Tag: Baahubali the conclusion

  • ಬಾಹುಬಲಿಗೆ ಪ್ರೀತಿಯ ಸುರಿಮಳೆಗೈದ ಪ್ರತಿಯೊಬ್ಬರಿಗೂ ದೊಡ್ಡ ಅಪ್ಪುಗೆ: ಪ್ರಭಾಸ್

    ಬಾಹುಬಲಿಗೆ ಪ್ರೀತಿಯ ಸುರಿಮಳೆಗೈದ ಪ್ರತಿಯೊಬ್ಬರಿಗೂ ದೊಡ್ಡ ಅಪ್ಪುಗೆ: ಪ್ರಭಾಸ್

    ಹೈದರಾಬಾದ್: ಭಾರತದಲ್ಲಿ ಯಾವುದೇ ನಟ ಒಂದು ಚಿತ್ರಕ್ಕಾಗಿ 5 ವರ್ಷ ಮುಡುಪಿಡೋದನ್ನ ಊಹಿಸಿಕೊಳ್ಳೋಕಾಗುತ್ತಾ? ಆದ್ರೆ ನಟ ಪ್ರಭಾಸ್ ಇದನ್ನ ಮಾಡಿ ತೋರಿಸಿದ್ದಾರೆ. ಬಾಹುಬಲಿ ಚಿತ್ರದ ಮೂಲಕ ಪ್ರಭಾಸ್ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಬಾಹುಬಲಿ ಭಾಗ -1 ಮತ್ತು 2ರ ಹವಾ ಎಷ್ಟರ ಮಟ್ಟಿಗೆ ಇದೆ ಎಂದರೆ ಬ್ಯಾಂಕಾಕ್‍ನ ಮ್ಯಾಡಮ್ ಮೇಡಂ ಟುಸ್ಸಾಡ್ಸ್ ನಲ್ಲಿ ಪ್ರಭಾಸ್ ಅವರ ಮೇಣದ ಪ್ರತಿಮೆಯನ್ನ ಇರಿಸಲಾಗ್ತಿದೆ. ಮ್ಯಾಡಮ್ ಟಸ್ಸಾಡ್ಸ್‍ನಲ್ಲಿ ಪ್ರತಿಮೆ ಇರಿಸಲಾಗ್ತಿರೋ ದಕ್ಷಿಣ ಭಾರತದ ಮೊದಲ ನಟ ಎನಿಸಿಕೊಂಡಿದ್ದಾರೆ ಪ್ರಭಾಸ್.

    ಇದನ್ನೂ ಓದಿ:ಪ್ರಭಾಸ್, ರಾಣಾ, ಅನುಷ್ಕಾ, ತಮನ್ನಾ, ರಮ್ಯಕೃಷ್ಣಗೆ ಎಷ್ಟು ಸಂಭಾವನೆ ಸಿಕ್ಕಿದೆ?

    ಬಾಹುಬಲಿ ದಿ ಬಿಗ್‍ನಿಂಗ್ ಹಾಗೂ ಬಾಹುಬಲಿ ದಿ ಕನ್‍ಕ್ಲೂಷನ್ ಚಿತ್ರಗಳಿಗೆ ಸಿಕ್ಕ ಭರ್ಜರಿ ಪ್ರತಿಕ್ರಿಯೆಗಾಗಿ, ಚಿತ್ರವನ್ನ ಯಶಸ್ವಿಗೊಳಿಸಿದ್ದಕ್ಕಾಗಿ ಅಭಿಮಾನಿಗಳಿಗೆ ಪ್ರಭಾಸ್ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಫೇಸ್‍ಬುಕ್ ಪೇಜ್‍ನಲ್ಲಿ ಪೋಸ್ಟ್ ಹಾಕಿರೋ ಪ್ರಭಾಸ್, ನನ್ನ ಎಲ್ಲಾ ಅಭಿಮಾನಿಗಳಿಗೆ, ನನ್ನ ಮೇಲೆ ಇಷ್ಟೊಂದು ಪ್ರೀತಿಯ ಸುರಿಮಳೆಗೈದ ಪ್ರತಿಯೊಬ್ಬರಿಗೂ ಒಂದು ದೊಡ್ಡ ಅಪ್ಪುಗೆ. ಭಾರತದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದಲೂ ನೀವೆಲ್ಲಾ ಸಾಕಷ್ಟು ಪರಿಶ್ರಮ ಹಾಕಿ ನನ್ನ ಮೇಲೆ ಪ್ರೀತಿ ವ್ಯಕ್ತಪಡಿಸುತ್ತಿರುವುದನ್ನ ನೋಡಿದ್ದೇನೆ. ಇದೆಲ್ಲದರಿಂದ ನನಗೆ ನಿಜಕ್ಕೂ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.

    ಇದನ್ನೂ ಓದಿ: ಈ ಥಿಯೇಟರ್ ನಲ್ಲಿ ಬಾಹುಬಲಿ ಟಿಕೆಟ್ ಬೆಲೆ 30 ರೂ. ಅಷ್ಟೇ!

    ಬಾಹುಬಲಿಯ ಜರ್ನಿಯೇ ತುಂಬಾ ದೀರ್ಘವಾಗಿತ್ತು. ಇದರಿಂದ ನಾನೇನಾದ್ರೂ ತೆಗೆದುಕೊಳ್ಳಬಯಸಿದ್ರೆ ಅದು ನಿಮ್ಮ ಪ್ರೀತಿ. ನನ್ನ ಮೇಲೆ ನಂಬಿಕೆ ಇಟ್ಟು ತಾವು ಅಂದುಕೊಂಡಿದ್ದನ್ನು ನನ್ನ ಮೂಲಕ ಜನರಿಗೆ ತಲುಪಿಸಿದ್ದಕ್ಕೆ ಎಸ್‍ಎಸ್ ರಾಜಮೌಳಿ ಅವರಿಗೆ ಬಹಳ ಧನ್ಯವಾದ. ಜೀವನದಲ್ಲಿ ಒಂದೇ ಬಾರಿ ಬರುವಂತಹ ಬಾಹುಬಲಿಯಂಥ ಪಾತ್ರ ಕೊಟ್ಟು ಇಡೀ ಜರ್ನಿಯನ್ನ ವಿಶೇಷವಾಗಿಸಿದ್ದಾರೆ ಎಂದು ಪ್ರಭಾಸ್ ಬರೆದುಕೊಂಡಿದ್ದಾರೆ.

    ಬಾಹುಬಲಿ- 2 ಚಿತ್ರ ಈಗಾಗಲೇ ಬಾಕ್ಸ್ ಆಫೀಸ್ ಚಿಂದಿ ಮಾಡಿದ್ದು, 1000 ಕೋಟಿ ರೂ. ಗಳಿಸಿದ ಮೊದಲ ಭಾರತೀಯ ಚಿತ್ರ ಎನಿಸಿಕೊಂಡಿದೆ.

    ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ