Tag: Baahubali Gold Momo

  • ತಿಂಡಿ ಪ್ರಿಯರಿಗೆ ಸಿಹಿ ಸುದ್ದಿ – ಹೊಸದಾಗಿ ಸೇರ್ಪಡೆಯಾಯಿತು ಬಾಹುಬಲಿ ಗೋಲ್ಡ್ ಮೊಮೊ

    ತಿಂಡಿ ಪ್ರಿಯರಿಗೆ ಸಿಹಿ ಸುದ್ದಿ – ಹೊಸದಾಗಿ ಸೇರ್ಪಡೆಯಾಯಿತು ಬಾಹುಬಲಿ ಗೋಲ್ಡ್ ಮೊಮೊ

    ಮುಂಬೈ: ಚಿನ್ನದ ಬಿರಿಯಾನಿ ಮತ್ತು ಗೋಲ್ಡನ್ ವಡಾ ಪಾವ್‍ಗಳ ನಂತರ, ಈಗ ಗೋಲ್ಡನ್ ಮೊಮೊಗಳ ಸಮಯ! ಹೌದು, ಭಾರತದಲ್ಲಿ ಅತ್ಯಂತ ಇಷ್ಟವಾದ ಬೀದಿ ತಿಂಡಿಯಲ್ಲಿ ಮೊಮೊ ಸಹ ಒಂದು. ಈಗ ಇದನ್ನು ಅಪ್‍ಗ್ರೇಡ್ ಮಾಡಲಾಗಿದ್ದು, ಬಾಹುಬಲಿ ಗೋಲ್ಡ್ ಮೊಮೊ ಎಂದು ಹೆಸರಿಡಲಾಗಿದೆ.

    ಈ ಬಾಹುಬಲಿ ಗೋಲ್ಡ್ ಮೊಮೊ ನೋಡಲು ಆಕರ್ಷಕವಾಗಿದ್ದು, ತಿಂಡಿ ಪ್ರಿಯರಿಗಂತೂ ಬಾಯಲ್ಲಿ ನೀರು ಬರುತ್ತದೆ. ಮುಂಬೈನಲ್ಲಿರುವ ಕೆಫೆಯಲ್ಲಿ 2 ಕಿಲೋ ತೂಕದ, 24-ಕ್ಯಾರೆಟ್ ಚಿನ್ನದ ಲೇಪನ ಹೊಂದಿದ, ಮೊಮೊವನ್ನು ತಯಾರಿಸಿದ್ದು, ಅದಕ್ಕೆ ಬಾಹುಬಲಿ ಗೋಲ್ಡ್ ಮೊಮೊ ಎಂದು ಹೆಸರಿಡಲಾಗಿದೆ. ಈ ಒಂದು ಮೊಮೊವನ್ನು 7-8 ಜನರು ತಿನ್ನಬಹುದಾಗಿದೆ. ಇದನ್ನೂ ಓದಿ: KSRTC ಬಸ್ಸನ್ನೇ ಕದ್ದ ಖದೀಮರು

    ಬಾಹುಬಲಿ ಗೋಲ್ಡ್ ಮೊಮೊ ತರಕಾರಿಗಳು, ಚೀಸ್‍ಗಳಿಂದ ತುಂಬಿಕೊಂಡಿದ್ದು, ಇದರ ಹೊರ ಪದರದ ಮೇಲೆ ಚಿನ್ನದ ಲೇಪನವನ್ನು ಹಾಕಲಾಗಿದೆ. ಮೊಮೊನ ಮೇಲೆ ಕ್ಯಾರೆಟ್ ಬಳಸಿ ಅಲಂಕಾರ ಮಾಡಲಾಗಿದೆ. ಅದು ಅಲ್ಲದೇ ಇದರಲ್ಲಿ ವೆರೈಟಿ ಸಹ ಇದೆ. ಕಿತ್ತಳೆ ಪುದೀನ ಮೊಜಿತೊ, ಚಾಕೊಲೇಟ್ ಮೊಮೊಗಳು, ಚಟ್ನಿಗಳು ಮತ್ತು ಸಾಸ್‍ಗಳನ್ನು ಕೊಡುತ್ತಾರೆ.

    ಫುಡ್ ವ್ಲಾಗರ್ ದಿಶಾ ಗೋಲ್ಡನ್ ಮೊಮೊದ ವೀಡಿಯೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಇದು ಮುಂಬೈನಲ್ಲಿ ಮೆಸ್ಸಿ ಅಡ್ಡಾ ಕೆಫೆಯಲ್ಲಿ ತಯಾರಿಸಿದ ‘ಬಾಹುಬಲಿ ಗೋಲ್ಡ್ ಮೊಮೊ’ ಭಾರತದಲ್ಲಿ ಇದು ಮೊದಲು. ಈ ಬೃಹತ್ ಮೊಮೊ 2 ಕೆಜಿ ಮತ್ತು ಮೊಜೆರೆಲ್ಲಾ ಚೀಸ್ ಮತ್ತು 24-ಕ್ಯಾರೆಟ್ ಚಿನ್ನದ ಲೇಪನ ಹೊಂದಿದ ರುಚಿಕರವಾದ ತರಕಾರಿಗಳನ್ನು ಈ ಖಾದ್ಯದಲ್ಲಿ ಬಳಸಲಾಗಿದೆ. ಈ ಬೃಹತ್ ಬಾಹುಬಲಿ ಗೋಲ್ಡ್ ಮೊಮೊವನ್ನು 6-8 ಜನರು ತಿನ್ನಬಹುದು. ಇದು ಕೇವಲ 1299 ರೂ. ಮಾತ್ರ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಮೊಮೊವನ್ನು ಸ್ಮೋಕಿ ಹಿತ್ತಾಳೆಯ ಪಾತ್ರೆಯಲ್ಲಿ ಬಡಿಸಲಾಗಿದ್ದು, ಗುಲಾಬಿ ದಳಗಳಿಂದ ಇದನ್ನು ಅಲಂಕರಿಸಲಾಗಿದೆ. ಈ ಒಂದು ಮೊಮೊನ ಬೆಲೆ 1,299 ರೂ. ಇದನ್ನು ಒಟ್ಟು 7-8 ಜನ ತಿನ್ನಬಹುದಾಗಿದೆ.

    ಈ ವೀಡಿಯೋ ನೋಡಿದ ವೀಕ್ಷಕರು, ವಾಹ್ ಇದು ನಿಜವಾಗಿಯೂ ಅದ್ಭುತವಾದ ರುಚಿಕರವಾದ ಆಹಾರ ಮತ್ತು ಟೇಸ್ಟಿ ಎಂದು ಕಾಮೆಂಟ್ ಮಾಡಿದ್ದಾರೆ. ಓಎಂಜಿ, ಇದು ಹುಚ್ಚು ಎಂದು ಕೆಲವರು ಕಾಮೆಂಟ್ ಮಾಡಿದರೆ, ಇದಕ್ಕೆ ಯಾವುದೇ ಅರ್ಥವಿಲ್ಲ, ಚಿನ್ನದ ಲೇಪನವು ರುಚಿ, ಸುವಾಸನೆ, ವಿನ್ಯಾಸ ಅಥವಾ ಸುವಾಸನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದು ರುಚಿಕರವಾಗಿರುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಕೃಷಿ ಕ್ಷೇತ್ರಕ್ಕೂ ಕಾಲಿಟ್ಟ ಡ್ರೋನ್ – ಕ್ರಿಮಿನಾಶಕ್ಕೆ ಡ್ರೋನ್ ಬಳಕೆ

    ಈ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ ಬರುತ್ತಿದ್ದು, ಇದನ್ನು ನೋಡಿದ ಮೇಲೆ ನಿಮಗೆ ಏನು ಅನಿಸಿದೆ ಎಂದು ಕಾಮೆಂಟ್ ಮಾಡಿ.