃಶ್ಯ ಕಂಡು ದೇವರ ಗೆಣ್ಣೂರು, ಶಿರಬೂರು, ಬಬಲಾದಿ, ಗುಣದಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಆತಂಕ ಶುರುವಾಗಿದೆ. ಒಂದು ತಿಂಗಳ ಹಿಂದೆಯಷ್ಟೆ ಗುಣದಾಳ ಗ್ರಾಮ ಸೇರಿದಂತೆ ಕೆಲವೆಡೆ ಒಂದು ಚಿರತೆ ಪತ್ಯಕ್ಷವಾಗಿ ಜಾನುವಾರಗಳನ್ನು ಬೇಟೆಯಾಡಿತ್ತು. ತದನಂತರ ಆ ಚಿರತೆಯನ್ನ ಸೆರೆ ಹಿಡಿದಿದ್ದ ಅರಣ್ಯಾಧಿಕಾರಿಗಳು ಕಾಡಿಗೆ ಬಿಟ್ಟಿದ್ದರು.

    ಇದೀಗ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿದ್ದು ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

  • ಲಕ್ಷ್ಮಿ ಪೂಜೆ ನೆರವೇರಿಸಿ ಮಸೀದಿ ಉದ್ಘಾಟನೆ- ಭಾವೈಕ್ಯತೆ ಮೆರೆದ ಗ್ರಾಮಸ್ಥರು

    ಲಕ್ಷ್ಮಿ ಪೂಜೆ ನೆರವೇರಿಸಿ ಮಸೀದಿ ಉದ್ಘಾಟನೆ- ಭಾವೈಕ್ಯತೆ ಮೆರೆದ ಗ್ರಾಮಸ್ಥರು

    ವಿಜಯಪುರ: ಲಕ್ಷ್ಮಿ ಪೂಜೆ ನೆರವೇರಿಸಿ ನೂತನ ಮಸೀದಿ ಉದ್ಘಾಟನೆ ಮಾಡಿದ ಪ್ರಸಂಗವೊಂದು ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ನಡೆದಿದೆ.

    ಯಕ್ಕುಂಡಿ ಗ್ರಾಮದಲ್ಲಿ ಈ ಹಿಂದೆ ಅತ್ಯಂತ ಚಿಕ್ಕ ಮಸೀದಿ ಇತ್ತು. ಹೀಗಾಗಿ ಮುಸ್ಲಿಂ ಭಾಂದವರಿಗೆ ಪಾರ್ಥನೆ ಸಲ್ಲಿಸಲು ಸಮಸ್ಯೆ ಎದುರಾಗಿತ್ತು. ಹೀಗಾಗಿ 10 ಲಕ್ಷ ರೂ. ವೆಚ್ಚದಲ್ಲಿ ನೂತನ ಮಸೀದಿ ನಿರ್ಮಿಸಲಾಗಿದ್ದು, ಇಂದು ಅದ್ಧೂರಿಯಾಗಿ ಉದ್ಘಾಟನೆ ಮಾಡಲಾಯಿತು. ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ ಗ್ರಾಮಸ್ಥರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಅನ್ಯೂನ್ಯತೆಯಿಂದ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಗ್ರಾಮಸ್ಥರು ಹೂ, ಬಾಳೆ ದಿಂಡು, ತೆಂಗಿನ ಗರಿ, ಮಾವಿನ ತೋರಣ ಕಟ್ಟಿ ನೂತನ ಮಸೀದಿಯನ್ನು ಅಲಂಕರಿಸಿದ್ದಾರೆ. ಅಷ್ಟೇ ಅಲ್ಲದೆ ಮಸೀದಿಯಲ್ಲಿ ನೂರಾರು ದೀಪ ಬೆಳಗಿಸಿ, ಲಕ್ಷ್ಮಿ ದೇವಿಯ ಫೋಟೋ ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾಮದ ಮುಸ್ಲಿಂ ಬಾಂಧವರು, ಹಿಂದೂ-ಮುಸ್ಲಿಮರು ಒಟ್ಟಾಗಿ ಗ್ರಾಮದ ಜಾತ್ರೆ, ಮೊಹರಂ ಮಾಡುತ್ತೇವೆ. ಗ್ರಾಮದ ಅನೇಕ ರೈತರು ಮಸೀದಿ ನಿರ್ಮಾಣಕ್ಕೆ ಸಿಮೆಂಟ್ ಕೊಡಿಸಿದ್ದಾರೆ, ಕೆಲವರು ಹಣ ನೀಡಿದ್ದಾರೆ. ಗ್ರಾಮದಲ್ಲಿ ಮುಸ್ಲಿಂ-ಹಿಂದೂ ಬಾಂಧವರು ಒಗ್ಗಟ್ಟಿನಿಂದ ಇದ್ದೇವೆ. ನಮ್ಮ ಹಬ್ಬಗಳಿಗೆ ಅವರು, ಅವರ ಹಬ್ಬಗಳಿಗೆ ನಾವು ಎಲ್ಲ ರೀತಿಯ ಸಹಾಯ ಮಾಡುತ್ತೇವೆ. ಈ ನಿಟ್ಟಿನಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಮಸೀದಿ ನಿರ್ಮಾಣವಾಗಿದೆ ಎಂದು ತಿಳಿಸಿದರು.