Tag: baali

  • ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಬಾಲಿಗೆ ಹಾರಿದ ಹರ್ಷಿಕಾ ಪೂಣಚ್ಚ

    ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಬಾಲಿಗೆ ಹಾರಿದ ಹರ್ಷಿಕಾ ಪೂಣಚ್ಚ

    ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಅವರ ಮದುವೆಗೆ ಕೆಲವೇ ದಿನಗಳು ಬಾಕಿಯಿದೆ. ಮದುವೆಗೆ ಸಿದ್ಧತೆ ಭರದಿಂದ ಸಾಗುತ್ತಿರುವ ಬೆನ್ನಲ್ಲೇ ನಟಿ ಬಾಲಿಗೆ ಹಾರಿದ್ದಾರೆ. ಬ್ಯಾಚುಲರ್ ಲೈಫ್‌ಗೆ ಗುಡ್ ಬೈ ಹೇಳುವ ಮುಂಚೆ, ಸಿಂಗಲ್ ಲೈಫ್ ಎಂಜಾಯ್ ಮಾಡಲು ಫ್ರೆಂಡ್ಸ್ ಜೊತೆ ಬಾಲಿಗೆ ತೆರಳಿದ್ದಾರೆ.

    ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ಹರ್ಷಿಕಾ- ಭುವನ್ (Bhuvan) ರೆಡಿಯಾಗಿದ್ದಾರೆ. ಜುಲೈ 15ಕ್ಕೆ ಕೊಡಗಿನಲ್ಲಿ ಭುವನ್ ಮನೆಯ ಗೃಹಪ್ರವೇಶ ಈಗಾಗಲೇ ನೆರವೇರಿದ್ದು, ಇದೀಗ ಕೊಡವ ಸಂಪ್ರದಾಯದಂತೆ ಹರ್ಷಿಕಾ-ಭುವನ್ ಅವರು ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ. ಇದೇ ಆಗಸ್ಟ್ 24ಕ್ಕೆ ವಿರಾಜ್‌ಪೇಟೆಯಲ್ಲಿ ಹರ್ಷಿಕಾ-ಭುವನ್ ಅದ್ದೂರಿ ಮದುವೆ (Wedding) ನಡೆಯಲಿದೆ.

    ಹಾಗಾಗಿ ಹಸೆಮಣೆ ಏರುವ ಮುಂಚೆಯೇ ನಟಿ ಹರ್ಷಿಕಾ ಬಾಲಿಗೆ ಸ್ನೇಹಿತರ ಜೊತೆ ಹೋಗಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ (Baali) ಫ್ರೆಂಡ್ಸ್ ಮಸ್ತ್ ಮಜಾ ಮಾಡ್ತಿದ್ದಾರೆ. ಇದರ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ. ಹರ್ಷಿಕಾ, ತಲೆಗೆ ಕ್ಯಾಪ್ ಧರಿಸಿ, ಬಿಳಿ ಬಣ್ಣದ ಟಾಪ್, ಆಕಾಶ ನೀಲಿ ಪ್ಯಾಂಟ್ ಧರಿಸಿದ್ದಾರೆ. ಬಾಲಿಯ ಸುಂದರ ದ್ವೀಪವನ್ನ ನೋಡುತ್ತಿರೋ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:‘ಓ ಮೈ ಗಾಡ್ 2’ ಚಿತ್ರಕ್ಕೆ 20 ಕಡೆ ಕತ್ತರಿಯ ಜೊತೆಗೆ ‘ಎ’ ಸರ್ಟಿಫಿಕೇಟ್

    ಜಾಕಿ, ಕಾಸಿನ ಸರ, ಮುರಳಿ ಮೀಟ್ಸ್‌ ಮೀರಾ, ಅದ್ವೈತ, ಅಲೆ, ಚಿಟ್ಟೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹರ್ಷಿಕಾ ನಟಿಸಿದ್ದಾರೆ. ಮರಾಠಿ, ಮಲಯಾಳಂ, ಕೊಂಕಣಿ, ತೆಲುಗು ಸೇರಿದಂತೆ 8 ಭಾಷೆಗಳಲ್ಲಿ ನಟಿಸುವ ಮೂಲಕ ಕೊಡಗಿನ ಕುವರಿ ಗಮನ ಸೆಳೆದಿದ್ದಾರೆ.

    ನಟಿ ಹರ್ಷಿಕಾ ಪೂಣಚ್ಚ ಅವರು ಕನ್ನಡ, ಮರಾಠಿ, ಸೇರಿದಂತೆ ಹಲವು ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಕೈತುಂಬಾ ಸಿನಿಮಾಗಳಿವೆ, ಈ ವರ್ಷ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ತೆರೆಗೆ ಅಪ್ಪಳಿಸಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಿಮ್‌ ವರ್ಕೌಟ್‌ನೇ ಪಾರ್ಟಿ ಎಂದ ನಟಿ- ಸಮಂತಾ ಬಾಲಿ ಡೈರೀಸ್

    ಜಿಮ್‌ ವರ್ಕೌಟ್‌ನೇ ಪಾರ್ಟಿ ಎಂದ ನಟಿ- ಸಮಂತಾ ಬಾಲಿ ಡೈರೀಸ್

    ಟಾಲಿವುಡ್‌ (Tollywood) ನಟಿ ಸಮಂತಾ (Samantha) ಫುಲ್ ಜಾಲಿ ಮೂಡಿನಲ್ಲಿದ್ದಾರೆ. ದೂರದ ಬಾಲಿ ದೇಶದಲ್ಲಿ ಗೆಳೆತಿಯರ ಜೊತೆ ಬೀಡು ಬಿಟ್ಟಿದ್ದಾರೆ. ಹಾಗಂತ ಸಿಕ್ಕಾಪಟ್ಟೆ ಮಜಾ ಮಾಡುತ್ತಿದ್ದಾರೆ. ಕ್ಲಬ್ಬು-ಪಬ್ಬು ಹೀಗೆ ಎಲ್ಲದಕ್ಕೂ ಸಮಯ ಮೀಸಲಿಟ್ಟಿದ್ದಾರೆ ಎಂದು ತಿಳಿದಿದ್ದಾರೆ. ಆದರೆ ಸಮಂತಾ ಅಸಲಿ ಪಾರ್ಟಿ ಹೆಂಗಿರುತ್ತೆ ಗೊತ್ತಾ? ಸಮಂತಾ ಬಿಚ್ಚಿಟ್ಟ ಸತ್ಯ ಇಲ್ಲಿದೆ ನೋಡಿ.

    ಮೈಯೋಸಿಟಿಸ್ (Myositis) ಖಾಯಿಲೆಯಿಂದ ಬಳಲುತ್ತಿರುವ ಸಮಂತಾ ಒಂದು ವರ್ಷ ಸಿನಿಮಾದಿಂದ ಬ್ರೇಕ್ ಪಡೆದಿದ್ದಾರೆ. ಯೋಗ-ಧ್ಯಾನ ಮಾಡಿದ್ದು ಗೊತ್ತಿದೆ. ಈಗ ಬಾಲಿಗೆ (Baali) ಹೋಗಿದ್ದಾರೆ. ಜೊತೆಗೆ ಜಿಮ್ ಟ್ರೇನರ್ ಅನುಷ ಇದ್ದಾರೆ. ಮೊನ್ನೆ ಕೆಲವು ಫೋಟೋ ಹಂಚಿಕೊಂಡಿದ್ದರು. ಅದನ್ನು ನೋಡಿ ಎಲ್ಲರೂ ತಿಳಿದಿದ್ದೇನು ಗೊತ್ತೆ? ಸ್ಯಾಮ್ ಫುಲ್‌ ಜೂಮ್‌ನಲ್ಲಿರುತ್ತಾರೆ, ಅಲ್ಲಿ ಎಂಜಾಯ್‌ ಮಾಡುತ್ತಾರೆ. ಆದರೆ ಸಮಂತಾ ಪಾರ್ಟಿ ಹಂಗಿರಲ್ಲ. ಹಿಂಗೆ ಇರುತ್ತೆ ಅಂತಾ ಖುದ್ದು ಅವರೇ ವಿಡಿಯೋ ಮಾಡಿ ಹೇಳಿದ್ದಾರೆ. ಇದನ್ನೂ ಓದಿ:ಅತ್ತಿಗೆ ಮಾಡಿದ ದ್ರೋಹದಿಂದ ಇಲ್ಲಿದ್ದೇನೆ ಎಂದು ವರಸೆ ಬದಲಿಸಿದ ಪವನ್ ಕಲ್ಯಾಣ್‌

    ಒಂದೊಂದು ದಿನವೂ ಸ್ಟ್ರಾಂಗ್ ಆಗುತ್ತಾ ಹೋಗಬೇಕು.ಅದೇ ನಿಜವಾದ ಪಾರ್ಟಿ ಎಂದಿದ್ದಾರೆ ಸ್ಯಾಮ್. ಅಷ್ಟೊಂದು ಮೈ ನೋಯುವ ಖಾಯಿಲೆ ಇದ್ದರೂ ಇವರು ಮಾಡುವ ವರ್ಕ್ಔಟ್ ನೋಡಿ ನಿಜಕ್ಕೂ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಅದರ ಅರ್ಥ ಇಷ್ಟೇ. ಇದ್ದಷ್ಟು ದಿನ. ಇದ್ದಷ್ಟು ಹೊತ್ತು ಗಟ್ಟಿಮುಟ್ಟಾಗಿರಬೇಕು. ನೋವು ಮರೆತು ಜೀವಿಸಬೇಕು. ಈ ಧ್ಯಾನದಲ್ಲೇ ಇದನ್ನೆಲ್ಲ ಮಾಡುತ್ತಿದ್ದಾರೆ. ಹರಿಸಿದ ಬೆವರಿಗೆ ದೇವರು ಫಲ ಕೊಡದೇ ಇರುತ್ತಾನಾ? ಮುಂದೊಮ್ಮೆ ಸಮಂತಾ ರೋಲ್ ಮಾಡೆಲ್ ಆಗೋದು ಖಚಿತ.

    ಸಮಂತಾ ನಟನೆಯ ಖುಷಿ (Kushi), ಸಿಟಾಡೆಲ್ (Citadel) ಸಿನಿಮಾದ ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ. ಸದ್ಯ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿರೋ ಸಮಂತಾ ಬಾಲಿಯಲ್ಲಿ ದಿನ ಕಳೆಯುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಹೂರ್ತ ಒಂದು ಸಿನಿಮಾ ಎರಡು: ಹೊಸ ತಂಡದ ಪ್ರಯತ್ನ

    ಮುಹೂರ್ತ ಒಂದು ಸಿನಿಮಾ ಎರಡು: ಹೊಸ ತಂಡದ ಪ್ರಯತ್ನ

    ಷಾಢ ಮಾಸದಲ್ಲಿ ಹೊಸಬರ ತಂಡವೊಂದು ಒಟ್ಟಿಗೆ ಎರಡು ಸಿನಿಮಾಗಳ ಮುಹೂರ್ತ ಆಚರಿಸಿಕೊಂಡಿದೆ. ಮೊದಲನೆಯದಾಗಿ ’ಬಾಲಿ’ ಚಿತ್ರದ ಕ್ರೀಡೆ ಕುರಿತ ಕಥೆಯಲ್ಲಿ ಹದಿಹರೆಯದ ಹಳ್ಳಿಯ ಬಡ ಕುಟುಂಬದ ಹುಡುಗಿಯೊಬ್ಬಳು ಓಟಗಾರ್ತಿಯಾಗಿ ಗುರಿ ಸಾಧಿಸಲು ಹೋಗುತ್ತಾಳೆ. ಅವಳ ಹಾದಿಯಲ್ಲಿ ಸಫಲ ಆಗುತ್ತಾಳಾ ಎನ್ನುವುದು ಒಂದು ಎಳೆಯ ಸಾರಾಂಶವಾಗಿದೆ. ಜೊತೆಗೆ ಶಾಲೆಯ ಅಂಶಗಳು ಇರಲಿದೆ.

    ಕುಮಾರಿ ಹರಿಣಿ ಜಯರಾಜ್ ಮೂಲತಃ ಅಥ್ಲೇಟ್ ಆಗಿದ್ದು, ಅದಕ್ಕೆ ತಕ್ಕಂತೆ ಪಾತ್ರ ಸಿಕ್ಕಿರುವುದರಿಂದ ಸಹಜವಾಗಿ ಖುಷಿಯಾಗಿದೆ. ಕ್ರೀಡಾ ಮಾರ್ಗದರ್ಶಿಯಾಗಿ ಉತ್ತರಭಾರತದ ನೀರಜ್‌ಕುಮಾರ್, ತಾಯಿಯಾಗಿ ಮೀನಾಕಿರಣ್, ಸಂದೀಪ್‌ಮಲಾನಿ, ಪ್ರಶಾಂತ್ ಮುಂತಾದವರು ಅಭಿನಯಿಸುತ್ತಿದ್ದಾರೆ. ರಚನೆ,ಚಿತ್ರಕಥೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡುತ್ತಿರುವ ಗನಿದೇವ್‌ ಕಾರ್ಕಳ ಅವರು ಅಕ್ಷರ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಜಯಕುಮಾರ್‌ ಭಕ್ತವತ್ಸಲಂ-ಯೋಗಿತ ಬಾಲಿ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ಸಂಗೀತ ಅಮೋಘ್‌ ಕೊಡಂಗಾಲ ಅವರದಾಗಿದೆ. ಕುಂದಾಪುರ, ಮಂಗಳೂರು, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ. ಇದನ್ನೂ ಓದಿ:ಟ್ವೀಟರ್‌ನಲ್ಲಿ ಯಶ್ ಹೆಸರು ಟ್ರೇಂಡಿಂಗ್: ಯಶ್ 19ನೇ ಚಿತ್ರದ ಅಪ್‌ಡೇಟ್ ಇಲ್ಲಿದೆ

    ಎರಡನೆಯದಾಗಿ ’ಏಕಮ್’ ಚಿತ್ರವು ಬಹುಕಥಾ ಹೊಂದಿದೆ. ಅಕ್ಷರಾ ಪ್ರೊಡಕ್ಷನ್ ಮೂಲಕ ಗಣಿದೇವ್ ಕಾರ್ಕಳ ನಿರ್ಮಾಣ ಮಾಡುತ್ತಿದ್ದಾರೆ. ಧಾರಾವಾಹಿ ಮತ್ತು ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿದ ಅನುಭವ ಇರುವ ವಿದ್ಯತ್‌ ಶಿವ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹಾಲಿವುಡ್‌ನ ಅಲೆಜಾಂಡ್ರೆ ಇನರುತು ನಿರ್ದೇಶನದ ’ಬೆಬಲ್’ ಚಿತ್ರದ ಪ್ರೇರಣೆಯಿಂದ ನಿರ್ದೇಶಕರು ಕಥೆಯನ್ನು ರಚಿಸಿದ್ದಾರೆ.

    ಐದು ಜನರ ಜೀವನದ ಕಥೆಯಲ್ಲಿ ಒಬ್ಬ ವ್ಯಕ್ತಿಯಿಂದ ಆಗುವಂತ ಅನಾಹುತಗಳು ಇನ್ನೊಬ್ಬ ವ್ಯಕ್ತಿಗೆ ಬರುವಂತ ಘರ್ಷಣೆಗಳು ಒಂದಕ್ಕೊಂದು ಪ್ರಾರಂಭದಿಂದಲೇ ಲಿಂಕ್ ಆಗುತ್ತಾ ಹೋಗುತ್ತದೆ. ಜೊತೆಗೆ ಸುಂದರ ಪ್ರೀತಿ ಕಥೆಯಲ್ಲಿ ತೊಂದರೆಗಳು ಬರುತ್ತವೆ. ಅದರಿಂದ ಹೇಗೆ ಹೊರಗೆ ಬರುತ್ತಾರೆ. ಇಂತಹುದೇ ಜಾನರ್ ಅಂಥ ಹೇಳಲಿಕ್ಕ ಆಗುವುದಿಲ್ಲ. ಪ್ರೀತಿ, ರಕ್ತಪಾತ, ಫ್ಯಾಂಟಸಿ ಹೀಗೆ ತರಹೇವಾರಿ ಕಥೆಗಳು ಇರಲಿದೆ. ಸಂಗೀತ ಸಂಯೋಜಿಸುತ್ತಿರುವ ಅಮೋಘ್‌ ಕೊಡಂಗಾಲ ಒಂದು ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಉಳಿದಂತೆ ಶಹನ, ಹರೀಶ್‌ರಾಮ್, ಮೀನಾಕಿರಣ್, ಹರೀಶ್‌ರಾಮ್, ಐಶ್ವರ್ಯ ಮುಂತಾದವರು ನಟಿಸುತ್ತಿದ್ದಾರೆ. ಛಾಯಾಗ್ರಹಣ ಅಲನ್‌ಭರತ್, ಸಂಕಲನ ಸ್ಟೀಫೆನ್ ಅವರದಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]