Tag: b yediyurappa

  • ಯಡಿಯೂರಪ್ಪನವ್ರ ಬಚ್ಚಾ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

    ಯಡಿಯೂರಪ್ಪನವ್ರ ಬಚ್ಚಾ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

    ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮತ್ತು ರಾಹುಲ್ ಗಾಂಧಿ (Rahul Gandhi) ವಿಚಾರದಲ್ಲಿ ಮಂಗಳವಾರ ಮಾಜಿ ಸಿಎಂ ಯಡಿಯೂರಪ್ಪ ಬಳಸಿದ ಪದ ಬಳಕೆ ಕುರಿತಾಗಿ ವಾಕ್ಸಮರ ನಡೆದಿದೆ. ಯಡಿಯೂರಪ್ಪ ಹೇಳಿಕೆಗೆ ಸಿದ್ದರಾಮ್ಯಯ ತಿರುಗೇಟು ನೀಡಿದ್ದಾರೆ.

    ಯಡಿಯೂರಪ್ಪ (BS Yediyurappa) ಹಿಂಗೆಲ್ಲಾ ಮಾತಾಡ್ತಾರೆ ಅಂದ್ಕೊಂಡಿರಲಿಲ್ಲ. ಬಹುಷಃ ವಯಸ್ಸಿನ ಕಾರಣ ಅರಳು ಮರಳು ಆಗಿರಬಹುದು. ನಾನು ಅವರ ಮಟ್ಟಕ್ಕೆ ಇಳಿಯಲ್ಲ. ನೆಹರೂ ಪಾದಕ್ಕೂ ಮೋದಿ ಸಮ ಅಲ್ಲ ಅಂತಾ ನಾನು ಹೇಳೋಕೆ ಆಗುತ್ತಾ..? ಅವರು ಪ್ರಧಾನಿ ಎಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿ, ಬಿಎಸ್‍ವೈ, ಸಿಎಂ ಬೊಮ್ಮಾಯಿಗೆ 2 ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ದೂರು ದಾಖಲು

    ಕಾರು-ಜೀಪು ಬಿಟ್ಟು ನಾಲ್ಕು ಕಿಲೋಮೀಟರ್ ದೂರ ಎಡವದೆ ನಡೆದುಕೊಂಡು ಹೋಗಿ ಸಿದ್ದರಾಮಯ್ಯ ಎಂಬ ಹೆಸರೆತ್ತದೆ ಐದು ನಿಮಿಷ ಭಾಷಣ ಮಾಡಿ ಎಂದು ಚಾಲೆಂಜ್ ಮಾಡಿದ್ದಾರೆ. ಜನರ ಬಳಿಗೆ ಒಬ್ಬರೇ ಹೋಗಲು ಬೊಮ್ಮಾಯಿಗೆ ಧೈರ್ಯವಿಲ್ಲ ಎಂದು ಕುಟುಕಿದ್ದಾರೆ. ಅಷ್ಟೇ ಅಲ್ಲ ನಿಮ್ಮ ನರೇಂದ್ರ ಮೋದಿ (Narendra Modi) ವಿಶ್ವಗುರು ಅಲ್ಲ ಅವರೊಬ್ಬ ಪುಕ್ಕಲು ಗುರು. ಅವರು ನಮ್ಮನ್ನು ಎದುರಿಸುವುದು ಬೇಡ. ಧೈರ್ಯವಿದ್ದರೆ ಒಂದು ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ಹೇಳಿ ಎಂದು ಬೇರೆ ಸವಾಲ್ ಮಾಡಿದ್ದಾರೆ. ಆದರೆ ಯಡಿಯೂರಪ್ಪ ಮಾತ್ರ ತಮ್ಮ ಹೇಳಿಕೆಯನ್ನು ಸಮರ್ಥಿಸಿದ್ದಾರೆ.

    ಇಡೀ ವಿಶ್ವವೇ ಒಪ್ಪಿದ ಪ್ರಧಾನಿ ಬಗ್ಗೆ ರಾಹುಲ್ ಹಗುರವಾಗಿ ಮಾತಾಡಿದ್ರೆ ನಾನು ಅವರನ್ನು ಬಚ್ಚಾ ಎನ್ನಲೇಬೇಕಾಗುತ್ತದೆ ಎಂದಿದ್ದಾರೆ. ಇದೇ ವೇಳೆ, ಯಡಿಯೂರಪ್ಪ ಪರವಾಗಿ ಸಿಎಂ ಬೊಮ್ಮಾಯಿ ಬ್ಯಾಟ್ ಮಾಡಿದ್ದಾರೆ. ಯಡಿಯೂರಪ್ಪಗೆ ಅರಳು ಮರುಳಲ್ಲ. ಅವರು ಅರಳುವವರು, ಸಿದ್ದರಾಮಯ್ಯಗೆ ಅರಳು ಮರಳು ಇರಬಹುದು ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ, ಸಿದ್ದರಾಮಯ್ಯಗೆ ಮತ್ತೆ ಧಮ್ ಚಾಲೆಂಜ್ ಹಾಕಿದ್ದಾರೆ. ಇದನ್ನೂ ಓದಿ: ಮೋದಿ ವಿಶ್ವಗುರು ಅಲ್ಲ ಪುಕ್ಕಲು ಗುರು: ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ಉಮೇಶ್ ಕತ್ತಿ ನಿಧನಕ್ಕೆ ಪ್ರಧಾನಿ ಮೋದಿ, ಬಿಎಸ್‍ವೈ ಕಂಬನಿ

    ಉಮೇಶ್ ಕತ್ತಿ ನಿಧನಕ್ಕೆ ಪ್ರಧಾನಿ ಮೋದಿ, ಬಿಎಸ್‍ವೈ ಕಂಬನಿ

    ನವದೆಹಲಿ/ಬೆಂಗಳೂರು: ಸಚಿವ ಉಮೇಶ್ ಕತ್ತಿ(Umesh Katti) ನಿಧನಕ್ಕೆ ರಾಜಕೀಯ ನಾಯಕರು, ಗಣ್ಯರು ಸೇರಿದಂತೆ ರಾಜ್ಯಾದ್ಯಂತ ಜನ ಕಂಬನಿ ಮಿಡಿಯುತ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ (Narendra Modi) ಯವರು ಕೂಡ ಕತ್ತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ  ಮೋದಿ, ಉಮೇಶ್ ಕತ್ತಿ ಅವರು ಓರ್ವ ಅನುಭವಿ ನಾಯಕರಾಗಿದ್ದು, ಕರ್ನಾಟಕದ ಅಭಿವೃದ್ಧಿಗೆ ಅಭೂತಪೂರ್ವ ಕೊಡುಗೆ ನೀಡಿದ್ದರು. ಇದೀಗ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ. ಈ ಸಮಯದಲ್ಲಿ ಅವರ ಕುಟುಂಬಸ್ಥರ ದುಃಖದಲ್ಲಿ ನಾನೂ ಪಾಲುದಾರನಾಗಿದ್ದೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

    ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B S Yediyurappa) ಪ್ರತಿಕ್ರಿಯಿಸಿ, ಉಮೇಶ್ ಕತ್ತಿ ಅವರ ನಿಧನ ರಾಜ್ಯಕ್ಕೆ, ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನದ ಸುದ್ದಿ ನೋವು ತರಿಸಿದೆ. ಭಗವಂತ ಅವರ ಕುಟುಂಬಕ್ಕೆ, ಕ್ಷೇತ್ರದ ಜನತೆಗೆ ನೋವು ತಡೆದುಕೊಳ್ಳುವ ಶಕ್ತಿ ಭರಿಸಲಿ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದರು. 9 ಬಾರಿ ಶಾಸಕರಾಗಿ, 4 ಬಾರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ನಾನು ಸಹ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಸಂತಾಪ ಸೂಚಿಸಿದ್ದಾರೆ.

    ಉಮೇಶ್ ಕತ್ತಿ ನಿಧನದ ಸುದ್ದಿ ಕೇಳಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮಕ್ಕೆ ಜನ ಆಗಮಿಸುತ್ತಿದ್ದಾರೆ. ಸದ್ಯ ಕತ್ತಿ ಸ್ವಗೃಹದಲ್ಲಿ ನಿರವ ಮೌನ ಆವರಿಸಿದ್ದು, ನಿಧನ ಸುದ್ದಿ ಕೇಳಿ ಸಂಬಂಧಿಕರು ಮನೆಗೆ ಆಗಮಿಸುತ್ತಿದ್ದಾರೆ. ಇತ್ತ ಬೆಳಗಾವಿ ಏರ್ಪೋರ್ಟ್ (Belagavi Airport) ನಲ್ಲಿ ಬೆಂಬಲಿಗರು ಕಣ್ಣೀರು ಸುರಿಸಿಕೊಂಡು ಕತ್ತಿ ಪಾರ್ಥಿವ ಶರೀರಕ್ಕಾಗಿ ಕಾಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]